Tag: ಕಾಮುಕ

  • 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಪ್ರಕರಣ- ಆರೋಪಿ ಬಂಧನ

    5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಪ್ರಕರಣ- ಆರೋಪಿ ಬಂಧನ

    ಬೆಂಗಳೂರು: ಕೆಜಿ ಹಳ್ಳಿಯಲ್ಲಿ 5 ವರ್ಷದ ಬಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ವೀರೇಶ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನ ಕೆಜಿ ಹಳ್ಳಿ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಮಗುವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಏನಿದು ಘಟನೆ?: ಬೆಂಗಳೂರಿನ ಕೆಜಿ ಹಳ್ಳಿಯ ವೈಯಾಲಿಕಾವಲ್ ಸೊಸೈಟಿ ಬಳಿ ಮನೆಯಲ್ಲಿ ಎಂದಿನಂತೆ ಶುಕ್ರವಾರ ರಾತ್ರಿಯೂ ತಾಯಿಯ ಜೊತೆ ಮಲಗಿದ್ದ ಬಾಲಕಿ ರಾತ್ರಿ ಬಹಿರ್ದೆಸೆಗೆಂದು ಹೊರಗೆ ಬಂದಿದೆ. ಆದ್ರೆ ಈ ಬಗ್ಗೆ ತಾಯಿಗೆ ಗೊತ್ತಿರಲಿಲ್ಲ. ಬಾಲಕಿ ಹೊರಗೆ ಬಂದಿದ್ದ ವೇಳೆ ಕಾಮುಕ ಆಕೆಯನ್ನು ಕರೆದುಕೊಂಡು ಹೋಗಿ ವೈಯಲಿಕಾವಲ್ ಸೂಸೈಟಿ ಗ್ರೌಂಡ್ ನಲ್ಲಿ ಅತ್ಯಾಚಾರವೆಸಗಿದ್ದ. ಬಳಿಕ ಮನೆಯ ಬಳಿ ಬಾಲಕಿಯನ್ನು ಬಿಸಾಕಿ ಹೋಗಿದ್ದ. ಇದರಿಂದ ಬಾಲಕಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕಂಡು ಪೋಷಕರು ಕಂಗಾಲಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು.

    ಪ್ರಕರಣ ಸಂಬಂಧ ಸಚಿವ ಕೆಜೆ ಜಾರ್ಜ್ ನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ, ಬಾಲಕಿಯ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ ಬಾಲಕಿಯ ಪೋಷಕರ ಜೊತೆಗೂ ಮಾತುಕತೆ ನಡೆಸಿದ್ದರು. ಘಟನೆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=uCpC9-RbZAg

  • ಮಟನ್ ಸಾರು ತರಲು ಹೋದ 9ರ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ- ಕಾಮುಕ ಬಂಧನ

    ಮಟನ್ ಸಾರು ತರಲು ಹೋದ 9ರ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ- ಕಾಮುಕ ಬಂಧನ

    ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಲ್ಲನಾಯಕನಕೊಪ್ಪ ಗ್ರಾಮದ ಬಳಿ ಕಾಮುಕನೊಬ್ಬ 9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದಿರುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.

    ಮಲ್ಲಪ್ಪ ಶೆಟ್ಟಣ್ಣನವರ ಹತ್ಯೆಯಾದ ದುರ್ದೈವಿ ಬಾಲಕ. ಸುಭಾಷ ಅಗಸೀಮನಿ ಎಂಬ 40 ವರ್ಷದ ಕಾಮುಕ ಈ ಕೃತ್ಯವೆಸಗಿದ್ದು ಪೊಲೀಸರು ಈಗ ಬಂಧಿಸಿದ್ದಾರೆ.

    ನಡೆದಿದ್ದೇನು?: ಮಂಗಳವಾರ ಗ್ರಾಮದ ಹೊರವಲಯದಲ್ಲಿ ದೇವರಿಗೆ ಕುರಿ ಬಲಿ ನೀಡಿದ್ರು. ಗ್ರಾಮದ ಸುಮಾರು ಜನರು ದೇವರಿಗೆ ಪೂಜೆ ಸಲ್ಲಿಸಿ ಮಟನ್ ಊಟ ಮಾಡಿದ್ರು. ಆದ್ರೆ ಬಾಲಕ ಮಲ್ಲಪ್ಪ ಕೂಡಾ ಊಟ ಮಾಡಿದ್ದ. ಆದ್ರೆ ಮರಳಿ ಮಟನ್ ಸಾಂಬಾರ್ ತೆಗೆದುಕೊಂಡು ಹೋಗಲು ಗ್ರಾಮದ ಹೊರಗೆ ಬಂದಿದ್ದ. ಆ ವೇಳೆಯಲ್ಲಿ ಬಾಲಕ ಮಲ್ಲಪ್ಪನನ್ನ ಪುಸುಲಾಯಿಸಿ ಸುಭಾಷ ಬೈಕ್‍ನಲ್ಲಿ ಕರೆದುಕೊಂಡು ಹೋಗಿದ್ದಾನೆ. ರಾಜೀವಗ್ರಾಮದ ಬಳಿ ಇರೋ ಅರಣ್ಯಪ್ರದೇಶದಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅಲ್ಲಿಯೇ ಕತ್ತುಹಿಸುಕಿ ಹತ್ಯೆ ಮಾಡಿದ್ದಾನೆ.

