ವಿಜಯಪುರ: ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಕನ್ನಾಳ ಕ್ರಾಸ್ (Kannal Cross) ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಕಾರಿನಲ್ಲಿ ಐವರು ಸೊಲ್ಲಾಪುರಕ್ಕೆ ಹೋಗಿದ್ದರು. ತಡರಾತ್ರಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತರ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಮತ್ತೆ ಕೋಟಿ ಒಡೆಯನಾದ ಮಾದಪ್ಪ – 30 ದಿನಗಳಲ್ಲಿ 2.29 ಕೋಟಿ ಕಾಣಿಕೆ ಸಂಗ್ರಹ
ಬೆಳಗಾವಿ: ಇನ್ನೂ ಮೂರು ದಿನ ಮಹಿಳಾ ಮತ್ತು ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ.
ಕಾರು ಅಪಘಾತದಿಂದ (Car Accident) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವರ ಆರೋಗ್ಯ ತಪಾಸಣೆ ಬಳಿಕ ಡಾ.ರವಿ ಪಾಟೀಲ್ ಪ್ರತಿಕ್ರಿಯಿಸಿ, 24 ಗಂಟೆಯಲ್ಲಿ ಹೆಬ್ಬಾಳ್ಕರ್ ಆರೋಗ್ಯ ಚೆನ್ನಾಗಿ ಚೇತರಿಕೆ ಕಂಡಿದೆ. ಸಚಿವರ ಬೆನ್ನುಹುರಿ ಪೆಟ್ಟಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದರು.
ವೈದ್ಯರು ಹೇಳಿದ್ದೇನು?
ಹೆಬ್ಬಾಳ್ಕರ್ ಮತ್ತು ಸಹೋದರ ಚನ್ನರಾಜ್ ಇಬ್ಬರೂ ಔಟ್ ಆಫ್ ಡೇಂಜರ್ ಇದ್ದಾರೆ. ಅವರ ಗನ್ ಮ್ಯಾನ್, ಕಾರ್ ಚಾಲಕ ಸಹ ಆರೋಗ್ಯವಾಗಿದ್ದಾರೆ. ಸಚಿವರು ಒಂದು ವಾರ ವಿಶ್ರಾಂತಿ ಪಡೆಯಬೇಕು. ಚನ್ನರಾಜ್ ಅವರಿಗೂ ವಿಶ್ರಾಂತಿ ಪಡೆಯಲು ಸೂಚಿಸಿದ್ದೇವೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಕೇಸ್ – ಅಪರಿಚಿತ ಕಂಟೇನರ್ ಟ್ರಕ್ ವಿರುದ್ಧ ದೂರು
ಮಂಗಳವಾರ ಎಂಆರ್‌ಐ, ಎಕ್ಸ್‌ರೇ ತೆಗೆಸಿ ತಪಾಸಣೆ ಮಾಡಿದ್ದೇವೆ. ಇಂದು ಅವರ ಅವರ ರಕ್ತವನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಸಚಿವರಿಗೆ ಹೈಪ್ರೋಟಿನ್ ಆಹಾರ ಸೇವಿಸಲು ಸಲಹೆ ಕೊಟ್ಟಿದ್ದೇವೆ. ಪನ್ನೀರ್, ಡ್ರೈ ಫ್ರೂಟ್ಸ್ ತೆಗೆದುಕೊಳ್ಳಲು ಹೇಳಿದ್ದೇವೆ.
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಾರು ಅಪಘಾತ ಪ್ರಕರಣದಲ್ಲಿ ಅಪರಿಚಿತ ಕಂಟೇನರ್ ಟ್ರಕ್ ವಿರುದ್ಧ ದೂರು ದಾಖಲಿಸಲಾಗಿದೆ. ಸರ್ಕಾರಿ ಕಾರು ಡ್ರೈವರ್, ಹಿಟ್ & ರನ್ ಕೇಸ್ ದಾಖಲಿಸಿದ್ದಾರೆ.
ಓವರ್‌ಟೇಕ್ ಮಾಡುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಆಯ್ತಾ ಎಂದು ಪ್ರಶ್ನೆ ಮೂಡಿದೆ. ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಿನ್ನೆ ಬೆಳಗ್ಗೆ 5 ಗಂಟೆಗೆ ಕಾರು ಅಪಘಾತ ಸಂಭವಿಸಿತ್ತು.
ದೂರಿನಲ್ಲಿ ಏನಿದೆ?
