Tag: ಕಾರು ಚಾಲಕ

  • ದೆಹಲಿ ವಿವಿ ಪ್ರೊಫೆಸರ್‌ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಕಾರು ಚಾಲಕ!

    ದೆಹಲಿ ವಿವಿ ಪ್ರೊಫೆಸರ್‌ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಕಾರು ಚಾಲಕ!

    ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೊಬ್ಬರ ಪತ್ನಿಯನ್ನು ಮನೆಯ ಕಾರು ಚಾಲಕನೆ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

    ಪಿಂಕಿ (32) ಕೊಲೆಯಾದ ಮಹಿಳೆ. ಕೊಲೆ ಮಾಡಿದ ಕಾರು ಚಾಲಕ ರಾಕೇಶ್‌, ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಅಭಿಮಾನಿಗಳ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ರಾಧಿಕಾ ಪಂಡಿತ್

    ವಾಯುವ್ಯ ದೆಹಲಿಯ ಬುರಾರಿ ವಲಯದಲ್ಲಿ ರಸ್ತೆ ಬದಿಯಲ್ಲಿ ಆರೋಪಿ ರಾಕೇಶ್‌ ಭಯದಿಂದ ಒಬ್ಬನೇ ಕುಳಿತಿದ್ದ. ಅನುಮಾನಗೊಂಡು ವಿಚಾರಿಸಿದಾಗ ತಾನು ಮಹಿಳೆಯೊಬ್ಬರನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಂತರ ಪೊಲೀಸರು ಶಾಂತನಗರದಲ್ಲಿರುವ ನಿವಾಸಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ನಾನೊಬ್ಬ ನಿರುದ್ಯೋಗಿ. ಪಿಂಕಿ ಅವರ ಪತಿ ವೀರೇಂದ್ರ ಕುಮಾರ್‌ (ಸಹಾಯಕ ಪ್ರಾಧ್ಯಾಪಕ) ತಮ್ಮ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆಗೆ ವಾಸಿಸಲು ಅವಕಾಶ ಕಲ್ಪಿಸಿದರು. ಜೊತೆಗೆ ತಮ್ಮ ಕಾರು ಚಾಲಕನಾಗಿ ನನ್ನನ್ನು ನಿಯೋಜಿಸಿಕೊಂಡರು. ಇದನ್ನೂ ಓದಿ: ಬಿಗ್‌ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ

    ನಂತರ 2021ರ ಫೆಬ್ರವರಿಯಲ್ಲಿ ಪಿಂಕಿ ಅವರನ್ನು ವಿವಾಹವಾದರು. ನನಗೆ ಹಣಕಾಸಿನ ತೊಂದರೆ ಇತ್ತು. ಹೀಗಾಗಿ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಪಿಂಕಿ ಅವರು ನನ್ನನ್ನು ಮನೆಯೊಂದ ಹೊರ ಹಾಕಿದರು.

    ಇದರಿಂದ ಮನಸ್ಸಿಗೆ ನೋವಾಯಿತು. ಮನೆಯಲ್ಲಿ ವೀರೇಂದ್ರ ಕುಮಾರ್‌ ಅವರು ಇಲ್ಲದಿದ್ದಾಗ ಆಕೆಯನ್ನು ಹತ್ಯೆ ಮಾಡಿದೆ ಎಂದು ರಾಕೇಶ್‌ ತಪ್ಪೊಪ್ಪಿಕೊಂಡಿದ್ದಾನೆ.

  • ರಾಜಧಾನಿಯಲ್ಲಿ ಶೂಟೌಟ್- ಬೈಕ್ ಸವಾರನ ಮೇಲೆ ಕಾರು ಚಾಲಕನಿಂದ ಗುಂಡಿನ ದಾಳಿ

    ರಾಜಧಾನಿಯಲ್ಲಿ ಶೂಟೌಟ್- ಬೈಕ್ ಸವಾರನ ಮೇಲೆ ಕಾರು ಚಾಲಕನಿಂದ ಗುಂಡಿನ ದಾಳಿ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಕಾರು ಚಾಲಕನೊಬ್ಬ ಬೈಕ್ ಸವಾರನ ಮೇಲೆ ಶೂಟೌಟ್ ಮಾಡಿದ್ದಾನೆ.

    ಈ ಘಟನೆ ರಾಮಯ್ಯ ಆಸ್ಪತ್ರೆಯ ಹಿಂಬದಿ ಗೇಟ್ ಬಳಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಬೈಕ್ ಸವಾರನ ಮೇಲೆ ಈ ದಾಳಿ ನಡೆಸಲಾಗಿದೆ.

    ಕಾರು ಹಾಗೂ ಬೈಕ್ ನಡುವೆ ಅಪಘಾತವಾಗಿದೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವಿಚಾರದ ಗಲಾಟೆ ತಾರಕಕ್ಕೇರಿ ಬೈಕ್ ವಾರನ ಮೇಲೆ ಕಾರು ಚಾಲಕ 2 ಸುತ್ತು ಗುಂಡಿನ ದಾಳಿ ನಡೆಸಿದ್ದಾನೆ.  ಇದನ್ನೂ ಓದಿ: ಮುಖವೇ ಇಲ್ಲದೆ ಹುಟ್ಟಿದ ಕುರಿಮರಿ!

