Tag: ಕಾರು ಮಾರಾಟ

  • ನವೆಂಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 10 ಕಾರುಗಳ ಪಟ್ಟಿ

    ನವೆಂಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 10 ಕಾರುಗಳ ಪಟ್ಟಿ

    ನವದೆಹಲಿ: ನವೆಂಬರ್‌ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿ ಬಿಡುಗಡೆಯಾಗಿದ್ದು ಎಂದಿನಂತೆ ಮಾರುತಿ ಸ್ವಿಫ್ಟ್‌ ಮೊದಲ ಸ್ಥಾನ ಪಡೆದುಕೊಂಡಿದೆ.

    ಟಾಪ್‌ 10 ಪಟ್ಟಿಯಲ್ಲಿ ಮಾರುತಿ ಕಂಪನಿಯ 7 ಕಾರುಗಳು ಸ್ಥಾನ ಪಡೆದುಕೊಂಡಿವೆ. ಹುಂಡೈ ಕಂಪನಿಯ 2 ಕಾರುಗಳು, ಕಿಯಾ ಕಂಪನಿಯ 1 ಕಾರು ಸ್ಥಾನ ಪಡೆದಿದೆ.

    1. ಮಾರುತಿ ಸ್ವಿಫ್ಟ್‌:


    ಮಾರುತಿ ಕಂಪನಿಯ ಸ್ವಿಫ್ಟ್‌ 18,498 ಕಾರುಗಳನ್ನು ಮಾರಾಟ ಮಾಡುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವರ್ಷದಿಂದ ವರ್ಷಕ್ಕೆ ಶೇ.4.2 ರಷ್ಟು ಬೇಡಿಕೆ ಕಳೆದುಕೊಳ್ಳುತ್ತಿದ್ದರೂ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

     

    2. ಮಾರುತಿ ಸುಜುಕಿ ಬಲೆನೊ:


    ಹ್ಯಾಚ್‌ಬ್ಯಾಕ್‌ ಕಾರು ಬಲೆನೊ ಸ್ವಿಫ್ಟ್‌ ಕಾರಿಗೆ ಸ್ಪರ್ಧೆ ನೀಡುತ್ತಿದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನವೆಂಬರ್‌ನಲ್ಲಿ 17,872 ಕಾರುಗಳನ್ನು ಮಾರಾಟ ಮಾಡಿದೆ.

    3. ಮಾರುತಿ ಸುಜುಕಿ ವ್ಯಾಗನಾರ್‌:


    ಮೂರನೇ ಸ್ಥಾನವನ್ನೂ ಮಾರುತಿ ಕಂಪನಿಯ ಮತ್ತೊಂದು ಹ್ಯಾಚ್‌ಬ್ಯಾಕ್‌ ಕಾರು ವ್ಯಾಗನಾರ್‌ ಪಡೆದುಕೊಂಡಿದೆ. ನವೆಂಬರ್‌ನಲ್ಲಿ 16,356 ಕಾರುಗಳನ್ನು ಮಾರಾಟ ಮಾಡಿದ್ದು ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತದೆ.

    4. ಮಾರುತಿ ಸುಜುಕಿ ಆಲ್ಟೋ:


    ಒಟ್ಟು 15,321 ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಪ್‌ -10 ಪಟ್ಟಿಯಲ್ಲಿ ಆಲ್ಟೋ 4ನೇ ಸ್ಥಾನ ಪಡೆದಿದೆ.

    5. ಮಾರುತಿ ಸುಜುಕಿ ಡಿಸೈರ್‌:


    ಸೆಡಾನ್‌ ಕಾರುಗಳ ಮಾರುಕಟ್ಟೆಯಲ್ಲಿ ಮಾರುತಿ ಡಿಸೈರ್‌ ಕಾರಿನ ಆರ್ಭಟ ಈಗಲೂ ಮುಂದುವರಿದಿದೆ. ಹೋಂಡಾ ಅಮೇಜ್‌, ಟಾಟಾ ಟಿಗೊರ್‌ ಕಾರುಗಳಿದ್ದರೂ ಡಿಸೈರ್‌ 13,536 ಕಾರುಗಳನ್ನು ಮಾರಾಟ ಮಾಡಿ 5ನೇ ಸ್ಥಾನ ಪಡೆದುಕೊಂಡಿದೆ. ಕಳೆದ ನವೆಂಬರ್‌ಗೆ ಹೋಲಿಸಿದರೆ ಶೇ.23.3 ರಷ್ಟು ಬೇಡಿಕೆ ಕಡಿಮೆಯಾಗಿದ್ದರೂ ಜನಪ್ರಿಯತೆ ಕುಸಿದಿಲ್ಲ.

    6.ಹುಂಡೈ ಕ್ರೇಟಾ


    ಎರಡನೇ ತಲೆಮಾರಿನ ಕ್ರೇಟಾ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಎಸ್‌ಯುವಿ(ಸ್ಫೋರ್ಟ್‌ ಯುಟಿಲಿಟಿ ವೆಹಿಕಲ್‌) ಮಾದರಿಯಲ್ಲಿ ಪ್ರಸಿದ್ಧವಾಗಿರುವ ಕ್ರೇಟಾ ನವೆಂಬರ್‌ನಲ್ಲಿ 12,017 ಕಾರುಗಳನ್ನು ಮಾರಾಟ ಮಾಡಿ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.

    7. ಕಿಯಾ ಸಾನೆಟ್‌:


    ದಕ್ಷಿಣ ಕೊರಿಯಾ ಕಿಯಾ ಕಂಪನಿ ನಿಧನವಾಗಿ ಭಾರತದಲ್ಲಿ ಜನಪ್ರಿಯವಾಗಲು ಆರಂಭವಾಗಿದೆ. ಒಟ್ಟು 11,417 ಸಾನೆಟ್‌ ಕಾರುಗಳು ಮಾರಾಟಗೊಂಡಿದ್ದು, 7ನೇ ಸ್ಥಾನವನ್ನು ಪಡೆದುಕೊಂಡಿದೆ.

    8.ಮಾರುತಿ ಸುಜುಕಿ ಇಕೋ


    ಮಾರುತಿ ಕಂಪನಿಯ ಯಟಿಲಿಟಿ ವೆಹಿಕಲ್‌ ಇಕೋ 11,183 ಕಾರುಗಳನ್ನು ಮಾರಾಟ ಮಾಡಿದೆ. ಕಡಿಮೆ ಬೆಲೆ ಮತ್ತು ಹೆಚ್ಚು ಜನರನ್ನು ಸಾಗಿಸಬಲ್ಲ ಈ ಕಾರಿನ ಪ್ರಸಿದ್ಧಿ ಈಗ ಕಡಿಮೆಯಾಗುತ್ತಿದ್ದರೂ 8ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

    9. ಹುಂಡೈ ಗ್ರಾಂಡ್‌ ಐ10


    ನವೆಂಬರ್‌ನಲ್ಲಿ ಒಟ್ಟು 10,936 ಗ್ರಾಂಡ್‌ ಐ10 ಕಾರುಗಳ ಮಾರಾಟ ಕಂಡಿದೆ. ಕ್ರೇಟಾದ ಬಳಿಕ ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದ ಎರಡನೇ ಹುಂಡೈ ಕಂಪನಿಯ ಕಾರು ಇದಾಗಿದೆ. ಈ ಕಾರಿನ ಮಾರಾಟ ಶೇ.7.4ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಕಂಪನಿ ತಿಳಿಸಿದೆ.

    10: ಮಾರುತಿ ಸುಜುಕಿ ಎರ್ಟಿಗಾ


    ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದ ಅತಿ ದೊಡ್ಡ ಕಾರು ಎರ್ಟಿಗಾ ಆಗಿದೆ. ಒಟ್ಟು 9,557 ಕಾರುಗಳನ್ನು ಮಾರಾಟ ಮಾಡಿ ಮೀಡಿಯಂ ಪ್ಯಾಸೆಂಜರ್ ವೆಹಿಕಲ್(ಎಂಪಿವಿ) ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ. ಕಳೆ ಬಾರಿ 10ನೇ ಸ್ಥಾನವನ್ನು ವಿಟಾರಾ ಬ್ರೀಜಾ ಪಡೆದುಕೊಂಡಿತ್ತು.

  • ಫೆಬ್ರವರಿಯಲ್ಲಿ ಅತಿ ಹೆಚ್ಚು ಕಿಯಾ ಕಾರು ಮಾರಾಟ

    ಫೆಬ್ರವರಿಯಲ್ಲಿ ಅತಿ ಹೆಚ್ಚು ಕಿಯಾ ಕಾರು ಮಾರಾಟ

    ನವದೆಹಲಿ: ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ದಕ್ಷಿಣ ಕೊರಿಯಾದ ಕಿಯಾ ಕಂಪನಿಯ ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.

    ಜನವರಿಯಲ್ಲಿ 14,024 ಕಾರುಗಳು ಮಾರಾಟಗೊಂಡಿದ್ದರೆ ಫೆಬ್ರವರಿಯಲ್ಲಿ 15,644 ಕಾರುಗಳು ಮಾರಾಟಗೊಂಡಿದೆ. ಜನವರಿ ತಿಂಗಳಿಗೆ ಹೋಲಿಸಿದರೆ ಫೆಬ್ರವರಿ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಇಳಿಕೆ ಶೇ.4.4 ರಷ್ಟು ಇಳಿಕೆಯಾಗಿದ್ದರೆ ಈ ಅವಧಿಯಲ್ಲಿ ಕಿಯಾ ಶೇ.1.3 ರಷ್ಟು ಬೆಳವಣಿಗೆ ಸಾಧಿಸಿದೆ.

    ಕಳೆದ ತಿಂಗಳು ಕಿಯಾ 14,024 ಸೆಲ್ಟೋಸ್ ಕಾರು ಮಾರಾಟಗೊಂಡಿದ್ದರೆ ಹೊಸದಾಗಿ ಬಿಡುಗಡೆಯಾದ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರ್ನಿವಾಲ್ 1,620 ಮಾರಾಟಗೊಂಡಿದೆ.

    ಭಾರತದ ಕಿಯಾದ ಆಡಳಿತ ನಿರ್ದೇಶಕ ಕುಖಿಯಾನ್ ಶಿಮ್ ಪ್ರತಿಕ್ರಿಯಿಸಿ, ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ವಿನ್ಯಾಸವನ್ನು ಭಾರತದ ಜನರು ಮೆಚ್ಚಿಕೊಂಡಿದ್ದಾರೆ. ಉತ್ತಮ ಬೆಲೆಗೆ ಗುಣಮಟ್ಟದ ಕಾರನ್ನು ಜನ ಇಷ್ಟ ಪಟ್ಟಿದ್ದಾರೆ. ಈ ಪ್ರಗತಿಯಿಂದ ನಾವು ಉತ್ಸಾಹಗೊಂಡಿದ್ದು ಎರಡನೇ ಅವಧಿಯಲ್ಲಿ ನಾವು ಕಾಂಪ್ಯಾಕ್ಟ್ ಎಸ್‍ಯುವಿ (ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್) ಸೋನೆಟ್ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಕಿಯಾ ಕಾರ್ನಿವಾಲ್ ಬಿಡುಗಡೆಯಾದ 15 ದಿನಗಳಲ್ಲಿ 3,500 ಬುಕ್ಕಿಂಗ್ ಆಗಿತ್ತು. ಈಗ ಎಷ್ಟು ಕಾರು ಬುಕ್ಕಿಂಗ್ ಆಗಿದೆ ಎನ್ನುವುದನ್ನು ತಿಳಿಸಿಲ್ಲ. ಆದರೆ ಮೊದಲಿಗಿಂತ ದುಪ್ಪಟ್ಟು ಕಾರುಗಳು ಬುಕ್ ಆಗಿದೆ ವರದಿಯಾಗಿದೆ. ಶೋ ರೂಂ ಮಾಲೀಕರು ಹೇಳುವಂತೆ ಮಾದರಿಗೆ ಅನುಗುಣವಾಗಿ ಒಂದು ಕಾರು ಬರಲು ಮೂರು ತಿಂಗಳು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

    ಬೆಂಗಳೂರು ಶೋ ರೂಂ ದರ ಎಷ್ಟಿದೆ?
    ಕಿಯಾ ಸೆಲ್ಟೋಸ್ ಎಚ್‍ಟಿಇ(ಪಟ್ರೋಲ್) 9.89 ಲಕ್ಷ ರೂ., ಎಚ್‍ಟಿಕೆ ಜಿ(ಪೆಟ್ರೋಲ್) 10.29 ಲಕ್ಷ ರೂ. ಎಚ್‍ಟಿಇ (ಡೀಸೆಲ್) 10.34 ಲಕ್ಷ ರೂ. ದರ ಇದೆ. ಹೈ ಎಂಡ್ ಮಾಡೆಲ್ ಎಚ್‍ಟಿಎಕ್ಸ್ ಪ್ಲಸ್ ಎಟಿ ಡಿ(ಡೀಸೆಲ್) 16.34 ಲಕ್ಷ ರೂ. ಇದ್ದರೆ ಜಿಟಿಎಕ್ಸ್ ಪ್ಲಸ್ ಡಿಸಿಟಿ(ಪೆಟ್ರೋಲ್) 17.29 ಲಕ್ಷ ರೂ. ದರ ಇದ್ದರೆ ಜಿಟಿಎಕ್ಸ್ ಪ್ಲಸ್ ಎಟಿಡಿ (ಡೀಸೆಲ್) ಕಾರಿನ ಬೆಲೆ 17.34 ಲಕ್ಷ ರೂ. ಇದೆ.

    ಕಿಯಾ ಕಾರ್ನಿವಾಲ್ 5 ಡೀಸೆಲ್ ಮಾದರಿಯಲ್ಲಿ ಲಭ್ಯವಿದೆ. ಪ್ರೀಮಿಯಂ 24.85 ಲಕ್ಷ ರೂ. ಪ್ರೀಮಿಯಂ 8 ಎಸ್‍ಟಿಆರ್ 25.15 ಲಕ್ಷ ರೂ., ಪ್ರೆಸ್ಟೀಜ್ 28.95 ಲಕ್ಷ ರೂ., ಪ್ರೆಸ್ಟೀಜ್ 9 ಎಸ್‍ಟಿಆರ್ 29.95 ಲಕ್ಷ ರೂ., ಲಿಮೋಸಿನ್ 33.95 ಲಕ್ಷ ರೂ.

  • 40,618 ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ ಸುಜುಕಿ

    40,618 ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ ಸುಜುಕಿ

    ನವದೆಹಲಿ: ದೇಶದ ಅತಿ ದೊಡ್ಡ ಕಾರು ಉತ್ಪಾದಕಾ ಕಂಪನಿ ಮಾರುತಿ ಸುಜುಕಿ 40,618 ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ತಿಳಿಸಿದೆ.

    2018ರ ನವೆಂಬರ್ 15 ರಿಂದ 2019ರ ಆಗಸ್ಟ್ 12 ರವರೆಗೆ ತಯಾರಿಸಲಾದ 1 ಲೀಟರ್ ಎಂಜಿನ್ ಸಾಮರ್ಥ್ಯದ ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆದಿದೆ.

    ಸುರಕ್ಷಾ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಾರುಗಳನ್ನು ಮರಳಿ ಪಡೆಯುತ್ತಿದ್ದೇವೆ. ಇಂಧನದ ಕೊಳವೆ ಮತ್ತು ಮೆಟಲ್ ಕ್ಲ್ಯಾಂಪ್ ನಲ್ಲಿ ದೋಷಗಳಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

     

    ಆಗಸ್ಟ್ 24 ರಿಂದ ಮೇಲೆ ತಿಳಿಸಿದ ಅವಧಿಯಲ್ಲಿ ಕಾರು ಖರೀದಿಸಿದ್ದಲ್ಲಿ ಮಾರುತಿ ಸುಜುಕಿ ಡೀಲರ್ ಸಂಪರ್ಕಿಸಿ ದೋಷಗೊಂಡಿರುವ ಭಾಗವನ್ನು ಉಚಿತವಾಗಿ ಬದಲಾಯಿಸಿಕೊಳ್ಳಬಹುದು. ಸಂದೇಹವಿದ್ದಲ್ಲಿ ಗ್ರಾಹಕರು ಮಾರುತಿ ಸುಜುಕಿ ವೆಬ್‍ಸೈಟಿಗೆ ಭೇಟಿ ನೀಡಿ ಚಾಸಿ ನಂಬರ್ ನಮೂದಿಸಿ ಪರಿಶೀಲಿಸಿಕೊಳ್ಳಬಹುದು.

    2018ರಲ್ಲಿ ಮಾರುತಿ ಕಂಪನಿ ಹೊಸದಾಗಿ ಬಿಡುಗಡೆಯಾಗಿದ್ದ ಒಟ್ಟು 52,686 ಸ್ವಿಫ್ಟ್ ಮತ್ತು ಬಲೆನೊ ಕಾರುಗಳನ್ನು ಹಿಂದಕ್ಕೆ ಪಡೆದಿತ್ತು. ಬ್ರೇಕ್ ವ್ಯವಸ್ಥೆಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕಂಪನಿ ಈ ನಿರ್ಧಾರ ಪ್ರಕಟಿಸಿತ್ತು.

    ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟದಲ್ಲಿ ಶೇ.36.3 ರಷ್ಟು ಇಳಿಕೆ ಕಂಡು ಬಂದಿತ್ತು. ಒಟ್ಟು 98,210 ಕಾರುಗಳು ಮಾತ್ರ ಮಾರಾಟವಾಗಿತ್ತು. ಕಳೆದ ಎರಡು ದಶಕಗಳಲ್ಲಿ ಅತಿ ಕಡಿಮೆ ಕಾರು ಮಾರಾಟವಾದ ತಿಂಗಳು ಎಂದು ಮಾರುತಿ ಹೇಳಿತ್ತು.