Tag: ಕಾನ್‌ ಫಸ್ಟಿವಲ್‌

  • ಗ್ರ್ಯಾಮಿ ಅವಾರ್ಡ್ ಸ್ವೀಕರಿಸುವಾಗ ಹಾಕಿದ್ದ ಬಟ್ಟೆಯನ್ನೇ ಕಾನ್ ಫೆಸ್ಟಿವಲ್‌ನಲ್ಲೂ ಧರಿಸಿದ ರಿಕ್ಕಿ – ಹೇಳಿದ್ದೇನು ಗೊತ್ತಾ?

    ಗ್ರ್ಯಾಮಿ ಅವಾರ್ಡ್ ಸ್ವೀಕರಿಸುವಾಗ ಹಾಕಿದ್ದ ಬಟ್ಟೆಯನ್ನೇ ಕಾನ್ ಫೆಸ್ಟಿವಲ್‌ನಲ್ಲೂ ಧರಿಸಿದ ರಿಕ್ಕಿ – ಹೇಳಿದ್ದೇನು ಗೊತ್ತಾ?

    ವಿಶ್ವದ ಅತ್ಯಂತ ಪ್ರಸಿದ್ಧ ಸಿನಿಮೋತ್ಸವ ಕಾನ್ ಫೆಸ್ಟಿವಲ್ ಈಗಾಗಲೇ ಶುರುವಾಗಿದೆ. ಈ ಕಾನ್ ಫೆಸ್ಟಿವಲ್‌ನಲ್ಲಿ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಭಾಗಿಯಾಗಿದ್ದಾರೆ. ಇದೀಗ ಕಾನ್ ಫೆಸ್ಟಿವಲ್‌ನ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಕೂಡ ಭಾಗಿಯಾಗಿದ್ದು, ಗ್ರ್ಯಾಮಿ ಪ್ರಶಸ್ತಿ ಸಮಾರಂಭಕ್ಕೆ ಧರಿಸಿದ್ದ ಬಟ್ಟೆಯನ್ನೇ ಕಾನ್ ಫೆಸ್ಟಿವಲ್‌ಗೆ ಧರಿಸಿರುವ ಕುರಿತು ವಿಶೇಷ ಪೋಸ್ಟ್‌ವೊಂದನ್ನು ರಿಕ್ಕಿ ಕೇಜ್ ಶೇರ್ ಮಾಡಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾನ್ ಸಿನಿಮೋತ್ಸವಕ್ಕೆ ಭರ್ಜರಿ ಚಾಲನೆ ನೀಡಿದ್ದು, ಎಲ್ಲಾ ಚಿತ್ರರಂಗದ ಖ್ಯಾತ ಕಲಾವಿದರು ಈ ಸಿನಿಮೋತ್ಸವಕ್ಕೆ ಸಾಥ್ ನೀಡಿದ್ದಾರೆ. ಜತೆಗೆ ಕಾನ್ ಫೆಸ್ಟಿವಲ್‌ನಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಭಾಗಿಯಾಗಿದ್ದಾರೆ. ಕಾನ್‌ ಸಿನಿಮೋತ್ಸವದಲ್ಲಿ ವಿಭಿನ್ನ ಧ್ವನಿ ಎತ್ತಿದ ರಿಕ್ಕಿ ಕೇಜ್.‌ ಭೂಮಿ ಉಳಿಸುವುದಕ್ಕಾಗಿ ಗ್ರ್ಯಾಮಿ ಮತ್ತು ಕಾನ್‌ ಚಿತ್ರೋತ್ಸವಕ್ಕೆ ಒಂದೇ ಬಟ್ಟೆ ಹಾಕಿದ್ದೀನಿ ಎಂದು ರಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಶೇರ್‌ ಮಾಡಿದ್ದಾರೆ.

    ಗ್ರ್ಯಾಮಿ ಮತ್ತು ಕಾನ್ ಫೆಸ್ಟಿವಲ್ ಎರಡು ಸಮಾರಂಭಕ್ಕೆ ಒಂದೇ ಬಟ್ಟೆ ಧರಿಸಿರುವ ಫೋಟೊ ಶೇರ್ ಮಾಡಿ, ಈ ವರ್ಷ ನಾನು ವಿಶ್ವದ ದೊಡ್ಡ ವೇದಿಕೆಯಲ್ಲಿ ಗ್ರ್ಯಾಮಿ ಮತ್ತು ಕಾನ್ ಸಿನಿಮೋತ್ಸವದಲ್ಲಿ ಎರಡು ಕಡೆ ಒಂದೇ ಬಟ್ಟೆ ಧರಿಸಿದ್ದೆ, ವೇಗದ ಫ್ಯಾಶನ್ ಯಾವಗಲೂ ಫ್ಯಾಶನ್ ಅಲ್ಲ. ಫ್ಯಾಶನ್ ಕ್ಷೇತ್ರವು ಗ್ರಹದ ಮೇಲೆ ಅತ್ಯಂತ ಮಾಲಿನ್ಯ ಮಾಡುತ್ತದೆ. ನೀವು ಧರಿಸಿದ್ದನ್ನು ಭೂಮಿ ನೆನಪಿಸಿಕೊಳ್ಳುವುದಿಲ್ಲ ಎಂದು ಫ್ಯಾಶನ್ ಮತ್ತು ಮಾಲಿನ್ಯ ಕುರಿತು ರಿಕ್ಕಿ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

    ಭೂಮಿ ಉಳಿಸುವುದಕ್ಕಾಗಿ ಗ್ರ್ಯಾಮಿ ಮತ್ತು ಕಾನ್‌ ಚಿತ್ರೋತ್ಸವಕ್ಕೆ ಒಂದೇ ಬಟ್ಟೆ ಹಾಕಿದ್ದೀನಿ ಮಾಲಿನ್ಯದ ಕುರಿತು  ಅರ್ಥಪೂರ್ಣ ಸಂದೇಶ ನೀಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ.