Tag: ಕಾರು. ನವದೆಹಲಿ

  • ವಕ್ಫ್ ಮಸೂದೆಯ ಪರ ಮತ ಹಾಕಿ – ಸಂಸದರಿಗೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕರೆ

    ವಕ್ಫ್ ಮಸೂದೆಯ ಪರ ಮತ ಹಾಕಿ – ಸಂಸದರಿಗೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕರೆ

    ನವದೆಹಲಿ: ವಕ್ಫ್ ತಿದ್ದುಪಡಿ (Waqf) ಮಸೂದೆಯನ್ನು ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ (Kerala Catholic Bishops’ Association) ಬೆಂಬಲ ನೀಡಿದೆ. ಜನ ಪ್ರತಿನಿಧಿಗಳ ತಿದ್ದುಪಡಿಯ ಪರವಾಗಿ ಮತ ಚಲಾಯಿಸಬೇಕು. ಇದರಿಂದ ವಕ್ಫ್ ಮಂಡಳಿಯ ಭೂಮಿಯ ಮೇಲೆ ಹಕ್ಕು ಚಲಾಯಿಸುವುದನ್ನು ನಿಲ್ಲಿಸಬಹುದು ಎಂದು ತಿಳಿಸಿದೆ.

    ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಅನೇಕ ಸಂಸ್ಥೆಗಳು ಮಸೂದೆಯನ್ನು ಬೆಂಬಲಿಸುತ್ತಿವೆ. ವಕ್ಫ್ನ ಆಸ್ತಿಗಳನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಈ ಮಸೂದೆಯಿಂದ ಸಾಮಾನ್ಯ ಜನರ ಕಲ್ಯಾಣವಾಗುತ್ತದೆ. ಅದಲ್ಲದೇ ವಕ್ಫ್ ಆಸ್ತಿಗಳನ್ನು ಅತಿಕ್ರಮಿಸಿದ ಕೆಲವು ಪ್ರಭಾವಿ ಜನರಿದ್ದಾರೆ. ವಿಷಯಗಳನ್ನು ಟೀಕಿಸುವುದು ಪ್ರತಿಯೊಬ್ಬರ ಹಕ್ಕು, ಆದರೆ ಟೀಕೆಯಲ್ಲಿ ಕೆಲವು ವಿಷಯಗಳು ಇರಬೇಕು ಎಂದಿದೆ.ಇದನ್ನೂ ಓದಿ:ಬುಧವಾರ ವಕ್ಫ್‌ ಬಿಲ್‌ ಮಂಡನೆ – ಬಿಲ್‌ ಪಾಸ್‌ ಆಗುತ್ತಾ? ಲೋಕಸಭೆಯಲ್ಲಿ ಬಲಾಬಲ ಹೇಗಿದೆ?

    ಎರ್ನಾಕುಲಂ ಜಿಲ್ಲೆಯ ಮುನಂಬಮ್‌ನಲ್ಲಿ ತಲೆಮಾರುಗಳಿಂದ ಕ್ರಿಶ್ಚಿಯನ್ ನಿವಾಸಿಗಳ ವಶದಲ್ಲಿರುವ ಸುಮಾರು 400 ಎಕರೆ ಭೂಮಿಯ ಮೇಲಿನ ವಕ್ಫ್ ಮಂಡಳಿಯ ಹಕ್ಕನ್ನು ಉಲ್ಲೇಖಿಸಿ, ವಕ್ಫ್ ಕಾಯ್ದೆಯಲ್ಲಿನ ವಿವಿಧ ಷರತ್ತುಗಳು, ಭೂನಿವಾಸಿಗಳು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಅನುಭವಿಸುವಲ್ಲಿ ವಂಚಿತರಾಗುತ್ತಿದ್ದಾರೆ. ಇವುಗಳನ್ನು ತಿದ್ದುಪಡಿ ಮಾಡಬೇಕು. ಕೋಝಿಕ್ಕೋಡ್‌ನಲ್ಲಿ ಫಾರೂಕ್ ಕಾಲೇಜು ಆಡಳಿತ ಮಂಡಳಿ ಭೂಮಿಯನ್ನು ಅಲ್ಲಿನ ನಿವಾಸಿಗಳಿಗೆ ಮಾರಾಟ ಮಾಡಿ, ಇದನ್ನು ನಿಮಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಹೇಳಿತ್ತು.

    ಹೀಗಾಗಿ ವಿಪಕ್ಷಗಳು ಹಾಗೂ ಮುಸ್ಲಿಂ ಸಮುದಾಯದ ತೀವ್ರ ವಿರೋಧದ ನಡುವೆ ನಾಳೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕವನ್ನು ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನಾಳೆ ಮಧ್ಯಾಹ್ನ ಕೇಂದ್ರ ಸಚಿವ ಕಿರಣ್ ರಿಜಿಜು ವಕ್ಫ್ ತಿದ್ದುಪಡಿ ಬಿಲ್ ಮಂಡಿಸಲಿದ್ದಾರೆ. ವಕ್ಫ್ ಬಿಲ್ ಮೇಲಿನ ವಿಸ್ತೃತ ಚರ್ಚೆಗಾಗಿ ಬರೋಬ್ಬರಿ 8 ಗಂಟೆ ಸಮಯ ಮೀಸಲು ಇಡಲಾಗಿದೆ.

    ಏ.4ಕ್ಕೆ ಬಜೆಟ್ ಅಧಿವೇಶನ ಮುಗಿಯುವ ಹಿನ್ನೆಲೆಯಲ್ಲಿ ನಾಳೆಯೇ ಈ ಬಿಲ್‌ಗೆ ಲೋಕಸಭೆಯಲ್ಲಿ (Lokasabha) ಅನುಮೋದನೆ ಪಡೆಯಲು ಮೋದಿ ಸರ್ಕಾರ (Modi Government) ಪ್ಲ್ಯಾನ್‌ ಮಾಡಿದೆ. ಈ ವಿಧೇಯಕದ ಪರ 298 ಸಂಸದರು ನಿಲ್ಲುವ ಸಾಧ್ಯತೆಯಿದ್ದು, ನಾಳೆಯೇ ವೋಟಿಂಗ್ ನಡೆಯಲಿರುವ ಹಿನ್ನೆಲೆ ಎಲ್ಲಾ ಸಂಸದರು ಕಡ್ಡಾಯವಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕೆಂದು ಬಿಜೆಪಿ ವ್ಹಿಪ್ ಜಾರಿ ಮಾಡಿದೆ. ಆದರೆ ಈ ಬಿಲ್ ಪಾಸ್ ಆಗದಂತೆ ನೋಡಿಕೊಳ್ಳಲು ವಿಪಕ್ಷಗಳು ಕಸರತ್ತು ನಡೆಸಿವೆ. ಈ ವಿಧೇಯಕವನ್ನು ನಾವು ಸದನದಲ್ಲಿ ವಿರೋಧ ಮಾಡುತ್ತೇವೆ ಎಂದು ಕಾಂಗ್ರೆಸ್, ಸಮಾಜವಾದಿ, ಟಿಎಂಸಿ ಸೇರಿ ಹಲವು ಪಕ್ಷಗಳು ಘೋಷಣೆ ಮಾಡಿವೆ.ಇದನ್ನೂ ಓದಿ:ಪತ್ನಿಯಿಂದ ಪತಿಯ ವಾಟ್ಸಪ್ ಹ್ಯಾಕ್ – ಪರ ಸ್ತ್ರೀಯರೊಂದಿಗೆ ರಾಸಲೀಲೆ ನೋಡಿ ಶಾಕ್

  • ಬ್ರೇಕ್ ಫೇಲ್ ಆಗಿ ವಾಹನಕ್ಕೆ ಗುದ್ದಿದ ಕಾರು ಫ್ಲೈಓವರ್  ಡಿವೈಡರ್ ನಲ್ಲಿ ನಿಲ್ತು!

    ಬ್ರೇಕ್ ಫೇಲ್ ಆಗಿ ವಾಹನಕ್ಕೆ ಗುದ್ದಿದ ಕಾರು ಫ್ಲೈಓವರ್ ಡಿವೈಡರ್ ನಲ್ಲಿ ನಿಲ್ತು!

    – 7 ವಾಹನಗಳ ನಡುವೆ ಸರಣಿ ಅಪಘಾತ

    ನವದೆಹಲಿ: ಕಾರಿನ ಬ್ರೇಕ್ ಫೇಲ್ ಆದ ಪರಿಣಾಮ 7 ವಾಹನಗಳು ಪರಸ್ಪರ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿರುವ ಘಟನೆ ನವದೆಹಲಿಯ ಬುರಾರಿ ಫ್ಲೈ ಓವರ್ ನಲ್ಲಿ ನಡೆದಿದೆ.

    ಬುರಾರಿ ಫ್ಲೈ ಓವರ್ ಮೇಲೆ ವೇಗವಾಗಿ ಬರುತ್ತಿದ್ದ ಕಾರೊಂದು ಬ್ರೇಕ್ ಫೇಲ್ ಆದ ಪರಿಣಾಮ ಎದುರಿಗೆ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಹಿಂದೆ ಬರುತ್ತಿದ್ದ ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿ ಬರೋಬ್ಬರಿ 7 ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ.

    ಈ ಅಪಘಾತದಲ್ಲಿ ಒಂದು ಕಾರ್ ಫ್ಲೈಓವರ್ ನ ಡಿವೈಡರ್ ನ ಮೇಲೆ ಹೋಗಿ ನಿಂತಿದೆ. ಒಂದು ಕಾರಿನ ಬ್ರೇಕ್ ವೈಫಲ್ಯ ಭಾರೀ ಪ್ರಮಾಣದ ಅವಾಂತರವನ್ನೇ ಬುರಾರಿ ಫ್ಲೈ ಓವರ್ ಮೇಲೆ ಉಂಟುಮಾಡಿತ್ತು.

    ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಜೆಯ ವೇಳೆ ಈ ಅಪಘಾತ ಉಂಟಾಗಿರುವ ಕಾರಣದಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಂಟೆಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.