Tag: ಕಾಣೆಯಾಗಿದ್ದಾರೆ

  • ನಟ ನವೀನ್ ಕೃಷ್ಣ ಸಹೋದರಿ ನೀತಾ ನಾಪತ್ತೆ: ಪತ್ತೆಗೆ ಸಹಕರಿಸಿ ಎಂದು ಮನವಿ

    ನಟ ನವೀನ್ ಕೃಷ್ಣ ಸಹೋದರಿ ನೀತಾ ನಾಪತ್ತೆ: ಪತ್ತೆಗೆ ಸಹಕರಿಸಿ ಎಂದು ಮನವಿ

    ಸ್ಯಾಂಡಲ್ ವುಡ್ ನಟ, ನಿರ್ದೇಶಕ ನವೀನ್ ಕೃಷ್ಣ (Naveen Krishna) ಅವರ ಸಹೋದರಿ ನೀತಾ ಪವರ್ (Neeta Pawar) ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದಾರೆ (missing). ಈ ಮಾಹಿತಿಯನ್ನು ಸ್ವತಃ ನವೀನ್ ಕೃಷ್ಣ ಅವರೇ ಸೋಷಿಯ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸಹೋದರಿಯ ಫೋಟೋ ಮತ್ತು ಮಾಹಿತಿಯನ್ನೂ ಪೋಸ್ಟ್ ಮಾಡಿರುವ ಅವರು, ‘ಕಂಡರೆ ಕೂಡಲೇ ತಿಳಿಸಿ ನಮ್ಮ ಅಕ್ಕ’ ಎಂದು ಬರೆದುಕೊಂಡಿದ್ದಾರೆ.

    ನವೀನ್ ಕೃಷ್ಣ ಅವರು ಪೋಸ್ಟ್ ಮಾಡಿರುವ ಪೋಸ್ಟರ್ ನಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ನೀತಾ ಪವಾರ್ ಜನವರಿ 17 ರಂದು ಮಧ್ಯಾಹ್ನ 2:57ಕ್ಕೆ ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ. ಹಾಗಾಗಿ ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ, ನಿಮಗೆ ಮಾಹಿತಿ ಸಿಕ್ಕರೆ ಕೂಡಲೇ ಸಂಪರ್ಕಿಸಿ ಎಂದು ಹಲವು ನಂಬರ್ ಗಳನ್ನು ಅವರು ನೀಡಿದ್ದಾರೆ.

    ಹಿರಿಯ ನಟ ಶ್ರೀನಿವಾಸ್ ಮೂರ್ತಿ (Srinivas Murthy) ಅವರ ಪುತ್ರನಾದ ನವೀನ್ ಕೃಷ್ಣ ಧಿಮಾಕು ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲೂ ನಟಿಸಿದ್ದಾರೆ. ಸ್ವತಃ ನಿರ್ದೇಶಕರಾಗಿ ಹಲವು ಧಾರಾವಾಹಿಗನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಜೀ ವಾಹಿನಿಯಲ್ಲಿ ಮೂಡಿ ಬರಲಿರುವ ಹೊಸ ಧಾರಾವಾಹಿಯಲ್ಲೂ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಲ್ಲಿ ಮಳೆ ಹಾವಳಿ – ಕಾಣೆಯಾಗಿದ್ದಾರೆಂದು ಸಚಿವರು, ಸಂಸದರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌

    ಬೆಂಗಳೂರಲ್ಲಿ ಮಳೆ ಹಾವಳಿ – ಕಾಣೆಯಾಗಿದ್ದಾರೆಂದು ಸಚಿವರು, ಸಂಸದರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ (Bengaluru Rain) ಮಳೆ ಹಾವಳಿಯಿಂದ ಅವಾಂತರ ಸೃಷ್ಟಿಯಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದಿಗ್ಧತೆಯಲ್ಲಿ ಅವರ ಕಷ್ಟಗಳನ್ನು ಆಲಿಸದೇ ಸಚಿವರು ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ.

