Tag: ಕಾನೂನು ವಿದ್ಯಾರ್ಥಿ

  • ಯುವತಿಗೆ ಬಣ್ಣ ಹಚ್ಚಿದ್ದಕ್ಕೆ ಕಾನೂನು ವಿದ್ಯಾರ್ಥಿ ಕಿಡ್ನಾಪ್‌ಗೈದು ಥಳಿತ – ಆರೋಪಿಗಳ ಬಂಧನ

    ಯುವತಿಗೆ ಬಣ್ಣ ಹಚ್ಚಿದ್ದಕ್ಕೆ ಕಾನೂನು ವಿದ್ಯಾರ್ಥಿ ಕಿಡ್ನಾಪ್‌ಗೈದು ಥಳಿತ – ಆರೋಪಿಗಳ ಬಂಧನ

    ಕೋಲಾರ: ಯುವತಿಗೆ ಬಣ್ಣ ಹಚ್ಚಿದ ಹಿನ್ನೆಲೆ, ಕಾನೂನು ವಿದ್ಯಾರ್ಥಿಯನ್ನು ಕಿಡ್ನಾಪ್ (Kidnap) ಮಾಡಿ ಹಲ್ಲೆ (Attack) ಮಾಡಿರುವ ಘಟನೆ ಕೋಲಾರದ (Kolar) ಬೆಳಮಾರನಹಳ್ಳಿಯಲ್ಲಿ ನಡೆದಿದೆ.

    ಅಂತಿಮ ಕಾನೂನು (Law) ವಿದ್ಯಾರ್ಥಿ ಬಿ.ಸಿ.ಮಧು ಹಲ್ಲೆಗೊಳಗಾದ ಯುವಕ. ಹೋಳಿ ಹಬ್ಬದ ದಿನದಂದು ತನ್ನದೇ ಗ್ರಾಮದ ಎಂಜಿನಿಯರ್ (Engineer) ವಿದ್ಯಾರ್ಥಿನಿ ಅನುಪ್ರಿಯಾಗೆ ಮಧು ಬಣ್ಣ ಹಚ್ಚಿದ್ದ. ಇದರಿಂದ ಕೋಪಗೊಂಡ ಅನುಪ್ರಿಯಾ ಆತನ ಮೇಲೆ ಹಲ್ಲೆ ನಡೆಸಲು ಸುಪಾರಿ ನೀಡಿದ್ದಾಳೆ. ಇದನ್ನೂ ಓದಿ: 4 ದಿನದ ನವಜಾತ ಶಿಶುವನ್ನು ತುಳಿದು ಸಾಯಿಸಿದ ಪೊಲೀಸ್

    ಅನುಪ್ರಿಯಾ ಅದೇ ಗ್ರಾಮದವಳಾಗಿದ್ದು ಮಧುವಿನ ಪಕ್ಕದ ಮನೆಯಲ್ಲಿ ವಾಸವಿದ್ದಳು. ಈ ಸಲುಗೆಯಿಂದ ಮಧು ಹೋಳಿ ಹಬ್ಬದ ದಿನದಂದು ಕಾಲೇಜಿಗೆ ಬಸ್‌ನಲ್ಲಿ ಹೋಗುವ ಸಂದರ್ಭ ಆಕೆಗೆ ಬಣ್ಣ ಹಾಕಿದ್ದಾನೆ. ಇದರಿಂದ ಕೋಪಗೊಂಡ ಅನುಪ್ರಿಯಾ ಪಕ್ಕದ ದಾನಹಳ್ಳಿ ಗ್ರಾಮದ ಡಿಎನ್‌ಡಿ ಮಧು ಮತ್ತು ಆತನ ಸಹಚರರಿಗೆ ಸುಪಾರಿ ಕೊಟ್ಟು ಮಧುವಿಗೆ ಹೊಡೆಯುವಂತೆ ತಿಳಿಸಿದ್ದಾಳೆ. ಸುಪಾರಿ ಪಡೆದ ಡಿಎನ್‌ಡಿ ಮಧು ಅದೇ ಗ್ರಾಮದ ಪ್ರಮೋದ್, ಶಿವರಾಜ್, ಸುದರ್ಶನ್ ಅವರ ಸಹಾಯದಿಂದ ಮಧುಗೆ ದೂರವಾಣಿ ಮುಖಾಂತರ ಕರೆ ಮಾಡಿದ್ದಾರೆ.

    ಮಾ.17 ರಂದು ಮನೆಯಲ್ಲಿದ್ದ ಬಿ.ಸಿ.ಮಧು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಳಿಕ ಬೇಕರಿ ಬಳಿ ಕರೆಸಿಕೊಂಡ ಡಿಎನ್‌ಡಿ ಮಧು, ತನ್ನ ಸಹಚರರೊಂದಿಗೆ ಮಧುವನ್ನು ಕಾರಿನಲ್ಲಿ ಕೂರಿಸಿಕೊಂಡು ಗ್ರಾಮದ ಹೊರವಲಯಕ್ಕೆ ಬಂದಿದ್ದಾರೆ. ನಂತರ ದಾನಹಳ್ಳಿ ಮತ್ತು ವಿಶ್ವನಾಥಪುರ ಗ್ರಾಮದ ಮಧ್ಯೆ ಇರುವ ನೀಲಗಿರಿ ತೋಪಿನಲ್ಲಿ ಇಳಿಸಿ ಅಲ್ಲಿಯೇ ಇದ್ದ ನೀಲಗಿರಿ ರೆಂಬೆಗಳಿಂದ ಚೆನ್ನಾಗಿ ಥಳಿಸಿ, ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಹಾಕಿಕೊಂಡು ಬಂದಿದ್ದಾರೆ. ಬಳಿಕ ಶೆಡ್‌ವೊಂದರಲ್ಲಿ ಮಧುವನ್ನು ಕೂಡಿ ಹಾಕಿ ಅರೆಬೆತ್ತಲೆಗೊಳಿಸಿ ಮರದ ತುಂಡುಗಳಿಂದ ಮತ್ತು ಟ್ಯೂಬ್‌ಗಳಿಂದ ಹೊಡೆದು ಅಮಾನವೀಯ ಕೃತ್ಯವೆಸಗಿದ್ದಾರೆ. ಸುಮಾರು ಎರಡು ದಿನಗಳವರೆಗೆ ಮಧು ಅವರನ್ನು ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೇ ಮಧು ಕೈಯಾರೆ ಅವರ ಮನೆಗೆ ಪೋನ್ ಮಾಡಿಸಿ ನಾನು ಧರ್ಮಸ್ಥಳ (Dharmasthala) ಹೋಗುತ್ತಿದ್ದು, ಎರಡು ದಿನಗಳ ಕಾಲ ಮನೆಗೆ ಬರುವುದಿಲ್ಲವೆಂದು ಹೇಳಿಸಿದ್ದಾರೆ. ಇದನ್ನೂ ಓದಿ: ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ! 

    ಹಲ್ಲೆಯಿಂದಾಗಿ ಮಾರಣಾಂತಿಕವಾಗಿ ಗಾಯಗೊಂಡ ಮಧುವನ್ನು ಇದೇ ಕಿರಾತಕರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಇದು ಪೊಲೀಸ್ ಕೇಸ್ ಮಾಡಬೇಕು ಎಂದು ವೈದ್ಯರು ಹೇಳಿದಾಗ ಆತನಿಗೆ ಚಿಕಿತ್ಸೆ ಕೊಡಿಸಿ ಮಾ.19 ರಂದು ಗ್ರಾಮದ ಹೊರವಲಯದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಯಾರಿಗಾದರೂ ಹೇಳಿದರೆ ನಿನ್ನನ್ನು ಮತ್ತು ಕುಟುಂಬದವರನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ತೀವ್ರ ಗಾಯಗೊಂಡ ಮಧು ಮನೆಗೆ ಬಂದಾಗ ಅವರ ಪೋಷಕರು ಕೂಡಲೇ ಆತನನು ಆಸ್ಪತ್ರೆಗೆ ದಾಖಲಿಸಿ ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಮಧು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ (District Hospital) ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಕಾರ್ಯಾಚರಣೆ – ದಾಖಲೆ ಇಲ್ಲದ 9 ಕೆಜಿ ಚಿನ್ನ ಜಪ್ತಿ

    ವೇಮಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಸಿದ್ದಾರೆ. ಈ ಕೃತ್ಯಕ್ಕೆ ಕಾರಣರಾದ ಅನುಪ್ರಿಯಾ ಮತ್ತು ಮತ್ತಿಬ್ಬರನ್ನು ಪೊಲೀಸರು ಬಂದಿಸಿದ್ದು, ಪ್ರಮುಖ ಆರೋಪಿ ಡಿಎನ್‌ಡಿ ಮಧು ಪರಾರಿಯಾಗಿದ್ದಾನೆ. ಒಟ್ಟು 15ಕ್ಕೂ ಹೆಚ್ಚು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಆ ಕಳ್ಳಿ ಕೋಟಿ ರೂಪಾಯಿ ಮನೆಯ ಒಡತಿ

  • ಎಂಗೇಜ್ಮೆಂಟ್ ನಿಂತು ಹೋಗಿದ್ದಕ್ಕೆ ಬೆಂಗ್ಳೂರಲ್ಲಿ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ

    ಎಂಗೇಜ್ಮೆಂಟ್ ನಿಂತು ಹೋಗಿದ್ದಕ್ಕೆ ಬೆಂಗ್ಳೂರಲ್ಲಿ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ

    ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ (Suicide Case) ಹೆಚ್ಚಾಗುತ್ತಿದೆ. ಆ ಸಾಲಿಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.

    ವಿವಿ ಪುರಂನಲ್ಲಿರುವ ಖಾಸಗಿ ಕಾಲೇಜು ಕಟ್ಟಡದ 6ನೇ ಮಹಡಿಯಿಂದ ಜಿಗಿದು ವಾಣಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಎಲ್ಲರನ್ನೂ ಪ್ರೀತಿಸುವುದು, ಒಟ್ಟಿಗೆ ಬಾಳುವುದು ಮಾನವೀಯತೆಯ ಗುರುತು – ಕ್ರೈಸ್ತ ನಮನ ಕಾರ್ಯಕ್ರಮದಲ್ಲಿ ಗೆಹ್ಲೋಟ್

    CRIME 2

    ಕಾನೂನು ವಿಭಾಗದ ವಿದ್ಯಾರ್ಥಿನಿಯಾಗಿದ್ದ (Law Student) ತ್ಯಾಗರಾಜನಗರದ ನಿವಾಸಿ ವಾಣಿ ಆತ್ಮಹತ್ಯೆಗೆ ಎಂಗೇಜ್ಮೆಂಟ್‌ ಬ್ರೇಕಪ್ ಕಾರಣ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಕಳ್ಳತನ ಕೇಸ್‍ನಲ್ಲಿ ಅರೆಸ್ಟ್ ಮಾಡಿಲ್ಲ – ಎರಡನೇ ಮದುವೆ ಕೂಡ ಆಗಿಲ್ಲ: ಅಟ್ಟಿಕಾ ಬಾಬು ಸ್ಪಷ್ಟನೆ

    crime

    ಆತ್ಮಹತ್ಯೆ ಸ್ಥಳದಲ್ಲಿ ಡೆತ್‌ನೋಟ್ (Death Note) ಸಿಕ್ಕಿದ್ದು, ಅದರಲ್ಲಿ ಪ್ರಮುಖವಾಗಿ ಇದೇ ಅಂಶ ಉಲ್ಲೇಖವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿನಿಯನ್ನು ಮಸಾಜ್ ಮಾಡಲು ಬಾ ಎಂದಿದ್ದು ನಿಜ – ತಪ್ಪೊಪ್ಪಿಕೊಂಡ ಚಿನ್ಮಯಾನಂದ

    ವಿದ್ಯಾರ್ಥಿನಿಯನ್ನು ಮಸಾಜ್ ಮಾಡಲು ಬಾ ಎಂದಿದ್ದು ನಿಜ – ತಪ್ಪೊಪ್ಪಿಕೊಂಡ ಚಿನ್ಮಯಾನಂದ

    ಲಕ್ನೋ: ಆತ್ಯಾಚಾರ ಪ್ರಕರಣದಲ್ಲಿ ಇಂದು ಬೆಳಗ್ಗೆ ಅರೆಸ್ಟ್ ಆಗಿದ್ದ, ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಅವರು ನಾನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾರೆ.

    ಇಂದು ಬೆಳಗ್ಗೆ ಬಂಧನಕ್ಕೊಳಗಾಗಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದ ಚಿನ್ಮಯಾನಂದ ನಾನು ಕಾನೂನು ವಿದ್ಯಾರ್ಥಿನಿಗೆ ಮಸಾಜ್ ಮಾಡಲು ಬಾ ಎಂದು ಕರೆದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಈ ಕೃತ್ಯ ಎಸಗಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಚಿನ್ಮಯಾನಂದ ಹೇಳಿದ್ದಾರೆ ಎಂದು ತನಿಖಾ ತಂಡ ಹೇಳಿದೆ.

    ಈ ವಿಚಾರದ ಬಗ್ಗೆ ಮಾತನಾಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥ ನವೀನ್ ಅರೋರಾ, ಸ್ವಾಮಿ ಚಿನ್ಮಯಾನಂದ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ಸಂಭಾಷಣೆ ಮತ್ತು ಬಾಡಿ ಮಸಾಜ್ ಸೇರಿದಂತೆ ಬಹುತೇಕ ಎಲ್ಲ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಸಹ ಪರಿಶೀಲನೆ ಮಾಡಲಾಗುತ್ತಿದೆ. ತಾನು ಮಾಡಿರುವ ಕೆಲಸದ ಬಗ್ಗೆ ತಾನೇ ಬೇಸರ ವ್ಯಕ್ತಪಡಿಸಿರುವ ಚಿನ್ಮಯಾನಂದ ಅವರು, ಈ ವಿಚಾರದ ಬಗ್ಗೆ ಹೆಚ್ಚಿಗೆ ಹೇಳುವುದಿಲ್ಲ ಎಂದು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ನನ್ನ ಮೇಲೆ ಬಿಜೆಪಿ ನಾಯಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಮಸಾಜ್ ಮಾಡಲು ಬಾ ಎಂದು ಕರೆಯುತ್ತಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಮಾಡಿದ್ದಳು ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ನಂತರ ಈ ವಿಚಾರಕ್ಕೆ ಸಂಬಂಧಪಟ್ಟ ವಿಡಿಯೋವನ್ನು ವಿದ್ಯಾರ್ಥಿನಿ ಕುಟುಂಬದವರು ತನಿಖಾ ತಂಡಕ್ಕೆ ನೀಡಿದ್ದರು.

    ವಿದ್ಯಾರ್ಥಿನಿ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ಚಿನ್ಮಯಾನಂದ ಅವರ ವಕೀಲ ಓಂ ಸಿಂಗ್ ಈ ವಿಡಿಯೋ ಮೂಲಕ ತನ್ನ ಕಕ್ಷಿದಾರನನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದರು ಮತ್ತು ಓಂ ಸಿಂಗ್ ತನ್ನ ಬಳಿ ಹುಡುಗಿ ಮತ್ತು ಅವರ ಸ್ನೇಹಿತರ ವಿಡಿಯೋ ಇದ್ದು, ಅದು ಚಿನ್ಮಯಾನಂದ್ ಅವರ ಮೇಲೆ ಸುಳ್ಳು ಆರೋಪ ಮಾಡಲು ಸಂಚು ರೂಪಿಸಿರುವುದನ್ನು ತೋರುತ್ತದೆ ಎಂದು ಹೇಳಿದ್ದರು.

    ಈ ಹಿಂದೆ ಈ ವಿಚಾರದ ಬಗ್ಗೆ ಮಾತನಾಡಿದ್ದ ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಅವರು, ಚಿನ್ಮಯಾನಂದ ಪ್ರಕರಣದಲ್ಲಿ ಯಾವುದೇ ವಿಳಂಬ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಚಿನ್ಮಯಾನಂದ ಅವರ ಪರವಾಗಿ ಬೆದರಿಕೆ ಹಾಕಿದ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು.