Tag: ಕಾಮೆಂಟ್

  • ‘ಕಾಂತಾರ’ ಸಿನಿಮಾ ಹಾಸ್ಯಾಸ್ಪದ ಮತ್ತು ಕಳಪೆಯಾಗಿದೆ : ನಿರ್ದೇಶಕ ಅಭಿರೂಪ್ ಬಸು

    ‘ಕಾಂತಾರ’ ಸಿನಿಮಾ ಹಾಸ್ಯಾಸ್ಪದ ಮತ್ತು ಕಳಪೆಯಾಗಿದೆ : ನಿರ್ದೇಶಕ ಅಭಿರೂಪ್ ಬಸು

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾವನ್ನು ಜಗತ್ತೇ ಹಾಡಿ ಹೊಗಳುತ್ತಿರುವ ಸಂದರ್ಭದಲ್ಲಿ ಬಂಗಾಲಿ (Bengali) ಸಿನಿಮಾ ನಿರ್ದೇಶಕ ಅಭಿರೂಪ್ ಬಸು (Abhiroop Basu) ಹಾಸ್ಯಾಸ್ಪದವಾಗಿ ಟೀಕೆ ಮಾಡಿದ್ದಾರೆ. ಇದೊಂದು ಹಾಸ್ಯಾಸ್ಪದ ಸಿನಿಮಾವಾಗಿದ್ದು, ಅತ್ಯಂತ ಕಳಪೆ ರೀತಿಯ ಕಥೆಯನ್ನು ಹೊಂದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಅಪ್ರಮಾಣಿಕವಾಗಿ ಕಥೆಯನ್ನು ಹೆಣೆಯಲಾಗಿದೆ ಎಂದೂ ಅವರು ಬರೆದಿದ್ದಾರೆ.

    ಜಗತ್ತಿನ ಜನರು ಬುದ್ದಿವಂತರು. ಅವರ ಬುದ್ದಿವಂತಿಕೆಯನ್ನೇ ಈ ಸಿನಿಮಾ ಅನುಮಾನಿಸುತ್ತದೆ ಮತ್ತು ಅಣಕಿಸುತ್ತದೆ ಎಂದಿರುವ ಅವರು, ಕಥೆಯಲ್ಲಿ ಪ್ರಾಮಾಣಿಕತೆಗಿಂತ ಗಿಮಿಕ್ ಗೆ ಹೆಚ್ಚು ಒತ್ತು ನೀಡಲಾಗಿದೆ. ಅದರಲ್ಲೂ ಎಲ್ಲರೂ ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಮಾತನಾಡುತ್ತಾರೆ. ನನಗೆ ಕ್ಲೈಮ್ಯಾಕ್ಸ್ ಬಗ್ಗೆ ಕುತೂಹಲ ಅಥವಾ ಆಸಕ್ತಿ ಉಳಿಯಲೇ ಇಲ್ಲವೆಂದು ಅವರು ದೀರ್ಘವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ಅಭಿರೂಪ್ ಬಸು ಅವರ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಸಾಕಷ್ಟು ಜನರು ವಿರೋಧ ವ್ಯಕ್ತ ಪಡಿಸಿದ್ದಾರೆ. ಅತ್ಯಂತ ಪ್ರತಿಭಾವಂತ ಹಿರಿಯ ನಟರು, ನಿರ್ದೇಶಕರು ಸಿನಿಮಾದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿರುವಾಗ ನಿಮ್ಮ ಕೊಳಕು ಮನಸ್ಸಿನಿಂದ ಆಚೆ ಬನ್ನಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಸಿನಿಮಾ ಗೆಲುವನ್ನು ನಿಮ್ಮಿಂದ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲವೆಂದು ಕಾಮೆಂಟ್ ಮಾಡಿದ್ದಾರೆ.

    ರಜನಿಕಾಂತ್, ಕಂಗನಾ ರಣಾವತ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ಅನೇಕರು ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇದೊಂದು ಅದ್ಭುತ ಸಿನಿಮಾ ಎಂದು ಬಣ್ಣಿಸಿದ್ದಾರೆ. ಅಲ್ಲದೇ, ರಿಷಬ್ ಶೆಟ್ಟಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಗೌರವಿಸಿದ್ದಾರೆ ರಜನಿಕಾಂತ್ ಈ ಹೊತ್ತಿನಲ್ಲಿ ಬಂಗಾಲದ ಸಿನಿಮಾ ನಿರ್ದೇಶಕ ಅಭಿರೂಪ್ ಬಸು, ನೆಗೆಟಿವ್ ಕಾಮೆಂಟ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್‍ಸ್ಟಾಗ್ರಾಮ್‍ನಲ್ಲಿ ಲೈಕ್, ಕಾಮೆಂಟ್ ವಿಚಾರಕ್ಕೆ ಜಗಳ – ಇಬ್ಬರ ಕೊಲೆಯಲ್ಲಿ ಅಂತ್ಯ

    ಇನ್‍ಸ್ಟಾಗ್ರಾಮ್‍ನಲ್ಲಿ ಲೈಕ್, ಕಾಮೆಂಟ್ ವಿಚಾರಕ್ಕೆ ಜಗಳ – ಇಬ್ಬರ ಕೊಲೆಯಲ್ಲಿ ಅಂತ್ಯ

    ನವದೆಹಲಿ: ಇನ್‍ಸ್ಟಾಗ್ರಾಮ್‍ನಲ್ಲಿ ಲೈಕ್ಸ್ ಮತ್ತು ಕಾಮೆಂಟ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನವದೆಹಲಿಯಲ್ಲಿ (Delhi) ನಡೆದಿದೆ.

    ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಮಹಿಳೆ ವಿಚಾರಕ್ಕೆ ದೆಹಲಿಯ ಹೊರಭಾಗದಲ್ಲಿರುವ ಭಾಲ್ಸ್ವಾ ಡೈರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ. ಘಟನೆ ಬಳಿಕ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಶೇ.50 ಪೂರ್ಣ – ಯೋಗಿ ಆದಿತ್ಯನಾಥ್‌

    ಮುಕುಂದಪುರ ಭಾಗ-2 (Mukundpur Part 2)ಪ್ರದೇಶದಲ್ಲಿ ತನ್ನನ್ನು ಭೇಟಿಯಾಗುವಂತೆ ಮಹಿಳೆ ಇಬ್ಬರಿಗೂ ಹೇಳಿದ್ದಳು. ಆದರೆ ಅಲ್ಲಿಗೆ ಬಂದಾಗ ವ್ಯಕ್ತಿಗಳ ಮೇಲೆ ದಾಳಿ ನಡೆದಿದೆ. ಅನೇಕ ಬಾರಿ ಚಾಕುವಿನಿಂದ ಇರಿದಿದ್ದರಿಂದ ವ್ಯಕ್ತಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಚಾಕುವಿನಿಂದ ಚುಚ್ಚುವುದಕ್ಕೂ ಮುನ್ನ ಕೂಡ ಆರೋಪಿಗಳು ಬೆದರಿಕೆಯೊಡ್ಡಿ ಎಸ್ಕೇಪ್ ಆಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊಬೈಲ್ ಕಳ್ಳನ ಕಾಲಿಗೆ ಪೊಲೀಸರಿಂದ ಫೈರಿಂಗ್ – ದ್ವಿಚಕ್ರ ವಾಹನ, ಮೂರು ಮೊಬೈಲ್ ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಹಲವು ರೀತಿಯಲ್ಲಿ ಬದಲಾಗಿದ್ದಾರಂತೆ. ಮೊದ ಮೊದಲು ಇವರು ಸೋಷಿಯಲ್ ಮೀಡಿಯಾದಲ್ಲಿ ಏನೇ ಹಾಕಿದರೂ ಟ್ರೋಲ್ ಆಗುತ್ತಿದ್ದರು. ನೆಗೆಟಿವ್ ಕಾಮೆಂಟ್ (Comment) ಮಾಡಲಾಗುತ್ತಿತ್ತು. ಆದರೆ, ಇದೀಗ ನೆಗೆಟಿವ್ ಕಾಮೆಂಟ್ ಮಾಡುವವರ ಸಂಖ್ಯೆ ಸಾಕಷ್ಟು ಇಳಿಮುಖ ಆಗಿದೆಯಂತೆ.

