Tag: ಕಾರು ಡ್ರೈವರ್

  • ಅಂದು ಪತಿ, ಇಂದು ಕಾರು ಡ್ರೈವರ್ ನ ಜೈಲಿಗೆ ಕಳಿಸ್ತೀನಿ ಎಂದ ರಾಖಿ ಸಾವಂತ್

    ಅಂದು ಪತಿ, ಇಂದು ಕಾರು ಡ್ರೈವರ್ ನ ಜೈಲಿಗೆ ಕಳಿಸ್ತೀನಿ ಎಂದ ರಾಖಿ ಸಾವಂತ್

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant)ಗೆ ಪತಿಯಿಂದ ಮಾತ್ರವಲ್ಲ, ತಮ್ಮ ಕಾರು ಡ್ರೈವರ್ ನಿಂದಲೂ ಮೋಸವಾಗಿದೆಯಂತೆ. ಹಾಗಾಗಿ ಅವನ ವಿರುದ್ಧ ದೂರು ದಾಖಲಿಸಿದ್ದಾರೆ. ಆತನನ್ನು ಜೈಲಿಗೆ (Jail) ಕಳುಹಿಸಿ ಬುದ್ದಿ ಕಲಿಸುವುದಾಗಿ ರಾಖಿ ಹೇಳಿಕೊಂಡಿದ್ದಾರೆ. ಅಂದು ಪತಿ, ಇಂದು ಕಾರ್ ಡ್ರೈವರ್ ನನ್ನೂ ಕಂಬಿ ಹಿಂದೆ ಕಳುಹಿಸಲು ರಾಖಿ ಶಪಥ ಮಾಡಿದ್ದಾರೆ.

    ಈಗಾಗಲೇ ಪತಿ ಆದಿಲ್ (Adil) ತಮಗೆ ಮೋಸ (Cheating) ಮಾಡಿದ್ದಾರೆ ಎಂದು ರಾಖಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ಹಲವು ತಿಂಗಳಿಂದ ಆದಿಲ್ ಮೈಸೂರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಆ ನೋವಿನಿಂದ ರಾಖಿ ಆಚೆ ಬರುವ ಮುನ್ನವೇ ತಮ್ಮ ಕಾರು ಡ್ರೈವರ್ ನಿಂದಲೂ ತಮಗೆ ಮೋಸವಾಗಿದೆ ಎಂದು ಕ್ಯಾಮೆರಾ ಎದುರು ಹೇಳಿಕೊಂಡಿದ್ದಾರೆ. ಅಲ್ಲದೇ, ಕಣ್ಣೀರು ಕೂಡ ಹಾಕಿದ್ದಾರೆ. ಇದನ್ನೂ ಓದಿ:‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಪ್ರಕಾಶ್ ರೈ- ರಮ್ಯಾಕೃಷ್ಣ

    ‘ನನ್ನ ಕಾರು ಡ್ರೈವರ್ (Car Driver) ಬಡವ ಎಂದು ಅವನನ್ನು ನೇಮಿಸಿಕೊಂಡೆ. ಅವನು ಕೂಡ ನನಗೆ ಮೋಸ ಮಾಡಿದ್ದಾನೆ. ಕಾರು ಚಾಲಕ ಓಡಿ ಹೋಗಿದ್ದಾನೆ. ಹಣ, ಕಾರು ಕೀ ಜೊತೆ ಪರಾರಿಯಾಗಿದ್ದಾನೆ. ಕಾರು ಚಾಲಕ ಉತ್ತರ ಪ್ರದೇಶದ ಪಪ್ಪು ಯಾದವ್ ಆಗಿದ್ದು, ಅವನ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ’ ಎಂದಿದ್ದಾರೆ ರಾಖಿ.

