Tag: ಕಾರು ಅಪಘಾತ

  • ವಿಜಯಪುರ | ಸಿಂದಗಿ ಶಾಸಕ ಅಶೋಕ್ ಮನಗೂಳಿ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

    ವಿಜಯಪುರ | ಸಿಂದಗಿ ಶಾಸಕ ಅಶೋಕ್ ಮನಗೂಳಿ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

    ವಿಜಯಪುರ: ಜಿಲ್ಲೆಯ ಸಿಂದಗಿ (Sindagi) ಬೈಪಾಸ್ ಬಳಿ ಸಿಂದಗಿ ಶಾಸಕ (Sindagi MLA) ಅಶೋಕ್ ಮನಗೂಳಿ (Ashok Managuli) ಅವರ ಕಾರಿಗೆ ವಾಹನವೊಂದು ಡಿಕ್ಕಿಹೊಡೆದಿದೆ.

    ಶಾಸಕರ ಕಾರಿನಲ್ಲಿ ಅವರ ಪುತ್ರಿ, ಸಹೋದರನ ಮಗ ಪ್ರಯಾಣಿಸುತ್ತಿದ್ದರು. ಈ ವೇಳೆ KA 03 NT 2827 ನಂಬರ್‌ನ ವಿಧಾನಸೌಧ ಪಾಸ್ ಹೊಂದಿರುವ ಇನ್ನೋವಾ ಹೈಕ್ರಾಸ್ ಕಾರಿಗೆ ಹಾಗೂ ಸ್ವಿಫ್ಟ್ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.ಇದನ್ನೂ ಓದಿ: ಲಾಡ್ಜ್‌ನಲ್ಲಿ ಯುವಕ ಅನುಮಾನಾಸ್ಪದ ಸಾವು ಕೇಸ್ – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಿಡ್ನಿ ಫೇಲ್ಯೂರ್ ಪತ್ತೆ

    ಕಲಬುಗಿಯಿಂದ ಸಿಂದಗಿ ಕಡೆಗೆ ಬರ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

  • ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಕಾರು ಅಪಘಾತ

    ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಕಾರು ಅಪಘಾತ

    ರಾಯಚೂರು: ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ್ (Karemma Nayak) ಕಾರು ಅಪಘಾತವಾಗಿರುವ ಘಟನೆ ಲಿಂಗಸುಗೂರು ತಾಲೂಕಿನ ಗುರಗುಂಟಾ ಪಟ್ಟಣದಲ್ಲಿ ನಡೆದಿದೆ.

    ದೇವದುರ್ಗದಿಂದ ಹುಬ್ಬಳ್ಳಿಗೆ ಹೊರಟಿದ್ದ ವೇಳೆ ಅಪಘಾತವಾಗಿದೆ. ಶಾಸಕಿಗೆ ಸಣ್ಣಪುಟ್ಟ ಒಳಪೆಟ್ಟು ಬಿದ್ದಿದ್ದು, ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

    ತಮ್ಮದೇ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಹುಬ್ಬಳ್ಳಿಗೆ ಮೂರು ಕಾರುಗಳು ಹೊರಟಿದ್ದವು. ಮೂರು ಕಾರುಗಳ ಪೈಕಿ ನಡುವಿನ ಕಾರಿನಲ್ಲಿ ಶಾಸಕಿ ಇದ್ದರು. ತಮ್ಮದೇ ಕಾರ್ಯಕರ್ತರೊಂದಿಗೆ ಹುಬ್ಬಳ್ಳಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ.

  • BMW ಕಾರು ಅಪಘಾತಕ್ಕೆ ಹಣಕಾಸು ಸಚಿವಾಲಯದ ಅಧಿಕಾರಿ ಬಲಿ – 24 ಗಂಟೆಗಳಲ್ಲಿ ಚಾಲಕ ಅರೆಸ್ಟ್‌

    BMW ಕಾರು ಅಪಘಾತಕ್ಕೆ ಹಣಕಾಸು ಸಚಿವಾಲಯದ ಅಧಿಕಾರಿ ಬಲಿ – 24 ಗಂಟೆಗಳಲ್ಲಿ ಚಾಲಕ ಅರೆಸ್ಟ್‌

    – ದೆಹಲಿಯ ಕರ್ನಾಟಕ ಭವನದಲ್ಲಿ ಊಟ ಮುಗಿಸಿ ಮನೆಗೆ ತೆರಳುವಾಗ ದುರಂತ

    ನವದೆಹಲಿ: ಬಿಎಂಡಬ್ಲ್ಯೂ ಕಾರು ಡಿಕ್ಕಿಯಾಗಿ (BMW Car Hit) ಹಣಕಾಸು ಸಚಿವಾಲಯದ ಅಧಿಕಾರಿ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 24 ಗಂಟೆಯಲ್ಲೇ ಆರೋಪಿಯನ್ನ (Accused) ಬಂಧಿಸಲಾಗಿದೆ.

    ಬಂಧಿತ ಆರೋಪಿ ಮಹಿಳೆಯನ್ನ ಗಗನ್‌ಪ್ರೀತ್‌ ಕೌರ್‌ (Gaganpreet Kaur) ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ ಬಾಂಗ್ಲಾ ಸಾಹಿಬ್‌ ಗುರುದ್ವಾರದಿಂದ ತಮ್ಮ ಬೈಕ್‌ನಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಿಎಂಡಬ್ಲ್ಯೂ ಕಾರು ಗುದ್ದಿತ್ತು. ಈ ವೇಳೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52) (Navjot Singh) ಸಾವನ್ನಪ್ಪಿದ್ದರು.

    ಇಂದು ಮಧ್ಯಾಹ್ನ ಅಪಘಾತ ಮಾಡಿದ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಅಪರಾಧ, ನರಹತ್ಯೆ, ಸಾಕ್ಷ್ಯ ನಾಶ ಮತ್ತು ದುಡುಕಿನ ಚಾಲನೆ ಪ್ರಕರಣಗಳನ್ನ ದಾಖಲಿಸಲಾಗಿದೆ. ಇದನ್ನೂ ಓದಿ: BMW ಕಾರು ಡಿಕ್ಕಿ – ಭೀಕರ ಅಪಘಾತಕ್ಕೆ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಬಲಿ

    38 ವರ್ಷ ವಯಸ್ಸಿನ ಗಗನ್‌ಪ್ರೀತ್‌ ಕೌರ್‌ 40 ವರ್ಷ ವಯಸ್ಸಿನ ಪರೀಕ್ಷಿತ್‌ ಮಕ್ಕಡ್‌ ಅವರನ್ನ ವಿವಾಹವಾಗಿದ್ದು, ಗುರುಗ್ರಾಮ್‌ನಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಐಷಾರಾಮಿ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದಾರೆ. ಅಪಘಾತ ಸಂದರ್ಭದಲ್ಲಿ ಪತಿ ಪರೀಕ್ಷಿತ್‌ ಮಕ್ಕಡ್‌ ಕೂಡ ಇದ್ದರು, ಈ ಕಾರಣಕ್ಕಾಗಿ ಎಫ್‌ಐಆರ್‌ನಲ್ಲಿ ಇಬ್ಬರ ಹೆಸರನ್ನ ಉಲ್ಲೇಖಿಸಲಾಗಿದೆ.

    ಅಪಘಾತ ಸಂಭವಿಸಿದ್ದು ಎಲ್ಲಿ, ಹೇಗೆ?
    ಮೃತ ನವಜೋತ್ ಸಿಂಗ್ ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ತಮ್ಮ ಪತ್ನಿ ಸಂದೀಪ ಕೌರ್ ಜೊತೆಗೆ ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ನಂತರ ಇಬ್ಬರೂ ಆರ್‌.ಕೆ ಪುರಂನಲ್ಲಿರುವ ಕರ್ನಾಟಕ ಭವನದಲ್ಲಿ ಊಟ ಮಾಡಿ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ನವಜೋತ್‌ ಮತ್ತು ಸಂದೀಪ್ ದಂಪತಿಯನ್ನ ವ್ಯಾನ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಮಗ ಗಗನ್‌ದೀಪ್‌ ಕೂಡ ಜೊತೆಗಿದ್ದರು. ಇದನ್ನೂ ಓದಿ: ʻವಕ್ಫ್ ತಿದ್ದುಪಡಿ ಕಾಯ್ದೆʼಯ ಕೆಲ ಅಂಶಗಳಿಗೆ ಸುಪ್ರೀಂ ತಡೆ; ಒಟ್ಟಾರೆ ಕಾಯ್ದೆ ಕಾನೂನು ಬದ್ಧವಾಗಿದೆ ಎಂದು ಆದೇಶ

    ಪತ್ನಿ ಆರೋಪ ಏನು?
    ನಾನು ಗಗನ್‌ಪ್ರೀತ್‌ಗೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳುತ್ತಲೇ ಇದ್ದೆ. ವ್ಯಾನ್‌ ಚಾಲಕನಿಗೂ ಮನವಿ ಮಾಡಿದೆ. ಆದ್ರೆ ಅಪಘಾತ ಸ್ಥಳದಿಂದ 19 ಕಿಮೀ ದೂರದಲ್ಲಿ ಜಿಟಿಬಿ ನಗರದಲ್ಲಿರುವ ನುಲೈಫ್‌ ಆಸ್ಪತ್ರೆಗೆ ಕರೆದೊಯುವಂತೆ ಆಕೆ ಹೇಳಿದಳು. ಇದರಿಂದಾಗಿ ನನ್ನಪತಿ ಸಾವನ್ನಪ್ಪಿದ್ದಾರೆ ಎಂದು ಮೃತ ನವಜೋತ್‌ ಪತ್ನಿ ಸಂದೀಪ ಕೌರ್ ಹೇಳಿದ್ದಾರೆ. ಇದನ್ನೂ ಓದಿ: ಕೆಲ ವಿಷಯಗಳು ಕ್ರೀಡಾ ಮನೋಭಾವಕ್ಕಿಂತಲೂ ದೊಡ್ಡದು – ಕೈಕುಲುಕದ್ದಕ್ಕೆ ಸೂರ್ಯ ಸ್ಪಷ್ಟನೆ

  • ಕಾರು-ಬಸ್ ನಡ್ವೆ ಭೀಕರ ಅಪಘಾತ; ತಂದೆ-ಮಗ ಸ್ಥಳದಲ್ಲೇ ಸಾವು

    ಕಾರು-ಬಸ್ ನಡ್ವೆ ಭೀಕರ ಅಪಘಾತ; ತಂದೆ-ಮಗ ಸ್ಥಳದಲ್ಲೇ ಸಾವು

    ಕಲಬುರಗಿ: ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ (Road Accident) ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರ ಕೆ ಗ್ರಾಮದ ಬಳಿ ಇಂದು ಸಂಜೆ ನಡೆದಿದೆ.

    ಸೋಮಶೇಖರ್ (55), ಪ್ರಕಾಶ್ (28) ಮೃತ ದುರ್ದೈವಿಗಳಾಗಿದ್ದು, ಮೃತರು ಬಾಗಲಕೋಟೆ (Bagalakote) ಜಿಲ್ಲೆಯವರಾಗಿದ್ದು, ಕಾರಿನಲ್ಲಿದ್ದ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್‌ ಜಾಮ್‌ – ಆಸ್ಪತ್ರೆಗೆ ಸಾಗಿಸಲಾಗದೇ ಅಂಬುಲೆನ್ಸ್‌ನಲ್ಲೇ ಮಹಿಳೆ ಸಾವು

    ಕಲಬುರಗಿ (Kalaburagi) ಕಡೆಯಿಂದ ಬಾಗಲಕೋಟೆಯ ಬಿಳಗಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿಗೆ ಬಂದ ಎನ್‌ಇಕೆಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಮತಗಳ್ಳತನ ಆರೋಪ: ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

    ಇನ್ನೂ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಕುಳಿತಿದ್ದ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸೋಮಶೇಖರ್ ಪತ್ನಿ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಗಾಣಗಾಪುರ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ʻಎಲ್ಲರ ಬಾಸ್‌ ನಾವೇʼ ಅನ್ನೋರು ಭಾರತದ ಬೆಳವಣಿಗೆ ಸಹಿಸುತ್ತಿಲ್ಲ – ಟ್ರಂಪ್‌ಗೆ ರಾಜನಾಥ್‌ ಸಿಂಗ್‌ ಗುದ್ದು

  • ಅಮೆರಿಕದಲ್ಲಿ ಕಾರು ಅಪಘಾತ; ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರ ಮೃತದೇಹ ಪತ್ತೆ

    ಅಮೆರಿಕದಲ್ಲಿ ಕಾರು ಅಪಘಾತ; ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರ ಮೃತದೇಹ ಪತ್ತೆ

    ವಾಷಿಂಗ್ಟನ್: ಪಶ್ಚಿಮ ವರ್ಜೀನಿಯಾದ ಆಧ್ಯಾತ್ಮಿಕ ಸ್ಥಳಕ್ಕೆ ಹೋಗುವ ಮಾರ್ಗಮಧ್ಯೆ ನಾಪತ್ತೆಯಾಗಿದ್ದ ನ್ಯೂಯಾರ್ಕ್ನ ಒಂದೇ ಕುಟುಂಬದ ಭಾರತೀಯ ಮೂಲದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.

    ಮೃತರನ್ನು ಆಶಾ ದಿವಾನ್ (85), ಕಿಶೋರ್ ದಿವಾನ್ (89), ಶೈಲೇಶ್ ದಿವಾನ್ (86) ಮತ್ತು ಗೀತಾ ದಿವಾನ್ (84) ಎಂದು ಗುರುತಿಸಲಾಗಿದೆ.

    ಕುಟುಂಬವು ಬಫಲೋದಿಂದ ಪಶ್ಚಿಮ ವರ್ಜೀನಿಯಾದ ಮಾರ್ಷಲ್ ಕೌಂಟಿಯಲ್ಲಿರುವ ಪ್ರಭುಪಾದರ ಪ್ಯಾಲೇಸ್ ಆಫ್ ಗೋಲ್ಡ್ಗೆ ಟೊಯೊಟಾ ಕ್ಯಾಮ್ರಿಯಲ್ಲಿ ನ್ಯೂಯಾರ್ಕ್ ಪರವಾನಗಿ ಪ್ಲೇಟ್ ಇಏW2611 ಅನ್ನು ಹೊಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನ್ಯೂಯಾರ್ಕ್ನ ಬಫಲೋದಿಂದ ನಾಪತ್ತೆಯಾಗಿದ್ದ ನಾಲ್ವರು, ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾರ್ಷಲ್ ಕೌಂಟಿ ಶೆರಿಫ್ ಮೈಕ್ ಡೌಘರ್ಟಿ ದೃಢಪಡಿಸಿದ್ದಾರೆ.

    ಶನಿವಾರ ರಾತ್ರಿ 9:30 ರ ಸುಮಾರಿಗೆ (ಸ್ಥಳೀಯ ಸಮಯ) ಬಿಗ್ ವೀಲಿಂಗ್ ಕ್ರೀಕ್ ರಸ್ತೆಯ ಕಡಿದಾದ ಒಡ್ಡಿನಲ್ಲಿ ಮೃತದೇಹಗಳು ಮತ್ತು ಅಪಘಾತಕ್ಕೀಡಾದ ವಾಹನ ಪತ್ತೆಯಾಗಿದೆ ಎಂದು ಶೆರಿಫ್ ತಿಳಿಸಿದ್ದಾರೆ.