    ಅನಿಲ್ ಎಂಬವರ ಮೇಲೆ ಗುಂಡಿನ ದಾಳಿ ಮಾಡಿ ಕಾರು ಚಾಲಕ ಎಸ್ಕೇಪ್ ಆಗಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  12 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ – ಆರೋಪಿ ಅರೆಸ್ಟ್

  • ನಕಲಿ ಕೀ ಬಳಸಿ ನಿರ್ಮಾಪಕನ ಮನೆ ದೋಚಿದ್ದ ಕಳ್ಳರ ಬಂಧನ

    ನಕಲಿ ಕೀ ಬಳಸಿ ನಿರ್ಮಾಪಕನ ಮನೆ ದೋಚಿದ್ದ ಕಳ್ಳರ ಬಂಧನ

    ಬೆಂಗಳೂರು: ಸ್ಯಾಂಡಲ್‍ವುಡ್ ನಿರ್ಮಾಪಕ ರಮೇಶ್ ಕಶ್ಯಪ್‍ರವರ ಹನುಮಂತನಗರ ನಿವಾಸದಲ್ಲಿ ಇತ್ತೀಚೆಗಷ್ಟೇ ಕಳ್ಳತನವಾಗಿತ್ತು. ಇದೀಗ ಈ ಪ್ರರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಚಂದ್ರಶೇಖರ್ ಮತ್ತು ಅಭಿಷೇಕ್ ಬಂಧಿತ ಆರೋಪಿಗಳು. ಆರೋಪಿ ಅಭಿಷೇಕ್ ನಿರ್ಮಾಪಕ ಕಶ್ಯಪ್ ರ ಕಾರು ಚಾಲಕನಾಗಿ ಕೆಲಸ ಕಾರ್ಯನಿರ್ವಹಿಸುತ್ತಿದ್ದ. ಜು.10ರಂದು ಹನುಮಂತನಗರದ ಕಶ್ಯಪ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ವೇಳೆ 3 ಲಕ್ಷ ರೂ. ನಗದು, 710 ಗ್ರಾಂ ಚಿನ್ನಾಭರಣವನ್ನು ಆರೋಪಿಗಳು ಕದ್ದೊಯ್ದಿದ್ದರು.

    ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಸಿಸಿಟಿವಿ ಹಾಗೂ ಟವರ್ ಡಂಪ್ ಸಹಾಯದ ಮೂಲಕ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

    ನಿರ್ಮಾಪಕ ಕಶ್ಯಪ್‍ರ ಕಾರುಚಾಲಕನಾಗಿದ್ದ ಅಭಿಷೇಕ್ ಲಾಕರ್‍ನ ನಕಲಿ ಕೀ ಮಾಡಿಕೊಂಡಿದ್ದ. ಅಲ್ಲದೇ ಸ್ನೇಹಿತ ಚಂದ್ರಶೇಖರನಿಗೆ ಕೀ ನೀಡಿ ಕಳ್ಳತನ ಮಾಡಿಸಿದ್ದನು. ಕದ್ದ ಚಿನ್ನಾಭರಣವನ್ನ ಅಡವಿಟ್ಟು ಹಣ ಪಡೆದು ದಿಲ್ ದಾರ್ ಲೈಫ್ ನಡೆಸುತ್ತಿದ್ದರು. ಇದೀಗ ಹನುಮಂತನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಿ ಇದ್ದ 3 ಲಕ್ಷ ನಗದನ್ನು ವಶ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಇಲಿ ಬಾಲ ಸುಟ್ಟಂತೆ ಶುಭಾ ವಿಲವಿಲನೆ ಒದ್ದಾಡುತ್ತಾಳೆ: ಮಂಜು

  • ಪಾಕ್ ಮಾದರಿ ಧ್ವಜವನ್ನು ಕಾರಿಗೆ ಹಾಕಿದ್ದ ಚಾಲಕನಿಗೆ ಪೊಲೀಸರಿಂದ ಕ್ಲಾಸ್

    ಪಾಕ್ ಮಾದರಿ ಧ್ವಜವನ್ನು ಕಾರಿಗೆ ಹಾಕಿದ್ದ ಚಾಲಕನಿಗೆ ಪೊಲೀಸರಿಂದ ಕ್ಲಾಸ್

    – ಪೊಲೀಸರ ಕಾರ್ಯಕ್ಕೆ ನೆಟ್ಟಿಗರು ಫಿದಾ, ವಿಡಿಯೋ ವೈರಲ್

    ಬೆಂಗಳೂರು: ಪಾಕಿಸ್ತಾನ ಮಾದರಿಯ ಫ್ಲಾಗ್ ಅನ್ನು ಕಾರಿನ ಮುಂಭಾಗಕ್ಕೆ ಹಾಕಿಕೊಂಡಿದ್ದ ಕಾರು ಚಾಲಕನಿಗೆ ಎಲೆಕ್ಟ್ರಾನ್ ಸಿಟಿ ಸಂಚಾರ ಪೊಲೀಸರು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಬಳಿ ನಡೆದಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಧ್ವಜ ಹೋಲುವ ಧ್ವಜವನ್ನು ಕಾರಿನ ಮುಂಭಾಗ ಅಳವಡಿಸಿಕೊಂಡಿರುವುದನ್ನು ಕಂಡ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಪೊಲೀಸರು ಕಾರನ್ನು ತಡೆದು, ಚಾಲಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಕಾರಿನ ಮುಂಭಾಗದಲ್ಲಿ ಅರ್ಧ ಚಂದ್ರನಿರುವ ಹಸಿರು ಬಣ್ಣ ಧ್ವಜ ಇರುವುದನ್ನು ಕಂಡ ಪೊಲೀಸರು, ಕಾರನ್ನು ತಡೆದು ಆ ಧ್ವಜವನ್ನು ಬಿಚ್ಚಿಸಿ ಭಾರತದ ತ್ರಿವರ್ಣ ಧ್ವಜವನ್ನು ಅಳವಡಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು

    ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು

    – ಶ್ರೀಗಳು ನನ್ನ ಪಾಲಿಗೆ ಥೇಟ್ ಶ್ರೀಕೃಷ್ಣನಂತಿದ್ದರು

    ಉಡುಪಿ: ಹಿಂದೂ ಧರ್ಮದ ಪರಿಚಾರಕ ಪೇಜಾವರ ಶ್ರೀಗಳ ನೆಚ್ಚಿನ ಕಾರು ಚಾಲಕರಾಗಿದ್ದರು ಆರಿಫ್. ಶ್ರೀಗಳ ಜೊತೆ 9 ವರ್ಷದ ಪರಿಚಯವಾದರೂ ಕಳೆದ 4 ವರ್ಷಗಳಿಂದ ಆರಿಫ್ ಶ್ರೀಗಳ ಕಾರಿನ ಚಾಲಕರಾಗಿದ್ದರು. ಎಲ್ಲವೂ ಆರಿಫ್ ಅಂದುಕೊಂಡಂತೆಯೇ ಆಗಿದ್ದರೆ ಆರಿಫ್ ಕನಸು ಈ ಬಾರಿ ನೆರವೇರುತ್ತಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಪೇಜಾವರ ಶ್ರೀಗಳು ನನಗೊಂದು ಮಾತು ಕೊಟ್ಟಿದ್ದರು. ಆದರೆ ಈಗ ಆ ಮಾತು ಮರೆತು ಮೌನವಾಗಿದ್ದಾರೆ ಎಂದು ಶ್ರೀಗಳ ಕಾರು ಚಾಲಕ, ಮುಸ್ಲಿಂ ಯುವಕ ಆರಿಫ್ ಭಾವುಕರಾಗಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀಗಳ ಕಾರು ಚಾಲಕ, ನಾನು ಕಳೆದ ನಾಲ್ಕು ವರ್ಷದಿಂದ ಶ್ರೀಗಳ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಶ್ರೀಗಳು ನನ್ನ ಪಾಲಿಗೆ ಶ್ರೀಕೃಷ್ಣನಂತೆ ಕಾಣುತ್ತಿದ್ದರು. ನನ್ನ ಕುಟುಂಬದ ಜೊತೆ ಆಪ್ತ ಬಾಂಧವ್ಯವೂ ಅವರಿಗಿತ್ತು. ಮುಸ್ಲಿಮರು ಎಂದು ಭೇದಭಾವ ಮಾಡಿಲ್ಲ. ನಿಮ್ಮ ರಕ್ತ ಕೆಂಪು, ನನ್ನ ರಕ್ತ ಕೆಂಪು. ಹೀಗಾಗಿ ಯಾವುದಕ್ಕೂ ಭಯಪಡಬೇಡಿ ಎನ್ನುತ್ತಿದ್ದರು. ಕೋಮು ಗಲಾಟೆಯನ್ನು ಕೂಡ ಅವರು ಮಧ್ಯಪ್ರವೇಶಿಸಿ ಕಡಿಮೆ ಮಾಡುತ್ತಿದ್ದರು ಎಂದು ಶ್ರೀಗಳ ಜೊತೆಗಿನ ನೆನಪನ್ನು ಹಂಚಿಕೊಂಡಿದ್ದಾರೆ.

    ಅವರಿಗೆ ಎಸಿ ಆಗುತ್ತಿರಲಿಲ್ಲ, ವಿಂಡೋ ಕ್ಲೋಸ್ ಮಾಡಬೇಕಾಗಿತ್ತು. ನಾನು ಸಾಕಷ್ಟು ಬಾರಿ ಅವರಿಗೆ, ಇಷ್ಟು ಸುತ್ತಾಡಬೇಡಿ ವಿಶ್ರಾಂತಿ ಪಡೆದುಕೊಳ್ಳಿ ಎಂದು ಸಲಹೆ ಕೊಡುತ್ತಿದ್ದೆ. ಕೆಲವೊಮ್ಮೆ ಆಯ್ತು ಆರಿಫ್ ಎಂದು ನನ್ನ ಮಾತಿಗೆ ಗೌರವ ಕೊಟ್ಟು ಕೆಲವೊಂದು ಕಾರ್ಯಕ್ರಮವನ್ನು ರದ್ದು ಮಾಡಿದ್ದೂ ಇದೆ. ಶ್ರೀಗಳು ಹಿಂದೂ ಧರ್ಮವನ್ನು ಕಟ್ಟಲು ತುಂಬಾ ಪ್ರಯತ್ನ ಮಾಡುತ್ತಿದ್ದರು. ಬೇರೆ ಧರ್ಮವನ್ನು ಗೌರವಿಸುತ್ತಿದ್ದರು. ಆ ಗುಣವನ್ನು ನೋಡಿ ಹೆಮ್ಮೆಯಾಗುತ್ತಿತ್ತು. ಕೃಷ್ಣ ಮಠಕ್ಕೆ ಯಾವಾಗ ಬೇಕಾದರೂ ಹೋಗುತ್ತಿದ್ದೆವು. ನಮ್ಮನ್ನು ಯಾರೂ ತಡೆಯುತ್ತಿರಲಿಲ್ಲ ಎಂದರು.

    ಆರಿಫ್ ಅವರ ಹುಟ್ಟುಹಬ್ಬಕ್ಕೆ ಪ್ರತಿ ಬಾರಿಯೂ ರಕ್ತದಾನ ಶಿಬಿರ ಮಾಡುತ್ತಿದ್ದರು. ನಾಲ್ಕು ವರ್ಷದಿಂದ ಕಾರುಚಾಲಕನಾಗಿ ದುಡಿದ ಆರಿಫ್ ಶ್ರೀಗಳ 90 ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಆಸೆ ಹೊಂದಿದ್ದರು. ಜೊತೆಗೆ ರಕ್ತದಾನ ಶಿಬಿರಕ್ಕೆ ವ್ಯವಸ್ಥೆ ಕೂಡ ಮಾಡಿದ್ದರು. ಸಾಕಷ್ಟು ಮುಸ್ಲಿಂ ಯುವಕರು, ಸಂಘಟನೆಗಳು ಸೇರಿ ಶ್ರೀಗಳ ಹುಟ್ಟುಹಬ್ಬದ ಅದ್ಧೂರಿ ಆಚರಣೆಗೆ ನಿರ್ಧರಿಸಿದ್ದರು.

