Tag: ಕಾಮೆಂಟ್

  • ಅಶ್ಲೀಲ ಕಾಮೆಂಟ್ ಕೆಲವು ಜನರ ವೃತ್ತಿಯಾಗಿದೆ : ನಟಿ ಹನಿ ರೋಸ್

    ಅಶ್ಲೀಲ ಕಾಮೆಂಟ್ ಕೆಲವು ಜನರ ವೃತ್ತಿಯಾಗಿದೆ : ನಟಿ ಹನಿ ರೋಸ್

    ಕ್ಷಿಣದ ಖ್ಯಾತ ತಾರೆ ಹನಿ ರೋಸ್, ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಮತ್ತು ಅಶ್ಲೀಲ ಕಾಮೆಂಟ್ ಹಾಕುವವರ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ರೀತಿಯ ಕಾಮೆಂಟ್ ಮಾಡುವವರು ಅದನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇವರ ಸಲುವಾಗಿ ಸಮಾಜವನ್ನು ದೂಷಿಸುವ ಅಗತ್ಯವಿಲ್ಲ ಎಂದಿದ್ದಾರೆ. ತಮ್ಮ ಫೋಟೋ ಮತ್ತು ಫೋಟೋಗೆ ಕೆಟ್ಟದ್ದಾಗಿ ಕಾಮೆಂಟ್ ಹಾಕುವವರ ಬಗ್ಗೆ ಬೇಸರವನ್ನೂ ವ್ಯಕ್ತ ಪಡಿಸಿದ್ದಾರೆ.

    ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹನಿ ರೋಸ್ (Honey Rose). ಇವರು ಮಾಡಿದ ಸಿನಿಮಾಗಳಿಗಿಂತ ಇವರ ಹಾಟ್ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತವೆ. ನಡು ವಯಸ್ಸಿಗೆ ಹತ್ತಿರವಾಗಿರುವ ಹನಿ ಸೌಂದರ್ಯದ (Beauty) ಬಗ್ಗೆ ಹಲವರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಸ್ಪಷ್ಟನೆ ಕೊಟ್ಟರೂ ಈ ಪ್ರಶ್ನೆಗಳು ಮಾತ್ರ ನಿಲ್ಲದೇ ಇರುವುದಕ್ಕೆ ಹನಿಗೆ ಬೇಸರವಿದೆಯಂತೆ.

    ಮಾನಸ್ಟರ್, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ (Veera Simha Reddy) ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ (Balayya) ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ. ನೋಡಲು ಫಿಟ್ ಮತ್ತು ಮುದ್ದಾಗಿರೋ ಹನಿ ರೋಸ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದಕ್ಕೆ ಅವರು ಇಷ್ಟು ಮುದ್ದಾಗಿ ಕಾಣ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಈಗಾಗಲೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದರೂ, ಮತ್ತೆ ಇದೀಗ  ಇನ್ನೊಂದು ಸ್ಪಷ್ಟನೆ ನೀಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಅವರ ಬೋಲ್ಡ್ ಫೋಟೋಗಾಗಿಯೇ ಕಾಯುವ ಫ್ಯಾನ್ಸ್ ಇದ್ದಾರೆ. ಹನಿ ರೋಸ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದೇ ಅವರ ಸೀಕ್ರೆಟ್ ಎಂದು ಅನೇಕರು ಆರೋಪಿಸಿದ್ರು. ಈಗ ನಟಿ ತಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ. ನನಗೆ ದೇವರು ಈ ಅಂದ ಕೊಟ್ಟಿದ್ದು ಬಿಟ್ರೆ ಬೇರೇನೂ ಇಲ್ಲ ಎಂದಿದ್ದಾರೆ. ನಾನು ಯಾವುದೇ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಪ್ರಶ್ನೆಗಳು ನಿಲ್ಲದೇ ಇರುವುದಕ್ಕೆ ಬೇಸರಿಸಿಕೊಂಡಿದ್ದಾರೆ.

    ಸದ್ಯ ‘ರಾಚೆಲ್’ (Rachel) ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಿನ್ನವಾಗಿರುವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಟಿ ಫಸ್ಟ್ ಲುಕ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಕನ್ನಡ, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ರಾಚೆಲ್ ಸಿನಿಮಾ ಮೂಡಿ ಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯೂಟಿ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಮಾಡಿದ್ದಕ್ಕೆ ಬೇಸರಿಸಿಕೊಂಡ ಹನಿ ರೋಸ್

    ಬ್ಯೂಟಿ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಮಾಡಿದ್ದಕ್ಕೆ ಬೇಸರಿಸಿಕೊಂಡ ಹನಿ ರೋಸ್

    ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹನಿ ರೋಸ್ (Honey Rose). ಇವರು ಮಾಡಿದ ಸಿನಿಮಾಗಳಿಗಿಂತ ಇವರ ಹಾಟ್ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತವೆ. ನಡು ವಯಸ್ಸಿಗೆ ಹತ್ತಿರವಾಗಿರುವ ಹನಿ ಸೌಂದರ್ಯದ (Beauty) ಬಗ್ಗೆ ಹಲವರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಸ್ಪಷ್ಟನೆ ಕೊಟ್ಟರೂ ಈ ಪ್ರಶ್ನೆಗಳು ಮಾತ್ರ ನಿಲ್ಲದೇ ಇರುವುದಕ್ಕೆ ಹನಿಗೆ ಬೇಸರವಿದೆಯಂತೆ.

    ಮಾನಸ್ಟರ್, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ (Veera Simha Reddy) ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ (Balayya) ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ. ನೋಡಲು ಫಿಟ್ ಮತ್ತು ಮುದ್ದಾಗಿರೋ ಹನಿ ರೋಸ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದಕ್ಕೆ ಅವರು ಇಷ್ಟು ಮುದ್ದಾಗಿ ಕಾಣ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಈಗಾಗಲೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದರೂ, ಮತ್ತೆ ಇದೀಗ  ಇನ್ನೊಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಹ್ಯಾಕ್

    ಸೋಷಿಯಲ್ ಮೀಡಿಯಾದಲ್ಲಿ ಅವರ ಬೋಲ್ಡ್ ಫೋಟೋಗಾಗಿಯೇ ಕಾಯುವ ಫ್ಯಾನ್ಸ್ ಇದ್ದಾರೆ. ಹನಿ ರೋಸ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದೇ ಅವರ ಸೀಕ್ರೆಟ್ ಎಂದು ಅನೇಕರು ಆರೋಪಿಸಿದ್ರು. ಈಗ ನಟಿ ತಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ. ನನಗೆ ದೇವರು ಈ ಅಂದ ಕೊಟ್ಟಿದ್ದು ಬಿಟ್ರೆ ಬೇರೇನೂ ಇಲ್ಲ ಎಂದಿದ್ದಾರೆ. ನಾನು ಯಾವುದೇ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಪ್ರಶ್ನೆಗಳು ನಿಲ್ಲದೇ ಇರುವುದಕ್ಕೆ ಬೇಸರಿಸಿಕೊಂಡಿದ್ದಾರೆ.

    ಸದ್ಯ ‘ರಾಚೆಲ್’ (Rachel) ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಿನ್ನವಾಗಿರುವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಟಿ ಫಸ್ಟ್ ಲುಕ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಕನ್ನಡ, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ರಾಚೆಲ್ ಸಿನಿಮಾ ಮೂಡಿ ಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನಟ ಅರ್ಜುನ್ ಗರಂ

    ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನಟ ಅರ್ಜುನ್ ಗರಂ

    ನ್ನೊಂದಿಗೆ ಸಹಜೀವನ ನಡೆಸುತ್ತಿರುವ ನಟ ಅರ್ಜುನ್ ಕಪೂರ್ ಅವರ ಅರೆಬೆತ್ತಲೆ ಫೋಟೋ (Private Photo) ಹಂಚಿಕೊಂಡು ಸಾಕಷ್ಟು ಟ್ರೋಲ್ ಆಗಿದ್ದರು ನಟಿ ಮಲೈಕಾ ಅರೋರಾ (Malaika Arora). ಅರ್ಜುನ್ ಕಪೂರ್ ತನ್ನ ಖಾಸಗಿ ಭಾಗವನ್ನು ದಿಂಬಿನಿಂದ ಮುಚ್ಚಿಕೊಂಡಿದ್ದ ಫೋಟೋ ಅದಾಗಿತ್ತು. ಇಂತಹ ಫೋಟೋ ಹಂಚಿಕೊಳ್ಳುವ ಹಿಂದಿನ ಉದ್ದೇಶವೇನು ಎಂದು ಅನೇಕರು ಮಲೈಕಾಗೆ ಪ್ರಶ್ನೆ ಮಾಡಿದ್ದರು. ಸಾಕಷ್ಟು ನೆಗೆಟಿವ್ ಟೀಕೆಗಳು ವ್ಯಕ್ತವಾಗಿದ್ದವು.

    ನೆಗೆಟಿವ್ ಕಾಮೆಂಟ್ ಗಳು ಹೆಚ್ಚಾಗುತ್ತಿದ್ದಂತೆಯೇ ಸ್ವತಃ ಅರ್ಜುನ್ ಕಪೂರ್ ಅವರೇ ಅಖಾಡಕ್ಕೆ ಇಳಿದಿದ್ದರು. ಮೌನವಾಗಿ ಸಂಭ್ರಮಿಸಿ. ಶಾಂತಿ ಕಾಪಾಡಿಕೊಳ್ಳಿ ಎನ್ನುವಂತೆ ಅವರು ಕಾಮೆಂಟ್ (Comment)  ಮಾಡಿದ್ದರು. ಪರೋಕ್ಷವಾಗಿ ಅವರು ಟ್ರೋಲ್ ಮಾಡುತ್ತಿರುವವರಿಗೆ ಟಾಂಗ್ ಕೊಟ್ಟಿದ್ದರು. ಈ ಮೂಲಕ ಮಲೈಕಾ ಅರೋರಾ ಪರವಾಗಿ ನಿಂತುಕೊಂಡಿದ್ದರು. ಆದರೂ, ನೆಗೆಟಿವ್ ಕಾಮೆಂಟ್ ಗಳು ನಿಂತಿಲ್ಲ. ಟ್ರೋಲ್ ಮಾಡುವವರ ವಿರುದ್ಧ ಗರಂ ಆಗಿದ್ದಾರೆ.

    ಈ ರೀತಿಯ ಫೋಟೋಗಳನ್ನು ಹಂಚಿಕೊಳ್ಳುವುದು ಮಲೈಕಾಗೆ ಹೊಸದೇನೂ ಅಲ್ಲ. ಆಗಾಗ ತಮ್ಮ ಗ್ಲ್ಯಾಮರಸ್ ಫೋಟೋ ಹಂಚಿಕೊಳ್ಳುವ ಮೂಲಕ ನಟಿ ಸದ್ದು ಮಾಡ್ತಿರುತ್ತಾರೆ. ಇದೀಗ ಗೆಳೆಯ ಅರ್ಜುನ್ ಕಪೂರ್ ಅವರ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಇದನ್ನೂ ಓದಿ:ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ

    ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಜೋಡಿ ಅಂದರೆ ಅರ್ಜುನ್- ಮಲೈಕಾ ಅರೋರಾ. ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಮಲೈಕಾ ಮಾಡಿದ ಒಂದು ಕೆಲಸದಿಂದ ಅರ್ಜುನ್ ಕಪೂರ್ (Arjun Kapoor) ಸಖತ್ ಟ್ರೋಲ್ (Troll) ಆಗುತ್ತಿದ್ದಾರೆ.

    ಮಲೈಕಾ- ಅರ್ಜುನ್ ಕಪೂರ್ ರಿಲೇಷನ್‌ಶಿಪ್ ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮಲೈಕಾ, ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಲಿವಿಂಗ್ ರಿಲೇಷನ್‌ಶಿಪ್ನಲ್ಲೂ ಇದ್ದಾರೆ. ಆಗಾಗ ಇಬ್ಬರೂ ವಿದೇಶಕ್ಕೆ ಹೋಗಿ ಬರುತ್ತಾರೆ. ಅಷ್ಟರ ಮಟ್ಟಿಗೆ ಇಬ್ಬರ ಬಂಧ ಗಟ್ಟಿಯಾಗಿದೆ.

    ಇದೀಗ ‘ನನ್ನ ಲೇಝಿ ಬಾಯ್’ ಎಂದು ಅರ್ಜುನ್ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಅರ್ಜುನ್ ಕಪೂರ್ ಮೈ ಮೇಲೆ ಬಟ್ಟೆ ಇಲ್ಲದೆ ಕಪ್ಪು ಬಣ್ಣದ ತಲೆದಿಂಬು ಇಟ್ಟುಕೊಂಡು ಕ್ಲಿಕ್ಕಿಸಿದ ಫೋಟೋವನ್ನು ಮಲೈಕಾ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ನಟನ ಲುಕ್‌ಗೆ ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

  • ಫೇಕ್ ಐಡಿ ಮೂಲಕ ಕಾಮೆಂಟ್ ಮಾಡಿದರೆ ಜೈಲೇ ಗತಿ : ನಟ ಜಗ್ಗೇಶ್

    ಫೇಕ್ ಐಡಿ ಮೂಲಕ ಕಾಮೆಂಟ್ ಮಾಡಿದರೆ ಜೈಲೇ ಗತಿ : ನಟ ಜಗ್ಗೇಶ್

    ಸೋಷಿಯಲ್ ಮೀಡಿಯಾದಲ್ಲಿ (Social Media) ನಕಲಿ ಖಾತೆಗಳನ್ನು ಹೊಂದಿ, ಬಾಯಿಗೆ ಬಂದಂತೆ ಕಾಮೆಂಟ್ (Comment) ಮಾಡುವವರ ವಿರುದ್ಧ ನಟ ಜಗ್ಗೇಶ್ (Jaggesh) ಸಮರವನ್ನೇ ಸಾರಿದ್ದಾರೆ. ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಪ್ರಮೋಷನ್ ವೇಳೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಫೇಕ್ ಐಡಿ ಮೂಲಕ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಪಾಠ ಕಲಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

    JAGGESH

    ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರೀಯರಾಗಿರುವ ಮತ್ತು ಅನೇಕ ವಿಷಯಗಳನ್ನು ಅದರ ಮೂಲಕವೇ ತಿಳಿಸುವ ಜಗ್ಗೇಶ್ ಕಳೆದ ನಾಲ್ಕು ತಿಂಗಳಲ್ಲಿ 12ಕ್ಕೂ ಹೆಚ್ಚು ಫೇಕ್ ಐಡಿ ವೀರರನ್ನು ಜೈಲಿಗೆ (Jail) ಕಳುಹಿಸಿದ್ದಾರಂತೆ. ಈ ವಿಷಯವನ್ನು ಅವರು ಈವರೆಗೂ ಬಹಿರಂಗ ಮಾಡಿರಲಿಲ್ಲ. ಇದನ್ನೂ ಓದಿ:ಸಮಂತಾ ಫ್ಲಾಪ್‌ ಕ್ವೀನ್‌, ಆಕೆಗೆ ಮಾರ್ಕೆಟ್‌ ಇಲ್ಲ- ವಿಮರ್ಶಕನ ವಿವಾದಾತ್ಮಕ ಟ್ವೀಟ್‌

    JAGGESH

    ಈ ಸೋಷಿಯಲ್ ಮೀಡಿಯಾವನ್ನು ಕಂಡು ಹಿಡಿದವನಿಗೆ ದೊಡ್ಡದೊಂದು ನಮಸ್ಕಾರ ಹೇಳಬೇಕು. ನಾವು ಯಾವುದೇ ಮೂಲೆಯಲ್ಲಿರಲಿ, ನಮ್ಮವರು ಎಲ್ಲಿಯೇ ಇರಲಿ ಒಂದೇ ವೇದಿಕೆಯಲ್ಲಿ ಕ್ಷಣಾರ್ಧದಲ್ಲಿ ಸಂವಹನ ಮಾಡಬಹುದು. ಹಾಗಾಗಿ ಈ ವೇದಿಕೆಯನ್ನು ಕಂಡು ಹಿಡಿದವನ ಕಾಲಿಗೆ ಬೀಳಬೇಕು ಅನಿಸತ್ತೆ ಎಂದು ಅವರು ಮಾತನಾಡಿದ್ದಾರೆ.

    ನೆಗೆಟಿವ್ ಮತ್ತು ಪಾಸಿಟಿವ್ ಕಾಮೆಂಟ್ ಗಳ ಬಗ್ಗೆಯೂ ಜಗ್ಗೇಶ್ ಮಾತನಾಡಿ, ‘ಶೇಕಡಾ 99ಕ್ಕಿಂತಲೂ ಹೆಚ್ಚು ಪಾಸಿಟಿವ್ ಕಾಮೆಂಟ್ ಗಳೇ ಇರುತ್ತವೆ. ಉಳಿದ ಒಂದು ಪರ್ಸಂಟ್ ಫೇಕ್ ಐಡಿ ವೀರರಿಂದ ಬಂದಂತವುಗಳು. ಅವರನ್ನು ಹುಡುಕುವುದು ನನಗೇನೂ ಕಷ್ಟವಲ್ಲ. ಆಗಲೇ ಹುಡುಕಿ ಜೈಲಿಗೂ ಕಳಿಸಿದ್ದೇನೆ ಎಂದು ಅವರು ಮಾತನಾಡಿದ್ದಾರೆ.

  • ಉರ್ಫಿ ಫ್ಯಾಷನ್ ಗೆ ರಣಬೀರ್ ಕಪೂರ್ ಖಡಕ್ ರಿಯಾಕ್ಷನ್

    ಉರ್ಫಿ ಫ್ಯಾಷನ್ ಗೆ ರಣಬೀರ್ ಕಪೂರ್ ಖಡಕ್ ರಿಯಾಕ್ಷನ್

    ಬಾಲಿವುಡ್ ನಟಿ, ಫ್ಯಾಷನ್ ಜಗತ್ತಿನಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಉರ್ಫಿ ಜಾವೇದ್ (Urfi Javed) ಬಗ್ಗೆ ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ (Ranbir Kapoor) ಕಾಮೆಂಟ್ ಮಾಡಿದ್ದಾರೆ. ಕರೀನಾ ಕಪೂರ್ (Kareena Kapoor) ಜೊತೆಗಿನ ಸಂದರ್ಶನದಲ್ಲಿ ಅವರು ಉರ್ಫಿ ಕುರಿತಾಗಿ ಮಾತನಾಡಿದ್ದಾರೆ. ಆಕೆಯ ಫ್ಯಾಷನ್ ಅಭಿರುಚಿಯ ಬಗ್ಗೆಯೂ ಹೇಳಿದ್ದಾರೆ.

    ಸಂದರ್ಶನದಲ್ಲಿ ರಣಬೀರ್ ಕಪೂರ್ ಗೆ ಪ್ರಶ್ನೆ ಮಾಡುವ ಕರೀನಾ, ‘ಫ್ಯಾಷನ್ ವಿಷಯದಲ್ಲಿ ಉರ್ಫಿ ಬಗ್ಗೆ ಏನು ಹೇಳುತ್ತೀರಿ? ಅವರ ಫ್ಯಾಷನ್ ಗೆ ನೀವು ಅಭಿಮಾನಿಯಾ?’ ಎಂದು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವ ರಣಬೀರ್ ‘ನಾನು ಅವಳ ಫ್ಯಾಷನ್ ಗೆ ಕಂಡಿತಾ ಅಭಿಮಾನಿಯಲ್ಲ. ಅಸಲಿಯಾಗಿ ಅದು ಫ್ಯಾಷನ್ ಅಲ್ಲ. ಅವಳ ಕೆಟ್ಟ ಅಭಿರುಚಿ’ ಎಂದು ಉತ್ತರಿಸಿದ್ದಾರೆ ರಣಬೀರ್. ಇದನ್ನೂ ಓದಿ: ಭೈರತಿ ರಣಗಲ್‌ಗೆ `ಕೆಜಿಎಫ್ 2′ ರವಿ ಬಸ್ರೂರು ಸಂಗೀತ

    ಉರ್ಫಿ ಜಾವೇದ್ ಬಗ್ಗೆ ರಣಬೀರ್ ಆಡಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಮಾತಿಗೆ ಉರ್ಫಿ ಯಾವ ರೀತಿಯಲ್ಲಿ ತಿರುಗೇಟು ನೀಡುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ತನ್ನ ತಂಟೆಗೆ ಬರುವ ಯಾರನ್ನೂ ಉರ್ಫಿ ಬಿಡುವುದಿಲ್ಲ. ಈಗಾಗಲೇ ತನ್ನ ಬಗ್ಗೆ ಕಾಮೆಂಟ್ ಮಾಡಿರುವವರಿಗೆ ಅಷ್ಟೇ ತೀವ್ರಗತಿಯಲ್ಲಿ ಉತ್ತರ ಕೊಟ್ಟಿದ್ದಾರೆ ಉರ್ಫಿ. ಇದೀಗ ಯಾವ ರೀತಿಯಲ್ಲಿ ಆ ಕಾಮೆಂಟ್ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    ಉರ್ಫಿ ವಿಚಿತ್ರ ಕಾಸ್ಟ್ಯೂಮ್ ಗಳಿಂದ ಸದಾ ಸುದ್ದಿಯಲ್ಲಿ ಇರುತ್ತೇವೆ. ಅರೆಬರೆ ಬಟ್ಟೆ ಹಾಕಿಕೊಂಡು ಬೀದಿಗಿಳಿಯುವ ಅವರ ಬಗ್ಗೆ ಈಗಾಗಲೇ ಹಲವು ದೂರುಗಳು ಕೂಡ ದಾಖಲಾಗಿವೆ. ಪೊಲೀಸ್ ಠಾಣೆ ಮೆಟ್ಟಿಲನ್ನೂ ಅವರು ಏರಿದ್ದಾರೆ. ಆದರೂ, ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ವಿವಿಧ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈ ಕಾರಣದಿಂದಾಗಿಯೇ ದಿನದಿಂದ ದಿನಕ್ಕೆ ಅವರ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

  • ರಶ್ಮಿಕಾ ಪಾಪದ ಹುಡುಗಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದ ಸಾಹಿತಿ ಗುರುರಾಜ ಕೊಡ್ಕಣಿ

    ರಶ್ಮಿಕಾ ಪಾಪದ ಹುಡುಗಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದ ಸಾಹಿತಿ ಗುರುರಾಜ ಕೊಡ್ಕಣಿ

    ನ್ಯಾಷನಲ್ ಕ್ರಶ್ ಎಂದೇ ಖ್ಯಾತರಾಗಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಚರ್ಚೆಯಲ್ಲವನ್ನೂ ಗಮನಿಸಿರುವ ಸಾಹಿತಿ ಗುರುರಾಜ ಕೊಡ್ಕಣಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ಉಳಿದ ಎಷ್ಟೊ ನಟಿಯರಿಗೆ ಹೋಲಿಸಿದರೆ ನಟಿ ರಶ್ಮಿಕಾ ಮಂದಣ್ಣ  ಕಳಪೆ ನಟಿ ಮತ್ತು ಪಡೆದ ಹೆಸರಿನಷ್ಟು ಮಹಾ ಸುಂದರಿಯಲ್ಲ ಎನ್ನುವುದು ನನ್ನ ತೀರ ವೈಯಕ್ತಿಕ ಅಭಿಪ್ರಾಯ. ಆದರೆ ಆಕೆಯ  ಹುಟ್ಟು ಹಬ್ಬಕ್ಕೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದಾಗ ನನಗೆ ರಕ್ಷಿತ್ ಮನಸ್ಥಿತಿಯ ಬಗ್ಗೆ ಸಣ್ಣ ಅನುಮಾನವೇ. ಹಿಂದಿನ ಬಾರಿ ಅಂತದ್ದೊಂದು ಪೋಸ್ಟ್ ಹಾಕಿದ ಮೇಲೆ ಜನರಿಂದ ಆತನ ‘ಅಮರ ಪ್ರೇಮ’ದ ಪ್ರಶಂಸೆ, ಜೊತೆಗೆ ರಶ್ಮಿಕಾಗೆ ಹೆಚ್ಚುಕಡಿಮೆ ವೇಶ್ಯೆಯ ಪಟ್ಟ ಕಟ್ಟಿದ್ದನ್ನೂ ನೋಡಿದ ಮೇಲೂ ಮರು ವರ್ಷ ಆತ ಮತ್ತದೇ ಪೋಸ್ಟ್ ಹಾಕಿದಾಗ ,’ಈತನಿಗೆಲ್ಲೊ ಇದರಲ್ಲೊಂದು ಸಣ್ಣ ವಿಕೃತಾನಂದವಿರಬಹುದಾ’ ಎನ್ನಿಸಿದ್ದೂ ಇದೆ.

    ಅದರಾಚೆಗೂ ರಶ್ಮಿಕಾ ಅವರಿವರಿಂದ ಅನುಭವಿಸಿದ ಟೀಕೆಗಳು, ಮನೋವಿಕಾರಗಳು ಕಡಿಮೆಯೇನೂ ಅಲ್ಲ. ಅದ್ಯಾವುದೋ ಟ್ರಾಲ್ ಪೇಜಿನವನು ಆಕೆಯ ಬಾಲ್ಯದ ಚಿತ್ರವನ್ನಿಟ್ಟು ,’ಮುಂದೊಂದು ದಿನ ಈಕೆ —— ಆಗುತ್ತಾಳೆಂದು ಯಾರಿಗೆ ಗೊತ್ತಿತ್ತು’ ಎಂಬ ಅತಿವಿಕಾರದ ಪೋಸ್ಟ್ ಹಾಕಿದ್ದು, ಅದಕ್ಕಾಕೆ ನೊಂದುಕೊಂಡು ಪ್ರತಿಕ್ರಿಯೆ ನೀಡಿದ್ದೆಲ್ಲವೂ ಇನ್ನೂ ಕಣ್ಣೆಗೆ ಕಟ್ಟಿದಂತಿದೆ. ಈ ಎಲ್ಲ ಹೀನಾತಿಹೀನ ವರ್ತನೆಗಳ ನಂತರವೂ, ಟೀಕೆಗಳ ನಂತರವೂ ಇಂದು ಆಕೆ ಬೆಳೆದು ನಿಂತ ಬಗೆಗೆ ಖಂಡಿತವಾಗಿಯೂ ನನ್ನಲ್ಲೊಂದು ಅಚ್ಚರಿ ಬೆರಗು ಮೆಚ್ಚುಗೆಗಳ ಮಿಶ್ರಭಾವವಿರುವುದು ಸಹ ಸುಳ್ಳಲ್ಲ ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ಆದರೆ ಇದರೆಲ್ಲದರಾಚೆಗೂ ರಶ್ಮಿಕಾ ಮಾಡಿದ್ದೆಲ್ಲವೂ ಸರಿಯೆನ್ನುವುದು ನನ್ನ ಮಾತಿನ ತಾತ್ಪರ್ಯವಲ್ಲ. ಆಕೆಯೆಡೆಗಿನ ಎಲ್ಲ ವೈಯಕ್ತಿಕ ವಿಕಾರ ವ್ಯಂಗ್ಯಗಳನ್ನು ವಿರೋಧಿಸುತ್ತಲೇ ಈ ಬಾರಿಯ ಆಕೆಯ ವರ್ತನೆಗೆ ನನ್ನ ವಿರೋಧವಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ. ವೃತ್ತಿ ಬದುಕಿನುದ್ದಕ್ಕೂ ವ್ಯಂಗ್ಯ ವಿಕಾರಗಳನ್ನೇ ಎದುರಿಸುತ್ತ ಬಂದ ಆಕೆಗೆ  ತನ್ನನ್ನು ಮೊದಲ ಬಾರಿಗೆ ಜನರೆದುರು ಪರಿಚಯಿಸಿದ ನಿರ್ಮಾಪಕರ ಬಗೆಗಿನ ವ್ಯಂಗ್ಯ ಬೇಕಿರಲಿಲ್ಲ. ಅನಿಲ್ ಕಪೂರ್ ರಂತಹ ನಟ ಇಂದಿಗೂ ‘ತಾನು ನಟಿಸಿದ ಮೊದಲ ಸಿನಿಮಾ ಪಲ್ಲವಿ ಅನುಪಲ್ಲವಿ’ ಎಂದೇ ಹೇಳಿಕೊಳ್ಳುತ್ತಾರೆ. ಹೇಳಿಕೊಳ್ಳದಿದ್ದರೂ ದೊಡ್ಡ ವ್ಯತ್ಯಾಸವಾಗದಿದ್ದರೂ ಅದೊಂದು ಸೌಜನ್ಯದ ಮಾತು. ಹಾಗಿರುವಾಗ ತನ್ನ ಮೊಟ್ಟ ಮೊದಲ ನಿರ್ಮಾಪಕರ ಹೆಸರು ಹೇಳುವಾಗ ಸುಮ್ಮನೇ ಕೈಬೆರಳೆತ್ತಿ ” This Production House ” ಎಂದದ್ದು ಸಾಮಾನ್ಯ ಪ್ರೇಕ್ಷಕನಿಗೆ ಅಹಮಿಕೆಯ ಭಾವವಾಗಿಯೇ ಗೋಚರಿಸುತ್ತದೆ. ಈಗ ಆಕೆ ಎದುರಿಸುತ್ತಿರುವ ಟೀಕೆಗಳಿಗೆ ಆ ಅಹಮಿಕೆಯ ಭಾವವೇ ಕಾರಣವೇ ಹೊರತು ಮತ್ತೇನಲ್ಲ.

    ಗಾಜಿನ ಮನೆಯಲ್ಲಿ ಕೂತು ಮತ್ತೊಬ್ಬರ ಮನೆಯತ್ತ ಕಲ್ಲೆಸೆಯಬಾರದಂತೆ. ರಶ್ಮಿಕಾ ಇಷ್ಟು ಕಾಲ ಗಾಜಿನ ಮನೆಯಲ್ಲೇನೂ ಇರಲಿಲ್ಲ. ಆದರೆ ಇಂಥದ್ದೊಂದು ಅನಗತ್ಯದ ವರ್ತನೆಯಿಂದ ಗಾಜಿನ ಮನೆಯನ್ನು ಸೃಷ್ಟಿಸಿಕೊಂಡಿದ್ದಲ್ಲದೇ ಕಲ್ಲನ್ನೂ ಸಹ ಎತ್ತೆಸೆದಳು. ಪರಿಣಾಮವಾಗಿ ಒಂದಷ್ಟು ಕಲ್ಲುಗಳು ಆಕೆಯತ್ತ ತೂರಿ ಬರುವಾಗ ‘ಅಯ್ಯಯ್ಯೊ ಬಿಟ್ಬಿಡಿ ಪಾಪದ ಹುಡುಗಿ’ ಎನ್ನುವುದರಲ್ಲಿ ಅರ್ಥವೇನೂ ಇಲ್ಲ.

    Live Tv
    [brid partner=56869869 player=32851 video=960834 autoplay=true]

  • ಗಂಡನ ಹಣ ಖರ್ಚು ಮಾಡಿದರೆ ನಿಮಗೇನು ಸಮಸ್ಯೆ?: ಗರಂ ಆದ ನಿವೇದಿತಾ

    ಗಂಡನ ಹಣ ಖರ್ಚು ಮಾಡಿದರೆ ನಿಮಗೇನು ಸಮಸ್ಯೆ?: ಗರಂ ಆದ ನಿವೇದಿತಾ

    ಟಿ, ಗಾಯಕ ಚಂದನ್ ಶೆಟ್ಟಿ ಅವರ ಪತ್ನಿ ನಟಿ ನಿವೇದಿತಾ ಗೌಡ ಸದ್ಯ ಬಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ತಾವು ಒಬ್ಬರೇ ಬಾಲಿಗೆ ಹೋದ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು ನಿವಿ. ಬಾಲಿಯಲ್ಲಿ ಕಳೆದ ದಿನಗಳನ್ನು ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಒಂದೊಂದೇ ಪೋಸ್ಟ್ ಮಾಡುತ್ತಿದ್ದಾರೆ. ಈ ಫೋಟೋ ಕಂಡು ಕೆಲವರು ಕೆಟ್ಟದ್ದಾಗಿ ನಿವೇದಿತಾಗೆ ಕಾಮೆಂಟ್ ಮಾಡಿದ್ದಾರೆ. ಇದರಿಂದಾಗಿ ನಿವಿ ಸಹಜವಾಗಿಯೇ ಗರಂ ಆಗಿದ್ದಾರೆ.

