Tag: ಕಾರವಾರ ನೌಕಾನೆಲೆ

  • ಕರಾವಳಿಯಲ್ಲಿ `OP TRIGGER’ ಆಪರೇಷನ್ – ಕಡಲಿನಲ್ಲಿ ಕಟ್ಟೆಚ್ಚರ

    ಕರಾವಳಿಯಲ್ಲಿ `OP TRIGGER’ ಆಪರೇಷನ್ – ಕಡಲಿನಲ್ಲಿ ಕಟ್ಟೆಚ್ಚರ

    ಕಾರವಾರ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ರಾಜ್ಯದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಕರಾವಳಿ ಭಾಗಗಳಲ್ಲಿ ಹದ್ದಿನ ಕಣ್ಣಿರಿಸಿರುವ ಇಂಡಿಯನ್ ನೇವಿ, ಇಂಡಿಯನ್ ಕೋಸ್ಟ್ ಗಾರ್ಡ್‌ ಹಾಗೂ ಕೋಸ್ಟಲ್ ಪೊಲೀಸರು ಕೂಮಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

    ʻOP TRIGGERʼ ಹೆಸರಿನಲ್ಲಿ ಆಪರೇಷನ್ ನಡೆಸ್ತಿರುವ ಇಂಡಿಯನ್ ನೇವಿ, ಇಂಡಿಯನ್ ಕೋಸ್ಟ್ ಗಾರ್ಡ್‌ ಹಾಗೂ ಕೋಸ್ಟಲ್ ಪೊಲೀಸರು ಅರಬ್ಬಿ ಸಮುದ್ರ ಭಾಗದಲ್ಲಿ ತಪಾಸಣೆ ನಡೆಸುತಿದ್ದಾರೆ.

    ದೇಶದ ಆಂತರಿಕ ಭದ್ರತೆ ಹಿನ್ನಲೆಯಲ್ಲಿ ಸಮುದ್ರದಲ್ಲಿರುವ ಸಾಗುವ ಪ್ರತಿ ಬೋಟುಗಳು ಹಾಗೂ ಬಂದರುಗಳಲ್ಲಿರುವ ಬೋಟುಗಳು, ಕಾರ್ಮಿಕರ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕುತಿದ್ದಾರೆ. ಯಾವುದೇ ಉಗ್ರರು ರಾಜ್ಯದ ಕರಾವಳಿಯ ಮೂಲಕ ದೇಶಕ್ಕೆ ಎಂಟ್ರಿಕೊಡಬಾರದು ಎಂಬ ಉದ್ದೇಶದಿಂದ ತಪಾಸಣೆ ಚುರುಕುಗೊಳಿಸಲಾಗಿದೆ. ಇದನ್ನೂ ಓದಿ: ಮರ ಬಿದ್ದು ಮೃತಪಟ್ಟಿದ್ದ ಆಟೋ ಚಾಲಕನ ಅಂತ್ಯಸಂಸ್ಕಾರ – ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹೇಶ್

    ಅತಿ ಸೂಕ್ಷ್ಮ ಪ್ರದೇಶವಾಗಿರುವ ಕಾರವಾರದ ನೌಕಾನೆಲೆ ಹಾಗೂ ಕೈಗಾ ಅಣುವಿದ್ಯುತ್ ಸ್ಥಾವರದ ಸುತ್ತಮುತ್ತಲೂ ಭಿಗಿ ಭದ್ರತೆ ನೀಡಲಾಗಿದೆ. ಜೊತೆಗೆ ತೀರ ಪ್ರದೇಶಗಳಲ್ಲಿ ಡ್ರೋನ್‌ಗಳನ್ನು ಕೂಡ ಬಳಸಿ ಪರಿಶೀಲನೆ‌ ನಡೆಸಲಾಗುತ್ತಿದೆ. ಇನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಪ್ರತಿದಿನ ಕೂಮಿಂಗ್ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದು ಮೀನುಗಾರರಿಗೆ ಯಾರೇ ಅನುಮಾನಸ್ಪದ ಬೋಟುಗಳು ಅರಬ್ಬಿ ಸಮುದ್ರದಲ್ಲಿ ಕಂಡಲ್ಲಿ ತಕ್ಷಣ ಮಾಹಿತಿ ನೀಡಲು ತಿಳಿಸಾಗಿದೆ.  ಇದನ್ನೂ ಓದಿ: ಪಾಕ್ ಯುವತಿಯನ್ನು ಮದ್ವೆಯಾಗಿ ಕೆಲಸ ಕಳೆದುಕೊಂಡ ಸಿಆರ್‌ಪಿಎಫ್‌ ಯೋಧ!

  • ಮೊದಲ ರಕ್ಷಣಾ ಸಲಹೆಗಾರ್ತಿಯಾಗಿ ನೇಮಕಗೊಂಡ ಕಾರವಾರದ ನೌಕಾ ನೆಲೆಯ ಎಂಜಿನಿಯರ್

    ಮೊದಲ ರಕ್ಷಣಾ ಸಲಹೆಗಾರ್ತಿಯಾಗಿ ನೇಮಕಗೊಂಡ ಕಾರವಾರದ ನೌಕಾ ನೆಲೆಯ ಎಂಜಿನಿಯರ್

    ನವದೆಹಲಿ: ಕಾರವಾರದ ನೌಕಾ ನೆಲೆಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲೆಫ್ಟಿನೆಂಟ್ ಕಮಾಂಡರ್ ಕರಾಬಿ ಗೊಗೋಯ್ ಅವರನ್ನು ನೌಕಾಪಡೆಯ ಮೊದಲ ರಕ್ಷಣಾ ಸಲಹೆಗಾರ್ತಿಯಾಗಿ ನೇಮಕ ಮಾಡಲಾಗಿದೆ.

    ಸೆಪ್ಟೆಂಬರ್‍ನಲ್ಲಿ ಭಾರತೀಯ ವಾಯುಪಡೆ (ಐಎಎಫ್) ಮಾಸ್ಕೋ ದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ವಿಂಗ್ ಕಮಾಂಡರ್ ಅಂಜಲಿ ಸಿಂಗ್‍ರನ್ನು ಉಪ ರಕ್ಷಣಾ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಮುಂದಿನ ತಿಂಗಳು ಕರಾಬಿ ಗೊಗೋಯ್ ಎಲ್ಲಾ ವಿಭಾಗಗಳಿಂದ ಅನುಮೋದನೆ ಪಡೆದ ಬಳಿಕ ಅವರು ಮಾಸ್ಕೋದ ಅದೇ ರಾಯಭಾರ ಕಚೇರಿಯಲ್ಲಿ ಹೊಸ ರಕ್ಷಣಾ ಸಲಹೆಗಾರ್ತಿಯಾಗಿ ನಿರ್ವಹಿಸಲಿದ್ದಾರೆ. ಅದಕ್ಕಿಂತ ಮೊದಲು ಅವರು ರಷ್ಯನ್ ಭಾಷೆ ಕೋರ್ಸ್ ಮುಗಿಸಲಿಸಿದ್ದಾರೆ.

    ಅಸ್ಸಾಂ ಮೂಲದ ಗುವಾಹಟಿಯವರಾಗಿರುವ ಕರಾಬಿ ಗೊಗೋಯ್ ಅವರು 2010ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಅವರ ಕಾರವಾರದ ನೌಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತಿ ಲೆ.ಕ. ಪ್ರಾಂಜಲ್ ಹಾಂಡಿಕ್ ನೌಕಾಪಡೆಯಲ್ಲಿ ಅಧಿಕಾರಿಯಾಗಿದ್ದಾರೆ. ಹಿರಿಯ ಅಧಿಕಾರಿಗಳು ನಡೆಸಿದ ಸಂದರ್ಶನ ಮತ್ತು ಇತರ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಗೊಗೋಯ್‍ರನ್ನು ಹೊಸ ಹುದ್ದೆಗೆ ಆಯ್ಕೆ ಮಾಡಲಾಗಿದೆ.

    ನೌಕಾಪಡೆಯಲ್ಲಿ ಗೊಗೋಯ್ ಹೊಂದಿರುವ ಲೆಫ್ಟಿನೆಂಟ್ ಕಮಾಂಡರ್ ಭೂಸೇನೆಯ ಮೇಜರ್ ಶ್ರೇಣಿಗೆ ಸಮನಾಗಿದೆ. ಅಮೆರಿಕ, ಯುನೈಟೆಡ್ ಕಿಂಗ್‍ಡಮ್ ಮತ್ತು ರಷ್ಯಾಗಳಲ್ಲಿರುವ ಭಾರತದ ರಾಯಭಾರ ಕಚೇರಿಗಳಲ್ಲಿ 100ಕ್ಕೂ ಹೆಚ್ಚು ರಕ್ಷಣಾ ಸಲಹೆಗಾರರು ಇದ್ದಾರೆ. ಈ ಹುದ್ದೆಗಳಲ್ಲಿರುವವರು ಆತಿಥೇಯ ರಾಷ್ಟ್ರಗಳ ಸೇನೆಯ ಪ್ರಮುಖ ವಿಭಾಗಗಳ ಜತೆಗೆ ಭದ್ರತೆ, ಮಿಲಿಟರಿ ತಂತ್ರಜ್ಞಾನ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಿದ್ದಾರೆ.