Tag: ಕಾಪು

  • ಕಾಪು ಮಾರಿಗುಡಿಗೆ ಕಂಗನಾ ರಣಾವತ್ ಭೇಟಿ

    ಕಾಪು ಮಾರಿಗುಡಿಗೆ ಕಂಗನಾ ರಣಾವತ್ ಭೇಟಿ

    ಉಡುಪಿ: ಜಿಲ್ಲೆಯ ಕಾಪು ನೂತನ ಮಾರಿಗುಡಿಯ (Kapu Marigudi) ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಭಾಗಿಯಾಗಿದ್ದಾರೆ.

    ಮಂಡಿ ಕ್ಷೇತ್ರದ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿರುವ ಕಂಗನಾ ರಣಾವತ್, ಕಾಪು ಹೊಸ ಮಾರಿಗುಡಿಗೆ ಬಂದು ದೇವರ ದರ್ಶನಗೈದು ಪ್ರಸಾದ ಸ್ವೀಕರಿಸಿದರು. ಇದನ್ನೂ ಓದಿ: ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಶಾಕ್!

    ಆರ್‌ಎಸ್‌ಎಸ್ ಮುಖಂಡ ಬಿ.ಎಲ್ ಸಂತೋಷ್ ಕ್ಷೇತ್ರಕ್ಕೆ ಭೇಟಿಕೊಟ್ಟು ದೇವರ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗಿಯಾದರು. ಇದನ್ನೂ ಓದಿ: ಕೆಆರ್‌ ನಗರ ರೇಪ್‌ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ – ಹೈಕೋರ್ಟ್‌ ಮೊರೆ ಹೋದ ಭವಾನಿ ರೇವಣ್ಣ

    ದಕ್ಷಿಣಕನ್ನಡ ಸಂಸದ ಬೃಜೇಶ್ ಚೌಟ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ದಾನಿ ಬಂಜಾರ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಇದನ್ನೂ ಓದಿ: ಶಾಸಕರಿಗಾಗಿ ವಿಧಾನಸೌಧಕ್ಕೆ ಬಂತು ರಿಕ್ಲೈನರ್‌, ಮಸಾಜ್ ಚೇರ್‌ಗಳು – ಬೆಲೆ ಎಷ್ಟು?

  • ಸಿನಿಮಾ ಮುಹೂರ್ತಕ್ಕೂ ಮುನ್ನ ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ರಕ್ಷಿತ್

    ಸಿನಿಮಾ ಮುಹೂರ್ತಕ್ಕೂ ಮುನ್ನ ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ರಕ್ಷಿತ್

    ಮ್ಮ ಹೊಸ ಸಿನಿಮಾದ ಮುಹೂರ್ತಕ್ಕೂ ಮುನ್ನ ನಟ ರಕ್ಷಿತ್ ಶೆಟ್ಟಿ ಉಡುಪಿಯ ಕಾಪು (Kapu) ತಾಲ್ಲೂಕಿನ ಮಾರಿಗುಡಿ (Marigudi) ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಪಡೆದ ನಂತರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅವರು ವೀಕ್ಷಿಸುತ್ತಿದ್ದಾರೆ. ದೈವ ಭಕ್ತರಾಗಿರುವ ರಕ್ಷಿತ್ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

    ಈ ಮಧ್ಯೆ ಕ್ಷಿತ್ ಶೆಟ್ಟಿ (Rakshit Shetty) ತಮ್ಮ ಅಭಿಮಾನಿಗಳಿಗೆ ಇನ್ ಡೈರೆಕ್ಟ್ ಆಗಿ ರಿಚರ್ಡ್ ಆಂಟನಿ (Richard Antony) ಕುರಿತು ಅಪ್ ಡೇಟ್ ವೊಂದನ್ನು ನೀಡಿದ್ಧಾರೆ. ರಿಚರ್ಡ್ ಆಂಟನಿ ಯಾವಾಗಿಂದ ಶುರು ಎಂದು ಕೇಳಲಾದ ಪ್ರಶ್ನೆಗೆ ತಮ್ಮ ಉಳಿದವರು ಕಂಡಂತೆ ಸಿನಿಮಾ ರಿಲೀಸ್ ಡೇಟ್ ಹೇಳಿದ್ದಾರೆ. ಮಾರ್ಚ್ 28ಕ್ಕೆ ಎಂದು ಹೇಳುವ ಮೂಲಕ ರಿಚರ್ಡ್ ಆಂಟನಿಯ ಮುಹೂರ್ತದ (Muhurta) ದಿನಾಂಕವನ್ನೂ ಅವರು ಬಹಿರಂಗ ಪಡಿಸಿದ್ದಾರೆ.