    ಈ ಕುರಿತು ಮಾತನಾಡಿರುವ ಅವರು, ಬಿಗ್ ಬಾಸ್ (Bigg Boss OTT) ಮನೆಯಿಂದ ಆಚೆ ಬಂದ ನಂತರ, ಪೋಸ್ಟ್ ಹಾಕಿದ್ದೆ. ನನ್ನನ್ನು ಜನರು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಗೊತ್ತಾಯಿತು. ನೆಗೆಟಿವ್ (Negative) ಕಾಮೆಂಟ್ ಒಂದೆರಡು ಬಂದಿರಬಹುದು. ಆದರೆ, ಪಾಸಿಟಿವ್ ಆಗಿ ವಿಶ್ ಮಾಡಿದವರೇ ಹೆಚ್ಚು. ನೆಗೆಟಿವ್ ಕಾಮೆಂಟ್ ಗೆ ನಾನು ಮೊದಲಿನಿಂದಲೂ ಕೇರ್ ಮಾಡಿಲ್ಲ. ಈಗಲೂ ಮಾಡಿಲ್ಲ. ನಾನು ಹೇಗೆ ಎನ್ನುವುದು ನನ್ನನ್ನು ಪ್ರೀತಿಸುವವರಿಗೆ ಗೊತ್ತಿದೆ’ ಎಂದಿದ್ದಾರೆ ಸೋನು. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ (Video) ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಯಿತು. ಅವರು ಬಿಗ್ ಬಾಸ್ ಮನೆಗೆ ಹೋದಾಗ ಆ ಕುರಿತು ಬಹಿರಂಗವಾಗಿಯೇ ಹೇಳಿಕೊಂಡರು. ಅಲ್ಲದೇ, ಆ ಹುಡುಗನ ಬಳಿ ಮತ್ತೊಂದು ವಿಡಿಯೋ ಇರುವುದಾಗಿಯೂ ತಿಳಿಸಿದ್ದರು. ಈ ವಿಷಯ ಕೇಳಿದ ಬಿಗ್ ಬಾಸ್ ಮನೆಯೇ ಶಾಕ್ ಗೆ ಒಳಗಾಗಿತ್ತು. ಈ ಕುರಿತು ಸೋನು ಮತ್ತೆ ಮಾತನಾಡಿದ್ದಾರೆ.

    ಖಾಸಗಿ ಸಂಗತಿಗಳು ಅಂದರೆ, ಇಬ್ಬರಲ್ಲೇ ಇರಬೇಕಾದದ್ದು. ಆದರೆ, ಆ ಹುಡುಗ ನಂಬಿಕೆ ದ್ರೋಹ ಮಾಡಿದ್ದಾನೆ ಎನ್ನುತ್ತಾರೆ ಸೋನು. ‘ನಾನು ಆ ಹುಡುಗನನ್ನು ನಂಬಿದ್ದೆ. ತುಂಬಾ ಇಷ್ಟ ಪಡುತ್ತಿದ್ದೆ. ಆದರೆ, ಅವನು ಆ ರೀತಿ ನಡೆದುಕೊಳ್ಳುತ್ತಾನೆ ಅಂತ ಅಂದುಕೊಂಡಿರಲಿಲ್ಲ. ಮೊದಲು ಆ ವಿಡಿಯೋವನ್ನು ಮಾಡಿಕೊಂಡಿದ್ದು ತಪ್ಪು. ಎರಡನೆಯದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ತಪ್ಪು. ಅದರಿಂದಾಗಿ ನನ್ನ ಮರ್ಯಾದೆ ಹೋಯಿತು ಅನ್ನುತ್ತಾರೆ.

    ಆ ವಿಡಿಯೋವನ್ನು ಅವನು ಹಾಕಿದ್ದಾನೋ ಅಥವಾ ಬೇರೆ ಯಾರಾದರೂ ಹಾಕಿದ್ದಾರೋ ಅದು ಬೇರೆ ವಿಚಾರ. ಆದರೆ, ಆ ಹುಡುಗ ವಿಡಿಯೋವನ್ನು ಶೂಟ್ ಮಾಡಿದ ಮೇಲೆ ಅಲ್ಲವೆ ಅಷ್ಟೊಂದು ಆಗಿದ್ದು? ಈ ರೀತಿ ಯಾವ ಹುಡುಗಿಗೂ ಮೋಸ ಆಗಬಾರದು. ಆ ಕಾರಣಕ್ಕಾಗಿಯೇ ನಾನು ಬಹಿರಂಗವಾಗಿಯೇ ಅದನ್ನು ಹೇಳಿದೆ. ಇಂತಹ ತಪ್ಪು ನಡೆಯಬಾರದು ಎನ್ನುವ ಕಾರಣಕ್ಕಾಗಿಯೇ ಎರಡನೇ ವಿಡಿಯೋ ಬಗ್ಗೆಯೂ ನಾನು ಮಾತನಾಡಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಲ್ಲಿ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ: ಹರಿದು ಬಂತು ನೆಗೆಟಿವ್ ಕಾಮೆಂಟ್

    ‘ಬಿಗ್ ಬಾಸ್’ ಮನೆಯಲ್ಲಿ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ: ಹರಿದು ಬಂತು ನೆಗೆಟಿವ್ ಕಾಮೆಂಟ್

    ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಇಂದಿನಿಂದ ಓಟಿಟಿಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಶೋ ಗ್ರ್ಯಾಂಡ್ ಎಂಟ್ರಿ ಎಪಿಸೋಡ್ ಬಹುತೇಕ ಚಿತ್ರೀಕರಣವಾಗಿದೆ. ಓಟಿಟಿ ವೇದಿಕೆಯು ದೊಡ್ಮನೆ ಪ್ರವೇಶ ಮಾಡಿರುವ ಸ್ಪರ್ಧಿಗಳ ಹೆಸರನ್ನು ಒಂದೊಂದೇ ಬಹಿರಂಗ ಪಡಿಸುತ್ತಿದೆ. ಮೊದಲನೇ ಸ್ಪರ್ಧಿಯಾಗಿ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಎರಡನೇ ಸ್ಪರ್ಧಿಯಾಗಿ ಕಾಲಿಟ್ಟವರು ಟಿಕ್ ಟಾಕ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಸೋನು ಗೌಡ.

    ಟಿಕ್ ಟಾಕ್ ಮೂಲಕವೇ ಅಸಂಖ್ಯಾತ ಫಾಲೋವರ್ಸ್ ಹೊಂದಿದ್ದ ಸೋನು ಗೌಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಇವರ ಹೆಸರು ಘೋಷಣೆ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಗಳು ಹರಿದು ಬಂದಿವೆ. ಕಾರಣ, ಕನ್ನಡದಲ್ಲಿ ಅತೀ ಹೆಚ್ಚು ಟ್ರೋಲ್ ಆದ ಟಿಕ್ ಟಾಕ್ ಸ್ಟಾರ್ ಕೂಡ ಇವರಾಗಿದ್ದಾರೆ. ಈ ಹಿಂದೆ ಸೋನು ಗೌಡ ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ಲೀಕ್ ಆಗಿ ವೈರಲ್ ಆಗಿತ್ತು. ಇದು ಕೂಡ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು.

