Tag: ಕಾರಾವಾರ

  • ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್‌ ಕಥೆ ಕಟ್ಟಿದ್ಳು – ಬಾಲಕಿ ಮಾಸ್ಟರ್‌ಮೈಂಡ್‌ಗೆ ಪೊಲೀಸರೇ ಶಾಕ್‌

    ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್‌ ಕಥೆ ಕಟ್ಟಿದ್ಳು – ಬಾಲಕಿ ಮಾಸ್ಟರ್‌ಮೈಂಡ್‌ಗೆ ಪೊಲೀಸರೇ ಶಾಕ್‌

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳೆ ದಾಂಡೇಲಿಯಲ್ಲಿ ಬೆಳ್ಳಂಬೆಳಗ್ಗೆ ಶಾಲೆಗೆ ಹೋದ ವಿದ್ಯಾರ್ಥಿನಿ ಕಾಣೆಯಾಗಿದ್ದು, ನಂತರ ಸಂಬಂಧಿಕರ ಮನೆಗೆ ಬಂದ ಬಾಲಕಿ ತನ್ನನ್ನು ಅಪಹರಣ ಮಾಡಿ ವ್ಯಾನಿನಲ್ಲಿ ಹೊತ್ತೊಯ್ದಿದ್ದರು. ನಾನು ತಪ್ಪಿಸಿಕೊಂಡು ಬಂದೆ ಎಂದು ಹೇಳುತ್ತಿದ್ದಂತೆ ಈ ಸುದ್ದಿ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ಲದೇ ನಗರ ಭಾಗದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಗುಸು-ಗುಸು ಹರಿದಾಡಿತ್ತು.

    ನಂತರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ದಾಂಡೇಲಿ ಪೊಲೀಸರು ಕೊನೆಗೂ ಬೇಧಿಸುವಲ್ಲಿ ಯಶಸ್ವಿಯಾಗಿದ್ದು ಬಾಲಕಿ ಹೇಳಿದ ಕಥೆ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಇದನ್ನೂ ಓದಿ: ಮೋದಿ ಅತ್ಯಾಚಾರಿಗಳ ಪರವಾಗಿದ್ದಾರೆ – ರಾಹುಲ್ ಗಾಂಧಿ ಕಿಡಿ

    POLICE JEEP

    ಬಾಲಕಿ ಹೇಳಿದ್ದೇನು? ನಡೆದಿದ್ದು ಏನು?
    ಪರೀಕ್ಷೆಗೆ ಭಯಪಟ್ಟ ವಿದ್ಯಾರ್ಥಿನಿಯೋರ್ವಳು ಅಪಹರಣದ ಕಥೆ ಹೆಣೆದು ಅದನ್ನು ಎಲ್ಲರಿಗೂ ನಂಬಿಸಿ ಬಿಟ್ಟಿದ್ದಾಳೆ. ಸೋಮವಾರದಿಂದ ದಸರಾ ರಜೆ ಮುಗಿದು ಸರ್ಕಾರಿ ಶಾಲೆಗಳು ಆರಂಭವಾಗಿವೆ. ಹಳೆದಾಂಡೇಲಿ ಭಾಗದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 12 ವರ್ಷದ ವಿದ್ಯಾರ್ಥಿನಿ ಶಾಲೆಗೆ ಹೋಗಲು ಮನಸ್ಸಿಲ್ಲದೆ, ಮುಂದೆ ನಡೆಯಲಿದ್ದ ಪರೀಕ್ಷೆಗೆ ಹೆದರಿ ಅಪಹರಣದ ಕಥೆಯನ್ನೇ ಕಟ್ಟಿ ಒಂದಿಷ್ಟು ಕಾಲ ಅವಾಂತರ ಸೃಷ್ಟಿಸಿದ್ದಾಳೆ.

    ಮನೆಯಿಂದ ಶಾಲಾ ಸಮವಸ್ತ್ರ ಧರಿಸಿ ಬಂದ ಈ ವಿದ್ಯಾರ್ಥಿನಿ ನೇರವಾಗಿ ಶಾಲೆಗೆ ಹೋಗದೇ ಕಿತ್ತೂರು ಚನ್ನಮ್ಮ ರಸ್ತೆಯವರೆಗೂ ಹೋಗಿ ಅಲ್ಲೇ ಪಕ್ಕದಲ್ಲೇ ಇರುವ ಮಿರಾಶಿ ಗಲ್ಲಿಯ ತನ್ನ ಅತ್ತೆಯ ಮನೆ ಸೇರಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಯ ಅತ್ತೆಯ ಮನೆಯವರು ವಿಚಾರಿಸಿದಾಗ ತನ್ನನ್ನು ಮಾರುತಿ ವ್ಯಾನ್‍ನಲ್ಲಿ ಬಂದ ಯಾರೋ ಇಬ್ಬರು ಕಿಡ್ನ್ಯಾಪ್ ಮಾಡಿದ್ದರು. ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ವಾಹನವನ್ನು ನಿಲ್ಲಿಸಿದಾಗ ನಾನು ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಕಥೆಯನ್ನ ಕಟ್ಟಿದ್ದಾಳೆ.

    ನಂತರ ಆ ವಿದ್ಯಾರ್ಥಿನಿಯ ಸಂಬಂಧಿಕರು ಈ ವಿಷಯವನ್ನು ಆಕೆಯ ಪಾಲಕರಿಗೆ ತಿಳಿಸಿದ್ದಾರೆ. ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಲಕರು ಸಹ ತಮ್ಮ ಮಗಳ ಮಾತನ್ನು ನಂಬಿ ಅಪಹರಣಕಾರರು ಬಂದು ನಮ್ಮ ಮಗಳನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದಾರೆ. ಅಪಹರಣದ ಈ ಸುದ್ದಿ ಕಾಡ್ಗಿಚ್ಚಿನಂತೆ ನಗರದ ತುಂಬಾ ದಾಂಡೇಲಿಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಹರಡಿದೆ. ಇದನ್ನೂ ಓದಿ: ನನ್ನನ್ನು ಪ್ಯಾಕೇಜ್ ಸ್ಟಾರ್ ಅನ್ನೋರಿಗೆ ಚಪ್ಪಲೀಲಿ ಹೊಡೀತೀನಿ: ಪವನ್ ಕಲ್ಯಾಣ್ ಆನ್ ಫೈಯರ್

    ನಂತರ ಪೊಲೀಸರು ಕೂಡ ಘಟನೆಯ ಬಗ್ಗೆ ತಲೆಕೆಡಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ. ವಿದ್ಯಾರ್ಥಿನಿಯನ್ನು ಕರೆದುಕೊಂಡು ನೀನು ಯಾವ ದಾರಿಯಲ್ಲಿ ಹೋಗುತ್ತಿದ್ದೆ. ಎಲ್ಲಿಂದ ಕಿಡ್ನಾಪ್ ಮಾಡಿದರು ಎಂಬ ಮಾಹಿತಿಯನ್ನು ಪಡೆಯುತ್ತಾ ಹೋಗಿದ್ದಾರೆ. ಅಲ್ಲಿಯೂ ಆ ವಿದ್ಯಾರ್ಥಿನಿ ಅಪಹರಣವಾಯಿತೆಂಬುದನ್ನೇ ನಂಬಿಸುತ್ತಾ ಹೋಗಿದ್ದಾಳೆ.

    ಸತ್ಯ ಗೊತ್ತಾಗಿದ್ದು ಹೇಗೆ?
    ಆಕೆ ಹೋದ ಹಾಗೂ ನಿಂತ ಮತ್ತು ತಪ್ಪಿಸಿಕೊಂಡ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ಯಾವ ಸಿಸಿ ಕ್ಯಾಮೆರಾಗಳಲ್ಲಿಯೂ ಕೂಡ ಆಕೆಯ ಚಲನವಲನಗಳಾಗಲಿ ಅಥವಾ ಮಾರುತಿ ವ್ಯಾನ್ ಆಗಲಿ ನಿಂತ ಬಗ್ಗೆ ಸುಳಿವು ಸಿಗಲಿಲ್ಲ. ಮತ್ತೆ, ಮತ್ತೆ ವಿದ್ಯಾರ್ಥಿನಿಯನ್ನು ಪ್ರಶ್ನಿಸಿದಾಗ ಆಕೆ ಅದೇ ಕತೆ ಹೇಳುತ್ತಿದ್ದಳು. ಹೀಗಾಗಿ ಪೊಲೀಸರಿಗೆ ಈ ಬಗ್ಗೆ ಅನುಮಾನ ವ್ಯಕ್ತವಾಗಿದೆ. ನಂತರ ಆಕೆಯನ್ನು ಪುಸಲಾಯಿಸಿ ಕೇಳಿದಾಗ ಆಕೆ ನಡೆದಿರುವ ಸತ್ಯವನ್ನು ಒಪ್ಪಿಕೊಂಡು ಶಾಲೆ ಆರಂಭವಾದ ದಿನ ಹಾಗೂ ಪರೀಕ್ಷೆಗೆ ಅಂಜಿ ತಾನು ಈ ರೀತಿ ಮಾಡಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ. ಕೊನೆಗೂ ಈ ಅಪಹರಣದ ರಹಸ್ಯ ಹೊರಬಂದಿದ್ದು, ನಗರದಲ್ಲಿ ಹಬ್ಬಿದ್ದ ಮಕ್ಕಳ ಕಳ್ಳರ ವದಂತಿಗೆ ತೆರೆ ಬಿದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ದಾಳಿ – 470 ಲೀಟರ್ ಮದ್ಯ, ಕಾರ್ ವಶ

    ಪೊಲೀಸ್ ದಾಳಿ – 470 ಲೀಟರ್ ಮದ್ಯ, ಕಾರ್ ವಶ

    ಕಾರಾವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಣಗಾ ಘಟ್ಟದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಈ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

    ಬಾಂಡಿಶಟ್ಟಾ ಮೂಲದ ಕಾರವಾರ ಬಂದರು ಇಲಾಖೆಯ ಕಾರ್ ಚಾಲಕನಾಗಿದ್ದ ವಿನಯ್ ಶಾಂತನಾಗೇಕರ್ ಬಂಧಿತ ಆರೋಪಿ. ಡಿಸಿಬಿ ಇನ್ಸ್ ಪೆಕ್ಟರ್ ಶರಣಗೌಡರವರು ಖಚಿತ ಮಾಹಿತಿ ಆಧಾರದಲ್ಲಿ ಅಕ್ರಮವಾಗಿ ಗೋವಾದಿಂದ ಹೊನ್ನಾವರಕ್ಕೆ ಸಾಗಿಸುತಿದ್ದಾಗ ದಾಳಿ ನಡೆಸಿದ್ದಾರೆ.

    ಈ ವೇಳೆ ಜಲ್ಲಾ ಡಿ.ಸಿ.ಬಿ ಪೊಲೀಸರು ಒಂದು ಲಕ್ಷ ಮೌಲ್ಯದ 470 ಲೀಟರ್ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ಒಂದು ಲಕ್ಷ ಮೌಲ್ಯದ ಕಾರನ್ನು ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯ ಮೇಲೆ ಈ ಹಿಂದೆ ಬಂದರು ಇಲಾಖೆಯ ವಾಹನವನ್ನು ಕಳವು ಮಾಡಿ ಮದ್ಯ ಸಾಗಿಸುತಿದ್ದ ದೂರು ಹಾಗೂ ಅಕ್ರಮ ಮದ್ಯ ಸಾಗಟದ ಪ್ರಕರಣಗಳು ದಾಖಲಾಗಿತ್ತು ಎಂದು ತಿಳಿದು ಬಂದಿದೆ.

    ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ – ರಹಸ್ಯ ಬಿಚ್ಚಿಟ್ಟ ಪೇಜಾವರ ಶ್ರೀ

    ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ – ರಹಸ್ಯ ಬಿಚ್ಚಿಟ್ಟ ಪೇಜಾವರ ಶ್ರೀ

    ಕಾರವಾರ: ಶಿರೂರು ಶ್ರೀಗಳು ನನಗೆ ಮಕ್ಕಳಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದರಿಂದ ಅವರಿಗೆ ಪಟ್ಟದ ದೇವರನ್ನು ಕೊಡಲಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

    ಶಿರೂರು ಶ್ರೀ ಗಳ ಅಂತಿಮ ದರ್ಶನಕ್ಕೆ ಹೋಗದ ಕುರಿತು ಸ್ವಷ್ಟನೆ ನೀಡಿ ಶಿರಸಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಶಿರೂರು ಶ್ರೀಗಳು ಸನ್ಯಾಸತ್ವಕ್ಕೆ ಭ್ರಷ್ಟರಾಗಿದ್ದರು ಎಂಬುದರ ಬಗ್ಗೆ ನಮ್ಮ ಬಳಿ ಮಾಹಿತಿಗಳಿವೆ. ಅದ್ದರಿಂದ ಅವರನ್ನು ಪೀಠಾಧಿಪತಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸ್ವಾಮಿಗಳಾದ ಮೇಲೆ ಧರ್ಮ ಬೇಕು. ಅದ್ದರಿಂದ ಅವರು ಮಠಾಧೀಶರಲ್ಲ, ಅವರು ಸನ್ಯಾಸವನ್ನು ಬಿಟ್ಟಿದ್ದಾರೆ, ಅವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ ಎಂದರು.

    ಶಿರೂರು ಶ್ರೀಗಳ ಮೇಲೆ ಮಠಾಧೀಶರಿಗೆ ದ್ವೇಷವಿಲ್ಲ. ನನ್ನ ಅವರ ಮಧ್ಯೆ ಉತ್ತಮ ವಿಶ್ವಾಸವಿತ್ತು. ಆದರೆ ಕೆಲವು ನೈತಿಕ, ತಾತ್ವಿಕ ಕಾರಣಗಳಿಂದ ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ. ಅವರ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಶಿರೂರು ಶ್ರೀಗಳನ್ನು ಪೀಠಾಧಿಪತಿ ಅಲ್ಲ ಎಂದು ಎಲ್ಲರೂ ತೀರ್ಮಾನ ಮಾಡಿ ಒಪ್ಪಿಕೊಂಡಿದ್ದೇವೆ. ಅವರು ಸನ್ಯಾಸ ಜೀವನದಿಂದ ಭ್ರಷ್ಟರಾಗಿದ್ದಾರೆ ಅವರಿಗೆ ಮಗನಿದ್ದಾನೆ. ತನ್ನ ಮಗನೆಂದು ಎಲ್ಲರಿಗೂ ತೋರಿಸಿದ್ದಾರೆ. ಅಂತವರು ಸ್ವಾಮಿಗಳಾಗಲು ಸಾಧ್ಯವಿಲ್ಲ ಎಂದರು.

    ಇದೇ ವೇಳೆ ಶಿರೂರು ಶ್ರೀಗಳ ಸಂಶಯಾಸ್ಪದ ಸಾವು ಕುರಿತು ಪೂರ್ವಾಶ್ರಮದ ಸಹೋದರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿ, ಅವರು ನಿನ್ನೆ ನನ್ನೊಂದಿಗೆ ಲಾತವ್ಯ ಆಚಾರ್ಯ ಮಾತನಾಡುವಾಗ ಶಿರೂರು ಶ್ರೀಗಳು ಫಲಾಹಾರವನ್ನು ತೆಗೆದುಕೊಂಡಿದ್ದರು. ಆಹಾರವನ್ನು ಒಂದು ಕೆಟ್ಟ ಕಿಲುಬು ಪಾತ್ರೆಯನ್ನು ನೀಡಲಾಗಿದೆ ಅಂದಿದ್ದರು. ಅವರ ಸಾವಿಗೆ ಪಾತ್ರೆ ದೋಷ ಕಾರಣವಾಗಿರುವ ಸಾಧ್ಯತೆಗಳಿವೆ. ನಿನ್ನೆ ಅನುಮಾನ ಬಾರದ್ದು ಇಂದು ಹೇಗೆ ಅನುಮಾನ ಬಂತು. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ಬಳಿಕ ಈ ಕುರಿತು ಎಲ್ಲಾ ವಿಷಯ ತಿಳಿಯುತ್ತದೆ ಎಂದರು.

  • ನೋಡನೋಡುತ್ತಿದ್ದಂತೆ ಕುಸಿದು ಬಿತ್ತು ಬಸ್ ಸ್ಟ್ಯಾಂಡ್- ವಿಡಿಯೋ ನೋಡಿ

    ನೋಡನೋಡುತ್ತಿದ್ದಂತೆ ಕುಸಿದು ಬಿತ್ತು ಬಸ್ ಸ್ಟ್ಯಾಂಡ್- ವಿಡಿಯೋ ನೋಡಿ

    ಕಾರವಾರ: ಶಿಥಿಲಗೊಂಡು ಬಸ್ ನಿಲ್ದಾಣ ಕಟ್ಟಡ ಕುಸಿದು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ನಡೆದಿದೆ.

    ಬಸ್ ನಿಲ್ದಾಣವು 40 ವರ್ಷದ ಹಳೆಯ ಕಟ್ಟಡವಾಗಿದ್ದು, ಕಳೆದ ಮೂನಾಲ್ಕು ದಿನಗಳಿಂದ ಕಟ್ಟಡದ ಮೇಲ್ಚಾವಣಿ ಕುಸಿಯುತ್ತಿತ್ತು. ಈ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಕಟ್ಟಡದ ಬಳಿ ತೆರಳದಂತೆ ಸೂಚನೆ ನೀಡಲಾಗಿತ್ತು.

    ಇಂದು ಮಧ್ಯಾಹ್ನದ ವೇಳೆಗೆ ಬಸ್ ನಿಲ್ದಾಣದ ಕಟ್ಟಡ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಆದರೆ ಈ ಘಟನೆ ಕುರಿತು ಪ್ರಯಾಣಿಕರಿಗೆ ಮುಂಚಿತವಾಗಿಯೇ ಸೂಚನೆ ನೀಡಿದ್ದರಿಂದ ಯಾವುದೇ ಅಪಾಯಗಳು ಸಂಭವಿಸಿಲ್ಲ. ಬಸ್ ನಿಲ್ದಾಣ ಕುಸಿದು ಬೀಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    https://www.youtube.com/watch?v=E03VIkbaxRU

  • ಸಾರಿಗೆ ಬಸ್ ಗೆ ಡಿಕ್ಕಿ ಹೊಡೆದ ಕಬ್ಬಿಣದ ಲಾರಿ-ಮಹಿಳೆ ಸೇರಿ ಇಬ್ಬರು ಸ್ಥಳದಲ್ಲೇ ಸಾವು

    ಸಾರಿಗೆ ಬಸ್ ಗೆ ಡಿಕ್ಕಿ ಹೊಡೆದ ಕಬ್ಬಿಣದ ಲಾರಿ-ಮಹಿಳೆ ಸೇರಿ ಇಬ್ಬರು ಸ್ಥಳದಲ್ಲೇ ಸಾವು

    ಕಾರವಾರ: ಚಾಲಕನೊಬ್ಬ ಲಾರಿಯನ್ನು ಯದ್ವತದ್ವಾ ಚಾಲನೆ ಮಾಡಿದ ಪರಿಣಾಮ ಲಾರಿಯಲ್ಲಿ ಸಾಗಣೆ ಮಾಡಲಾಗುತ್ತಿದ್ದ ಕಬ್ಬಿಣದ ಕಂಬ ಸರ್ಕಾರಿ ಬಸ್ಸಿಗೆ ಡಿಕ್ಕಿಯಾದ ಕಾರಣ ಮಹಿಳೆ ಸೇರಿ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಮಣಕಿ ಬಳಿ ನಡೆದಿದೆ.

    ಕುಮಟಾ ತಾಲೂಕಿನ ಹೊಸಕಟ್ಟಾದ ನಿವಾಸಿ ಶಶಿಕಲಾ (60), ಗೊನೆಹಳ್ಳದ ತೋರ್ಕೆ ನಿವಾಸಿ ವೆಂಕಟೇಶ ಗಣಪತಿ ಗುನಗ (46) ಮೃತಪಟ್ಟವರು. ಇನ್ನು ಘಟನೆಯಲ್ಲಿ 25 ಜನರು ಗಾಯಗೊಂಡಿದ್ದಾರೆ. ಇವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಯಿಂದ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಏನಿದು ಘಟನೆ: ಗೋಕರ್ಣ ದಿಂದ ಕುಮಟಾ ಕಡೆ ಹೋಗುತ್ತಿದ್ದ ಸರ್ಕಾರಿ ಬಸ್ಸಿಗೆ ಮಂಗಳೂರು ಕಡೆಯಿಂದ ಮಹಾರಾಷ್ಟ್ರದ ಕಡೆ ಹೋಗುತ್ತಿದ್ದ ಲಾರಿಯಲ್ಲಿದ್ದ ಕಬ್ಬಿಣದ ಕಂಬ ಬಸ್ಸಿನ ಬಲಭಾಗಕ್ಕೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಬಸ್ಸಿನ ಬಲಭಾಗದಲ್ಲಿ ಕುಳಿತ್ತಿದ್ದವರಿಗೆ ಹೆಚ್ಚಿನ ಹಾನಿಯಾಗಿದೆ.

    ಅಪಘಾತಗೊಂಡ ಲಾರಿ ನಾಗಾಲ್ಯಾಂಡ್ ಮೂಲದಾಗಿದ್ದು, ಅನುಮತಿಯಿಲ್ಲದೇ ಬೃಹತ್ ಆಕಾರದ ಕಬ್ಬಿಣದ ಕಂಬದಂತಹ ವಸ್ತುವನ್ನು ತೆಗೆದುಕೊಂಡು ಹೋಗುತಿದ್ದ ವೇಳೆ ಘಟನೆ ನಡೆದಿದೆ. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಲಾರಿಯಲ್ಲಿ ತುಂಬಿಸಲಾಗಿರುವ ಕಬ್ಬಿಣದ ಕಂಬ ವಾಹನದ ಅಗಲಕ್ಕಿಂತ ಹೆಚ್ಚಿದ್ದು, ರಸ್ತೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಕುರಿತು ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಚೆಕ್ ಪೋಸ್ಟ್ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಆರೋಪ ಮಾಡಿರುವ ಸಾರ್ವಜನಿಕರು, ಅಂತರ್ ರಾಜ್ಯ ಲಾರಿಯನ್ನು ಒಂದು ಚೆಕ್ ಪೋಸ್ಟ್ ನಿಂದ ಔಟ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.