    ಈ ಹಿಂದೆ ಹೊಂಬಾಳೆ ಸಂಸ್ಥೆಯ ಆಪ್ತರು ಕೂಡ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತಾಡ್ತಾ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದರು. ಮಾರ್ಚ್‌ ಕೊನೆಯ ವಾರದ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರಕ್ಕೆ ಮುಹೂರ್ತ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಹೊಂಬಾಳೆ ಫಿಲ್ಮ್ಸ್ (Hombale Films) ಅಂಗಳದಿಂದಲೇ ಬಂದಿತ್ತು. ಈ ಚಿತ್ರವನ್ನು ಅದ್ಧೂರಿಯಾಗಿ ತಯಾರಿಸುವುದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಹಲವು ತಿಂಗಳ ಹಿಂದೆಯೇ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿತ್ತು.ರಕ್ಷಿತ್ ಶೆಟ್ಟಿ ನಟನೆಯಲ್ಲೇ ಬ್ಯುಸಿಯಾಗಿದ್ದರಿಂದ ಮುಹೂರ್ತಕ್ಕೆ ತಡವಾಗಿತ್ತು. ಸಪ್ತ ಸಾಗರದಾಚೆ ಶೂಟಿಂಗ್ ಮತ್ತು ಬಿಡುಗಡೆಯ ಎಲ್ಲ ಕೆಲಸಗಳನ್ನು ಮುಗಿಸಿ, ಸ್ಕ್ರಿಪ್ಟ್ ನಲ್ಲಿ ತೊಡಗಿದ್ದರು ರಕ್ಷಿತ್ ಶೆಟ್ಟಿ, ಈಗ ಸ್ಕ್ರಿಪ್ಟ್ ಕೆಲಸ ಕೂಡ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆಯಂತೆ.

     

    ಈ ನಡುವೆ ಹೊಂಬಾಳೆ ಮತ್ತು ರಕ್ಷಿತ್ ನಡುವೆ ಬಿರುಕು ಉಂಟಾಗಿದ್ದು, ಬೇರೊಂದು ಸಂಸ್ಥೆಯು ರಿಚರ್ಡ್ ಆಂಟನಿ  ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಆಪ್ತರೇ ಹೇಳುವಂತೆ, ‘ಸಿನಿಮಾ ಮುಹೂರ್ತಕ್ಕೆ ಹೊಂಬಾಳೆಯೇ ತಯಾರಿ ಮಾಡಿಕೊಳ್ಳುತ್ತಿದೆ ಅಂದ ಮೇಲೆ ಈ ಪ್ರಶ್ನೆಯೇ ಅಪ್ರಸ್ತುತ’ ಎನ್ನುತ್ತಾರೆ.

  • ಸಮಾಜ ಸೇವೆಗೆ ಹೆಸರಾಗಿದ್ದ ಕಾಪುವಿನ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

    ಸಮಾಜ ಸೇವೆಗೆ ಹೆಸರಾಗಿದ್ದ ಕಾಪುವಿನ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

    ಉಡುಪಿ: ಸಮಾಜ ಸೇವೆ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಕಾಪು (Kapu) ತಾಲೂಕಿನಾದ್ಯಂತ ಭಾರೀ ಹೆಸರು ಗಳಿಸಿದ್ದ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂದರಾ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕಾಪುವಿನಲ್ಲಿರುವ ಅವರ ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದು, ದಂಪತಿ ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಬಹಳ ಸಕ್ರೀಯರಾಗಿದ್ದರು. ಲೀಲಾಧರ ಶೆಟ್ಟಿಯವರು ರಂಗಕರ್ಮಿಯಾಗಿದ್ದು, ರಂಗತರಂಗ ನಾಟಕ ತಂಡದವನ್ನು ಬೆಳೆಸಿದ್ದರು. ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸಹ ಸ್ಪರ್ಧಿಸಿದ್ದರು. ಇದನ್ನೂ ಓದಿ:ನಿರುದ್ಯೋಗ ಯುವಕ-ಯುವತಿಯರಿಗೆ ಗುಡ್‌ನ್ಯೂಸ್ – ಡಿ.21ರಿಂದ `ಯುವ ನಿಧಿ’ಗೆ ನೋಂದಣಿ

