Tag: ಕಾಮನ್ ಮ್ಯಾನ್

  • ಬಿಜೆಪಿ ಸೇರಲೆಂದೇ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ರಾ – ಹಲವು ಪ್ರಶ್ನೆಗಳಿಗೆ ಅಣ್ಣಾಮಲೈ ಉತ್ತರ

    ಬಿಜೆಪಿ ಸೇರಲೆಂದೇ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ರಾ – ಹಲವು ಪ್ರಶ್ನೆಗಳಿಗೆ ಅಣ್ಣಾಮಲೈ ಉತ್ತರ

    ನವದೆಹಲಿ: ಬಿಜೆಪಿ ಮತ್ತು ನನ್ನ ಸಿದ್ಧಾಂತಗಳು ನೂರಕ್ಕೆ ನೂರರಷ್ಟು ಮ್ಯಾಚ್ ಆಗುತ್ತವೆ ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಹೇಳಿದ್ದಾರೆ.

    ಇಂದು ಅಣ್ಣಾಮಲೈ ಅವರು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಅವರ ನೇತೃತ್ವದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

    ದ್ರಾವಿಡ ಸಂಸ್ಕೃತಿ ಇರುವ ತಮಿಳುನಾಡಿನಿಂದ ಸೈದ್ಧಾಂತಿಕ ಹಿನ್ನೆಲೆ ಇರುವ ಬಿಜೆಪಿ ಪಕ್ಷಕ್ಕೆ ಸೇರಲು ಕಾರಣ ಏನು?
    ತಮಿಳುನಾಡು ಒಂದು ದ್ರಾವಿಡ ಸಂಪ್ರದಾಯ ಇರುವ ರಾಜ್ಯ ಒಪ್ಪಿಕೊಳ್ಳುತ್ತೇನೆ. ಆದರೆ ತಮಿಳುನಾಡಿನ ರಾಜಕೀಯ ಇತ್ತೀಚೆಗೆ ಕುಟುಂಬ ರಾಜಕಾರಣದ ವ್ಯಾಪಾರವಾಗಿದೆ. ಆದರೆ ಬಿಜೆಪಿ ಪಕ್ಷ ಸಾಮಾನ್ಯ ಮನುಷ್ಯನಿಗೂ ಉತ್ತಮ ಅವಕಾಶ ನೀಡುತ್ತದೆ. ನಮ್ಮ ಬಳಿ ಹಣವಿಲ್ಲ. ನಮಗೆ ತಮಿಳುನಾಡಿನಲ್ಲಿ ಉತ್ತಮ ಸರ್ಕಾರವಿರಬೇಕೆಂಬ ಬಯಕೆಯನ್ನು ಹೊಂದಿದ್ದೇನೆ. ಈ ಕಾರಣದಿಂದ ಬಿಜೆಪಿ ಸೇರಿದ್ದೇನೆ.

    ನಿಮ್ಮದೇ ಆದ ತತ್ವ ಸಿದ್ಧಾಂತ ಇಟ್ಟುಕೊಂಡಿದ್ದ ನೀವು ಬಿಜೆಪಿಗಾಗಿ ಅದನ್ನು ಬದಲಿಸಿಕೊಳ್ಳುವಿರಾ?
    ಒಂದು ಪಕ್ಷವನ್ನು ಸೇರಿದ ಮೇಲೆ ಆ ಪಕ್ಷಕ್ಕೆ ನಾವು ವಿಧೇಯವಾಗಿರಬೇಕು. ಬಿಜೆಪಿ ಪಕ್ಷದ ಸಿದ್ಧಾಂತಗಳಿಗೂ ಮತ್ತು ನನ್ನ ವೈಯಕ್ತಿಕ ಸಿದ್ಧಾಂತಗಳಿಗೂ ಬಹಳ ಹೊಲಿಕೆ ಇದೆ. ಈ ಪಕ್ಷ ದೇಶದ ಭದ್ರತೆ, ರಾಷ್ಟ್ರೀಯತೆ ಮತ್ತು ರಾಷ್ಟ್ರದ ಕಾಮನ್ ಮ್ಯಾನ್ ಪರವಾಗಿದೆ. ಹೀಗಾಗಿ ಒಂದು ಪಕ್ಷವನ್ನು ಸೇರಿದ ಮೇಲೆ ಅದರ ಸಿದ್ಧಾಂತಗಳನ್ನು ಒಪ್ಪಿಕೊಳ್ಳಬೇಕು. ಎಲ್ಲದಕ್ಕಿಂತ ಪಕ್ಷ ದೊಡ್ಡದು.

    ನೀವು ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದಾಗ ಬಿಜೆಪಿ ಸೇರುವ ಉದ್ದೇಶವಿತ್ತೆ?
    ಇಲ್ಲ ನಾನು ರಾಜೀನಾಮೆ ನೀಡಿದ ಸಮಯದಲ್ಲಿ ಈ ರೀತಿಯ ಉದ್ದೇಶವಿರಿಲ್ಲ. ಈ ಕಾರಣಕ್ಕೆ ನಾನು ಒಂದು ವರ್ಷ ಸಮಯವನ್ನು ತೆಗೆದುಕೊಂಡೆ. ಇತ್ತೀಚೆಗೆ ಬಿಜೆಪಿಗೆ ಸೇರುವ ಚಿಂತನೆ ನನಗೆ ಬಂದಿತ್ತು. ಹೀಗಾಗಿ ಇಂದು ಪಕ್ಷವನ್ನು ಸೇರಿದ್ದೇನೆ.

    ನೀವು ಬಿಜೆಪಿ ಸೇರುವುದರಿಂದ ಕೆಲವೊಂದು ವರ್ಗದ ಜನರಿಗೆ ಬೇಸರವಾಗುದಿಲ್ಲವೇ?
    ನೀವು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಉಡುಪಿ, ಮಂಗಳೂರು ಎಲ್ಲ ಕಡೆಯಲ್ಲೂ ಕೆಲಸ ಮಾಡಿದ್ದೇನೆ. ನನಗೆ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಎಲ್ಲರೂ ಪರಿಚಯವಿದ್ದಾರೆ. ನನ್ನ ಪ್ರಕಾರ ಈ ಪಕ್ಷ ಪ್ರತಿಯೊಂದು ಸಮುದಾಯದ ಪರವಾಗಿದೆ. ನನಗೆ ಎಲ್ಲ ಸಮುದಾಯದಲ್ಲೂ ಸ್ನೇಹಿತರಿದ್ದಾರೆ. ಈ ಪಕ್ಷ ಎಲ್ಲರ ಪರವಾಗಿ ನಿಲ್ಲುತ್ತದೆ. ಅಂತೆಯೇ ನಾನು ಕೂಡ ಎಲ್ಲರ ಪರವಾಗಿ ನಿಲ್ಲುತ್ತೇನೆ. ಕೆಲವರು ತಪ್ಪು ಕಲ್ಪನೆಯನ್ನು ಹುಟ್ಟು ಹಾಕುತ್ತಾರೆ. ಅದು ಸುಳ್ಳು.

    ನೀವು ಐಪಿಎಸ್ ಆಗಿದ್ದಾಗ ಒಂದು ಕೋಮಿನ ಪರವಾಗಿ ಹೆಚ್ಚಿನ ಒಲವು ತೋರಿಸಿದ್ದೀರಾ ಎಂದು ಜನ ಈಗ ಮಾತನಾಡಿಕೊಂಡರೆ?
    ನೀವು ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಕೆಲಸ ಬಿಟ್ಟು ಒಂದು ವರ್ಷ ಸಾಮಾನ್ಯ ಮನುಷ್ಯನಂತೆ ಇದ್ದು, ಈಗ ಪಕ್ಷ ಸೇರಿದ್ದೇನೆ. ನಾನು ಕರ್ನಾಟಕದಲ್ಲಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದಕ್ಕೆ ಸಾಮಾನ್ಯ ಜನರೇ ಸಾಕ್ಷಿ. ಪೊಲೀಸ್ ಕೆಲಸದಲ್ಲಿ ಇರುವಾಗ ಸಮವಸ್ತ್ರಕ್ಕೆ ಬೆಲೆ ಕೊಟ್ಟು ಆ ಧರ್ಮದ ಪರವಾಗಿ ಕೆಲಸ ಮಾಡಿದ್ದೇವೆ. ಈಗ ಈ ಪಾರ್ಟಿಗೆ ಸೇರಿದ್ದೇನೆ. ಈಗ ಪಾರ್ಟಿಗಾಗಿ ಕೆಲಸ ಮಾಡುತ್ತೇನೆ.

  • ಬಿಗ್ ಬಾಸ್‍ ಗೆ ಅದ್ಧೂರಿ ಚಾಲನೆ- ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ಕೊಡೋ ಮುನ್ನ ಹೇಳಿದ್ದು ಹೀಗೆ

    ಬಿಗ್ ಬಾಸ್‍ ಗೆ ಅದ್ಧೂರಿ ಚಾಲನೆ- ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ಕೊಡೋ ಮುನ್ನ ಹೇಳಿದ್ದು ಹೀಗೆ

    ಬೆಂಗಳೂರು: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್-5ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಬಾರಿ ಸೆಲಬ್ರಿಟಿಗಳ ಜೊತೆ ಕಾಮನ್ ಮ್ಯಾನ್ ಕೂಡ ಬಿಗ್ ಬಾಸ್ ನಲ್ಲಿ ಪಾಲ್ಗೊಂಡಿದ್ದಾರೆ. ಈಗಾಗಲೇ 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆ ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಯನ್ನು ಪ್ರವೇಶಿಸುವ ಮುನ್ನ ಚಿಕ್ಕದಾಗಿ ತಮ್ಮ ಪರಿಚಯವನ್ನು ಮಾಡಿಕೊಂಡಿದ್ದಾರೆ.

    ಬಿಗ್ ಬಾಸ್ ಮನೆಯೊಳಗೆ ಜ್ಯೋತಿಷಿ ಜಯ ಶ್ರೀನಿವಾಸನ್, ನಿರ್ಮಾಪಕ ಹಾಗೂ ನಿರ್ದೇಶಕ ದಯಾಳ್ ಪದ್ಮನಾಭನ್, ಹಿರಿಯ ನಟ ಹಾಗೂ ಬೊಂಬಾಟ್ ಭೋಜನದ ಸಿಹಿ ಕಹಿ ಚಂದ್ರು, ಗಾಯಕಿ ಹಾಗೂ ಕಿರುತೆರೆ ನಟಿ ಶ್ರುತಿ ಪ್ರಕಾಶ್, ಅಕ್ಕ ಧಾರಾವಾಹಿ ಖ್ಯಾತಿಯ ಕಿರುತೆರೆ ನಟಿ ಅನುಪಮಾ ಗೌಡ, ನಟ ಸೂಪರ್ ಸ್ಟಾರ್ ಜೆ.ಕೆ, ಕಿರುತೆರೆ ನಟಿ ಆಶಿತಾ ಚಂದ್ರಪ್ಪ, ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದ ನಟಿ ತೇಜಸ್ವಿನಿ, ಖ್ಯಾತ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ, ಅಕಿರ ಚಿತ್ರದ ನಾಯಕಿ ಕೃಷಿ ತಾಪಂಡ ಹಾಗೂ ಕಿರುತೆರೆ ನಟ ಜಗನ್ನಾಥ್ ಚಂದ್ರಶೇಕರ್ ಪ್ರವೇಶಿಸಿದ್ದಾರೆ.

    ಕೊಡಗಿನ ಯುವತಿ ಮೇಘ, ಮಾತಿನ ಮಲ್ಲ ರಿಯಾಜ್ ಬಾಷಾ, ಡಬ್ ಸ್ಮ್ಯಾಶ್ ಖ್ಯಾತಿಯ ನಿವೇದಿತಾ, ಅರ್ಚಕ ಸಮೀರಾಚಾರ್ಯ, ಸೇಲ್ಸ್ ಮ್ಯಾನ್ ದಿವಾಕರ್, ಗೃಹಿಣಿ ಸುಮಿತ್ರಾ ದೇವಿ ಬಿಗ್ ಬಾಸ್-5 ರಲ್ಲಿ ಸ್ಪರ್ಧಿಗಳಾಗಿರೋ ಕಾಮನ್ ಮ್ಯಾನ್

    ಈ ಹಿಂದೆ ಅನೇಕ ಸೆಲಬ್ರಿಟಿಗಳು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಭಾನುವಾರ ನಡೆದ ಕಾರ್ಯಕ್ರಮದಿಂದ ಇದ್ದಕ್ಕೆಲ್ಲ ಬ್ರೇಕ್ ಬಿದ್ದಿದೆ.

    ಬಿಡದಿ ಹತ್ತಿರವಿರುವ ಇನ್ನೋವೇಟಿವ್ ಫಿಲ್ಮಂ ಸಿಟಿಯಲ್ಲಿ ಅದ್ಧೂರಿಯಾಗಿ ದೊಡ್ಡ ಮನೆಯನ್ನು ನಿರ್ಮಿಸಲಾಗಿದೆ. ಕಿಚ್ಚ ಸುದೀಪ್ ಮನೆಯನ್ನು ವೀಕ್ಷಕರಿಗೆ ಪರಿಚಯ ಮಾಡಿಕೊಟ್ಟರು. ನಂತರ ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಿದ್ರು.

    ಈ 17 ಸ್ಪರ್ಧಿಗಳು ಬಿಗ್ ಮನೆಗೆ ಭಾನುವಾರ ಪ್ರವೇಶ ಪಡೆದಿದ್ದಾರೆ. ಮನೆಗೆ ಎಂಟ್ರಿ ಕೊಡೋ ಮುನ್ನ ಅವರು ಹೇಳಿದ್ದೇನು ಅನ್ನೋದು ಇಲ್ಲಿದೆ:

    https://twitter.com/ColorsSuper/status/919552784600465408

    https://twitter.com/ColorsSuper/status/919556022305398786

    https://twitter.com/ColorsSuper/status/919563295031300097

    https://twitter.com/ColorsSuper/status/919568552050417664

    https://twitter.com/ColorsSuper/status/919574441285246977

    https://twitter.com/ColorsSuper/status/919580609038639106

    https://twitter.com/ColorsSuper/status/919584897668227072

    https://twitter.com/ColorsSuper/status/919590950837436418

    https://twitter.com/ColorsSuper/status/919596829540474880

    https://twitter.com/ColorsSuper/status/919600000052510720

    https://twitter.com/ColorsSuper/status/919604177189224448

    https://twitter.com/ColorsSuper/status/919604752614223872

    https://twitter.com/ColorsSuper/status/919609700039106560

    https://twitter.com/ColorsSuper/status/919612726686580736

    https://twitter.com/ColorsSuper/status/919615632462692352

    https://twitter.com/ColorsSuper/status/919619726480850944

    https://twitter.com/ColorsSuper/status/919620338362679296

    https://twitter.com/ColorsSuper/status/919758372034842624