Tag: ಕಾರು ಡಿಕ್ಕಿ

  • ತಡೆಗೋಡೆಗೆ ಕಾರು ಡಿಕ್ಕಿ- BRS ಶಾಸಕಿ ಲಾಸ್ಯ ನಂದಿತಾ ದುರ್ಮರಣ

    ತಡೆಗೋಡೆಗೆ ಕಾರು ಡಿಕ್ಕಿ- BRS ಶಾಸಕಿ ಲಾಸ್ಯ ನಂದಿತಾ ದುರ್ಮರಣ

    ಹೈದರಾಬಾದ್:‌ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರತ್ ರಾಷ್ಟ್ರ ಸಮಿತಿಯ (BRS) ಶಾಸಕಿ ಜಿ ಲಾಸ್ಯ ನಂದಿತಾ (G Lasya Nanditha) (37) ದುರ್ಮರಣಕ್ಕೀಡಾಗಿದ್ದಾರೆ.

    ಈ ಘಟನೆ ಇಂದು ಬೆಳಗ್ಗೆ 6.30ರ ಸುಮಾರಿಗೆ ಹೈದರಾಬಾದ್‌ನ (Hyderabad) ಹೊರವಲಯದಲ್ಲಿರುವ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಟಂಚೇರು ಎಂಬಲ್ಲಿ ಸಂಭವಿಸಿದೆ.

    ನಂದಿತಾ ಅವರು ತಮ್ಮ ಎಸ್‌ಯುವಿ ಕಾರಿನಲ್ಲಿ ನಗರಕ್ಕೆ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಎಕ್ಸ್‌ಪ್ರೆಸ್‌ವೇಯ ಎಡಭಾಗದಲ್ಲಿರುವ ಲೋಹದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಶಾಸಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಕಾರು ಚಾಲಕನನ್ನು ಸಮೀಪದ ಪಟಂಚೇರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ್ ಜೋಶಿ ನಿಧನ

    ನಂದಿತಾ ಅವರು ಫೆಬ್ರವರಿ 13 ರಂದು ಬಿಆರ್‌ಎಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮರ್ರಿಗುಡ ಜಂಕ್ಷನ್‌ನಲ್ಲಿ ಇದೇ ರೀತಿಯ ರಸ್ತೆ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪಾರಾಗಿದ್ದರು.

    ಬಿಆರ್‌ಎಸ್‌ನ ಮಾಜಿ ಶಾಸಕ ದಿವಂಗತ ಜಿ ಸಾಯಣ್ಣ ಅವರ ಪುತ್ರಿಯಾಗಿರುವ ನಂದಿತಾ ಅವರು ಕಳೆದ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದಿಂದ ಜಿ ವೆನ್ನೆಲ ಅವರನ್ನು ಸೋಲಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದರು.

  • ಸರ್ಜಾಪುರ ಸುಲಿಗೆ ಪ್ರಕರಣದ ಮತ್ತೊಂದು ವೀಡಿಯೋ ಬಹಿರಂಗ – ಡಿಕ್ಕಿ ಹೊಡೆದು ಬಾನೆಟ್ ಏರಿದ ಕಿಡಿಗೇಡಿ

    ಸರ್ಜಾಪುರ ಸುಲಿಗೆ ಪ್ರಕರಣದ ಮತ್ತೊಂದು ವೀಡಿಯೋ ಬಹಿರಂಗ – ಡಿಕ್ಕಿ ಹೊಡೆದು ಬಾನೆಟ್ ಏರಿದ ಕಿಡಿಗೇಡಿ

    ಬೆಂಗಳೂರು: ಸಿಲಿಕಾನ್ ಸಿಟಿಯ ಸರ್ಜಾಪುರ ರಸ್ತೆ (Sarjapura Road) ಯಲ್ಲಿ ನಡೆದ ಘಟನೆಯ ಮತ್ತೊಂದು ವೀಡಿಯೋ ಬಹಿರಂಗಗೊಂಡಿದೆ. ಬೈಕ್ ಡಿಕ್ಕಿ (Bike Accident) ಹೊಡೆಸಿ ಸುಲಿಗೆಗೆ ಯತ್ನಿಸುವ ದೃಶ್ಯ ಕಾರಿನ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

    ಇಂದು ಮುಂಜಾನೆ 3 ಗಂಟೆ ವೇಳೆಯಲ್ಲಿ ಯುವಕ ಮತ್ತು ಯುವತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರುಗಡೆ ರಸ್ತೆಯಿಂದ ಬಂದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಇಬ್ಬರು ಬೈಕ್ ಸವಾರರು ಕಾರಿನಿಂದ ಇಳಿಯುವಂತೆ, ಕಾರಿನಲ್ಲಿದ್ದವರಿಗೆ ಬೆದರಿಕೆ ಹಾಕಿದ್ದರು.

    ಇಬ್ಬರ ಜೊತೆಗೆ ಮತ್ತೆ ಮೂವರು ಸೇರಿ ಕಾರನ್ನು ಅಡ್ಡಗಟ್ಟಿದ್ರು. ಈ ವೇಳೆ ಹಿಂಬದಿಗೆ ವೇಗವಾಗಿ ಕಾರು ಚಲಾಯಿಸಿ ಯುವಕ- ಯುವತಿ ಎಸ್ಕೇಪ್ ಆದರು. ಘಟನೆಯ ಸಿಸಿಟಿವಿ (CCTV) ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿತ್ತು. ಇದನ್ನೂ ಓದಿ: ತಡವಾಗಿ ಮನೆಗೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿ ಮುಖಕ್ಕೆ ಆ್ಯಸಿಡ್ ಎರಚಿದ ಪತ್ನಿ!