    ಕಾರು ಚಾಲಕ ಆರಿಫ್‍ಗೆ ಶ್ರೀಗಳು ಕೊಟ್ಟಿದ್ದ ಮಾತೇನು?: ಶ್ರೀಗಳ 90ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಕ್ಕೆ ಆಹ್ವಾನ ನೀಡಲು ಹೋಗಿದ್ದೆವು. ಆಹ್ವಾನ ಸ್ವೀಕರಿಸಿದ ಪೇಜಾವರ ಶ್ರೀಗಳು ಈ ಬಾರಿಯ ರಕ್ತದಾನ ಶಿಬಿರಕ್ಕೆ ಬಂದೇ ಬರುತ್ತೇನೆ, ನಾನೇ ಉದ್ಘಾಟನೆ ಮಾಡುತ್ತೇನೆ. ನನ್ನ ಹುಟ್ಟುಹಬ್ಬವನ್ನು ನೀವು ಆಚರಿಸಿದ್ರೆ ಬಾರದೇ ಇರುತ್ತೇನಾ. ಎಲ್ಲೇ ಇದ್ದರೂ ಬಂದೇ ಬರುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಶ್ರೀಗಳು ಈಗ ಈ ಮಾತು ಮರೆತು ಮೌನವಾಗಿದ್ದಾರೆ ಎನ್ನುತ್ತಾ ಆರಿಫ್ ಭಾವುಕರಾದರು.

  • 22 ವರ್ಷದ ಗೆಳತಿ, ಕ್ಯಾಬ್ ಚಾಲಕನಿಗೆ ಗುಂಡಿಕ್ಕಿದ ಬಾಡಿ ಬಿಲ್ಡರ್ ಅರೆಸ್ಟ್

    22 ವರ್ಷದ ಗೆಳತಿ, ಕ್ಯಾಬ್ ಚಾಲಕನಿಗೆ ಗುಂಡಿಕ್ಕಿದ ಬಾಡಿ ಬಿಲ್ಡರ್ ಅರೆಸ್ಟ್

    – ನಾಲ್ಕು ಬಾರಿ ಪ್ರೇಯಸಿ ತಲೆಗೆ ಬುಲೆಟ್ ಇಳಿಸಿದ್ದ

    ನವದೆಹಲಿ: ನಾಲ್ಕು ಬಾರಿ ಪ್ರೇಯಸಿಯ ತಲೆಗೆ ಗುಂಡಿಕ್ಕಿ ಕೊಂದು ಬಾಡಿಗೆ ಕಾರಿನಲ್ಲಿ ಪರಾರಿಯಾಗಿ ನಂತರ ಕಾರು ಚಾಲಕನನ್ನು ಶೂಟ್ ಮಾಡಿದ್ದ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಮತ್ತು ಜಿಮ್ ಒಂದರ ಮಾಲೀಕನಾಗಿದ್ದ ಹೇಮಂತ್ ಲಂಬಾ, 22 ವರ್ಷದ ತನ್ನ ಪ್ರೇಯಸಿಯನ್ನು ಡಿಸೆಂಬರ್ 7 ರಂದು ಹರ್ಯಾಣದ ರೇವಾರಿ ಎಂಬಲ್ಲಿ ತಲೆಗೆ ನಾಲ್ಕು ಬಾರಿ ಗುಂಡು ಹಾರಿಸಿ ಕೊಂದು ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿ ಬಾಡಿಗೆ ಕಾರಿನಲ್ಲಿ ಪರಾರಿಯಾಗಿದ್ದ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದ ರೇವಾರಿ ಜಿಲ್ಲೆಯ ಡಿಎಸ್‍ಪಿ ಜಮ್ಮಲ್ ಖಾನ್, ಕೊಲೆಯಾದ ಸಂತ್ರಸ್ತೆ ರಾಜಸ್ಥಾನದ ಮೂಲದವಳಾಗಿದ್ದು, ದೆಹಲಿಯ ರೋಹಿಣಿಯಲ್ಲಿ ಸಂಬಂಧಿಕರ ಮನೆಯಲ್ಲಿ ತಂದೆಯ ಜೊತೆ ವಾಸಿಸುತ್ತಿದ್ದಳು, ಆಕೆಯ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಘಟನೆಯಾದ ನಂತರ ಪರಾರಿಯಾಗಿದ್ದ ಹೇಮಂತ್ ಲಂಬಾನ ವಿರುದ್ಧ ಕೊಲೆ ಪ್ರಕರಣದ ದಾಖಲಾಗಿತ್ತು ಎಂದು ಹೇಳಿದ್ದರು.

    ಸಂತ್ರಸ್ತೆಯನ್ನು ಕೊಲೆ ಮಾಡಿ ಬಾಡಿಗೆ ಕಾರಿನಲ್ಲಿ ಎಸ್ಕೇಪ್ ಆಗಿದ್ದ ಹೇಮಂತ್ ಲಂಬಾ ನಂತರ ಬಾಡಿಗೆ ಕಾರು ಚಾಲಕ ದೇವೇಂದ್ರನಿಗೆ ಗನ್ ತೋರಿಸಿ ಜೈಪುರಕ್ಕೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ. ಆದರೆ ಇದಕ್ಕೆ ಒಪ್ಪದ ಚಾಲಕ ದೇವೇಂದ್ರನನ್ನು ಸಹ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ನಂತರ ಆತನೇ ಕಾರನ್ನು ತೆಗೆದುಕೊಂಡು ಜೈಪುರಕ್ಕೆ ಹೋಗಿದ್ದಾನೆ.

    ಆರೋಪಿಯನ್ನು ಹಿಡಿದು ಕೊಟ್ಟ ಕಾರ್ ಡೀಲರ್
    ಕಾರ್ ಚಾಲಕನನ್ನು ಕೊಲೆ ಮಾಡಿ ಕಾರು ತೆಗೆದುಕೊಂಡು ಬಂದಿದ್ದ ಹೇಮಂತ್ ಲಂಬಾ ಜೈಪುರದಲ್ಲಿ ಸ್ಥಳೀಯ ಕಾರ್ ಡೀಲರ್ ಬಳಿ ಕಾರನ್ನು ಮಾರಲು ಹೋಗಿದ್ದಾನೆ. ಆದರೆ ಹೇಮಂತ್ ಲಂಬಾನ ನಡುವಳಿಕೆ ನೋಡಿ ಅನುಮಾನಗೊಂಡ ಕಾರು ವ್ಯಾಪಾರಿ ಅಲ್ಪೇಶ್ ಕಾರಿನ ಹಿಂಭಾಗದಲ್ಲಿ ಇದ್ದ ಫೋನ್ ನಂಬರ್ ಗೆ ಕರೆ ಮಾಡಿದ್ದಾರೆ. ಆಗ ಕರೆಯನ್ನು ಕಾರು ಚಾಲಕನ ಪತ್ನಿ ಸ್ವೀಕರಿಸಿದ್ದಾರೆ. ಇದರಿಂದ ಮತ್ತಷ್ಟು ಅನುಮಾನಗೊಂಡ ವ್ಯಾಪಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಹೇಮಂತ್ ನನ್ನು ಬಂಧಿಸಿದ್ದಾರೆ.

  • ಪ್ರಿಯಕರನಿಗಾಗಿ ಪತಿಯನ್ನೇ ತುಂಡರಿಸಿ ರಸ್ತೆಯುದ್ದಕ್ಕೂ ಎಸೆದ ಪತ್ನಿ

    ಪ್ರಿಯಕರನಿಗಾಗಿ ಪತಿಯನ್ನೇ ತುಂಡರಿಸಿ ರಸ್ತೆಯುದ್ದಕ್ಕೂ ಎಸೆದ ಪತ್ನಿ

    – 8 ವರ್ಷದ ಬಳಿಕ ಬಯಲಾಯ್ತು ಪತ್ನಿಯ ಕರ್ಮಕಾಂಡ

    ನವದೆಹಲಿ: ಪ್ರಿಯಕರನಿಗಾಗಿ ಪತ್ನಿಯೇ ಪತಿಯನ್ನು ಕೊಂದು, ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯುದ್ದಕ್ಕೂ ಎಸೆದಿದ್ದ ಭಯಾನಕ ಪ್ರಕರಣವನ್ನು ದೆಹಲಿ ಪೊಲೀಸರು ಬೇಧಿಸಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿ 2011ರಲ್ಲಿ ನಡೆದಿದ್ದ ಬರ್ಬರ ಕೊಲೆ ಪ್ರಕರಣ ಎಲ್ಲರನ್ನು ಬೆಚ್ಚಿಬೀಸಿತ್ತು. ಆದರೆ ಈ ಬರ್ಬರ ಕೊಲೆ ಪ್ರಕರಣ ಬೇಧಿಸಲು ಪೊಲೀಸರು ಸತತ 8 ವರ್ಷ ಬೇಕಾಯ್ತು. ಕೊನೆಗೂ ಸತತ ಪ್ರಯತ್ನದಿಂದ ಕೊಲೆ ಪ್ರಕರಣದ ಹಿಂದಿನ ರಹಸ್ಯ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 2011ರಲ್ಲಿ ದೆಹಲಿ ನಿವಾಸಿ ರವಿ ಕೊಲೆ ನಡೆದಿತ್ತು. ಆತನ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಆರೋಪಿಗಳು ರಸ್ತೆಯುದ್ದಕ್ಕೂ ಎಸೆದಿದ್ದರು. ಈ ಪ್ರಕರಣ ನಡೆದಾಗ ತನಿಖೆ ಕೈಗೊಂಡ ಪೊಲೀಸರು ಇದನ್ನು ಬೇಧಿಸಲು ಆಗಿರಲಿಲ್ಲ. ಹೀಗಾಗಿ ಪ್ರಕರಣವನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಕ್ರೈಂ ಬ್ರಾಂಚ್ ಪೊಲೀಸರು 8 ವರ್ಷದ ಬಳಿಕ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಪ್ರೇಯಸಿಯ ಪತಿಯನ್ನೇ ಕೊಂದ

    ಮೃತವ್ಯಕ್ತಿ ರವಿಯನ್ನು ಆತನ ಪತ್ನಿ ಶಕುಂತಲಾ, ಪ್ರಿಯಕರ ಕಮಲ್ ಹಾಗೂ ಕಾರು ಚಾಲಕ ಸೇರಿಕೊಂಡು ಕೊಲೆ ಮಾಡಿದ್ದರು ಎಂಬುದು ಬೆಳಕಿಗೆ ಬಂದಿದೆ. 2011ರಲ್ಲಿ ಶಕುಂತಲಾ ಹಾಗೂ ರವಿ ವಿವಾಹವಾಗಿತ್ತು. ಆದರೆ ಶಕುಂತಲಾ ಕಮಲ್‍ನನ್ನು ಪ್ರೀತಿಸುತ್ತಿದ್ದಳು. ಆದ್ದರಿಂದ ಮದುವೆಯ ನಂತರೂ ಅವರಿಬ್ಬರು ಸೇರುತ್ತಿದ್ದರು. ಆದರೆ ಮುಂದೆ ಪತಿ ತಮ್ಮ ಪ್ರೀತಿಗೆ ಅಡ್ಡಿಯಾಗಬಹುದು ಎಂಬ ಆಲೋಚನೆ ಮಾಡಿ ರವಿಗೆ ಅಂತ್ಯ ಕಾಣಿಸಲು ಇಬ್ಬರೂ ಭಯಾನಕ ಪ್ಲಾನ್ ಮಾಡಿದ್ದರು.

    ಪತಿಯನ್ನು ಕೊಲೆ ಮಾಡಲು ಶಕುಂತಲಾ 70 ಸಾವಿರ ರೂಪಾಯಿ ಖರ್ಚು ಮಾಡಿ ವಾಹನವೊಂದನ್ನೂ ರೆಡಿ ಮಾಡಿಟ್ಟಿಕೊಂಡಿದ್ದಳು. ಜೊತೆಗೆ ಅದರ ಚಾಲಕನನ್ನು ಕೂಡ ತನ್ನ ಪ್ಲಾನ್‍ನಲ್ಲಿ ಶಾಮೀಲು ಮಾಡಿಕೊಂಡಿದ್ದಳು. ತಂಗಿಯ ಮನೆಗೆ ಹೋಗಬೇಕು ಎಂದು ಶಕುಂತಲಾ ಪತಿಯನ್ನ ಪುಸಲಾಯಿಸಿ ಕರೆಸಿಕೊಂಡಿದ್ದಳು. ಹೀಗೆ ಕಾರಿನಲ್ಲಿ ಹೀಗುವಾಗ ಸುಳ್ಳು ನೆಪವೊಡ್ಡಿ ಕಮಲ್ ಕೂಡಾ ವಾಹನ ಹತ್ತಿಕೊಂಡ. ಬಳಿಕ ಇಬ್ಬರೂ ಸೇರಿ ಕಾರಿನಲ್ಲೇ ಪತಿಯನ್ನ ಕೊಲೆ ಮಾಡಿದರು. ಈ ಕೃತಕ್ಕೆ ಕಾರು ಚಾಲಕ ಕೂಡ ಸಾಥ್ ಕೊಟ್ಟಿದ್ದನು. ಕೊಲೆ ಮಾಡಿದ ಬಳಿಕ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಗುಂಡಿಯಲ್ಲಿ ರವಿಯ ಮೃತದೇಹ ಹಾಕಿ ಶಕುಂತಲಾ ಹಾಗೂ ಕಮಲ್ ಬೆಂಕಿ ಇಟ್ಟು ಸುಟ್ಟರು. ನಂತರ ಪೊಲೀಸರಿಗೆ ಈ ಬಗ್ಗೆ ತಿಳಿದರೆ ತನಿಖೆ ನಡೆಸುತ್ತಾರೆ ಎಂದು ಯೋಚಿಸಿ, ಅವರ ದಾರಿ ತಪ್ಪಿಸಲು ರವಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕಾರಿನಲ್ಲಿ ತೆಗೆದುಕೊಂಡು ಹೋಗಿ ಅಲ್ವಾರ್ ಹಾಗೂ ರೇವಾರಿ ಪ್ರದೇಶದ ನಡುವೆ ದಾರಿಯುದ್ದಕ್ಕೂ ಒಂದೊಂದು ತುಂಡುಗಳನ್ನು ಎಸೆದಿದ್ದರು. ಬಳಿಕ ಅಮಾಯಕರಂತೆ ನಾಟಕವಾಡಿದ್ದರು.

    ಕೃತ್ಯವೆಸೆಗಿದ ನಂತರ ಆರೋಪಿಗಳು ಆರಾಮಾಗಿಯೇ ಇದ್ದರು. ಆದ್ರೆ, ಶಕುಂತಲಾ ಹಾಗೂ ಕಮಲ್ ಮೇಲೆಯೇ ಪೊಲೀಸರು ಅನುಮಾನ ಪಟ್ಟು, 2017ರಲ್ಲಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಿದಾಗ ಅವರಿಬ್ಬರ ಅಕ್ರಮ ಸಂಬಂಧ ಬೆಳಕಿಗೆ ಬಂದಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಆರೋಪಿಗಳು ಪರಾರಿಯಾಗಿದ್ದರು.

    ಆದರೆ ಸೋಮವಾರ ಕಾರು ಚಾಲಕ ಹಾಗೂ ಕಮಲ್‍ನನ್ನು ಪೊಲೀಸರು ಬಂಧಿಸಿದಾಗ ಕೊಲೆಯ ರಹಸ್ಯ ಬೆಳಕಿಗೆ ಬಂದಿದ್ದು, ಅದನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಆರೋಪಿ ಶಕುಂತಲಾ ತಲೆಮರಿಸಿಕೊಂಡಿದ್ದಾಳೆ. ಆಕೆಯನ್ನೂ ಕೂಡ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

  • ತಾಕತ್ ಇದ್ರೆ ಹಿಡಿಯಿರಿ ಅಂತ ಸವಾಲ್ ಹಾಕಿ ಪೊಲೀಸರ ಅತಿಥಿಯಾದ

    ತಾಕತ್ ಇದ್ರೆ ಹಿಡಿಯಿರಿ ಅಂತ ಸವಾಲ್ ಹಾಕಿ ಪೊಲೀಸರ ಅತಿಥಿಯಾದ

    ಮೈಸೂರು: ನನ್ನ ಬಳಿ ನಾನು ಓಡಿಸುವ ಕಾರಿನ ಯಾವುದೇ ದಾಖಲಾತಿ ಇಲ್ಲ. ಹೀಗಾಗಿ ತಾಕತ್ ಇದ್ದರೆ ನನ್ನನ್ನು ಹಿಡಿಯಿರಿ ಎಂದು ಸಂಚಾರಿ ಪೊಲೀಸರಿಗೆ ಸವಾಲು ಹಾಕಿದವನು ಈಗ ಖಾಕಿಯ ಅತಿಥಿಯಾಗಿದ್ದಾನೆ.

    ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮಾಚೆಬಾಯನಹಳ್ಳಿ ಗ್ರಾಮದ ನಿವಾಸಿ ರವಿ ಪೊಲೀಸರಿಗೆ ಸವಾಲ್ ಹಾಕಿದ್ದನು. ಈ ಸವಾಲ್ ಸ್ವೀಕರಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪೊಲೀಸರಿಗೆ ಅವಾಜ್ ರೂಪದಲ್ಲಿ ಸವಾಲು ಹಾಕಿದ್ದವನ ಗುರುತು ಪತ್ತೆ ಹಚ್ಚಿ ಆತನ ಸ್ವಗ್ರಾಮದಲ್ಲೇ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕಳೆದ ಎರಡು ದಿನಗಳ ಹಿಂದೆ ಪೊಲೀಸರಿಗೆ ಚಾಲೆಂಜ್ ಮಾಡಿ ಈಗ ಜೈಲಿನಲ್ಲಿ ಕಂಬಿ ಎಣಿಸುವ ಸ್ಥಿತಿಗೆ ಬಂದಿದ್ದಾನೆ.

    ತನ್ನ ಕಾರಿನಲ್ಲಿ ಕೂತು ಸೆಲ್ಫಿ ವೀಡಿಯೋ ಮಾಡಿ, ತಾನು ದಾಖಲೆ ಇಲ್ಲದೇ ವಾಹನ ಓಡಿಸುತ್ತಿದ್ದೇನೆ. ತಾಕತ್ ಇದ್ದರೆ ನನ್ನನ್ನು ಹಿಡಿಯಿರಿ ಎಂದು ರವಿ ಪೊಲೀಸರಿಗೆ ಸವಾಲ್ ಹಾಕಿದ್ದನು. ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇದನ್ನು ನೋಡಿದ ಪೊಲೀಸರು ರವಿಯ ಬಗ್ಗೆ ಮಾಹಿತಿ ಕಲೆಹಾಕಿ, ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

  • ಕಾರಿನಲ್ಲಿ ಹೆಲ್ಮೆಟ್ ಹಾಕದ್ದಕ್ಕೆ ಚಾಲಕನ ಮೇಲೆ ಬಿತ್ತು ದಂಡ

    ಕಾರಿನಲ್ಲಿ ಹೆಲ್ಮೆಟ್ ಹಾಕದ್ದಕ್ಕೆ ಚಾಲಕನ ಮೇಲೆ ಬಿತ್ತು ದಂಡ

    ಲಕ್ನೋ: ಉತ್ತರ ಪ್ರದೇಶದ ಆಲಿಘರ್‌ನಲ್ಲಿ ಟ್ರಾಫಿಕ್ ಪೊಲೀಸರು ಕಾರು ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದು, ಆ ಚಾಲಕ ಹೆಲ್ಮೆಟ್ ಹಾಕಿಕೊಂಡೇ ಈಗ ಕಾರು ಚಲಾಯಿಸುತ್ತಿದ್ದಾರೆ.

    ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದು ಸಂಚಾರಿ ನಿಯಮಗಳಲ್ಲಿ ಜಾರಿಯಲ್ಲಿ ಇರುವುದು ಎಲ್ಲರಿಗೂ ತಿಳಿದಿದೆ ಆದರೆ ಉತ್ತರ ಪ್ರದೇಶದಲ್ಲಿ ಕಾರಿನಲ್ಲಿ ಹೆಲ್ಮೆಟ್ ಹಾಕಿಲ್ಲ ಎಂದು ಪೊಲೀಸರು ಚಾಲಕನಿಗೆ ದಂಡ ಹಾಕಿದ್ದಾರೆ. ಕಾರು ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವಿದೆ ಆದರೆ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಇಲ್ಲದಿದ್ದರೂ ಪೊಲೀಸರು ದಂಡ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಚಾಲಕ ಈಗ ದಿನವೂ ಹೆಲ್ಮೆಟ್ ಹಾಕಿಕೊಂಡೇ ಕಾರು ಚಲಾಯಿಸುತ್ತಿದ್ದಾರೆ.

    ಆಲಿಘರ್‌ನ ಪಿಯುಷ್ ವರ್ಶ್ನಿ ಅವರು ಕಾರಿನಲ್ಲಿ ಹೆಲ್ಮೆಟ್ ಹಾಕದಿದ್ದಕ್ಕೆ ದಂಡ ಕಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಗಸ್ಟ್ 27ರಂದು ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್ ಪೊಲೀಸರು ನನಗೆ 500 ರೂ. ದಂಡ ವಿಧಿಸಿ, ಇ-ಚಲನ್ ನೀಡಿದ್ದರು. ಇ-ಚಲನ್‍ನಲ್ಲಿ ನನ್ನ ಕಾರಿನ ಸಂಖ್ಯೆ ಇತ್ತು. ಆದ್ದರಿಂದ ಮತ್ತೆ ದಂಡ ಹಾಕಬಹುದೆಂಬ ಭಯದಿಂದ ನಾನು ಹೆಲ್ಮೆಟ್ ಹಾಕಿಕೊಂಡೇ ಕಾರು ಒಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂದು ಸಂಚಾರಿ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಇ-ಚಲನ್ ಮೇಲೆ ತನ್ನ ಕಾರಿನ ಸಂಖ್ಯೆ ಇದೆ ಎಂದು ಪಿಯುಷ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಚಾರಿ ಪೊಲೀಸರ ಎಡವಟ್ಟಾಗಿದ್ದು, ಚಲನ್ ಪರಿಶೀಲನೆ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಸಂಬಂಧ ದೂರು ದಾಖಲಾದ ಬಳಿಕ ಪೊಲೀಸರು ಇ-ಚಲನ್ ಪರಿಶೀಲನೆ ಮಾಡಿದ್ದು, ತಪ್ಪಾಗಿ ದತ್ತಾಂಶ ನಮೂದಾಗಿರುವುದು ಬೆಳಕಿಗೆ ಬಂದಿದೆ. ಈ ಚಲನ್ ತಪ್ಪೆಂದು ಗೊತ್ತಾದ ಬಳಿಕ ಅದನ್ನು ಸರಿಪಡಿಸಿದ್ದೇವೆ ಎಂದು ಸಂಚಾರಿ ಪೊಲೀಸ್ ವರಿಷ್ಠಾಧಿಕಾರಿ ಅಜಿಜುಲ್ ಹಖ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

    ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ದೇಶದಲ್ಲೆಡೆ ದಂಡ ವಿಧಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. 80 ಸಾವಿರದವರೆಗೂ ದಂಡ ವಿಧಿಸಿರುವ ಉದಾಹರಣೆಗಳಿವೆ. ಈ ಹೊಸ ನಿಯಮದಿಂದ ಸಂಚಾರಿ ನಿಯಮ ಉಲ್ಲಂಘಿಸುವವರ ಜೇಬಿಗೆ ಭಾರೀ ಪ್ರಮಾಣದಲ್ಲಿ ಕತ್ತರಿ ಬೀಳುತ್ತಿದ್ದು, ನಿಯಮ ಜಾರಿಗೆ ಬಂದ ಕೆಲವೇ ದಿನಗಳಲ್ಲಿ ಸಂಚಾರಿ ಪೊಲೀಸರು ಒಂದೇ ದಿನದಲ್ಲಿ ಲಕ್ಷಾಂತರ ರೂ. ದಂಡವನ್ನು ಸಂಗ್ರಹಿಸುತ್ತಿದ್ದಾರೆ.

  • ಸಿದ್ಧಾರ್ಥ್ ಸಾವಿಗೆ ಸ್ಫೋಟಕ ತಿರುವು – ಚಾಲಕನ ಹೇಳಿಕೆ ಮೇಲೆ ಅನುಮಾನ

    ಸಿದ್ಧಾರ್ಥ್ ಸಾವಿಗೆ ಸ್ಫೋಟಕ ತಿರುವು – ಚಾಲಕನ ಹೇಳಿಕೆ ಮೇಲೆ ಅನುಮಾನ

    ಮಂಗಳೂರು: ಕಾಫಿ ಕಿಂಗ್ ಸಿದ್ಧಾರ್ಥ್ ನಿಗೂಢ ಸಾವು ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದರೂ ಅದೊಂದು ಕೊಲೆ ಎನ್ನುವ ಸಂಶಯದ ವಾಸನೆ ಪೊಲೀಸರಿಗೂ ಸಿಕ್ಕಿದೆ.

    ಪೊಲೀಸರು ನಾನಾ ಆಯಾಮಗಳಲ್ಲಿ ನಾಲ್ಕು ತಂಡಗಳನ್ನು ರಚಿಸಿಕೊಂಡು ತನಿಖೆ ಆರಂಭಿಸಿದ್ದು ಸಿದ್ಧಾರ್ಥ್ ಜೊತೆಗಿದ್ದ ಚಾಲಕನ ಹೇಳಿಕೆಗಳೇ ಪೊಲೀಸರಿಗೆ ಇದೀಗ ಅನುಮಾನ ಹುಟ್ಟುವಂತೆ ಮಾಡಿದೆ.

    ಅದರಲ್ಲೂ ಆತ ಹೇಳಿದಂತೆ ಸೋಮವಾರ ಸಂಜೆ 7 ಗಂಟೆಗೆ ನೇತ್ರಾವತಿ ಸೇತುವೆಯ ಬಳಿ ನಾವು ತಲುಪಿದ್ದು, ನನ್ನನ್ನು ಮುಂದೆ ಹೋಗುವಂತೆ ಹೇಳಿ ಸಿದ್ಧಾರ್ಥ್ ಅವರು ನೇತ್ರಾವತಿ ಸೇತುವೆಯಲ್ಲೇ ಇಳಿದುಕೊಂಡಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್‍ನಲ್ಲಿ ಅಂದು ಸಂಜೆ 5.28ಕ್ಕೆ ಅವರಿದ್ದ ಕಾರು ಪಾಸ್ ಆಗಿರೋ ಸಿಸಿ ಕ್ಯಾಮರಾ ಫೊಟೇಜ್ ಸಿಕ್ಕಿದ್ದು ಅನುಮಾನಕ್ಕೆ ಕಾರಣವಾಗಿದೆ.

    ಟೋಲ್ ಗೇಟ್‍ನಿಂದ ನೇತ್ರಾವತಿ ಸೇತುವೆಗೆ ಬರಲು 25 ಕಿಲೋಮೀಟರ್ ಅಂತರ ಇದ್ದು, ಕೇವಲ 35- 40 ನಿಮಿಷದಲ್ಲಿ ಬರಬಹುದು. ಆದರೆ ಅವರು ಒಂದೂವರೆ ಗಂಟೆ ಏನು ಮಾಡುತ್ತಿದ್ದರು ಅನ್ನುವ ಅನುಮಾನ ಈಗ ಎದ್ದಿದೆ.