Tag: ಕಾನೂನು ಬಾಹಿರ

  • ದಿಶಾ ರವಿಯನ್ನು ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ – ರೈತ ಮುಖಂಡ ನಾಗೇಂದ್ರ

    ದಿಶಾ ರವಿಯನ್ನು ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ – ರೈತ ಮುಖಂಡ ನಾಗೇಂದ್ರ

    ಬೆಂಗಳೂರು: ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ದಿಶಾ ರವಿಯನ್ನು ಬಿಡುಗಡೆ ಮಾಡದಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

    ರೈತರ ಪ್ರತಿಭಟನೆಗೆ ಬೆಂಬಲಿಸಿದ ದಿಶಾ ರವಿಯನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ. ಹೀಗಾಗಿ ತಕ್ಷಣವೇ ಆಕೆಯನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಸರ್ಕಾರದ ವಿರುದ್ಧ ಮಾತನಾಡಿದವರಿಗೆ ರಾಷ್ಟ್ರದ್ರೋಹಿ ಬಿರುದು ಕಟ್ಟಲಾಗುತ್ತಿದೆ. ಕಾನೂನು ಬಾಹಿರವಾಗಿ ದೆಹಲಿ ಪೊಲೀಸರು ಕರ್ನಾಟಕದ ಯುವತಿಯನ್ನು ಬಂಧಿಸಿದ್ದಾರೆ. ಮುಂಬೈನಲ್ಲಿ ಹಲವಾರು ವಕೀಲರನ್ನು ಬಂಧಿಸಲಾಗಿದೆ. ಸರ್ವಾಧಿಕಾರಿಯಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

  • ಅಂಗೈಯಲ್ಲಿ ಸಿಕ್ತಾರೆ ಹುಡುಗಿಯರು- ವಾಟ್ಸಪ್, ಫೋನ್‍ನಲ್ಲೇ ಸಿಕ್ತಾರೆ ರೂಪಸಿಯರು

    ಅಂಗೈಯಲ್ಲಿ ಸಿಕ್ತಾರೆ ಹುಡುಗಿಯರು- ವಾಟ್ಸಪ್, ಫೋನ್‍ನಲ್ಲೇ ಸಿಕ್ತಾರೆ ರೂಪಸಿಯರು

    – ಪೊಲೀಸ್ ಮಹಾನಿರ್ದೇಶಕರಿಗೆ ರಾಮಲಿಂಗಾ ರೆಡ್ಡಿ ಪತ್ರ

    ಬೆಂಗಳೂರು: ಮಾಯನಗರಿ ಬೆಂಗಳೂರಿನಲ್ಲಿ ಅಫೀಶಿಯಲ್ ಆಗಿ ಕಾನೂನು ಬಾಹಿರವಾಗಿ ಎಗ್ಗಿಲ್ಲದೆ ಆನ್‍ಲೈನ್ ಮಾಂಸದ ದಂಧೆ ನಡೆಯುತ್ತಿದೆ. ಈ ದಂಧೆಗೆ ಬ್ರೇಕ್ ಹಾಕುವಂತೆ ಮಾಜಿ ಗೃಹ ಮಂತ್ರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

    ಕೋರಮಂಗಲ ಅಫೀಶಿಯಲ್ ವೆಬ್‍ಸೈಟ್‍ವೊಂದರ ಮೂಲಕ ಕಾನೂನು ಬಾಹಿರವಾಗಿ ಬಣ್ಣ-ಬಣ್ಣದ ಹುಡುಗಿಯರ ಫೋಟೋ ಹಾಕಿ ಗಂಟೆ ಲೆಕ್ಕದಲ್ಲಿ ನಿಮ್ಮಲ್ಲಿಗೆ ಕಾಲ್ ಗರ್ಲ್ಸ್ ಗಳನ್ನು ಕಳಿಸಿಕೊಡುತ್ತಾರೆ. ಪ್ರತಿ ಗಂಟೆಗೆ 15 ಸಾವಿರದಿಂದ ಫುಲ್ ನೈಟ್‍ಗೆ 40,000 ಹಣ ಪಡೆದು ನೀವು ಚಾಯ್ಸ್ ಮಾಡಿದ ಸ್ಥಳಕ್ಕೆ ಮಾಡೆಲ್ಸ್ ಗಳನ್ನ ಕಳಿಸಿಕೊಡುತ್ತಿದ್ದಾರೆ.

    ಒಂದು ಚಿಕ್ಕ ಮನೆಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದರೆ, ಸಿಸಿಬಿ ಪೊಲೀಸರು ಅದನ್ನ ಹುಡುಕಿ ದಾಳಿ ಮಾಡಿ ಬಂಧಿಸುತ್ತಾರೆ. ಕೋರಮಂಗಲ ಅಫೀಶಿಯಲ್ ವೆಬ್‍ಸೈಟ್ ಮುಖಾಂತರ ವ್ಯಾಪಾರ ಮಾಡಿ ದಂಧೆ ನಡೆಸುತ್ತಿದ್ದರೂ ಯಾವುದೇ ದಾಳಿ ನಡೆದಿಲ್ಲ. ಇದು ಮಾಜಿ ಗೃಹ ಸಚಿವರ ಕೆಂಗಣ್ಣಿಗೆ ಗುರಿಯಾಗಿದೆ.

    ದಂಧೆಯ ಕಾರಳ ಮುಖದ ಬಗ್ಗೆ ಮಾಹಿತಿ ಪಡೆದ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಕಾನೂನು ಬಾಹಿರವಾಗಿ ದಂಧೆ ನಡೆಸುತ್ತಿರುವವರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

    ಕೋರಮಂಗಲ ಕಾಲ್ ಗರ್ಲ್ಸ್ ಹೆಸರಿನಲ್ಲಿ ದಂಧೆ ನಡೆಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹಾಗಾಗಿ ಅಕ್ರಮವಾಗಿ ಅಫೀಶಿಯಲ್ ವೆಬ್‍ಸೈಟ್ ಮುಖಾಂತರ ನಡೆಯುತ್ತಿರುವ ಹಗಲು ದರೋಡೆಯನ್ನ ಕೂಡಲೇ ತಡೆಯಬೇಕು. ದಂಧೆ ನಡೆಸುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವವರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಪೊಲೀಸ್ ಮಹಾನಿರ್ದೇಶಕರಿಗೆ ರಾಮಲಿಂಗಾ ರೆಡ್ಡಿ ಪತ್ರ ಬರೆದಿದ್ದಾರೆ.

    ಕಾನೂನು ಬಾಹಿರ ಚಟುವಟಿಕೆಯನ್ನ ರಾಜೋರೋಷವಾಗಿ ದಂಧೆ ನಡೆಸುತ್ತಿದ್ದಾರೆ. ಈ ಆನ್‍ಲೈನ್ ಅಕ್ರಮ ದಂಧೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಇಲ್ವಾ, ಮಾಹಿತಿ ಇದ್ದರೂ ಸುನ್ನಾಗಿದ್ದಾರ ಎಂಬ ಅನುಮಾನ ಮೂಡಿದೆ.