Tag: ಕಾಮಿಡಿ

  • ಕಾಮಿಡಿ ಶೋನಲ್ಲಿ ಡೈಲಾಗ್ ಹೇಳಲು ಒದ್ದಾಡಿದ ಡ್ರೋನ್ ಪ್ರತಾಪ್

    ಕಾಮಿಡಿ ಶೋನಲ್ಲಿ ಡೈಲಾಗ್ ಹೇಳಲು ಒದ್ದಾಡಿದ ಡ್ರೋನ್ ಪ್ರತಾಪ್

    ಯಾರು ಯಾವುದನ್ನು ಮಾಡಬೇಕು ಅದನ್ನು ಮಾಡಿದರೇ ಚಂದ ಎನ್ನುವ ಮಾತಿದೆ. ಆಗದೇ ಇರೋದನ್ನು ನೋಡಿಯೇ ಬಿಡೋಣ ಎಂದರೆ ಅಲ್ಲೊಂದು ಎಡವಟ್ಟು ಕಾದಿರುತ್ತದೆ. ಅಂತಹ ಎಡವಟ್ಟಿಗೆ ಸಾಕ್ಷಿಯಾಗಿದ್ಧಾರೆ ಡ್ರೋನ್ ಪ್ರತಾಪ್.

    ಬಿಗ್ ಬಾಸ್‌ನಿಂದ ಬಂದ್ಮೇಲೆ ಡ್ರೋನ್ ಪ್ರತಾಪ್ (Drone Pratap) ಹವಾ ಜೋರಾಗಿದೆ. `ಗಿಚ್ಚಿ ಗಿಲಿಗಿಲಿ 3′ (Gichchi Giligili) ಶೋಗೆ ಎಂಟ್ರಿ ಕೊಟ್ಟು ಕಾಮಿಡಿ ಮಾಡಲು ಪ್ರತಾಪ್ ಶುರು ಮಾಡಿದ್ದಾರೆ. ಇದೀಗ ವೇದಿಕೆಯಲ್ಲಿ ಡೈಲಾಗ್ ಹೇಳಲು ಪ್ರತಾಪ್ ತಿಣುಕಾಡಿದ್ದಾರೆ.

    ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು ಪ್ರತಾಪ್. ದೊಡ್ಮನೆಗೆ ಕಾಲಿಟ್ಟ ಮೇಲೆ ಸ್ಪರ್ಧಿಗಳಿಂದಲೂ ಭಾರೀ ಟಾರ್ಗೆಟ್ ಆಗಿದ್ದರು. ಬಳಿ ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬಿಗ್ ಬಾಸ್ ಫಿನಾಲೆಯಲ್ಲಿ ಪ್ರತಾಪ್ ಮೊದಲ ರನ್ನರ್ ಅಪ್ ಆಗಿ ಸ್ಥಾನ ಗಿಟ್ಟಿಸಿಕೊಂಡರು.

    ಡ್ರೋನ್ ಪ್ರತಾಪ್ ಡ್ಯಾನ್ಸ್ನಲ್ಲಿ ಸೈ.. ಆದರೆ ಕಾಮಿಡಿ ಅಂತ ಬಂದಾಗ ಪ್ರತಾಪ್ ಕೊಂಚ ಹಿಂದೆ. ಇದೀಗ ಅಭಿನಯದ ಕಾಗುಣಿತ ಗೊತ್ತಿಲ್ಲದ ಪ್ರತಾಪ್ ಗಿಚ್ಚಿಗಿಲಿ ಗಿಲಿಗೆ ಎಂಟ್ರಿ ಕೊಟ್ಟು ಆ್ಯಕ್ಟಿಂಗ್ ಕಲಿಯುತ್ತಿದ್ದಾರೆ. ಅದಷ್ಟೇ ಅಲ್ಲ.. ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದಾರೆ.

    ಪ್ರತಾಪ್ ಈ ಬಾರಿ ಮಂತ್ರವಾದಿಯ ಗೆಟಪ್‌ನಲ್ಲಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಆಗ ಆತ್ಮವನ್ನು ಬದಲಿಸುವ ಸೀನ್‌ನಲ್ಲಿ ಆತ್ಮ ಆವಾಹಯಾಮಿ ಎಂದು ಡೈಲಾಗ್ ಹೇಳಬೇಕಿತ್ತು. ಆಗ ಪ್ರತಾಪ್.. ಡೈಲಾಗ್ ಹೇಳಲು ಆಗದೇ ತಿಣುಕಾಡಿದ್ದಾರೆ. ಹಾವಾಹಯಾಮಿ ಎಂದು ತಪ್ಪಾಗಿ ಡೈಲಾಗ್ ಹೇಳಿದ್ದಾರೆ. ಪ್ರತಾಪ್ ಮಾತಿಗೆ ಜಡ್ಜ್ಗಳಾದ ನಟಿ ಶ್ರುತಿ, ಕೋಮಲ್, ಸಾಧುಕೋಕಿಲ ಬಿದ್ದು ಬಿದ್ದು ನಕ್ಕಿದ್ದಾರೆ. ಒಟ್ನಲ್ಲಿ ನಟನೆಯ ಗಂಧ ಗಾಳಿ ಗೊತ್ತಿಲ್ಲದ ಪ್ರತಾಪ್‌ನ ಹೊಸ ಜರ್ನಿಗೆ ಅಭಿಮಾನಿಗಳು ಸ್ವೀಟ್ ಆಗಿ ವಿಶ್ ಮಾಡ್ತಿದ್ದಾರೆ.

  • ಕಾಮಿಡಿ ಜೋಡಿಯ ನಗುವಿನ ಗಮ್ಮತ್ತು.. ಇದು ಧಮಾಕ ಟ್ರೇಲರ್ ಕರಾಮತ್ತು..

    ಕಾಮಿಡಿ ಜೋಡಿಯ ನಗುವಿನ ಗಮ್ಮತ್ತು.. ಇದು ಧಮಾಕ ಟ್ರೇಲರ್ ಕರಾಮತ್ತು..

    ಒಂದಷ್ಟು ಸಿನಿಮಾಗಳು ಆರಂಭದಿಂದಲೇ ಪ್ರೇಕ್ಷಕರನ್ನು ನಾನಾ ಬಗೆಯಲ್ಲಿ ಆವರಿಸಿಕೊಳ್ಳುತ್ತವೆ. ಕಂಟೆಂಟು, ಕ್ವಾಲಿಟಿ ಅಥವಾ ತಾರಾಬಳಗದಿಂದ ಚಿತ್ರ ಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸುತ್ತವೆ. ಈಗ ಕಂಟೆಂಟ್ ಜೊತೆಗೆ ತಾರಾಬಳಗದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವುದು ಧಮಾಕ ಸಿನಿಮಾ. ಮನರಂಜನೆ ಜೊತೆಗೆ ಮನರಂಜನೆ ಉಣಬಡಿಸುವ ಇಬ್ಬರು ಅದ್ಭುತ ಕಲಾವಿದರ ಸಮಾಗಮದ ಧಮಾಕ ಟ್ರೇಲರ್ ಬಿಡುಗಡೆಯಾಗಿದೆ. ಭರಪೂರ ಮನರಂಜನೆ ಹೊತ್ತು ಬಂದಿರುವ ಟ್ರೇಲರ್, ನೋಡುಗರಿಗೆ ನಗುವಿನ ಟಾನಿಕ್ ನೀಡುತ್ತಿದೆ.

    ಖ್ಯಾತ ಹಾಸ್ಯನಟ ಚಿಕ್ಕಣ್ಣನ ಹಿನ್ನೆಲೆ ಧ್ವನಿಯಿಂದ ಶುರುವಾಗುವ ಟ್ರೇಲರ್ ಆರಂಭದಿಂದ ಕೊನೆವರೆಗೂ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸುತ್ತದೆ. ಶಿವರಾಜ್ ಕೆ.ಆರ್. ಪೇಟೆ ಎಂದಿನಂತೆ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರ ಮೊಗದಲ್ಲಿ ನಗುಮೂಡಿಸ್ತಾರೆ. ಇವರಿಗೆ ಜೋಡಿಯಾಗಿ ನಯನಾ ನಟಿಸಿದ್ದಾರೆ. ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಪ್ರಕಾಶ್ ತುಮಿನಾಡು, ಮಹಾಂತೇಶ್ ಹಿರೇಮಠ, ಅರುಣಾ ಬಾಲರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಕಾಮಿಡಿ ಜೊತೆಗೆ ಒಂದು ಗಟ್ಟಿ ಸಂದೇಶವಿರುವ ಧಮಾಕ ಚಿತ್ರಕ್ಕೆ ಲಕ್ಷ್ಮೀ ರಮೇಶ್ ನಿರ್ದೇಶನವಿದೆ. ಇದು ಇವರ ಚೊಚ್ಚಲ ಸಿನಿಮಾವಾಗಿದ್ದು, ಮೊದಲ ಹೆಜ್ಜೆಯಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ಉತ್ಸಾಹದಲ್ಲಿದ್ದಾರೆ.  ಇದನ್ನೂ ಓದಿ: Breaking: ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಸ್ಫೂರ್ತಿ ಗೌಡ ಎಲಿಮಿನೇಟ್

    ನಗೆಯ ಕಚಗುಳಿ ಇಡುವ ಧಮಾಕ ಸಿನಿಮಾವನ್ನು ಎಸ್‍ಆರ್ ಮೀಡಿಯಾ ಪ್ರೊಡಕ್ಷನ್ ಬ್ಯಾನರ್ ನಡಿ ಸುನೀಲ್, ಎಸ್. ರಾಜ್ ಮತ್ತು ಅನ್ನಪೂರ್ಣ ಪಾಟೀಲ ನಿರ್ಮಾಣ ಮಾಡಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ, ಹಾಲೇಶ್.ಎಸ್ ಛಾಯಾಗ್ರಹಣ, ರಘು ಆರ್.ಜೆ. ನೃತ್ಯ ನಿರ್ದೇಶನ, ವಿನಯ್ ಕೂರ್ಗ್ ಸಂಕಲನ ಸಿನಿಮಾಕ್ಕಿದೆ. ಟೀಸರ್, ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಧಮಾಕ ಬಳಗ ಈಗ ಟ್ರೇಲರ್ ಮೂಲಕ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ನಗುವಿನ ಅಲೆಯಲ್ಲಿ ನಿಮ್ಮನ್ನು ಮಿಂದೇಳುವಂತೆ ಮಾಡಲು ಶೀಘ್ರದಲ್ಲೇ ಚಿತ್ರತಂಡ ಬಿಡುಗಡೆ ದಿನಾಂಕ ಅನೌನ್ಸ್ ಮಾಡಲಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಕಿಚ್ಚನ ಪಂಚಾಯಿತಿಯಲ್ಲಿ ಸಾನ್ಯಾ-ರೂಪೇಶ್ ಮಿಡ್ ನೈಟ್ ವಿಚಾರ ಬಿಸಿ ಬಿಸಿ ಚರ್ಚೆ

    Live Tv
    [brid partner=56869869 player=32851 video=960834 autoplay=true]

  • ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

    ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

    ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಕೆಲ ಕಡೆ ಅಚ್ಚರಿ ಮೂಡಿಸಿದ್ದರೆ, ಕೆಲ ರಾಜ್ಯಗಳಲ್ಲಿ ನಿರೀಕ್ಷಿತ ಫಲದಂತಿದೆ. ಫಲಿತಾಂಶ ಪೂರ್ವ ಬಂದ ಸಮೀಕ್ಷೆಗಳು ಬಹುತೇಕ ಖಚಿತವಾಗಿವೆ. ಅದರಂತೆ ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿಯೇ ಅತೀ ಹೆಚ್ಚು ಅಂತರದಿಂದ ಗೆಲುವು ಸಾಧಿಸಿ, ಅಧಿಕಾರ ಚುಕ್ಕಾಣೆ ಹಿಡಿಯಲು ದಿನಗಣನೆ ಶುರುವಾಗಿದೆ. ಇದನ್ನೂ ಓದಿ : ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

    ಚುನಾವಣೆ ಮುನ್ನವೇ ಪಂಜಾಬ್ ನ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಎಂದು ಕೇಜ್ರಿವಾಲಾ ಘೋಷಣೆ ಮಾಡಿದ್ದರು. ಅವರ ಮೇಲಿನ ನಂಬಿಕೆ ಸುಳ್ಳಾಗಿಲ್ಲ. ನಿರೀಕ್ಷೆಗಿಂತ ಹೆಚ್ಚೆ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹಾಗಾಗಿ ಭಗವಂತ್ ಮಾನ್ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ.  ಹಾಗಾದರೆ, ಯಾರು ಈ ಭಗವಂತ್ ಖಾನ್? ಇದನ್ನೂ ಓದಿ : ಮೆಗಾಸ್ಟಾರ್ ಚಿರಂಜೀವಿ ಹೊಸ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ

    ಸಿನಿಮಾ ಮತ್ತು ಮ್ಯೂಸಿಕ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಭಗವಂತ್. ತೊಂಬತ್ತರ ದಶಕದಿಂದಲೂ ಅವರು ಕಾಮಿಡಿ ಶೋಗಳನ್ನು ಮಾಡುತ್ತಲೇ, ಸಾವಿರಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದಾರೆ. ಈ ವೇಳೆಯಲ್ಲಿ ಭಗವಂತ್ ಜತೆ ಕಾಣಿಸಿಕೊಳ್ಳುತ್ತಿದ್ದ ಮತ್ತೊಂದು ಹೆಸರು ಖ್ಯಾತ ಕಾಮಿಡಿಯನ್ ಜಗ್ತರ್ ಜಗ್ಗಿ ಅವರದ್ದು. ಭಗವಂತ್ ಮತ್ತು ಜಗ್ತರ್ ಜಗ್ಗಿ ಕಾಮಿಡಿ ಇದ್ದರೆ ಸಾಕು, ನಗೆಹಬ್ಬ ಗ್ಯಾರಂಟಿ ಆಗಿರುತ್ತಿತ್ತು. ಈ ಜೋಡಿ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ  ಅಮೆರಿಕಾ, ಇಂಗ್ಲೆಂಡ್, ಅರಬ್ ದೇಶಗಳು, ಕೆನಡಾ ಸೇರಿದಂತೆ ವಿದೇಶಗಳಲ್ಲೂ ಇವರು ಸಾಕಷ್ಟು ಕಾಮಿಡಿ ಶೋಗಳನ್ನು ನೀಡಿದ್ದಾರೆ. ಇದನ್ನೂ ಓದಿ : ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

    ಕಾಮಿಡಿ ಶೋಗಳು ಮಾತ್ರವಲ್ಲ, ತೊಂಬತ್ತರ ದಶಕದಲ್ಲಿ ಭಗವಂತ್ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟರು. ಈವರೆಗೂ ಸುಮಾರ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸಮಾಜ ಸೇವೆಯತ್ತ ಒಲವು ಹೆಚ್ಚಾಗಿದ್ದರಿಂದ ಸಿನಿಮಾ ರಂಗದಿಂದ ದೂರವಾಗಿ ಲೋಕ್ ಲೆಹರ್ ಫೌಂಡೇಷನ್ ಎಂಬ ಎನ್.ಜಿ.ಓ ಸಂಸ್ಥೆಯನ್ನು ಸ್ಥಾಪಿಸಿ ವಿಶೇಷ ಚೇತನ ಮಕ್ಕಳ ಬಾಳಿಗೆ ಬೆಳಕಾದವರು. ಇದನ್ನೂ ಓದಿ : ಮಾ.13ಕ್ಕೆ ಅರಮನೆ ಮೈದಾನದಲ್ಲಿ ಜೇಮ್ಸ್ ಪ್ರೀ ಇವೆಂಟ್, ಹೊಸಪೇಟೆಯಲ್ಲಿ ಸಕ್ಸಸ್ ಸಂಭ್ರಮ

    ಭಗಮಂತ್ ಮಾನ್ ಹುಟ್ಟಿದ್ದು ಪಂಜಾಬ್ ನ ಸಂಗ್ರುರ್ ಜಿಲ್ಲೆಯ ಸತೋಜ್ ಗ್ರಾಮದಲ್ಲಿ. ಹರ್ಪಾಲ್ ಕೌರ್ ಮ್ತು ಮಹಿಂದರ್ ಸಿಂಗ್ ದಂಪತಿಯ ಪುತ್ರ ಇವರು. 17 ಅಕ್ಟೋಬರ್ 1973ರಲ್ಲಿ ಹುಟ್ಟಿರುವ ಭಗವಂತ್, ನಗುತ್ತಲೇ ಭೂಮಿಗೆ ಬಂದರು ಎನ್ನುವ ಮಾತೂ ಜನಜನಿತ. ಇದನ್ನೂ ಓದಿ : ಬೆಂಗಳೂರಿನಿಂದ ಗಡಿಭಾಗಕ್ಕೆ ಆರ್.ಆರ್.ಆರ್ ಅದ್ಧೂರಿ ಕಾರ್ಯಕ್ರಮ ಶಿಫ್ಟ್

    ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆಯೇ ಕಾಮಿಡಿ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿಂದ ಸಮಾಜ ಸೇವೆಯತ್ತ ಮುಖ ಮಾಡಿದರು. ಅವರು ಮಾಡಿದ ಸಮಾಜ ಸೇವೆಯೇ ಇಂದು ಅವರನ್ನು ಮುಖ್ಯಮಂತ್ರಿ ಸ್ಥಾನದವರೆಗೂ ಕರೆದುಕೊಂಡು ಬಂದಿದೆ.

  • ಇನ್ನೊಬ್ಬರ ಮುಖದಲ್ಲಿ ನಗು ತರಿಸಲು ನನಗೆ ಇಷ್ಟ: ಸನ್ನಿ ಲಿಯೋನ್

    ಇನ್ನೊಬ್ಬರ ಮುಖದಲ್ಲಿ ನಗು ತರಿಸಲು ನನಗೆ ಇಷ್ಟ: ಸನ್ನಿ ಲಿಯೋನ್

    ಮುಂಬೈ: ಇನ್ನೊಬ್ಬರ ಮುಖದಲ್ಲಿ ನಗು ತರಿಸಲು ನನಗೆ ಇಷ್ಟವಾಗುತ್ತದೆ ಎಂದು ಬಾಲಿವುಡ್‍ನ ಮಾದಕ ನಟಿ ಸನ್ನಿ ಲಿಯೋನ್ ಹೇಳಿದ್ದಾರೆ.

    ಸಿನಿಮಾ ಮತ್ತು ರಿಯಾಲಿಟಿ ಶೋಗಳ ಜೊತೆಗೆ ವೆಬ್ ಸೀರಿಸ್‍ನಲ್ಲೂ ನಟಿಸುತ್ತಿರುವ ಸನ್ನಿ, ಆನ್‍ಲೈನ್ ಚಾನೆಲ್‍ವೊಂದರಲ್ಲಿ ಪ್ರಸಾರವಾಗುವ ವೈಬ್ ಸೀರಿಸ್‍ನಲ್ಲಿ ನಟಿಸಲು ಸಿದ್ಧವಾಗಿದ್ದಾರೆ. ಇದು ಕಾಮಿಡಿ ವೆಬ್ ಸೀರಿಸ್ ಆಗಿದ್ದು, ನನಗೆ ಕಾಮಿಡಿ ಚಿತ್ರಗಳಲ್ಲಿ ನಟಿಸಲು ತುಂಬಾ ಇಷ್ಟ. ಇನ್ನೊಬ್ಬರ ಮುಖದಲ್ಲಿ ನಗು ತರಿಸುವ ಕೆಲಸ ನನಗೆ ಬಹಳ ಸಂತೋಷ ಕೊಡುತ್ತದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಸನ್ನಿ ಲಿಯೋನ್, ಈಗ ಸದ್ಯಕ್ಕೆ ವೆಬ್ ಸೀರಿಸ್ ಬಗ್ಗೆ ಹಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ. ಆದರೆ ಈ ವೆಬ್ ಸೀರಿಸ್‍ಗಾಗಿ ನಾನು ಕಾತುರದಿಂದ ಕಾಯುತ್ತಿದ್ದೇನೆ. ಇದರಲ್ಲಿ ಕಾಮಿಡಿ ಜಾನರ್ ನಲ್ಲಿ ನಟಿಸಲು ಬಹಳ ಸಂತೋಷವಾಗುತ್ತಿದೆ. ಇನ್ನೊಬ್ಬರ ಮುಖದಲ್ಲಿ ನಗು ತರಿಸುವ ಕೆಲಸ ನನಗೆ ಇಷ್ಟ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ತಾವೇ ನಿರ್ಮಾಪಕರಾಗಿ ಸಿನಿಮಾಗಳನ್ನು ನಿರ್ಮಾಣ ಮಾಡಲು ತಯಾರಿ ನಡೆಸುತ್ತಿರುವ ಸನ್ನಿ, ಈ ಹಿಂದೆ ಕೆಲ ವೆಬ್ ಸೀರಿಸ್‍ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ತನ್ನದೇ ಬಯೋಗ್ರಫಿಯಾದ ಕರೆನ್ಜಿತ್ ಕೌರ್ ಮತ್ತು ರಾಗಿಣಿ ಎಂಎಂಎಸ್ ರಿಟನ್ರ್ಸ್-2 ಎಂಬ ವೆಬ್ ಸೀರಿಸ್‍ನಲ್ಲಿ ನಟಿಸಿದ್ದರು. ಇದರ ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ವಾಟ್ ದಿ ಲವ್ ವಿತ್ ಕರಣ್ ಜೋಹರ್ ಎಂಬ ವೆಬ್ ಸರಣಿಯಲ್ಲಿ ಅಭಿನಯಿಸಿದ್ದರು.

    ಈ ಮೂರು ವೆಬ್ ಸರಣಿಗಳ ನಂತರ ಈಗ ಕಾಮಿಡಿ ಜಾನರ್ ನಲ್ಲಿ ಬರುತ್ತಿರುವ ವೆಬ್ ಸೀರಿಸ್ ಮಾಡಲು ಸನ್ನಿ ಓಕೆ ಎಂದಿದ್ದಾರೆ. ಈ ಮೂಲಕ ಇಷ್ಟು ದಿನ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಈ ಹಾಟ್ ಬ್ಯೂಟಿ, ಈಗ ಪ್ರೇಕ್ಷಕರನ್ನು ನಗೆ ಎಂಬ ದೋಣಿಯಲ್ಲಿ ತೇಲಿಸಲು ಸಿದ್ಧವಾಗಿದ್ದಾರೆ. ಆದರೆ ಈ ವೆಬ್ ಸೀರಿಸ್ ಯಾವಾಗ ಬಿಡುಗಡೆಯಾಗುತ್ತದೆ. ಉಳಿದ ಕಲಾವಿದರ ವಿವರ ತಿಳಿಯಬೇಕಿದೆ.

    ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸನ್ನಿ, ತನ್ನ ಅವಳಿ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಿ ಅದನ್ನು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಜೊತಗೆ ಇಬ್ಬರು ಮಕ್ಕಳಿಗೂ ಎರಡನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು. ನನ್ನ ಜೀವನದ ಪ್ರತಿಯೊಂದು ದಿನವನ್ನು ಸಂತೋಷವನ್ನಾಗಿ ಮಾಡಿದ್ದೀರಿ. ಪ್ರತಿ ಬಾರಿ ನೀವು ನಕ್ಕು ಕುಣಿದಾಡಿದಾಗ, ಡ್ಯಾನ್ಸ್, ಹಾಡು, ನನ್ನನ್ನು ಅಮ್ಮಾ ಎಂದು ಕರೆದಾಗ ಹೃದಯ ಕರಗಿದಂತ ಅನುಭವವಾಗುತ್ತದೆ. ನನ್ನ ಮಕ್ಕಳ ಮೇಲೆ ದೇವರ ಆಶೀರ್ವಾದ ಇರಲಿ ಎಂದು ಸದಾ ಪ್ರಾರ್ಥಿಸುತ್ತೇನೆ ಎಂದು ಸನ್ನಿ ಲಿಯೋನ್ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು.

    https://www.instagram.com/p/B8bvjAFB5Mo/

  • ಚಿಕ್ಕಣ್ಣ ಕಾಮಿಡಿ ಹೂರಣ ತುಂಬಿರೋ ಬಿಲ್‍ಗೇಟ್ಸ್ ಫೆ.7ಕ್ಕೆ ರಿಲೀಸ್

    ಚಿಕ್ಕಣ್ಣ ಕಾಮಿಡಿ ಹೂರಣ ತುಂಬಿರೋ ಬಿಲ್‍ಗೇಟ್ಸ್ ಫೆ.7ಕ್ಕೆ ರಿಲೀಸ್

    ಕಾಮಿಡಿ ಕಿಂಗ್ ಚಿಕ್ಕಣ್ಣ ಒಂದು ಸಿನಿಮಾದಲ್ಲಿದ್ದಾರೆ ಅಂದ್ರೆ ಅಲ್ಲಿ ನಗುವಿಗೇನು ಬರವಿಲ್ಲ. ಸ್ಕೀನ್ ಮೇಲೆ ಬಂದಾಗಲೆಲ್ಲ ತಮ್ಮ ಡಿಫರೆಂಟ್ ಮ್ಯಾನರಿಸಂ ಹಾಗೂ ಪಂಚ್ ಡೈಲಾಗ್‍ಗಳಿಂದ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಇನ್ನು ಇಡೀ ಸಿನಿಮಾ ಪೂರ್ತಿ ಅವ್ರೆ ನಾಯಕ ನಟನಾಗಿ ಇರ್ತಾರೆ ಅಂದ್ರೆ ಕೇಳೋದೇ ಬೇಡ ಅಲ್ಲಿ ನಗೆಯ ಸುಗ್ಗಿಯೇ ಹುಟ್ಟಿಕೊಳ್ಳುತ್ತೆ. ಹೌದು. ಚಿಕ್ಕಣ್ಣ ಸ್ಯಾಂಡಲ್‍ವುಡ್ ಒನ್ ಆಫ್ ದಿ ಮೋಸ್ಟ್ ಬ್ಯುಸಿಯೆಸ್ಟ್ ಕಾಮಿಡಿ ಆಕ್ಟರ್. ಸ್ಟಾರ್ ನಟರಷ್ಟೇ ಬ್ಯುಸಿಯಾಗಿರೋ ಚಿಕ್ಕಣ್ಣ ಬಿಲ್ ಗೇಟ್ಸ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

    ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟೀಸರ್ ಕಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿ ಸ್ಟಾರ್ ರವಿಚಂದ್ರನ್ ಮೆಚ್ಚಿಕೊಂಡಿದ್ದು ಯಮನ ಅವತಾರ ತಾಳೀರೋ ಚಿಕ್ಕಣ್ಣನನ್ನು ನೋಡೋದೆ ಒಂದು ಗಮ್ಮತ್ತು. ಚಿತ್ರದ ಸ್ಯಾಂಪಲ್‍ಗಳು ಟಾಕ್ ಕ್ರಿಯೇಟ್ ಮಾಡಿದ್ದು ಕಿರುತೆರೆಯ ಶಿಶಿರ್ ಶಾಸ್ತ್ರಿ ಕೂಡ ಚಿಕ್ಕಣ್ಣ ಜೊತೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

    ಬಿಲ್ ಗೇಟ್ಸ್ ಕಾಮಿಡಿ ಎಂಟರ್ ಟೈನ್ಮೆಂಟ್ ಚಿತ್ರವಾಗಿದ್ದು, ಗಂಭೀರವಾದ ವಿಷಯವೊಂದನ್ನು ಕಾಮಿಕ್ ಆಗಿ ಪ್ರೇಕ್ಷಕರ ಮನಮುಟ್ಟಿಸುವ ಕೆಲಸವನ್ನು ನಿರ್ದೇಶಕ ಶ್ರೀನಿವಾಸ್.ಸಿ ಮಾಡಿದ್ದಾರೆ. ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ನಿರ್ದೇಶಕ ಶ್ರೀನಿವಾಸ್ ಅವ್ರ ಸ್ನೇಹಿತರು ಬಂಡವಾಳ ಹೂಡಿದ್ದಾರೆ. ಫೆಬ್ರವರಿ 7ಕ್ಕೆ ಬಿಲ್ ಗೇಟ್ಸ್ ಚಿತ್ರ ಬಿಡುಗಡೆಯಾಗುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರ ತೆರೆ ಮೇಲೆ ಯಾವ ರೀತಿ ಮ್ಯಾಜಿಕ್ ಕ್ರಿಯೇಟ್ ಮಾಡುತ್ತೆ ಕಾದು ನೋಡಬೇಕು.

  • ಫಸ್ಟ್ ಲುಕ್‍ನಲ್ಲಿ ಲಕಲಕಿಸಿದ ಸಕಲಕಲಾವಲ್ಲಭ!

    ಫಸ್ಟ್ ಲುಕ್‍ನಲ್ಲಿ ಲಕಲಕಿಸಿದ ಸಕಲಕಲಾವಲ್ಲಭ!

    ಬೆಂಗಳೂರು: ಸತ್ಯಘಟನೆಯಾಧಾರಿತ ಚಿತ್ರಗಳ ಮೂಲಕವೇ ನಿರ್ದೇಶಕರಾಗಿ ಖ್ಯಾತಿ ಪಡೆದಿರುವವರು ಜೇಕಬ್ ವರ್ಗೀಸ್. ಈವರೆಗೂ ಪೃಥ್ವಿ, ಚಂಬಲ್‍ನಂಥಾ ಸತ್ಯ ಘಟನೆಯಾಧಾರಿತ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದವರು ಜೇಕಬ್ ವರ್ಗೀಸ್. ಸವಾರಿಯಂಥಾ ಭಿನ್ನ ಬಗೆಯ ಚಿತ್ರವನ್ನೂ ಸೃಷ್ಟಿಸಿದ್ದ ಜೇಕಬ್ ಒಂದು ಸಿನಿಮಾ ಮಾಡುತ್ತಾರೆಂದರೆ ಇತಿಹಾಸದ ಹುದುಲಲ್ಲಿ ಮುಚ್ಚಿ ಹೋದ ಸತ್ಯವೊಂದು ಬೆಳಕು ಕಾಣಲಿದೆ ಅಂತಲೇ ಅರ್ಥ. ಆದರೆ ಈ ಬಾರಿ ಅವರು ಇಂಥಾ ಗಂಭೀರ ಕಥಾ ವಸ್ತುಗಳ ಹಾದಿಯಿಂದ ಸಂಪೂರ್ಣ ಕಾಮಿಡಿಯತ್ತ ಹೊರಳಿಕೊಂಡಿದ್ದಾರೆ. ಅದರ ಫಲವೆಂಬಂತೆ ‘ಸಕಲ ಕಲಾ ವಲ್ಲಭ’ ಚಿತ್ರ ಜೀವ ಪಡೆದಿದೆ.

    ಸಕಲ ಕಲಾ ವಲ್ಲಭ ಚಿತ್ರದಲ್ಲಿ ಆಪರೇಷನ್ ಆಲಮೇಲಮ್ಮ ಖ್ಯಾತಿಯ ರಿಷಿ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಟೈಟಲ್ಲಿನತ್ತಲೇ ಪ್ರಧಾನವಾಗಿ ಫೋಕಸ್ ಮಾಡಿರೋ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಷ್ಟಕ್ಕೂ ಜೇಕಬ್ ವರ್ಗೀಸ್ ಚಂಬಲ್ ಗೆಲುವಿನ ನಂತರದಲ್ಲಿ ಈ ಸಿನಿಮಾ ಘೋಷಣೆ ಮಾಡಿದ ಕ್ಷಣದಿಂದಲೇ ಪ್ರೇಕ್ಷಕರು ಅದರತ್ತ ಕಣ್ಣು ನೆಟ್ಟಿದ್ದರು. ಇದ್ಯಾವ ಸತ್ಯ ಘಟನೆ ಬಗೆಯುವ ಪ್ರಯತ್ನ ಎಂಬಂಥಾ ಬೆರಗಿನ ಭಾವವೂ ಬಹುತೇಕರಲ್ಲಿ ಸುಳಿದಾಡಿತ್ತು. ಆದರೆ ಜೇಕಬ್ ವರ್ಗೀಸ್ ಕಡೆಯಿಂದ ತೂರಿ ಬಂದದ್ದು ಅಚ್ಚರಿದಾಯಕ ಸುದ್ದಿ.

    ಯಾಕೆಂದರೆ, ಈ ಬಾರಿ ಅವರು ಪ್ರೇಕ್ಷಕರಿಗೆ ಸಂಪೂರ್ಣ ಮನೋರಂಜನೆ ನೀಡೋದನ್ನೇ ಉದ್ದೇಶವಾಗಿಸಿಕೊಂಡು ಅಖಾಡಕ್ಕಿಳಿದಿದ್ದಾರೆ. ಸಕಲಕಲಾ ವಲ್ಲಭ ಭರಪೂರ ಕಾಮಿಡಿ ಸಬ್ಜೆಕ್ಟ್ ಹೊಂದಿರೋ ಚಿತ್ರ. ನೀನಾಸಂ ಸತೀಶ್ ಅಭಿನಯದ ಚಂಬಲ್ ಚಿತ್ರ ಗೆಲ್ಲುತ್ತಲೇ ಜೇಕಬ್ ಸಕಲಕಲಾವಲ್ಲಭ ಕಥೆಗೆ ಕಾವು ಕೊಡಲಾರಂಭಿಸಿದ್ದರಂತೆ. ಅದರ ನಾಯಕನ ಪಾತ್ರಕ್ಕೆ ಯಾವ ನಟ ಜೀವತುಂಬ ಬಲ್ಲ ಅಂತ ಹುಡುಕಾಟದಲ್ಲಿದ್ದ ಅವರಿಗೆ ಕಂಡಿದ್ದು ರಿಷಿ. ಈತ ಯಾವ ಥರದ ಪಾತ್ರಗಳಿಗಾದರೂ ಒಗ್ಗಿಕೊಂಡು ನಟಸಬಲ್ಲ ಪ್ರತಿಭಾವಂತ ನಟನಾದ ಕಾರಣದಿಂದಲೇ ಸಕಲ ಕಲಾ ವಲ್ಲಭನಾಗೋ ಅವಕಾಶ ಗಿಟ್ಟಿಸಿಕೊಂಡಿದ್ದಾರಂತೆ.

    ಇನ್ನುಳಿದಂತೆ ರೆಬಾ ಮೋನಿಕಾ ರಿಷಿಗೆ ಸಾಥಿಯಾಗಿದ್ದಾರೆ. ಅಚ್ಯುತ್ ಕುಮಾರ್, ಸಾಯಿಕುಮಾರ್ ಮುಂತಾದ ಘಟಾನುಘಟಿ ತಾರೆಯರ ದಂಡೇ ಈ ತಾರಾಗಣದಲ್ಲಿದೆ. ಒಂದು ಸಣ್ಣ ಪಾತ್ರ ಸುಮ್ಮನೆ ಹಾದು ಹೋದರೂ ಅದು ನೋಡುಗರ ಮನದಲ್ಲಿ ಅಚ್ಚೊತ್ತುವಂತೆ ಕಟ್ಟಿ ಕೊಡೋದು ಜೇಕಬ್ ವರ್ಗೀಸ್ ಅವರ ಪ್ರಸಿದ್ಧ ಶೈಲಿ. ಈ ಬಾರಿ ಅವರು ಕಾಮಿಡಿ ಜಾನರಿಗೆ ಶಿಫ್ಟ್ ಆಗಿದ್ದರೂ ಕೂಡಾ ದೃಶ್ಯ ಕಟ್ಟುವ ಕಲಾವಂತಿಕೆಯನ್ನು ಈ ಹಿಂದಿನಂತೆಯೇ ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ಸಕಲ ಕಲಾ ವಲ್ಲಭನ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ನವೆಂಬರ್ ಕಡೇ ಘಳಿಗೆಯಲ್ಲಿ ಸಕ ಕಲಾ ವಲ್ಲಭನ ದರ್ಶನ ಭಾಗ್ಯ ಸಿಗಲಿದೆ.

  • ಬೀಗಬೇಡ ಟ್ರೆಂಡಿಂಗ್ ಟಾಪಿಕ್ ಆಗಿದ್ದು ಹೇಗೆ?

    ಬೀಗಬೇಡ ಟ್ರೆಂಡಿಂಗ್ ಟಾಪಿಕ್ ಆಗಿದ್ದು ಹೇಗೆ?

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಈಗ ಬೀಗಬೇಡ ಎನ್ನುವ ಟ್ರೆಂಡ್ ಕ್ರಿಯೆಟ್ ಆಗಿದ್ದು, ಜನ `ಬೀಗಬೇಡ’ ಹ್ಯಾಶ್ ಟ್ಯಾಗ್ ಬಳಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

    ಯಾರದ್ದೋ ಮೇಲಿನ ಸಿಟ್ಟು, ಯಾರಿಗೋ ಟಾಂಗ್ ಕೊಡಲು ಜನ ಈಗ ಬೀಗಬೇಡ ಹ್ಯಾಶ್ ಟ್ಯಾಂಗ್ ಬಳಸಿ ಪಂಚಿಂಗ್ ಡೈಲಾಗ್ ಬರೆಯುತ್ತಿದ್ದಾರೆ.

    ಈ ಬೀಗಬೇಡ ಟ್ರೆಂಡ್ ಸೃಷ್ಟಿಯಾಗಲು  ಕಾರಣವಾಗಿದ್ದು ಹಾಸ್ಯ ಸಾಹಿತಿ ಪ್ರಾಣೇಶ್ ಅವರ ಒಂದು ಡೈಲಾಗ್. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಾಣೇಶ್ “ಎತ್ತರದಲ್ಲಿದ್ದೇನೆಂದು ಬೀಗಬೇಡ. ನಕ್ಷತ್ರಗಳು ಕೆಳಗೆ ಉರುಳಿದ್ದನ್ನು ನೋಡಿದ್ದೇನೆ” ಎಂದು ಹೇಳಿದ್ದರು. ಒಂದು ವರ್ಷದ ಹಿಂದೆ ಈ ಕಾರ್ಯಕ್ರಮ ನಡೆದಿದ್ದು ಆಗ ಅಷ್ಟೇನು ಟ್ರೆಂಡ್ ಕ್ರಿಯೆಟ್ ಆಗಿರಲಿಲ್ಲ. ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕ ಫೇಸ್ ಬುಕ್ ಪೇಜ್ ನಲ್ಲಿ ಪ್ರಾಣೇಶ್ ಅವರ ಬೀಗಬೇಡ ಪದಕ್ಕೆ ಪೂರಕವಾಗಿ ಜೀವನಕ್ಕೆ ಅನ್ವಯವಾಗುವ ಸಾಲುಗಳನ್ನು ಬರೆಯಲಾಗಿತ್ತು. ಈ ಸಾಲುಗಳನ್ನು ಜನ ಶೇರ್ ಮಾಡಿದ್ದರ ಪರಿಣಾಮ ಪದ ಪ್ರಚಲಿತಕ್ಕೆ ಬಂತು.

    ಬೀಗಬೇಡ ಪದ ನಿಧಾನಕ್ಕೆ ಫೇಮಸ್ ಆಗುತ್ತಿದ್ದಂತೆ ಹಲವು ಕನ್ನಡ ಪೇಜ್‍ಗಳು ಟ್ರೋಲ್ ಮಾಡಲು ಆರಂಭಿಸಿತ್ತು. ಬಳಿಕ ಜನರು ತಮ್ಮ ಫೇಸ್‍ಬುಕ್, ವಾಟ್ಸಪ್, ಟ್ವಿಟ್ಟರ್ ನಲ್ಲಿ ತಮ್ಮದೇ ಸಾಲುಗಳನ್ನು ಬರೆಯುವುದರ ಮೂಲಕ ಈಗ ಬೀಗಬೇಡ ಪದ ಟ್ರೆಂಡಿಂಗ್ ಟಾಪಿಕ್ ಆಗಿದೆ.

    https://twitter.com/manjuphotoshop/status/1027859071389650944

    ಬೀಗಬೇಡ ಸಾಲುಗಳು:

    ಇವತ್ತು ಹೆಂಡ್ತಿ ಕಾಲು ಹಿಡಿತಾಳೆ ಅಂತ ಬೀಗಬೇಡ.ದಿನಾ ಹೆಂಡ್ತಿ ಕಾಲು ಒತ್ತಿದ್ದು ಕಂಡಿದ್ದೀನಿ

    ಮೊಬೈಲ್ ಚಾರ್ಜ್ 100% ಇದೆ ಎಂದು ಬೀಗಬೇಡ..ಚಾರ್ಜ್ ಗೆ ಹಾಕಿ ಸ್ವಿಚ್ ಆನ್ ಮಾಡದೇ ಇದ್ದವರನ್ನಾ ನೋಡಿದ್ದೀನಿ

    ಹೊಸ ಕಾರು ತಗೊಂಡೆ ಅಂತ ಮೆರೀಬೇಡ..ಫೆರಾರಿಯಲ್ಲಿ ಓಡಾಡ್ತಿದ್ದ ವಿಜಯ್ ಮಲ್ಯ ಪರಾರಿಯಾಗಿದ್ದನ್ನ ಕಂಡಿದ್ದೇನೆ…

    ಕೊನೆಯ ಉಸಿರಿರು ಇರೋವರೆಗೂ ಜೊತೆಗಿರ್ತಾಳೆ ಅಂತ ಬೀಗಬೇಡ. ಸಣ್ಣ ಜಗಳಕ್ಕೆ ಮುನಿಸಿಕೊಂಡು ಜೀವನವನ್ನೆ ನರಕ ಮಾಡಿ ಹೋದವರನ್ನು ನಾವು ಕಂಡಿದ್ದೇವೆ

    ಕೋಟಿ ಸಂಪಾದಿಸಿನೆಂದು ಬೀಗಬೇಡ , ಸಂಪತ್ತು ಇದ್ದರೂ 6×3 ಅಡಿಗಾಗಿ ಕೋರ್ಟ್ ನಲ್ಲಿ ಬೇಡಿದವರನ್ನು ನೋಡಿದ್ದೇವೆ!

    ಆ ಪಕ್ಷ ಈ ಪಕ್ಷ ಎಂದು ಬೀಗಬೇಡ. ಪಿತೃಪಕ್ಷದಲ್ಲೇ ಹೊಗೆ ಹಾಕಿಸಿಕೊಂಡವರನ್ನು ಕಂಡಿದ್ದೇವೆ.

    ನಾನು ದೊಡ್ಡ ಧೈರ್ಯವಂತೆ ಎಂದು ಬೀಗಬೇಡ. ಜಿರಳೆ ಬಂದಾಗ ಓಡಿದವರನ್ನು ನೋಡಿದ್ದೇನೆ.

    ನಾನೇ ಟ್ವೀಟಿಸಿದ್ದು ಚನ್ನಾಗಿದೆಅಂತ ಖುಶಿಯಿಂದ ಬೀಗಬೇಡ. ಅದನ್ನ ಬೇರೆಯವರು copy paste ಮಾಡಿ ನಿನಗಿಂತ ಜಾಸ್ತಿ Likes ತಗೊಂಡಿದ್ದನ್ನ ನಾನು ನೋಡಿದ್ದೇನೆ.

    ಇದನ್ನು ಓದಿದ ಬಳಿಕ ನಿಮ್ಮಲ್ಲೂ ಬೀಗಬೇಡಿ ಟಾಪಿಕ್ ಗೆ ಸಂಬಂಧಿಸಿದಂತೆ ಹೊಸ ಸಾಲುಗಳು ಹುಟ್ಟಿದರೆ ಕಮೆಂಟ್  ಬಾಕ್ಸ್ ನಲ್ಲಿ  ಕಮೆಂಟ್ ಮಾಡಿ

  • ಅನೇಕ ಭಯಾನಕ ಘಟನೆಗಳ ನಡುವೆಯೂ ಬಿಡುಗಡೆಗೆ ಸಿದ್ಧವಾದ `ಕೆಲವು ದಿನಗಳ ನಂತರ’

    ಅನೇಕ ಭಯಾನಕ ಘಟನೆಗಳ ನಡುವೆಯೂ ಬಿಡುಗಡೆಗೆ ಸಿದ್ಧವಾದ `ಕೆಲವು ದಿನಗಳ ನಂತರ’

    ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಅನೇಕ ಹಾರರ್ ಸಿನಿಮಾಗಳು ಬಿಡುಗಡೆಗೊಂಡಿದ್ದು, ಹವಾ ಸೃಷ್ಟಿಸಿವೆ. ಈಗ ಈ ಸಾಲಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೇರಿದಂತೆ ಅನೇಕ ಕಲಾವಿದರು ಮಾಡಿರುವ `ಕೆಲವು ದಿನಗಳ ನಂತರ’ ಸಿನಿಮಾ ಕೂಡ ಸೇರಿಕೊಂಡಿದೆ.

