Tag: ಕಾನ್ಸ್ ಟೇಬಲ್

  • ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ  ನಾಗ ಚೈತನ್ಯ: ಸ್ಟಾರ್ ಬದ್ಧತೆಗೆ ಮೆಚ್ಚಿದ ಫ್ಯಾನ್ಸ್

    ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ: ಸ್ಟಾರ್ ಬದ್ಧತೆಗೆ ಮೆಚ್ಚಿದ ಫ್ಯಾನ್ಸ್

    ತೆಲುಗಿನ ಹೆಸರಾಂತ ನಟ ನಾಗ ಚೈತನ್ಯ ನಟನೆಯ ಕಸ್ಟಡಿ (Custody) ಸಿನಿಮಾದ ಇಂದು ರಿಲೀಸ್ ಆಗಿದ್ದು, ಅಭಿಮಾನಿಗಳು ನಾಗ ಚೈತನ್ಯ (Nagachaitanya) ನಿರ್ವಹಿಸಿದ ಪಾತ್ರ ನೋಡಿ ಶಾಕ್ ಆಗಿದ್ದಾರೆ. ಕೋಟ್ಯಾಂತರ ಅಭಿಮಾನಿಯನ್ನು ಹೊಂದಿರುವ ಈ ನಟ, ಪೊಲೀಸ್ (Police) ಕಾನ್ಸ್ ಟೇಬಲ್ (Constable) ಪಾತ್ರ ಮಾಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮತ್ತು ಕುತೂಹಲವನ್ನು ಮೂಡಿಸಿದೆ.

    ಸಾಮಾನ್ಯವಾಗಿ ಸ್ಟಾರ್ ನಟರು ಈ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಕಥೆಯಲ್ಲೇ ಆ ರೀತಿ ಇದ್ದರೆ, ಬದಲಾಯಿಸಲು ನೋಡುತ್ತಾರೆ. ಆದರೆ, ನಾಗ ಚೈತನ್ಯ ಇದಾವುದನ್ನೂ ಮಾಡದೇ, ನಿರ್ದೇಶಕರು ಹೆಣೆದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗಾಗಿಯೇ ಕಸ್ಟಡಿ ಸಿನಿಮಾ ನೋಡಿದ ಅಭಿಮಾನಿಗಳು ನಾಗಚೈತನ್ಯಗೆ ದೊಡ್ಡ ಗೆಲುವು ಸಿಗಲಿ ಎಂದು ಶುಭ ಹಾರೈಸಿದ್ದಾರೆ. ಅಲ್ಲದೇ, ಅತ್ಯುತ್ತಮವಾಗಿ ಸಿನಿಮಾ ಮೂಡಿ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.

    ವೆಂಕಟ್ ಪ್ರಭು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇಳಯರಾಜ ಹಾಗೂ ಯುವನ್ ಶಂಕರ್ ರಾಜ್ ಜಂಟಿಯಾಗಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೃತಿ ಶೆಟ್ಟಿ ನಾಯಕಿಯಾದರೆ, ಮಹತ್ವದ ಪಾತ್ರವೊಂದನ್ನು ಅರವಿಂದ್ ಸ್ವಾಮಿ ನಿಭಾಯಿಸಿದ್ದಾರೆ. ಪ್ರಿಯಾಮಣಿ, ಶರತ್ ಕುಮಾರ್ ಸೇರಿದಂತೆ ಅನುಭವಿ ಕಲಾವಿದರ ತಂಡವೇ ತಾರಾ ಬಳಗದಲ್ಲಿದೆ. ಇದನ್ನೂ ಓದಿ:ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?

    ನಾಗ ಚೈತನ್ಯಗೆ ಈಗ ತುರ್ತಾಗಿ ಒಂದು ಗೆಲವು ಬೇಕಿದೆ. ಇತ್ತೀಚಿನ ದಿನಗಳಲ್ಲಿ ಮಾಡಿದ ಅಷ್ಟೂ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿವೆ. ಹಾಗಾಗಿ ಕಸ್ಟಡಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸ್ವತಃ ನಾಗ ಚೈತನ್ಯ ಅವರೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ. ರಿಲೀಸ್ ಆದ ಚಿತ್ರಕ್ಕೆ ರೆಸ್ಪಾನ್ಸ್ ಹೇಗ ಬರಬಹುದು ಎಂದು ಕಾದು ನೋಡಬೇಕಿದೆ.

  • ಕರ್ತವ್ಯಲೋಪ – ಮೂವರು ಕಾನ್ಸ್ ಟೇಬಲ್‌ಗಳು ಅಮಾನತು

    ಕರ್ತವ್ಯಲೋಪ – ಮೂವರು ಕಾನ್ಸ್ ಟೇಬಲ್‌ಗಳು ಅಮಾನತು

    ಬೆಂಗಳೂರು: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮೂವರು ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಿದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

    ವರ್ತೂರು ಪೊಲೀಸ್ ಠಾಣೆಯ ನಾಗಭೂಷಣ್, ಶಿವರಾಜ್, ನಾಗರಾಜ್ ಅಮಾನತ್ತಾದ ಸಿಬ್ಬಂದಿ. ಮನೆಗಳ್ಳತನ ಪ್ರಕರಣವೊಂದರ ಸಂಬಂಧ ಸಲ್ಮಾನ್ ಎಂಬಾತನನ್ನು ವರ್ತೂರು ಪೊಲೀಸರು ಕರೆ ತಂದಿದ್ದರು. ಸುಳ್ಳು ಆರೋಪದ ಮೇರೆಗೆ ಸಲ್ಮಾನ್‌ನನ್ನು ಪೊಲೀಸರು ಹಿಗ್ಗಾಮುಗ್ಗ ಥಳಿಸಿದ್ದರು. ಈ ಸಂಬಂಧ ಸಲ್ಮಾನ್ ಕುಟುಂಬದವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ- ಕಾಂಗ್ರೆಸ್ ವಿರುದ್ಧ ಹೆಚ್‍ಡಿಕೆ ಕಿಡಿ

    ಘಟನೆ ಸಂಬಂಧ ವೈಟ್‌ಫೀಲ್ಡ್ ಡಿಸಿಪಿ ದೇವರಾಜ್‌ಗೆ ಸಲ್ಮಾನ್ ಕುಟುಂಬಸ್ಥರು ದೂರು ನೀಡಿದ್ದರು. ಇಲಾಖಾ ತನಿಖೆ ವೇಳೆ ಕಾನೂನು ಪಾಲನೆ ಮಾಡದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಪಿ ದೇವರಾಜ್ ಅವರು ವರ್ತೂರು ಠಾಣೆಯ ಮೂರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ

  • ಆರ್ಡರ್ಲಿ ಪದ್ಧತಿ ರದ್ದಾದ್ರೂ ನಿಂತಿಲ್ಲ ಅಧಿಕಾರಿಗಳ ದೌಲತ್ತು- ಕೊಪ್ಪಳ ಪೊಲೀಸ್ ತರಬೇತಿ ಕೇಂದ್ರದಲ್ಲಿ ಜೀತ..!

    ಆರ್ಡರ್ಲಿ ಪದ್ಧತಿ ರದ್ದಾದ್ರೂ ನಿಂತಿಲ್ಲ ಅಧಿಕಾರಿಗಳ ದೌಲತ್ತು- ಕೊಪ್ಪಳ ಪೊಲೀಸ್ ತರಬೇತಿ ಕೇಂದ್ರದಲ್ಲಿ ಜೀತ..!

    ಕೊಪ್ಪಳ: ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ರದ್ದಾಗಿ ಹಲವು ವರ್ಷಗಳೇ ಕಳೆದಿದೆ. ಆದ್ರೂ ಹಿರಿಯ ಪೊಲೀಸ್ ಅಧಿಕಾರಿಗಳ ದವಲತ್ತು ಇನ್ನೂ ಮುಂದುವರಿದಿದೆ. ಇಲಾಖೆಯ ನಿಮಯಗಳನ್ನು ಮೀರಿ ಹಿರಿಯ ಅಧಿಕಾರಿಗಳು ಕೆಳಮಟ್ಟದ ಸಿಬ್ಬಂದಿಯನ್ನು ಜೀತದಾಳುಗಳಂತೆ ಕೆಲಸ ಮಾಡಿಸಿಕೊಳ್ಳುತ್ತಿರುವುದು ಇದೀಗ ಮತ್ತೊಮ್ಮೆ ಬಯಲಾಗಿದೆ.

    ಕೊಪ್ಪಳದ ಮುನಿರಾಬಾದ್ ನಲ್ಲಿರುವ ಕೆಎಸ್‍ಆರ್ ಪಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಹಿರಿಯ ಅಧಿಕಾರಿಯೊಬ್ಬರು ಇಲಾಖೆಯ ನಿಮಯಗಳನ್ನ ಮೀರಿ ತಮ್ಮ ಖಾಸಗಿ ಬಟ್ಟೆಗಳನ್ನ ತೊಳೆಸಿಕೊಳ್ಳುವುದಲ್ಲದೆ, ಶೇವಿಂಗ್ ಸಹ ಮಾಡಿಸಿಕೊಂಡು ಕೀಳುಮಟ್ಟದ ವರ್ತನೆ ತೋರಿದ್ದಾರೆ. ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿರುವ ಎಚ್ ಹನುಮಂತಪ್ಪ, ಕೆಳಹಂತದ ಇಬ್ಬರೂ ಸಿಬ್ಬಂದಿಯನ್ನು ತಮ್ಮ ಜೀತದಾಳುಗಳಂತೆ ಕಾಣುತ್ತಿರುವುದು ಇದೀಗ ಬಯಲಾಗಿದೆ.

    ಪೊಲೀಸ್ ಮ್ಯಾನುವಲ್ ಪ್ರಕಾರ ಕೆಎಸ್‍ಆರ್ ಪಿ ದೋಬಿಗಳು ಎಸ್‍ಪಿ ರೇಂಜಿನ ಅಧಿಕಾರಿಗಳ ಯೂನಿಫಾರ್ಮ್, ಆಫೀಸ್ ಬಟ್ಟೆಗಳು, ಕರ್ಟನ್, ಟೇಬಲ್ ಕ್ಲಾಥ್ ತೊಳೆಯೋದು ಹಾಗೂ ಎಲ್ಲ ಸಿಬ್ಬಂದಿಯ ಯೂನಿಫಾರ್ಮ್ ಮಾತ್ರ ಐರನ್ ಮಾಡಬೇಕು. ಆದ್ರೆ ಹೆಡ್ ಕಾನ್ಸ್ ಟೇಬಲ್ ಹನುಮಂತಪ್ಪ, ದೋಬಿ ರಾಜು ಎನ್ನುವವರಿಂದ ತಮ್ಮ ಖಾಸಗಿ ಬಟ್ಟೆಗಳು ಹಾಗೂ ಒಳ ಉಡುಪುಗಳನ್ನ ತೊಳೆಸಿಕೊಳ್ಳುತ್ತಿರುವುದು ಬಯಲಾಗಿದೆ.

    ಅಲ್ಲದೇ ಇದೇ ಹೆಡ್ ಕಾನ್ಸ್ ಟೇಬಲ್ ಹನುಮಂತಪ್ಪ ಪೊಲೀಸ್ ಮ್ಯಾನುವಲ್ ಉಲ್ಲಂಘಿಸಿ ಬಾರ್ಬರ್ ನಾಗರಾಜ ಎನ್ನುವವರಿಂದ ಸೇವಿಂಗ್ ಸೇವೆ ಸಹ ಮಾಡಿಸಿಕೊಂಡು ಅಧಿಕಾರದ ದರ್ಪ ಮೆರೆದಿದ್ದಾರೆ. ಪೊಲೀಸ್ ಇಲಾಖೆಯ ಬಾರ್ಬರ್ ಗಳು ಅಧಿಕಾರಿಗಳ ಹಾಗೂ ಸಿಬ್ಬಂದಿಯ ಹೇರ್ ಕಟ್ಟಿಂಗ್ ಮಾತ್ರ ಮಾಡಬೇಕು. ಶಿಸ್ತು ಪಾಲಿಸುವ ಹಿನ್ನೆಲೆಯಲ್ಲಿ ಅವರವರೇ ಸೇವಿಂಗ್ ಮಾಡಿಕೊಳ್ಳಬೇಕು ಅನ್ನೋ ನಿಯಮವಿದೆ. ಆದ್ರೆ ಹೆಡ್ ಕಾನ್ಸ್ ಟೇಬಲ್ ಹನುಮಂತಪ್ಪ ತಮ್ಮ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು ದೋಬಿ ಹಾಗೂ ಬಾರ್ಬರ್ ರಿಂದ ತಮ್ಮ ಸೇವೆ ಮಾಡಿಸಿಕೊಳ್ಳುತ್ತಿರುವುದು ಇದೀಗ ಬಯಲಾಗಿದೆ.

    ಈ ಕುರಿತು ಕೊಪ್ಪಳದ ಮುನಿರಾಬಾದ್ ಕೆಸ್‍ಆರ್ ಪಿ ಹಾಗೂ ತರಬೇತಿ ಶಾಲೆಯ ಪಿನ್ಸಿಪಾಲ್ ರಾಮಕೃಷ್ಣ ಮುದ್ದೇಪಾಲರವರಿಗೆ ದೂರು ನೀಡಿದ್ರೂ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಕೆಳಮಟ್ಟದ ಸಿಬ್ಬಂದಿಯ ಸಂಕಷ್ಟ ಕೇಳೋರು ಯಾರು ಎನ್ನುವಂತಾಗಿದೆ. ಇನ್ನಾದ್ರೂ ರಾಜ್ಯ ಗೃಹ ಸಚಿವರಾದ ಎಂಬಿ ಪಾಟೀಲರು ಹಾಗೂ ಕೆಎಸ್‍ಆರ್ ಪಿ ಎಡಿಐಜಿ ಭಾಸ್ಕರರಾವ್ ಸಾಹೇಬರಾದ್ರೂ ಈ ಬಗ್ಗೆ ಗಮನ ಹರಿಸಿ ಕಳೆಮಟ್ಟದ ಸಿಬ್ಬಂದಿಯನ್ನು ಜೀತದಾಳುಗಳಂತೆ ಕಾಣೋದನ್ನ ತಡೆಯಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ ಗಳ ನಡುವೆ ಡಿಕ್ಕಿ – ಕಾನ್ಸ್‌ಟೇಬಲ್ ದುರ್ಮರಣ, ಮೂವರು ಗಂಭೀರ

    ಕಾರ್ ಗಳ ನಡುವೆ ಡಿಕ್ಕಿ – ಕಾನ್ಸ್‌ಟೇಬಲ್ ದುರ್ಮರಣ, ಮೂವರು ಗಂಭೀರ

    ಮುಂಬೈ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾನ್ಸ್ ಟೇಬಲ್ ಮೃತಪಟ್ಟಿದ್ದು, ಮೂವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಪೂರ್ವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಭಾನುವಾರ ಅಮರ್ ಮಹಲ್ ಜಂಕ್ಷನ್ ಸಮೀಪದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ರಮೇಶ್ ಹಿರಾಮನ್ ಚವಾಣ್(35) ಮೃತ ಕಾನ್ಸ್ ಟೇಬಲ್. ಇವರು ವಿನೋಭಾ ಭಾವೆ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಚವಾಣ್ ತನ್ನ ಖಾಸಗಿ ವಾಹನದಲ್ಲಿ ತನ್ನ ಕುಟುಂಬದವರ ಜೊತೆ ಭಾನುವಾರ ಮಧ್ಯಾಹ್ನ ಕುರ್ಲಾ ಸಮೀಪದ ನೆಹರೂ ನಗರದ ಕಡೆ ತೆರಳುತ್ತಿದ್ದರು. ಈ ವೇಳೆ ಅವರು ಕಾರಿನ ನಿಯಂತ್ರಣ ಕಳೆದುಕೊಂಡು ಏಕಾಏಕಿ ಸ್ಕಿಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದು, ಬಳಿಕ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ್ದಾರೆ.

    ಪರಿಣಾಮ ಚವಾಣ್ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ಕಾರಿನಲ್ಲಿದ್ದ ನಾಲ್ವರನ್ನು ಸಮೀಪದ ಸೋಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚವಾಣ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇತರರು ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕುರಿತು ಐಪಿಸಿ ಸೆಕ್ಷನ್ 304 ಎ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ನೆಹರು ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಸಂಜಯ್ ಕಾಲೆ ತಿಳಿಸಿದ್ದಾರೆ.

    ಚವಾಣ್ 2009 ರಲ್ಲಿ ಪೊಲೀಸ್ ಇಲಾಖೆಗೆ ಸೇರಿಕೊಂಡಿದ್ದಾರೆ. ವಿನೋಬಾ ಭಾವೆ ನಗರ ಪೊಲೀಸ್ ಠಾಣೆಗೆ ಸೇರುವ ಮೊದಲು ಚವಾಣ್ ಮುಂಬೈ ಪೊಲೀಸರ ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್ ಟಿ ) ದಲ್ಲಿ ಕಾರ್ಯನಿರ್ವಹಿಸಿದ್ದರು.

  • 17 ದಿನಗಳ ಹಿಂದೆ ಮದ್ವೆಯಾಗಿದ್ದ ಕಾನ್ಸ್ ಟೇಬಲ್ ಆತ್ಮಹತ್ಯೆ

    17 ದಿನಗಳ ಹಿಂದೆ ಮದ್ವೆಯಾಗಿದ್ದ ಕಾನ್ಸ್ ಟೇಬಲ್ ಆತ್ಮಹತ್ಯೆ

    ಚಿಕ್ಕಮಗಳೂರು: ಕಳೆದ 17 ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಕಾನ್ಸ್ ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ಚಿಕ್ಕಮಗಳೂರಿನ ಸಂಚಾರಿ ಠಾಣೆಯ 30 ವರ್ಷದ ಪೇದೆ ಅನಿಲ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಿಲ್ ಕುಮಾರ್ ಇಂದು ಮಧ್ಯಾಹ್ನ ಪೊಲೀಸ್ ಕ್ವಾರ್ಟರ್ಸ್  ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಿಲ್ ಕುಮಾರ್ ಆತ್ಮಹತ್ಯೆಗೆ ಶರಣಾಗುವ ಮುನ್ನ ಎರಡು ಪುಟಗಳ ಡೆತ್ ನೋಟ್ ಬರೆದಿದ್ದಾರೆ.

    ಈ ಕುರಿತು ಮಾಹಿತಿ ಪಡೆದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಡೆತ್ ನೋಟ್ ವಶಕ್ಕೆ ಪಡೆದಿದ್ದಾರೆ. ಅನಿಲ್ ಕುಮಾರ್ 2009 ರಲ್ಲಿ ಸೇವೆಗೆ ಆಯ್ಕೆ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಸಮಸ್ಯೆಯೇ ಆತ್ಮಹತ್ಯೆ ಪ್ರಮುಖ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶಕ- ಬಡತನದಲ್ಲಿ ಬೆಂದವರಿಗೆ ಆಶಾಕಿರಣವಾದ್ರು ರಾಯಚೂರಿನ ಕಾನ್ಸ್ ಟೇಬಲ್ ಹುಸೇನಪ್ಪ

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶಕ- ಬಡತನದಲ್ಲಿ ಬೆಂದವರಿಗೆ ಆಶಾಕಿರಣವಾದ್ರು ರಾಯಚೂರಿನ ಕಾನ್ಸ್ ಟೇಬಲ್ ಹುಸೇನಪ್ಪ

    ರಾಯಚೂರು: ವೃತ್ತಿಯಲ್ಲಿ ಕಾನ್ಸ್ ಟೇಬಲ್. ಆದ್ರೆ ಬಡ ವಿದ್ಯಾರ್ಥಿಗಳಿಗೆ ಗುರುವಾಗಿದ್ದಾರೆ. ಇವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ಹೌದು. ಹುಸೇನಪ್ಪ ನಾಯಕ್ ಎಂಬವರು ರಾಯಚೂರಿನ ಸಿಂಧನೂರು ನಗರ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಡು ಬಡತನದ ಕುಟುಂಬದಿಂದ ಬಂದ ಹುಸೇನಪ್ಪ, ಈಗ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಆಸಕ್ತ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಎಲ್ಲಾ ವಿಷಯಗಳ ಪಾಠವನ್ನ ಉಚಿತವಾಗಿ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ರಾತ್ರಿ ಪಾಳಯದಲ್ಲೇ ಕೆಲಸ ಮಾಡುತ್ತಿರೋ ಹುಸೇನಪ್ಪ ಬೆಳಗ್ಗೆ ಹಾಗೂ ಸಂಜೆ ಸುಮಾರು 200 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುತ್ತಿದ್ದಾರೆ.

    ನಾಲ್ಕು ವರ್ಷಗಳ ಹಿಂದೆ ಗುರು ಕರಿಯರ್ ಅಕಾಡೆಮಿ ಹೆಸರಲ್ಲಿ ಸಂಸ್ಥೆ ಹುಟ್ಟುಹಾಕಿದ್ದು, ತರಬೇತಿ ನೀಡುತ್ತಿದ್ದಾರೆ. ಇಲ್ಲಿ ಕಲಿತ ಹಲವರು ಈಗ ಸರ್ಕಾರಿ ನೌಕರರಾಗಿದ್ದಾರೆ. ಇವರ ಜೊತೆ ತಾನೂ ಓದಿ ಸಿವಿಲ್ ಪಿಎಸ್‍ಐ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.

    ತರಗತಿಯಲ್ಲಿನ ಪಾಠ ಮಾತ್ರವಲ್ಲದೆ ವಾಟ್ಸಪ್ ಗ್ರೂಪ್ ಮೂಲಕವೂ ಉಪಯುಕ್ತ ಮಾಹಿತಿಗಳನ್ನ ಹುಸೇನಪ್ಪ ಕೊಡುತ್ತಿದ್ದಾರೆ.