    ಗಂಡ ದುಡಿದ ದುಡ್ಡಿನಲ್ಲಿ ಒಬ್ಬಳೇ ಎಂಜಾಯ್ ಮಾಡುತ್ತಿದ್ದೀಯಾ? ಎಂದು ಕೆಲವರು ಕೆಟ್ಟದ್ದಾಗಿಯೇ ಕಾಮೆಂಟ್ ಮಾಡಿದ್ದು, ಅದಕ್ಕೆ ನಿವಿ ಅಷ್ಟೇ ತೀಕ್ಷ್ಣವಾಗಿ ಉತ್ತರ ನೀಡಿದ್ದಾರೆ. ‘ನಾನು ನನ್ನ ದುಡ್ಡಿನಲ್ಲಿ ಪ್ರವಾಸ ಮಾಡುತ್ತಿರುವುದು. ನನಗೂ ದುಡಿಯುವ ಶಕ್ತಿ ಇದೆ. ಹುಡುಗರು ಸೋಲೋ ಟ್ರಿಪ್ ಹೋದರೆ, ಯಾರಿಗೂ ಏನೂ ಅನಿಸುವುದಿಲ್ಲ. ಹುಡುಗಿಯರು ಹೋದರೆ, ಈ ರೀತಿ ಕೆಟ್ಟ ಕಾಮೆಂಟ್ ಮಾಡುತ್ತೀರಿ. ಅಷ್ಟಕ್ಕೂ ನಾನು ನನ್ನ ಗಂಡನ ದುಡ್ಡಿನಲ್ಲಿ ಹೋದರೆ ನಿಮಗೇನು ಸಮಸ್ಯೆ? ಎಂದು ಹೇಳುವ ಮೂಲಕ ಚಳಿ ಬಿಡಿಸಿದ್ದಾರೆ.. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ಕಿರುತೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ನಿವೇದಿತಾ ಗೌಡ ಬಳಿಕ ನಟನೆ, ಮಾಡೆಲಿಂಗ್, ಮದುವೆ, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ಹಾಕಿ, ಬಾಲಿಯಲ್ಲಿ ನಟಿ ಕಾಲ ಕಳೆಯುತ್ತಿದ್ದಾರೆ. ಪತಿ ಚಂದನ್‌ನ ಬಿಟ್ಟು ಸೋಲೋ ಟ್ರಿಪ್‌ನ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಟ್ರಿಪ್ ಫೋಟೋ, ವೀಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಬಾಲಿಗೆ ತಾವು ಸೋಲೋ ಟ್ರಿಪ್ ಹೊರಟಿರುವುದಾಗಿ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಸದ್ಯ ತಮ್ಮ ಸೋಲೋ ಟ್ರಿಪ್‌ನ್ನ ನಿವೇದಿತಾ ಸಖತ್ ಆಗಿ ಏಂಜಾಯ್ ಮಾಡ್ತಿದಾರೆ. ಇನ್ನೂ ಸದ್ಯದಲ್ಲೇ ನಿವೇದಿತಾ ಗೌಡ, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಅದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ ಮಂದಣ್ಣ ‘ಥ್ಯಾಂಕ್ಯೂ ಮೈ ಲವ್ಸ್’ ಅಂತ ಹೇಳಿದ್ದು ಯಾರಿಗೆ?

    ರಶ್ಮಿಕಾ ಮಂದಣ್ಣ ‘ಥ್ಯಾಂಕ್ಯೂ ಮೈ ಲವ್ಸ್’ ಅಂತ ಹೇಳಿದ್ದು ಯಾರಿಗೆ?

    ಮ್ಮ ಬಗ್ಗೆ ಟ್ರೋಲ್ ಮಾಡುವವರ ವಿರುದ್ಧ ಇದೇ ಮೊದಲ ಬಾರಿಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು ನಟಿ ರಶ್ಮಿಕಾ ಮಂದಣ್ಣ. ನೆಗೆಟಿವ್ ಕಾಮೆಂಟ್ ಮಾಡುವುದಲ್ಲದೇ, ತಮ್ಮ ವಿರುದ್ಧ ಅಪಮಾನ ಮಾಡುವಂತಹ ಪಿತೂರಿ ನಡೆಯುತ್ತಲೇ ಇದೆ ಎಂದು ಹೇಳಿಕೊಂಡಿದ್ದರು. ರಶ್ಮಿಕಾ ಮಾತಿಗೆ ರಮ್ಯಾ ಕೂಡ ಧ್ವನಿಗೂಡಿಸಿದ್ದರು. ಯಾರೂ ಯಾರ ಬಗ್ಗೆಯೂ ಜಡ್ಜ್ ಮಾಡುವಂತಹ ಅಧಿಕಾರ ಇಲ್ಲವೆಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ, ರಶ್ಮಿಕಾ ಮಂದಣ್ಣಗೆ ಈ ವಿಷಯದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿತ್ತು. ಹಾಗಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ರಶ್ಮಿಕಾ. ‘ಥ್ಯಾಂಕ್ಯೂ ಮೈ ಲವ್ಸ್’ ಎಂದು ಬೆಂಬಲಿಸಿದವರಿಗೆ ಹೇಳಿದ್ದಾರೆ.