    ಇಷ್ಟೇ ಅಲ್ಲ, ಇದೇ ಸೋನು ಈ ಹಿಂದೆ ಕನ್ನಡ ಮತ್ತು ತೆಲುಗು ಸಿನಿಮಾ ರಂಗವನ್ನು ಹೋಲಿಕೆ ಮಾಡಿ, ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದರು. ಕನ್ನಡ ಸಿನಿಮಾ ರಂಗದಲ್ಲಿ ಮೆಚ್ಚುವುದಕ್ಕಿಂತ ತುಳಿಯುವವರೇ ಹೆಚ್ಚು. ಹಾಗಾಗಿ ತೆಲುಗು ಸಿನಿಮಾ ರಂಗದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಾಗಿ ಸಂದರ್ಶನದಲ್ಲಿ ಹೇಳಿದ್ದರು. ಆಗಲೂ ಕೂಡ ಅವರನ್ನು ಸಖತ್ ಟ್ರೋಲ್ ಮಾಡಲಾಗಿತ್ತು. ಇದು ವಿವಾದ ಕೂಡ ಆಗಿತ್ತು. ಇದನ್ನೂ ಓದಿ:ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್

    ತೆಲುಗು ಸಿನಿಮಾ ರಂಗದಿಂದಲೇ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತೇನೆ ಎಂದು ಸೋನು ಹೇಳಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಅಸಂಖ್ಯಾತ ಹಿಂಬಾಲಕರು ಇರುವುದರಿಂದ, ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ ಕ್ಯಾಡ್ಬರೀಸ್ ಹೆಸರಿನ ಕನ್ನಡ ಸಿನಿಮಾದಲ್ಲಿ ಅವಕಾಶ ನೀಡಲಾಯಿತು. ನಟಿಸುವುದಕ್ಕಿಂತ ಟಿಕ್ ಟಾಕ್ ಬೆಸ್ಟ್ ಎಂದು ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡರು. ಬಿಗ್ ಬಾಸ್ ವಿನ್ನರ್ ‍ಪ್ರಥಮ ಕೂಡ ಇವರನ್ನು ಕರೆದು ತಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ಟರು.

    ತಮ್ಮ ಮಾತು ಮತ್ತು ಟಿಕ್ ಟಾಕ್ ಮೂಲಕ ಸದಾ ವಿವಾದಗಳನ್ನೇ ಮೈಮೇಲೆ ಎಳೆದುಕೊಂಡಿರುವ ಸೋನು ಗೌಡ,  ಇವತ್ತು ಕನ್ನಡದ ಖ್ಯಾತ ನಟ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ವೇದಿಕೆ ಏರಿದ್ದಾರೆ. ಅವರು ಮನೆಯಲ್ಲಿ ಹೇಗಿರುತ್ತಾರೋ ಅದು ಬೇರೆ ಮಾತು, ಈಗಲೇ ಸೋಷಿಯಲ್ ಮೀಡಿಯಾದಲ್ಲಿ ಸೋನು ಗೌಡ ಕುರಿತು ಅನೇಕರು ನೆಗೆಟಿವ್ ಕಾಮೆಂಟ್ ಬರೆಯುವ ಮೂಲಕ ಸೋನುವನ್ನು ಹೀಗೆ ನೆನಪಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೃತ್ತಿ ಮತ್ತು ಖಾಸಗಿ ಬದುಕು ಎರಡೂ ಬೇರೆ ಬೇರೆ: ಆಲಿಯಾ ಭಟ್

    ವೃತ್ತಿ ಮತ್ತು ಖಾಸಗಿ ಬದುಕು ಎರಡೂ ಬೇರೆ ಬೇರೆ: ಆಲಿಯಾ ಭಟ್

    ಬಾಲಿವುಡ್ ನಟಿ ಆಲಿಯಾ ಭಟ್ ಮದುವೆಯಾದ ಮೂರೇ ತಿಂಗಳಲ್ಲಿ ತಾವು ತಾಯಿ ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದರು. ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಸಂತಸ ಪಡಬೇಕಾಗಿದ್ದ ಗಳಿಗೆಯಲ್ಲಿ ನಟಿ ಆಲಿಯಾ ಭಟ್ ನೊಂದುಕೊಂಡರು. ಕಾರಣ ಅವರಿಗೆ ಮಾಡಿದ ಕಾಮೆಂಟ್. ಮದುವೆಗೂ ಮುನ್ನ ಆಲಿಯಾ ಭಟ್ ಪ್ರಗ್ನಂಟ್ ಆಗಿದ್ದರು ಎಂದು ಹಲವರು ಕಾಮೆಂಟ್ ಮಾಡಿದ್ದರು. ಮತ್ತಷ್ಟು ಜನರು ಪಗ್ನೆಂಟ್ ಆಗಿದ್ದರು ಎನ್ನುವ ಕಾರಣಕ್ಕಾಗಿಯೇ ಮದುವೆಯಾಗಿದ್ದಾರೆ ಎಂದು ಮಾತನಾಡಿಕೊಂಡಿದ್ದರು.

    ಪಗ್ನಂಟ್ ನಂತರವೂ ಆಲಿಯಾ ಭಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಪ್ರಮೋಷನ್ ಗಳಲ್ಲಿ ಭಾಗಿಯಾಗುತ್ತಾರೆ. ಹಾಗಾಗಿ ಅದಕ್ಕೂ ಕೆಲವರು ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆ. ಪ್ರಚಾರ ಪಡೆಯಲೆಂದೇ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಿಜವಾಗಿಯೂ ಪಗ್ನೆಂಟ್ ಆಗಿದ್ದೀರಾ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಹಾಗಾಗಿ ಸಹಜವಾಗಿಯೇ ಆಲಿಯಾ ಭಟ್ ಗರಂ ಆಗಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ

    ವೃತ್ತಿ ಮತ್ತು ವೈಯಕ್ತಿಕ ಜೀವನ ಬೇರೆ ಬೇರೆ. ಒಂದಕ್ಕೊಂದು ಹೋಲಿಸಬೇಡಿ. ನಾನು ಎರಡನ್ನೂ ಪ್ರೀತಿಸುವವಳು. ಮತ್ತಷ್ಟು ದಿನ ಚಿತ್ರೀಕರಣದಲ್ಲಿ ಭಾಗಿ ಆಗುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡಲು ಯಾರಿಗೂ ಹಕ್ಕಿಲ್ಲ ಎಂದು ಹೇಳಿದ್ದಾರೆ. ಇದೇ ಮುಂದುವರೆದರೆ ಖಾರವಾಗಿಯೇ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಆಲಿಯಾ ಪ್ರತಿಕ್ರಿಯೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ – ವ್ಯಕ್ತಿ ವಿರುದ್ಧ ದೂರು

    ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ – ವ್ಯಕ್ತಿ ವಿರುದ್ಧ ದೂರು

    ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿ ವಿರುದ್ಧ ಯೂಥ್ ಕಾಂಗ್ರೆಸ್ ದೂರು ನೀಡಿದೆ.

    ಇತ್ತೀಚೆಗಷ್ಟೇ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದರು. ಈ ಕುರಿತಂತೆ ಗೋವಿಂದ ನಾಯಕ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಶಾಂತಿ ಕದಡುವ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಇದನ್ನೂ ಓದಿ: ತಂದೆ ಎದುರೇ ಮಗುವನ್ನು ಟೆರೇಸ್ ಮೇಲಿಂದ ಕೆಳಗೆಸೆದ ಕೋತಿ ಗ್ಯಾಂಗ್ – ಹಸುಗೂಸು ಸಾವು

    ಗೋವಿಂದ್ ನಾಯಕ ಹುಣಸೂರಿನ ಕಲ್ಕುಣಿಕೆಯ ನಿವಾಸಿಯಾಗಿದ್ದು, ಇದೀಗ ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಗೆ ಯೂಥ್ ಕಾಂಗ್ರೆಸ್ ದೂರು ನೀಡಿದೆ. ಇದನ್ನೂ ಓದಿ: ಭಿನ್ನಮತಕ್ಕೆ ಬ್ರೇಕ್ ಹಾಕಲು ಉದ್ಧವ್ ಠಾಕ್ರೆ – ಶಿಂಧೆ ಸಭೆ, ಬಿಜೆಪಿ ನಾಯಕರೇ ಮಧ್ಯಸ್ಥಿಕೆ: ದೀಪಾಲಿ ಸೈಯದ್