    ದಂಪತಿ ಕೌಟುಂಬಿಕ ಕಾರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕಾಪು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪಿಓಕೆ ಸಮಸ್ಯೆ ಕುರಿತ ಅಮಿತ್ ಶಾ ಹೇಳಿಕೆಗೆ ರಾಗಾ ಆಕ್ಷೇಪ

  • 2ನೇ ಮದುವೆಗಾಗಿ ಕೊರಗಜ್ಜನಲ್ಲಿ ಪ್ರಾರ್ಥಿಸಿದ ನಟಿ ಪ್ರೇಮಾ

    2ನೇ ಮದುವೆಗಾಗಿ ಕೊರಗಜ್ಜನಲ್ಲಿ ಪ್ರಾರ್ಥಿಸಿದ ನಟಿ ಪ್ರೇಮಾ

    ಕೊಡಗಿನ ಬೆಡಗಿ ಪ್ರೇಮಾ (Prema) ಕೊರಗಜ್ಜನ (Koragajja) ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೊರಗಜ್ಜ ದೈವದ ಬಳಿ ಶೀಘ್ರ ಕಂಕಣ ಭಾಗ್ಯ ಕರುಣಿಸುವಂತೆ ಬೇಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಪು ಕೊರಗಜ್ಜ ಸನ್ನಿಧಿಗೆ ಬಂದಿದ್ದ ಪ್ರೇಮಾ, ಭಕ್ತಿಯಿಂದ ಎರಡನೇ ಮದುವೆಗೆ (Marriage) ಕರುಣಿಸು ಎಂದು ಪಾರ್ಥಿಸಿದ್ದಾರಂತೆ. ಖಾಸಗಿ ಕಾರ್ಯಕ್ರಮಕ್ಕೆಂದು ಬಂದಿದ್ದ ಅವರು, ಇದೇ ಸಂದರ್ಭದಲ್ಲಿ ಕೊರಗಜ್ಜ ಸನ್ನಿಧಿಗೂ ಭೇಟಿ ನೀಡಿದ್ದಾರೆ.

    ಈಗಾಗಲೇ ಅವರು ವರ ನೋಡಿದ್ದು ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಲ್ಲಿ ಪ್ರೇಮಾ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಉಡುಪಿ ಜಿಲ್ಲೆಯ ಕಾಪುವಿನ ಕೊರಗಜ್ಜ ದೈವ ಸನ್ನಿಧಾನಕ್ಕೆ ಭೇಟಿ ಕೊಟ್ಟ ನಂತರ ಅವರು ಕಾಪುವಿನ ಅಯ್ಯಪ್ಪ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಪ್ರೇಮಾಗೆ ಸಹೋದರ ಅಯ್ಯಪ್ಪ ಹಾಗೂ ಅಯ್ಯಪ್ಪ ಪತ್ನಿ ಅನು ಕೂಡ ಜೊತೆಯಾಗಿದ್ದರು.

    ಪ್ರೇಮಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೊಂದಾಣಿಕೆಯ ಕಾರಣದಿಂದಾಗಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದಿದ್ದರು. ಆನಂತರ ಅವರು ರೆಡಿಯೋ ಜಾಕಿಯೊಬ್ಬರನ್ನು ಮದುವೆಯಾಗಿದ್ದಾರೆ ಎಂದು ಗಾಸಿಪ್ ಎದ್ದಿತ್ತು. ಅದಕ್ಕೆ ತೆರೆ ಕೂಡ ಎಳೆದಿದ್ದರು. ಇದೀಗ ಪ್ರೇಮಾ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ದೈವದಲ್ಲಿ ಅವರು ಪ್ರಾರ್ಥಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಜಯಪ್ರದಾ

    ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಜಯಪ್ರದಾ

    ಡುಪಿ (Udupi) ಜಿಲ್ಲೆಯ  ಕಾಪು (Kapu) ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಾಜಿ ಲೋಕಸಭೆ ಹಾಗೂ ಹಾಲಿ ರಾಜ್ಯಸಭೆ ಸದಸ್ಯೆ, ಚಿತ್ರನಟಿ  ಜಯಪ್ರದಾ (Jayaprada) ಭೇಟಿ ನೀಡಿದ್ದಾರೆ. ಮಾರಿಯಮ್ಮ ಉಚ್ಚಂಗಿ ದೇವಿಯ ದರ್ಶನ ಪಡೆದು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಾರಿಯಮ್ಮನ ದೇವಸ್ಥಾನವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ ರವರು ದೇವರಲ್ಲಿ ಪ್ರಾರ್ಥಿಸಿ ಜಯಪ್ರಧಾ ಅವರಿಗೆ ಪ್ರಸಾದ ನೀಡಿದರು.

