Tag: ಕಾಯಿನ್

  • ವ್ಯಕ್ತಿ ಹೊಟ್ಟೆಯಲ್ಲಿ 187 ಕಾಯಿನ್ ಪತ್ತೆ

    ವ್ಯಕ್ತಿ ಹೊಟ್ಟೆಯಲ್ಲಿ 187 ಕಾಯಿನ್ ಪತ್ತೆ

    ಬಾಗಲಕೋಟೆ: ವ್ಯಕ್ತಿ ಹೊಟ್ಟೆಯಲ್ಲಿ 187 ಕಾಯಿನ್‍ಗಳು (Coin) ಪತ್ತೆಯಾಗಿದ್ದು, ಬಾಗಲಕೋಟೆಯ (Bagalkote) ಕುಮಾರೇಶ್ವರ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

    ದ್ಯಾಮಪ್ಪ ಹರಿಜನ (58) ಎಂಬವನೇ ಕಾಯಿನ್ ನುಂಗಿದ್ದ ವ್ಯಕ್ತಿ. ದ್ಯಾಮಪ್ಪ ರಾಯಚೂರು (Raichur) ಜಿಲ್ಲೆಯ ಲಿಂಗಸೂರು ಮೂಲದವರಾಗಿದ್ದು, ಸದ್ಯ ಬಾಗಲಕೋಟೆಯ ಶ್ರೀಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು 5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1ರ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು.

    ಆದರೆ ದ್ಯಾಮಪ್ಪ ಯಾವ ಕಾರಣಕ್ಕಾಗಿ ಇಷ್ಟೊಂದು ಕಾಯಿನ್‍ಗಳನ್ನು ನುಂಗಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಕುಟುಂಬಸ್ಥರು ಮಾತನಾಡಿ, ಆತ್ಮಹತ್ಯೆಗೆ ಪ್ರಯತ್ನಿಸಿರಬಹುದು ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದು ಪ್ರವಾಸದ ಬಳಿಕ ಕೋಲಾರ ಕ್ಷೇತ್ರದಲ್ಲಿ ಚುರುಕಾದ ಬಿಜೆಪಿ

    ಒಟ್ಟಾರೆಯಾಗಿ ವೈದ್ಯರಾದ ಡಾ. ಈಶ್ವರ ಕಲಬುರಗಿ, ಡಾ. ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಾದ ಡಾ. ಅರ್ಚನಾ, ಡಾ. ರೂಪಾ ಹುಲಕುಂದೆ ಅವರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ. ಎಂಡೋಸ್ಕೋಪಿ ಮೂಲಕ ವೈದ್ಯರು ಕಾಯಿನ್ ಹೊರತೆಗೆದಿದ್ದಾರೆ. ಇದನ್ನೂ ಓದಿ: ಆನೆ ಹಾವಳಿ ತಪ್ಪಿಸಲು ಟಾಸ್ಕ್ ಫೋರ್ಸ್ ರಚನೆ – ಅತಿ ಹೆಚ್ಚು ಆನೆ ಹೊಂದಿರುವ ಜಿಲ್ಲೆಯನ್ನೇ ಕೈಬಿಟ್ಟ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • 1957ರ ನಾಣ್ಯ ಮಾರಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ – ಆನ್‍ಲೈನ್ ವಂಚನೆಯಿಂದ ವ್ಯಕ್ತಿ ಆತ್ಮಹತ್ಯೆ

    1957ರ ನಾಣ್ಯ ಮಾರಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ – ಆನ್‍ಲೈನ್ ವಂಚನೆಯಿಂದ ವ್ಯಕ್ತಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಒಂದು ರೂಪಾಯಿ ಹಳೆಯ ಕಾಯಿನ್ ಮಾರಲು ಹೋದ ವ್ಯಾಪಾರಿಯೋರ್ವ ಆನ್‍ಲೈನ್ ವಂಚಕನಿಂದ ಮೋಸ ಹೋಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಚಿಕ್ಕಬಳ್ಳಾಪುರ ನಗರದ ಶಂಕರಮಠ ಏರಿಯಾದ ನಿವಾಸಿ ಅರವಿಂದ್ ಎಂದು ಗುರುತಿಸಲಾಗಿದ್ದು, ನಗರದ ಬಜಾರ್ ರಸ್ತೆಯಲ್ಲಿ ಗಿಫ್ಟ್ ಸೆಂಟರ್ ಅಂಗಡಿ ಇಟ್ಟುಕೊಂಡಿದ್ದರು. ಹಳೆಯ 1 ರೂಪಾಯಿ ಕಾಯಿನ್ ಕೊಟ್ಟರೆ, 58 ಲಕ್ಷ ರೂಪಾಯಿ ಕೊಡುತ್ತೇವೆ ಎಂಬ ಆನ್‍ಲೈನ್ ವಂಚಕನ ಮಾತು ನಂಬಿದ ಅರವಿಂದ್ ತಮ್ಮ ಬಳಿ ಇದ್ದ ಹಳೆ ಕಾಲದ 1 ರೂಪಾಯಿಯ ಕಾಯಿನ್ ಮಾರಾಟ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:  ದೇಶದ ಪರಿಸ್ಥಿತಿ ಚೆನ್ನಾಗಿಲ್ಲ, ಭಯಪಡಬೇಡಿ, ಹೋರಾಟ ಮುಂದುವರೆಸಿ: ಮಮತಾ ಬ್ಯಾನರ್ಜಿ

    ಸ್ವತಃ ಅರವಿಂದ್ ಅವರೇ ತಮ್ಮ ಬಳಿ ಇದ್ದ ಒಂದು ರೂಪಾಯಿಯ ಹಳೆಯ ಕಾಯಿನ್‍ಗಳ ಮಾರಾಟ ಮಾಡುವ ಐಡಿಯಾ ಮಾಡಿ, ಆನ್‍ಲೈನ್‍ನಲ್ಲಿ ಹಳೆಯ ಕಾಯಿನ್‍ಗಳನ್ನು ಖರೀದಿ ಮಾಡುವವರ ಮೊಬೈಲ್ ನಂಬರ್‍ಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಮೂರ್ನಾಲ್ಕು ನಂಬರ್‍ಗಳಿಗೆ ಕರೆ ಮಾಡಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಹಳೆಯ ಕಾಯಿನ್ ಖರೀದಿ ಮಾಡುತ್ತೇನೆ ಎಂದು ವಾಟ್ಸಾಪ್ ಮುಖಾಂತರ ಕಾಯಿನ್ ಫೋಟೋ ಕಳುಹಿಸಿಕೊಂಡು, ಈ ಕಾಯಿನ್‍ಗೆ 58 ಲಕ್ಷದ 38 ಸಾವಿರದ 808 ರೂಪಾಯಿ ಕೊಡುವುದಾಗಿ ಹೇಳಿದ್ದಾನೆ.

    ಇದನ್ನು ನಂಬಿದ ಅರವಿಂದ್ ಕಾಯಿನ್ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ ಇದಕ್ಕೆ ಪ್ರೊಸೆಸಿಂಗ್ ಫೀಸ್, ಆ ಫೀಸ್, ಈ ಫೀಸ್ ಕೊಡಬೇಕು ಅಂತ ಅರವಿಂದ್ ಬಳಿಯೇ ಆನ್‍ಲೈನ್ ವಂಚಕ ಸರಿಸುಮಾರು ಆಗಷ್ಟು, ಈಗಷ್ಟು ಅಂತ 26 ಲಕ್ಷ ವಸೂಲಿ ಮಾಡಿದ್ದಾರೆ. ಅಲ್ಲದೇ ಆನ್‍ಲೈನ್ ವಂಚಕನಿಗೆ ಹಣ ನೀಡುವುದಕ್ಕೆ ಅರವಿಂದ್ ತಮ್ಮ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲಾ ಅಡವಿಟ್ಟಿದ್ದಾರೆ. ಸಾಲದು ಅಂತ ಹಲವರ ಬಳಿ ಕೈ ಸಾಲ ಸಹ ಮಾಡಿದ್ದಾರೆ. ಆದರೆ ಇತ್ತ ಹಣ ಪಡೆದ ಆನ್‍ಲೈನ್ ವಂಚಕ ಮಾತ್ರ ಪಡೆದ ಹಣ ವಾಪಾಸ್ ಮಾಡಿಲ್ಲ. ಬದಲಾಗಿ ಮತ್ತಷ್ಟು ಹಣ ಕೊಡುವಂತೆ ಅರವಿಂದ್‍ಗೆ ಒತ್ತಡ ಹಾಕಿದ್ದಾನೆ. ಇದನ್ನೂ ಓದಿ: ಇಲಿ ಕಚ್ಚಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಯುಪಿ ಸಚಿವ – ಚಿಕಿತ್ಸೆ ಬಳಿಕ ಡಿಸ್ಚಾರ್ಜ್

    ಇದರಿಂದ ಏನು ಮಾಡಬೇಕೆಂದು ದಿಕ್ಕು ತೋಚದೇ ಅರವಿಂದ್ ಚಿಕ್ಕಬಳ್ಳಾಪುರ ನಗರದಿಂದ ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದ ಬಳಿ ನಿರ್ಜನ ಜಾಗಕ್ಕೆ ತೆರಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿನ ಕಾರಣ ಎಲ್ಲವನ್ನೂ ಸಹ ಡೆತ್ ನೋಟ್ ಬರೆದಿಟ್ಟಿದ್ದು, ಡೆತ್ ನೋಟ್‍ನಿಂದ ಅರವಿಂದ್ ಸಾವಿನ ಸತ್ಯ ಬಯಲಾಗಿದೆ. ಸದ್ಯ ಈ ಸಂಬಂಧ ಇದೀಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಮೆಟ್ರೋ ಪ್ರಯಾಣಿಕರಿಗೆ ಕಾಯಿನ್ ಬದಲು ಕಾಗದದ ಟಿಕೆಟ್ ಸಿಕ್ತು!

    ಮೆಟ್ರೋ ಪ್ರಯಾಣಿಕರಿಗೆ ಕಾಯಿನ್ ಬದಲು ಕಾಗದದ ಟಿಕೆಟ್ ಸಿಕ್ತು!

    ಬೆಂಗಳೂರು: ಬುಧವಾರ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿದ್ದರಿಂದ ಕಾಯಿನ್ ಬದಲು ಕಾಗದದ ಟಿಕೆಟ್ ವಿತರಿಸಲಾಗಿದೆ.

    ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ವಿಧಾನಸೌಧ ಮುಂದಿನ ರಸ್ತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು. ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಜನ ಮೆಟ್ರೋ ರೈಲು ಪ್ರಯಾಣಕ್ಕೆ ಮುಗಿಬಿದ್ದಿದ್ದರು.

    ದಿಢೀರ್ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದ್ದರಿಂದ ಕಾಯಿನ್ ಕೊರತೆ ಎದುರಿಸುತ್ತಿದ್ದ ಸಿಬ್ಬಂದಿ ಕಾಗದದ ಟಿಕೆಟ್‍ಗೆ ಮೊರೆ ಹೋಗಿದ್ದರು.

    ಸಾಮಾನ್ಯವಾಗಿ ಸಂಜೆ 4ರಿಂದ 6 ರವರೆಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇದೇ ಸಮಯದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಧಾನ ಸೌಧಕ್ಕೆ ಬರಲು ರಸ್ತೆ ಸಂಚಾರ ಮಾರ್ಗ ಬದಲಾಗಿದ್ದು, ಅನಿವಾರ್ಯವಾಗಿ ಮೆಟ್ರೋ ಪ್ರಯಾಣಕ್ಕೆ ಜನರು ಮುಂದಾಗಿದ್ದರು. ಹೀಗಾಗಿ ಎಂ.ಜಿ.ರಸ್ತೆ, ವಿಧಾನಸೌಧ, ಕಬ್ಬನ್ ಪಾರ್ಕ್ ಸೇರಿದಂತೆ ಕೆಲವು ಮೆಟ್ರೊ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು.