Tag: ಕಾರು ಚಾಲಕ

  • ಅಜ್ಞಾತ ಸ್ಥಳದಲ್ಲಿ ಸಿದ್ಧಾರ್ಥ್ ಕಾರು ಚಾಲಕನ ತೀವ್ರ ವಿಚಾರಣೆ

    ಅಜ್ಞಾತ ಸ್ಥಳದಲ್ಲಿ ಸಿದ್ಧಾರ್ಥ್ ಕಾರು ಚಾಲಕನ ತೀವ್ರ ವಿಚಾರಣೆ

    ಮಂಗಳೂರು: ಉದ್ಯಮಿ ಸಿದ್ಧಾರ್ಥ್ ಹೆಗಡೆ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದು, ಇದೀಗ ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಯುತ್ತಿದೆ.

    ಸಿದ್ಧಾರ್ಥ್ ಅವರು ನಿನ್ನೆ ಕಾರಿನಲ್ಲಿ ಚಾಲಕ ಬಸವರಾಜ್ ಪಾಟೀಲ್ ಜೊತೆಗೆ ಸಕಲೇಶಪುರಕ್ಕೆ ಹೊರಡಿದ್ದರು. ಆದರೆ ಮಾರ್ಗಮಧ್ಯೆದಲ್ಲಿ ಕಾರನ್ನು ಮಂಗಳೂರು ಕಡೆಗೆ ತಿರುಗಿಸಲು ಸೂಚಿಸಿದ್ದು, ನೇತ್ರಾವತಿ ನದಿಗೆ ನಿರ್ಮಿಸಲಾಗಿದ್ದ ಸೇತವೆಯ ಬಳಿ ಬರುತ್ತಿದ್ದಂತೆಯೇ ಕಾರು ನಿಲ್ಲಿಸಲು  ಚಾಲಕನ ಬಳಿ ಹೇಳಿದ್ದಾರೆ. ಆ ನಂತರ ಸಿದ್ಧಾರ್ಥ್ ಅವರು ನಾಪತ್ತೆಯಾಗಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಕಾರು ಹಾಗೂ ಚಾಲಕ ಬಸವರಾಜ್ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಹಿರಿಯ ಅಧಿಕಾರಿಗಳು ಕಂಕನಾಡಿ ಠಾಣೆಗೆ ಆಗಮಿಸಿದ್ದಾರೆ. ನಂತರ ಅಲ್ಲಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಿದ್ಧಾರ್ಥ್ ಅವರು ಯಾರ ಜೊತೆಗೆ ಮಾತನಾಡುತ್ತಿದ್ದರು? ಏನು ಮಾತನಾಡುತ್ತಿದ್ದರು? ಗಾಬರಿ, ಭಯ ಅಥವಾ ಆತಂಕದಿಂದ ಸಂಭಾಷಣೆ ನಡೆಸಿದ್ದರಾ ಎಂದು ಪೊಲೀಸರು ಬಸವರಾಜ್‍ಗೆ ಕೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸದ್ಯ ಸಿದ್ಧಾರ್ಥ್ ಅವರು ಪ್ರಯಾಣಿಸಿದ್ದ ಕೆಎ 03 ಎಸ್‍ಸಿ 2593 ನಂಬರ್ ನ ಇನ್ನೋವಾ ಕಾರನ್ನು ಪೊಲೀಸರ ವಶದಲ್ಲಿದೆ. ಪೊಲೀಸರು ಈಗಾಗಲೇ ಚಾಲಕ ಬಸವರಾಜ್‍ನಿಂದ ಪ್ರಾಥಮಿಕ ಹೇಳಿಕೆ ಪಡೆದುಕೊಂಡಿದ್ದಾರೆ.

    https://www.youtube.com/watch?v=2P3yazqTvMs

  • ಮೊದಲ ದಿನವೇ ಆಪ್ತನ ವಿರುದ್ಧ ಬಿಎಸ್‍ವೈ ಗರಂ

    ಮೊದಲ ದಿನವೇ ಆಪ್ತನ ವಿರುದ್ಧ ಬಿಎಸ್‍ವೈ ಗರಂ

    ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಬಿ.ಎಸ್.ಯಡಿಯೂರಪ್ಪ ಅವರು ಆಪ್ತ ಸಹಾಯಕ ಸಂತೋಷ್ ವಿರುದ್ಧ ಗರಂ ಆಗಿದ್ದಾರೆ.

