Tag: ಕಾಯ್ದೆ

  • ಆನ್‌ಲೈನ್  ಗೇಮಿಂಗ್ ನಿಷೇಧ ಕಾಯ್ದೆ ಬಗ್ಗೆ ನಿಮಗೆಷ್ಟು ಗೊತ್ತು?

    ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆ ಬಗ್ಗೆ ನಿಮಗೆಷ್ಟು ಗೊತ್ತು?

    ಗಿನ ತಂತ್ರಜ್ಞಾನ ಯುಗದಲ್ಲಿ ಜನರು ಕಷ್ಟಪಟ್ಟು ದುಡಿದು ಹಣ ಗಳಿಸುವುದಕ್ಕಿಂತ ಹೆಚ್ಚಾಗಿ ಆನ್ಲೈನ್ ಮೂಲಕ ಹಣ ಗಳಿಸುವಲ್ಲಿ ತೊಡಗಿದ್ದಾರೆ. ಅದರಲ್ಲಿ ಎಷ್ಟೋ ಜನ ಹಣದಾಸೆಗೆ ಬಿದ್ದು ಕೋಟ್ಯಂತರ ರೂಪಾಯಿ ನಷ್ಟ ಮಾಡಿಕೊಂಡವರು ಇದ್ದಾರೆ. ಜೊತೆಗೆ ಹಣ ಗಳಿಸುವ ಆಮೀಷವನ್ನು ತೋರಿಸಿ ಅಥವಾ ಹಣವನ್ನು ಹೂಡಿಕೆ ಮಾಡುವಂತೆ ಕೆಲವು ಆನ್ಲೈನ್ ಗೇಮ್ಗಳು ಜನರನ್ನ ಪ್ರಚೋದನೆ ಮಾಡುತ್ತವೆ. ಹೀಗಾಗಿ ಈ ಸಂಬಂಧ ಕೇಂದ್ರ ಸರ್ಕಾರ ಆನ್ಲೈನ್ ಗೇಮ್ ಗಳನ್ನು ನಿಷೇಧಿಸುವ ಕಾಯಿದೆಯೊಂದನ್ನು ಜಾರಿ ಮಾಡಿದೆ.

    ಹೌದು, ಈ ಬಾರಿಯ ಲೋಕಸಭೆಯ ಅಧಿವೇಶನದಲ್ಲಿ ಹಣ ಕಟ್ಟಿ ಆಡಲಾಗುವ ಆನ್ಲೈನ್ ಗೇಮ್ ಗಳನ್ನು ನಿಷೇಧಿಸುವ ಮಸೂದೆಯು ಅಂಗೀಕಾರಗೊಂಡಿತ್ತು. 2025ರ ಆಗಸ್ಟ್ 20ರಂದು ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿ, ಆಗಸ್ಟ್ 21ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ಕೊನೆಗೆ ಆಗಸ್ಟ್ 22ರಂದು ಈ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಅಂಕಿತ ಹಾಕಿದ್ದಾರೆ. ಈ ಮೂಲಕ ಈ ಕಾನೂನು ಹಣ ಕಟ್ಟಿ ಆಡಲಾಗುವ ಎಲ್ಲಾ ಆನ್ಲೈನ್ ಗೇಮ್ ಗಳನ್ನು ನಿಷೇಧಿಸುತ್ತದೆ.

    ಇದರ ಹಿಂದಿನ ಕಾರಣವೇನು?
    ಆನ್ಲೈನ್ ಗೇಮ್ ಒಂದು ವ್ಯಸನ ವಾಗಿ ಮಾರ್ಪಟ್ಟಿದೆ. ಇದಕ್ಕೆ ಮಾರುಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದಲ್ಲದೆ ಗೇಮಿಂಗ್ ಆಪ್ ಗಳ ಮೂಲಕ ಹಣ ಅಕ್ರಮ ವರ್ಗಾವಣೆ ಆಗುತ್ತಿದೆ. ಜೊತೆಗೆ ಹಣಕಾಸು ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಸೂದೆಯನ್ನು ರೂಪಿಸಿದೆ.

    ಈ ಕಾನೂನಿನಲ್ಲಿ ಏನಿದೆ?
    * ಆನ್ಲೈನ್ ಗೇಮ್ ಗಳಂತಹ ಚಟುವಟಿಕೆಗಳನ್ನ ಇದು ನಿಷೇಧಿಸುತ್ತದೆ. ಜೊತೆಗೆ ಈ ಗೇಮ್ ಗಳನ್ನು ಉತ್ತೇಜಿಸುವ ಹಾಗೂ ಜಾಹೀರಾತುಗಳನ್ನ ಪ್ರಕಟಿಸುವುದನ್ನು ಇದು ನಿಷೇಧಿಸುತ್ತದೆ.
    * ಆನ್ಲೈನ್ ಗೇಮ್ ಗಳಲ್ಲಿ ಕೆಲವು ಆಟಗಳು ಮನರಂಜನೆ ನೀಡುತ್ತವೆ. ಇವುಗಳನ್ನು ಸೇರಿಸಿ ಆನ್ಲೈನ್ ಜೂಜಾಟ ಹಾಗೂ ಲಾಟರಿಗಳಂತಹ ಆಟಗಳನ್ನು ಕೂಡ ಇದು ನಿಷೇಧಿಸುತ್ತದೆ
    * ಈ ಕಾನೂನಿನಡಿಯಲ್ಲಿ ಆನ್ಲೈನ್ ಗೇಮ್ ಆಡುವುದಕ್ಕೆ ಅವಕಾಶ ಹಾಗೂ ಪ್ರೋತ್ಸಾಹ ನೀಡುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂ. ದಂಡ ವಿಧಿಸಲಾಗುವುದು.
    * ಜೊತೆಗೆ ಇಂತಹ ಆಟಗಳ ಕುರಿತು ಜಾಹೀರಾತು ಪ್ರಕಟಿಸಿದರೆ ಎರಡು ವರ್ಷಗಳವರೆಗೆ ಶಿಕ್ಷೆ ಮತ್ತು ಐವತ್ತು ಲಕ್ಷ ರೂ. ದಂಡ ವಿಧಿಸಲಾಗುವುದು.
    * ಇನ್ನು ಅಪರಾಧಗಳ ಪುನರಾವರ್ತನೆಯ ಆದರೆ ಮೂರರಿಂದ ಐದು ವರ್ಷ ಜೈಲು ಹಾಗೂ ಎರಡು ಕೋಟಿ ರೂ. ವರೆಗೆ ದಂಡ ವಿಧಿಸಲಾಗುವುದು

    * ಮೂಲಗಳ ಪ್ರಕಾರ, ಆನ್ಲೈನ್ ಗೇಮ್ಗಳಿಂದಾಗಿ ಭಾರತೀಯರು ಪ್ರತಿ ವರ್ಷ 15,000 ಕೋಟಿ ರೂ. ಯನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕಳೆದ 31 ತಿಂಗಳಲ್ಲಿ ಈ ಆನ್ಲೈನ್ ಗೇಮ್ ವ್ಯಸನದಿಂದಾಗಿ ಕರ್ನಾಟಕದಲ್ಲಿ 32 ಜನರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಆನ್ಲೈನ್ ಗೇಮ್ ನಿಷೇಧದಿಂದಾಗಿ 400ಕ್ಕೂ ಅಧಿಕ ಕಂಪನಿಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

    ಆನ್ಲೈನ್ ಗೇಮ್ ಗಳಲ್ಲಿ ಮೂರು ವಿಭಾಗಗಳಿವೆ:
    – ರಿಯಲ್ ಮನಿ ಗೇಮ್ಸ್
    – ಇ ಸ್ಪೋರ್ಟ್ಸ್
    – ಸೋಶಿಯಲ್ ಗೇಮಿಂಗ್

    ಈ ಆಟಗಳ ಪೈಕಿ ನಿಜವಾದ ಹಣ ಹೂಡಿಕೆ ಮಾಡಿ ಆಡುವ ಆಟಗಳನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಇನ್ನು ಇ-ಸ್ಪೋರ್ಟ್ಸ್ ಗಳಂತಹ ಆಟಗಳನ್ನು ಅನುಮತಿ ಪಡೆದು ಆಡಲು ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಸೋಶಿಯಲ್ ಗೇಮ್ಸ್ ಗಳು ಹಣವಿಲ್ಲದೆ ಆಡುವ ಆಟಗಳಿಗೆ ಅನುಮತಿ ನೀಡಲಾಗಿದೆ. ಜೊತೆಗೆ ಈ ಆಟಗಳನ್ನು ಆಡುವಾಗ ಬ್ಯಾಂಕ್ ಅಥವಾ ಪೇಮೆಂಟ್ ಆಪ್ ಮೂಲಕ ಹಣ ಕಳಿಸುವುದನ್ನು ನಿಷೇಧಿಸಲಾಗಿದೆ. ಗೂಗಲ್ ಜಾಹೀರಾತುಗಳು, ಮೆಟಾ ಜಾಹೀರಾತುಗಳ ಮೂಲಕ ಇಂತಹ ಗೇಮ್ ಗಳನ್ನ ಪ್ರಚಾರ ಮಾಡುವುದಕ್ಕೆ ನಿಷೇಧಿಸಲಾಗಿದೆ.

    ಇನ್ನು ಈ ಕಾಯ್ದೆಯು ಕೇಂದ್ರ ಸರ್ಕಾರಕ್ಕೆ ಆನ್ಲೈನ್ ಗೇಮ್ ಗಳನ್ನು ಗುರುತಿಸಲು, ವರ್ಗಿಕರಿಸಲು ಸಹಾಯಮಾಡುತ್ತದೆ. ಇದರಿಂದ ಸರ್ಕಾರವು ಅನಧಿಕೃತ ಆಪ್ ಗಳನ್ನು ಬ್ಲಾಕ್ ಮಾಡುವ ಹಾಗೂ ಸರ್ವರ್ ಗಳನ್ನು ಬ್ಲಾಕ್ ಮಾಡುವ ಅಧಿಕಾರವಿರುತ್ತದೆ. ಒಂದು ವೇಳೆ ಅಗತ್ಯವಿದ್ದರೆ ವಾರೆಂಟ್ ಇಲ್ಲದೆಯೂ ಕೂಡ ಬಂಧಿಸುವ ಅಧಿಕಾರವಿರುತ್ತದೆ.

    ಇನ್ನುಳಿದಂತೆ ಗೇಮಿಂಗ್ ಕಂಪನಿಗಳು ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತರುವಂತೆ ಸೂಚನೆ ನೀಡಲಾಗಿದೆ. ಈ ಪೈಕಿ 18 ವರ್ಷಕ್ಕಿಂತ ಕಡಿಮೆ ಕಡಿಮೆ ಇರುವವರು ಈ ಗೇಮ್ ಗಳನ್ನು ಆಡುವುದಕ್ಕೆ ಪೋಷಕರ ಅನುಮತಿ ಪಡೆಯಬೇಕು. ದೀರ್ಘಕಾಲ ಆಡುವುದಕ್ಕೆ ತಡೆ ಹಿಡಿಯಲಾಗಿದೆ ಮತ್ತು ಬಳಕೆದಾರರು ದೂರು ಸಲ್ಲಿಸಲು ಅವಕಾಶ ನೀಡುವಂತೆ ಸೂಚಿಸಲಾಗಿದೆ.

    ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಗೇಮಿಂಗ್ ಉದ್ಯಮ ತೀವ್ರವಾಗಿ ಬೆಳೆಯುತ್ತಿದ್ದು, 2025ರ ಹೊತ್ತಿಗೆ ಎಂಟು ಬಿಲಿಯನ್ ಡಾಲರ್ ನಷ್ಟು ಆಗುವ ಸಾಧ್ಯತೆ ಇದೆ. ಹೀಗಾಗಿ ಇವುಗಳಿಂದ ಜನರಲ್ಲಿ ಆರ್ಥಿಕ ಸಮಸ್ಯೆ, ಸಾಲ, ಆತ್ಮಹತ್ಯೆ, ಮೋಸ, ಕ್ರಮ ಹಣ ಹೂಡಿಕೆಯಂತಹ ತೊಂದರೆಗಳನ್ನು ತಂದು ಹಾಕುತ್ತದೆ. ಇಂತಹ ಸಮಸ್ಯೆಗಳಿಂದ ಜನರನ್ನ ರಕ್ಷಿಸಲು, ಯುವಕರನ್ನ ಸರಿದಾರಿಯತ್ತ ಕರೆದುಕೊಂಡು ಹೋಗುವುದು ಹಾಗೂ ಇಂತಹ ಆಟಗಳಲ್ಲಿ ಸ್ಪಷ್ಟ ನಿಯಮಗಳನ್ನ ರೂಪಿಸುವ ಮೂಲ ಉದ್ದೇಶವನ್ನು ಈ ಕಾನೂನು ಹೊಂದಿದೆ.

    ಈ ಕಾನೂನು ಜಾರಿ ಬಳಿಕ ಕೆಲವು ವಿಷಯಗಳು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಗೇಮ್ಗಳ ನಿಷೇಧದಿಂದಾಗಿ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಅದಲ್ಲದೆ ಸದ್ಯಕ್ಕೆ ಆನ್ಲೈನ್ ಗೇಮ್ ಗಳನ್ನು ನಿಷೇಧದಿಂದಾಗಿ ಕೆಲವರು ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

  • ಕೇಂದ್ರ, ರಾಜ್ಯ ಸರ್ಕಾರಗಳ ಕಾಯ್ದೆ-ಕಾನೂನು ಕನ್ನಡ ಭಾಷೆಯಲ್ಲೇ ಲಭ್ಯ; 74 ಅಧಿನಿಯಮಗಳ ಕನ್ನಡ ಆವೃತ್ತಿ ಲೋಕಾರ್ಪಣೆ

    ಕೇಂದ್ರ, ರಾಜ್ಯ ಸರ್ಕಾರಗಳ ಕಾಯ್ದೆ-ಕಾನೂನು ಕನ್ನಡ ಭಾಷೆಯಲ್ಲೇ ಲಭ್ಯ; 74 ಅಧಿನಿಯಮಗಳ ಕನ್ನಡ ಆವೃತ್ತಿ ಲೋಕಾರ್ಪಣೆ

    ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆ ಮತ್ತು ಕಾನೂನುಗಳು ಜನಸಾಮಾನ್ಯರಿಗೆ ಸ್ಥಳೀಯ ಭಾಷೆಯಲ್ಲಿ ಒದಗಿಸುವ ಮೂಲಕ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾದ 42 ಕೇಂದ್ರ ಅಧಿನಿಯಮಗಳು ಹಾಗೂ 32 ರಾಜ್ಯ ಅಧಿನಿಯಮಗಳ ಕನ್ನಡ ಆವೃತ್ತಿಗಳನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (J.C.Madhuswamy) ಲೋಕಾರ್ಪಣೆ ಮಾಡಿದರು.

    ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ರಾಜಭಾಷಾ (ವಿಧಾಯೀ) ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯದಿಂದ ಈ ಅಧಿನಿಯಮಗಳ ಕನ್ನಡ ಆವೃತ್ತಿ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯಗೆ ವರುಣಾ ಟಿಕೆಟ್‌ – ಡಿಕೆಶಿ ಘೋಷಣೆ

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿನ ಅನುಷ್ಠಾನ ಮತ್ತು ಪಾಲನೆ ಮಾಡಬೇಕಾದರೇ ಅದರ ಅರಿವು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಸ್ಥಳೀಯ ಭಾಷೆಯಲ್ಲಿ ಒದಗಿಸಿ ಅರ್ಥೈಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿನಿಯಮಗಳನ್ನು ಕನ್ನಡಕ್ಕೆ ಭಾಷಾಂತರಗೊಳಿಸಲಾಗಿದೆ ಎಂದರು.

    ಜನಸಾಮಾನ್ಯರಿಗೆ ತಮ್ಮ ಸ್ಥಳೀಯ ಭಾಷೆಗಳಲ್ಲಿ ಕಾನೂನುಗಳನ್ನು ತಿಳಿದುಕೊಳ್ಳಲು ಹಾಗೂ ನ್ಯಾಯಾಲಯಗಳಲ್ಲಿ, ನ್ಯಾಯಾಧೀಕರಣಗಳಲ್ಲಿ ಸರ್ಕಾರದ ಕಚೇರಿಗಳಲ್ಲಿ ಕನ್ನಡದ ಬಳಕೆಯನ್ನು ಸುಗಮಗೊಳಿಸಲು ಈ ಅಧಿನಿಯಮಗಳು ತುಂಬಾ ಸಹಕಾರಿಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿನಿಯಮಗಳನ್ನು ಭಾಷಾಂತರಿಸುವ ಕೆಲಸ ವ್ಯಾಪಕವಾಗಿ ಆಗಬೇಕಿದೆ ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ ಅನ್ನೋದಕ್ಕೆ ಅಧಿಕಾರಿಗಳ ಬೀದಿ ರಂಪ ಸಾಕ್ಷಿ – ಸುರ್ಜೆವಾಲಾ

    ಕೇಂದ್ರ ಮತ್ತು ರಾಜ್ಯದ ಅಧಿನಿಯಮಗಳನ್ನು ಭಾಷಾಂತರಿಸುವುದಕ್ಕೆ ಕರ್ನಾಟಕದಲ್ಲಿ ವಿಶೇಷ ಒತ್ತು ನೀಡಲಾಗಿದ್ದು, ಕೇಂದ್ರ ಸರ್ಕಾರವೇ ಶ್ಲಾಘಿಸಿದೆ. ಜನರು ಕಾಯ್ದೆ, ಕಾನೂನುಗಳನ್ನು ಹೆಚ್ಚೆಚ್ಚು ತಿಳಿದುಕೊಂಡಲ್ಲಿ ಅವುಗಳ ಪರಿಣಾಮಕಾರಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಕರ್ನಾಟಕದ ನ್ಯಾಯಾಲಯಗಳಲ್ಲಿ ಕನ್ನಡದ ತೀರ್ಪುಗಳು ಹೊರಬರಲು ಹಾಗೂ ಆಡಳಿತ ವ್ಯವಹಾರಗಳಲ್ಲಿ ಮತ್ತು ಮೊಕದ್ದಮೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲೂ ಕೂಡ ಕನ್ನಡದ ಬಳಕೆ ಸಮರ್ಪಕವಾಗಿ ಆಗಬೇಕಾಗಿದೆ ಎಂದರು. ಇದನ್ನೂ ಓದಿ: ಸೈಬರ್ ಪ್ರಕರಣ ತಡೆಯಲು ಕಠಿಣ ಕ್ರಮ: ಆರಗ ಜ್ಞಾನೇಂದ್ರ

    ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ರಾಜಭಾಷಾ(ವಿಧಾಯೀ) ಆಯೋಗದ ಅಧ್ಯಕ್ಷರಾದ ಜಿ.ಶ್ರೀಧರ್ ಮಾತನಾಡಿ, ರಾಜಭಾಷಾ ಆಯೋಗವು ಇಲ್ಲಿಯವರೆಗೆ 371 ಕೇಂದ್ರ ಮತ್ತು 219 ರಾಜ್ಯ ಅಧಿನಿಯಮಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ಪ್ರಕಟಿಸಿದೆ. ಭಾರತ ಸಂವಿಧಾನವನ್ನು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸ್ಥಳೀಯ ಭಾಷೆಯಲ್ಲಿ ಭಾಷಾಂತರಿಸಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ನಮ್ಮ ಆಯೋಗಕ್ಕೆ ಸಲ್ಲುತ್ತದೆ ಎಂದು ಹೇಳಿದರು.

    ದೇಶದ ಪ್ರಮುಖ ಕಾನೂನುಗಳಾದ ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಭಾರತ ಸಾಕ್ಷ್ಯ ಅಧಿನಿಯಮಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ದ್ವಿಭಾಷೆಯಲ್ಲಿ ಪ್ರಕಟಿಸಲಾಗಿದೆ. ಪರಿಷ್ಕೃತ ಇಂಗ್ಲಿಷ್ ಕನ್ನಡ ಕಾನೂನು ಪದಕೋಶ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತರಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕೆಲಸ ಎಲ್ಲ ರಾಜ್ಯಗಳಲ್ಲಾಗಿದ್ದರೆ ಸ್ಥಳೀಯ ಭಾಷೆಯಲ್ಲಿ ನ್ಯಾಯಾಲಯ ತೀರ್ಪುಗಳನ್ನು ಪ್ರಕಟಿಸಲು ಸಹಾಯಕವಾಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದನ್ನು ಇದೇ ಸಂದರ್ಭದಲ್ಲಿ ತಿಳಿಸಿದರು.

    ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ ನಾರಾಯಣ, ಶಾಸಕ ದಿನಕರಶೆಟ್ಟಿ, ಭಾಷಾಂತರ ನಿರ್ದೇಶನಾಲಯದ ನಿರ್ದೇಶಕ ಎಂ.ವೆಂಕಟೇಶ, ರಾಜಭಾಷಾ(ವಿಧಾಯೀ) ಆಯೋಗದ ಸದಸ್ಯರು ಇದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಜರಾಯಿ ಇಲಾಖೆಯಲ್ಲಿನ ನಿಯಮ ಬದಲಾವಣೆಗೆ ಸ್ಫೂರ್ತಿಯಾಗಿದ್ದ ಕರುಣಾನಿಧಿ!

    ಮುಜರಾಯಿ ಇಲಾಖೆಯಲ್ಲಿನ ನಿಯಮ ಬದಲಾವಣೆಗೆ ಸ್ಫೂರ್ತಿಯಾಗಿದ್ದ ಕರುಣಾನಿಧಿ!

    ಬೆಂಗಳೂರು: ಕರ್ನಾಟಕದ ಮುಜರಾಯಿ ಇಲಾಖೆಯಲ್ಲಿನ ನಿಯಮ ಬದಲಾವಣೆಗೆ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಸ್ಫೂರ್ತಿಯಾಗಿದ್ದಾರೆ.

    ಹೌದು. ಸಿದ್ದರಾಮಯ್ಯನವರು ಕರ್ನಾಟಕದ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇಗುಲದಲ್ಲಿ ಎಲ್ಲಾ ಜಾತಿಯವರು ಅರ್ಚಕರಾಗಲು ಅವಕಾಶ ಕಲ್ಪಿಸಿ, ಆಗಮ ಶಾಲೆಯನ್ನು ತೆರೆಯಲು ಆದೇಶ ನೀಡಿದ್ದರ ಹಿಂದೆ ಕರುಣಾನಿಧಿಯವರ ಪ್ರೇರಕ ಶಕ್ತಿ ಕೆಲಸ ಮಾಡಿತ್ತು.

    ಕರುಣಾನಿಧಿಯವರು ಬ್ರಾಹ್ಮಣೇತರರಿಗೂ ದೇಗುಲದ ಅರ್ಚಕರಾಗಲು ಅವಕಾಶ ಕಲ್ಪಿಸಲು 47 ವರ್ಷದ ಹಿಂದೆಯೇ ತಮಿಳುನಾಡಲ್ಲಿ ಬಾರೀ ಹೋರಾಟ ನಡೆಸಿದ್ದರು. ಅಲ್ಲದೇ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಯಾರು ಬೇಕಾದರೂ ದೇಗುಲದ ಅರ್ಚಕರಾಗಬಹುದು ಎಂದು ಕಾಯ್ದೆಯನ್ನು ಜಾರಿಗೆ ತಂದಿದ್ದರು.

    ಈ ಕಾಯ್ದೆಯನ್ನು ವಿರೋಧಿಸಿ ತಮಿಳುನಾಡಿನಲ್ಲಿ ಭಾರೀ ಹೋರಾಟವೇ ನಡೆದಿತ್ತು. 2006 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಈ ಕಾಯ್ದೆಯನ್ನು ಜಾರಿಗೊಳಿಸಿಯೇ ಬಿಟ್ಟರು. ಕರುಣಾನಿಧಿಯವರು ದಲಿತರು ಸೇರಿದಂತೆ ಎಲ್ಲರಿಗೂ ಅರ್ಚಕರಾಗೋದಕ್ಕೆ ಆಗಮ ಶಾಲೆಯನ್ನು ಸಹ ಪ್ರಾರಂಭಿಸಿದ್ದರು.

    ಕರುಣಾನಿಧಿಯವರ ಪ್ರೇರಣೆಯಿಂದ ತಮಿಳುನಾಡಿನಲ್ಲಿ ತಂದ ಬದಲಾವಣೆಗಳನ್ನು ಕರ್ನಾಟಕದಲ್ಲೂ ಜಾರಿಗೆ ತರಲು ಸಿದ್ದರಾಮಯ್ಯ ಮುಂದಾದರು. ದಲಿತ ಅರ್ಚಕರನ್ನು ನಾವು ಯಾಕೆ ಮುಜರಾಯಿ ದೇವಾಲಯದಲ್ಲಿ ನೇಮಿಸಬಾರದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಹೀಗಾಗಿ ಈಗ ಕರ್ನಾಟಕದಲ್ಲೂ ದಲಿತರು ಸಂಸ್ಕೃತದಲ್ಲಿ ಆಗಮ ಶಾಸ್ತ್ರಗಳನ್ನು ಕಲಿಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಚಿತ್ರದುರ್ಗದಲ್ಲಿ ನಡೆಯುತ್ತೆ ಮುಗ್ಧ ಮಕ್ಕಳನ್ನು ಮುಳ್ಳಿನ ಮೇಲೆ ಉರುಳಾಡಿಸೋ ಆಚರಣೆ

    ಚಿತ್ರದುರ್ಗದಲ್ಲಿ ನಡೆಯುತ್ತೆ ಮುಗ್ಧ ಮಕ್ಕಳನ್ನು ಮುಳ್ಳಿನ ಮೇಲೆ ಉರುಳಾಡಿಸೋ ಆಚರಣೆ

    ಚಿತ್ರದುರ್ಗ: ರಾಜ್ಯ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರೋ ಸಿದ್ಧತೆಯಲ್ಲಿದೆ. ಆದರೆ ಮುಗ್ಧ ಮಕ್ಕಳನ್ನು ಮುಳ್ಳಿನ ಮೇಲೆ ಉರುಳಾಡಿಸೋ ಅಮಾನವೀಯ ಆಚರಣೆಯೊಂದು ಚಿತ್ರದುರ್ಗದಲ್ಲಿ ನಡೆದಿದೆ.

    ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಶೇ. 65ರಷ್ಟು ಹಿಂದುಳಿದ ಜನಾಂಗದವರಿದ್ದಾರೆ. ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಇಂದಿಗೂ ಜೀವಂತವಾಗಿವೆ. ಇದಕ್ಕೆ ಸಾಕ್ಷಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಐಲಾಪುರ ಎಂಬ ಗ್ರಾಮದಲ್ಲಿ ನಡೆಯುವ ಮುಳ್ಳಿನ ಪವಾಡ. ನವರಾತ್ರಿ ಆಚರಣೆಯ ಕೊನೆಯ ದಿನದಂದು ಈ ಗ್ರಾಮದಲ್ಲಿ ನಡೆಯೋ ದುರ್ಗಾಂಬಿಕಾ ದೇವಿಯ ಜಾತ್ರೆ ವೇಳೆ ದೇವಸ್ಥಾನದ ಮುಂಭಾಗದಲ್ಲಿ ಜಾಲಿ ಮುಳ್ಳಿನ ಗುಡ್ಡೆ ಹಾಕಿ ಅದರ ಮೇಲೆ ಮಕ್ಕಳನ್ನ ಮಲಗಿಸಿ ಉರುಳಾಡಿಸಲಾಗುತ್ತೆ. ಹೀಗೆ ಮಾಡಿದರೆ ಇಡೀ ಊರಿಗೆ ಒಳ್ಳೇದಾಗುತ್ತೆ ಎಂದು ನಂಬಿದ್ದಾರೆ.

    ಮುಳ್ಳಿನ ಮೇಲೆ ಮಕ್ಕಳನ್ನ ಮಲಗಿಸಿ ಹರಕೆ ತೀರಿಸುವ ತಾಯಂದಿರನ್ನು ಕೇಳಿದರೆ, ನಾವು ತಲಾ ತಲಾಂತರದಿಂದ ಈ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳುತ್ತಾರೆ. ರಾಜ್ಯದೆಲ್ಲೆಡೆ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ಬಗ್ಗೆ ಚರ್ಚೆಗಳು ಶುರುವಾಗಿದೆ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಹೂವಿನಂತ ಚರ್ಮದ ಮಕ್ಕಳನ್ನು ಮುಳ್ಳಿನ ಮೇಲೆ ಮಲಗಿಸುತ್ತಾರೆ.