Tag: ಕಾಮನ್ ವೆಲ್ತ್

  • ಸಾಧನೆ ಶಿಖರವೇರಿದ ಸಂಕೇತ್ – ಪಾನ್‌ಬೀಡಾ ಮಾರುತ್ತಿದ್ದ ಹುಡುಗನ `ಬೆಳ್ಳಿ’ ಸಾಧನೆ

    ಸಾಧನೆ ಶಿಖರವೇರಿದ ಸಂಕೇತ್ – ಪಾನ್‌ಬೀಡಾ ಮಾರುತ್ತಿದ್ದ ಹುಡುಗನ `ಬೆಳ್ಳಿ’ ಸಾಧನೆ

    ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪದಕದ ಬೇಟೆ ಆರಂಭಸಿದ್ದು, ಈಗಾಗಲೇ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ. 21ರ ತರುಣ ಸಂಕೇತ್ ಮಹಾದೇವ್ ಸರ್ಗರ್ ಬೆಳ್ಳಿ ಪದಕ ಪಡೆಯುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ.

    ಸಂಕೇತ್ ಮಹಾದೇವ್ ಸರ್ಗರ್ (21) ಪುರುಷರ ವಿಭಾಗದ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 248 ಕೆಜಿ (113+135) ಭಾರ ಎತ್ತುವ ಮೂಲಕ ಬೆಳ್ಳಿ ಕಿರೀಟ ಧರಿಸಿದ್ದಾರೆ. ಇಂದು ದೇಶವೇ ಹೆಮ್ಮೆ ಪಡುವ ಮಟ್ಟದಲ್ಲಿ ಅವರು ಸಾಧನೆ ಮಾಡಿದ್ದಾರೆ. ಆದರೆ ಸಂಕೇತ್ ಹಿನ್ನೆಲೆ ಕೇಳಿದ್ರೆ ಪ್ರತಿಯೊಬ್ಬರು ಅಚ್ಚರಿ ಪಡುತ್ತಾರೆ. ಜೀವನೋಪಾಯಕ್ಕಾಗಿ ಪಾನ್ ಬೀಡಾ, ಚಹಾ ಮಾರಿಕೊಂಡಿದ್ದ ಸಂಕೇತ್ ಇಂದು ದೇಶವೇ ಕೊಂಡಾಡುವ ಕ್ರೀಡಾಪಟುವಾಗಿದ್ದಾರೆ. ಇದನ್ನೂ ಓದಿ: ಭಾರತದ ಪದಕ ಬೇಟೆ ಆರಂಭ – ಸಂಕೇತ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ

    ಯಾರಿದು ಸಂಕೇತ್ ಸರ್ಗರ್?
    1990ರ ದಶಕದಲ್ಲಿ ಜೀವನೋಪಾಯಕ್ಕಾಗಿ ಮಹಾರಾಷ್ಟ್ರದ ಸಾಂಗ್ಲಿಗೆ ಬಂದ ಸಂಕೇತ್ ಮೊದಲು ತಳ್ಳುಗಾಡಿಯಿಂದ ಹಣ್ಣುಗಳನ್ನು ಮಾರುವ ವೃತ್ತಿ ಆರಂಭಿಸಿದರು. ನಂತರದಲ್ಲಿ ಪಾನ್ ಶಾಪ್ ತೆರೆದು, ಇದರ ಪಕ್ಕದಲ್ಲೇ ಚಹಾ ಹಾಗೂ ಸಣ್ಣ ಉಪಾಹಾರ ಮಂದಿರವನ್ನೂ ತೆರೆದರು. ಇದರಿಂದಾಗಿ ಇವರ ಚಿತ್ತವೆಲ್ಲವೂ ವ್ಯವಹಾರವನ್ನು ನಡೆಸಲು ಸಹಾಯ ಮಾಡುವುದೇ ಆಗಿತ್ತು. ಸಂಕೇತ್ ಪಾನ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿಬಿಟ್ಟಿದ್ದರು. ಚಿಕ್ಕ ವಯಸ್ಸಿನಲ್ಲೇ ಸಾದಾ ಪಾನ್, ಮೀಟಾ ಪಾನ್ (ಸ್ವೀಟ್ ಪಾನ್), ಮಸಾಲೆ ಪಾನ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಇದರೊಂದಿಗೆ ಚಾಯ್, ವಡಾ ಪಾವ್ ಹಾಗೂ ಕಂಡಪೋವಾ ಮಾಡುವುದರಲ್ಲೂ ಎತ್ತಿದ ಕೈ.

    ಸಂಕೇತ್ ಕ್ರೀಡಾಪಟು ಆಗಬೇಕು ಅನ್ನೋ ಕನಸೇ ಇರಲಿಲ್ಲ. ಅದು ಸಾಧ್ಯವಿಲ್ಲವೆಂದು ಅವರೇ ನಿರ್ಧರಿಸಿದ್ದರು. ಒಂದೊಮ್ಮೆ ಸಂಕೇತ್ ತಂದೆ ತಮ್ಮ ಅಂಗಡಿ ಪಕ್ಕದಲ್ಲೇ ವೇಟ್‌ಲಿಫ್ಟಿಂಗ್ ಜಿಮ್‌ಗೆ ಸೇರಿಸಿದರು. ಮಾರನೇ ದಿನ ಬೆಳಗ್ಗೆ 6.30ಕ್ಕೆ ತರಬೇತಿಗೆ ಬರಬೇಕು ಎಂದು ಕೋಚ್ ಹೇಳಿದರು. ಮಾರನೇ ದಿನದಿಂದ ನಿರಂತರ ಅಭ್ಯಾಸವಾಯಿತು. ‘ಮೊದಲು ಲಿಫ್ಟ್ ಮಾಡುವಾಗ ಅಷ್ಟೇನೂ ಪ್ರೀತಿ ಇರಲಿಲ್ಲ. ಏಕೆಂದರೆ ಅದು ಕಷ್ಟವೋ ಸುಲಭವೋ ಎಂದೂ ನಾನು ಯೋಚಿಸಿರಲಿಲ್ಲ. ಆದರೆ ಹೆಚ್ಚೆಚ್ಚು ಕಲಿಯುತ್ತಲೇ ಇದ್ದೆ. ಕಲಿತಷ್ಟು ಬಲಶಾಲಿಯಾಗುತ್ತಿದ್ದೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ಜಿಮ್ ಪ್ರಾರಂಭವಾದ ಒಂದೆರಡು ವರ್ಷಗಳ ನಂತರ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ಆ ವೇಳೆಗೆ ಜಿಲ್ಲಾಮಟ್ಟದ ಸ್ಪರ್ಧೆಗಳ ಬಗ್ಗೆಯೂ ಸಂಕೇತ್‌ಗೆ ತಿಳಿದಿರಲಿಲ್ಲ. ಇದರ ಹೊರತಾಗಿಯೂ 9ನೇ ತರಗತಿಯಲ್ಲಿದ್ದಾಗ ವಿಭಾಗೀಯ ಸ್ಪರ್ಧೆಯಲ್ಲಿ ಭಾಗವಹಿಸಿ, ತರಬೇತಿ ಇಲ್ಲದೆಯೇ ಬೆಳ್ಳಿ ಪಡೆದುಕೊಂಡಿದ್ದರು. ಸಂಕೇತ್ ಸರ್ಗರ್ 13 ವರ್ಷ ವಯಸ್ಸಿನವರಾಗಿದ್ದಾಗ ಕುಸ್ತಿ ಅಖಾಡಕ್ಕಿಳಿದರು. ಅಲ್ಲಿಂದ ಒಂದಿಲ್ಲೊಂದು ಪದಕಗಳನ್ನು ಮುಡಿಗೇರಿಸಿಕೊಂಡರು. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ

    ಇವರು ಪ್ರಖ್ಯಾತ ವೇಟ್‌ಲಿಫ್ಟಿಂಗ್ ಕೋಚ್ ವಿಜಯ್ ಶರ್ಮಾ ಅವರ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರು. ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಭಾರತ ಸರ್ಕಾರವು ಆತಿಥೇಯ ನಗರದಲ್ಲಿ ವೇಟ್‌ಲಿಫ್ಟರ್‌ಗಳಿಗೆ ಪೂರ್ವಸಿದ್ಧತಾ ಶಿಬಿರವನ್ನು ಏರ್ಪಡಿಸಿದ್ದರಿಂದ ಒಂದು ತಿಂಗಳ ಮುಂಚಿತವಾಗಿ ಬರ್ಮಿಂಗ್‌ಹ್ಯಾಮ್‌ಗೆ ಆಗಮಿಸಿ ತರಬೇತಿ ನಡೆಸಿದ್ದರು.

    ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ 21ರ ತರುಣ ಮುಂದೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಮನ್‍ವೆಲ್ತ್ ನಲ್ಲಿ ಮುಂದುವರಿದ ಚಿನ್ನದ ಬೇಟೆ- ವೇಟ್ ಲಿಫ್ಟಿಂಗ್‍ನಲ್ಲಿ ಭಾರತದ ಸತೀಶ್ ಕುಮಾರ್ ಗೆ ಗೋಲ್ಡ್

    ಕಾಮನ್‍ವೆಲ್ತ್ ನಲ್ಲಿ ಮುಂದುವರಿದ ಚಿನ್ನದ ಬೇಟೆ- ವೇಟ್ ಲಿಫ್ಟಿಂಗ್‍ನಲ್ಲಿ ಭಾರತದ ಸತೀಶ್ ಕುಮಾರ್ ಗೆ ಗೋಲ್ಡ್

    ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೂರನೇ ಚಿನ್ನ ಲಭಿಸಿದೆ.

    ಶನಿವಾರ ನಡೆದ ಪುರುಷರ 77ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಸತೀಶ್ ಕುಮಾರ್ ಶಿವಲಿಂಗಂ ಅವರು ಚಿನ್ನದ ಪದಕಕ್ಕೆ ಮತ್ತಿಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ 5 ಪದಕಗಳು ಬಂದಿವೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ- ವೇಟ್ ಲಿಫ್ಟಿಂಗ್‍ನಲ್ಲಿ ಸಂಜಿತಾ ಚಾನುಗೆ ಗೋಲ್ಡ್

    ಸತೀಶ್ ಕುಮಾರ್ ಅವರು ಒಟ್ಟು 317 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. ಇವರಿಗೆ ಇಂಗ್ಲೆಂಡ್ ನ ಜಾಕ್ ಒಲಿವರ್ ತೀವ್ರ ಪೈಪೋಟಿ ನೀಡಿದ್ದಾರೆ. ಆದ್ರೆ ಜಾಕ್ ಎರಡನೇ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಆಸ್ಟ್ರೇಲಿಯಾದ ಫ್ರಾಂಕೋಯಿಸ್ ಇಟೌಂಡಿ ಒಟ್ಟು 305 ಕೆ.ಜಿ ಎತ್ತುವ ಮೂಲಕ ಮೂರನೇ ಸ್ಥಾನಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡ್ರು. ಇದನ್ನೂ ಓದಿ: ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ಶುಕ್ರವಾರ ಆರಂಭವಾದ ಕ್ರೀಡಾಕೂಟದಲ್ಲಿ ಸಂಜಿತಾ ಚಾನು(ಚಿನ್ನ), ದೀಪಕ್ ಲತೇರ್(ಕಂಚು), ಮೀರಾಬಾಯಿ ಚಾನು ಹಾಗೂ ಗುರುರಾಜ್ ಪೂಜಾರಿ ಅವರು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

  • ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್‍ಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್

    ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್‍ಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್

    ಉಡುಪಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವಿಜಯ ಯಾತ್ರೆ ಆರಂಭವಾಗಿದೆ. ಭಾರತದ ಮೊದಲ ಪದಕ ಕರ್ನಾಟಕದ ಉಡುಪಿಗೆ ಬಂದಿದೆ. ವೇಟ್ ಲಿಫ್ಟಿಂಗ್ ನಲ್ಲಿ ಕುಂದಾಪುರದ ಗುರುರಾಜ್ ಪೂಜಾರಿ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.

    ಈ ಕುರಿತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮೊದಲು ಗುರುರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದ್ರು. ಬಳಿಕ ಇದಕ್ಕಿಂತ ಸಂತೋಷದ ಕ್ಷಣ ನನಗೆ ಬೇರೆ ಇಲ್ಲ. ತಿಂಗಳ ಹಿಂದಷ್ಟೇ ಏಕಲವ್ಯ ಪ್ರಶಸ್ತಿ ನೀಡಲಾಗಿತ್ತು. ಕಾಮನ್ ವೆಲ್ತ್ ಪ್ರಶಸ್ತಿ ಗೆದ್ದ ಗುರುರಾಜ್ ಗೆ ಸರ್ಕಾರದ ಗ್ರೂಪ್ ಬಿ ಉದ್ಯೋಗ ಸಿಗುತ್ತದೆ. ಜೊತೆಗೆ 25 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

    ರಾಜ್ಯದಲ್ಲಿ ಕ್ರೀಡಾನೀತಿ ಈಗಾಗಲೇ ಘೋಷಣೆ ಮಾಡಲಾಗಿದೆ. ಸರ್ಕಾರದ ನೇಮಕಾತಿಯಲ್ಲಿ ಮೀಸಲಾತಿ ಇದೆ. 48 ಕೋಟಿ ರೂಪಾಯಿ ಈಗಾಗಲೇ ಮೀಸಲಿಟ್ಟು ವಿತರಿಸಲಾಗಿದೆ. ಈಗ ಕಾನೂನಿನ ಅನ್ವಯ ಮೊತ್ತ ಮತ್ತು ಸರ್ಕಾರಿ ಕೆಲಸ ಸಿಗುತ್ತದೆ ಅಂದ್ರು. ಇದನ್ನೂ ಓದಿ: ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ಖೇಲೋ ಇಂಡಿಯಾದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಕ್ರೀಡಾಪಟುಗಳ ಬೆಂಬಲಕ್ಕೆ ಸರ್ಕಾರ ಸಿದ್ಧವಿದೆ. ಒಲಿಂಪಿಕ್ಸ್ ನಲ್ಲಿ ನಮ್ಮ ಕ್ರೀಡಾಪಟುಗಳು ಸಾಧನೆ ಮಾಡಬೇಕಿದೆ, ಇದಕ್ಕೆ ಒಂದು ದಿನದ ಪರಿಶ್ರಮ ಸಾಲದು. ನಿರಂತರ ಶ್ರಮಕ್ಕೆ ಅಡಿಗಲ್ಲು ಹಾಕಲಾಗಿದೆ. ಬಡವರ- ಮಧ್ಯಮ ವರ್ಗದ ಕುಟುಂಬದಿಂದ ಬಂದ ಗುರುರಾಜ್ ಪೂಜಾರಿಯಂತವರಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ನುಡಿದ್ರು. ಇದನ್ನೂ ಓದಿ: ದಾಖಲೆ ಮುರಿಯಲೇಬೇಕಿತ್ತು, ಮುಂದಿನ ಗುರಿ ಏಷ್ಯನ್ ಗೇಮ್ಸ್: ಮೀರಾ ಬಾಯಿ

  • ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

    ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

    ಗೋಲ್ಡ್ ಕೋಸ್ಟ್ : ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭವಾದ 21 ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಕನ್ನಡಿಗ ಪಿ. ಗುರುರಾಜ್ ಅವರು 56 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

    ಪುರುಷರ 56 ಕೆಜಿ ವಿಭಾಗದಲ್ಲಿ ಒಟ್ಟು 249 ಕೆಜಿ ಭಾರ ಎತ್ತಿದ ಅವರು, ಸ್ಕ್ಯಾಚ್ ವಿಭಾಗದಲ್ಲಿ 111 ಕೆಜಿ, ಕ್ಲೀನ್ ಎಂಡ್ ಜರ್ಕ್ ವಿಭಾಗದಲ್ಲಿ 138 ಕೆಜಿ ಎತ್ತುವುದರ ಮೂಲಕ ಪದಕ ಗೆದ್ದಿದ್ದಾರೆ. ಗುರುರಾಜ್ ಮೊದಲ ಪದಕವನ್ನು ಜಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಭಾರತೀಯ ವಾಯುಪಡೆ ಉದ್ಯೋಗಿಯಾಗಿರುವ ಗುರುರಾಜ್, ಟ್ರಕ್ ಚಾಲಕರ ಪುತ್ರರಾಗಿದ್ದಾರೆ. ಇದೀಗ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಚಂಢೀಗಡ್ ಭಾರತೀಯ ವಾಯುಸೇನೆಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಗುರುರಾಜ್ ಪ್ರತಿದಿನ 4 ಘಂಟೆ ಅಭ್ಯಾಸಕ್ಕೆ ತೆರಳುತ್ತಿದ್ದರು. ಚಿನ್ನ ಗೆದ್ದ ಖುಷಿಯಲ್ಲಿರುವ ಗುರುರಾಜ್ ತನ್ನ ಸಾಧನೆಗೆ ತಂದೆ-ತಾಯಿ, ಕ್ರೀಡೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಶಿಕ್ಷಕರು ಹಾಗೂ ಕೋಚ್ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನವೇ ಕಾರಣ ಎಂದು ಹೇಳುತ್ತಿದ್ದಾರೆ.

    ಈ ಹಿಂದೆ 2017ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್ ಶಿಪ್‍ನಲ್ಲಿ ಕಂಚು ಪದಕ ಹಾಗೂ 2016 ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಗುರುರಾಜ್ ಚಿನ್ನದ ಪದಕ ಗೆದ್ದಿದ್ದರು. 2016ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ಉಡುಪಿಯಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಘೋಷಣೆ ಮಾಡಿದ್ದರು.

    ಪಿವಿ ಸಿಂಧು ಚಾಲನೆ: ಬುಧವಾರ ಭಾರತದ ಪರ ಪಿವಿ ಸಿಂಧು ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸುವ ಮೂಲಕ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ 21ನೇ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ನೀಡಿದ್ದರು. ಈ ಬಾರಿ ಕ್ರೀಡಾಕೂಟದಲ್ಲಿ 71 ರಾಷ್ಟ್ರಗಳ 4,500 ಅಥ್ಲೀಟ್ಸ್ ಭಾಗಿಯಾಗುತ್ತಿದ್ದು, 275 ಗೋಲ್ಡ್ ಮೆಡೆಲ್ ಪಡೆಯಲು ಸ್ಪರ್ಧೆ ನಡೆಸಿದ್ದಾರೆ. ಭಾರತದಿಂದ ಒಟ್ಟು 221 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಇದು 12 ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ.

    ಈ ಹಿಂದೆ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 15 ಚಿನ್ನ, 30 ಬೆಳ್ಳಿ ಹಾಗೂ 19 ಕಂಚಿನ ಪದಕದೊಂದಿಗೆ ಒಟ್ಟು 64 ಪದಕಗಳನ್ನು ಭಾರತ ತಂಡ ಗೆದ್ದುಕೊಂಡಿತ್ತು. ಈ ಬಾರಿ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಭರವಸೆಯಲ್ಲಿದೆ.