    ತಮ್ಮ ಮೇಲೆ ಎಂತಹ ಆರೋಪ ಕೇಳಿ ಬಂದರೂ, ಈವರೆಗೂ ರಶ್ಮಿಕಾ ಮಂದಣ್ಣ ಆ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಗಾಸಿಪ್, ಟ್ರೋಲ್ ಪೇಜ್ ಸೇರಿದಂತೆ ಅನೇಕರು ರಶ್ಮಿಕಾ ಮಂದಣ್ಣ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದರು. ರಕ್ಷಿತ್ ಶೆಟ್ಟಿ ಅವರಿಂದ ದೂರವಾದ ನಂತರ ಒಂದಿಲ್ಲೊಂದು ವಿಷಯ ಹಿಡಿದುಕೊಂಡು ರಶ್ಮಿಕಾ ಅವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದರು. ಆದರೂ, ಈವರೆಗೂ ರಶ್ಮಿಕಾ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದೊಡ್ಮನೆ ಕುಡಿ ಯುವ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಟ್ರು ಸಂತೋಷ್ ಆನಂದ್‌ರಾಮ್

    ಕಳೆದ ಕೆಲ ವರ್ಷಗಳಿಂದ ಅನೇಕ ವಿಷಯಗಳು ಇವರನ್ನು ತೊಂದರೆ ಮಾಡಿವೆಯಂತೆ. ಅಷ್ಟೊಂದು ತೊಂದರೆ ಮಾಡಿದರೂ, ಅವರು ಸುಮ್ಮನಿದ್ದರಂತೆ. ಹಾಗೆ ಸುಮ್ಮನಿದ್ದ ಕಾರಣಕ್ಕಾಗಿ ಇದೀಗ ಅವರು ಪಶ್ಚಾತಾಪ ಪಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಸುಮ್ಮನಿರಬಾರದಿತ್ತು. ಮಾತನಾಡಲೇಬೇಕಿತ್ತು ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ರಶ್ಮಿಕಾ ಅವರನ್ನು ದ್ವೇಷಿಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.

    ಸಿನಿಮಾ ಕ್ಷೇತ್ರವಾಗಿ ಹಾಗಿದೆ. ಅದನ್ನು ನಾನು ಆಯ್ಕೆ ಮಾಡಿಕೊಂಡಿದ್ದು. ಹಾಗಾಗಿ ನಾನು ಒಂದು ರೀತಿಯಲ್ಲಿ ಪಂಚಿಂಗ್ ಬ್ಯಾಗ್ ಆಗಿ ಬಿಟ್ಟಿದ್ದೇನೆ ಎಂದು ಅವರು ನೊಂದುಕೊಂಡಿದ್ದಾರೆ. ನಾನು ಸುಮ್ಮನಿದ್ದೇನೆ ಅಂದರೆ, ಅದರ ಅರ್ಥ ನೆಗೆಟಿವಿವ್ ಹರಡಬಹುದು ಎನ್ನುವುದು ಅರ್ಥವಲ್ಲ ಎಂದು ಅವರು ತಿರುಗೇಟು ಕೂಡ ನೀಡಿದ್ದಾರೆ. ಸಂದರ್ಶನವೊಂದರ ಕುರಿತೂ ಮಾತನಾಡಿರುವ ಅವರು, ನನ್ನ ಸಂದರ್ಶನವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ದ್ವೇಷದಿಂದ ಏನೂ ಸಿಗುವುದಿಲ್ಲ. ಒಳ್ಳೆಯದನ್ನು ನಾನು ಯಾವತ್ತಿಗೂ ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈವರೆಗೂ ನಾನು ಯಾರನ್ನೂ ದ್ವೇಷಿಸಿಲ್ಲ. ನನ್ನೊಂದಿಗೆ ಕೆಲಸ ಮಾಡಿದವರ ಜೊತೆ ಗೌರವದಿಂದ ಇದ್ದೇನೆ. ಎಲ್ಲರನ್ನೂ ನಾನು ಮೆಚ್ಚಿಕೊಂಡಿದ್ದೇನೆ. ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದೇನೆ. ಆದರೂ, ನನ್ನ ಬಗ್ಗೆ ನೆಗೆಟಿವ್ ಕಾಮೆಂಟ್ ಹರಡುತ್ತಲೇ ಇದ್ದರು. ಅದರಿಂದ ಯಾರಿಗೂ ಸಂತೋಷ ಸಿಗುವುದಿಲ್ಲ. ನಾನೂ ಸಾಕಷ್ಟು ನೊಂದುಕೊಂಡಿದ್ದೇನೆ ಎಂದು ಅವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ ಮಂದಣ್ಣ ಟ್ರೋಲ್: ರಶ್ಮಿಕಾ ಪರ ಬ್ಯಾಟಿಂಗ್ ಮಾಡಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

    ರಶ್ಮಿಕಾ ಮಂದಣ್ಣ ಟ್ರೋಲ್: ರಶ್ಮಿಕಾ ಪರ ಬ್ಯಾಟಿಂಗ್ ಮಾಡಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna)  ಕುರಿತಾದ ಟ್ರೋಲ್ ವಿಚಾರ ಎರಡು ದಿನಗಳಿಂದ ವಿಪರೀತ ಸುದ್ದಿಯಲ್ಲಿದೆ. ತಾವು ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ಈವರೆಗೂ ರಶ್ಮಿಕಾ ಕುರಿತು ನೆಗೆಟಿವ್ ಟ್ರೋಲ್ ಮಾಡಲಾಗುತ್ತಿದೆ. ಅಲ್ಲದೇ, ಸಲ್ಲದ ಆರೋಪಗಳನ್ನೂ ಹೊರಿಸಲಾಗುತ್ತಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದರು. ಇದೀಗ ರಶ್ಮಿಕಾ ಪರ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಬ್ಯಾಟಿಂಗ್ ಮಾಡಿದ್ದಾರೆ. ಯಾರನ್ನೂ ಯಾರೂ ಜಡ್ಜ್ ಮಾಡಬಾರದು ಎಂದು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

    ಯಾರೂ ಯಾರನ್ನೂ ಜಡ್ಜ್ ಮಾಡಬಾರದು. ಅವರ ಜೀವನ ಅವರಿಗೆ ಮಾತ್ರ ಗೊತ್ತಿರುತ್ತದೆ. ಟ್ರೋಲಿಂಗ್ ನಿಲ್ಲದ ಸಂಗತಿಯಾದರೂ, ಬೇರೆಯವರನ್ನು ನೀವು ಜಡ್ಜ್ ಮಾಡುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಅವರ ಪಾಡಿಗೆ ಅವರನ್ನು ಬದುಕುವುದಕ್ಕೆ ಬಿಡಿ ಎಂದು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ರಶ್ಮಿಕಾ ಪರವಾಗಿ ರಮ್ಯಾ ನಿಂತಿದ್ದಾರೆ.

    ತಮ್ಮ ಮೇಲೆ ಎಂತಹ ಆರೋಪ ಕೇಳಿ ಬಂದರೂ, ಈವರೆಗೂ ರಶ್ಮಿಕಾ ಮಂದಣ್ಣ ಆ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಗಾಸಿಪ್, ಟ್ರೋಲ್ ಪೇಜ್ ಸೇರಿದಂತೆ ಅನೇಕರು ರಶ್ಮಿಕಾ ಮಂದಣ್ಣ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದರು. ರಕ್ಷಿತ್ ಶೆಟ್ಟಿ ಅವರಿಂದ ದೂರವಾದ ನಂತರ ಒಂದಿಲ್ಲೊಂದು ವಿಷಯ ಹಿಡಿದುಕೊಂಡು ರಶ್ಮಿಕಾ ಅವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದರು. ಆದರೂ, ಈವರೆಗೂ ರಶ್ಮಿಕಾ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿ

    ಕಳೆದ ಕೆಲ ವರ್ಷಗಳಿಂದ ಅನೇಕ ವಿಷಯಗಳು ಇವರನ್ನು ತೊಂದರೆ ಮಾಡಿವೆಯಂತೆ. ಅಷ್ಟೊಂದು ತೊಂದರೆ ಮಾಡಿದರೂ, ಅವರು ಸುಮ್ಮನಿದ್ದರಂತೆ. ಹಾಗೆ ಸುಮ್ಮನಿದ್ದ ಕಾರಣಕ್ಕಾಗಿ ಇದೀಗ ಅವರು ಪಶ್ಚಾತಾಪ ಪಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಸುಮ್ಮನಿರಬಾರದಿತ್ತು. ಮಾತನಾಡಲೇಬೇಕಿತ್ತು ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ರಶ್ಮಿಕಾ ಅವರನ್ನು ದ್ವೇಷಿಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.

    ಸಿನಿಮಾ ಕ್ಷೇತ್ರವಾಗಿ ಹಾಗಿದೆ. ಅದನ್ನು ನಾನು ಆಯ್ಕೆ ಮಾಡಿಕೊಂಡಿದ್ದು. ಹಾಗಾಗಿ ನಾನು ಒಂದು ರೀತಿಯಲ್ಲಿ ಪಂಚಿಂಗ್ ಬ್ಯಾಗ್ ಆಗಿ ಬಿಟ್ಟಿದ್ದೇನೆ ಎಂದು ಅವರು ನೊಂದುಕೊಂಡಿದ್ದಾರೆ. ನಾನು ಸುಮ್ಮನಿದ್ದೇನೆ ಅಂದರೆ, ಅದರ ಅರ್ಥ ನೆಗೆಟಿವಿವ್ ಹರಡಬಹುದು ಎನ್ನುವುದು ಅರ್ಥವಲ್ಲ ಎಂದು ಅವರು ತಿರುಗೇಟು ಕೂಡ ನೀಡಿದ್ದಾರೆ. ಸಂದರ್ಶನವೊಂದರ ಕುರಿತೂ ಮಾತನಾಡಿರುವ ಅವರು, ನನ್ನ ಸಂದರ್ಶನವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ದ್ವೇಷದಿಂದ ಏನೂ ಸಿಗುವುದಿಲ್ಲ. ಒಳ್ಳೆಯದನ್ನು ನಾನು ಯಾವತ್ತಿಗೂ ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈವರೆಗೂ ನಾನು ಯಾರನ್ನೂ ದ್ವೇಷಿಸಿಲ್ಲ. ನನ್ನೊಂದಿಗೆ ಕೆಲಸ ಮಾಡಿದವರ ಜೊತೆ ಗೌರವದಿಂದ ಇದ್ದೇನೆ. ಎಲ್ಲರನ್ನೂ ನಾನು ಮೆಚ್ಚಿಕೊಂಡಿದ್ದೇನೆ. ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದೇನೆ. ಆದರೂ, ನನ್ನ ಬಗ್ಗೆ ನೆಗೆಟಿವ್ ಕಾಮೆಂಟ್ ಹರಡುತ್ತಲೇ ಇದ್ದರು. ಅದರಿಂದ ಯಾರಿಗೂ ಸಂತೋಷ ಸಿಗುವುದಿಲ್ಲ. ನಾನೂ ಸಾಕಷ್ಟು ನೊಂದುಕೊಂಡಿದ್ದೇನೆ ಎಂದು ಅವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಹಿರಂಗವಾಗಿ ನೋವು ಹಂಚಿಕೊಂಡ ರಶ್ಮಿಕಾ: ನೋವು ಕೊಟ್ಟೋರು ಉದ್ದಾರಾಗ್ತಾರಾ ಎಂದ ಫ್ಯಾನ್ಸ್

    ಬಹಿರಂಗವಾಗಿ ನೋವು ಹಂಚಿಕೊಂಡ ರಶ್ಮಿಕಾ: ನೋವು ಕೊಟ್ಟೋರು ಉದ್ದಾರಾಗ್ತಾರಾ ಎಂದ ಫ್ಯಾನ್ಸ್

    ಮ್ಮ ಮೇಲೆ ಎಂತಹ ಆರೋಪ ಕೇಳಿ ಬಂದರೂ, ಈವರೆಗೂ ರಶ್ಮಿಕಾ ಮಂದಣ್ಣ (Rashmika Mandanna) ಆ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಗಾಸಿಪ್, ಟ್ರೋಲ್ ಪೇಜ್ ಸೇರಿದಂತೆ ಅನೇಕರು ರಶ್ಮಿಕಾ ಮಂದಣ್ಣ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದರು. ರಕ್ಷಿತ್ ಶೆಟ್ಟಿ ಅವರಿಂದ ದೂರವಾದ ನಂತರ ಒಂದಿಲ್ಲೊಂದು ವಿಷಯ ಹಿಡಿದುಕೊಂಡು ರಶ್ಮಿಕಾ ಅವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದರು. ಆದರೂ, ಈವರೆಗೂ ರಶ್ಮಿಕಾ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಅನೇಕ ವಿಷಯಗಳು ಇವರನ್ನು ತೊಂದರೆ ಮಾಡಿವೆಯಂತೆ. ಅಷ್ಟೊಂದು ತೊಂದರೆ ಮಾಡಿದರೂ, ಅವರು ಸುಮ್ಮನಿದ್ದರಂತೆ. ಹಾಗೆ ಸುಮ್ಮನಿದ್ದ ಕಾರಣಕ್ಕಾಗಿ ಇದೀಗ ಅವರು ಪಶ್ಚಾತಾಪ ಪಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಸುಮ್ಮನಿರಬಾರದಿತ್ತು. ಮಾತನಾಡಲೇಬೇಕಿತ್ತು ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ರಶ್ಮಿಕಾ ಅವರನ್ನು ದ್ವೇಷಿಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