    ಮಟನ್ ಸಂಬಾರು ತರಲು ಹೋಗಿದ್ದ ಬಾಲಕ ನಾಪತ್ತೆಯಾಗಿರುವುದನ್ನು ತಿಳಿದ ಜನತೆ ಗ್ರಾಮದ ಹೊರವಲಯದಲ್ಲಿ ಹುಡುಕಾಡಿದ್ದಾರೆ. ಆದ್ರೆ ಬಾಲಕ ಯಾರ ಕಣ್ಣಿಗೂ ಬಿದ್ದಿಲ್ಲ. ಈ ವೇಳೆ ಕೆಲ ಮಕ್ಕಳು ಹಾಗೂ ಗ್ರಾಮದ ಜನರು ಸುಭಾಷ ಅಗಸಿಮನಿಯ ಬೈಕ್‍ನಲ್ಲಿ ಮಲ್ಲಪ್ಪ ಹೋಗಿದ್ದನ್ನ ಕೊನೆಯದಾಗಿ ನೋಡಿದ್ದೇವೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ.

    ಈ ವಿಚಾರ ತಿಳಿದು ಗ್ರಾಮದ ಜನರು ಕಟುಂಬದ ಸದಸ್ಯರು ಸುಭಾಷನನ್ನು ವಿಚಾರಣೆ ಮಾಡಿದ್ದಾರೆ. ನಂತ್ರ ಪೊಲೀಸರು ವಿಚಾರಣೆ ಮಾಡಿದಾಗ ಸುಭಾಷ ನಾನೇ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾನೆ. ಇತ್ತ ಇದ್ದ ಒಂದು ಗಂಡು ಮಗನನ್ನ ಕಳೆದುಕೊಂಡಿರೋ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

    ಎರಡು ಮಕ್ಕಳ ತಂದೆಯಾಗಿದ್ದರೂ ಹೀನ ಕೃತ್ಯವೆಸಗಿರುವ ಸುಭಾಷ ವಿರುದ್ಧ ಬಂಕಾಪುರ ಪೊಲೀಸರು ಹಾಗೂ ಸಿಪಿಐ ಸಂತೋಷ ಪವಾರ್ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸಿದ್ದಾರೆ.

  • ರೆಸಾರ್ಟ್‍ಗಳಲ್ಲಿ ಸಂದರ್ಶನ, ಕೆಲಸ ಕೊಡ್ತೀನಿ ಅಂತಾ ಮಂಚಕ್ಕೆ ಕರೆದ ಕಾಮುಕ ಅರೆಸ್ಟ್!

    ರೆಸಾರ್ಟ್‍ಗಳಲ್ಲಿ ಸಂದರ್ಶನ, ಕೆಲಸ ಕೊಡ್ತೀನಿ ಅಂತಾ ಮಂಚಕ್ಕೆ ಕರೆದ ಕಾಮುಕ ಅರೆಸ್ಟ್!

    ಬೆಂಗಳೂರು: ಕೆಲಸ ಕೊಡಿಸೋ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನೊಬ್ಬನನ್ನು ಯಶವಂತಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರವಾರದ ಅನಂತನಾಥ್ ಹೆಬ್ಬಾರ್ ಅಲಿಯಾಸ್ ದಿನೇಶ್ ಗೌಡ ಬಂಧಿತ ಕಾಮುಕ.

    ನಡೆದಿದ್ದೇನು?: ಕಾಮುಕ ದಿನೇಶ್ ಆನ್ ಲೈನ್ ನಲ್ಲಿ ವಾರ್ಷಿಕ 10 ಲಕ್ಷ ಪ್ಯಾಕೇಜ್ ಉದ್ಯೋಗದ ಆಫರ್ ನೀಡುತ್ತಿದ್ದನು. ಬಳಿಕ ಮಹಿಳೆಯರಂತೆ ಧ್ವನಿ ಬದಲಾಯಿಸಿ ಫೋನಿನಲ್ಲಿ ಮಾತನಾಡುತ್ತಿದ್ದನು. ಇತ್ತ ಮದುವೆಯ ನಂತ್ರ ಉದ್ಯೋಗ ಹರಸಿ ಬೆಂಗಳೂರಿಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ದಂಪತಿ ಆನ್ ಲೈನ್ ಮೂಲಕ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ಕಾಮುಕ ಸಂದರ್ಶನಕ್ಕೆ ಬರುವಂತೆ ಮಹಿಳೆಗೆ ಕರೆ ಮಾಡಿದ್ದನು. ಅಲ್ಲದೇ ಖಾಸಗಿ ಹೋಟೆಲ್‍ನಲ್ಲಿ ಸಂದರ್ಶನ ಇದೆ ಒಬ್ಬರೇ ಬರಬೇಕು ಅಂತಾ ಕೂಡ ಹೇಳಿದ್ದನು.

    ರಾಮನಗರ ಬಳಿಯಿರುವ ಪ್ರತಿಷ್ಠಿತ ರೆಸಾರ್ಟ್ ನಲ್ಲಿ ಸಂದರ್ಶನಕ್ಕಾಗಿ ಮಹಿಳೆ ಬಂದಾಗ, ಸಂದರ್ಶನ ಯಾವ ರೀತಿ ಇರುತ್ತದೆ ಎಂದು ವಿವರಿಸುತ್ತೇನೆ ಎಂದು ಕೊಠಡಿಗೆ ಕರೆದಿದ್ದ. ಅಲ್ಲದೇ ಕೊಠಡಿಯಲ್ಲಿ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದನು. ಇದಕ್ಕೆ ಮಹಿಳೆ ಪ್ರತಿರೋಧ ತೋರಿದಾಗ ಅಸಾಮಿ ಮತ್ತು ಬರುವ ಮಾತ್ರೆ ಹಾಕಿ ಜ್ಯೂಸ್ ಕೊಟ್ಟ. ಕೂಡಲೇ ಕಾಮುಕನ ಚಲನವಲನ ಅರಿತ ಮಹಿಳೆ ಗಂಡನಿಗೆ ಫೋನ್ ಮಾಡಿದ್ದಳು. ತಕ್ಷಣವೇ ಮಹಿಳೆಯ ಗಂಡ ಹಾಗೂ ಸಿಬ್ಬಂದಿಗಳು ಹೋಟೆಲ್‍ಗೆ ದಾಳಿ ಮಾಡಿದ್ದಾರೆ. ದಾಳಿ ನಡೆಸುತ್ತಿದ್ದಂತೆ ಕಾಮುಕ ದಿನೇಶ್ ಪರಾರಿಯಾಗಿದ್ದನು.

    ಇದನ್ನೂ ಓದಿ: ಕೆಲಸಕ್ಕೆ ಅರ್ಜಿ ಹಾಕುವ ಮುನ್ನ ಈ ಸುದ್ದಿ ಓದಿ

    ಈ ಬಗ್ಗೆ ದಂಪತಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿ ದಿನೇಶ್ ನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಇದೇ ರೀತಿ ಇಬ್ಬರು ಯುವತಿಯರ ಮೇಲೆ ದೌರ್ಜನ್ಯ ಎಸಗಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

  • ಇಂಟರ್ನಲ್ ಮಾರ್ಕ್ಸ್ ಕೇಳಿದ್ರೆ ಸರಸಕ್ಕೆ ಕರೀತಾನೆ ಶಿಕ್ಷಕ!

    ಇಂಟರ್ನಲ್ ಮಾರ್ಕ್ಸ್ ಕೇಳಿದ್ರೆ ಸರಸಕ್ಕೆ ಕರೀತಾನೆ ಶಿಕ್ಷಕ!

    – ಕಾಲೇಜು ಬಿಟ್ಟು ವಿದ್ಯಾರ್ಥಿನಿಯರ ಪ್ರತಿಭಟನೆ

    ಕಲಬುರಗಿ: ಇಂಟರ್‍ನಲ್ ಮಾರ್ಕ್ಸ್ ಕೊಡಲು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ, ಕಲಬುರಗಿ ನಗರದ ಎಚ್‍ಕೆಇ ಸಂಸ್ಥೆಯ ಮಲಕರೆಡ್ಡಿ ಹೋಮಿಯೊಪತಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

    ಕಾಲೇಜಿನ ಫಿಜಿಯಾಲಾಜಿ ಉಪನ್ಯಾಸಕ ಸಿದ್ದಲಿಂಗ ಮಾಲಿಪಾಟೀಲ್ ಇಂತಹ ಹೀನ ಕೆಲಸ ಮಾಡಿದ್ದಾನೆ. ಇದರಿಂದ ನೊಂದ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರಿಗೆ ಲಿಖಿತ ದೂರು ನೀಡಿದ್ದಾರೆ.

