Tag: ಕಾಮಿಡಿ ಕಿಲಾಡಿಗಳು 3

  • ‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ

    ‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ

    ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ನಿಧನ ಚಿತ್ರರಂಗಕ್ಕೆ ಶಾಕ್ ನೀಡಿದೆ. ಇದೀಗ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ರಾಕೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ‘ಕಾಂತಾರ ಚಾಪ್ಟರ್ 1’ರಲ್ಲಿ (Kantara Chapter 1) ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ತುಂಬಲಾರದ ನಷ್ಟ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ‘ಕಾಂತಾರ’ (Kantara Chapter 1) ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ ಎಂದು ರಾಕೇಶ್‌ ಬಗ್ಗೆ ರಿಷಬ್ ಶೆಟ್ಟಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

    ನಟ ರಾಕೇಶ್ ಪೂಜಾರಿ (Rakesh Poojari) ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ, ಅವರ ಆಪ್ತರಿಗೆ ಹಾಗೂ ಹಿತೈಷಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಈ ದುಃಖದ ಘಳಿಗೆಯಲ್ಲಿ ನಾವೆಲ್ಲರೂ ಅವರ ಕುಟುಂಬದೊಂದಿಗೆ ಇದ್ದೇವೆ ಎಂದು ಕಾಂತಾರ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್‌ ರಾಕೇಶ್ ಅಗಲಿಕೆಗೆ ಸಂತಾಪ ಸೂಚಿಸಿದೆ.

    ಮೇ 12ರಂದು ರಾಕೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ವೇಳೆ, ಅನುಶ್ರೀ, ರಕ್ಷಿತಾ ಪ್ರೇಮ್, ಯೋಗರಾಜ್ ಭಟ್, ಕಾಮಿಡಿ ಕಿಲಾಡಿಗಳು ತಂಡದ ಕಲಾವಿದರು ಭಾಗಿಯಾಗಿ ಅಂತಿಮ ದರ್ಶನ ಪಡೆದರು. ನಿನ್ನೆ ಸಂಜೆ ಉಡುಪಿ ಹೂಡೆಯ ರುದ್ರಭೂಮಿಯಲ್ಲಿ ಬಿಲ್ಲವ ಸಂಪ್ರದಾಯದಂತೆ ನಟನ ಅಂತ್ಯಕ್ರಿಯೆ ನಡೆಯಿತು.

  • ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

    ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

    ‘ಕಾಡಿಮಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ (Rakesh Poojari) ಅವರ ನಿಧನಕ್ಕೆ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಸಂತಾಪ ಸೂಚಿಸಿದ್ದಾರೆ. ಅವನ ಅಕಾಲಿಕ ಮರಣ ತುಂಬಾ ನೋವು ತಂದಿದೆ ಎಂದು ಕಂಬಿನಿ ಮಿಡಿದಿದ್ದಾರೆ. ಇದನ್ನೂ ಓದಿ:ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ‘ಕಾಮಿಡಿ ಕಿಲಾಡಿಗಳು 3’ರ ತೀರ್ಪುಗಾರರಾಗಿದ್ದ ಯೋಗರಾಜ್ ಭಟ್ ಅವರು ರಾಕೇಶ್ ಜೊತೆಗಿನ ಒಡನಾಟದ ಬಗ್ಗೆ ‘ಪಬ್ಲಿಕ್ ಟಿವಿ’ಗೆ ಮಾತನಾಡಿ, ರಾಕೇಶ್ ನಟನೆಯನ್ನು ಹತ್ತಿರದಿಂದ ನೋಡಿದ್ದೇವೆ. ಅವರ ಸಾವಿನ ಸುದ್ದಿ ಕೇಳಿದಾಗ ಅದನ್ನು ಅರಗಿಸಿಕೊಳ್ಳೋಕೆ ಅರ್ಧ ಗಂಟೆ ಬೇಕಾಯಿತು. ಯಾವುದೇ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬಂದಿರೋ ವ್ಯಕ್ತಿ. ಕರಾವಳಿಯಿಂದ ಬಂದಂತಹ ಅಪ್ರತಿಮ ಕಲಾವಿದ. ನಮ್ಮ ಸೆಟ್‌ನಲ್ಲಿ ಅವರನ್ನು ಮುದ್ದಿನ ನಟನಾಗಿ ಆರೈಕೆ ಮಾಡುತ್ತಿದ್ವಿ. ಅವರ ಮೇಲೆ ವಿಶೇಷ ಅಕ್ಕರೆ ಇತ್ತು. ‘ಕಾಮಿಡಿ ಕಿಲಾಡಿಗಳು’ ಗೆದ್ದಾಗ ಖುಷಿಪಟ್ಟಿದ್ದ ಎಂದಿದ್ದಾರೆ. ಇದನ್ನೂ ಓದಿ:ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

    ನನ್ನ ನಿರ್ದೇಶನದ ‘ಮನದ ಕಡಲು’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ‘ಕಾಂತಾರ ಚಾಪ್ಟರ್ 1’ರಲ್ಲಿ ನಟಿಸುತ್ತಿದ್ದ ಕಾರಣ ನನ್ನ ಚಿತ್ರದಲ್ಲಿ ನಟಿಸೋಕೆ ಆಗಲಿಲ್ಲ. ಈ ಚಿತ್ರದಲ್ಲಿ ಅವನಿಗೆ ಒಳ್ಳೆಯ ಪಾತ್ರ ಸಿಕ್ಕಿತ್ತು. ಅದಕ್ಕಾಗಿ ಗಡ್ಡ ಬಿಟ್ಟಿದ್ದ ಹೀಗಾಗಿ ಈ ಸಿನಿಮಾ ಮುಗಿಸು ಮುಂದಿನ ಚಿತ್ರದಲ್ಲಿ ಕೆಲಸ ಮಾಡೋಣ ಅಂದಿದ್ದೇ. ಈ ಹಿಂದೆ ‘ಕರಟಕ ದಮನಕ’ ಚಿತ್ರದಲ್ಲಿ ಒಂದು ದಿನದ ಖೈದಿ ಪಾತ್ರ ಮಾಡಿದ್ದ ಎಂದು ನಟನನ್ನು ಸ್ಮರಿಸಿದರು.

    ರಾಕೇಶ್ ಅಕಾಲಿಕ ಮರಣ ತುಂಬಾ ನೋವು ತಂದಿದೆ. ಅವನಿಗೆ ತುಂಬಾ ಕನಸುಗಳಿತ್ತು. ಯಾವುದೇ ಬೆಂಬಲವಿಲ್ಲದೇ, ಚಿತ್ರರಂಗಕ್ಕೆ ಸ್ವಂತ ಪ್ರತಿಭೆಯಿಂದ ಬಂದವನು. ಸಿನಿಮಾಗಳು ಮಾಡಬೇಕು ಎಂದು ಅವನಿಗೆ ಕನಸಿತ್ತು. ವಯಸ್ಸಾದ ಪಾತ್ರ ಮಾಡಬೇಕು ಎಂದು ಆಸೆ ಹೇಳಿಕೊಂಡಿದ್ದ ಈಗ ಅವನ ಬಗ್ಗೆ ಯೋಚನೆ ಮಾಡಿದ್ರೆ ಎಲ್ಲವೂ ನೆನಪಾಗುತ್ತದೆ ಎಂದಿದ್ದಾರೆ. ಈ ವೇಳೆ, ಉಡುಪಿಯ ಹೂಡೆ ಸ್ಥಳದಲ್ಲಿ ರಾಕೇಶ್ ಅಂತ್ಯಕ್ರಿಯೆ ನಡೆಯಲಿದೆ. ತಾವು ಕೂಡ ಭಾಗಿಯಾಗಿರೋದಾಗಿ ಯೋಗರಾಜ್ ಭಟ್ ತಿಳಿಸಿದ್ದಾರೆ.

    ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ರಾಕೇಶ್ ಪೂಜಾರಿ (Lokesh Poojari) ಸಾವಿನ ಸುದ್ದಿ ಈಗಲೂ ಅರಗಿಸಿಕೊಳ್ಳೋಕೆ ಆಗ್ತಿಲ್ಲ ಎಂದು ‘ಬಿಗ್ ಬಾಸ್’ ಖ್ಯಾತಿಯ ಲೋಕೇಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಟಿಗೆ ಬಿಗ್ ಚಾನ್ಸ್- ಉಪೇಂದ್ರಗೆ ಅಂಕಿತಾ ಅಮರ್ ನಾಯಕಿ

    ಗೆಳೆಯನ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿ, ನನಗೆ ಅವರ ಸಾವಿನ ಬಗ್ಗೆ ಬೆಳಗ್ಗೆ 4 ಗಂಟೆಗೆ ನಟಿ ದಿವ್ಯಾಶ್ರೀ ಕಡೆಯಿಂದ ತಿಳಿಯಿತು. ದಿವ್ಯಾ ಮತ್ತು ರಾಕೇಶ್ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅವರು ಫೋನ್ ಮಾಡಿ ಹೇಳಿದಾಗ ನನಗೆ ನಂಬೋಕೆ ಆಗಲಿಲ್ಲ. ‘ಕಾಮಿಡಿ ಕಿಲಾಡಿಗಳು’ ಚಾಂಪಿಯನ್‌ಶಿಪ್‌ನಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದ್ವಿ. ಅವರು ಅದ್ಭುತವಾಗಿ ನಟಿಸುತ್ತಿದ್ದರು. ಈಗ ಅವರ ಸಾವಿನ ಸುದ್ದಿ ಕೇಳಿ ಆಶ್ವರ್ಯ ಆಯ್ತು, ನನಗೆ ನಂಬಲು ಆಗ್ತಿಲ್ಲ. ಈಗಲೂ ಇದನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ:ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

    ಅವರಿಗಿನ್ನು ಚಿಕ್ಕ ವಯಸ್ಸು, ಚಿತ್ರರಂಗದಲ್ಲಿ ಬೆಳೆಯೋದಿತ್ತು, ಹೀಗೆ ಆಗಿದ್ದು ನ್ಯಾಯನಾ ಅನಿಸುತ್ತದೆ. ‘ಕಾಮಿಡಿ ಕಿಲಾಡಿಗಳು’ ಟೀಮ್ ಅವರ ಊರಿನ ಕಡೆ ಹೊರಟಿದೆ. ಇತ್ತೀಚೆಗೆ ನಾವು ಭೇಟಿಯಾಗಿರಲಿಲ್ಲ. ಆದರೆ ಸಮಯ ಸಿಕ್ಕಾಗ ಫೋನ್‌ನಲ್ಲಿ ಮಾತನಾಡುತ್ತಿದ್ದೇವು. ನಾನು ರಾಕಿ ಅಂತ ಕರೆದ್ರೆ ಅಣ್ಣ ಎಂದು ಬಂದು ತಬ್ಬಿಕೊಳ್ತಿದ್ದರು. ಈಗ ಅವರ ಸಾವಿನ ಸುದ್ದಿ ಕೇಳಿದ್ರೆ ಹೊಟ್ಟೆ ಉರಿಯುತ್ತದೆ ಅಂತ ಕಣ್ಣೀರಿಟ್ಟರು.

    ‘ಕಾಂತಾರ ಚಾಪ್ಟರ್ 1’ರಲ್ಲಿ ಕೆಲಸ ಮಾಡುತ್ತಿದ್ದ ವಿಷಯ ಗೊತ್ತಿತ್ತು. ಬೆಳೆಯುವ ಟೈಮ್‌ನಲ್ಲಿ ಒಂದೊಳ್ಳೆಯ ಬ್ಯಾನರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಹೀಗೆ ಆಯ್ತಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಕೇಶ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಸಮಾಧಾನ ಸಿಗಲಿ ಎಂದು ಮಾತನಾಡಿದ್ದಾರೆ.

    ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ‘ಕಾಮಿಡಿ ಕಿಲಾಡಿಗಳು 3’ರ ವಿನ್ನರ್ ಉಡುಪಿಯ ರಾಕೇಶ್ ಪೂಜಾರಿ

    ‘ಕಾಮಿಡಿ ಕಿಲಾಡಿಗಳು 3’ರ ವಿನ್ನರ್ ಉಡುಪಿಯ ರಾಕೇಶ್ ಪೂಜಾರಿ

    ಬೆಂಗಳೂರು: ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು ಸೀಸನ್ 3’ ರಿಯಾಲಿಟಿ ಶೋಗೆ ಶನಿವಾರ ಅದ್ಧೂರಿ ತೆರೆಬಿದ್ದಿದ್ದು, ಉಡುಪಿಯ ರಾಜೇಕ್ ಪೂಜಾರಿ ವಿಜೇತರಾಗಿ, ಕಾಮಿಡಿ ಕಿಲಾಡಿಗಳು 3ರ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಮೊದಲ ಸ್ಥಾನವನ್ನು ರಾಕೇಶ್ ಪಡೆದಿದ್ದು, ಹಾಸನದ ಸಂತೋಷ್ ಅವರು ರನ್ನರ್ ಅಪ್ ಆಗಿದ್ದಾರೆ. ಶನಿವಾರ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ‘ಕಾಮಿಡಿ ಕಿಲಾಡಿಗಳು ಸೀಸನ್ 3’ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದಿದ್ದು, ಶೋ ತೀರ್ಪುಗಾರರಾಗಿದ್ದ ನಟ ಜಗ್ಗೇಶ್ ಅವರು ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಮತ್ತು ರನ್ನರ್ ಅಪ್‍ಗಳನ್ನು ಘೋಷಿಸಿದರು.

    ವಿನ್ನರ್ ಆದ ರಾಕೇಶ್ ಅವರಿಗೆ 8 ಲಕ್ಷ ರೂಪಾಯಿ ಹಾಗೂ ರನ್ನರ್ ಅಪ್ ಸಂತೋಷ್ ಅವರಿಗೆ 4 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗಿದೆ. ಇತ್ತ ಕೋಳಿ ಕಳ್ಳ ಖ್ಯಾತಿಯ ಮನೋಹರ್ ಹಾಗೂ ಬಾ ಮಲಿಕೋ ಖ್ಯಾತಿಯ ದಾನಪ್ಪ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿನ್ನರ್ ರಾಕೇಶ್ ಅವರಿಗೆ ಕಾರ್ಯಕ್ರಮದ ಮೂವರು ತಿರ್ಪುಗಾರರಾದ ನಟ ಜಗ್ಗೇಶ್, ನಟಿ ರಕ್ಷಿತಾ, ನಿರ್ದೇಶಕ ಯೋಗರಾಜ್ ಭಟ್ ಹಾಗೂ ಖಾಸಗಿ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಅವರು ನಗದು ಬಹುಮಾನದ ಚೆಕ್ ಮತ್ತು ಟ್ರೋಫಿ ನೀಡಿ ಖುಷಿಪಟ್ಟರು.

    15 ಸ್ಪರ್ಧಿಗಳು ತೀವ್ರ ಪೈಪೋಟಿ ನೀಡುತ್ತಾ, 26 ವಾರಗಳ ಕಾಲ ನಡೆದ ‘ಕಾಮಿಡಿ ಕಿಲಾಡಿಗಳು ಸೀಸನ್ 3’ಗೆ ಅದ್ಧೂರಿ ತೆರೆಬಿದ್ದಿದೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ನೆರೆದಿದ್ದರು.