Tag: ಕಾಮುಕ

  • ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಕಾಮುಕ

    ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಕಾಮುಕ

    ಬೆಂಗಳೂರು: ಗಾಂಜಾ ಗುಂಗಿನಲ್ಲಿದ್ದ ಕಾಮುಕನೊಬ್ಬ ಹಾಡಹಗಲೇ ನಡು ರಸ್ತೆಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಘಟನೆ ಬೆಂಗಳೂರಿನ ಕಲ್ಯಾಣನಗರ ಸಮೀಪ ಚಲ್ಲಕೆರೆ ಬಳಿ ನಡೆದಿದೆ.

    ಇದೇ ತಿಂಗಳ 8 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಮಹಿಳೆಯನ್ನು ಹಿಂಬದಿಯಿಂದ ಬಂದು ಕೈ ಹಿಡಿದ ಕಾಮುಕ ಆಕೆಯ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ. ಈ ವೇಳೆ ಬೀದಿ ಕಾಮುಕನಿಂದ ಬಿಡಿಸಿಕೊಳ್ಳಲು ರಸ್ತೆಯಲ್ಲಿ ಮಹಿಳೆ ಕಿರುಚಾಡಿದ್ದಾಳೆ. ಆಗ ಮಹಿಳೆಯ ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ನಿವಾಸಿಗಳು ಕಾಮುಕನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ.

    ಡ್ರಗ್ಸ್ ಹಾಗೂ ಗಾಂಜಾ ಸೇವಿಸಿ ಬೀದಿಯಲ್ಲಿ ಓಡಾಡ್ತಿದ್ದ ಅಸಾಮಿ ಅಮಲಿನಲ್ಲಿ ಮಹಿಳೆಯನ್ನು ಎಳೆದಾಡಿದ್ದಾನೆ. ಘಟನೆ ಬಳಿಕ ಕಾಮುಕನನ್ನು ಹೆಣ್ಣೂರು ಪೊಲೀಸರಿಗೆ ಸಾರ್ವಜನಿಕರು ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ಮಾಡುವ ವೇಳೆ ಆರೋಪಿಯು ಯಲಹಂಕ ಮೂಲದ ಅಲುಮೀನ್ ಎಂಬುದು ಪತ್ತೆಯಾಗಿದೆ. ಗಾಂಜಾ ಸೇವನೆಗಾಗಿ ಹೆಣ್ಣೂರು ಕಡೆ ಬಂದಿದ್ದ ಆರೋಪಿ ಹೆಣ್ಣೂರು ಬಳಿಯ ವಿದೇಶಿ ಪ್ರಜೆಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಘಟನೆ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸ್ಸಿನಲ್ಲಿ ಎಲ್ಲರ ಎದುರೇ ಹಸ್ತಮೈಥುನ- ಮರ್ಮಾಂಗ ತೆಗೆದಾಗ ವ್ಯಕ್ತಿಗೆ ಥಳಿಸಿದ ಯುವತಿ

    ಬಸ್ಸಿನಲ್ಲಿ ಎಲ್ಲರ ಎದುರೇ ಹಸ್ತಮೈಥುನ- ಮರ್ಮಾಂಗ ತೆಗೆದಾಗ ವ್ಯಕ್ತಿಗೆ ಥಳಿಸಿದ ಯುವತಿ

    ನವದೆಹಲಿ: ಬಸ್‍ನಲ್ಲಿ ಯುವತಿ ಎದುರು ಹಸ್ತಮೈಥುನ ಮಾಡಿ ಲೈಂಗಿಕ ಕಿರುಕುಳ ನೀಡಿದ ಕಾಮುಕನನ್ನು ಬುಧವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ದಕ್ಷಿಣ ದೆಹಲಿಯ ಕಪಶೇಡದಿಂದ ವಸಂತ್ ಕುಂಜ್ ಮಾರ್ಗದ ಬಸ್‍ನಲ್ಲಿ ಕಾಮುಕ ಸಾರ್ವಜನಿಕರ ಎದುರಲ್ಲೇ ಯುವತಿ ಮುಂದೆ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿದ್ದಾನೆ. ಕಾಮುಕ ಯುವತಿ ಎದುರು ಈ ಕೃತ್ಯ ಎಸಗುತ್ತಿದ್ದಾಗ ಯಾರೊಬ್ಬರು ಆಕೆಯ ಸಹಾಯಕ್ಕೆ ಬರಲಿಲ್ಲ ಎಂದು ತಿಳಿದು ಬಂದಿದೆ.

    ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾರೂ ಯುವತಿಯ ಸಹಾಯಕ್ಕೆ ಬರದಿದ್ದಾಗ ಆಕೆ ಸ್ವತಃ ಆ ಕಾಮುಕನನ್ನು ಥಳಿಸಿದ್ದಾಳೆ. ಯುವತಿ ಬಸಿನಲ್ಲಿ ಸಹಾಯಕ್ಕಾಗಿ ಅಳುತ್ತಾ ಎಲ್ಲರಲ್ಲೂ ಸಹಾಯ ಕೇಳಿದ್ದಳು. ಆದರೆ ಯಾರೊಬ್ಬರು ಸಹಾಯ ಮಾಡದೇ ಘಟನೆಯನ್ನು ನೋಡುತ್ತಾ ಸುಮ್ಮನಿದ್ದರು.

    ಯುವತಿ ಕಾಲೇಜಿನ ವಿದ್ಯಾರ್ಥಿನಿ ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿ ಯಾರೂ ಸಹಾಯಕ್ಕೆ ಬರದಿದ್ದಾಗ ಸ್ವತಃ ಯುವತಿ ಆ ಕಾಮುಕನನ್ನು ಬಸ್ಸಿನಿಂದ ಹೊರಗೆ ಎಳೆದು ಪೊಲೀಸರಿಗೆ ಒಪ್ಪಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಹಿಳೆ, ವೃದ್ಧೆಯ ಮೇಲೆ ಕಾಮುಕನಿಂದ ಅತ್ಯಾಚಾರಕ್ಕೆ ಯತ್ನ!

    ಮಹಿಳೆ, ವೃದ್ಧೆಯ ಮೇಲೆ ಕಾಮುಕನಿಂದ ಅತ್ಯಾಚಾರಕ್ಕೆ ಯತ್ನ!

    ಹಾಸನ: ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಡೆದಿದೆ.

    ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಮೇಲೆ ವಿಕೃತ ಕಾಮಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಪ್ರತಿರೋಧ ತೋರಿದ್ದಕ್ಕೆ ಆಕೆಯನ್ನು ಕತ್ತರಿಯಿಂದ ಇರಿದು ಬಳಿಕ ಪರಾರಿ ಆಗಿದ್ದಾನೆ.

    ಪರಾರಿಯಾದ 15 ನಿಮಿಷದ ಅಂತರದಲ್ಲಿ ವಿಕೃತಕಾಮಿ ಮತ್ತೊಂದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಕಾಮುಕನ ಕೃತ್ಯಕ್ಕೆ ಹೆದರಿ ವೃದ್ಧೆ ಜೋರಾಗಿ ಕಿರುಚಿಕೊಂಡಿದ್ದಾರೆ. ವೃದ್ಧೆಯ ಕಿರುಚಾಟಕ್ಕೆ ಹೆದರಿ ವಿಕೃತಕಾಮಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಸದ್ಯ ನೀಚನ ಚಹರೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಸಾಧ್ಯತೆಗಳಿದ್ದು, ಪೊಲೀಸರು ಸ್ಥಳೀಯ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

    ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಡುರಸ್ತೆಯಲ್ಲಿ ಬೆತ್ತಲೆ ನಿಂತು ಅಸಭ್ಯ ವರ್ತನೆ ತೋರಿದ ಕಾಮುಕ ಅರೆಸ್ಟ್

    ನಡುರಸ್ತೆಯಲ್ಲಿ ಬೆತ್ತಲೆ ನಿಂತು ಅಸಭ್ಯ ವರ್ತನೆ ತೋರಿದ ಕಾಮುಕ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ಸೈಕೋ ಪ್ರತ್ಯಕ್ಷವಾಗಿದ್ದು, ನಡುರಸ್ತೆಯಲ್ಲಿ ಬೆತ್ತಲೆ ನಿಂತು ಅಸಭ್ಯ ವರ್ತನೆ ತೋರಿದ ಕಾಮುಕನನ್ನು ಆರ್.ಟಿ ನಗರ ಪೊಲೀಸರು ಬಂಧಿಸಿದ್ದಾರೆ.

    ಮಹಮ್ಮದ್ ಸಿದ್ದಿಕ್ ನಡುರಸ್ತೆಯಲ್ಲಿ ಬೆತ್ತಲೆ ನಿಂತ ಕಾಮುಕ. ಸಂಜೆ ವೇಳೆಯಲ್ಲಿ ಮಹಮ್ಮದ್ ಸಿದ್ದಿಕ್ ಪ್ರತ್ಯಕ್ಷವಾಗುತ್ತಿದ್ದು, ಈತನ ಕಾಟಕ್ಕೆ ಸಿಲಿಕಾನ್ ಸಿಟಿ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ಸೈಕೋ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸಿದ್ದಿಕ್ ಆಯುರ್ವೇದ ಡಾಕ್ಟರ್ ಎಂದು ಆರ್.ಟಿ ನಗರದಲ್ಲಿರುವ ಮನೆಗೆ ಬರುತ್ತಿದ್ದನು. ಈ ವೇಳೆ ಸಾರ್ವಜನಿಕರು ಆತನನ್ನು ರೇಡ್ ಹ್ಯಾಂಡಾಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಹೊಯ್ಸಳ ಪೊಲೀಸರಿಗೆ ಕಾಮುಕನನ್ನು ಒಪ್ಪಿಸಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಆರ್.ಟಿ ನಗರದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ಬಗ್ಗೆ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಮ ತೀರಿಸಿಕೊಳ್ಳಲು 3 ವರ್ಷದ ಬಾಲಕನ ಬಾಯಿಗೆ ಮರ್ಮಾಂಗವನ್ನು ಇಟ್ಟ ವೃದ್ಧ!

    ಕಾಮ ತೀರಿಸಿಕೊಳ್ಳಲು 3 ವರ್ಷದ ಬಾಲಕನ ಬಾಯಿಗೆ ಮರ್ಮಾಂಗವನ್ನು ಇಟ್ಟ ವೃದ್ಧ!

    ಹುಬ್ಬಳ್ಳಿ: ತನ್ನ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಮೂರು ವರ್ಷದ ಬಾಲಕನ ಬಾಯಿಗೆ ವೃದ್ಧನೊಬ್ಬ ಮರ್ಮಾಂಗವನ್ನು ಇಟ್ಟ ಘಟನೆ ಧಾರವಾಡದಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

    ಧಾರವಾಡದ ಮಾಳಮಡ್ಡಿ ನಿವಾಸಿ ಮನೋಹರ್ ಕುಲಕರ್ಣಿ ಗಾಂಧಿನಗರದಲ್ಲಿರುವ ಯ್ಯೂರೋ ಕಿಡ್ಸ್ ಪ್ಲೇ ಹೊಂಗೆ ತನ್ನ ಮೊಮ್ಮಗನನ್ನು ಬಿಡಲು ಹೋಗಿದ್ದ. ಈ ವೇಳೆ ಯಾರೂ ಇಲ್ಲದ್ದನ್ನ ಗಮನಿಸಿ ತನ್ನ ವಾಂಛೆಯನ್ನು ತೀರಿಸಿಕೊಂಡಿದ್ದಾನೆ.

    ಸಂತ್ರಸ್ತ ಬಾಲಕ ನಡೆದಿದ್ದನ್ನು ಸೋಮವಾರ ರಾತ್ರಿ ಪಾಲಕರಿಗೆ ತಿಳಿಸಿದ್ದಾನೆ. ನಂತರ ಶಾಲೆಗೆ ತೆರಳಿ ಸಿಸಿಟಿವಿ ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಈ ಕುರಿತಂತೆ ಮಗುವಿನ ಪಾಲಕರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೋಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸದ್ಯ ವೃದ್ಧನನ್ನು ಬಂಧಿಸಿ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಯನ್ನು ನಡೆಸುತ್ತಿದ್ದಾರೆ.

  • ಮೈಸೂರಲ್ಲಿ ವಿಕೃತ ಕಾಮಿ ಪ್ರತ್ಯಕ್ಷ – ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕಾಮುಕನ ಕಾಟ

    ಮೈಸೂರಲ್ಲಿ ವಿಕೃತ ಕಾಮಿ ಪ್ರತ್ಯಕ್ಷ – ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕಾಮುಕನ ಕಾಟ

    ಮೈಸೂರು: ನಗರದಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ವಿಕೃತ ಕಾಮಿ ಪ್ರತ್ಯಕ್ಷವಾಗಿದ್ದೇನೆ. ರಾತ್ರೋರಾತ್ರಿ ಲೇಡಿಸ್ ಹಾಸ್ಟೆಲಿಗೆ ನುಗ್ಗುವ ವಿಕೃತ ಕಾಮಿ ಹುಡುಗಿಯರ ಒಳ ಉಡುಪು ಕದ್ದು ಎಸ್ಕೇಪ್ ಆಗುತ್ತಿದ್ದಾನೆ.

    ಕೆ.ಆರ್. ಆಸ್ಪತ್ರೆಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಈತ ಪ್ರತ್ಯಕ್ಷವಾಗಿದ್ದಾನೆ. ಮೂರಂತಸ್ತಿನ ನರ್ಸಿಂಗ್ ಕಾಲೇಜು ಹಾಸ್ಟೆಲ್ ನ ಕಟ್ಟಡ ಏರಿ ಒಳ ನುಗ್ಗಿ ವಿದ್ಯಾರ್ಥಿನಿಯರಲ್ಲಿ ಭೀತಿ ಮೂಡಿಸಿರುವ ಸೈಕೋ, ವಿದ್ಯಾರ್ಥಿನಿಯೊಬ್ಬಳ ರೂಂಗೆ ತಡರಾತ್ರಿ ನುಗ್ಗಿ ಮೊಬೈಲ್ ಕಸಿದುಕೊಂಡಿದ್ದಾನೆ.

    ಸೆಕ್ಯೂರಿಟಿ ಗಾರ್ಡ್ ಮತ್ತು ಸಿಸಿಟಿವಿ ಇದ್ದರೂ ಲೆಕ್ಕಿಸದೇ ಆಳೆತ್ತರದ ಕಾಂಪೌಂಡ್ ಹಾರಿ ಈ ಸೈಕೋ ಒಳ ನುಗ್ಗಿದ್ದಾನೆ. ಶುಕ್ರವಾರದಂದು ಬೆಳಗಿನ ಜಾವ ಸುಮಾರು 3 ಗಂಟೆವರೆಗೂ ಹಾಸ್ಟೆಲ್ ನಲ್ಲೇ ಅಡ್ಡಾಡಿ ಹಾಸ್ಟೆಲ್ ನ ಆವರಣದಲ್ಲಿ ಒಣಗಲು ಹಾಕಿದ್ದ ಯುವತಿಯರ ಒಳ ಉಡುಪುಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಈತನ ವಿಕೃತ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಸೈಕೋಪಾತ್ ವರ್ತನೆಯಿಂದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ. ಈ ಬಗ್ಗೆ ದೇವರಾಜ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ವಿಕೃತ ಕಾಮಿಯ ಪತ್ತೆಗೆ ಮುಂದಾಗಿದ್ದಾರೆ.

  • ಪತ್ನಿಯನ್ನು ಚುಡಾಯಿಸಿದ್ದಕ್ಕೆ ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ!

    ಪತ್ನಿಯನ್ನು ಚುಡಾಯಿಸಿದ್ದಕ್ಕೆ ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ!

    ಮೈಸೂರು: ಪತ್ನಿಯನ್ನು ಚುಡಾಯಿಸಿದ ಕಾಮುಕನಿಗೆ ಪತಿ ಧರ್ಮದೇಟು ನೀಡಿದ ಘಟನೆ ಮೈಸೂರು ಮಹಾನಗರ ಪಾಲಿಕೆ ಬಳಿ ನಡೆದಿದೆ.

    ಸ್ವಾಮಿ, ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ. ಸ್ವಾಮಿ ಅವರ ಪತ್ನಿ ಚಾಮುಂಡಿ ಬೆಟ್ಟದ ಪಾದದ ಬಳಿಕ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಪಾದದ ಬಳಿ ಇದ್ದ ಕಾಮುಕ ಪ್ರತಿದಿನ ಸ್ವಾಮಿ ಪತ್ನಿಯನ್ನು ಚುಡಾಯಿಸುತ್ತಿದ್ದನು.

    ದಿನನಿತ್ಯ ಮಹಿಳೆಯನ್ನು ಚುಡಾಯಿಸುತ್ತಿದ್ದ ಕಾಮುಕ ಇಂದು ಆಕೆಯ ಪತಿಯ ಕೈಗೆ ಸಿಕ್ಕಿ ಬಿದಿದ್ದಾನೆ. ಆಗ ಸ್ವಾಮಿ ಕಾಮುಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಸಾರ್ವಜನಿಕರ ಮಧ್ಯ ಪ್ರವೇಶದಿಂದ ಕಾಮುಕ ಬಚಾವ್ ಆಗಿದ್ದಾನೆ.