    ಬಿಜೆಪಿ (BJP) ಆಡಳಿತದ ಕೆಲ ಸಚಿವರು, ಸಂಸದರ ಪಟ್ಟಿಯನ್ನು ಕಾಂಗ್ರೆಸ್‌ (Congress) ಬಿಡುಗಡೆ ಮಾಡಿದೆ. ಸಚಿವರು, ಸಂಸದರು ಕಾಣೆಯಾಗಿದ್ದಾರೆ ಎಂದು ಟ್ವೀಟ್‌ ಮಾಡಿ ಕಾಲೆಳೆದಿದೆ. ಇದನ್ನೂ ಓದಿ: ಜನೋತ್ಸವ ಕಾರ್ಯಕ್ರಮ ಭಾನುವಾರಕ್ಕೆ ಮುಂದೂಡಿಕೆ

    ಟ್ವೀಟ್‌ನಲ್ಲೇನಿದೆ?
    ಸಚಿವ ಸುಧಾಕರ್‌ ಅವರು ಕೋವಿಡ್ ಕಾಲದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ವಿಮ್ಮಿಂಗ್ ಮಾಡ್ತಿದ್ರು. ಈಗ ಬೆಂಗಳೂರು ಸ್ವಿಮ್ಮಿಂಗ್ ಪೂಲ್ ಆಗಿದೆ, ಜನತೆ ಸ್ವಿಮ್ಮಿಂಗ್ ಮಾಡುವ ಸ್ಥಿತಿ ಇದೆ, ಸಚಿವರು ನಾಪತ್ತೆಯಾಗಿದ್ದಾರೆ. ಜನತೆಗೆ ಜಲೋತ್ಸವದ ಸಂಕಟ, ಬಿಜೆಪಿಗೆ ಜನೋತ್ಸವದ ಚೆಲ್ಲಾಟ!

    ಕಳೆದ ಒಂದು ವಾರದಿಂದ ಮಳೆಯಲ್ಲಿ ಜನತೆ ಮುಳುಗಲು ಶುರುವಾದಾಗಿನಿಂದ ರಾಜ್ಯದ ಗೃಹಸಚಿವರು ನೆರೆ ಪೀಡಿತ ಪ್ರದೇಶದಲ್ಲಾಗಲಿ, ಬೆಂಗಳೂರಿನಲ್ಲಾಗಲಿ, ವಿಧಾನಸೌಧದಲ್ಲಾಗಲಿ ಕಾಣಿಸಲಿಲ್ಲ. ಸ್ವಕ್ಷೇತ್ರದಲ್ಲಿ ಠಿಕಾಣಿ ಹೂಡಿದ ಆರಗ ಜ್ಞಾನೇಂದ್ರ ಅವರು ಗೃಹಸಚಿವರಾಗಿ ಕೆಲಸ ಮಾಡಲು ಆರಂಭಿಸುವುದು ಯಾವಾಗ!?

    ಬೆಂಗಳೂರಿನ ಜನರು ಕೊಟ್ಟ ಅಧಿಕಾರವನ್ನು ಅನುಭವಿಸುತ್ತಿರುವ ಅವರು ಯಾವ ಬಡಾವಣೆ, ಗಲ್ಲಿಗಳಲ್ಲೂ ಕಾಣಿಸಿಕೊಳ್ಳಲಿಲ್ಲ, ಜನತೆಯ ನೆರವಿಗೆ ನಿಂತಿದ್ದು ಕಾಣಲಿಲ್ಲ. ಜನರಿಗೆ ಕಷ್ಟದ ಸಮಯವೆಂದರೆ ಬಿಜೆಪಿಗೆ ವಿಶ್ರಾಂತಿಯ ಸಮಯ, ಮಳೆ ಮುಗಿದ ನಂತರ ಹಿಜಬ್, ಹಲಾಲ್‌ಗಳಿಗೆ ಕ್ರಿಯಾಶೀಲರಾಗ್ತಾರೆ! ಇದನ್ನೂ ಓದಿ: ಚಾಟಿ ಏಟು ನೀಡಲು ಕತ್ತಿ ಕೊಡುತ್ತಿದ್ದ ಹೇಳಿಕೆಗಳನ್ನು ನಾವು ಅರ್ಥ ಮಾಡಿಕೊಳ್ತಿರಲಿಲ್ಲ: ಪ್ರತಾಪ್ ಸಿಂಹ

    ಸಂಸದ ತೇಜಸ್ವಿ ಸೂರ್ಯ ಅವರನ್ನು ಸಂಸದರನ್ನಾಗಿಸಿದ್ದು, ಆಡುವ ಮಕ್ಕಳನ್ನು ಶಾಲೆಗೆ ಸೇರಿಸಿದಂತಾಗಿದೆ! ಹಿಂದೆ ಕೋವಿಡ್ ಕಾಲದಲ್ಲಿ ಫುಟ್ಬಾಲ್ ಆಡಲು ಹೋಗಿದ್ದರು, ಅತಿವೃಷ್ಟಿಯ ಕಾಲದಲ್ಲಿ ದೋಸೆ ತಿನ್ನಲು ಹೋಗಿದ್ದಾರೆ. ಕೆಲಸಕ್ಕೆ ಕರೆಯಬೇಡಿ, ದೋಸೆ ತಿನ್ನೋಕೆ ಕರೆಯೋದು ಮರೆಯಬೇಡಿ ಎಂಬುದು ಇವರ ಮನವಿ!

    ಬೆಂಗಳೂರನ್ನು ಪ್ರತಿನಿಧಿಸುವ ಮತ್ತೊಬ್ಬ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಮಳೆ ಅವಾಂತರದಿಂದ ನಲುಗಿದ ಯಾವುದೇ ಏರಿಯಾಗಳಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಜನತೆ ಹುಡುಕುತ್ತಿದ್ದಾರೆ. ಜನರ ಮನೆಯಲ್ಲಿ ಮಳೆ ನೀರು ನುಗ್ಗಿದರೆ, ಇವರ ಮನದಲ್ಲಿ ಸನ್ಮಾನದ ಆಸೆ ನುಗ್ಗಿದೆ! ಸಚಿವರೇ ಜನರತ್ತ ನೋಡುವುದು ಯಾವಾಗ?

    ಬೆಂಗಳೂರಲ್ಲೇ ಬೆಳೆದು, ಬೆಂಗಳೂರಲ್ಲೇ ಅಧಿಕಾರ, ಆಸ್ತಿ, ಅಂತಸ್ತು ಕಂಡುಕೊಂಡ ಸಚಿವ ವಿ.ಸೋಮಣ್ಣ ಅವರು ಬೆಂಗಳೂರನ್ನೇ ಕಡೆಗಣಿಸಿದರೆ ಹೇಗೆ? ಬೆಂಗಳೂರು ಉಸ್ತುವಾರಿಗಾಗಿ ಹಂಬಲಿಸುವ ಇವರ ಮನ ಜನರ ಕಷ್ಟಕ್ಕೆ ಮಿಡಿಯದಿರುವುದೇಕೆ? ಜನರಿಗೆ ಕಷ್ಟ ಬಂದಾಗ ಬಿಜೆಪಿಗರಿಗೆ ವಿಶ್ರಾಂತಿಯ ಸಮಯವೇ?

    ಬೆಂಗಳೂರಿನ ಜನರ ಋಣ ಹೊತ್ತಿರುವ ಸಚಿವರಾದ ಕೆ.ಗೋಪಾಲಯ್ಯ ಇದುವರೆಗೂ ಯಾವುದೇ ನೆರೆ ಸಂತ್ರಸ್ತ ಜನರ ಬಳಿ ಹೋಗಿದ್ದು ಎಲ್ಲೂ ಕಾಣಲಿಲ್ಲ. ಪರಿಹಾರ ಕಾರ್ಯಗಳನ್ನು ನಡೆಸಬೇಕಾದವರು ನಪತ್ತೆಯಾಗಿದ್ದೆಲ್ಲಿ? ಸಿಎಂ ಸಚಿವರೆಲ್ಲರನ್ನೂ ‘ಮಳೆಯಲಿ, ಚಳಿಯಲ್ಲಿ, ಬೆಚ್ಚಗೆ ಮಲಗಲಿ’ ಎಂಬಂತೆ ಬಿಟ್ಟಿದ್ದಾರೆಯೇ?!

    ಒಂದೇ ಒಂದು ಬಾರಿ ಸಿಎಂ ಜೊತೆಯಲ್ಲಿ ನೆಪಮಾತ್ರದ ಸಿಟಿ ರೌಂಡ್ಸ್ ಹೊಡೆದಿದ್ದು ಬಿಟ್ಟರೆ ಬೆಂಗಳೂರಿನ ಸಚಿವರಾದ ಬೈರತಿ ಬಸವರಾಜ ಅವರು ಮತ್ತೆ ಎಲ್ಲಿಯೂ ಕಾಣಿಸಿಕೊಳಲಿಲ್ಲ. ನೀರು ನುಗ್ಗಿದ ಮನೆಗಳಿಗೆ ಪರಿಹಾರವೇನು? ನೀರು ನಿಂತ ರಸ್ತೆಗಳಿಗೆ ಮುಕ್ತಿ ಏನು? ಸಚಿವರು ಜನರ ಕಷ್ಟ ಆಲಿಸಲು ಹೋಗದಿರುವುದೇಕೆ?

    ಬೆಂಗಳೂರಿನ ಜನತೆಯ ಮತಬಿಕ್ಷೆ ಪಡೆದು ಜನತೆಗೇ ದ್ರೋಹವೆಸಗುವುದು ಸರಿಯೇ ಸಚಿವರೇ? ಬೆಂಗಳೂರಿನ ಜನತೆ ಮಳೆಯಿಂದ ಕಂಗೆಟ್ಟಿರುವಾಗ ‘ನಾನೇ ಸಿಎಂ’ ಎನ್ನುವ ಸಚಿವರು ನಾಪತ್ತೆಯಾಗಿದ್ದಾರೆ. “ಗಂಡಸ್ಥನವನ್ನು ಕೆಲಸದಲ್ಲಿ ತೋರಿಸಿ” ಎಂದವರೇ ಕೆಲಸ ಮಾಡದಿದ್ದರೆ ಏನೆಂದು ಕರೆಯಬೇಕು ಅಶ್ವತ್ಥ ನಾರಾಯಣ ಅವರೇ?

    ಬೆಂಗಳೂರಿನ ಮತ್ತೊಬ್ಬ ಸಚಿವರಾದ ಮುನಿರತ್ನ ಅವರು ಮಳೆ ಬಂದಾಗಿನಿಂದ ಮನೆಯಿಂದ ಹೊರಬಂದಂತಿಲ್ಲ! ಮುನಿರತ್ನರವರೇ, ಕಮಿಷನ್ ಇಲ್ಲದೆ ತಾವು ಹೊರಬರುವುದಿಲ್ಲವೇ? ಜನರನ್ನು ಕಡೆಗಣಿಸಿರುವ ಇವರಿಗೆ “ಮನಿ ಇದ್ದಲ್ಲಿ ಮಾತ್ರ ಮುನಿ” ಮಾತು ಸೂಕ್ತವಾಗುತ್ತದೆ!

    Live Tv
    [brid partner=56869869 player=32851 video=960834 autoplay=true]

  • ಪುನೀತ್ ರಾಜ್ ಕುಮಾರ್ ‘ಕಾಣೆಯಾಗಿದ್ದಾರೆ’ ಪೋಸ್ಟರ್ ವೈರಲ್

    ಪುನೀತ್ ರಾಜ್ ಕುಮಾರ್ ‘ಕಾಣೆಯಾಗಿದ್ದಾರೆ’ ಪೋಸ್ಟರ್ ವೈರಲ್

    ಪುನೀತ್ ರಾಜ್ ಕುಮಾರ್ ನಿಧನವನ್ನು ಇನ್ನೂ ಅವರ ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಅಗಲಿ ಎಂಟು ತಿಂಗಳು ಕಳೆದರೂ, ಅಭಿಮಾನಿಗಳು ಇನ್ನೂ ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ‘ಕಾಣೆಯಾಗಿದ್ದಾರೆ’ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟ ಕಾಣೆಯಾಗಿದ್ದಾರೆ ಹುಡುಕಿಕೊಟ್ಟವರಿಗೆ ಕೇಳಿದ್ದನ್ನು ಕೊಡಲಾಗುವುದು ಎಂದು ಭಿತ್ತಿ ಪತ್ರವನ್ನು ಅಂಟಿಸುತ್ತಿದ್ದಾರೆ.

    ಹುಡುಗನೊಬ್ಬ ಭಿತ್ತಿ ಪತ್ರವನ್ನು ಗೋಡೆಗೆ ಅಂಟಿಸಿ ಕಾಣೆಯಾಗಿರುವ ತಮ್ಮ ನೆಚ್ಚಿನ ನಟನನ್ನು ಹುಡುಕಿಕೊಡಿ ಎಂದು ಕೇಳುವ ವಿಡಿಯೋ ಕೂಡ ವೈರಲ್ ಆಗಿದೆ. ಹೀಗೆ ಅಪ್ಪು ಅವರನ್ನು ಹುಡುಕುವ ಪ್ರಯತ್ನವನ್ನು ಇನ್ನೂ ಅಭಿಮಾನಿಗಳು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅಪ್ಪು ನಮ್ಮಿಂದ ಅಗಲಿಲ್ಲ, ಅಗಲುವುದೂ ಇಲ್ಲ ಎನ್ನುವ ಸಂದೇಶವನ್ನು ಸಾರಿದ್ದಾರೆ. ಜೊತೆಗಿರದ ಜೀವ ಸದಾ ಜೀವಂತ ಎನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ನಿತ್ಯವೂ ಪುನೀತ್ ಪುಣ್ಯಭೂಮಿಗೆ ಸಾವಿರಾರು ಜನರು ಬರುತ್ತಿದ್ದಾರೆ. ಅಲ್ಲದೇ, ಪುನೀತ್ ಅವರ ಹೆಸರಿನಲ್ಲಿ ಅಲ್ಲಲ್ಲಿ ನಿತ್ಯವೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೇ, ತಮ್ಮ ಊರಿಗೆ, ಬೀದಿಗೆ ಪುನೀತ್ ರಾಜ್ ಕುಮಾರ್ ಹೆಸರನ್ನೂ ಇಟ್ಟಿದ್ದಾರೆ. ಹೀಗೆ ಪುನೀತ್ ಅವರನ್ನು ತಮಗಿಷ್ಟ ಬಂದಂತೆ ಆರಾಧಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

    ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

    ನೆಯಲ್ಲಿದ್ದ ಚೇತನ್ ಅವರನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘಾ ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ. ಮನೆಯಲ್ಲಿದ್ದವರು ಏಕಾಏಕಿ ಕಾಣಿಸದೇ ಇದ್ದಾಗ, ನಾನು ಮನೆಯಲ್ಲಾ ಹುಡುಕಿದೆ, ಚೇತನ್ ಎಲ್ಲಿ ಎಂದು ಅಲ್ಲೇ ಇದ್ದವರನ್ನು ಕೇಳಿದಾಗ ಪೊಲೀಸ್ ನವರು ಕರೆದುಕೊಂಡು ಹೋದರು ಎಂದು ಹೇಳಿದರು. ನಾನು ಶೇಷಾದ್ರಿಪುರಂ ಪೊಲೀಸ್ ಠಾಣೆಯನ್ನು ಸಂಪರ್ಕ ಮಾಡಿದೆ. ಅವರಿಂದ ಸಕಾರಾತ್ಮಕವಾಗಿ ಉತ್ತರ ಸಿಗುತ್ತಿಲ್ಲ. ಅವರು ಅರೆಸ್ಟ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಚೇತನ್ ಮತ್ತು ಅವರ ಅಂಗರಕ್ಷಕರ ಫೋನ್ ಕರೆ ಕೂಡ ಸಿಗುತ್ತಿಲ್ಲ. ನಿಜ ಅರ್ಥದಲ್ಲಿ ನನ್ನ ಪತಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಮೇಘಾ ಆರೋಪ ಮಾಡಿದ್ದಾರೆ. ಇದನ್ನೂ ಓದಿ : ಸಿಂಪಲ್ಲಾಗೊಂದ್ ಲವ್ ಸ್ಟೋರಿಯಲ್ಲಿ ನಟಿಸಿದ್ದ ಆರ್.ಜೆ ರಚನಾ

    ಪೊಲೀಸ್ ನವರು ಅವರನ್ನು ಬಂಧಿಸಿದ್ದರೆ, ಯಾವ ಕಾರಣಕ್ಕಾಗಿ ಎನ್ನುವುದನ್ನು ಸ್ಪಷ್ಟಪಡಿಸಬೇಕಿತ್ತು. ಅಥವಾ ಮನೆಯವರಿಗೆ ಮಾಹಿತಿ ನೀಡಬೇಕಿತ್ತು. ಯಾವುದೇ ನೋಟಿಸ್ ನೀಡದೇ, ಮನೆಯವರಿಗೂ ಮಾಹಿತಿ ಕೊಡದೇ ಏಕಾಏಕಿ ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ನವರ ಕಸ್ಟಡಿಯಲ್ಲಿ ನನ್ನ ಪತಿ ಇಲ್ಲದೇ ಇದ್ದರೆ, ಅವರನ್ನು ಕಿಡ್ನ್ಯಾಪ್ ಮಾಡಿದ್ದು ಯಾರು ಎಂದಾದರೂ ಗೊತ್ತಾಗಬೇಕಿದೆ ಎಂದಿದ್ದಾರೆ ಮೇಘಾ.