    ಪ್ರಮಾಣವಚನ ಕಾರ್ಯಕ್ರಮದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ರಾಜಭವನದಿಂದ ತೆರಳುತ್ತಿದ್ದರು. ಈ ವೇಳೆ ನಮ್ಮ ಗಾಡಿ ಎಲ್ಲೋ? ಯಾಕೆ ಅಷ್ಟು ದೂರ ಕಾರನ್ನು ನಿಲ್ಲಿಸಿದ್ದಾನೆ ಎಂದು ಕೋಪದಿಂದಲೇ ಆಪ್ತ ಸಹಾಯಕ ಸಂತೋಷ್‍ನನ್ನು ಪ್ರಶ್ನಿದರು.

    ಬಿಎಸ್‍ವೈ ಕೋಪವನ್ನು ಅರಿತ ಸಂತೋಷ್, ಕಾರು ಚಾಲಕ ತಿಂಡಿ ತಿನ್ನಲು ಹೋಗಿದ್ದಾನೆ ಎಂದು ತಿಳಿಸಿದರು. ಆಗ ಫುಲ್ ಗರಂ ಆದ ಬಿ.ಎಸ್.ಯಡಿಯೂರಪ್ಪ ಅವರು, ತಿಂಡಿ ತಿನ್ನೋಕೆ ಹೋಗು ಅಂತ ಹೇಳಿಬಿಡು ಎಂದು ಗುಡುಗಿದರು. ಈ ವೇಳೆ ಅಲ್ಲಿಗೆ ಬಂದಿದ್ದ ಮತ್ತೊಂದು ಕಾರನ್ನು ಹತ್ತಿ ಪ್ರಯಾಣ ಬೆಳೆಸಿದರು.

  • ಬಾಡಿಗೆಗೆಂದು ತೆರಳಿ ನಾಪತ್ತೆಯಾಗಿದ್ದ ಕಾರು ಚಾಲಕ ಶವವಾಗಿ ಪತ್ತೆ

    ಬಾಡಿಗೆಗೆಂದು ತೆರಳಿ ನಾಪತ್ತೆಯಾಗಿದ್ದ ಕಾರು ಚಾಲಕ ಶವವಾಗಿ ಪತ್ತೆ

    ರಾಮನಗರ: ಬಾಡಿಗೆಗೆಂದು ತೆರಳಿ ನಾಪತ್ತೆಯಾಗಿದ್ದ ಚನ್ನಪಟ್ಟಣದ ಕಾರು ಚಾಲಕ ಕೊಲೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ಉಡುಪಿ ತಾಲೂಕಿನ ಹೆಬ್ರಿ ಗ್ರಾಮದಲ್ಲಿ ನಡೆದಿದೆ.

    ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ನಿವಾಸಿ ಕಾರು ಚಾಲಕ ನಾಗರಾಜ್ ಮೃತ ದುರ್ದೈವಿ. ಅಂದಹಾಗೇ ಆಗಸ್ಟ್ 27ರಂದು ಚನ್ನಪಟ್ಟಣದಲ್ಲಿ ತಾವು ಇಂಜಿನಿಯರ್ ಗಳು ಎಂದು ಇಬ್ಬರು ಅಪರಿಚಿತರು ಶಿವಮೊಗ್ಗಕ್ಕೆ ಹೋಗಬೇಕೆಂದು ಕಾರು ಬಾಡಿಗೆ ಪಡೆದಿದ್ದರು. ಆದರೆ ಆಗಸ್ಟ್ 28ರಿಂದ ನಾಗರಾಜ್ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದ.

    ಈ ಸಂಬಂಧ ಚನ್ನಪಟ್ಟಣಪುರ ಪೊಲೀಸ್ ಠಾಣೆಯಲ್ಲಿ ನಾಗರಾಜ್‍ನ ಪತ್ನಿ ಶಿಲ್ಪಾ ದೂರು ನೀಡಿದ್ದರು. ಆದರೆ ಆಗಸ್ಟ್ 31ರಂದು ಉಡುಪಿಯ ಹೆಬ್ರಿ ಬಳಿ ಕೊಳೆತ ಸ್ಥಿತಿಯಲ್ಲಿ ಸಿಕ್ಕ ನಾಗರಾಜ್‍ನ ಶವವನ್ನು ಅಪರಿಚಿತ ಶವವೆಂದು ತಿಳಿದು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಹೂಳಲಾಗಿತ್ತು.

    ಗುರುವಾರ ಪೊಲೀಸರು ಹಾಗೂ ಕುಟುಂಬದವರು ನಾಗರಾಜ್ ನ ಗುರುತು ಪತ್ತೆ ಮಾಡಿದ ಬಳಿಕ ಕುಟುಂಬಸ್ಥರ ಮನವಿ ಮೇರೆಗೆ ಶುಕ್ರವಾರ ಮತ್ತೆ ಮೃತದೇಹ ಹೊರತೆಗೆದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಮೃತ ನಾಗರಾಜ್‍ನ ಕಾರು ಅತ್ತಿಬೆಲೆ ಸಮೀಪ ದೊರಕಿದ್ದು ಕಾರು ಚಲಾಯಿಸಿದ ಅಪರಿಚಿತ ವ್ಯಕ್ತಿಯ ಗುರುತು ನೆಲಮಂಗಲ ಟೋಲ್ ನಲ್ಲಿ ಸಿಕ್ಕಿದೆ.

    ಸದ್ಯ ಈ ಪ್ರಕರಣ ದಾಖಲಿಸಿಕೊಂಡಿರುವ ಚನ್ನಪಟ್ಟಣ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರು ಚಾಲಕನನ್ನು 2 ದಿನ ಠಾಣೆಯಲ್ಲೇ ಕೂಡಿ ಹಾಕಿ ಹಲ್ಲೆಗೈದ ಪೊಲೀಸ್ ಪೇದೆ!

    ಕಾರು ಚಾಲಕನನ್ನು 2 ದಿನ ಠಾಣೆಯಲ್ಲೇ ಕೂಡಿ ಹಾಕಿ ಹಲ್ಲೆಗೈದ ಪೊಲೀಸ್ ಪೇದೆ!

    ಕಲಬುರಗಿ: ರೋಲ್ ಕಾಲ್ ಮಾಡುವದನ್ನು ಪ್ರಶ್ನಿಸಿದಕ್ಕೆ ಕಾರ್ ಚಾಲಕನನ್ನು ಪೇದೆಯೋರ್ವ ಅಮಾನವಿಯವಾಗಿ ಹಲ್ಲೆ ಮಾಡಿರುವ ಘಟನೆ ಕಲಬುರಗಿಯ ಮರತೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ಚಾಲಕ ಚಂದ್ರು ಮತ್ತು ಪೇದೆ ರವೀಂದ್ರ ಕುಮಾರ್ ನಡುವೆ ಈ ಜಗಳ ನಡೆದಿದೆ. ಘಟನೆಯ ನಂತರ ಯಾವುದೇ ದೂರು ಇಲ್ಲದೇ ಚಾಲಕನನ್ನು ಪೇದೆ ಹಾಗು ಆತನ ಸ್ನೇಹಿತರು ಎರಡು ದಿನಗಳ ಕಾಲ ಠಾಣೆಯಲ್ಲಿ ಕೂಡಿಸಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.

     ಆ ಬಳಿಕ ಚಾಲಕನ ಚಿಕ್ಕಪ್ಪನ ಅಂತ್ಯಸಂಸ್ಕಾರ ನಡೆಯುತ್ತಿದ್ದು, ಬಿಡುಗಡೆ ಮಾಡುವಂತೆ ಚಾಲಕನ ಚಿಕ್ಕಪ್ಪ ವಿಶ್ವವಿದ್ಯಾಲಯ ಪಿಎಸ್‍ಐ ಜಗನಾಥ್‍ಗೆ ಕರೆ ಮಾಡಿದ್ದಾರೆ. ಈ ವೇಳೆ ಪೇದೆ ಅವರಿಗೂ ಕೂಡ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ವಿಷಯ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆಯೇ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಚಾಲಕನನ್ನು ಠಾಣೆಯಿಂದ ಬಿಡುಗಡೆ ಮಾಡಲಾಗಿದೆ.

    ಸದ್ಯ ಪೊಲೀಸರ ಕೈಯಿಂದ ಬಿಡುಗಡೆಯಾದ ಚಂದ್ರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಬೆಳಗ್ಗೆ ಐಎಎಸ್ ಅಧಿಕಾರಿಯ ಕಾರ್ ಚಾಲಕ, ಸಂಜೆ ಕಳ್ಳರ ಜೊತೆ ಚೈನ್ ಸ್ನ್ಯಾಚಿಂಗ್

    ಬೆಳಗ್ಗೆ ಐಎಎಸ್ ಅಧಿಕಾರಿಯ ಕಾರ್ ಚಾಲಕ, ಸಂಜೆ ಕಳ್ಳರ ಜೊತೆ ಚೈನ್ ಸ್ನ್ಯಾಚಿಂಗ್

    ಬೆಂಗಳೂರು: ಆ ವ್ಯಕ್ತಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆ ಕೆಲಸದ ಜೊತೆಗೆ ಪಾರ್ಟ್ ಟೈಂ ಕೆಲಸ ಕೂಡ ಮಾಡುತ್ತಿದ. ಅಷ್ಟಕ್ಕೂ ಅವನು ಮಾಡುತ್ತಿದ ಕೆಲಸವಾದರು ಏನು ಅಂತ ಕೇಳಿದ್ರೆ ಅಚ್ಚರಿಯಾಗ್ತೀರ.