    ನಿತ್ಯ ಮದ್ಯಪಾನ ಮಾಡಿ ಬರುವ ಈ ಕಾಮಿ ಶಿಕ್ಷಕ ಪ್ರತಿ ವಿದ್ಯಾರ್ಥಿನಿಯನ್ನೂ ಸಹ ಕಾಮದ ದೃಷ್ಟಿಯಿಂದ ನೋಡುತ್ತಾನಂತೆ. ಉಪನ್ಯಾಸಕನ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿಗಳು ಮೂರು ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದ ಶಿಕ್ಷಣ ಸಂಸ್ಥೆ ಕಾಮುಕ ಉಪನ್ಯಾಕನ ವಿರುದ್ಧ ಕ್ರಮ ಜರುಗಿಸಿಲ್ಲ ಎನ್ನುವ ಮಾತು ಕೇಳಿ ಬಂದಿದೆ.

  • ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆಸಿದ್ರೆ ಮಗಳನ್ನೇ ರೇಪ್, ಕೊಲೆ ಮಾಡಿ ಆತ್ಮಹತ್ಯೆ ಮಾಡ್ಕೊಂಡ!

    ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆಸಿದ್ರೆ ಮಗಳನ್ನೇ ರೇಪ್, ಕೊಲೆ ಮಾಡಿ ಆತ್ಮಹತ್ಯೆ ಮಾಡ್ಕೊಂಡ!

    ಕಲಬುರ್ಗಿ: ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆ ತಂದರೆ ಮಗಳ ಪಾಲಿಗೆ ಸೋದರ ಮಾವನೇ ವಿಲನ್ ಆದ ಹೀನಾಯ ಘಟನೆ ಕಲಬುರ್ಗಿ ಜಿಲ್ಲೆಯ ಕೋಟನೂರ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

    ಇದೀಗ ಕಲಬುರ್ಗಿ ನಗರದ ಹೊರವಲಯದ ಕೋಟನೂರ(ಡಿ) ಗ್ರಾಮದ ನಿವಾಸಿಯಾಗಿರುವ ತಾಯಿ ಶಾಂತಾಬಾಯಿ ತನ್ನ ಮಗಳನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದಾರೆ. 15 ವರ್ಷಗಳ ಹಿಂದೆ ಗಂಡ ತೀರಿಕೊಂಡ ಬಳಿಕ ಮನೆಯ ಜವಾಬ್ದಾರಿಗಾಗಿ ಸಹೋದರ ವಿಜಯಕುಮಾರ್‍ಗೆ ಶಾಂತಾಬಾಯಿ ಮನೆಯಲ್ಲಿ ಆಶ್ರಯ ನೀಡಿದ್ದರು.

    ಆದರೆ ಕಾಮುಕ ವಿಜಯಕುಮಾರ್ ತನ್ನ ಮಗಳಿಗೆ ಸಮನಾದ 17 ವರ್ಷದ ಯುವತಿಯ ಮೇಲೆ ಶನಿವಾರ ರಾತ್ರಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ. ಮಾತ್ರವಲ್ಲದೇ ಬಳಿಕ ಈ ವಿಷಯ ಜನರಿಗೆ ತಿಳಿದ್ರೆ ತೊಂದರೆ ಅಂತಾ ಪಕ್ಕದ ಕೋಣೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಆರೋಪಿ ವಿಜಯಕುಮಾರ್ ಜೇಬಿನಲ್ಲಿ ಡೆತ್ ನೋಟ್ ಸಹ ಪೊಲೀಸರಿಗೆ ಪತ್ತೆಯಾಗಿದೆ. ಅದರಲ್ಲಿ ನಮ್ಮ ಸಾವಿಗೆ ಕಾರಣ ಮನೆಯ ಮಾಲೀಕ ಹಾಗು ಸೋದರನಾದ ಜಯರಾಜ್ ರಾಠೋಡ್ ಅಂತಾ ಬರೆಯಲಾಗಿದ್ದು, ಈ ಮೂಲಕ ಪ್ರಕರಣ ತಿರುವು ಪಡೆಯಲಿ ಅಂತಾ ಕಾಮುಕ ವಿಜಯಕುಮಾರ್ ಸಾಯುವ ಮುನ್ನ ಪ್ಲ್ಯಾನ್ ಮಾಡಿ ನೇಣಿಗೆ ಶರಣಾಗಿದ್ದಾನೆ.

    ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಉಂಡ ಮನೆಗೇ ಕನ್ನ ಬಗೆದ್ರು ಅಂತಾ ಹೇಳೋ ಮಾತು ಇಂತಹವರನ್ನೇ ನೋಡಿ ಹೇಳಿರಬೇಕು.