    Live Tv
    [brid partner=56869869 player=32851 video=960834 autoplay=true]

  • ಕೆಎಲ್ ರಾಹುಲ್ ಪೋಸ್ಟ್‌ಗೆ ಅಥಿಯಾ ತಂದೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ

    ಕೆಎಲ್ ರಾಹುಲ್ ಪೋಸ್ಟ್‌ಗೆ ಅಥಿಯಾ ತಂದೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ

    ಬೆಂಗಳೂರು: ಟೀಂ ಇಂಡಿಯಾ ಭರವಸೆಯ ಆಟಗಾರ ಕೆಎಲ್ ರಾಹುಲ್ ಹಾಗೂ ಬಿಟೌನ್ ಬೆಡಗಿ ಅಥಿಯಾ ಶೆಟ್ಟಿ ರಿಲೇಶನ್‍ನಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಅಲ್ಲದೇ ಈ ಇಬ್ಬರು ಸುತ್ತಾಟ ನಡೆಸುತ್ತಿದ್ದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಸದ್ಯ ರಾಹುಲ್ ತಮ್ಮ ಇನ್‍ಸ್ಟಾದಲ್ಲಿ ಅಥಿಯಾರೊಂದಿಗೆ ಇರುವ ಫೋಟೋ ಪೋಸ್ಟ್ ಮಾಡಿದ್ದು, ಈ ಪೋಸ್ಟ್‌ಗೆ ಅಥಿಯಾ ತಂದೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

    ರಾಹುಲ್ ಈ ಫೋಟೋಗೆ ಬಾಲಿವುಡ್ ‘ಹೇರಾ ಫೇರಿ’ ಸಿನಿಮಾದ ಖ್ಯಾತ ಡೈಲಾಗ್ ‘ಹಲೋ ದೇವಿ ಶ್ರೀಪ್ರಸಾದ್’ ಎಂಬ ಹಣೆ ಬರಹ ನೀಡಿದ್ದರು. ಈ ಫೋಟೋ ಇನ್‍ಸ್ಟಾದಲ್ಲಿ ವೈರಲ್ ಆಗಿದ್ದು, ಇದುವರೆಗೂ 8 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿ, 3 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದಾರೆ.

    ಫೋಟೋದಲ್ಲಿ ರಾಹುಲ್ ಹಳೆಯ ಮಾದರಿಯ ಟೆಲಿಫೋನ್ ಹಿಡಿದು ಗಂಭೀರವಾಗಿ ಕಾಣಿಸುತ್ತಿದ್ದರೆ, ಅಥಿಯಾ ಕ್ಯಾಮೆರಾಗೆ ಪೋಸ್ ಕೊಟ್ಟು ನಗೆ ಚೆಲ್ಲಿದ್ದಾರೆ. ಇತ್ತ ಫೋಟೋಗೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿ, ಸೂಪರ್ ಇಮೋಜಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಸುನೀಲ್ ಶೆಟ್ಟಿ ಅವರ ಈ ಪ್ರತಿಕ್ರಿಯೆ ಕೆಎಲ್ ರಾಹುಲ್ ಅವರ ಅಭಿಮಾನಿಗಳಲ್ಲಿ ಹೊಸ ಸಂದೇಹಗಳಿಗೆ ಕಾರಣವಾಗಿದ್ದು, ಇಬ್ಬರು ನಡುವೆ ಏನೋ ನಡೆಯುತ್ತಿದೆ ಎಂಬ ಅಂಶವನ್ನು ತೆರೆದಿಟ್ಟಿದೆ. ಇತ್ತ ರಾಹುಲ್ ಗೆಳೆಯ, ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯೆ ನೀಡಿ, ‘ತುಂಬಾ ಕ್ಯೂಟ್’ ಆಗಿದ್ದೀರಿ ಎಂದಿದ್ದಾರೆ. ಮತ್ತೊಬ್ಬ ಆಟಗಾರ ಶಿಖರ್ ಧವನ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ರಾಹುಲ್ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಆಯ್ಕೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಇತ್ತ ಟೀಂ ಇಂಡಿಯಾ ಪರ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದು, ಟೆಸ್ಟ್ ಪಂದ್ಯಗಳಲ್ಲಿ ಕರ್ನಾಟಕ ಮತ್ತೊಬ್ಬ ಆಟಗಾರ ಮಯಾಂಕ್ ಅಗರ್ವಾಲ್‍ರೊಂದಿಗೆ ಸ್ಥಾನ ಪಡೆದಿದ್ದಾರೆ.