    ಬೆಂಗಳೂರಿನ ಕೆಂಗೇರಿ ಮೂಲದ ಆ ವ್ಯಕ್ತಿಯೇ ನೋಡಿ ಈ ಇಂಟರಸ್ಟಿಂಗ್ ಸ್ಟೋರಿಯ ಕಥಾನಾಯಕ. ಹೆಸರು ಪೊರೋಷತ್ತಮ್ ಅಂತ. ಈತ ನಿವೃತ್ತ ಅಧಿಕಾರಿಯೊಬ್ಬರ ಮನೆಯಲ್ಲಿ ಕಾರು ಚಾಲಕನಾಗಿದ್ದ. ಬೆಳಗ್ಗೆ ಎದ್ದು ಸಿರಿಯಸ್ ಆಗಿ ಆ ಅಧಿಕಾರಿಯ ಕಾರು ಚಾಲಕನಾಗಿದ್ದ ಪೊರುಷೋತ್ತಮ್ ಡ್ಯೂಟಿ ಮುಗಿಯುತ್ತಿದ್ದಂತೆ ಸ್ನೇಹಿತರಾದ ಪ್ರದೀಪ್, ಪ್ರಜ್ವಲ್ ಜೊತೆ ಸೇರಿ ಫೀಲ್ಡ್  ಗೆ ಇಳಿಯುತ್ತಿದ್ದ. ಒಂಟಿಯಾಗಿ ಓಡಾಡೋ ವೃದ್ಧರು, ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಈ ತಂಡ ಚೈನ್ ಸ್ನ್ಯಾಚಿಂಗ್ ಮಾಡಿ ಎಸ್ಕೇಪ್ ಆಗುತ್ತಿದ್ದರು.

    ಕೆಲ ದಿನಗಳ ಹಿಂದೆ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಈ ಮೂವರು ಸೇರಿ ಮಾರುತಿ ರಿಟ್ಜ್ ಕಾರಲ್ಲಿ ಬಂದು ಸರಗಳವು ಮಾಡಿ ಎಸ್ಕೇಪ್ ಆಗಿದ್ದರು. ಆ ವೇಳೆ ಘಟನಾ ಸ್ಥಳದ ಸಿಸಿಟಿವಿಯಲ್ಲಿ ಕಾರಿನ ನಂಬರ್ ಅಸ್ಪಸ್ಟವಾಗಿ ಕಾಣಿಸಿತ್ತು. ಕಾರಿನ ಬೆನ್ನು ಬಿದ್ದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆರೋಪಿಗಳಾದ ಪುರುಷೋತ್ತಮ್, ಪ್ರದೀಪ್ ಮತ್ತು ಪ್ರಜ್ವಲ್ ನನ್ನು ಅರೆಸ್ಟ್ ಮಾಡಿದ್ದಾರೆ.

    ಈ ಮೂವರ ಬಂಧನದಿಂದ ನಗರದ ದಕ್ಷಿಣ ಭಾಗದ 9 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳವು ಮಾಡಿದ್ದ 18 ಪ್ರಕರಣಗಳು ಪತ್ತೆಯಾಗಿವೆ. ಕೃತ್ಯಕ್ಕೆ ಬಳಸಿದ್ದ ಕಾರು, ಪಲ್ಸರ್ ಬೈಕ್ ಸೇರಿದಂತೆ 700 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸದ್ಯ ಪುರುಷೋತ್ತಮನ ಪಾರ್ಟ್ ಟೈಂ ಕೆಲಸದ ಬಗ್ಗೆ ತಿಳಿದ ಆ ಐಎಎಸ್ ಅಧಿಕಾರಿ ಶಾಕ್ ಆಗಿದ್ದಾರೆ.

  • ಹೆಲ್ಮೆಟ್ ಹಾಕದ್ದಕ್ಕೆ ಕಾರು ಚಾಲಕನಿಗೆ ಹುಬ್ಬಳ್ಳಿ ಪೊಲೀಸರಿಂದ ದಂಡ!

    ಹೆಲ್ಮೆಟ್ ಹಾಕದ್ದಕ್ಕೆ ಕಾರು ಚಾಲಕನಿಗೆ ಹುಬ್ಬಳ್ಳಿ ಪೊಲೀಸರಿಂದ ದಂಡ!

    ಹುಬ್ಬಳ್ಳಿ: ಬೈಕ್ ಸವಾರರು ಹೆಲ್ಮೆಟ್ ಹಾಕದೇ ಇದ್ದರೆ ಸಂಚಾರಿ ಪೊಲೀಸರು ನೋಟಿಸ್ ನೀಡೋದು ಸಾಮಾನ್ಯ. ಆದರೆ ಹುಬ್ಬಳ್ಳಿಯಲ್ಲಿ ಕಾರು ಚಾಲಕರೊಬ್ಬರಿಗೆ ಸಂಚಾರಿ ಪೊಲೀಸರು ಹೆಲ್ಮೆಟ್ ಹಾಕಲಿಲ್ಲ ಎಂದು ನೋಟಿಸ್ ನೀಡಿ, ದಂಡ ಕಟ್ಟಿಸಿಕೊಂಡು ಎಡವಟ್ಟು ಮಾಡಿದ್ದಾರೆ.

    ಹೌದು, ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಭಾನುವಾರ ಸಂಜೆ ರವಿ ಎಂಬುವವರ ಕಾರನ್ನು ತಡೆದಿದ್ದಾರೆ. ಹಳೆಯ ಬಸ್ ನಿಲ್ದಾಣದ ಬಳಿ ಉತ್ತರ ಸಂಚಾರಿ ಪೊಲೀಸರು ರವಿ ಕಾಂಬಳೆರನ್ನು ನಿಲ್ಲಿಸಿ ವಿಚಾರಣೆ ನಡೆಸಿದಾಗ ಎಲ್ಲ ಡಾಕ್ಯುಮೆಂಟ್ ಸರಿಯಾಗಿತ್ತು. ಆದ್ದರೂ ಹೆಲ್ಮೆಟ್ ಇಲ್ಲ ಎಂದು ಪೊಲೀಸರು ನೋಟಿಸ್ ನೀಡಿದ್ದಾರೆ. ಅಲ್ಲದೇ ನೂರು ರೂ. ದಂಡ ಹಾಕಿದ್ದಾರೆ.

    ಇನ್ನು ವಿಷಯ ತಿಳಿದ ಕೆಲ ಸಾರ್ವಜನಿಕರು, ಕಾರು ಚಾಲಕರೂ ಹೆಲ್ಮೆಟ್ ಹಾಕಬೇಕಾ ಅಂತ ಗಾಬರಿಗೊಂಡಿದ್ದರು. ಇನ್ನು ಪೊಲೀಸರ ಈ ಎಡವಟ್ಟನ್ನು ಧಾರವಾಡ ಜಿಲ್ಲೆಯ ಓಲಾ ಕ್ಯಾಬ್ ಸಂಘದ ಅಧ್ಯಕ್ಷ ಮುರಳಿ ಮಾಳ್ವದೆ ಅವರು ಫೇಸ್ ಬುಕ್ ಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನಟ ಸಾಧು ಕೋಕಿಲ ಕಾರು ಚಾಲಕನ ಬಂಧನ

    ನಟ ಸಾಧು ಕೋಕಿಲ ಕಾರು ಚಾಲಕನ ಬಂಧನ

    ಬೆಂಗಳೂರು: ನಟ ಸಾಧುಕೋಕಿಲ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ವಿಜಯ್ ಕುಮಾರ್ ಅಲಿಯಾಸ್ ಗಜ ಬಂಧಿತ ಆರೋಪಿ. ಈತ ಸಾಧು ಕೋಕಿಲ ಅವರ ಕಾರಿನಲ್ಲಿದ್ದ ಲ್ಯಾಪ್ ಟಾಪ್, 3 ಸಾವಿರ ವಿದೇಶಿ ಕರೆನ್ಸಿ ಹಾಗು ಮೊಬೈಲ್ ಕಳ್ಳತನ ಮಾಡಿದ್ದ. ಏಪ್ರಿಲ್ 24 ರಂದು ಕಳ್ಳತನ ನಡೆದಿತ್ತು. ಈ ಸಂಬಂಧ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಇದೀಗ ಇನ್ಸ್ ಪೆಕ್ಟರ್ ವಿರೇಂದ್ರ ಪ್ರಸಾದ್ ತಂಡದಿಂದ ಆರೋಪಿಯ ಬಂಧನವಾಗಿದೆ.

    ಇದನ್ನೂ ಓದಿ: ಲಂಡನ್ ಲಾಡ್ರ್ಸ್ ಮೈದಾನದಲ್ಲಿ ಕಿಚ್ಚನ ಕಲರವ – ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ವಿಜಯಪತಾಕೆ