    ಹಿರಿಯ ನಾಗರಿಕರು ಕೊನೆಯ ಬಾರಿಗೆ ಜು.29 ರಂದು ಪೆನ್ಸಿಲ್ವೇನಿಯಾದ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ. ಬರ್ಗರ್ ಕಿಂಗ್ ಔಟ್‌ಲೆಟ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗುಂಪಿನ ಇಬ್ಬರು ಸದಸ್ಯರು ರೆಸ್ಟೋರೆಂಟ್‌ಗೆ ಪ್ರವೇಶಿಸುತ್ತಿರುವುದು ಕಂಡುಬAದಿದೆ. ಅವರ ಕೊನೆಯ ಕ್ರೆಡಿಟ್ ಕಾರ್ಡ್ ವಹಿವಾಟು ಸಹ ಅದೇ ಸ್ಥಳದಲ್ಲಿ ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಸರಯೂ ನದಿಗೆ ಬಿದ್ದ ಕಾರು – ದೇವಸ್ಥಾನಕ್ಕೆ ಹೊರಟ್ಟಿದ್ದ 11 ಜನ ಮಸಣಕ್ಕೆ; ಮೋದಿ ಸಂತಾಪ

    ಸರಯೂ ನದಿಗೆ ಬಿದ್ದ ಕಾರು – ದೇವಸ್ಥಾನಕ್ಕೆ ಹೊರಟ್ಟಿದ್ದ 11 ಜನ ಮಸಣಕ್ಕೆ; ಮೋದಿ ಸಂತಾಪ

    – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ

    ಲಕ್ನೋ: ಬೊಲೆರೊ ಕಾರು ಸರಯೂ ನದಿಗೆ (Saryu canal) ಬಿದ್ದು 11 ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ಸಂಭವಿಸಿದೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ .

    ಉತ್ತರ ಪ್ರದೇಶದ ಗೊಂಡಾಯಲ್ಲಿ (Gonda) ಘಟನೆ ನಡೆದಿದೆ. ಮೃತರು ಸಿಹಗಾಂವ್‌ನಿಂದ ಖರ್ಗುಪುರದ ಪೃಥ್ವಿನಾಥ ದೇವಸ್ಥಾನದಲ್ಲಿ (Prithvi Nath Temple) ಪ್ರಾರ್ಥನೆ ಸಲ್ಲಿಸಲು ಹಾಗೂ ಪವಿತ್ರ ನೀರು ಅರ್ಪಿಸಲು ಬೊಲೆರೊ ಕಾರಿನಲ್ಲಿ ಹೊರಟಿದ್ದರು. ಬೆಲ್ವಾ ಬಹುತಾ ಬಳಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಚಾಲಕ ಸೇರಿದಂತೆ 15 ಜನರಿದ್ದ ಕಾರು ಸರಯೂ ನದಿಗೆ ಬಿದ್ದಿದೆ. ಇದನ್ನೂ ಓದಿ: ಜಾಮೀನಿನ ಮೇಲೆ ಹೊರಗೆ ಬಂದು ಸಂತ್ರಸ್ತೆಗೆ ಗುಂಡು ಹಾರಿಸಿದ ರೇಪ್‌ ಆರೋಪಿ

    ಕಾರು ನದಿಗೆ ಬೀಳುತ್ತಿದ್ದಂತೆ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಆನಂತರ ಗ್ರಾಮಸ್ಥರು ಮತ್ತು ರಕ್ಷಣಾ ತಂಡದ ಸಹಾಯದಿಂದ 11 ಮೃತದೇಹಗಳನ್ನ ಹೊರತೆಗೆದಿದ್ದಾರೆ. ಇನ್ನುಳಿದ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆಯ ತನಿಖೆ ಪ್ರಾರಂಭವಾಗಿದೆ.

    ಪಿಎಂ, ಸಿಎಂ ಸಂತಾಪ
    ಘಟನೆ ಕುರಿಯು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: 77ನೇ ವಸಂತಕ್ಕೆ ಕಾಲಿಟ್ಟ ಸಿದ್ದರಾಮಯ್ಯಗೆ ಕನ್ನಡದಲ್ಲೇ ಶುಭ ಹಾರೈಸಿದ ತಮಿಳುನಾಡು ಸಿಎಂ

  • ಅಮೆರಿಕದಲ್ಲಿ ಟ್ರಕ್, ಕಾರು ನಡುವೆ ಅಪಘಾತ – ಭಾರತ ಮೂಲದ ನಾಲ್ವರು ಸಜೀವ ದಹನ

    ಅಮೆರಿಕದಲ್ಲಿ ಟ್ರಕ್, ಕಾರು ನಡುವೆ ಅಪಘಾತ – ಭಾರತ ಮೂಲದ ನಾಲ್ವರು ಸಜೀವ ದಹನ

    ವಾಷಿಂಗ್ಟನ್: ಅಮೆರಿಕದಲ್ಲಿ (America) ಕಾರು ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಭಾರತ ಮೂಲದ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಸೋಮವಾರ ನಡೆದಿದೆ.

    ಗ್ರೀನ್ ಕೌಂಟಿಯಲ್ಲಿ (Green County) ಸಂಭವಿಸಿದ ಅಪಘಾತದಲ್ಲಿ ಭಾರತದ ಹೈದರಾಬಾದ್ (Hyderabad) ಮೂಲದ ತೇಜಸ್ವಿನಿ, ವೆಂಕಟ್ ಮತ್ತು ಅವರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶಾಲಾ ವಾಹನಕ್ಕೆ ರೈಲು ಡಿಕ್ಕಿ – 3 ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ

    ಅಮೆರಿಕದ ಡಲ್ಲಾಸ್‌ನಲ್ಲಿ (Dallas) ವಾಸವಿದ್ದ ಕುಟುಂಬವು ರಜೆಯ ನಿಮಿತ್ತ ಕಳೆದ ವಾರ ಅಟ್ಲಾಂಟಾದಲ್ಲಿದ್ದ ಸಂಬಂಧಿಕರ ಮನೆಗೆ ತೆರಳಿತ್ತು. ಸೋಮವಾರ ಅಟ್ಲಾಂಟಾದಿಂದ ಡಲ್ಲಾಸ್‌ಗೆ ಹಿಂತಿರುತ್ತಿದ್ದ ವೇಳೆ ಟ್ರಕ್, ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಕಾರಿನಲ್ಲಿದ್ದ ನಾಲ್ವರು ಸಜೀವ ದಹನವಾಗಿದ್ದಾರೆ. ಇದನ್ನೂ ಓದಿ: ನಾನು ಆಗಲೇ ಹೋಗಿಲ್ಲ, ಈಗ ಯಾಕೆ ಹೋಗಲಿ? – ಆಪ್ತರ ಬಳಿ ಸಿಎಂ ಮನದ ಮಾತು

    ಮೃತರ ಗುರುತುಗಳನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಪತ್ತೆ ಮಾಡಿದ ಬಳಿಕ ಮೃತರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಮದುವೆ ದಿಬ್ಬಣಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತ – ವರ ಸೇರಿ 8 ಮಂದಿ ದುರ್ಮರಣ

    ಮದುವೆ ದಿಬ್ಬಣಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತ – ವರ ಸೇರಿ 8 ಮಂದಿ ದುರ್ಮರಣ

    ಲಕ್ನೋ: ಮದುವೆ ದಿಬ್ಬಣಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ವರ ಸೇರಿದಂತೆ 8 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಸಂಭಾಲ್‌ ಜಿಲ್ಲೆಯಲ್ಲಿ ನಡೆದಿದೆ.

    ಬೊಲೆರೊ ಎಸ್‌ಯುವಿ ಕಾರು ಕಾಲೇಜಿನ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 24 ವರ್ಷದ ವರ ಸೇರಿದಂತೆ ಒಂದೇ ಕುಟುಂಬದ ಎಂಟು ಸದಸ್ಯರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಲೇಡಿಸ್ ಬಾರ್‌ಗಳಲ್ಲಿ ನಿಯಮ ಉಲ್ಲಂಘನೆ – ಪ್ರತಿದಿನ ಸಿಸಿಟಿವಿ ಫೂಟೇಜ್ ಕೊಡುವಂತೆ ಸಿಸಿಬಿ ರೂಲ್ಸ್

    ಬೆಳಗ್ಗೆ 6:30 ರ ಸುಮಾರಿಗೆ ಜೇವಾನೈ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಜನತಾ ಇಂಟರ್ ಕಾಲೇಜು ಬಳಿ ಚಾಲಕನ ನಿಯಂತ್ರಣ ತಪ್ಪಿದಾಗ ಬೊಲೆರೊ ಕಾರು ಅತಿ ವೇಗದಲ್ಲಿ ಚಲಿಸುತ್ತಿತ್ತು ಎಂದು ವರದಿಯಾಗಿದೆ. ವಾಹನವು ಗೋಡೆಗೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾಗಿದೆ.

    ವಾಹನದಲ್ಲಿ ಹತ್ತು ಜನರು ಇದ್ದರು. ಅವರೆಲ್ಲರೂ ಒಂದೇ ಕುಟುಂಬದ ಸದಸ್ಯರು. ಮದುವೆ ಸಮಾರಂಭಕ್ಕೆ ಹೋಗುತ್ತಿದ್ದರು. ಸ್ಥಳದಲ್ಲೇ ಮೃತಪಟ್ಟವರಲ್ಲಿ ವರ ಸೂರಜ್ ಕೂಡ ಸೇರಿದ್ದಾರೆ. ಸಂಭಾಲ್‌ನ ಹರ್ ಗೋವಿಂದಪುರ ಗ್ರಾಮದಿಂದ ನೆರೆಯ ಬುಡೌನ್ ಜಿಲ್ಲೆಯ ಸಿರ್ತೌಲ್‌ನಲ್ಲಿರುವ ವಧುವಿನ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಇದನ್ನೂ ಓದಿ: ಬಿಹಾರದಲ್ಲಿ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

    ಅಪಘಾತದ ತೀವ್ರತೆಗೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡಿದ್ದ ಇತರ ಮೂವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬದುಕುಳಿದ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರನ್ನು ಅಲಿಘರ್‌ನ ಉನ್ನತ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಗಿದೆ.

    ವರ ಸೂರಜ್ (24), ವರನ ಅತ್ತಿಗೆ ಆಶಾ (26), ಆಶಾ ಅವರ ಮಗಳು ಐಶ್ವರ್ಯ (2), ಮನೋಜ್ ಅವರ ಮಗ ವಿಷ್ಣು (6), ಮತ್ತು ವರನ ಚಿಕ್ಕಮ್ಮ ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ.

  • ಗುದ್ದಿದ ರಭಸಕ್ಕೆ ತುಂಡಾಗಿ ವಿದ್ಯುತ್‌ ಕಂಬವನ್ನೇ 50 ಅಡಿ ದೂರಕ್ಕೆ ದೂಡಿದ ಕಾರು!

    ಗುದ್ದಿದ ರಭಸಕ್ಕೆ ತುಂಡಾಗಿ ವಿದ್ಯುತ್‌ ಕಂಬವನ್ನೇ 50 ಅಡಿ ದೂರಕ್ಕೆ ದೂಡಿದ ಕಾರು!

    – ಏರ್ ಬ್ಯಾಗ್‌ನಿಂದ ಚಾಲಕ ಪಾರು

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಕಂಬವನ್ನು ಸುಮಾರು 50 ಅಡಿಗಳಷ್ಟು ದೂರ ಎಳೆದೊಯ್ದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ವಸ್ತಾರೆ ಗ್ರಾಮದಲ್ಲಿ ನಡೆದಿದೆ.

    ಚಿಕ್ಕಮಗಳೂರು ನೋಂದಣಿಯ ಸೆಲೋರಿಯಾ ಕಾರು ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಕಿತ್ತು ಕಾರಿನ ಮೇಲೆ ಮುರಿದು ಬಿದ್ದಿದೆ. ಅತಿ ವೇಗದ ಪರಿಣಾಮ, ಕಂಬವನ್ನು ಸುಮಾರು 50 ಅಡಿಗಳಷ್ಟು ದೂರ ಕಾರು ಎಳೆದೊಯ್ದಿದೆ. ಇದನ್ನೂ ಓದಿ: ಹೆಣ್ಣು ಹೂವಿನಂತೆ – ಇರಾನ್‌ ಸುಪ್ರೀಂ ನಾಯಕನ ಹಳೆಯ ಪೋಸ್ಟ್‌ ವೈರಲ್‌

    ವಿದ್ಯುತ್ ಕಂಬಕ್ಕೆ ಹಾಕಿದ್ದ ಗ್ರೌಂಡಿಂಗ್ ವೈರ್ ಕೂಡ ಕಿತ್ತು ಬಂದಿರೋದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಅಪಘಾತವಾಗುತ್ತಿದ್ದಂತೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡ ಪರಿಣಾಮ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಸಾಗರದ `ಕೈ’ ಮುಖಂಡ ಟಿಪ್ ಟಾಪ್ ಬಷೀರ್ ಮನೆ ಮೇಲೆ ಇಡಿ ದಾಳಿ

    ಕಾರು ಕಂಬಕ್ಕೆ ಡಿಕ್ಕಿ ಆಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿರುವುದು ದೊಡ್ಡ ಅನಾಹುತ ತಪ್ಪಿದೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಂಟೆಗೆ 192 ಕಿಮೀ ವೇಗದಲ್ಲಿ ಕಾರು ಚಾಲನೆ- `ಕೈ’ ಮುಖಂಡ ಸೇರಿ ಇಬ್ಬರು ದುರ್ಮರಣ

    ಗಂಟೆಗೆ 192 ಕಿಮೀ ವೇಗದಲ್ಲಿ ಕಾರು ಚಾಲನೆ- `ಕೈ’ ಮುಖಂಡ ಸೇರಿ ಇಬ್ಬರು ದುರ್ಮರಣ

    – ಇನ್ನಿಬ್ಬರ ಸ್ಥಿತಿ ಗಂಭೀರ

    ಮಂಗಳೂರು: ಕುಡಿದು ಅತೀ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದು ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕಾಂಗ್ರೆಸ್ (Congress) ಮುಖಂಡ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರಿನ (Mangaluru) 66ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಘಟನೆಯಲ್ಲಿ NSUI ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ, ಕದ್ರಿ ನಿವಾಸಿ ಅಮನ್ ರಾವ್ ಸಾವನ್ನಪ್ಪಿದ್ದು, ವಂಶಿ ಮತ್ತು ಆಶಿಕ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: ರಾಜಕೀಯ ಮಾತಾಡ್ಬಾರದು ಅಂತ ಯಾವಾಗಿನಿಂದ ಜಾರಿಯಾಗಿದೆ? – ನೋಟಿಸ್‌ಗೆ ಚಕ್ರವರ್ತಿ ಸೂಲಿಬೆಲೆ ಕಿಡಿ

    ಜೂ.17ರಂದು ಐದು ಜನ ಸೇರಿ ಮಧ್ಯರಾತ್ರಿವರೆಗೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಳಿಕ ಗಂಟೆಗೆ 192 ಕಿ.ಮೀ ವೇಗದಲ್ಲಿ ತಲಪಾಡಿಯಿಂದ ಮಂಗಳೂರಿಗೆ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ಹೆದ್ದಾರಿಯಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಫೋಕ್ಸ್ ವೇಗನ್ ಕಾರು ಅಪ್ಪಚ್ಚಿಯಾಗಿದೆ.

    ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಓವರ್ ಸ್ಪೀಡ್ ಮತ್ತು ಡ್ರಿಂಕ್ ಅಂಡ್ ಡ್ರೈವ್ ಅಪಘಾತಕ್ಕೆ ಕಾರಣ ಎಂದು ತಿಳಿಸಿದ್ದಾರೆ.

    ಸದ್ಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಮಹಿಳೆ ಸಾವು – ಮಣಿಪುರ ಮತ್ತೆ ಉದ್ವಿಗ್ನ