Tag: ಕಾಬೂಲ್‌ ಶಾಲೆ

  • ಕಾಬೂಲ್‌ ಶಾಲೆಯಲ್ಲಿ ಸ್ಫೋಟ- 6 ಮಂದಿ ಸಾವು

    ಕಾಬೂಲ್‌ ಶಾಲೆಯಲ್ಲಿ ಸ್ಫೋಟ- 6 ಮಂದಿ ಸಾವು

    ಕಾಬೂಲ್:‌ ಪಶ್ಚಿಮ ಕಾಬೂಲ್‌ನಲ್ಲಿರುವ ಶಾಲೆಯೊಂದರಲ್ಲಿ ಮೂರು ಸ್ಫೋಟಗಳು ಸಂಭವಿಸಿದ ಪರಿಣಾಮ 6 ಮಂದಿ ಸಾವಿಗೀಡಾಗಿದ್ದು, 11 ಮಂದಿ ಗಾಯಗೊಂಡಿದ್ದಾರೆ.

    ನೆರೆಹೊರೆಯ ಅನೇಕ ನಿವಾಸಿಗಳು ಶಿಯಾ ಹಜಾರಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಸುನ್ನಿ ಭಯೋತ್ಪಾದಕ ಗುಂಪುಗಳಿಂದ ಆಗಾಗ್ಗೆ ಗುರಿಯಾಗುತ್ತಿರುವ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಇವರಾಗಿದ್ದಾರೆ. ಇದನ್ನೂ ಓದಿ: ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ

    ಪ್ರೌಢ ಶಾಲೆಯಲ್ಲಿ ಮೂರು ಸ್ಫೋಟಗಳು ಸಂಭವಿಸಿವೆ. ಮೃತರು ಹಾಗೂ ಗಾಯಗೊಂಡವರು ಶಿಯಾ ಸಮುದಾಯದವರಾಗಿದ್ದಾರೆ ಎಂದು ಕಾಬೂಲ್‌ ಕಮಾಂಡರ್‌ನ ವಕ್ತಾರ ಖಲಿದ್‌ ಝಾರ್ಡನ್‌ ತಿಳಿಸಿದ್ದಾರೆ.

    ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ದೇಶ ಸುರಕ್ಷಿತವಾಗಿದೆ ಎಂದು ತಾಲಿಬಾನ್‌ ಹೇಳುತ್ತಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯ ಅಪಾಯ ಮರುಕಳಿಸಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ಹಲವಾರು ಪ್ರಮುಖ ದಾಳಿಗಳನ್ನು ನಡೆಸುವುದಾಗಿ ಹೇಳಿಕೊಂಡಿವೆ ಎಂದು ಅಂತರರಾಷ್ಟ್ರೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ವಿರೊಧಿ ಪ್ರತಿಭಟನೆಗಳ ನಡುವೆ ಶ್ರೀಲಂಕಾದಲ್ಲಿ ಹೊಸ ಕ್ಯಾಬಿನೆಟ್