    ಕೆಲವು ದಿನಗಳ ನಂತರ ಸಿನಿಮಾದ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿತ್ತು. ಟೀಸರ್ ಸಾಕಷ್ಟು ಭರವಸೆಯನ್ನು ಮೂಡಿಸಿದ್ದು, ಟೀಸರ್ ನಲ್ಲಿ ಸೌಂಡ್ ಎಫೆಕ್ಟ್ ಉತ್ತವಾಗಿತ್ತು.  ಕೆಲವು ದಿನಗಳ ನಂತರ ಚಿತ್ರತಂಡ ಸಾಕಷ್ಟು ಹಾಸ್ಯ ಕಲಾವಿದರನ್ನು ಮತ್ತು ಯುವ ಪ್ರತಿಭೆಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಈ ಸಿನಿಮಾದ ವಿಶೇಷತೆ ಎಂದರೆ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ ನ ಮೂಲಕ ತಯಾರಿಸಲಾಗಿದೆ.


    ಶ್ರೀನಿ ರವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇವರು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಅನೇಕ ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ. ಇವರು ಇದೇ ಮೊದಲ ಬಾರಿಗೆ `ಕೆಲವು ದಿನಗಳ ನಂತರ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇಂದಿನ ಯುವ ಜನತೆಯ ಸಮಸ್ಯೆಯ ಕುರಿತು `ಕೆಲವು ದಿನಗಳ ನಂತರ’ ಎಂಬ ತಯಾರಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

    2016ರಲ್ಲಿ ನಡೆದಿದ್ದ ಘಟನೆಯೊಂದು ರಾಜ್ಯಾದ್ಯಂತ ಸದ್ದು ಮಾಡಿತ್ತು. ಆ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್ ಸಿನಿಮಾವಾಗಿದ್ದು, ಇಲ್ಲಿವರೆಗೂ ತೆರೆಕಂಡಿರುವ ಹಾರರ್ ಸಿನಿಮಾಗಳಿಗಿಂತ ಭಿನ್ನವಾಗಿರುತ್ತದೆ ಎಂಬ ಭರವಸೆವನ್ನು ಚಿತ್ರತಂಡ ಹೊಂದಿದೆ. ಇಂಗ್ಲಿಷ್ ಚಿತ್ರಗಳಲ್ಲಿ ಪ್ರಸಿದ್ಧಿ ಪಡೆದು ಸ್ಯಾಂಡಲ್ ವುಡ್ ಗೆ ಅಪರಿಚಿತವಾಗಿದ್ದ ಝಾಂಬೀಸ್‍ಗಳನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪರಿಚಯಿಸಲಾಗಿದ್ದು, ನವೀನ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

    `ಕೆಲವು ದಿನಗಳ ನಂತರ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಿದ ಭಯಾನಕ ಅನಾಹುತಗಳಿಂದ ಚಿತ್ರತಂಡ ಒಂದೆರಡು ಬಾರಿ ಬೆಚ್ಚಿ ಬಿದ್ದಿರುವ ಘಟನೆಯೂ ನಡೆದಿದೆಯಂತೆ. ಒಂದು ದಿನ ದೇವರಾಯನದುರ್ಗ ಬೆಟ್ಟದ ಮೇಲೆ ಶೂಟಿಂಗ್ ನಡೆಯುತ್ತಿತ್ತು. ಆಗ ಜೀಪಿನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್, ಶುಭಾ ಪೂಂಜಾ ಸೇರಿದಂತೆ ಹಲವಾರು ಮಂದಿ ಜೀಪಿನಲ್ಲಿದ್ದರು. ಆಗ ಜಗ್ಗು ಡ್ರೈವ್ ಮಾಡುತ್ತಿದ್ದನು. ಜೀಪ್ ರಿವರ್ಸ್ ತೆಗೆದುಕೊಳ್ಳುವ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಜಗ್ಗು ರಿವರ್ಸ್ ತೆಗೆಯುವಾಗ ಜೀಪಿನ ನಿಯಂತ್ರಣ ತಪ್ಪಿ ಬೆಟ್ಟದ ತುದಿಗೆ ಹೋಗಿದ್ದು, ಪ್ರಪಾತಕ್ಕೆ ಬೀಳಬೇಕಿದ್ದ ಜೀಪು ಸಿನಿಮಾ ರೀತಿಯಲ್ಲಿ ನಿಂತಿತ್ತು. ಇದೇ ರೀತಿ ಚಿತ್ರೀಕರಣದ ವೇಳೆ ಅನೇಕ ಭಯಾನಕ ಅನುಭವಗಳು ಆಗಿವೆ ಎಂದು ಚಿತ್ರತಂಡ ಹೇಳಿದೆ.

    `ಕೆಲವು ದಿನಗಳ ನಂತರ’ ಮುತ್ತುರಾಜ್ ಹೆಚ್.ಪಿ ಅವರು ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಶುಭಾ ಪೂಂಜಾ, ಮಜಾ ಟಾಕೀಸ್ ಖ್ಯಾತಿಯ ಪವನ್, ಕಾಮಿಡಿ ಕಿಲಾಡಿ ಲೋಕೇಶ್, ದ್ರವ್ಯ ಶೆಟ್ಟಿ, ಜಗದೀಶ್, ಸೋನು ಪಾಟೀಲ್, ಬೇಬಿ ಶ್ರೀಲಕ್ಷ್ಮಿ, ಶ್ರೀ ಮಾರುತಿ ಮತ್ತು ಶರಣಯ್ಯ ಮುಂತಾದ ತಾರಾಬಳಗ ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಇಂತಹ ಅನೇಕ ಭಯಾನಕ ಅನುಭವಗಳು ಆದರೂ, ರೋಚಕವಾದ ಕಥಾ ಹಂದರ ಹೊಂದಿರುವ ಈ ಸಿನಿಮಾ ಇದೇ ತಿಂಗಳ 22ರಂದು ತೆರೆಗೆ ಬರಲಿದೆ.