Tag: ಕಾಮುಕರು

  • 8 ಮಂದಿಯಿಂದ ಗ್ಯಾಂಗ್‌ರೇಪ್- ಸಾವು ಬದುಕಿನ ಮಧ್ಯೆ 54ರ ಮಹಿಳೆ ಹೋರಾಟ

    8 ಮಂದಿಯಿಂದ ಗ್ಯಾಂಗ್‌ರೇಪ್- ಸಾವು ಬದುಕಿನ ಮಧ್ಯೆ 54ರ ಮಹಿಳೆ ಹೋರಾಟ

    ಚಂಢೀಗಡ: ಉತ್ತರ ಪ್ರದೇಶದ 54 ವರ್ಷದ ಮಹಿಳೆಯೊಬ್ಬರ ಮೇಲೆ 8 ಮಂದಿ ಸಾಮೂಹಿಕ ಅತ್ಯಾಚಾರವೆಸಗಿ ಆಕೆ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಹೀನಾಯ ಘಟನೆಯೊಂದು ಹರಿಯಾಣದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    8 ಮಂದಿ ಕಾಮುಕರು ಹರಿಯಾಣದ ಕರ್ನಾಲ್ ರೈಲ್ವೇ ಸ್ಟೇಷನ್ ನಲ್ಲಿ ಮಹಿಳೆ ಮೇಲೆ ಈ ಕೃತ್ಯ ಎಸಗಿದ್ದಾರೆ. ಮಹಿಳೆಯ ಹೇಳಿಕೆಯಂತೆ ಆರೋಪಿಗಳ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

    ಸಂತ್ರಸ್ತೆ ಕರ್ನಾಲ್ ರೈಲ್ವೇ ಸ್ಟೇಷನ್ ನಲ್ಲಿ ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ನನ್ನ ಜೊತೆ ಬಂದು ಊಟ ಶೇರ್ ಮಾಡುವಂತೆ ಕೇಳಿಕೊಳ್ಳುವ ಮೂಲಕ ಮಹಿಳೆಯನ್ನು ಪುಸಲಾಯಿಸಿದ್ದಾನೆ. ಇದಕ್ಕೆ ಒಪ್ಪಿದ ಮಹಿಳೆ ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇರುವ ಫ್ಯಾಕ್ಟರಿ ಶೆಡ್ ನಲ್ಲಿ ಊಟಕ್ಕೆಂದು ಆತನೊಂದಿಗೆ ತೆರಳಿದ್ದಾರೆ. ಈ ವೇಳೆ ಅಲ್ಲಿ 7 ಮಂದಿ ಅದಾಗಲೇ ಬಂದು ಕಾಯುತ್ತಿದ್ದರು.

    ಮಹಿಳೆ ಅಲ್ಲಿನ ಪರಿಸ್ಥಿತಿಯನ್ನು ಅರಿಯುತ್ತಿದ್ದಂತೆಯೇ ಅಲ್ಲಿದ್ದವರಲ್ಲೊಬ್ಬ ಬಂದು ಆಕೆಯ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಅಲ್ಲದೇ 8 ಮಂದಿಯೂ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದನ್ನು ಮಹಿಳೆ ವಿರೋಧಿಸಿದಾಗ ಆಕೆಯ ಮೇಲೆ ಕಾಮುಕರು ಕಬ್ಬಿಣದ ಸರಳಿನಿಂದ ಹೊಡೆದಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡು ಮಹಿಳೆ ಬಿದ್ದಿದ್ದಾರೆ. ಈ ವೇಳೆ ಫ್ಯಾಕ್ಟರಿ ಶೇಡ್ ನಿಂದ ಎಲ್ಲರೂ ಪರಾರಿಯಾಗಿದ್ದಾರೆ. ಎಲ್ಲರೂ ಹೋದ ಬಳಿಕ ಹೇಗೋ ಅಲ್ಲೇ ಬಿದ್ದಿದ್ದ ನನ್ನ ಮೊಬೈಲನ್ನು ತೆಗೆದುಕೊಂಡು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿರುವುದಾಗಿ ಮಹಿಳೆ ತನಿಖಾಧಿಕಾರಿಗಳ ಬಳಿ ಹೇಳಿದ್ದಾರೆ.

    ಮಹಿಳೆ ಕರೆ ಮಾಡಿ ಕಾಮುಕರ ಅಟ್ಟಹಾಸದ ವಿಚಾರ ತಿಳಿಸುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಂಢೀಗಡದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಅಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

    ಮಹಿಳೆಯ ಹೇಳಿಕೆಯನ್ನಾಧರಿಸಿ 8 ಮಂದಿ ಅಪರಿಚಿತ ವ್ಯಕ್ತಿಗಳ ಮೇಲೆ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿಗಳ ಪತ್ತೆಗಾಗಿ ಘಟನೆ ನಡೆದ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸಂಜೆ ಆಗ್ತಿದ್ದಂತೆ ಬೀದಿ ಕಾಮಣ್ಣರ ದರ್ಬಾರ್-ಮೂವರ ಪೈಕಿ ಸಿಕ್ಕಿಬಿದ್ದಿದ್ದು ಇಬ್ಬರು ಕಾಮುಕರು

    ಸಂಜೆ ಆಗ್ತಿದ್ದಂತೆ ಬೀದಿ ಕಾಮಣ್ಣರ ದರ್ಬಾರ್-ಮೂವರ ಪೈಕಿ ಸಿಕ್ಕಿಬಿದ್ದಿದ್ದು ಇಬ್ಬರು ಕಾಮುಕರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ಕಾಮಣ್ಣರ ಹಾವಳಿ ಹೆಚ್ಚಾಗಿದೆ. ಶಾಲಾ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕರಿಗೆ ಧರ್ಮದೇಟು ಬಿದ್ದಿದೆ.

    ಹೌದು. ಸೋಮವಾರ ಸಂಜೆ ಶಾಲೆ ಮುಗಿಸಿ ಮನೆಗೆ ಹೊರಟ್ಟಿದ್ದ ಶಾಲಾ ಬಾಲಕಿಯನ್ನ ಮೂವರು ಯುವಕರ ತಂಡ ಅಡ್ಡಗಟ್ಟಿ ಶಿವಾಜಿನಗರ ಬಸ್ ನಿಲ್ದಾಣದಿಂದ ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದ್ದಾರೆ. ಜೊತೆಗೆ ಮುಖ್ಯರಸ್ತೆಯಿಂದ ಮುಂದೆ ಹೋಗುತ್ತಿದ್ದಂತೆಯೇ ಹುಡುಗಿ ಜೊತೆ ಅಸಭ್ಯವಾಗಿ ವರ್ತಿಸಿ ಕಾಮುಕ ಯುವಕನೊಬ್ಬ ಮುತ್ತು ಕೊಟ್ಟಿದ್ದಾನೆ.

    ಇದನ್ನ ಗಮನಿಸಿದ ಸ್ಥಳೀಯರು ಕೂಡಲೇ ಬಾಲಕಿಯ ನೆರವಿಗೆ ಧಾವಿಸಿದ್ದಾರೆ. ಇವರೆಲ್ಲ ಯಾರು ಎಂದು ಬಾಲಕಿಯನ್ನು ಕೇಳಿದಾಗ ಇವರೆಲ್ಲ ನನ್ನನ್ನು ಬಲವಂತವಾಗಿ ಎಳೆದುಕೊಂಡು ಬರುತ್ತಿದ್ದಾರೆ ಎಂದು ಹೇಳಿದ್ದಾಳೆ. ಬಾಲಕಿಗೆ ಲೈಂಗಿಕ ಹಿಂಸೆ ನೀಡುತ್ತಿರೋ ವಿಚಾರ ತಿಳಿದ ತಕ್ಷಣವೇ ಸಾರ್ವಜನಿಕರು ಯುವಕರಿಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ.

    ಈ ವೇಳೆ ಅಲ್ಲಿದ್ದ ಓರ್ವ ಯುವಕ ಎಸ್ಕೇಪ್ ಆಗಿದ್ದಾನೆ. ಇಬ್ಬರಿಗೆ ಸರಿಯಾಗಿ ಥಳಿಸಿದ ಬಳಿಕ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಬಾಲಕಿಯನ್ನ ರಕ್ಷಿಸಿದ ಸ್ಥಳೀಯರು ಕಾಮುಕ ಯುವಕರಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾರೆ.

    ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಯುವಕರನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಧ್ಯರಾತ್ರಿ ಒಂದೇ ರಸ್ತೆಯಲ್ಲಿ 2 ಬಾರಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಮಧ್ಯರಾತ್ರಿ ಒಂದೇ ರಸ್ತೆಯಲ್ಲಿ 2 ಬಾರಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಮುಂಬೈ: ಮಹಿಳೆಯೊಬ್ಬಳು ಒಂದೇ ರಸ್ತೆಯಲ್ಲಿ ಎರಡು ಬಾರಿ ಗ್ಯಾಂಗ್ ರೇಪ್‍ಗೆ ಒಳಗಾದ ಘಟನೆ ಜನವರಿ 16ರ ಮಧ್ಯರಾತ್ರಿ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ಸಂತ್ರಸ್ತ ಮಹಿಳೆ ವಿಧವೆ ಆಗಿದ್ದು, ಜನವರಿ 15ರಂದು ಕಾರ್ಯಕ್ರಮವೊಂದನ್ನು ಮುಗಿಸಿ ರಾತ್ರಿ 11.30ಕ್ಕೆ ಮನೆಗೆ ಹಿಂತಿರುಗುತ್ತಿದ್ದಳು. ಈ ವೇಳೆ 17, 19 ಹಾಗೂ 21 ವರ್ಷದ ಕಾಮುಕರು ಮಹಿಳೆಯನ್ನು ಯಾರೂ ಇಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗಿ ಒಬ್ಬರ ನಂತರ ಒಬ್ಬರು ಅತ್ಯಾಚಾರ ಮಾಡಿದ್ದಾರೆ. ಬಳಿಕ ಮೂವರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

    ಮೂವರು ಪರಾರಿ ಆಗುತ್ತಿದ್ದಂತೆ ಸಂತ್ರಸ್ತೆ ಅಲ್ಲಿಂದ ತನ್ನ ಮನೆಗೆ ಹಿಂತಿರುಗುತ್ತಿದ್ದಳು. ಈ ವೇಳೆ ಮೊದಲ ಬಾರಿ ಅತ್ಯಾಚಾರಗೊಳಗಾದ ಸ್ಥಳದಿಂದ ಒಂದು ಕಿ.ಮೀ ಹತ್ತಿರದಲ್ಲೇ ಇಬ್ಬರು ಕಾಮುಕರು ಆಕೆಯನ್ನು ತಡೆದಿದ್ದಾರೆ. 18 ಹಾಗೂ 21 ವರ್ಷದ ಯುವಕರು ಆಕೆಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಈ ವೇಳೆ ಮಹಿಳೆಯ ತಲೆಗೆ ಗಾಯವಾಗಿದೆ.

    ಮಹಿಳೆ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಮನೆಗೆ ತಲುಪಿ ನಿದ್ದೆಗೆ ಜಾರಿದ್ದಳು. ಮರುದಿನ ಎದ್ದ ಮೇಲೆ ಸಂತ್ರಸ್ತೆ ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಶುಕ್ರವಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಬಳಿ ತಾವು ಮಹಿಳೆ ಮೇಲೆ ಅತ್ಯಾಚಾರ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

    ಪೊಲೀಸರು ಮೊದಲು ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದರು. ಸೋಮವಾರ ಆರೋಪಿಗಳು ತಾವು ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಅಪ್ರಾಪ್ತ ಬಾಲಕ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಣ್ಣೆ ಮತ್ತಲ್ಲಿ ಕಾಮುಕರ ಪುಂಡಾಟ- ಟೆಕ್ಕಿ ಪತ್ನಿ ಹಿಂಬದಿ ಸ್ಪರ್ಶಿಸಿ ಅಸಭ್ಯ ವರ್ತನೆ

    ಎಣ್ಣೆ ಮತ್ತಲ್ಲಿ ಕಾಮುಕರ ಪುಂಡಾಟ- ಟೆಕ್ಕಿ ಪತ್ನಿ ಹಿಂಬದಿ ಸ್ಪರ್ಶಿಸಿ ಅಸಭ್ಯ ವರ್ತನೆ

    ಬೆಂಗಳೂರು: ಎಣ್ಣೆ ಮತ್ತಲ್ಲಿ ಕಾಮುಕರು ಪುಂಡಾಟ ಮೆರೆದಿದ್ದು, ಬೆಂಗಳೂರಿನಲ್ಲಿ ಟೆಕ್ಕಿ ಪತ್ನಿ ಜತೆ ಅಸಭ್ಯವಾಗಿ ವರ್ತಿಸಿದ ಘಟನೆ ಕಳೆದ ರಾತ್ರಿ ಸುಮಾರು 1 ಗಂಟೆಗೆ ನಡೆದಿದೆ.