     

    ತಮಗೆ ಈ ಜಗತ್ತಿನಲ್ಲಿ ಬದುಕಬೇಕೋ ಅಥವಾ ಬೇರೆ ಗ್ರಹದಲ್ಲಿ ವಾಸವಾಗಬೇಕೊ ಗೊತ್ತಾಗುತ್ತಿಲ್ಲ. ನನ್ನ ಜೀವನದಲ್ಲಿ ಬಂದವರೆಲ್ಲ ನನಗೆ ಮೋಸ ಮಾಡುತ್ತಿದ್ದಾರೆ ಎಂದು ರಾಖಿ ದುಃಖಿಸಿದ್ದಾರೆ. ಈ ನಡೆಯಿಂದ ತಮಗೆ ಸಾಕಷ್ಟು ಬೇಸರವಾಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲೂ ಅವರು ಬರೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಡನಿಂದ ಮಾತ್ರವಲ್ಲ, ಡ್ರೈವರ್ ನಿಂದಲೂ ನಟಿ ರಾಖಿಗೆ ಮೋಸ : ಕಣ್ಣೀರಿಟ್ಟ ನಟಿ

    ಗಂಡನಿಂದ ಮಾತ್ರವಲ್ಲ, ಡ್ರೈವರ್ ನಿಂದಲೂ ನಟಿ ರಾಖಿಗೆ ಮೋಸ : ಕಣ್ಣೀರಿಟ್ಟ ನಟಿ

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಬೀದಿಯಲ್ಲಿ ಮತ್ತೆ ಕಣ್ಣೀರಿಟ್ಟಿದ್ದಾರೆ. ನನಗೆ ಪತಿಯಿಂದ ಮಾತ್ರವಲ್ಲ, ನನ್ನ ಕಾರು ಡ್ರೈವರ್ ನಿಂದಲೂ ಮೋಸವಾಗಿದೆ (Cheating). ಅವನ ವಿರುದ್ಧ ದೂರು  (Complaint)ನೀಡಲು ಆಟೋದಲ್ಲಿ ಹೊರಟಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಬೆಲೆಬಾಳುವ ಬಟ್ಟೆಗಳನ್ನು ಹಾಕಿಕೊಂಡು ಆಟೋದಲ್ಲಿ ರಾಖಿ ಹೊರಟಿದ್ದ ವಿಡಿಯೋ ವೈರಲ್ ಆಗಿವೆ.

    ಈಗಾಗಲೇ ಪತಿ ಆದಿಲ್ (Adil) ತಮಗೆ ಮೋಸ ಮಾಡಿದ್ದಾರೆ ಎಂದು ರಾಖಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ಹಲವು ತಿಂಗಳಿಂದ ಆದಿಲ್ ಮೈಸೂರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಆ ನೋವಿನಿಂದ ರಾಖಿ ಆಚೆ ಬರುವ ಮುನ್ನವೇ ತಮ್ಮ ಕಾರು ಡ್ರೈವರ್ ನಿಂದಲೂ ತಮಗೆ ಮೋಸವಾಗಿದೆ ಎಂದು ಕ್ಯಾಮೆರಾ ಎದುರು ಹೇಳಿಕೊಂಡಿದ್ದಾರೆ. ಅಲ್ಲದೇ, ಕಣ್ಣೀರು ಕೂಡ ಹಾಕಿದ್ದಾರೆ. ಇದನ್ನೂ ಓದಿ:ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ನಟಿ- ಕಣ್ಣೀರಿಟ್ಟ ನಿತ್ಯಾ ಮೆನನ್

    ‘ನನ್ನ ಕಾರು ಡ್ರೈವರ್ (Car Driver) ಬಡವ ಎಂದು ಅವನನ್ನು ನೇಮಿಸಿಕೊಂಡೆ. ಅವನು ಕೂಡ ನನಗೆ ಮೋಸ ಮಾಡಿದ್ದಾರೆ. ಕಾರು ಚಾಲಕ ಓಡಿ ಹೋಗಿದ್ದಾನೆ. ಹಣ, ಕಾರು ಕೀ ಜೊತೆ ಅವರು ಪರಾರಿಯಾಗಿದ್ದಾನೆ. ಕಾರು ಚಾಲಕ ಉತ್ತರ ಪ್ರದೇಶದ ಪಪ್ಪು ಯಾದವ್ ಆಗಿದ್ದು, ಅವನ ವಿರುದ್ಧ ದೂರು ನೀಡಲು ಓಶಿವಾರ ಪೊಲೀಸ್ ಠಾಣೆಗೆ ದೂರು ಕೊಡಲು ಆಟೋದಲ್ಲಿ ಹೋಗುತ್ತಿದ್ದೇನೆ’ ಎಂದಿದ್ದಾರೆ ರಾಖಿ.