  • ಹಂಪಿ ಉತ್ಸವದಲ್ಲಿ ಮಹಿಳೆಯ ಪಕ್ಕ ಮಲಗಿದ್ದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    ಹಂಪಿ ಉತ್ಸವದಲ್ಲಿ ಮಹಿಳೆಯ ಪಕ್ಕ ಮಲಗಿದ್ದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    ಬಳ್ಳಾರಿ: ಹಂಪಿಯ ಸಾಂಸ್ಕೃತಿಕ ಉತ್ಸವದಲ್ಲಿ ದಿನಕ್ಕೊಂದು ಅವಘಡ ಸಂಭವಿಸುತ್ತಿದೆ. ಕಳೆದಿನ ಅಷ್ಟೇ ಪೂಜಾರಿ ವಿದೇಶಿ ಹೊಡುಗಿಯ ಜೊತೆ ಸೆಕ್ಸ್ ಮಾಡುತ್ತಿದ್ದಾಗ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದ. ಈಗ ಮತ್ತೆ ಕಾಮುಕನೊಬ್ಬ ಮಹಿಳೆಯ ಪಕ್ಕ ಮಲಗಿ ಕಾಮಚೇಷ್ಟೆ ಮಾಡಿದ್ದು, ಸ್ಥಳೀಯರಿಂದ ಹಿಗ್ಗಾಮುಗ್ಗಾ ಏಟು ತಿಂದಿರುವ ಘಟನೆ ನಡೆದಿದೆ.

    ಮೂಲತಃ ಬೆಳಗಾವಿಯ ಸಚಿನ್ ಎಂಬಾತ ಸ್ಥಳೀಯರಿಂದ ಏಟು ತಿಂದ ಕಾಮುಕ. ಹಂಪಿಯ ಸಾಂಸ್ಕøತಿಕ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದ ಮಹಿಳೆಯು ಪ್ರದರ್ಶನ ಮುಗಿದ ಮೇಲೆ ರಾತ್ರಿ ಅಲ್ಲಿಯೇ ಮಲಗಿ ಕೊಂಡಿದ್ದಾರೆ. ಈ ವೇಳೆ ಮಧ್ಯರಾತ್ರಿ ಮಹಿಳೆಯು ಮಲಗಿದ್ದ ಸ್ಥಳಕ್ಕೆ ಬಂದ ಸಚಿನ್ ತನ್ನ ಕಾಮಚೇಷ್ಟೆಗಳನ್ನು ಪ್ರದರ್ಶಿಸಿದ್ದಾನೆ. ಇದನ್ನು ಕಂಡು ಆತಂಕಗೊಂಡ ಮಹಿಳೆಯು ಕೂಗಿಕೊಂಡಿದ್ದಾರೆ. ತಕ್ಷಣ ಸಮೀಪದಲ್ಲಿದ್ದ ಸ್ಥಳೀಯ ವ್ಯಾಪಾರಿಗಳು ಸಚಿನ್‍ನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿ ಸಚಿನ್ ಶನಿವಾರ ಉತ್ಸವದಲ್ಲಿ ವಿದೇಶಿ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತನೆ ಮಾಡಿದ್ದ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೇ ಹಂಪಿ ಉತ್ಸವದಲ್ಲಿ ಕಾಮುಕರ ಉಪಟಳ ಹೆಚ್ಚಳವಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಪೊಲೀಸರು ಗಸ್ತು ತಿರುಗಬೇಕು ಎಂದು ಆಗ್ರಹಿಸಿದ್ದಾರೆ.

  • ಚಾಕಲೇಟ್ ಕೊಡಿಸೋದಾಗಿ ಹೇಳಿ 6ರ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

    ಚಾಕಲೇಟ್ ಕೊಡಿಸೋದಾಗಿ ಹೇಳಿ 6ರ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

    ತುಮಕೂರು: ಚಾಕೊಲೇಟ್ ಕೊಡಿಸೋದಾಗಿ ಪುಸಲಾಯಿಸಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ವೇದಮೂರ್ತಿ(35) ಅತ್ಯಾಚಾರ ಎಸಗಿದ ಕಾಮುಕ. ಶುಕ್ರವಾರ ಸಂಜೆ ವೇಳೆ ಬಾಲಕಿಯನ್ನು ಚಾಕಲೇಟ್ ಕೊಡಿಸೋದಾಗಿ ಹೇಳಿ ಮನೆಯ ಹಿಂಬದಿಯ ನಿಲಗಿರಿ ತೋಪಿಗೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ.

    ಕುಡಿದ ಮತ್ತಿನಲ್ಲಿದ್ದ ಕಾಮುಕ ಮುಗ್ಧ ಬಾಲಕಿ ಕಿರುಚಿಕೊಂಡರೂ ಬಿಡದೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ವಿಚಾರವನ್ನು ಬಾಲಕಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ.

    ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

     

  • ಚಾಕಲೇಟ್ ಆಸೆ ತೋರಿಸಿ ಅಪ್ತಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ- ಕಾಮುಕ ಅರೆಸ್ಟ್

    ಚಾಕಲೇಟ್ ಆಸೆ ತೋರಿಸಿ ಅಪ್ತಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ- ಕಾಮುಕ ಅರೆಸ್ಟ್

    ಹುಬ್ಬಳ್ಳಿ: ಅಜ್ಜಿಯ ಜೊತೆ ನಾಯಿ ಕಡಿತಕ್ಕೆ ಔಷಧಿ ಪಡೆಯಲು ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಕಾಮುಕನೊಬ್ಬ ಚಾಕಲೇಟ್ ಆಸೆ ತೋರಿಸಿ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಗ್ಲಾಸ್ ಹೌಸ್ ನಲ್ಲಿ ನಡೆದಿದೆ.

    ಗಣೇಶ ನಾಗಪ್ಪ ಸುತ್ತಗಟ್ಟಿ (28) ಕಾಮುಕ ಆರೋಪಿಯಾಗಿದ್ದು, ಇದೀಗ ಪೊಲೀಸರು ಬಂಧಿಸಿದ್ದಾರೆ.

    ನಡೆದಿದ್ದೇನು?: ಧಾರವಾಡ ತಾಲೂಕಿನ ಗ್ರಾಮವೊಂದರಿಂದ ಅಜ್ಜಿ ತನ್ನ ಮೊಮ್ಮಗಳೊಂದಿಗೆ ಬಂಡಿವಾಡ ಅಗಸಗಿಗೆ ಆಗಮಿಸಿದ್ದರು. ಔಷಧಿಯನ್ನು ಪಡೆದುಕೊಂಡ ಅಜ್ಜಿ ಮೊಮ್ಮಗಳನ್ನು ಕರೆದುಕೊಂಡು ಗ್ರಾಮಕ್ಕೆ ತೆರಳಲು ಹಳೇ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಬಸ್ ನಿಲ್ದಾಣದ ಮುಂದಿರುವ ಕಾಮತ್ ಹೊಟೆಲ್ ನಲ್ಲಿ ತಿಂಡಿಯನ್ನು ತರಲೆಂದು ಅಜ್ಜಿ ಬಾಲಕಿಯನ್ನು ಹೊರಗಡೆ ನಿಲ್ಲಿಸಿ ಹೋಗಿದ್ದರು. ಇದೇ ಸಮಯವನ್ನು ಕಾದಿದ್ದ ಕಾಮುಕ ಬಾಲಕಿಗೆ ಚಾಕಲೇಟ್ ಕೊಡಿಸುವ ಅಮಿಷವೊಡ್ಡಿ ಕರೆದುಕೊಂಡು ಇಂದಿರಾ ಗ್ಲಾಸ್ ಹೌಸ್ ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಇತ್ತ ಹೊಟೆಲ್ ಬಳಿ ನಿಲ್ಲಿಸಿದ ಮೊಮ್ಮಗಳು ಕಾಣದಾದಾಗ ಅಜ್ಜಿ ಉಪನಗರ ಪೊಲೀಸ್ ಠಾಣೆಗೆ ತೆರಳಿ ಮೊಮ್ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ಪೆÇಲೀಸರ ಚುರುಕಿನ ಕಾರ್ಯಚರಣೆಯಿಂದ ಕಾಮುಕನನ್ನು ಇಂದಿರಾ ಗಾಜಿನ ಮನೆಯ ನಿರ್ಜನ ಪ್ರದೇಶದಲ್ಲಿ ಬಂಧಿಸಿದ್ದಾರೆ.

    ಸದ್ಯ ಗಾಯಗೊಂಡಿದ್ದ ಅಪ್ರಾಪ್ತ ಬಾಲಕಿಯನ್ನು ಕಿಮ್ಸ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.