    ಕಾಪು ಹೊಸ ಮಾರಿಗುಡಿ (Marigudi Temple) ದೇವರಲ್ಲಿ ಜಯಪ್ರದಾ ಹರಕೆ ಹೊತ್ತಿದ್ದರು ಎಂದು ಹೇಳಲಾಗುತ್ತಿದೆ. ಆ ಹರಕೆಯನ್ನು ತೀರಿಸುವುದಕ್ಕಾಗಿಯೇ ಅವರು ಅಲ್ಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಸ್ವಲ್ಪ ಹೊತ್ತು ದೇವಸ್ಥಾನದಲ್ಲಿ ಇದ್ದು, ಪೂಜೆ ಸಲ್ಲಿಸಿ ನಂತರ ಅಲ್ಲಿಂದ ತೆರಳಿದ್ದಾರೆ. ಅವರೊಂದಿಗೆ ಅವರ ಆಪ್ತರು ಕೂಡ ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಗುಡಿ ದೇವರ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ:ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿ

    ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಣಧಿಕಾರಿ ಪ್ರಶಾಂತ್ ಶೆಟ್ಟಿ , ಆಡಳಿತ ಮುಖ್ಯಸ್ಥರಾದ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಉಪಾಧ್ಯಕ್ಷರಾದ ಮಾಧವ ಪಾಲನ್ ,ಗಂಗಾಧರ ಸುವರ್ಣ,ದೇವಿಪ್ರಸಾದ್ ಶೆಟ್ಟಿ,ಕಾಪು ದಿವಾಕರ ಶೆಟ್ಟಿ,ಅನಿಲ್ ಬಳ್ಳಾಲ್, ಮೊದಲಾದವರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಉಡುಪಿಯಲ್ಲಿ ದಿಢೀರ್ ಮಿಂಚು ಗುಡುಗು ಸಹಿತ ಮಳೆ

    ಉಡುಪಿಯಲ್ಲಿ ದಿಢೀರ್ ಮಿಂಚು ಗುಡುಗು ಸಹಿತ ಮಳೆ

    ಉಡುಪಿ: ಸೂರ್ಯಾಸ್ತ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಶುರುವಾಗಿದೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಸಂಜೆಯೇ ಮಳೆ ಆರಂಭ ಆಗಿತ್ತು. ಸಾಗರ ತೀರದ ತಾಲೂಕುಗಳಲ್ಲಿ ಎರಡು ಗಂಟೆ ವರ್ಷಧಾರೆಯಾಗಿದೆ.

    ಅರಬ್ಬಿ ಸಮುದ್ರದ ಸಾಲಿನ ತಾಲೂಕುಗಳಾದ ಉಡುಪಿ, ಕಾಪು, ಕುಂದಾಪುರದಲ್ಲಿ ಜೋರು ವರ್ಷಧಾರೆಯಾಗಿದೆ. ಬೈಂದೂರು ತಾಲೂಕಿನ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಪಶ್ಚಿಮ ಘಟ್ಟದ ತಪ್ಪಲಲ್ಲಿ ಗಾಳಿ ಸಹಿತ ಮಳೆಯಾಗಿದೆ. ಇಂದು ದಿನಪೂರ್ತಿ ಉಷ್ಟಾಂಶ ಹೆಚ್ಚಾಗಿತ್ತು.

    ಉಡುಪಿ ಜಿಲ್ಲೆಯಲ್ಲಿ ದಿಢೀರ್ ಮಳೆಯಾಗಿದ್ದರಿಂದ ಪೇಟೆಯೊಳಗೆ ಜನಜೀವನ ಅಸ್ತವ್ಯಸ್ಥವಾಗಿತ್ತು. ಮಳೆ ಜೊತೆ ಗುಡುಗು ಮಿಂಚು ಇದೆ. ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತ ಆಗಿದೆ. ಸುಮಾರು ಎರಡು ಗಂಟೆ ಮಳೆ ಬಿದ್ದ ಕಾರಣ ವಾತಾವರಣ ತಂಪಾಗಿದೆ. ಭತ್ತದ ಎರಡನೇ ಬೆಳೆಗೆ ಈ ಮಳೆ ವರದಾನವಾಗಿದ್ದು, ಅಡಿಕೆಗೆ ಅಡ್ಡಿಯಾಗಿದೆ.

  • ಬೈಕ್ ಬಿಟ್ಟು ರೈಲ್ವೆ ಬ್ರಿಡ್ಜ್ ಮೇಲೆ ನಡೆದುಕೊಂಡು ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

    ಬೈಕ್ ಬಿಟ್ಟು ರೈಲ್ವೆ ಬ್ರಿಡ್ಜ್ ಮೇಲೆ ನಡೆದುಕೊಂಡು ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

    ಉಡುಪಿ: ಜಿಲ್ಲೆ ಕಾಪು ತಾಲೂಕಿನ ಉದ್ಯಾವರ ಬೊಳ್ಜೆ ರೈಲ್ವೆ ಟ್ರ್ಯಾಕ್ ಮೇಲೆ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಉಬೇದುಲ್ಲ ಎಂದು ಗುರುತಿಸಲಾಗಿದೆ.

    ಉಬೇದುಲ್ಲ ಕಾಪು ತಾಲೂಕು ಮಲ್ಲಾರು ಗ್ರಾಮದ ನಿವಾಸಿ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಉದ್ಯಾವರ ಬಳಜಿ ರೈಲ್ವೆ ಟ್ರ್ಯಾಕ್ ನಲ್ಲಿ ಬಂದಿದ್ದು, ಅಮಲಿನಲ್ಲಿದ್ದರು ಎನ್ನಲಾಗಿದೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳದಲ್ಲಿ ಬೈಕ್ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದೆ.

    ಸ್ಥಳೀಯ ನಿವಾಸಿಯೊಬ್ಬರು ಘಟನೆ ಕುರಿತು ಮಾಹಿತಿ ನೀಡಿದ್ದು, ಕಳೆದ ರಾತ್ರಿ 9 ಗಂಟೆಗೆ ಮೃತ ವ್ಯಕ್ತಿ ಬಂದಿದ್ದರು. ಅಮಲಿನಲ್ಲಿ ತೂರಾಡುತ್ತಾ ಹೋಗಿದ್ದು ನೋಡಿದ್ದೇನೆ. ಬೈಕ್ ಇಲ್ಲೇ ಬಿಟ್ಟು ರೈಲ್ವೆ ಟ್ರ್ಯಾಕ್ ಮೇಲೆ ಹೋಗಿದ್ದರು. ಬೆಳಗ್ಗೆ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಶವದ ಗುರುತು ಪತ್ತೆ ಮಾಡಿ ದೂರು ನೀಡಿದ್ದಾರೆ.

    ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಪು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

  • ಜೆಸಿಬಿ ಇಳಿಸಿ ರಸ್ತೆ ಕ್ಲೀನ್ ಮಾಡಿದ ಜನಪ್ರತಿನಿಧಿಗಳು

    ಜೆಸಿಬಿ ಇಳಿಸಿ ರಸ್ತೆ ಕ್ಲೀನ್ ಮಾಡಿದ ಜನಪ್ರತಿನಿಧಿಗಳು

    -ಮೀನುಗಾರಿಕಾ ರಸ್ತೆಗೆ ಎಸೆಯಲ್ಪಟ್ಟ ಮರಳು

    ಉಡುಪಿ: ರಸ್ತೆಯಲ್ಲಿದ್ದ ಮರಳನ್ನು ಕಾಪುವಿನ ಜನಪ್ರತಿನಿಧಿಗಳು ಮುಂದೆ ನಿಂತು ಸ್ವಚ್ಛಗೊಳಿಸಿದ್ದಾರೆ. ಭಾರೀ ಮಳೆಯಾಗುತ್ತಿರುವುದರಿಂದ ಅರಬ್ಬಿ ಸಮುದ್ರದ ಅಬ್ಬರ ಕೂಡ ಜಾಸ್ತಿಯಾಗಿದೆ. ಕಾಪು ತಾಲೂಕಿನ ಉದ್ಯಾವರ ತೀರದಲ್ಲಿ ಕಡಲು ಕೊರೆತದಿಂದ ರಸ್ತೆ ಸಂಪರ್ಕ ಸಮಸ್ಯೆ ಉಂಟಾಗಿದೆ.