    https://www.instagram.com/p/B6mw63tgkxp/?utm_source=ig_web_button_share_sheet

  • ಪರಮೇಶ್ವರ್ ಈಸ್ ಬ್ಲಡಿ ನಾನ್ಸೆನ್ಸ್: ಶಾಸಕ ಸುಧಾಕರ್ ಲಾಲ್ ಪುತ್ರ ಕಮೆಂಟ್ ವಿವಾದ

    ಪರಮೇಶ್ವರ್ ಈಸ್ ಬ್ಲಡಿ ನಾನ್ಸೆನ್ಸ್: ಶಾಸಕ ಸುಧಾಕರ್ ಲಾಲ್ ಪುತ್ರ ಕಮೆಂಟ್ ವಿವಾದ

    ತುಮಕೂರು: ಫೇಸ್ ಬುಕ್‍ ನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬಗ್ಗೆ ಕೊರಟಗೆರೆಯ ಜೆಡಿಎಸ್ ಶಾಸಕ ಸುಧಾಕರ್ ಪುತ್ರ ಸುಚಾರಿತ್ ಲಾಲ್ ಹಾಕಿರುವ ಕಮೆಂಟ್ ಈಗ ವಿವಾದಕ್ಕೆ ಕಾರಣವಾಗಿದೆ.

    ತನ್ನ ಫೇಸ್ ಬುಕ್ ನಲ್ಲಿ ಡಾ. ಜಿ.ಪರಮೇಶ್ವರ್ ಅವರನ್ನು “ಬ್ಲಡಿ ನಾನ್ ಸೆನ್ಸ್” ಎಂದು ಸಂಭೋದಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.

    ಕೊರಟಗೆರೆ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಪರಮೇಶ್ವರ್ ಗೆಲ್ಲುತ್ತಾರೆ ಎಂಬ ಸಿ-04 ಸಮೀಕ್ಷೆಯೊಂದನ್ನು ಪೋಸ್ಟ್ ಮಾಡಿದ್ದವರ ಕಾಮೆಂಟ್ ಬಾಕ್ಸ್ ನಲ್ಲಿ ಸುಚಾರಿತ್ ಲಾಲ್, ಪರಮೇಶ್ವರ್ ‘ಈಸ್ ಎ ಬ್ಲಡಿ ನಾನ್ ಸೆನ್ಸ್’ ಎಂದು ಕಾಮೆಂಟ್ ಮಾಡಿ ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಈ ಚರ್ಚೆಯ ವೇಳೆ ಸಿಎಚ್‍ಎಸ್ ಸಮೀಕ್ಷೆ ಪ್ರಕಾರ ತನ್ನ ತಂದೆ ಸುಧಾಕರ್ ಲಾಲ್ ಗೆಲ್ಲುತ್ತಾರೆ ಎಂದು ಪೋಸ್ಟ್ ಮಾಡಿದ್ದಕ್ಕೆ, ಕಾಂಗ್ರೆಸ್ ಕಾರ್ಯಕರ್ತರು ಸುಚಾರಿತ್ ಕಾಮೆಂಟ್ ನ ವೈರಲ್ ಮಾಡಿ ಶಾಸಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.