     

    ತಮಗೆ ಈ ಜಗತ್ತಿನಲ್ಲಿ ಬದುಕಬೇಕೋ ಅಥವಾ ಬೇರೆ ಗ್ರಹದಲ್ಲಿ ವಾಸವಾಗಬೇಕೊ ಗೊತ್ತಾಗುತ್ತಿಲ್ಲ. ನನ್ನ ಜೀವನದಲ್ಲಿ ಬಂದವರೆಲ್ಲ ನನಗೆ ಮೋಸ ಮಾಡುತ್ತಿದ್ದಾರೆ ಎಂದು ರಾಖಿ ದುಃಖಿಸಿದ್ದಾರೆ. ಈ ನಡೆಯಿಂದ ತಮಗೆ ಸಾಕಷ್ಟು ಬೇಸರವಾಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲೂ ಅವರು ಬರೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಪತ್ರ : ಸಿಸಿಬಿ ಕಚೇರಿಯಲ್ಲಿ ಜಾಕ್ ಮಂಜು

    ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಪತ್ರ : ಸಿಸಿಬಿ ಕಚೇರಿಯಲ್ಲಿ ಜಾಕ್ ಮಂಜು

    ಖಾಸಗಿ ವಿಡಿಯೋ (Private Video) ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಕಂ ಸುದೀಪ್  (Sudeep)  ಆಪ್ತ ಜಾಕ್ ಮಂಜು (Jack Manju) ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದಾರೆ. ಸಿಸಿಬಿ (CCB) ಅಧಿಕಾರಿಗಳು ವಿವರಣೆಗೆ ಕರೆದ ಹಿನ್ನೆಲೆಯಲ್ಲಿ ಮಂಜು ಭೇಟಿ ನೀಡಿದ್ದು,  ಸುದೀಪ್ ಅವರಿಗೆ ಬಂದಿದ್ದ ಎರಡು ಪತ್ರಗಳು ಕುರಿತಾಗಿ ವಿವರಣೆ ಪಡೆದಿದ್ದಾರೆ. ಅಲ್ಲದೇ, ಕೆಲವರ ಬಗ್ಗೆ ಅನುಮಾನವನ್ನೂ ವ್ಯಕ್ತ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಈವರೆಗೂ ಸುದೀಪ್ ಮೇಲೆ ನಡೆದ ಕುತಂತ್ರಗಳ ಬಗ್ಗೆಯೂ ಮಂಜು ಅಧಿಕಾರಿಗಳಿಗೆ ವಿವರಿಸಿದ್ದಾರೆ ಎನ್ನಲಾಗುತ್ತಿದೆ.

    ಬೆದರಿಕೆ ಪತ್ರದ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಮೊನ್ನೆಯಷ್ಟೇ ಸುದೀಪ್‍ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ. ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿವೆ ಎಂದು ಹೇಳಲಾಗುತ್ತಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ ತನಿಖೆ ಶುರುವಾಗಿದ್ದು, ಶಂಕೀತ ಜಾಡು ಹಿಡಿದು ಹೊರಟಿದ್ದಾರಂತೆ ಸಿಸಿಬಿ ಅಧಿಕಾರಿಗಳು.

    ಮೊದಲ ಪತ್ರ ಬಂದಾಗ ಸುದೀಪ್ ಅವರೇ ನಿರ್ಲಕ್ಷ್ಯ ವಹಿಸಿದ್ದರಂತೆ. ದುಷ್ಟರು ಬರೆದ ಮೊದಲನೇ ಪತ್ರಕ್ಕೆ ಯಾವಾಗ ಸುದೀಪ್ ರಿಯಾಕ್ಟ್ ಆಗ್ಲಿಲ್ವೋ, ಈತ ಏನೂ ಮಾಡಲ್ಲ ಎಂಬ ಭಂಡ ಧೈರ್ಯದಿಂದ ಮತ್ತೊಂದು ಪತ್ರ ಕಳಿಸಿದ್ದಾನಂತೆ ಆ ಭೂಪ. ಯಾವಾಗ ಎರಡನೇ ಪತ್ರ ಕೈ ಸೇರಿತೋ ಇದರ ಗಂಭೀರತೆಯನ್ನು ಅರಿತು ಕಾನೂನು ಪ್ರಕ್ರಿಯೆಯೇ ಸೂಕ್ತ ಎಂದು ತಮ್ಮ ಆಪ್ತ ಜಾಕ್ ಮಂಜು ಮೂಲಕ ದೂರು ನೀಡಿದ್ದರು ಸುದೀಪ್. ಸದ್ಯ ಈ ಪತ್ರದ ಸುತ್ತ ಪೊಲೀಸರು ತನಿಖೆಗಿಳಿದಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ಮಾರ್ಚ್ 10ನೇ ತಾರೀಕು ಸುದೀಪ್ ಮನೆಗೆ ಮೊದಲ ಪತ್ರ ತಲುಪಿದೆ. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ‌. ಆದರೂ ಇಂಟರ್ ನಲ್ ಎನ್ಕೈರಿಯಂತೆ ಮಾಹಿತಿಯನ್ನು ಕಲೆ ಹಾಕುವುದಕ್ಕೆ ಯತ್ನಿಸಿದ್ದರಂತೆ. ಅದರ ಬೆನ್ನಲ್ಲೆ ಮತ್ತೊಂದು ಪತ್ರ ಬಂದಿದ್ದರಿಂದ ಸಹಜವಾಗಿಯೇ ಇದು ಗಂಭೀರ ಪ್ರಕರಣ ಅನಿಸಿ ದೂರು ನೀಡಲಾಗಿತ್ತು. ಇನ್ನು ಆ ಪತ್ರದ ಮೂಲ ಹುಡುಕುತ್ತಾ ಹೋದಾಗ ಸಿಕ್ಕಿದ್ದು ದೊಮ್ಮಲೂರು ಪೋಸ್ಟ್ ಬಾಕ್ಸ್.  ಸುದೀಪ್ ಮನೆಗೆ ಬಂದ  ಎರಡೂ ಪತ್ರಗಳು ದೊಮ್ಮಲೂರಿನಿಂದ ಬಂದಿದ್ದವು. ಹೀಗಾಗಿ ಆ ಪತ್ರವನ್ನು ಯಾರು ಪೋಸ್ಟ್ ಮಾಡಿದ್ದು ಎಂಬುದರ ಬಗ್ಗೆ ಅಲ್ಲಿನ ಸಿಸಿಟಿವಿ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ.

    ಈ ಹಿಂದೆ ಸುದೀಪ್ ಜೊತೆ ಇದ್ದ ಕಾರು ಚಾಲಕನ ಮೇಲೆ ಪೊಲೀಸರಿಗೆ ಬಲವಾದ ಶಂಕೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ದೂರು ದಾಖಲಿಸಿ ತನಿಖೆ ನಡೆಸಿದ್ದ ಪುಟ್ಟೇನಹಳ್ಳಿ ಪೊಲೀಸರು ಸುದೀಪ್ ಮನೆಯಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ಕೂಡ ನಡೆಸಿದ್ದಾರೆ. ಕೆಲವೊಂದು ಸಾಂಧರ್ಭಿಕ ಸಾಕ್ಷಿಗಳ ಅನ್ವಯ ಈ ಹಿಂದೆ ಇದ್ದ ಸುದೀಪ್ ಮನೆಯ ಕಾರು ಚಾಲಕನ ಮೇಲೆ ಅನುಮಾನ ಬಂದಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ವರದಿಯನ್ನು ಪುಟ್ಟೇನಹಳ್ಳಿ ಪೊಲೀಸರು ಸಿಸಿಬಿಗೆ ನೀಡಿದ್ದಾರೆ. ಇನ್ನು ಈ ಕಾರು ಚಾಲಕನನ್ನು ಬಳಸಿಕೊಂಡು ಚಿತ್ರ ರಂಗದ ಆ ವ್ಯಕ್ತಿ ಕೃತ್ಯವನ್ನು ಎಸಗಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ.  ಇದೊಂದು ಪ್ರೀ ಪ್ಲಾನ್ ಕೃತ್ಯ ಎಂಬುದಕ್ಕೆ ಸಿಸ್ಟಂ ಟೈಪಿಂಗ್ ಪತ್ರವೇ ಸಾಕ್ಷಿಯಾಗಿದೆ.  ಕೈ ಬರಹ ಪತ್ರವನ್ನು ಕಳಿಸಿದರೆ ಸಾಕ್ಷಿ ಸಿಗುತ್ತೆ ಎಂಬ ಕಾರಣಕ್ಕೆ ಟೈಪ್ ಮಾಡಿ ಆ ಪತ್ರವನ್ನು ಪೋಸ್ಟ್ ಮಾಡಲಾಗಿದೆ. ಪೊಲೀಸರು ದೂರು ಪಡೆದುಕೊಳ್ಳುವಾಗಲೇ ಇದೊಂದು ಕ್ರಿಮಿನಲ್ ಕಾನ್ಸ್ ಪೆರೆಸಿ ಎಂದು ತಿಳಿದು ಸೆಕ್ಷನ್ 120b ಒಳಸಂಚು ಅಡಿಯಲ್ಲಿ ಕೇಸು ದಾಖಲಿಸಿದ್ದರು. ಸದ್ಯ ಅವರ ಅನುಮಾನ ಕೂಡ ನಿಜವಾಗ್ತಿದೆ ಎಂಬುದಕ್ಕೆ ಸಿಸಿಬಿಗೆ ಸಿಕ್ಕ ಬೇಸಿಕ್ ಇನ್ಪಾರ್ಮೇಷನ್ ಗಳೆ ಸಾಕ್ಷಿಯಾಗಿವೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ಸೈಬರ್ ವಿಂಗ್ ಕೂಡ ಕೆಲಸ ಮಾಡುತ್ತಿದ್ದು ಮುಂದಿನ ದಿನದಲ್ಲಿ ನಟ ಸುದೀಪ್ ಗೂ ನೊಟೀಸ್ ನೀಡಿ ಹೇಳಿಕೆಗಳನ್ನು ಪಡೆಯಲು ಸಿದ್ಧತೆಯನ್ನ ನಡೆಸುತ್ತಿದ್ದಾರೆ. ಸದ್ಯ ಆ ಕಾರು ಚಾಲಕ ಸಿಕ್ಕ ಬಳಿಕವಷ್ಟೆ ಅಸಲಿ ಸಂಗತಿ ಹೊರ ಬರಬೇಕಿದೆ.

  • ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ  ಶಂಕೆ

    ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ ಶಂಕೆ

    ಟ ಕಿಚ್ಚ ಸುದೀಪ್ (Sudeep) ಅವರ ಖಾಸಗಿ ವಿಡಿಯೋ (Private Video) ಬಹಿರಂಗ ಪಡಿಸುವುದಾಗಿ ಬರೆದ ಬೆದರಿಕೆ ಪತ್ರದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ನಿನ್ನೆಯಷ್ಟೇ ಸುದೀಪ್‍ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ. ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿವೆ ಎಂದು ಹೇಳಲಾಗುತ್ತಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ (CCB)ತನಿಖೆ ಶುರುವಾಗಿದ್ದು, ಶಂಕೀತ ಜಾಡು ಹಿಡಿದು ಹೊರಟಿದ್ದಾರಂತೆ ಸಿಸಿಬಿ ಅಧಿಕಾರಿಗಳು.

    ಮೊದಲ ಪತ್ರ ಬಂದಾಗ ಸುದೀಪ್ ಅವರೇ ನಿರ್ಲಕ್ಷ್ಯ ವಹಿಸಿದ್ದರಂತೆ. ದುಷ್ಟರು ಬರೆದ ಮೊದಲನೇ ಪತ್ರಕ್ಕೆ ಯಾವಾಗ ಸುದೀಪ್ ರಿಯಾಕ್ಟ್ ಆಗ್ಲಿಲ್ವೋ, ಈತ ಏನೂ ಮಾಡಲ್ಲ ಎಂಬ ಭಂಡ ಧೈರ್ಯದಿಂದ ಮತ್ತೊಂದು ಪತ್ರ ಕಳಿಸಿದ್ದಾನಂತೆ ಆ ಭೂಪ. ಯಾವಾಗ ಎರಡನೇ ಪತ್ರ ಕೈ ಸೇರಿತೋ ಇದರ ಗಂಭೀರತೆಯನ್ನು ಅರಿತು ಕಾನೂನು ಪ್ರಕ್ರಿಯೆಯೇ ಸೂಕ್ತ ಎಂದು ತಮ್ಮ ಆಪ್ತ ಜಾಕ್ ಮಂಜು ಮೂಲಕ ದೂರು ನೀಡಿದ್ದರು ಸುದೀಪ್. ಸದ್ಯ ಈ ಪತ್ರದ ಸುತ್ತ ಪೊಲೀಸರು ತನಿಖೆಗಿಳಿದಿದ್ದಾರೆ. ಇದನ್ನೂ ಓದಿ: ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

    ಮಾರ್ಚ್ 10ನೇ ತಾರೀಕು ಸುದೀಪ್ ಮನೆಗೆ ಮೊದಲ ಪತ್ರ ತಲುಪಿದೆ. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ‌. ಆದರೂ ಇಂಟರ್ ನಲ್ ಎನ್ಕೈರಿಯಂತೆ ಮಾಹಿತಿಯನ್ನು ಕಲೆ ಹಾಕುವುದಕ್ಕೆ ಯತ್ನಿಸಿದ್ದರಂತೆ. ಅದರ ಬೆನ್ನಲ್ಲೆ ಮತ್ತೊಂದು ಪತ್ರ ಬಂದಿದ್ದರಿಂದ ಸಹಜವಾಗಿಯೇ ಇದು ಗಂಭೀರ ಪ್ರಕರಣ ಅನಿಸಿ ದೂರು ನೀಡಲಾಗಿತ್ತು. ಇನ್ನು ಆ ಪತ್ರದ ಮೂಲ ಹುಡುಕುತ್ತಾ ಹೋದಾಗ ಸಿಕ್ಕಿದ್ದು ದೊಮ್ಮಲೂರು ಪೋಸ್ಟ್ ಬಾಕ್ಸ್.  ಸುದೀಪ್ ಮನೆಗೆ ಬಂದ  ಎರಡೂ ಪತ್ರಗಳು ದೊಮ್ಮಲೂರಿನಿಂದ ಬಂದಿದ್ದವು. ಹೀಗಾಗಿ ಆ ಪತ್ರವನ್ನು ಯಾರು ಪೋಸ್ಟ್ ಮಾಡಿದ್ದು ಎಂಬುದರ ಬಗ್ಗೆ ಅಲ್ಲಿನ ಸಿಸಿಟಿವಿ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ.

    ಈ ಹಿಂದೆ ಸುದೀಪ್ ಜೊತೆ ಇದ್ದ ಕಾರು ಚಾಲಕನ (Car Driver) ಮೇಲೆ ಪೊಲೀಸರಿಗೆ ಬಲವಾದ ಶಂಕೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ದೂರು ದಾಖಲಿಸಿ ತನಿಖೆ ನಡೆಸಿದ್ದ ಪುಟ್ಟೇನಹಳ್ಳಿ ಪೊಲೀಸರು ಸುದೀಪ್ ಮನೆಯಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ಕೂಡ ನಡೆಸಿದ್ದಾರೆ. ಕೆಲವೊಂದು ಸಾಂರ್ಭಿಕ ಸಾಕ್ಷಿಗಳ ಅನ್ವಯ ಈ ಹಿಂದೆ ಇದ್ದ ಸುದೀಪ್ ಮನೆಯ ಕಾರು ಚಾಲಕನ ಮೇಲೆ ಅನುಮಾನ ಬಂದಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ವರದಿಯನ್ನು ಪುಟ್ಟೇನಹಳ್ಳಿ ಪೊಲೀಸರು ಸಿಸಿಬಿಗೆ ನೀಡಿದ್ದಾರೆ. ಇನ್ನು ಈ ಕಾರು ಚಾಲಕನನ್ನು ಬಳಸಿಕೊಂಡು ಚಿತ್ರ ರಂಗದ ಆ ವ್ಯಕ್ತಿ ಕೃತ್ಯವನ್ನು ಎಸಗಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ.  ಇದೊಂದು ಪ್ರೀ ಪ್ಲಾನ್ ಕೃತ್ಯ ಎಂಬುದಕ್ಕೆ ಸಿಸ್ಟಂ ಟೈಪಿಂಗ್ ಪತ್ರವೇ ಸಾಕ್ಷಿಯಾಗಿದೆ.  ಕೈ ಬರಹ ಪತ್ರವನ್ನು ಕಳಿಸಿದರೆ ಸಾಕ್ಷಿ ಸಿಗುತ್ತೆ ಎಂಬ ಕಾರಣಕ್ಕೆ ಟೈಪ್ ಮಾಡಿ ಆ ಪತ್ರವನ್ನು ಪೋಸ್ಟ್ ಮಾಡಲಾಗಿದೆ. ಪೊಲೀಸರು ದೂರು ಪಡೆದುಕೊಳ್ಳುವಾಗಲೇ ಇದೊಂದು ಕ್ರಿಮಿನಲ್ ಕಾನ್ಸ್ ಪೆರೆಸಿ ಎಂದು ತಿಳಿದು ಸೆಕ್ಷನ್ 120b ಒಳಸಂಚು ಅಡಿಯಲ್ಲಿ ಕೇಸು ದಾಖಲಿಸಿದ್ದರು. ಸದ್ಯ ಅವರ ಅನುಮಾನ ಕೂಡ ನಿಜವಾಗ್ತಿದೆ ಎಂಬುದಕ್ಕೆ ಸಿಸಿಬಿಗೆ ಸಿಕ್ಕ ಬೇಸಿಕ್ ಇನ್ಪಾರ್ಮೇಷನ್ ಗಳೆ ಸಾಕ್ಷಿಯಾಗಿವೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ಸೈಬರ್ ವಿಂಗ್ ಕೂಡ ಕೆಲಸ ಮಾಡುತ್ತಿದ್ದು ಮುಂದಿನ ದಿನದಲ್ಲಿ ನಟ ಸುದೀಪ್ ಗೂ ನೊಟೀಸ್ ನೀಡಿ ಹೇಳಿಕೆಗಳನ್ನು ಪಡೆಯಲು ಸಿದ್ಧತೆಯನ್ನ ನಡೆಸುತ್ತಿದ್ದಾರೆ. ಸದ್ಯ ಆ ಕಾರು ಚಾಲಕ ಸಿಕ್ಕ ಬಳಿಕವಷ್ಟೇ ಅಸಲಿ ಸಂಗತಿ ಹೊರ ಬರಬೇಕಿದೆ.