    ಭಾರಿ ಮಳೆ ಹಿನ್ನೆಲೆ ಕನಕೋಡ ಉದ್ಯಾವರ ಪಡುಕರೆಯಲ್ಲಿ ಕಡಲಬ್ಬರ ಜಾಸ್ತಿಯಾಗಿದ್ದು, ಕಡಲಿನ ಆರ್ಭಟಕ್ಕೆ ರಾಶಿ ರಾಶಿ ಮರಳು ದಡಕ್ಕೆ ಉಕ್ಕಿ ಬರುತ್ತಿದೆ. ಅಲೆಗಳ ಜೊತೆ ಭಾರಿ ಪ್ರಮಾಣದ ಮರಳು ಕೂಡ ಮೀನುಗಾರಿಕಾ ರಸ್ತೆಯನ್ನು ಸೇರುತ್ತಿದೆ. ಕಡಲು ಉಕ್ಕಿದ ಹಿನ್ನಲೆ ಕೈಪುಂಜಾಲು-ಮಲ್ಪೆ ಸಂಪರ್ಕ ರಸ್ತೆ ಮೇಲೆ ಮರಳು ರಾಶಿ ಬಿದ್ದಿದೆ.

    ಸಮುದ್ರದ ಮರಳು ತುಂಬಿ ರಸ್ತೆ ಸಂಪರ್ಕಕ್ಕೆ ಸಮಸ್ಯೆ ಉಂಟಾಗಿದ್ದು, ಬಸ್, ರಿಕ್ಷಾ, ಟೆಂಪೋ ಹಾಗೂ ದ್ವಿಚಕ್ರ ವಾಹನ ಸಂಚಾರ ಸ್ಥಗಿತವಾಗಿದೆ. ಇಂದು ಭಾನುವಾರ ಆಗಿರೋದ್ರಿಂದ ಪಂಚಾಯತ್ ನ ಕಾರ್ಮಿಕರು ರಜೆಯಲ್ಲಿದ್ದಾರೆ. ಹೀಗಾಗಿ ಉದ್ಯಾವರ ಗ್ರಾಮ ಪಂಚಾಯತ್ ನ ಸದಸ್ಯರೇ ಜೆಸಿಬಿ ಹಿಡಿದು ರಸ್ತೆಗಿಳಿದಿದ್ದಾರೆ.

    ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಜಿ.ಕೋಟ್ಯಾನ್ ಮತ್ತು ರವಿ ಪಡುಕರೆ ಜೆಸಿಬಿ ಎಲ್ಲಿ ರಸ್ತೆಯಲ್ಲಿ ಬಿದ್ದಿರುವ ಮರಳ ರಾಶಿಯನ್ನು ಸ್ವಚ್ಛ ಮಾಡಿದ್ದಾರೆ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಜನಪ್ರತಿನಿಧಿಗಳಿಂದ ನಡೆದ ರಸ್ತೆ ಸ್ವಚ್ಛತಾ ಕಾರ್ಯ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

    ರವಿ ಮತ್ತು ಕೃಷ್ಣ ಮಾತನಾಡಿ, ಜೆಸಿಬಿ ಚಾಲಕರು ರಜೆಯಲ್ಲಿದ್ದಾರೆ. ರಸ್ತೆ ಸಂಪರ್ಕ ಕಡಿತ ಆಗಿರುವುದರಿಂದ ಓಡಾಟಕ್ಕೆ ಬಹಳ ಕಷ್ಟ ಆಗುತ್ತಿತ್ತು.

     

  • ರಾಜ್ಯದಲ್ಲಿ ಅತಂತ್ರ ಸರ್ಕಾರ ನಿರ್ಮಾಣ- ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

    ರಾಜ್ಯದಲ್ಲಿ ಅತಂತ್ರ ಸರ್ಕಾರ ನಿರ್ಮಾಣ- ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

    ಉಡುಪಿ: ಈ ಬಾರಿಯ ಚುನಾವಣಾ ಫಲಿತಾಂಶ ಕಬ್ಬಿಣದ ಕಡಲೆಯಾಗಿದೆ. ರಾಜ್ಯದಲ್ಲಿ ಅತಂತ್ರ ಸರ್ಕಾರ ಬರುತ್ತದೆ ಎಂದು ಕಾಪು ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನಾನೇ ಮುಂದಿನ ಸಿಎಂ ಅಂತ ಹೇಳುತ್ತಿದ್ದರು. ಈಗ ಸಿಎಂ ತನ್ನ ಪ್ಲೇಟ್ ಚೇಂಜ್ ಮಾಡಿದ್ದಾರೆ ಅಂತ ಹೇಳಿದ್ದಾರೆ.

    ಕುಮಾರಸ್ವಾಮಿ ಸಾಯುವ ಮಾತನಾಡುತ್ತಾರೆ ಯಡಿಯೂರಪ್ಪ ಪ್ರಮಾಣ ವಚನ ದಿನಾಂಕ ಫಿಕ್ಸ್ ಮಾಡಿದ್ದಾರೆ. ಗೃಹಗತಿಯ ಪ್ರಕಾರ ಬಿಜೆಪಿ ನೂರರ ಗಡಿ ದಾಟುತ್ತದೆ, ಬಿಜೆಪಿಗೆ 105 ಸೀಟು ಸಿಗುತ್ತದೆ ಎಂದು ಅಮ್ಮಣ್ಣಾಯ ಜಾತಕ ಪುಸ್ತಕ ನೋಡಿ ಹೇಳಿದ್ರು.

    ಸರ್ಕಾರ ರಚನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಬೇಕೇ ಬೇಕು. ಕುಮಾರಸ್ವಾಮಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ. ಅವರ ಲಾಭ ಸ್ಥಾನದಲ್ಲಿ ಗುರುವಿದ್ದಾನೆ. ಸಮ್ಮಿಶ್ರ ಸರ್ಕಾರಕ್ಕೆ ಬಾಳಿಕೆ ಬಹಳ ಕಡಿಮೆ. ಈ ಚುನಾವಣೆ ನಂತರ ಕಾಂಗ್ರೆಸ್ ಪತನದ ಹಾದಿ ಹಿಡಿಯುತ್ತದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹಳ ಹಿನ್ನಡೆಯಾಗುತ್ತದೆ ಅಂತ ಪ್ರಕಾಶ್ ಅಮ್ಮಣ್ಣಾಯ ಶಾಕ್ ಕೊಟ್ಟಿದ್ದಾರೆ.

  • ಅಲೇರ ಪಂಜುರ್ಲಿ ದೈವದ ಮೊರೆ ಹೋದ ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳು

    ಅಲೇರ ಪಂಜುರ್ಲಿ ದೈವದ ಮೊರೆ ಹೋದ ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳು

    ಉಡುಪಿ: ಚುನಾವಣೆ ಘೋಷಣೆಯಾದ ಕೂಡಲೇ ಅಭ್ಯರ್ಥಿಗಳು ನಾಯಕರು ಬಿರುಸಿನ ಪ್ರಚಾರ ಶುರು ಮಾಡಿದ್ದಾರೆ. ದೈವ, ದೇವರೂ ಕೂಡ ಮಾಮೂಲಿಗಿಂತ ಹೆಚ್ಚಾಗಿ ರಾಜಕಾರಣಿಗಳಿಗೆ ಈಗ ನೆನಪಾಗುತ್ತಿದ್ದಾರೆ. ಉಡುಪಿ ಜಿಲ್ಲೆ ಕಾಪುವಿನ ಇಬ್ಬರು ಅಭ್ಯರ್ಥಿಗಳು ಒಂದೇ ದೈವದ ಮೊರೆ ಹೋಗಿ ಗೆಲುವಿನ ವರ ಕೇಳಿದ್ದಾರೆ.

    ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಉಡುಪಿ ಜಿಲ್ಲೆಯ ಪೈಕಿ ಜಿದ್ದಿನ ಕಣ. ಕಾಂಗ್ರೆಸ್ ನಿಂದ ವಿನಯಕುಮಾರ್ ಸೊರಕೆ, ಬಿಜೆಪಿಯಿಂದ ಲಾಲಾಜಿ ಮೆಂಡನ್ ಕಣದಲ್ಲಿದ್ದಾರೆ. ಈ ಬಾರಿ ಇಬ್ಬರಿಗೂ ನೆಕ್ ಟೂ ನೆಕ್ ಫೈಟ್ ಇದೆ. ಕಳೆದ ಬಾರಿ ಒಂದೂವರೆ ಸಾವಿರ ಮತಗಳಿಂದ ಸೋತ ಲಾಲಾಜಿ ಈ ಬಾರಿ ರಾಜಕೀಯ ಮರುಜೀವದ ಪಣ ತೊಟ್ಟಿದ್ದಾರೆ. ಅಭಿವೃದ್ಧಿ ಕಾರ್ಯ ನನ್ನ ಗೆಲುವಿಗೆ ಕಾರಣವಾಗುತ್ತದೆ ಎಂದು ಸೊರಕೆ ಹೇಳಿದ್ದಾರೆ.

    ಈ ನಡುವೆ ಇಬ್ಬರೂ ನಾಯಕರು ಒಂದೇ ದೈವದ ಮೊರೆ ಹೋಗಿದ್ದು, ಈ ಬಾರಿ ಆಶೀರ್ವಾದ ಮಾಡಿ ಅಂತ ಬೇಡಿಕೊಂಡಿದ್ದಾರೆ. ಶಿರ್ವ ಗ್ರಾಮದ ಸೊರ್ಪು ಶ್ರೀ ಬ್ರಹ್ಮ ಮುಗೇರ್ಕಳ ದೈವಸ್ಥಾನದಲ್ಲಿ ವರ್ಷಾವಧಿ ಕೋಲ ಸೇವೆ ನಡೆದಿದೆ. ಅಲೇರ ಪಂಜುರ್ಲಿ ಕೋಲ ನಡೆಯುತ್ತಿರುವ ಸಂದರ್ಭ ಮಾಜಿ ಸಚಿವ ಸೊರಕೆ ದೈವದ ಬಳಿ ಆಶೀರ್ವಾದ ಕೇಳಿದ್ದಾರೆ. ಇದಕ್ಕೆ ದೈವ ಒಳ್ಳೆಯದಾಗುತ್ತದೆ ಎಂದು ಅಭಯ ನೀಡಿದೆ.

    ಕೆಲವೇ ಕ್ಷಣಗಳಲ್ಲಿ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ದೈವಸ್ಥಾನಕ್ಕೆ ಬಂದಿದ್ದಾರೆ. ದೈವ ಮತ್ತು ದರ್ಶನಪಾತ್ರಿ ಗೆ ಕೈ ಮುಗಿದು ಈ ಬಾರಿ ಆಶೀರ್ವಾದ ಮಾಡಬೇಕು. ಜನಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ದೈನ್ಯತೆಯಿಂದ ವಿನಂತಿ ಮಾಡಿದ್ದಾರೆ. ದೈವ ಹಾಗೂ ಪಾತ್ರಿ ಲಾಲಾಜಿ ಮೆಂಡನ್ ಗೂ ಆಶೀರ್ವಾದ ನೀಡಿದೆ. ಗೆಲುವಿನ ಉತ್ಸಾಹದೊಂದಿದೆ ಲಾಲಾಜಿ ಮೆಂಡನ್ ತೆರಳಿದ್ದಾರೆ.

    ಒಳ್ಳೆಯದ್ದು ಮಾಡಿದ್ರೆ ಒಳ್ಳೆಯದಾಗುತ್ತದೆ, ನಿಮ್ಮ ಬೆನ್ನ ಹಿಂದೆ ನಾನಿದ್ದೇನೆ. ಸತ್ಯ, ಧರ್ಮ ನ್ಯಾಯವಿದ್ದಲ್ಲಿ ಗೆಲುವು ಇದೆ ಎಂದು ನುಡಿ ಕೊಟ್ಟಿದೆ. ಹೀಗಾಗಿ ಇಬ್ಬರೂ ನಾಯಕರೂ ಪ್ರಸಾದ ಸ್ವೀಕರಿಸಿ ಅಲ್ಲಿಂದ ತೆರಳಿದ್ದಾರೆ. ದೈವ, ದೇವರ ಬಳಿ ಹೋದ ಎಲ್ಲರಿಗೂ ಒಳ್ಳೆದಾಗಲಿ ಎಂಬ ಆಶೀರ್ವಾದ ಸಿಗುತ್ತದೆ. ಆದ್ರೆ ಮೇ 12 ರಂದು ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬ ಮೇಲೆ ಇಬ್ಬರು ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.