Tag: ಕಾಣೆಯಾಗಿದೆ

  • ನಾಯಿ ಕಾಣೆಯಾಗಿದ್ದಕ್ಕೆ ಗಳಗಳನೆ ಅತ್ತು ಟೂರ್ ಕ್ಯಾನ್ಸಲ್ ಮಾಡಿದ ರಮ್ಯಾ

    ನಾಯಿ ಕಾಣೆಯಾಗಿದ್ದಕ್ಕೆ ಗಳಗಳನೆ ಅತ್ತು ಟೂರ್ ಕ್ಯಾನ್ಸಲ್ ಮಾಡಿದ ರಮ್ಯಾ

    ಮ್ಮ ಮುದ್ದಿನ ಶ್ವಾನ ನಾಪತ್ತೆ ವಿಷಯ ತಿಳಿಯುತ್ತಿದ್ದಂತೆ ರಮ್ಯ ಕಣ್ಣೀರು ಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಈ ಮಾಹಿತಿ ಸಿಗುತ್ತಿದ್ದಂತೆ ತೀವ್ರ ನೊಂದುಕೊಂಡಿರುವ ರಮ್ಯ, ತಕ್ಷಣ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ಸಾಗುತ್ತಿದ್ದಾರೆ.

    ಬಬಲೇಶ್ವರ ಹೊರತುಪಡಿಸಿ ಅವರು ಎಲ್ಲಾ ಪ್ರಚಾರವನ್ನು ರದ್ದುಗೊಳಿಸಿ ವಾಪಾಸ್ಸಾಗುತ್ತಿದ್ದಾರೆ. ರಾತ್ರಿ ೧೦ ಗಂಟೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹಿಂತಿರುಗುವುದು ನಿಗದಿಯಾಗಿತ್ತು. ಆದರೆ ತೀವ್ರ ವಿಚಲಿತರಾಗಿರುವ ರಮ್ಯಾ ಕಾರಿನಲ್ಲೇ ವಾಪಾಸ್ಸಾಗುತ್ತಿದ್ದು, ನಿರಂತರ ಕಣ್ಣೀರು ಹಾಕುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

    ರಮ್ಯಾ ವಾಸವಿದ್ದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಅವರು ಸಾರ್ವಜನಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್

    ನಾಯಿ ಕಾಣೆಯಾಗಿರುವ ಕುರಿತು ಟ್ವೀಟ್ ಮಾಡಿರುವ ರಮ್ಯಾ, ಮೇ 6 ರಿಂದ ನೆಚ್ಚಿನ ನಾಯಿ ಚಾಂಪ್ ಕಾಣೆಯಾಗಿದೆ. ಕರಿ ಬಣ್ಣದ ಪರ್ಟೈಲಿ ತಳಿಯ ನಾಯಿ ಅದಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವನ್ನು ಕೊಡಲಾಗುವುದು. ಯಾರಿಗಾದರೂ ನಾಯಿ ಕಂಡರೆ 7012708137 ಈ ನಂಬರ್ ಗೆ ಕಾಂಟ್ಯಾಕ್ಟ್ ಮಾಡಿ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    ರಮ್ಯಾ ಅವರಿಗೆ ನಾಯಿ ಅಂದರೆ ಎಲ್ಲಿಲ್ಲದ ಪ್ರೀತಿ. ನಾಯಿ ಕಥೆಯನ್ನು ಇಟ್ಟುಕೊಂಡೇ ಅವರೊಂದು ಸಿನಿಮಾ ಕೂಡ ಮಾಡಿದ್ದಾರೆ. ‘ನಾನು ಏನ್ ಮಾಡ್ಲಿ ಸ್ವಾಮಿ.. ನನ್ನ ಹುಡುಗಿ ನಾಯಿ ಪ್ರೇಮಿ’ ಎನ್ನುವ ಹಾಡು ಕೂಡ ಸಖತ್ ಫೇಮಸ್ ಆಗಿತ್ತು. ಇದೀಗ ನಾಯಿಯನ್ನು ಕಳೆದುಕೊಂಡು ದುಃಖ ಪಡುತ್ತಿದ್ದಾರೆ ರಮ್ಯಾ. ಅವರ ನಾಯಿ ಎಲ್ಲಿಯಾದರೆ ಕಂಡರೆ ಕೂಡಲೇ ಸೇಫ್ ಆಗಿ ಮರಳಿಸಿಬಿಡಿ.

  • ಕಾಣೆಯಾದ ರಮ್ಯಾ ನೆಚ್ಚಿನ ನಾಯಿ: ಹುಡುಕಿಕೊಟ್ಟರೆ ಬಂಪರ್ ಬಹುಮಾನ

    ಕಾಣೆಯಾದ ರಮ್ಯಾ ನೆಚ್ಚಿನ ನಾಯಿ: ಹುಡುಕಿಕೊಟ್ಟರೆ ಬಂಪರ್ ಬಹುಮಾನ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಅವರ ನೆಚ್ಚಿನ ನಾಯಿ ಇಂದು ಕಾಣೆಯಾಗಿದೆ (Missing). ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ನಾಯಿ (Dog) ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಅವರು ಸಾರ್ವಜನಕರಲ್ಲಿ ಮನವಿ ಮಾಡಿದ್ದಾರೆ.

    ನಾಯಿ ಕಾಣೆಯಾಗಿರುವ ಕುರಿತು ಟ್ವೀಟ್ ಮಾಡಿರುವ ರಮ್ಯಾ, ಮೇ 6 ರಿಂದ ನೆಚ್ಚಿನ ನಾಯಿ ಚಾಂಪ್ ಕಾಣೆಯಾಗಿದೆ. ಕರಿ ಬಣ್ಣದ ಪರ್ಟೈಲಿ ತಳಿಯ ನಾಯಿ ಅದಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವನ್ನು ಕೊಡಲಾಗುವುದು. ಯಾರಿಗಾದರೂ ನಾಯಿ ಕಂಡರೆ 7012708137 ಈ ನಂಬರ್ ಗೆ ಕಾಂಟ್ಯಾಕ್ಟ್ ಮಾಡಿ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ರಮ್ಯಾ ಅವರಿಗೆ ನಾಯಿ ಅಂದರೆ ಎಲ್ಲಿಲ್ಲದ ಪ್ರೀತಿ. ನಾಯಿ ಕಥೆಯನ್ನು ಇಟ್ಟುಕೊಂಡೇ ಅವರೊಂದು ಸಿನಿಮಾ ಕೂಡ ಮಾಡಿದ್ದಾರೆ. ‘ನಾನು ಏನ್ ಮಾಡ್ಲಿ ಸ್ವಾಮಿ.. ನನ್ನ ಹುಡುಗಿ ನಾಯಿ ಪ್ರೇಮಿ’ ಎನ್ನುವ ಹಾಡು ಕೂಡ ಸಖತ್ ಫೇಮಸ್ ಆಗಿತ್ತು. ಇದೀಗ ನಾಯಿಯನ್ನು ಕಳೆದುಕೊಂಡು ದುಃಖ ಪಡುತ್ತಿದ್ದಾರೆ ರಮ್ಯಾ. ಅವರ ನಾಯಿ ಎಲ್ಲಿಯಾದರೆ ಕಂಡರೆ ಕೂಡಲೇ ಸೇಫ್ ಆಗಿ ಮರಳಿಸಿಬಿಡಿ.