Tag: ಕಾರವಾರ

  • ಕಾರವಾರ| ಜಿಲ್ಲಾಸ್ಪತ್ರೆ ಹೊಸ ಕಟ್ಟಡದ ರೂಫಿಂಗ್ ಷೀಟ್ ಕುಸಿತ

    ಕಾರವಾರ| ಜಿಲ್ಲಾಸ್ಪತ್ರೆ ಹೊಸ ಕಟ್ಟಡದ ರೂಫಿಂಗ್ ಷೀಟ್ ಕುಸಿತ

    ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಜನ ಹೋರಾಟ ಮಾಡಿದರು. ಆದರೆ, 198.28 ಕೋಟಿ ವೆಚ್ಚದಲ್ಲಿ ಕಾರವಾರದ ಕ್ರಿಮ್ಸ್ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಇನ್ನೂ ಉದ್ಘಾಟನೆಯಾಗದಿದ್ರೂ ಕಟ್ಟಡದ ಹಲವು ಕಡೆ ಬಿರುಕು ಬಿಟ್ಟಿದ್ದು, ರೂಫಿಂಗ್ ಷೀಟ್‌ ಕುಸಿದಿವೆ.

    ಆಸ್ಪತ್ರೆ ನಿರ್ಮಾಣಗೊಂಡು ಎರಡು ವರ್ಷವಾದ್ರೂ ಉದ್ಘಾಟನೆ ಕಂಡಿರಲಿಲ್ಲ. ಇನ್ನು ಕಟ್ಟಡದಲ್ಲಿ ಹಲವು ಕಡೆ ಬಿರುಕು ಕಳೆಪೆ ಕಾಮಗಾರಿ ಮಾಡಲಾಗಿತ್ತು. ಹೋಗಾಗಿ ಕಟ್ಟಡ ನಿರ್ಮಾಣವಾಗಿ ಎರೆಡು ವರ್ಷಗಳು ಸಂದಿದ್ದರೂ ಕ್ರಿಮ್ಸ್‌ನಿಂದ ಹಸ್ತಾಂತರವಾಗಿರಲಿಲ್ಲ. ಆದರೆ, 1979 ರಲ್ಲಿ ನಿರ್ಮಾಣಗೊಂಡಿದ್ದ ಹಳೆಯ ಜಿಲ್ಲಾಸ್ಪತ್ರೆ ಶಿಥಿಲಗೊಂಡಿದ್ದು, ಅನಿವಾರ್ಯವಾಗಿ ಹಳೆ ಕಟ್ಟಡದಿಂದ ಹೊಸ ಕಟ್ಡಡದ ಎರಡು ಮಹಡಿಗಳಿಗೆ ರೋಗಿಗಳನ್ನು ಶಿಪ್ಟ್ ಮಾಡಲಾಗಿತ್ತು.

    ಆದರೆ, ಇದೀಗ ಎರಡನೇ ಮಹಡಿಯಲ್ಲಿರುವ ಸರ್ಜರಿ ವಿಭಾಗ ಹಾಗೂ ಶಸ್ತ್ರಕ್ರಿಯಾ ಕೊಠಡಿಗಳಿದ್ದ ಭಾಗದ ಪಕ್ಕದ ವೈದ್ಯರ ಹಾಗೂ ಉಪನ್ಯಾಸಕರ ಕೊಠಡಿ ಇರುವ ಭಾಗದ ಸಿಮೆಂಟ್ ಪ್ಲೋರ್ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಇಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಹಾನಿಯಾಗಿಲ್ಲ. ಆದರೆ, ಇದರ ಪಕ್ಕದಲ್ಲೇ ಸರ್ಜರಿ ವಿಭಾಗವಿದ್ದು ಅಲ್ಲಿಯೂ ಕುಸಿಯುವ ಆತಂಕ ವ್ಯಕ್ತವಾಗಿದೆ.

    ಗುಣಮಟ್ಟವೇ ಇಲ್ಲದ ಕಾಮಗಾರಿಯಿಂದ ಇದೀಗ ಎರಡನೇ ಮಹಡಿ ಭಾಗದಲ್ಲಿ ಕುಸಿತ ಕಂಡಿದೆ. ಇನ್ನು ಕುಸಿಯುವ ಆತಂಕ ಇದ್ದು ಮತ್ತೆ ಎಲ್ಲಿ ಏನು ಅನಾಹುತ ಸಂಭವಿಸಲಿದೆ ಎಂಬುವ ಪ್ರಶ್ನೆ ಏಳುವಂತೆ ಮಾಡಿದೆ.

    ಕಟ್ಟಡ ನಿರ್ಮಾಣವಾಗಿ ಕೆಲವೇ ವರ್ಷದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದ್ದು, ಈ ಕಟ್ಟಡ ಯಾವ ರೀತಿ ಕಳಪೆ ಕಾಮಗಾರಿ ಮಾಡಲಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ.

  • ಶಿರಸಿಯ ಶ್ರೀ ಮಾರಿಕಾಂಬಾ ಕ್ಷೇತ್ರಕ್ಕೆ ನಟ ಶಿವಣ್ಣ ದಂಪತಿ ಭೇಟಿ

    ಶಿರಸಿಯ ಶ್ರೀ ಮಾರಿಕಾಂಬಾ ಕ್ಷೇತ್ರಕ್ಕೆ ನಟ ಶಿವಣ್ಣ ದಂಪತಿ ಭೇಟಿ

    ಕಾರವಾರ: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ (Shree Marikamba Temple) ನಟ ಶಿವರಾಜ್ ಕುಮಾರ್ (Shiva Rajkumar) ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಶಿರಸಿಯ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿದ ಶಿವಣ್ಣ ದಂಪತಿ ತಮ್ಮ ಇಷ್ಟ ದೈವಕ್ಕೆ ಪೂಜೆ ಸಲ್ಲಿಸಿದರು. ಈ ಹಿಂದೆ ನಟ ಶಿವರಾಜ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಸಹ ಶಿರಸಿ ಮಾರಿಕಾಂಬೆ ಸನ್ನಿದಿಗೆ ಆಗಮಿಸಿ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡಿದ್ದರು.

    ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿರುವ ಶಿವರಾಜ್ ಕುಮಾರ್ ಶಿರಸಿಗೆ ಆಗಮಿಸಿದ್ದು, ಮಾರಿಕಾಂಬಾ ಸನ್ನಿದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

  • ಯೂಟ್ಯೂಬರ್‌ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್‌

    ಯೂಟ್ಯೂಬರ್‌ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್‌

    ಕಾರವಾರ: ಯೂಟ್ಯೂಬರ್ ಮುಕಳೆಪ್ಪ ಪ್ರಕರಣದಲ್ಲಿ ಮುಂಡಗೋಡಿನ ವಿವಾಹ ನೋಂದಣಾಧಿಕಾರಿ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿ ಕಚೇರಿ ಸಿಬ್ಬಂದಿಯೊಂದಿಗೆ ನಡೆದ ಘಟನೆ ಜರುಗಿದೆ.

    ಸೆ.22 ರಂದು ಶ್ರೀರಾಮ ಸೇನೆಯೊಂದಿಗೆ ಗಾಯತ್ರಿ ತಾಯಿ ಶಿವಕ್ಕ ನೋಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಇದರ ನಂತರ ನೋಂದಣಾಧಿಕಾರಿ ಹೇಮಾ ಸೇರಿ ಏಳು ಜನರ ವಿರುದ್ಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ನೋಂಣಾಧಿಕಾರಿ ಹೇಮಾ ಅವರು ದಾಖಲೆ ಪರಾಮರ್ಷಿಸದೇ ನಿಯಮ ಮೀರಿ ಹಣ ಪಡೆದು ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಇಂದು ಕಚೇರಿಗೆ ಯಾವೊಬ್ಬ ಸಿಬ್ಬಂದಿಯೂ ಬಾರದೇ ಕಚೇರಿಗೆ ಬೀಗ ಹಾಕಲಾಗಿತ್ತು.

    ಕಚೇರಿಗೆ ಬಂದ ಜನ ಬೀಗ ಹಾಕಿರುವುದನ್ನು ನೋಡಿ ಕೆಲಸ ಮಾಡಿಸಿಕೊಳ್ಳಲಾಗದೇ ಹಿಂತಿರುಗುವಂತಾಯಿತು. ಕಚೇರಿಯಲ್ಲಿ ಅಧಿಕಾರಿ ಸೇರಿ ಒಟ್ಟು ನಾಲ್ಕು ಜನ ಇದ್ದು, ಕಚೇರಿ ಸಮಯದಲ್ಲೇ ಹೀಗೆ ಬೀಗ ಹಾಕಿ ಹೋಗಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

  • ಯಲ್ಲಾಪುರ ಕಾನೂರು ಜಲಪಾತದಲ್ಲಿ ಫೋಟೋಶೂಟ್ ವೇಳೆ ಕಾಲುಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಕಾಣೆ

    ಯಲ್ಲಾಪುರ ಕಾನೂರು ಜಲಪಾತದಲ್ಲಿ ಫೋಟೋಶೂಟ್ ವೇಳೆ ಕಾಲುಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಕಾಣೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಾನೂರು ಜಲಪಾತಕ್ಕೆ ಪ್ರವಾಸ ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾದ ಘಟನೆ ನಡೆದಿದೆ.

    ಧಾರವಾಡ ಮೂಲದ ಸುಹೇಲ್ ಸೈಯದ್ ಅಲಿ ಶೇಖ್ (21) ಇಂಜಿನಿಯರಿಂಗ್ ವಿದ್ಯಾರ್ಥಿ ಕಾಣೆಯಾದವರಾಗಿದ್ದಾರೆ.

    ಹಳಿಯಾಳ ಇಂಜಿನಿಯರಿಂಗ್ ಕಾಲೇಜಿನಲ್ಲಿ E&C ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಸುಹೇಲ್‌ನೊಂದಿಗೆ ನಾಲ್ವರು ವಿದ್ಯಾರ್ಥಿಗಳು, ನಾಲ್ವರು ವಿದ್ಯಾರ್ಥಿನಿಯರು ಸೇರಿ ಒಟ್ಟು 8 ಜನರ ತಂಡ ಕಾನೂರು ಜಲಪಾತಕ್ಕೆ ಬಂದಿದ್ದರು.

    ಜಲಪಾತದ ಮುಂದೆ ಫೋಟೋಶೂಟ್ ಮಾಡುವ ವೇಳೆ ಕಾಲು ಜಾರಿ ಬಿದ್ದು ಸುಹೇಲ್ ಶೇಖ್ ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ಥಳಕ್ಕೆ ಯಲ್ಲಾಪುರ ಸಿಪಿಐ ರಮೇಶ್ ಹರಗಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಣ್ಯ ಇಲಾಖೆ ಹಾಗೂ ಆಗ್ನಿಶಾಮಕ ದಳದಿಂದ ಶೋಧಕಾರ್ಯ ನಡೆಯುತ್ತಿದೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರವಾರ| ಸಿಲಿಂಡರ್‌ ಸ್ಫೋಟಗೊಂಡು ಯುವತಿ ಸಾವು

    ಕಾರವಾರ| ಸಿಲಿಂಡರ್‌ ಸ್ಫೋಟಗೊಂಡು ಯುವತಿ ಸಾವು

    ಕಾರವಾರ: ಸಿಲಿಂಡರ್ ಸ್ಫೋಟಗೊಂಡು ಯುವತಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮರ್ಕಿಕೊಡ್ಲು ಗ್ರಾಮದ ಹಲಗೆಯಲ್ಲಿ ನಡೆದಿದೆ.

    ರಂಜಿತ ನಾಗಪ್ಪ ದೇವಾಡಿಗ (21) ಮೃತ ಯುವತಿ. ಪೋಷಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಯುವತಿ ಮನೆಯಲ್ಲೇ ಇದ್ದಳು. ಈ ವೇಳೆ ಅವಘಡ ಸಂಭವಿಸಿದೆ.

    ಸಿಲಿಂಡರ್‌ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಪತ್ನಿಗೆ ಅಕ್ರಮ ಸಂಬಂಧ ಶಂಕೆ – ಊಟಕ್ಕೆ ವಿಷ ಹಾಕಿ ಕೊಂದು ನಾಪತ್ತೆಯಾಗಿದ್ದಾಳೆಂದು ದೂರು ಕೊಟ್ಟ ಪತಿ

    ಪತ್ನಿಗೆ ಅಕ್ರಮ ಸಂಬಂಧ ಶಂಕೆ – ಊಟಕ್ಕೆ ವಿಷ ಹಾಕಿ ಕೊಂದು ನಾಪತ್ತೆಯಾಗಿದ್ದಾಳೆಂದು ದೂರು ಕೊಟ್ಟ ಪತಿ

    ಕಾರವಾರ/ಬೀದರ್: ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಊಟಕ್ಕೆ ವಿಷ ಸೇರಿಸಿ ಪತ್ನಿಯನ್ನು ಪತಿ ಹತ್ಯೆಗೈದಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಚಿತ್ತಾಕುಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬೀದರ್ ಮೂಲದ ಪರ್ವಿಂದ್ ಬೇಗಮ್ (45) ಹತ್ಯೆಯಾದ ಮಹಿಳೆ. ಆರೋಪಿಯನ್ನು ಇಸ್ಮಾಯಲ್ ದಫೆದಾರ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪರಿಸರ ಅಭಿವೃದ್ಧಿ ಸಂರಕ್ಷಣೆಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು: ಸಿದ್ದರಾಮಯ್ಯ

    ಬೀದರ್‌ನ (Bidar) ಪರ್ವಿಂದ್ ಬೇಗಮ್ ಹಾಗೂ ಇಸ್ಮಾಯಲ್ ದಫೆದಾರ್‌ಗೆ ಆರು ಜನ ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದೆ. ಹೀಗಾಗಿ ದಂಪತಿಗಳಿಬ್ಬರೇ ಉತ್ತರ ಕನ್ನಡದಲ್ಲಿ ವಾಸವಾಗಿದ್ದರು. ಇತ್ತೀಚಿಗೆ ಬೀದರ್‌ನಲ್ಲಿ ಪರಪುರುಷನ ಜೊತೆ ಬೇಗಮ್‌ಗೆ ಅಕ್ರಮ ಸಂಬಂಧವಿದೆ ಎಂದು ಇಸ್ಮಾಯಲ್‌ಗೆ ಶಂಕೆ ವ್ಯಕ್ತವಾಗಿತ್ತು. ಇದರಿಂದ ಪತ್ನಿಯ ವಿರುದ್ಧ ಸಿಟ್ಟಾಗಿದ್ದ ಇಸ್ಮಾಯಲ್ ಸ್ನೇಹಿತನ ಜೊತೆ ಸೇರಿಕೊಂಡು ಹತ್ಯೆಗೆ ಸ್ಕೆಚ್ ಹಾಕಿದ್ದ.

    ಪ್ಲ್ಯಾನ್‌ನಂತೆ ಅನಾರೋಗ್ಯದ ಕಾರಣವನ್ನು ನೆಪವಾಗಿಟ್ಟುಕೊಂಡು ಹೆಂಡತಿಯನ್ನು ಪುಸಲಾಯಿಸಿ ಕಾರವಾರ ತಾಲೂಕಿನ ಹಳಗಕ್ಕೆ ಕರೆತಂದಿದ್ದ. ಬಳಿಕ ಸ್ನೇಹಿತ ಕೂಡ ಕಾರಿನಲ್ಲಿ ಅದೇ ಜಾಗಕ್ಕೆ ಬಂದಿದ್ದ. ಈ ವೇಳೆ ತನ್ನ ಸ್ನೇಹಿತನನ್ನು ಪರಿಚಯಿಸಿ, ಒಟ್ಟಿಗೆ ಕಾರಿನಲ್ಲಿ ಬೀದರ್‌ಗೆ ಹೋಗಲು ಆಕೆಯನ್ನು ಒಪ್ಪಿಸಿದ್ದಾನೆ. ಮಾರ್ಗಮಧ್ಯೆ ಊಟ ಮಾಡುವ ನೆಪದಲ್ಲಿ ಕಾರು ನಿಲ್ಲಿಸಿ, ಊಟಕ್ಕೆ ವಿಷ ಹಾಕಿ ನೀಡಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಆಕೆ ಅಸ್ವಸ್ಥಳಾಗಿ ಸಾವನ್ನಪ್ಪಿದ್ದಳು. ಬಳಿಕ ಆಕೆಯ ಶವವನ್ನು ಅಣಶಿ ಘಟ್ಟದ ಅರಣ್ಯದಲ್ಲಿ ಎಸೆದಿದ್ದ. ಮಾರನೇ ದಿನ ಚಿತ್ತಾಕುಲ ಠಾಣೆಗೆ ಬಂದು ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದ.

    ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಪತಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಆಗ ತಾನೇ ವಿಷವಿಕ್ಕಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ ಆಕೆಯ ಶವವನ್ನು ಎಸೆದ ಜಾಗವನ್ನು ಕೂಡ ತೋರಿಸಿದ್ದಾನೆ.

    ಘಟನೆ ಸಂಬಂಧ ಪತಿ ಇಸ್ಮಾಯಲ್ ದಫೆದಾರ್ ಹಾಗೂ ಆತನ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ.ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಧಾರಾಕಾರ ಮಳೆ – ಅಂಡರ್ ಪಾಸ್ ಮುಳುಗಡೆ; ಬೆಳೆಗಳು ಜಲಾವೃತ

  • ಭಟ್ಕಳ ಅರಣ್ಯದಲ್ಲಿ ಗೋವುಗಳ ರಾಶಿ ರಾಶಿ ಮೂಳೆಗಳು ಪತ್ತೆ ಕೇಸ್ – ಇಬ್ಬರ ಬಂಧನ

    ಭಟ್ಕಳ ಅರಣ್ಯದಲ್ಲಿ ಗೋವುಗಳ ರಾಶಿ ರಾಶಿ ಮೂಳೆಗಳು ಪತ್ತೆ ಕೇಸ್ – ಇಬ್ಬರ ಬಂಧನ

    ಕಾರವಾರ: ಭಟ್ಕಳ ಅರಣ್ಯದಲ್ಲಿ ಗೋವುಗಳ ರಾಶಿ ರಾಶಿ ಮೂಳೆಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಶಹರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಭಟ್ಕಳದ ಚೌಥನಿ ಕಾಲೊನಿಯ ಮೊಹ್ಮದ್ ರಾಯನ್ ಅಲಿಯಾಸ್ ಮಹ್ಮದ್ ರಿಜ್ವಾನ್, ಮಗ್ದೂಂ ಕಾಲೊನಿಯ ಮಹ್ಮದ್ ಸಂವನ್ ಬಂಧಿತ ಆರೋಪಿಗಳು. ಇಬ್ಬರೂ ಗೋವುಗಳನ್ನು ಕಳ್ಳತನ ಮಾಡಿ ಭಟ್ಕಳಕ್ಕೆ ತಂದು ಮಾಂಸ ಬೇರ್ಪಡಿಸಿ ನಂತರ ಮಗ್ದೂ ಕಾಲೊನಿ ಸಮೀಪದ ಅರಣ್ಯದಲ್ಲಿ ಸುರಿಯುತ್ತಿದ್ದರು.

    ಮಗ್ದೂಂ ಕಾಲೊನಿ ಬಳಿಯ ಬೆಳ್ನೆ ಗ್ರಾಮದ ಸರ್ವೆ ನಂಬರ್ 74 ರ ಅರಣ್ಯ ಭಾಗದಲ್ಲಿ ದೊಡ್ಡಮಟ್ಟದ ಗೋವುಗಳ ಮೂಳೆಗಳ ರಾಶಿ ಪತ್ತೆಯಾಗಿತ್ತು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ದೂರು ದಾಖಲಿಸಿ ಎರಡು ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಭಟ್ಕಳ ಶಹರ ಠಾಣೆ ಸಿಪಿಐ ದಿವಾಕರ್ ನೇತೃತ್ವದಲ್ಲಿ ಪಿಎಸ್‌ಐ ನವೀನ್ ಅವರ ತಂಡದಿಂದ ಕಾರ್ಯಾಚರಣೆ ನಡೆಸಲಾಗಿತ್ತು.

  • ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? – ನೂರಾರು ಗೋವುಗಳ ಎಲುಬುಗಳು ಪತ್ತೆ; ಪೊಲೀಸರಿಂದ ತನಿಖೆ

    ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? – ನೂರಾರು ಗೋವುಗಳ ಎಲುಬುಗಳು ಪತ್ತೆ; ಪೊಲೀಸರಿಂದ ತನಿಖೆ

    ಕಾರವಾರ: ಆ ಅರಣ್ಯದಲ್ಲಿ ನೂರಾರು ಬುರುಡೆಗಳು, ಸಾವಿರಾರು ಎಲುಬುಗಳು (Cow Bones) ಪತ್ತೆಯಾಗಿವೆ. ಪೊಲೀಸರು ಇದೀಗ ಇದರ ರಹಸ್ಯ ಹೊರಗೆಳೆಯಲು ತನಿಖೆಗಿಳಿದಿದ್ದಾರೆ.

    ಉತ್ತರ ಕನ್ನಡ (Uttara kannada) ಜಿಲ್ಲೆಯ ಭಟ್ಕಳದ ಮುಗ್ದಮ್ ಕಾಲೋನಿ ಬಳಿಯ ಅರಣ್ಯ ಇಲಾಖೆಗೆ ಸೇರಿದ ಬೆಳ್ನೆ ಅರಣ್ಯದ ಸರ್ವೇ ನಂಬರ್ 74ರ ಜಾಗದಲ್ಲಿ ನೂರಾರು ಗೋವುಗಳ ಕಳೇಬರದ ರಾಶಿಯೇ ಪತ್ತೆಯಾಗಿದೆ. ಸ್ಥಳೀಯರು ಈ ಕಾಡಿನ ಭಾಗದಲ್ಲಿ ರಾಶಿ ರಾಶಿ ಬಿದ್ದ ಗೋವುಗಳ ಅಸ್ಥಿಪಂಜರವನ್ನು ನೋಡಿ ಹಿಂದೂ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇದು ತಿಳಿಯುತ್ತಿದ್ದಂತೆ ರಾಶಿ ರಾಶಿ ಬಿದ್ದಿದ್ದ ಅಸ್ಥಿಪಂಜರಗಳನ್ನ ಆ ಸ್ಥಳದಿಂದ ಅನಾಮಿಕ ವ್ಯಕ್ತಿಗಳು ಬೇರೆಡೆ ಸಾಗಿಸಿದ್ದಾರೆ. ಸಾಗಿಸುವ ವೇಳೆ ಅವಸರದಲ್ಲಿ ಪಕ್ಕದಲ್ಲಿದ್ದ ಪುರಸಭೆಯ ವೇಸ್ಟ್ ಡಂಪಿಂಗ್ ಟ್ಯಾಂಕ್‌ಗೂ ಅಸ್ಥಿಪಂಜರಗಳನ್ನು ಹಾಕಲಾಗಿದೆ.

    ಇನ್ನು ಭಟ್ಕಳದಲ್ಲಿ ನಿರಂತರ ಗೋವಧೆ ನಡೆಯುತ್ತಿರುವ ಬಗ್ಗೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ರಮವಾಗಿ ಗೋವುಗಳನ್ನು ಭಟ್ಕಳಕ್ಕೆ ತಂದು ವಧಿಸಲಾಗುತ್ತಿದೆ, ಇದಕ್ಕೆ ಪೊಲೀಸ್ ಇಲಾಖೆಯೂ ಸೇರಿಕೊಂಡಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮೇಲೆ ಬಂದಿರುವ ಅಪವಾದಗಳು ಓಡಿ ಹೋಗುತ್ತವೆ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ಇನ್ನು ಮೊದಲು ಪೊಲೀಸರು ಇದು ಹಳೆಯ ವಿಡಿಯೋ ಎಂದು ಘಟನೆಯನ್ನು ತಳ್ಳಿಹಾಕಿದ್ದರು. ಆದರೆ ಘಟನೆಯ ಸೂಕ್ಷ್ಮತೆ ಅರಿತ ಪೊಲೀಸರು, ಅರಣ್ಯ ಇಲಾಖೆ, ಪುರಸಭೆ ಅಧಿಕಾರಿಗಳು, ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಇನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೋವುಗಳ ವಧೆಯಾಗಿರುವುದನ್ನು ಮನಗಂಡು ಭಟ್ಕಳ ಶಹರ ಠಾಣೆಯಲ್ಲಿ ಉಪ ಅವಲಯ ಅರಣ್ಯಾಧಿಕಾರಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಕೇಸ್‌ – ಪಾತ್ರವೇ ಇಲ್ಲದ ಪೊಲೀಸ್‌ ಅಧಿಕಾರಿ ವರ್ಗಾವಣೆ

  • ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ; ಚಿಗುರಿದ ಪ್ರವಾಸೋದ್ಯಮ

    ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ; ಚಿಗುರಿದ ಪ್ರವಾಸೋದ್ಯಮ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪರಿಸರ ಪ್ರವಾಸೋದ್ಯಮದಲ್ಲಿ ಒಂದಾದ ದಾಂಡೇಲಿ (Dandeli) ಪ್ರವಾಸೋದ್ಯಮ ಮತ್ತೆ ಚಿಗುರೊಡೆದಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಮಳೆಗಾಲದಲ್ಲಿ ನಿಷೇಧ ಹೇರಿದ್ದ ಜಲಸಾಹಸ ಕ್ರೀಡೆಗಳಿಗೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದು, ಪ್ರಕೃತಿ ಪ್ರಿಯರಿಗೆ, ಜಲಸಾಹಸಿಗಳಿಗೆ ದಾಂಡೇಲಿ ತೆರೆದುಕೊಂಡಿದೆ.

    ದಾಂಡೇಲಿಯಲ್ಲಿ ಯಾವೆಲ್ಲ ಚಟುವಟಿಕೆಗಳಿವೆ?
    ವೈಟ್ ವಾಟರ್ ರಾಫ್ಟಿಂಗ್

    ಕಾಳಿ ನದಿಯ ಸುಂದರ ತಾಣವಾದ ಜೋಯಿಡಾದ ಗಣೇಶ ಗುಡಿ ಬಳಿಯ ನದಿ ಭಾಗದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವೈಟ್ ವಾಟರ್ ರಾಫ್ಟಿಂಗ್‌ಗೆ ಅವಕಾಶ ಮಾಡಿಕೊಟ್ಟಿದೆ. ಕಾಳಿ ನದಿಯ ನೀರು ಶಾಂತವಾಗಿ ಹರಿದು ಕಲ್ಲು ಬಂಡೆಯ ಮೇಲೆ ದುಮ್ಮಿಕ್ಕಿ ಜಾರುಬಂಡಿಯಂತೆ ನದಿಯ ನೀರು ಹರಿಯುತ್ತದೆ. ಈ ಭಾಗದಲ್ಲಿ ರಾಫ್ಟಿಂಗ್‌ಗೆ ಅವಕಾಶ ಮಾಡಿಕೊಟ್ಟಿದ್ದು, ಇಲ್ಲಿ ರಾಫ್ಟರ್‌ನಲ್ಲಿ ಹುಟ್ಟುಗಳನ್ನು ಹಾಕುತ್ತಾ ಹೋಗುವುದೇ ಮನಮೋಹಕ. ಇಲ್ಲಿ ನದಿಯ ನೀರು ಹಾಲಿನ ನೊರೆಯಂತೆ ತನ್ನ ಬಣ್ಣ ಬದಲಿಸಿ ಹರಿಯುತ್ತದೆ. ಇದನ್ನೂ ಓದಿ: ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೊಲೀಸರು ಪೌರುಷ ತೋರಿಸಲಿ – ಅಶ್ವಥ್ ನಾರಾಯಣ

    ಕಯಾಕಿಂಗ್, ಬೋಟಿಂಗ್‌ಗೆ ಅವಕಾಶ
    ಸದ್ಯ ಮಳೆಯಿಂದ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿರುವ ಕಾಳಿ ನದಿ ಕಯಾಕಿಂಗ್ ಹಾಗೂ ಬೋಟಿಂಗ್ ಮಾಡಲು ಹೇಳಿಮಾಡಿಸಿದ ಸಮಯ. ಇಲ್ಲಿನ ಪರಿಸರ ವೀಕ್ಷಣೆಗೆ ಕಯಾಕಿಂಗ್ ಹಾಗೂ ಬೋಟಿಂಗ್ ಮಾಡುತ್ತಾ ನಿಸರ್ಗದ ಪರಿಸರವನ್ನು ವೀಕ್ಷಿಸಲು ಪ್ರವಾಸೋದ್ಯಮ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

    ಇದಲ್ಲದೇ ದಾಂಡೇಲಿ, ಜೋಯಿಡಾ ಭಾಗದಲ್ಲಿ ಜಿಪ್‌ಲೈನ್‌, ಟ್ರಕ್ಕಿಂಗ್, ಜಂಗಲ್ ಸಫಾರಿ, ಕವಳೆ ಗುಹೆಗಳ ವೀಕ್ಷಣೆ, ಹಾರ್ನಬಿಲ್ ಪಕ್ಷಿಗಳ ವೀಕ್ಷಣೆ, ಸಿಂಥೇರಿ ರಾಕ್, ಮೊಸಳೆ ಪಾರ್ಕ್‌ಗಳನ್ನು ವೀಕ್ಷಿಸಬಹುದು. ವೀಕೆಂಡ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಬರುವುದರಿಂದ ವೀಕ್‌ಡೇಸ್‌ನಲ್ಲಿ ಇಲ್ಲಿಗೆ ಬರುವುದು ಉತ್ತಮ. ಇದನ್ನೂ ಓದಿ: ಮತಗಳ್ಳತನ ಆಗಿದ್ರೆ ರಾಜೀನಾಮೆ ನೀಡಲಿ, ಬ್ಯಾಲೆಟ್ ಪೇಪರ್‌ನಿಂದ ಚುನಾವಣೆ ನಡೆಸಿ ಅಧಿಕಾರಕ್ಕೆ ಬರಲಿ: ಕಾರಜೋಳ

    ವಸತಿಗಾಗಿ ಹಲವು ಹೋಮ್ ಸ್ಟೇ ,ರೆಸಾರ್ಟ್‌ಗಳು ಇದ್ದು, ಒಂದೊಂದು ಭಾಗದಲ್ಲಿ ಒಂದೊಂದು ದರವಿದೆ. ಜೋಯಿಡಾ ಭಾಗದಲ್ಲಿ ಅಲ್ಪ ದರಗಳು ದಾಂಡೇಲಿಗೆ ಹೋಲಿಸಿದಲ್ಲಿ ಕಡಿಮೆಯಿದ್ದು, ಈ ಭಾಗವನ್ನು ತಂಗಲು ಆಯ್ಕೆ ಮಾಡಿಕೊಳ್ಳಬಹುದು. ಸದ್ಯ ಜಿಲ್ಲಾಡಳಿತ ಜಲಸಾಹಸ ಕ್ರೀಡೆಗೆ ಅನುಮತಿ ನೀಡಿದ್ದರಿಂದ ಪ್ರವಾಸೋದ್ಯಮ ಚಿಗುರೊಡೆದಿದೆ.

  • ಕಾರವಾರ| ಬೆಣ್ಣೆಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಕಾರವಾರ| ಬೆಣ್ಣೆಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಣ್ಣೆಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ನಡೆದಿದೆ.

    ಭಾನುವಾರ ರಜೆ ಹಿನ್ನೆಲೆಯಲ್ಲಿ ಶಿರಸಿಯ ಕಾಲೇಜೊಂದರ ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆ ಹೊರಟಿತ್ತು. ಹೊಳೆಯಲ್ಲಿ ಈಜುವಾಗ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಹೋಗಿ ಕಾಣೆಯಾಗಿದ್ದಾರೆ.

    ಸ್ಥಳಕ್ಕೆ ಈಜು ತಜ್ಞರು ಹಾಗೂ ಪೊಲೀಸರ ತೆರಳಿ, ಕಾಣೆಯಾದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.