Tag: ಕಾರು ಹರಾಜು

  • ಸಾಲ ಮರುಪಾವತಿಸಲು ಮಲ್ಯ ದುಬಾರಿ ಕಾರು ಹರಾಜು ಹಾಕಿ – ಯುಕೆ ಕೋರ್ಟ್

    ಸಾಲ ಮರುಪಾವತಿಸಲು ಮಲ್ಯ ದುಬಾರಿ ಕಾರು ಹರಾಜು ಹಾಕಿ – ಯುಕೆ ಕೋರ್ಟ್

    ಲಂಡನ್: ಭಾರತೀಯ ಬ್ಯಾಂಕ್‍ಗಳಲ್ಲಿ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯರ ಕಾರುಗಳನ್ನು ಹರಾಜು ಮಾಡಲು ಇಂಗ್ಲೆಂಡ್ ಕೋರ್ಟ್ ಆದೇಶ ನೀಡಿದೆ.

    ಮಲ್ಯ ತಮ್ಮ ಕಾರುಗಳಿಗೆ ತಮ್ಮದೇ ಹೆಸರಿನಲ್ಲಿ ವಿಶೇಷವಾಗಿ ನೊಂದಣಿ ಮಾಡಿಸಿದ್ದ ವಿಜೆಎಂ (ವಿಜಯ್‍ಮಲ್ಯ) ಸರಣಿಯ ದುಬಾರಿ ಕಾರುಗಳು ಇದರಲ್ಲಿ ಸೇರಿದ್ದು, ಈ ಕಾರುಗಳನ್ನು 404,000 ಪೌಂಡ್ (ಸುಮಾರು 3 ಕೋಟಿ ರೂ.) ಕಡಿಮೆ ಮೊತ್ತಕ್ಕೆ ಮಾರಾಟ ಮಾಡದಂತೆ ತಿಳಿಸಿದೆ.

    ಲಂಡನ್ ಕೋರ್ಟ್ ನ ನ್ಯಾಯಮೂರ್ತಿ ಕಾಕೆರಿಯಲ್ ಅ.11 ರಂದು ಈ ಕುರಿತು ಆದೇಶ ನೀಡಿದ್ದು, ಮಲ್ಯರ 2016ರ ಮಿನಿ ಕಂಟ್ರಿಮ್ಯಾನ್, 2012ರ ಮೇಬ್ಯಾಚ್ 62, 2006 ರ ಫೆರಾರಿ ಎಫ್430 (ಬಿಒ55 ವಿಜೆಎಂ), 2014 ರ ರೇಂಜ್ ರೋವರ್ (ಎಫ್1 ವಿಜೆಎಂ), ಫೆರಾರಿ ಎಫ್512ಎಂ, ಪೋರ್ಷೆ ಕೆಯಾನ್ (ಒಒ07 ವಿಜೆಎಂ), ಜೇಮ್ಸ್ ಬಾಂಡ್ ಕಾರುಗಳನ್ನು ಹರಾಜು ಮಾಡಲು ಸೂಚಿಸಿದೆ.

    ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ(ಎಫ್‍ಇಆರ್ ಎ) ನಿಯಮ ಉಲ್ಲಂಘನೆ ಆರೋಪ ಕೂಡ ವಿಜಯ್ ಮಲ್ಯ ಮೇಲಿದ್ದು, ಬೆಂಗಳೂರಿನಲ್ಲಿ ದಾಖಲಾಗಿರುವ ಸಾಲ ವಸೂಲಿ ನ್ಯಾಯಾಧೀಕರಣ (ಡಿಆರ್ ಟಿ) ಪ್ರಕರಣದಲ್ಲಿ ಲಂಡನ್ ಕೋರ್ಟ್ ತೀರ್ಪು ನೀಡಿದ ಬಳಿಕ ಈ ಆದೇಶ ನೀಡಲಾಗಿದೆ. ಡಿಆರ್ ಟಿ ನಿಯಮಗಳ ಅನ್ವಯ ಮಲ್ಯ 6.203 ಕೋಟಿ ರೂ. ಬಡ್ಡಿ ನೀಡಬೇಕಿದೆ. ಅಲ್ಲದೇ ಲಂಡನ್ ನಲ್ಲಿರುವ ವಿಜಯ್ ಮಲ್ಯರ ಎರಡು ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಅಧಿಕಾರಿಗಳಿಗೆ ಅನುಮತಿಯನ್ನು ನೀಡಿದೆ.  ಇದನ್ನು ಓದಿ: ವಿಜಯ್ ಮಲ್ಯ ಅರಮನೆಯಲ್ಲಿದೆ ಚಿನ್ನದ ಟಾಯ್ಲೆಟ್! 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv