Tag: ಕಾರು ಬೆಲೆ

  • ಏಪ್ರಿಲ್ 1 ರಿಂದ ಮಾರುತಿ ಸುಝುಕಿ ಕಂಪನಿ ಕಾರುಗಳು ದುಬಾರಿ

    ಏಪ್ರಿಲ್ 1 ರಿಂದ ಮಾರುತಿ ಸುಝುಕಿ ಕಂಪನಿ ಕಾರುಗಳು ದುಬಾರಿ

    ಮುಂಬೈ: ಏಪ್ರಿಲ್‌ 1 ರಿಂದ ಮಾರುತಿ ಸುಝುಕಿ (Maruti Suzuki) ಕಂಪನಿ ಕಾರುಗಳ ಬೆಲೆ ದುಬಾರಿ ಆಗಲಿದೆ.

    ದೇಶದ ಅತಿದೊಡ್ಡ ಪ್ರಯಾಣಿಕ ವಾಹನ (ಪಿವಿ) ತಯಾರಕ ಮಾರುತಿ ಸುಜುಕಿ ಇಂಡಿಯಾ, ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳಿಂದಾಗಿ ಏಪ್ರಿಲ್ 2025 ರಿಂದ ತನ್ನ ಕಾರುಗಳ ಬೆಲೆಯನ್ನು ಶೇ. 4 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?

    ಮಾಡೆಲ್‌ ಅವಲಂಬಿಸಿ ಬೆಲೆ ಏರಿಕೆ ಬದಲಾಗುತ್ತದೆ. ಕಂಪನಿಯು ಮಾಡೆಲ್‌ವಾರು ಬೆಲೆ ಏರಿಕೆಯನ್ನು ನಿರ್ದಿಷ್ಟಪಡಿಸಿಲ್ಲ. ಮಾರುತಿ ತನ್ನ ಹೊಸ ಕಾರುಗಳನ್ನು ನೆಕ್ಸಾ ಮತ್ತು ಅರೆನಾ ಮಳಿಗೆಗಳ ಮೂಲಕ ಮಾರಾಟ ಮಾಡುತ್ತದೆ.

    ನೆಕ್ಸಾ ಮಳಿಗೆಗಳು ಇಗ್ನಿಸ್, ಬಲೆನೊ, ಸಿಯಾಜ್, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಎಕ್ಸ್‌ಎಲ್ 6 ಮತ್ತು ಇನ್ವಿಕ್ಟೊದಂತಹ ಮಾಡೆಲ್‌ಗಳನ್ನು ನೀಡುತ್ತವೆ. ಅರೆನಾ ಮಳಿಗೆಗಳ ಮೂಲಕ ಮಾರಾಟವಾಗುವ ಮಾಡೆಲ್‌ಗಳಲ್ಲಿ ಆಲ್ಟೊ ಕೆ 10, ಎಸ್-ಪ್ರೆಸ್ಸೊ, ಸೆಲಿಯೊ, ಈಕೊ, ವ್ಯಾಗನ್‌ಆರ್, ಸ್ವಿಫ್ಟ್, ಡಿಜೈರ್, ಬ್ರೆಝಾ ಮತ್ತು ಎರ್ಟಿಗಾ ಸೇರಿವೆ. ಇದನ್ನೂ ಓದಿ: ಏಪ್ರಿಲ್‌ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು‌ ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್‌ – ಆರಂಭಿಕ ಬೆಲೆ ಎಷ್ಟು?

    ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಇದೇ ಏಪ್ರಿಲ್‌ನಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ಯೋಜಿಸಿದೆ. ಬೆಲೆ ಹೆಚ್ಚಳವು 4% ವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ ಎಂದು ಮಾರುತಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

    ಮೂಲ ಸಲಕರಣೆ ತಯಾರಕರು (OEM ಗಳು) ಸಾಮಾನ್ಯವಾಗಿ ಪ್ರತಿ ವರ್ಷ ಎರಡು ಬಾರಿ ಕಾರು ಬೆಲೆಗಳನ್ನು ಹೆಚ್ಚಿಸುತ್ತಾರೆ.

  • ಜಿಎಸ್‍ಟಿ ಎಫೆಕ್ಟ್ : ಮಿಟ್ಸುಬಿಸಿ ಪಜೆರೊ ಬೆಲೆ ಭಾರೀ ಇಳಿಕೆ

    ಜಿಎಸ್‍ಟಿ ಎಫೆಕ್ಟ್ : ಮಿಟ್ಸುಬಿಸಿ ಪಜೆರೊ ಬೆಲೆ ಭಾರೀ ಇಳಿಕೆ

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾದ ಬಳಿಕ ಸ್ಪೋರ್ಟ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಯಾಗಿರುವ ಮಿಟ್ಸುಬಿಸಿ ಕಂಪೆನಿಯ ಪಜೆರೊ ಬೆಲೆ ಭಾರೀ ಇಳಿಕೆಯಾಗಿದೆ.

    ಪ್ರತಿ ಮಾದರಿ ಮೇಲೂ ಸರಾಸರಿಯಾಗಿ 1.04 ಲಕ್ಷ ರೂಪಾಯಿ ಕಡಿಮೆಯಾಗಿದೆ. ಹೀಗಾಗಿ ಪ್ರಸ್ತುತ ಬೆಲೆಗಳ ಪ್ರಕಾರ ಮಿಟ್ಸುಬಿಸಿ ಪಜೆರೊ ಆರಂಭಿಕ ಕಾರು ಮಾದರಿಗಳ ಬೆಲೆ ರೂ.26.64 ಲಕ್ಷ ರೂ.(ದೆಹಲಿ ಶೋ ರೂಂ) ಲಭ್ಯವಿದೆ. ಈ ಹಿಂದೆ ಈ ಕಾರಿನ ಬೆಲೆ 27.69 ಲಕ್ಷ ರೂ. ಇತ್ತು. ಉನ್ನತ ಕಾರು ಮಾದರಿಯ ಬೆಲೆ ರೂ.28.59 ಲಕ್ಷಕ್ಕೆ ಲಭ್ಯವಿರಲಿವೆ.

    ಈ ಹಿಂದೆ 26.66 ಲಕ್ಷ ರೂ. ನಿಂದ ಆರಂಭವಾಗುವ ಫಾರ್ಚೂನರ್ ಕಾರಿನ ಬೆಲೆ 2,17,000 ರೂ. ಇಳಿಕೆಯಾಗಿದ್ದರೆ, 14 ಲಕ್ಷ ರೂ.ನಿಂದ ಆರಂಭವಾಗುವ ಇನ್ನೋವಾ ಕ್ರಿಸ್ಟಾ ಬೆಲೆಯಲ್ಲಿ 98,500 ರೂ. ಇಳಿಕೆಯಾಗಿತ್ತು.

    ಬೆಲೆ ಇಳಿಕೆಯಾಗಿದ್ದು ಯಾಕೆ?
    ಇಲ್ಲಿಯವರೆಗೆ ವ್ಯಾಟ್, ಮೂಲ ಸೌಕರ್ಯ ತೆರಿಗೆ ಮತ್ತು ಕೆಲ ರಾಜ್ಯಗಳು ವಿಧಿಸುವ ಹಸಿರು ತೆರಿಗೆ ಮತ್ತು ಕಾರಿನ ಶೋ ರೂಂ ಬೆಲೆ ನೋಡಿ ಬೆಲೆಗಳು ನಿಗದಿಯಾಗುತಿತ್ತು. ಜಿಎಸ್‍ಟಿ ವ್ಯವಸ್ಥೆಯಲ್ಲಿ ಕಾರುಗಳ ಮೇಲೆ ಶೇ. 28ರಷ್ಟು ತೆರಿಗೆ ಜತೆಗೆ ಆಯಾ ಕಾರುಗಳ ಗಾತ್ರಕ್ಕೆ ತಕ್ಕಂತೆ ಶೇ. 1ರಿಂದ ಶೇ 15ರವರೆಗೆ ಸೆಸ್ ವಿಧಿಸಲಾಗುತ್ತದೆ.

    ಜಿಎಸ್‍ಟಿಯಲ್ಲಿ ಸಣ್ಣ ಕಾರುಗಳಿಗೆ ನಿಗದಿಯಾದ ಅತ್ಯಧಿಕ ದರ ಶೇ.28 ಜೊತೆಗೆ ಹೆಚ್ಚುವರಿಯಾಗಿ ಶೇ.1ರಷ್ಟು ಸೆಸ್ ವಿಧಿಸಲಾಗುತ್ತದೆ. ಮಧ್ಯಮ ಗಾತ್ರದ ಕಾರುಗಳು ಜಿಎಸ್‍ಟಿ ದರವಲ್ಲದೆ ಶೇ.3ರಷ್ಟು ಹಾಗೂ ಲಕ್ಸುರಿ ಕಾರುಗಳು ಶೇ.15ರಷ್ಟು ಸೆಸ್ ವಿಧಿಸಲಾಗುತ್ತದೆ. ಈ ಹಿಂದೆ ಸ್ಟೋಟ್ರ್ಸ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಮೇಲೆ ಶೇ.48ರಷ್ಟು ತೆರಿಗೆ ವಿಧಿಸಲಾಗುತಿತ್ತು. ಆದರೆ ಈಗ ಜಿಎಸ್‍ಟಿಯಲ್ಲಿ ಶೇ.43 ರಷ್ಟು ಹಾಕಲಾಗುತ್ತದೆ.

    ಸಣ್ಣ ಕಾರುಗಳ ಮೇಲೆ ಈ ಹಿಂದೆಯೂ ಶೇ.29ರಷ್ಟು ತೆರಿಗೆ ಇತ್ತು. ಹೀಗಾಗಿ ಹೊಸ ತೆರಿಗೆ ಈ ದರ ಹಾಗೆಯೇ (ಶೇ. 28 ಜಿಎಸ್‍ಟಿ + ಶೇ.1 ಸೆಸ್) ಇರಲಿರುವ ಕಾರಣ ಸಣ್ಣ ಕಾರುಗಳ ಮೇಲೆ ಜಿಎಸ್‍ಟಿಯಿಂದ ಅಷ್ಟೊಂದು ಪರಿಣಾಮ ಬೀರದ ಕಾರಣ ಬೆಲೆ ಕಡಿಮೆಯಾಗುವುದಿಲ್ಲ.

    ಇದನ್ನೂ ಓದಿ: ಯಾವ ಕಾರಿನ ಬೆಲೆ ಎಷ್ಟು ಇಳಿಕೆಯಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