    ಇದಾದ ಬಳಿಕ ಘಟನೆಯ ಮಗದೊಂದು ಸ್ಫೋಟಕ ವೀಡಿಯೋ ರಿಲೀಸ್ ಆಗಿದೆ. 5 ಕಿ.ಮೀ ಚೇಸ್ ಮಾಡಿ ಕಾರಿನ ಬಾನೆಟ್ ಸುಲಿಗೆಕೋರ ಮೇಲೆ ಹತ್ತಿ ಕೂತಿದ್ದಾನೆ. ಅಲ್ಲದೆ ಕಾರಿನ ಡೋರ್ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಯುವಕ ಕ್ಯಾರೆ ಅನ್ನದೇ ಕಾರನ್ನು ಚಲಾಯಿಸಿದ್ದಾನೆ. ಯುವಕ – ಯುವತಿಯಿದ್ದ ಕಾರಿನ ಮೇಲೆ ಎಗರಿ ಹತ್ತಿದ ಸುಲಿಗೆಕೋರನ ಬೆಚ್ಚಿಬೀಳಿಸುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರು ಡಿಕ್ಕಿಯಾಗಿ 30 ಕುರಿಗಳು ಸಾವು- ಮೂವರಿಗೆ ಗಾಯ

    ಕಾರು ಡಿಕ್ಕಿಯಾಗಿ 30 ಕುರಿಗಳು ಸಾವು- ಮೂವರಿಗೆ ಗಾಯ

    ರಾಯಚೂರು: ನಗರದ ಹೊರವಲಯದ ಲಿಂಗಸುಗೂರು ರಸ್ತೆ ಬೈಪಾಸ್ ನಲ್ಲಿ ರಸ್ತೆ ಪಕ್ಕ ನಿಲ್ಲಿಸಿದ್ದ ಕುರಿಗಳಿಗೆ ಕಾರು (Car Accident) ಡಿಕ್ಕಿಹೊಡೆದು 30 ಕುರಿಗಳು ಸಾವನ್ನಪ್ಪಿದ್ದು, 10 ಕುರಿ (Sheep) ಗಳಿಗೆ ಕಾಲು ಮುರಿದಿದೆ.

    ಕುರಿಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಯಾಪಲದಿನ್ನಿಯ ಜಗನ್ನಾಥ ಎಂಬವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಯಾಪಲದಿನ್ನಿಯಿಂದ ಕಲ್ಲೂರಿಗೆ ಹೊರಟಿದ್ದ ಕುರಿಗಾಯಿಗಳು, ರಾತ್ರಿ ವೇಳೆ ರಸ್ತೆ ಪಕ್ಕದಲ್ಲಿ ಕುರಿಗಳನ್ನ ನಿಲ್ಲಿಸಿದ್ದರು. ಬೆಳಗ್ಗಿನ ಜಾವ ಅಪಘಾತ ಸಂಭವಿಸಿದ್ದು, 120 ಕುರಿಗಳಲ್ಲಿ 21 ಕುರಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಆಸ್ಟ್ರೆಲಿಯಾದಲ್ಲಿ ಮತ್ತೆ ಖಲಿಸ್ತಾನಿಯರ ಅಟ್ಟಹಾಸ – ತ್ರಿವರ್ಣಧ್ವಜ ಹಿಡಿದ ಭಾರತೀಯರ ಮೇಲೆ ದಾಳಿ

    ಅಪಘಾತದಿಂದ ಸುಮಾರು ಮೂರೂವರೆ ಲಕ್ಷ ರೂಪಾಯಿ ಬೆಲೆ ಬಾಳುವ ಕುರಿಗಳು ಸಾವನ್ನಪ್ಪಿವೆ. ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೋವಾದಿಂದ ಹೈದರಾಬಾದ್‍ಗೆ ಹೊರಟಿದ್ದ ಕಾರು ಕುರಿಗಳಿಗೆ ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ನಡೆದಿದ್ದು, ರಾಯಚೂರು ಪಶ್ಚಿಮ ಪೊಲೀಸ್ ಠಾಣೆ (West Police Station Raichur) ಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರು ಡಿಕ್ಕಿಯಾಗಿ ಚಿರತೆ ಮುಖಕ್ಕೆ ಗಂಭೀರ ಗಾಯ

    ಕಾರು ಡಿಕ್ಕಿಯಾಗಿ ಚಿರತೆ ಮುಖಕ್ಕೆ ಗಂಭೀರ ಗಾಯ

    ಹಾಸನ: ಕಾರು ಡಿಕ್ಕಿ ಹೊಡೆದು ಚಿರತೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಕೆರೆ ಏರಿ ಮೇಲೆ ನಡೆದಿದೆ.

    ಕಾರಿನ ಚಾಲಕ ಕೆರೆ ಏರಿ ಮೇಲೆ ಬಂದ ಚಿರತೆಗೆ ಏಕಾಏಕಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಚಿರತೆಯ ಮುಖ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದೆ. ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆಯನ್ನು ತಮ್ಮ ವಶಕ್ಕೆ ಪಡೆದು ಅರಸೀಕೆರೆ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ಚಿರತೆಗೆ ಚಿಕಿತ್ಸೆ ನಡೆಯುತ್ತಿದೆ.

    ಕಳೆದ 4 ದಿನಗಳ ಹಿಂದೆ ಅಷ್ಟೇ ಯಗಚಿ ಹಿನ್ನೀರಿನಲ್ಲಿ ಚಿರತೆಯೊಂದು ಸಾವನ್ನಪ್ಪಿತ್ತು.

    https://www.youtube.com/watch?v=Yv_IHlWTQvM