ನಾನು ಸಚಿವರ ಸರ್ಕಾರಿ ಕಾರು ಏಂ01 ಉಂ977 ಚಲಾಯಿಸುತ್ತಿದ್ದೆ. ಕಾರಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಸಚಿವರ ಅಂಗರಕ್ಷಕ ಈರಪ್ಪ ಹುಣಶಿಕಟ್ಟಿ ಇದ್ದರು. ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದೆವು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಧಾರವಾಡ-ಬೆಳಗಾವಿ ಮಧ್ಯದ ರಾಷ್ಟ್ರೀಯ ಹೆದ್ದಾರಿ 48ರ ಮೇಲಿದ್ದೆವು. ನಮ್ಮ ಮುಂದೆ ಲೈನ್ 1 ರಲ್ಲಿ ಹೋಗುತ್ತಿದ್ದ ಕಂಟೇನರ್ ಟ್ರಕ್ ಚಾಲಕ ಯಾವುದೇ ಮುನ್ಸೂಚನೆ ಕೊಡದೇ ಎಡಬದಿಗೆ ಬಂದ. ಆಗ ಎಡಬದಿಗೆ ತೆಗೆದುಕೊಂಡರೂ ಟ್ರಕ್ ಚಾಲಕ ಕಾರಿನ ಬಲ ಬದಿಗೆ ತಾಗಿಸಿದ.
ಕಾರು ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣ, ಗಂಭೀರ ಗಾಯಗಳಾಗಿವೆ. ಅಪಘಾತ ಮಾಡಿ ವಾಹನ ನಿಲ್ಲಿಸದೇ ಲಾರಿ ಡ್ರೈವರ್ ಹೋಗಿದ್ದಾನೆ ಎಂದು ದೂರು ದಾಖಲಿಸಲಾಗಿದೆ.
ಎಫ್‌ಐಆರ್‌ನಲ್ಲಿ ಎಲ್ಲಿಯೂ ನಾಯಿಗಳು ಅಡ್ಡ ಬಂದ ವಿಚಾರವನ್ನ ಡ್ರೈವರ್ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಕೇಸ್ ದಾಖಲಿಸಿ ಕಿತ್ತೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi Hebbalkar) ಅವರು ಕಾರು ಅಪಘಾತದಲ್ಲಿ ಗಾಯಗಳಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಚಿವೆ ಬೆನ್ನುಮೂಳೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಳಗ್ಗೆ ಸರಿಸುಮಾರು ಆರು ಗಂಟೆಗೆ ಬೆಳಗಾವಿಯ ವಿಜಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವೆ ಲಕ್ಷ್ಮಿ ಅವರಿಗೆ ಬೆನ್ನುಮೂಳೆಯ ಎಲ್1 ಎಲ್4 ಮೂಳೆಯಲ್ಲಿ ಬಲವಾದ ಪೆಟ್ಟಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಚಿವೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಡಾ. ರವಿ ಪಾಟೀಲ ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರಾದ ಸಚಿವೆ
ಸಚಿವರ ಜೊತೆ ಅವರ ಸಹೋದರ, ಗನ್‌ಮ್ಯಾನ್, ಡ್ರೈವರ್ ಬಂದಿದ್ದಾರೆ. ಎಲ್ಲರಿಗೂ ನಾವು ಚಿಕಿತ್ಸೆ ಕೊಟ್ಟಿದ್ದೇವೆ. ಹೆಬ್ಬಾಳ್ಕರ್ ಅವರ ಆರೋಗ್ಯ ಚೇತರಿಕೆ ಆಗ್ತಿದೆ. ಪೇಯ್ನ್ಕಿಲ್ಲರ್ ಇಂಜೆಕ್ಷನ್, ಸಿಟಿ ಸ್ಕ್ಯಾನ್ ಮಾಡಿದ್ದೇವೆ. ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ಬಲವಾದ ಪೆಟ್ಟು ಬೆನ್ನಿನ ಮೂಳೆ ಮುರಿದಿದೆ. ಇನ್ನೆರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡ್ತೀವಿ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ಬಂದ ವೇಳೆ ಸ್ಥಿತಿ ಗಂಭೀರವಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಎಂಆರ್‌ಐ ಸ್ಕ್ಯಾನ್ ಮಾಡಿದ್ದೇವೆ. ಎಲ್1ಎಲ್4 ಮೂಳೆಗೆ ಪೆಟ್ಟಾಗಿದೆ. ಬೆನ್ನಿನ 2 ಮೂಳೆಗಳು ಮುರಿದಿವೆ. ಅವರು 1 ತಿಂಗಳು ಬೆಡ್ ರೆಸ್ಟ್ ಮಾಡಬೇಕು ಎಂದಿದ್ದಾರೆ.
ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಅಫಘಾತಕ್ಕೀಡಾಗಿ (Car Accident) ಯುವ ಪತ್ರಕರ್ತ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಬಳಿ ನಡೆದಿದೆ.
ಮೂಲತಃ ಗುಡಿಬಂಡೆ ನಿವಾಸಿ ಭರತ್ (32) ಮೃತ ದುರ್ದೈವಿ. ಬೆಂಗಳೂರಿನ ಹೊಸದಿಗಂತ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಭರತ್ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲೇ (Bengaluru) ವಾಸವಿದ್ದ ಭರತ್, ವಾರಾಂತ್ಯದ ಹಿನ್ನೆಲೆ ಸ್ವಗ್ರಾಮ ಗುಡಿಬಂಡೆಗೆ ಆಗಮಿಸಿದ್ದರು. ತಡರಾತ್ರಿ ಬಾಗೇಪಲ್ಲಿಗೆ ತೆರಳುವಾಗ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಹಿಂದೂ ಅನ್ನೋದು ಅವಮಾನಕರ ಶಬ್ದ – ಚಿಂತಕ ಕೆ.ಎಸ್ ಭಗವಾನ್ ಮತ್ತೆ ವಿವಾದಾತ್ಮಕ ಹೇಳಿಕೆ
ಮಾಚಹಳ್ಳಿ ಕೆರೆಯ ಏರಿಯ ಮೇಲೆ ಇದ್ದ ದೇವರ ಕಲ್ಲಿನ ಗುಡಿಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ದೇವರ ಗುಡಿಯ ಮೇಲಿನ ಚಪ್ಪಡಿ ಕಲ್ಲು ಕಾರಿನೊಳಗೆ ತೂರಿದೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಭರತ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ – ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಮಳೆ ಅಲರ್ಟ್
ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಭರತ್ 9 ತಿಂಗಳ ಮಗಳ ನಾಮಕರಣ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು. ಆದ್ರೆ ದುರದೃಷ್ಟವಶಾತ್ ಭರತ್ ಸಾವನ್ನಪ್ಪಿದ್ದು ಮೃತನ ಆಗಲಿಕೆಗೆ ಪತ್ರಕರ್ತ ಮಿತ್ರರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಗೋಹತ್ಯೆ ಮಾಡಲು, ಗೋಮಾಂಸ ತಿನ್ನಲು ಅವಕಾಶ ಕೊಡ್ಬೇಕಾ – ಅಶ್ವಥ್ ನಾರಾಯಣ ಪ್ರಶ್ನೆ
ಚಿಕ್ಕಬಳ್ಳಾಪುರ: ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ (Car Accident) ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿ ಸಮೇತ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆ ಬಾವಿ ಬಳಿ ನಡೆದಿದೆ.
ಪಾಂಡಿಚೇರಿಗೆ ಪ್ರವಾಸ ಹೋಗಿ ವಾಪಾಸ್ ಬರ್ತಿದ್ದ ತುಮಕೂರಿನ ಪಾವಗಡದ ರೊಪ್ಪ ಗ್ರಾಮದ ಪವನ್ ಹಾಗೂ ಮಮತಾ ದಂಪತಿ ಸೇರಿದಂತೆ ಅವರ ಮಕ್ಕಳಾದ ವಿಶ್ವಾಸ್ ಹಾಗೂ ಶುಭ್ರತ್ ಗಾಯಗೊಂಡವರು. ಘಟನೆಯಲ್ಲಿ ಓರ್ವ ಮಗನ ಪರಿಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಂಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ!
ಹುಲ್ಲು ಸಾಗಿಸುತ್ತಿದ್ದ ಕ್ಯಾಂಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಹುಲ್ಲು ಹೊತ್ತಿ ಉರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕ್ಯಾಂಟರ್ ಮೂಲಕ 250 ಹೊರೆ ಹುಲ್ಲನ್ನ ವಿಜಯಪುರಕ್ಕೆ ಸಾಗಾಟ ಮಾಡಲಾಗುತ್ತಿದ್ದು ಗ್ರಾಮದಲ್ಲಿ ಹಾದು ಹೋಗುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಹುಲ್ಲು ಹೊತ್ತಿ ಉರಿದು ಬೆಂಕಿಯ ಜೊತೆಗೆ ದಟ್ಟ ಹೊಗೆ ಆವರಿಸಿದೆ. ಅಗ್ನಿಶಾಮಕ ದಳ ಬರುವಷ್ಟರಲ್ಲಿ ಗ್ರಾಮಸ್ಥರು ಮನೆಗಳಲ್ಲಿ ಇದ್ದ ನೀರನ್ನೆಲ್ಲಾ ತಂದು ಬೆಂಕಿ ನಂದಿಸಲು ಹರಸಾಹಪಟ್ಟಿದ್ದಾರೆ.
ಇನ್ನೂ ಶಾಲೆಯ ಪಕ್ಕದಲ್ಲೇ ಘಟನೆ ನಡೆದಿದ್ದು ಕೆಲಕಾಲ ಆತಂಕದ ವಾತವಾರಣವೂ ನಿರ್ಮಾಣವಾಗಿದೆ. ಹೊಗೆಯಿಂದ ಮಕ್ಕಳು ಸಹ ಪರದಾಡಿದ್ದಾರೆ. ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಸರಗಳ್ಳತನ
ನಿನ್ನೆ ವಿಜೃಂಭಣೆಯಿಂದ ನೇರವೇರಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಹಾಗೂ ಬ್ರಹ್ಮರಥೋತ್ಸವದಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರ ನಗರದ ನಿವಾಸಿ ಅಕ್ಕಾಯಮ್ಮ ಎಂಬಾಕೆ ದೇವರ ದರ್ಶನ ಪಡೆದು ವಾಪಾಸ್ ಬರಲು ಬಸ್ ಹತ್ತುವ ವೇಳೆ ಮಹಿಳೆಯ ಮಾಂಗಲ್ಯ ಸರ ಕಳವು ಮಾಡಲಾಗಿದೆ. ಸರಿಸುಮಾರು 40 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಲಾಗಿದೆ ಅಂತ ಅಕ್ಕಾಯಮ್ಮ ಇಂದು ತಡವಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
– ಚಾಲಕನಿಂದ ಜನರ ಮೇಲೆ ಗುಂಡಿನ ದಾಳಿ
– ಅನುಮಾನಾಸ್ಪದ ಸ್ಫೋಟಕ ಸಾಧನ ಪತ್ತೆ
ವಾಷಿಂಗ್ಟನ್: ಹೊಸ ವರ್ಷದ ದಿನದಂದು ದಕ್ಷಿಣ ಅಮೆರಿಕ ನಗರವಾದ ನ್ಯೂ ಓರ್ಲಿಯನ್ಸ್‌ನಲ್ಲಿ (New Orleans In USA) ಜನಸಂದಣಿ ಮೇಲೆ ಪಿಕಪ್ ಟ್ರಕ್ (Pickup truck) ನುಗ್ಗಿದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇತ್ತೀಚೆಗಷ್ಟೇ ಜರ್ಮನಿಯ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಅದೇ ಮಾದರಿಯ ಘಟನೆ ಅಮೆರಿಕದಲ್ಲೂ ನಡೆದಿದೆ. ಅತಿ ವೇಗವಾಗಿ ಟ್ರಕ್ ಚಲಾಯಿಸಿದ ಚಾಲಕ ಅಪಘಾತ ನಡೆದ ಬಳಿಕ ಜನರ ಗುಂಪಿನತ್ತ ಏಕಾಏಕಿ ಗುಂಡು ಹಾರಿಸಿದ್ದು, ಪೊಲೀಸರೊಂದಿಗೂ ಗುಂಡಿನ ಚಕಮಕಿ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇನ್ನೂ ಘಟನೆಯ ದೃಶ್ಯಾವಳಿಗಳನ್ನು ಪ್ರತ್ಯಕ್ಷದರ್ಶಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೊಂದು ಹತ್ಯಾಕಾಂಡ ಎಂದು ಕರೆದಿದ್ದಾರೆ. ಟ್ರಕ್ ಚಾಲಕ ಹತ್ಯಾಕಾಂಡ ನಡೆಸಲೆಂದೇ ಉದ್ದೇಶಪೂರ್ಕವಾಗಿ ದಾಳಿ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ದಿನಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ ದರ್ಶನದೊಂದಿಗೆ ಹೊಸ ವರ್ಷ ಸ್ವಾಗತ!
ಮುಂಬೈ: ಇಲ್ಲಿನ ಕಂಡಿವಲಿಯಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಮರಾಠಿ ನಟಿ (Marathi Actress) ಉರ್ಮಿಳಾ ಕೊಠಾರೆ (Urmila Kothare) ಅವರ ಕಾರು ಹರಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.
ಈ ಕುರಿತು ಅಧಿಕಾರಿಗಳು ಮಾತನಾಡಿ, ನಟಿಯ ಕಾರು ಅತಿವೇಗದಲ್ಲಿದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಪರಿಣಾಮ ಮೆಟ್ರೋ ರೈಲಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ನಟಿ ಉರ್ಮಿಳಾ ಹಾಗೂ ಚಾಲಕ ಕೂಡ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಸದ್ಯ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಅಪಘಾತದಲ್ಲಿ ನಟಿಯ ಕಾರಿಗೆ ಭಾರೀ ಹಾನಿಯಾಗಿದೆ.
ಬರ್ಲಿನ್: ಜರ್ಮನಿಯ ಮ್ಯಾಗ್ಡೆಬರ್ಗ್‌ನ ಕ್ರಿಸ್‍ಮಸ್ ಮಾರುಕಟ್ಟೆಯಲ್ಲಿ (German Christmas Market) ಜನರ ಗುಂಪಿನ ಮೇಲೆ ಕಾರೊಂದು ನುಗ್ಗಿದ (Car Attack_ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೊಂದು ಉದ್ದೇಶಪೂರ್ವಕ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿ ನಡೆಸಿದ ಕಾರು ಚಾಲಕ 50 ವರ್ಷ ವಯಸ್ಸಿನ ವೈದ್ಯನಾಗಿದ್ದು, ಈತ ಮೂಲತಃ ಸೌದಿ ಅರೇಬಿಯಾದವನು (Saudi Man) ಎನ್ನಲಾಗಿದೆ. ಜರ್ಮನಿಯ ಕಾಯಂ ನಿವಾಸಿ ಕಾರ್ಡ್ ಪಡೆದಿದ್ದ. ಸದ್ಯ ಘಟನೆ ಬಳಿಕ ಈತನನ್ನ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಉಕ್ರೇನ್ ಯುದ್ಧ ಸಂಬಂಧ ಟ್ರಂಪ್ ಜೊತೆ ಮಾತುಕತೆಗೆ ಸಿದ್ಧ: ಪುಟಿನ್
ಸದ್ಯಕ್ಕೆ ಆತನೊಬ್ಬನೇ ದಾಳಿಕೋರ ಎಂದು ನಂಬಲಾಗಿದೆ. ನಮಗೆ ತಿಳಿದಂತೆ ಸದ್ಯದಲ್ಲಿ ನಗರಕ್ಕೆ ಬೇರೆ ಯಾವುದೇ ಅಪಾಯ ಇಲ್ಲ ಎಂದು ಸ್ಯಾಕ್ಸೋನಿ-ಅನ್ಹಾಲ್ಟ್ ಗವರ್ನರ್ ರೀನರ್ ಹಸ್ಲೋಫ್ ಸ್ಪಷ್ಟಪಡಿಸಿದ್ದಾರೆ. ಈ ಭಯಾನಕ ದುರಂತದಲ್ಲಿ ಹಲವರು ಸಂತ್ರಸ್ತರಾಗಿದ್ದಾರೆ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ಕಪ್ಪು ಕಾರೊಂದು ಜನದಟ್ಟಣೆಯಿದ್ದ ಕಡೆಗೆ ರಭಸದಿಂದ ನುಗ್ಗಿದೆ. ಭಯಭೀತರಾದ ಜನತೆ ಅಡ್ಡಾದಿಡ್ಡಿಯಾಗಿ ಓಡಿಸಿದ ಪರಿಣಾಮ ದುರಂತ ಸಂಭವಿಸಿರುವುದು ಕಂಡುಬಂದಿದೆ. ಇಡೀ ಘಟನಾವಳಿಯ ವಿಡಿಯೋವನ್ನು ನಾಗರಿಕರೊಬ್ಬರು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ – ಮುಂದಿನ ವರ್ಷದಿಂದಲೇ ಎಲ್ಲಾ ನಾಗರಿಕರಿಗೂ ಫ್ರೀ!
ವಿಜಯಪುರ: ಕಾರು ಮತ್ತು ಕಬ್ಬು ಕಟಾವು ಮಿಷಿನ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೇಭಾವಿ (Bilebhavi) ಕ್ರಾಸ್ ಬಳಿ ನಡೆದಿದೆ.
ಹುಣಸಗಿಯಿಂದ ತಾಳಿಕೋಟೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಮತ್ತು ಕಬ್ಬು ಕಟಾವು ಮಷಿನ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.