    31 ವರ್ಷದ ಮಹಿಳೆಯ ಹಿಂಬದಿಯನ್ನು ಸ್ಪರ್ಶಿಸಿ ಕಾಮುಕರು ಅಸಭ್ಯವಾಗಿ ವರ್ತಿಸಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ಬಳಿಕ ಎಂ.ಜಿ ರಸ್ತೆಯಿಂದ ಮನೆಗೆ ತೆರಳುತ್ತಿದ್ದ ದಂಪತಿಗೆ ಕಾಮುಕರು ಕಿರುಕುಳ ನೀಡಿದ್ದಾರೆ. ರಿಚ್ಮಂಡ್ ಸರ್ಕಲ್ ಬಳಿ ಗುಂಪಿನಲ್ಲಿ ಬಂದ ಮೂವರು ಕಿಡಿಗೇಡಿಗಳು ಈ ಕೃತ್ಯವೆಸೆಗಿದ್ದಾರೆ.

    ಕಾಮುಕರ ಪುಂಡಾಟದ ಬಗ್ಗೆ ಮಹಿಳೆ ಕೂಡಲೇ ತನ್ನ ಪತಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪತಿ ಪುಂಡರ ಕೃತ್ಯವನ್ನು ಪ್ರಶ್ನಿಸಿದ್ದಕ್ಕೆ ಕಿಡಿಗೇಡಿಗಳು ಪತಿಯನ್ನು ಥಳಿಸಿ, ಮೊಬೈಲ್ ಕಸಿದು ಬೆದರಿಕೆ ಹಾಕಿದ್ದಾರೆ. ಸಂತ್ರಸ್ಥೆ ಪತಿ ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ದಂಪತಿ ಮೂಲತಃ ಬಿಹಾರದವರಾಗಿದ್ದು, ಜಯನಗರದಲ್ಲಿ ವಾಸಿಸುತ್ತಿದ್ದಾರೆ. ಸೋಮವಾರ ಹೊಸ ವರ್ಷ ಆಚರಣೆಗಾಗಿ ದಂಪತಿ ಆಗಮಿಸಿದ್ದರು. ಈ ವೇಳೆ ಕಿಡಿಗೇಡಿಗಳು ಈ ರೀತಿಯ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ದಂಪತಿ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನ ಹಿನ್ನಲೆಯಲ್ಲಿ ಕೃತ್ಯ ಎಸಗಿದ ಪುಂಡರ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341(ಅಕ್ರಮವಾಗಿ ತಡೆಯುವುದು) 504(ಶಾಂತಿ ಭಂಗ), 506(ಜೀವ ಬೆದರಿಕೆ) 323(ದರೋಡೆ ಯತ್ನ) ಅಡಿ ಕೇಸ್ ದಾಖಲಾಗಿದ್ದು, ಪೊಲೀಸರು ಶಂಕಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಮುಕರಿಂದ ಅಮ್ಮನನ್ನು ರಕ್ಷಿಸಲು ಹೋದ ಬಾಲಕನನ್ನೇ ಕೊಲೆಗೈದ್ರು!

    ಕಾಮುಕರಿಂದ ಅಮ್ಮನನ್ನು ರಕ್ಷಿಸಲು ಹೋದ ಬಾಲಕನನ್ನೇ ಕೊಲೆಗೈದ್ರು!

    ಪಟ್ನಾ: ತಾಯಿಯನ್ನು ಕಾಮುಕರಿಂದ ರಕ್ಷಿಸಲು ಹೋದ ಬಾಲಕನನ್ನು ದುಷ್ಕರ್ಮಿಗಳು ಹೊಡೆದು ಸಾಯಿಸಿರುವ ಘಟನೆ ಬಿಹಾರದ ಮುಜಾಫರ್‍ಪುರ ಜಿಲ್ಲೆಯಲ್ಲಿ ಭಾನುವಾರದಂದು ನಡೆದಿದ್ದು, ಸೋಮವಾರ ಬೆಳಕಿಗೆ ಬಂದಿದೆ.

    17 ವರ್ಷದ ಬಾಲಕ ಮೃತ ದುರ್ದೈವಿ. ಬಾಲಕ ಹಾಗೂ ಅವನ ತಾಯಿ ಧರಮ್‍ಪುರ ಗ್ರಾಮದ ನಿವಾಸಿಗಳು. ಭಾನುವಾರ ರಾತ್ರಿ ವೇಳೆ ತಾಯಿ ಹಾಗೂ ಮಗ ತಮ್ಮ ಮನೆ ಬಳಿ ಇದ್ದ ರಾಜೇಂದ್ರ ಸಾ ಎಂಬವರ ಕಿರಾಣಿ ಅಂಗಡಿಗೆ ಹೋಗಿದ್ದರು. ಈ ವೇಳೆ ಅಂಗಡಿ ಮಾಲೀಕನ ಮಗ ಪಪ್ಪು ಹಾಗೂ ಅವನ ಸ್ನೇಹಿತರು ಸೇರಿ ಬಾಲಕನ ತಾಯಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ.

    ಇದನ್ನು ಕಂಡ ಬಾಲಕ ಕೋಪೋದ್ರಿಕ್ತನಾಗಿ ತಾಯಿಯನ್ನು ಕಾಮುಕರಿಂದ ರಕ್ಷಿಸಲು ಹೋಗಿದ್ದಾನೆ. ಈ ವೇಳೆ ಬಾಲಕನನ್ನು ಪಪ್ಪು ಹಾಗೂ ಅವನ ಸ್ನೇಹಿತರು ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಬಳಿಕ ರಾಜ್ಯ ಹೆದ್ದಾರಿ- 74 ರಲ್ಲಿ ರಸ್ತೆ ತಡೆಗಟ್ಟಿ ತಕ್ಷಣ ಆರೋಪಿಗಳನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನೆ ಕುರಿತು ಬಾಲಕನ ತಂದೆ ಧರಮ್‍ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ‘ನಿನ್ನ ಸೊಂಟ ಸೂಪರ್, ನನ್ನ ಜೊತೆ ಬರ್ತಿಯಾ’ ಎಂದು ರೇಗಿಸಿದ್ದ ಪೋಲಿಗಳ ಬಂಧನ

    ‘ನಿನ್ನ ಸೊಂಟ ಸೂಪರ್, ನನ್ನ ಜೊತೆ ಬರ್ತಿಯಾ’ ಎಂದು ರೇಗಿಸಿದ್ದ ಪೋಲಿಗಳ ಬಂಧನ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಾಮುಕರ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಇದಕ್ಕೆ ನಿದರ್ಶನವೆಂಬಂತೆ ಬುಧವಾರ ಯುವತಿಯರನ್ನು ನಿಂದಿಸಿ ಅಶ್ಲೀಲವಾಗಿ ಮಾತನಾಡಿ ತೊಂದರೆ ಕೊಡುತ್ತಿದ್ದ ಇಬ್ಬರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.

    ವಿಇಟಿ ಕಾಲೇಜು ಬಳಿ ಯುವತಿಯನ್ನು ಕಿಚಾಯಿಸಿದ ಕಾಮುಕ ಅರವಿಂದ್(20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರದಂದು ವಿಇಟಿ ಕಾಲೇಜು ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಕಾಮುಕ ಅರವಿಂದ್ ‘ನಿನ್ನ ಸೊಂಟ ಸೂಪರ್. ನಿನ್ನ ಚೆನ್ನಾಗಿ ನೋಡ್ಕೊಳ್ತೀನಿ ನನ್ನ ಜೊತೆ ಬರ್ತಿಯಾ’ ಎಂದು ಕಿಚಾಯಿಸಿದ್ದ.

    ಬಳಿಕ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾಮುಕ ಅರವಿಂದ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಯುವತಿ ದೂರು ನೀಡಲು ನಿರಾಕರಿಸಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಇದೇ ರೀತಿ ರಾಮನಗರ ಮೂಲದ ಅಭಿಷೇಕ್‍ ಗೌಡ(21) ಕೂಡ ಯುವತಿಯನ್ನ ಕಿಚಾಯಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಬುಧವಾರ ಜೆಪಿ ನಗರ ಮೆಟ್ರೋ ಬಳಿ ಯುವತಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಲ್ಲೇ ಇದ್ದ ಅಭಿಷೇಕ್ ಯುವತಿಯನ್ನು ‘ಲೇ ನಿಂತ್ಕೋಳೆ, ನನ್ನ ಜೊತೆ ಬಾ’ ಎಂದು ಕಿಚಾಯಿಸಿದ್ದಾನೆ. ಯುವತಿ ಅಳುತ್ತಾ ಹೋಗುತ್ತಿರುವಾಗ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಅಭಿಷೇಕ್‍ ಗೌಡ ನನ್ನು ಬಂಧಿಸಿದ್ದಾರೆ. ಅಭಿಷೇಕ್ ವೃತ್ತಿಯಲ್ಲಿ ಟೆಂಪೋ ಚಾಲಕನಾಗಿ ಕೆಲಸಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  • ಗ್ಯಾಂಗ್‍ರೇಪ್ ಎಸಗಿ, ಅಪ್ರಾಪ್ತೆಯ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿ ಚಲಿಸುತ್ತಿರುವ ರೈಲಿನಿಂದ ಎಸೆದ್ರು!

    ಗ್ಯಾಂಗ್‍ರೇಪ್ ಎಸಗಿ, ಅಪ್ರಾಪ್ತೆಯ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿ ಚಲಿಸುತ್ತಿರುವ ರೈಲಿನಿಂದ ಎಸೆದ್ರು!

    ಪಾಟ್ನಾ: ಚಲಿಸುತ್ತಿರುವ ರೈಲಿನಲ್ಲೇ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿ ಬಳಿಕ ರೈಲಿನಿಂದ ಎಸೆದ ಅಮಾನವೀಯ ಘಟನೆಯೊಂದು ಬಿಹಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಂತ್ರಸ್ತೆ 10 ತರಗತಿ ಓದುತ್ತಿದ್ದು, ಭಾನುವಾರ ಚಿಕಿತ್ಸೆಗಾಗಿ ರಾಜ್ಯ ರಾಜಧಾನಿಯ ಆಸ್ಪತ್ರೆಗೆ ಬಂದ ವೇಳೆ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಸದ್ಯ ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾಳೆ.

    ನಡೆದಿದ್ದೇನು?: ಲಖಿಸರಾಯಿ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಬಹಿರ್ದೆಸೆಗೆಂದು ಹೊರಬಂದಿದ್ದ ವೇಳೆ ಸಂತೋಷ್ ಯಾದವ್ ಹಾಗೂ ಮೃತ್ಯುಂಜಯ್ ಯಾದವ್ ಎಂಬ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ್ದಾರೆ. ಬಳಿಕ 6 ಮಂದಿ ಕಾಮುಕರು ಅತ್ಯಾಚಾರವೆಸಗಲು ಮುಂದಾದ್ರು. ಅಲ್ಲದೇ ರೈಲಿನೊಳಗೆ ಕರೆದುಕೊಂಡು ಹೋಗಿ ಮತ್ತೆ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿದ್ದಾರೆ. ಕೊಲೆ ಮಾಡಿ ರೈಲಿನಿಂದ ಬಿಸಾಕುವುದಾಗಿ ಮಾತನಾಡುತ್ತಿದ್ದಿದ್ದು ಕೇಳಿಸಿತ್ತು. ಆದ್ರೆ ನನಗೆ ಪ್ರಜ್ಞೆ ಬಂದಾಗ ಆಸ್ಪತ್ರೆಯಲ್ಲಿದ್ದೆ ಅಂತಾ ಸಂತ್ರಸ್ತೆ ತಿಳಿಸಿದ್ದಾಳೆ.

    ಕಾಮುಕರು ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಗಂಭೀರ ಗಾಯಗೊಳಿಸಿ ಕಿವುಲ್ ಜಂಕ್ಷನ್ ಬಳಿ ರೈಲಿನಿಂದ ಆಕೆಯನ್ನು ಎಸೆದಿದ್ದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆಕೆಯ ಪೋಷಕರು ಹಾಗೂ ಸಂಬಂಧಿಕರಿಗೆ ವಿಚಾರ ತಲುಪಿಸಿದ್ದಾರೆ. ತದನಂತರ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.

    ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಿಂದ ಪಾಟ್ನಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲೆಂದು ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಅಲ್ಲಿ ಆಕೆಗೆ ಬೆಡ್ ವ್ಯವಸ್ಥೆ ಸಿಗದೆ ಕೆಲವು ಗಂಟೆಗಳ ಕಾಲ ನೆಲದ ಮೇಲೆಯೇ ಬಾಲಕಿ ನರಳಾಟ ಅನುಭವಿಸಿದ್ದಳು.

    ಸದ್ಯ ಬಾಲಕಿಯ ಗುಪ್ತಾಂಗಕ್ಕೆ 2 ಡಜನ್ ನಷ್ಟು ಸ್ಟಿಚ್ ಹಾಕಿದ್ದಾರೆ. ಎರಡೂ ಪಾದಗಳಿಗೂ ಗಂಭೀರ ಗಾಯಗಳಾಗಿವೆ. ಅಲ್ಲದೇ ಸೊಂಟ, ದೇಹದ ಎಲುಬುಗಳಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಅಂತಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಘಟನೆಗೆ ಸಂಬಂಧಿಸಿದಂತೆ ಶೀಘ್ರವೇ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಆದ್ರೆ ಸ್ಥಳೀಯ ಪೊಲೀಸರು ಪ್ರೇಮ ಸಂಬಂಧ ಕಲ್ಪಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

    ಪ್ರಕರಣದ ಗಂಭೀರತೆ ಮತ್ತು ಮಾಧ್ಯಮದಲ್ಲಿ ಹೆಚ್ಚು ಸುದ್ದಿಯಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಆರೋಪಿ ಜುವೆಲಿನ್ ಎಂಬಾತನನ್ನು ಬಂಧಿಸಿದ್ದಾರೆ.

  • 5 ವರ್ಷದ ಹಸುಳೆ ಮೇಲೆ ಕಾಮುಕರ ಅಟ್ಟಹಾಸ – ಐಸಿಯೂನಲ್ಲಿ ಕಂದಮ್ಮನಿಗೆ ಚಿಕಿತ್ಸೆ

    5 ವರ್ಷದ ಹಸುಳೆ ಮೇಲೆ ಕಾಮುಕರ ಅಟ್ಟಹಾಸ – ಐಸಿಯೂನಲ್ಲಿ ಕಂದಮ್ಮನಿಗೆ ಚಿಕಿತ್ಸೆ

    ಬೆಂಗಳೂರು: ನಗರದಲ್ಲಿ ಕಾಮುಕರ ಅಟ್ಟಹಾಸ ಮೀತಿಮೀರಿದೆ. ಮೂವರು ಕಾಮುಕರು ಶುಕ್ರವಾರ ಮಧ್ಯರಾತ್ರಿ ಐದು ವರ್ಷದ ಪುಟ್ಟ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಗ್ಯಾಂಗ್ ರೇಪ್ ಎಸಗಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

    ಬೆಂಗಳೂರಿನ ಕೆಜಿ ಹಳ್ಳಿಯ ವೈಯಾಲಿಕಾವಲ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಮಗುವಿನ ಪೋಷಕರು ಮೂಲತಃ ಚಿತ್ರದುರ್ಗದವರಾಗಿದ್ದು, ಕೆಲಸದ ನಿಮಿತ್ತ ಬೆಂಗಲೂರಿನಲ್ಲಿ 3 ವರ್ಷಗಳಿಂದ ವಾಸವಿದ್ದಾರೆ.

    ನಡೆದಿದ್ದೇನು?: ಎಂದಿನಂತೆ ತಾಯಿಯ ಜೊತೆ ಮಲಗಿದ್ದ ಬಾಲಕಿ ರಾತ್ರಿ ಬಹಿರ್ದೆಸೆಗೆಂದು ಹೊರಗೆ ಬಂದಿದೆ. ಆದ್ರೆ ಈ ಬಗ್ಗೆ ತಾಯಿಗೆ ಗೊತ್ತಿರಲಿಲ್ಲ. ಬಾಲಕಿ ಹೊರಗೆ ಬಂದಿದ್ದ ವೇಳೆ ಕಾಮುಕರು ಆಕೆಯನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಮನೆಯ ಬಳಿ ಬಾಲಕಿಯನ್ನು ಬಿಸಾಕಿ ಹೋಗಿದ್ದಾರೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕಂಡು ಪೋಷಕರು ಕಂಗಾಲಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಮಾತನಾಡುವ ಪರಿಸ್ಥಿತಿಗೆ ಬಂದ ಬಳಿಕ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಅಂತಾ ಡಿಸಿಪಿ ಅಜಯ್ ಹಿಲೋರಿ ಹೇಳಿದ್ದಾರೆ.

    ನಿನ್ನೆ ಮೂರು ಗಂಟೆ ಸುಮಾರಿಗೆ ಆಸ್ಪತ್ರೆಗೆ ಮಗು ದಾಖಲಾಗಿದೆ. ಮಗು ಶಾಕ್‍ಗೆ ಒಳಗಾಗಿದೆ. ಆಸ್ಪತ್ರೆಗೆ ದಾಖಲಾದಾಗ ಅರೆಪ್ರಜ್ಞಾವಸ್ಥೆಯಲ್ಲಿ ಇತ್ತು. ಮಗುವಿನ ಕೈ ಬೆರಳು ಕಟ್ಟಾಗಿದೆ. ಸದ್ಯ ಬಾಲಕಿಗೆ ಐಸಿಯೂವಿನಲ್ಲಿ ಚಿಕಿತ್ಸೆ ಮುಂದುವರೆದಿದೆ ಅಂತಾ ಬೌರಿಂಗ್ ಆಸ್ಪತ್ರೆಯ ನಿರ್ದೇಶಕ ಹಾಗೂ ಡೀನ್ ಮಂಜುನಾಥ್ ಹೇಳಿದ್ದಾರೆ.

    ಜಾರ್ಜ್ ಭೇಟಿ: ಪ್ರಕರಣ ಸಂಬಂಧ ಸಚಿವ ಕೆ ಜೆ ಜಾರ್ಜ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಬಾಲಕಿಯ ಪೋಷಕರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸಿರಿಯಸ್ ಕ್ರೈಂ. ಪ್ರಕರಣದಲ್ಲಿ ಯಾರೆ ತಪ್ಪು ಮಾಡಿದ್ರು ಕಠಿಣ ಶಿಕ್ಷೆ ಆಗಬೇಕು ಅಂತ ಹೇಳಿದ್ದಾರೆ.

    ಘಟನೆಯಿಂದ ಮಗು ತಲೆಗೆ ಏಟಾಗಿದೆ. ಅದಕ್ಕೆ ಮೊದಲ ಆದ್ಯತೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಪೊಲೀಸ್ರು ಪ್ರಕರಣವನ್ನು ಪಡೆದುಕೊಂಡು ತನಿಖೆ ಮಾಡುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಸೀರಿಯಸ್ ಆಗಿ ಮಾಡಿ ಕೋರ್ಟ್‍ಗೆ ನೀಡ್ತಾರೆ. ಪೊಲೀಸ್ರಿಗೆ ಸಹಕಾರ ನೀಡಬೇಕು. ಸಮಾಜ ಇಂತಹವರ ವಿರುದ್ಧ ಒಟ್ಟಾಗಿ ಶಿಕ್ಷೆ ನೀಡಬೇಕು. ಇದು ಸಮಾಜ ಸಹಿಸಲಾಗದ ಪ್ರಕರಣವಾಗಿದೆ. ಇಂತಹ ಕೃತ್ಯವೆಸಗಿದ್ದಾರೆ ಅವರಿಗೆ ಶಿಕ್ಷೆ ನೀಡಬೇಕಿದೆ. ಈ ಬಗ್ಗೆ ಕಮಿಷನರ್ ಮತ್ತು ಡಿಸಿಪಿ ಜತೆ ಮಾತನಾಡಿದ್ದೇನೆ ಅಂತಾ ಜಾರ್ಜ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಕೆಜಿ ಹಳ್ಳಿ ಪೊಲೀಸರು ಕಾಮುಕರಿಗಾಗಿ ಬಲೆ ಬೀಸಿದ್ದಾರೆ.