Tag: ಕಾರು ಕಳ್ಳತನ

  • ಮನೆ ಮುಂದೆ ನಿಲ್ಲಿಸಿದ್ದ 14 ಲಕ್ಷ ಮೌಲ್ಯದ ಸ್ಕಾರ್ಪಿಯೋ ಕಾರು ಕಳ್ಳತನ

    ಮನೆ ಮುಂದೆ ನಿಲ್ಲಿಸಿದ್ದ 14 ಲಕ್ಷ ಮೌಲ್ಯದ ಸ್ಕಾರ್ಪಿಯೋ ಕಾರು ಕಳ್ಳತನ

    ಹಾವೇರಿ: ಮನೆ ಮುಂದೆ ನಿಲ್ಲಿಸಿದ್ದ 14 ಲಕ್ಷ ರೂಪಾಯಿ ಮೌಲ್ಯದ ಸ್ಕಾರ್ಪಿಯೋ ಕಾರು (Scorpio Car) ಕಳ್ಳತನ ಮಾಡಿರುವ ಘಟನೆ ಹಾವೇರಿಯ (Haveri) ಸಿದ್ದಾರೋಢ ಕಾಲೊನಿಯಲ್ಲಿ ನಡೆದಿದೆ.

    ಹಾಸನ ಮೂಲದ ಪ್ರಜ್ವಲ್ ಆರ್. ಎಂಬುವರಿಗೆ ಸೇರಿದ ಕಾರು ಎಂದು ಗುರುತಿಸಲಾಗಿದೆ. KA-04 NB-0449 ಸಂಖ್ಯೆಯ ಸ್ಕಾರ್ಪಿಯೋ ಕಾರನ್ನ ಕಳ್ಳರು ಕದ್ದೊಯ್ದಿದ್ದಾರೆ. ಇದನ್ನೂ ಓದಿ: ಗೆಳತಿಯೊಂದಿಗೆ ಲಿವ್‌ ಇನ್‌ನಲ್ಲಿರಲು ಮನೆಯವರ ವಿರೋಧ – ರೈಲ್ವೆ ಹಳಿಗೆ ಹಾರಿ ಯುವಕ ಆತ್ಮಹತ್ಯೆ

    ಹಾವೇರಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದ ಪ್ರಜ್ವಲ್‌, ತಮ್ಮ ಮನೆಯ ಮುಂದೆ ಡೋರ್ ಲಾಕ್ ಮಾಡಿ ನಿಲ್ಲಿಸಿದ್ದರು. ಡೋರ್ ಲಾಕ್ ಮುರಿದು ಸ್ಕಾರ್ಪಿಯೋ ಕಾರನ್ನ ಡೈರೆಕ್ಟರ್ ಮಾಡಿ ಖದೀಮರು ಕಳ್ಳತನ ಮಾಡಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ (Haveri Police Station) ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಕಾರವಾರ | ನಡುರಸ್ತೆಯಲ್ಲೇ ನಗರಸಭೆ ಮಾಜಿ ಸದಸ್ಯನ ಬರ್ಬರ ಹತ್ಯೆ

  • ಪ್ರೇಯಸಿ ಜೊತೆ ಲಾಂಗ್‌ಡ್ರೈವ್‌ಗಾಗಿ ಕಾರಿಲ್ಲದೇ ಪ್ರಿಯಕರನ ಪರದಾಟ – ಕಾರು ಕದ್ದು ಸ್ನೇಹಿತರಿಂದ ಸಹಾಯ

    ಪ್ರೇಯಸಿ ಜೊತೆ ಲಾಂಗ್‌ಡ್ರೈವ್‌ಗಾಗಿ ಕಾರಿಲ್ಲದೇ ಪ್ರಿಯಕರನ ಪರದಾಟ – ಕಾರು ಕದ್ದು ಸ್ನೇಹಿತರಿಂದ ಸಹಾಯ

    ಲಕ್ನೋ: ಪ್ರೇಯಸಿ ಜೊತೆ ಲಾಂಗ್‌ಡ್ರೈವ್‌ ಹೋಗಲು ಕಾರಿಲ್ಲದೇ ಪರದಾಡುತ್ತಿದ್ದ ಸ್ನೇಹಿತನಿಗಾಗಿ, ಕಾರು ಕಳ್ಳತನ ಮಾಡಿ ಫ್ರೆಂಡ್ಸ್ ಸಹಾಯ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ (Noida) ನಡೆದಿದೆ.

    ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಶ್ರೇಯ್, ಅನಿಕೇತ್ ನಗರ್ ಹಾಗೂ ದೀಪಾಂಶು ಭಾಟಿ ಎಂದು ಗುರುತಿಸಲಾಗಿದೆ. ಆದರೆ ಈ ಮೂವರ ಪೈಕಿ ಕಾರು ಕಳ್ಳತನಕ್ಕೆ ಯೋಜನೆ ರೂಪಿಸಿದ್ದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಕಳ್ಳತನದ ಕೆಲವು ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.ಇದನ್ನೂ ಓದಿ: ಕೋರಮಂಗಲದಲ್ಲಿ ರಿಲಯನ್ಸ್ ರಿಟೇಲ್ ‘ಯೂಸ್ಟಾ’ ಸ್ಟೋರ್ ಓಪನ್ – ಯುವಜನರ ಫ್ಯಾಷನ್‌ ಬ್ರ್ಯಾಂಡ್‌

    ಇಬ್ಬರು ಕಾಲೇಜು ವಿದ್ಯಾರ್ಥಿಗಳು ಅವರ ಸ್ನೇಹಿತ ಹಾಗೂ ಆತನ ಪ್ರೇಯಸಿಯೊಟ್ಟಿಗೆ ಲಾಂಗ್‌ಡ್ರೈವ್‌ ತೆರಳಲು ಕಾರಿಲ್ಲದೇ ಇದ್ದಾಗ ಸಹಾಯ ಮಾಡಲು ಮುಂದಾಗಿದ್ದರು. ಗ್ರೇಟರ್ ನೋಯ್ಡಾದ ಶೋರೂಮ್ ಒಂದರಲ್ಲಿ ಕಾರನ್ನು ಕಳ್ಳತನ ಮಾಡುವ ಯೋಜನೆ ಹಾಕಿದ್ದರು.

    ಸೆ.26 ರಂದು ಇಬ್ಬರು ಆರೋಪಿಗಳು ಗ್ರೇಟರ್ ನೋಯ್ಡಾದ ಕಾರ್ ಬಜಾರ್‌ನಲ್ಲಿ ನಿಲ್ಲಿಸಿದ್ದ ಹುಂಡೈ ವೆನ್ಯೂ (Hundai Venue) ಕಾರನ್ನು ಟೆಸ್ಟ್ ಡ್ರೈವ್ ಮಾಡಲು ಕೇಳಿದ್ದಾರೆ. ಈ ವೇಳೆ ಕಾರ್ ಡೀಲರ್ ನಿಲ್ಲಿಸಿದ್ದ ಕಾರನ್ನು ಪಾರ್ಕಿಂಗ್‌ನಿಂದ ಹೊರತೆಗೆದು ಇಬ್ಬರನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಕಾರ್ ಡೀಲರ್ ಕಾರನ್ನು ಓಡಿಸುತ್ತಿದ್ದ. ಇಬ್ಬರಲ್ಲಿ ಒಬ್ಬ ಮುಂದೆ ಹಾಗೂ ಇನ್ನೊಬ್ಬ ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದ. ಬಳಿಕ ಕಾರು ಅಲ್ಲಿಂದ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಅಲ್ಲಿಂದ ಕಾರು ಹೊರಟ ಬಳಿಕ ಇಬ್ಬರು ಆರೋಪಿಗಳು ಕಾರ್ ಡೀಲರ್‌ನನ್ನು ಹೊರಗೆ ತಳ್ಳಿ, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ, ಪ್ರಕರಣ ನಡೆದ ಬಳಿಕ 100ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರೀಕ್ಷಿಸಲಾಗಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ಹರಸಾಹಸಪಟ್ಟಿರುವುದಾಗಿ ತಿಳಿಸಿದ್ದಾರೆ. ಸದ್ಯ ಟಿಂಟೆಡ್ ಗ್ಲಾಸ್ ಮತ್ತು ನಗರ ಎಂದು ಬರೆದಿದ್ದ ಕಾರನ್ನು ಪೊಲೀಸರು ಪತ್ತೆ ಮಾಡಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಟೇಕಾಫ್‌ ಆಗಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ – ಸತತ 2 ಗಂಟೆ ಆಕಾಶದಲ್ಲೇ ಗಿರಕಿ ಹೊಡೆದ ಏರ್‌ ಇಂಡಿಯಾ ಫ್ಲೈಟ್‌

  • ದೆಹಲಿ ಸಿಎಂ ಕೇಜ್ರಿವಾಲ್ ಕಾರು ಕಳ್ಳತನ: ಎಫ್‍ಐಆರ್ ದಾಖಲು

    ದೆಹಲಿ ಸಿಎಂ ಕೇಜ್ರಿವಾಲ್ ಕಾರು ಕಳ್ಳತನ: ಎಫ್‍ಐಆರ್ ದಾಖಲು

    ನವದೆಹಲಿ: ಆಪ್ ನಾಯಕ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೀಲಿ ಬಣ್ಣದ ವ್ಯಾಗನ್ ಆರ್ ಕಾರು ಕಳುವಾಗಿದೆ.

    ದೆಹಲಿಯ ಸಚಿವಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ ನೀಲಿ ಬಣ್ಣದ ಕಾರನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

    ವಿದೇಶಿ ಸ್ನೇಹಿತರೊಬ್ಬರು ಕೇಜ್ರಿವಾಲ್ ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2014ರಲ್ಲಿ  ಪೊಲೀಸರ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಈ ಕಾರಿನಲ್ಲೇ ಕೇಜ್ರಿವಾಲ್ ರಾತ್ರಿ ನಿದ್ದೆಮಾಡಿದ್ದರು. ಆರಂಭದಲ್ಲಿ ಆಪ್ ಪ್ರಚಾರ ಕಾರ್ಯದ ವೇಳೆ ಈ ಕಾರು ಮೂಲಕವೇ ಕೇಜ್ರಿವಾಲ್ ಪ್ರಚಾರಕ್ಕೆ ತೆರಳುತ್ತಿದ್ದರು.

    ಕಾರು ಕಳ್ಳತನ ಪ್ರಕರಣವನ್ನು ಬೇಧಿಸಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.