Tag: ಕಾಣಿಕೆ ಹುಂಡಿ

  • ಚಿತ್ರದುರ್ಗ ಹಿಂದೂ ಮಹಾಗಣಪತಿ ಕಾಣಿಕೆ ಹುಂಡಿ ಎಣಿಕೆ – 15 ಲಕ್ಷ ರೂ. ಸಂಗ್ರಹ

    ಚಿತ್ರದುರ್ಗ ಹಿಂದೂ ಮಹಾಗಣಪತಿ ಕಾಣಿಕೆ ಹುಂಡಿ ಎಣಿಕೆ – 15 ಲಕ್ಷ ರೂ. ಸಂಗ್ರಹ

    ಚಿತ್ರದುರ್ಗ: ಏಷ್ಯಾದಲ್ಲೇ ಅತಿಹೆಚ್ಚು ಜನ ಸೇರುವ ಎರಡನೇ ಶೋಭಾಯಾತ್ರೆ ಖ್ಯಾತಿಯ ಚಿತ್ರದುರ್ಗದ (Chitradurga) ಹಿಂದೂ ಮಹಾಗಣಪತಿ (Hindu Mahaganapathi) ಕಾಣಿಕೆ ಹುಂಡಿಯಲ್ಲಿ 15 ಲಕ್ಷ ರೂ. ಸಂಗ್ರಹ ಆಗಿದೆ.

    ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಹಿಂದೂ ಮಹಾಗಣಪತಿ ಉತ್ಸವ ಹಿನ್ನೆಲೆ ಸತತ 18 ದಿನಗಳ ಕಾಲ ಜೈನಧಾಮದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾಗಣಪತಿ ಕಾಣಿಕೆ ಹುಂಡಿಯನ್ನು ಇಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಎಣಿಕೆ ಮಾಡಿದ್ದು, ಕಾಣಿಕೆ ಪೆಟ್ಟಿಗೆಯಲ್ಲಿ 12.50 ಲಕ್ಷ ರೂ. ನೋಟುಗಳು ಹಾಗೂ 2.50 ಲಕ್ಷ ರೂ. ಚಿಲ್ಲರೆ ಹಣ ಸಂಗ್ರಹವಾಗಿದೆ. ಇದನ್ನೂ ಓದಿ: ವ್ಯಾಪಾರ ಮಾತುಕತೆಗೆ ಮತ್ತೆ ವೇದಿಕೆ ಸಿದ್ದ- ಇಂದು ಭಾರತಕ್ಕೆ ಬರುತ್ತಿದ್ದಾರೆ ಅಮೆರಿಕ ಪ್ರತಿನಿಧಿ

    ಇಂದು ಹಿಂದೂ ಮಹಾಗಣಪತಿ ಸಮಿತಿಯಿಂದ ಕಾಣಿಕೆ ಹುಂಡಿಯ ಹಣ ಎಣಿಕೆ ಕಾರ್ಯ ನಡೆದಿದ್ದು, ಕಾಣಿಕೆ ಪೆಟ್ಟಿಗೆಯ ಹಣವನ್ನು ಭಕ್ತರು ಹರಾಜು ಕೂಗಿ ಪಡೆಯಲಿದ್ದಾರೆ. ಪ್ರತಿ ವರ್ಷದಂತೆ ಕಾಣಿಕೆ ಹುಂಡಿಯನ್ನು ಸಾಂಪ್ರದಾಯಿಕವಾಗಿ ಹರಾಜು ಹಾಕಲಿದ್ದು, ಅದನ್ನು ಹರಾಜಿನಲ್ಲಿ ನ ಭಕ್ತರಿಗೆ ನೀಡಲಾಗುವುದು. ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶದಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ – ನಿಮ್ಮ ಏರಿಯಾ ಇದ್ಯಾ?

    ಇನ್ನೂ ಸತತ 18 ದಿನಗಳ ಕಾಲವೂ ನಿರಂತರವಾಗಿ ನಡೆದ ಪೂಜಾ ಕೈಂಕಾರ್ಯದಲ್ಲಿ ಲಕ್ಷಾಂತರ ಜನ ಭಕ್ತರು ದರ್ಶನ ಪಡೆದಿದ್ದು, ಸೆ.13ರಂದು ನಡೆದ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದರು. ಹೀಗಾಗಿ ಗಣಪತಿ ಕಾಣಿಕೆ ಹುಂಡಿಯಲ್ಲಿ ಸಹ ಅಪಾರ ಹಣ ಸಂಗ್ರಹವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿ, ಯುವಜನರಲ್ಲಿ ನಾಯಕತ್ವ ಗುಣ ಬೆಳೆಸಲು ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮ: ಡಿಕೆಶಿ

  • ಮಂತ್ರಾಲಯ ರಾಯರ ಮಠದಲ್ಲಿ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯ- 3.30 ಕೋಟಿ ರೂ.ಸಂಗ್ರಹ

    ಮಂತ್ರಾಲಯ ರಾಯರ ಮಠದಲ್ಲಿ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯ- 3.30 ಕೋಟಿ ರೂ.ಸಂಗ್ರಹ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ (Mantralayam Mutt) ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಅಂದರೆ ಕಳೆದ 34 ದಿನಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು, ನಾಣ್ಯ ಹಾಗೂ ನೋಟುಗಳು ಸೇರಿ ಒಟ್ಟು 3 ಕೋಟಿ 30 ಲಕ್ಷದ 20 ಸಾವಿರದ 636 ರೂ. ಕಾಣಿಕೆ ಸಂಗ್ರಹವಾಗಿದೆ.

    0.95 ಗ್ರಾಂ ಚಿನ್ನ ಹಾಗೂ 1 ಕೆ.ಜಿ.300 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಕಳೆದ ಅಕ್ಟೋಬರ್ ನವೆಂಬರ್ ತಿಂಗಳುಗಳ 36 ದಿನಗಳಲ್ಲಿ 3 ಕೋಟಿ 20 ಲಕ್ಷ ರೂ. ಸಂಗ್ರಹವಾಗಿತ್ತು. ಸೆಪ್ಟೆಂಬರ್ ಅಕ್ಟೋಬರ್ ತಿಂಗಳ 20 ದಿನಗಳಲ್ಲಿ 1,98,17,614 ರೂ. ಸಂಗ್ರಹವಾಗಿತ್ತು. ಈ ಬಾರಿ 34 ದಿನಗಳ ಕಾಣಿಕೆ ಎಣಿಕೆ ಇದ್ದಿದ್ದರಿಂದ ಸತತವಾಗಿ 2 ದಿನಗಳ ಕಾಲ ನಾಣ್ಯ ಹಾಗೂ ನೋಟುಗಳ ಎಣಿಕೆ ಕಾರ್ಯ ನಡೆಯಿತು. ಎಣಿಕೆ ಕಾರ್ಯ ಸಂಪೂರ್ಣ ಮುಕ್ತಾಯವಾಗಿರುವ ಕುರಿತು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬರಲಿದೆ ರಿಮೋಟ್ ವೋಟಿಂಗ್ ಮೆಷಿನ್ – ಮತದಾನ ಪ್ರಮಾಣ ಹೆಚ್ಚಿಸಲು ಆಯೋಗ ಮಾಸ್ಟರ್ ಪ್ಲ್ಯಾನ್

    ಹುಂಡಿ ಎಣಿಕೆ ವೇಳೆ ಮುಜರಾಯಿ ಇಲಾಖೆ ಅಧಿಕಾರಿಗಳು, ಗುರುಪಾದ ಕರಸೇವಕರು ಹಾಗೂ ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮಂತ್ರಾಲಯ ಗುರುರಾಯರ ಮಠದ (Rayara Mutt) ಕಾಣಿಕೆ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಇದನ್ನೂ ಓದಿ: ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು

    Live Tv
    [brid partner=56869869 player=32851 video=960834 autoplay=true]

  • ರಾಯರ ಹುಂಡಿಗೆ ಹರಿದು ಬಂತು ಕೋಟ್ಯಂತರ ರೂ. ಕಾಣಿಕೆ

    ರಾಯರ ಹುಂಡಿಗೆ ಹರಿದು ಬಂತು ಕೋಟ್ಯಂತರ ರೂ. ಕಾಣಿಕೆ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.

    ಮೇ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು, ಒಟ್ಟು 2,27,42,499 ರೂ. ಸಂಗ್ರಹವಾಗಿದೆ. ಇನ್ನೂ ಸಂಗ್ರಹವಾದ ಕಾಣಿಕೆಯಲ್ಲಿ 5,14,735 ರೂಪಾಯಿ ನಾಣ್ಯಗಳು ಹಾಗೂ 2,22,27,764 ರೂಪಾಯಿ ನೋಟುಗಳಿವೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    31 ಗ್ರಾಂ ಬಂಗಾರ, 1660 ಗ್ರಾಂ ಬೆಳ್ಳಿಯಿದೆ. ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದು ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

    /p>

  • ಮಗ ರಾತ್ರಿ ಹೊತ್ತು ನಿದ್ದೆ ಮಾಡುವಂತೆ ಮಾಡಪ್ಪ- ಕಾಣಿಕೆ ಹುಂಡಿಯಲ್ಲಿ ಅಪ್ಪನ ಪತ್ರ

    ಮಗ ರಾತ್ರಿ ಹೊತ್ತು ನಿದ್ದೆ ಮಾಡುವಂತೆ ಮಾಡಪ್ಪ- ಕಾಣಿಕೆ ಹುಂಡಿಯಲ್ಲಿ ಅಪ್ಪನ ಪತ್ರ

    ಚಿಕ್ಕಮಗಳೂರು: ಭಕ್ತರು ಕಾಣಿಕೆ ಹುಂಡಿಗೆ ಚಿನ್ನ-ಬೆಳ್ಳಿಯ ಒಡವೆಗಳು, ಮುಖವಾಡ, ಬಳೆ, ಉಂಗುರ ಚೈನು, ಹಣ ಹೀಗೆ ನಾನಾ ರೀತಿಯ ವಸ್ತುಗಳನ್ನ ಹಾಕಿ ಹರಕೆ ತೀರಿಸುತ್ತಾರೆ. ಭಕ್ತನೋರ್ವ ಕಾಣಿಕೆ ಹುಂಡಿಯಲ್ಲಿ ಮಗ ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು ಭಗವಂತ ಎಂದು ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಕಳಸ ತಾಲೂಕಿನಲ್ಲಿರುವ ದಕ್ಷಿಣ ಕಾಶಿ ಎಂದು ಖ್ಯಾತಿಯಾಗಿರುವ ಕಳಸ ಕಳಸೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಕಾಣಿಕೆ ಹುಂಡಿಯಲ್ಲಿ ಭಕ್ತನೋರ್ವ ಮಗನ ಇಡೀ ಬದುಕನ್ನೇ ಬದಲಿಸಪ್ಪಾ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ಮಾಡಿದ್ರು- ಉಕ್ರೇನ್ ಮಹಿಳೆ

    ಪತ್ರದಲ್ಲಿ ಏನಿದೆ?: ಮಗನ ಹೆಸರು ಬರೆದಿರುವ ಅಪ್ಪ, ಮಗನ ಕುಡಿತದ ಚಟ ಬಿಡಿಸಿ ಒಳ್ಳೆಯ ಬುದ್ಧಿ ಕೊಡು. ಬೇಗ ಕೆಲಸ ಸಿಗುವಂತೆ ಮಾಡು. ಅವನ ಕುಡಿತದ ಚಟ ಹೋಗಲಾಡಿಸು. ಅವನು ಭಾರೀ ಮುಂಗೋಪಿ. ಅದನ್ನೂ ಕಡಿಮೆ ಮಾಡು. ಚಂಚಲ ಸ್ವಭಾವ ತೊಲಗಿಸು. ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು. ಅವನಿಗಿರುವ ಭಯವನ್ನ ಹೋಗಲಾಡಿಸಿ ಧೈರ್ಯ ತುಂಬು, ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿಕೊಡು. ಮೊಮ್ಮಕ್ಕಳಿಗೂ ವಯಸ್ಸಿಗೆ ತಕ್ಕಂತೆ ಬುದ್ಧಿ ಕೊಡು. ಮಗಳ ಸಂಸಾರವನ್ನೂ ಚೆನ್ನಾಗಿ ಕಾಪಾಡು ತಂದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು 

    ಪತ್ರವನ್ನ ನೋಡಿದ ಅಧಿಕಾರಿಗಳು ನಸುನಕ್ಕು ಪತ್ರವನ್ನ ತೆಗೆದಿಟ್ಟು ಹಣ ಏಣಿಕೆ ಕಾರ್ಯ ಮುಂದುವರಿಸಿದ್ದಾರೆ. ಕಾಣಿಕೆ ಹುಂಡಿಯಲ್ಲಿ ಕಳೆದ ಐದು ತಿಂಗಳಲ್ಲಿ 19 ಲಕ್ಷದ 66 ಸಾವಿರದ 573 ರೂಪಾಯಿ ಹಣ ಸಂಗ್ರಹವಾಗಿದೆ. ಕೊರೊನಾ ಕಾರಣದಿಂದಾಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ತೀರಾ ಇಳಿಮುಖವಾಗಿತ್ತು. ಇದರಿಂದ ದೇವಸ್ಥಾನದ ಆದಾಯಕ್ಕೂ ಪೆಟ್ಟು ಬಿದ್ದಿತ್ತು. ಇದೀಗ ಕೊರೊನಾ ನಿಯಾಮಾವಳಿಗಳು ಬಹುತೇಕ ರದ್ದುಗೊಂಡಿದ್ದು, ಜನಜೀವನ ಎಂದಿನಂತೆ ಆರಂಭವಾಗುತ್ತಿದೆ. ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದ್ದು ಆದಾಯದಲ್ಲೂ ಏರಿಕೆ ಕಂಡಿದೆ. ದೇವಸ್ಥಾನದ ಆದಾಯದಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿನ ಕಾಣಿಕೆ ಹಣ ಸಂಗ್ರಹವಾಗಿದೆ.

  • ಹಾಸನಾಂಬೆ ದರ್ಶನೋತ್ಸವ – ಕಾಣಿಕೆ ಹುಂಡಿಯಲ್ಲಿ ಭಕ್ತರ ನಾನಾ ಕೋರಿಕೆ ಪತ್ರ!

    ಹಾಸನಾಂಬೆ ದರ್ಶನೋತ್ಸವ – ಕಾಣಿಕೆ ಹುಂಡಿಯಲ್ಲಿ ಭಕ್ತರ ನಾನಾ ಕೋರಿಕೆ ಪತ್ರ!

    -2 ಕೋಟಿ ರೂ. ಕಾಣಿಕೆ ಹಣ ಸಂಗ್ರಹ ನಿರೀಕ್ಷೆ
    -ವಿಶೇಷ ದರ್ಶನ – ಪ್ರಸಾದ, ಲಾಡು ಮಾರಾಟ 63 ಲಕ್ಷ ರೂ. ಸಂಗ್ರಹ

    ಹಾಸನ: ಅ.28 ರಿಂದ 10 ದಿನಗಳ ಕಾಲ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ವೇಳೆ ದೇವರಿಗೆ ಬಗೆ ಬಗೆಯ ಪತ್ರಗಳನ್ನು ಬರೆದು ಕಷ್ಟ, ತಮ್ಮ ಬಯಕೆ ಈಡೇರಲಿ ಎಂದು ಹರಕೆ ಸಲ್ಲಿಸುವ ಮೂಲಕ ಭಕ್ತರು ಪರಾಕಾಷ್ಠೆ ಮೆರೆದಿದ್ದಾರೆ.

    ನನ್ನ ಪತಿ ಕುಡಿತದ ಚಟ ಬಿಡಲಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ, ಶೀಘ್ರ ನ್ಯಾಯಾಲಯ ವ್ಯಾಜ್ಯ ಬಗೆಹರಿಯಲಿ. ಹೀಗೆ ಹಲವಾರು ಬಗೆಯ ಕೋರಿಕೆಯ ಪತ್ರಗಳು ಹಾಸನಾಂಬ ಹುಂಡಿಯಲ್ಲಿ ಸಂಗ್ರಹವಾಗಿವೆ. ಇಂದು ಹುಂಡಿ ಎಣಿಕೆಯ ಕಾರ್ಯ ನಡೆಯುತ್ತಿದ್ದು, ಹುಂಡಿಯಲ್ಲಿ ಕಾಣಿಕೆಯೊಂದಿಗೆ ಹಲವಾರು ಕೋರಿಕೆಯ ಪತ್ರಗಳು ಲಭ್ಯವಾಗಿವೆ. ಇದನ್ನೂ ಓದಿ: ಹೆಚ್.ಡಿ ರೇವಣ್ಣ ಕುಟುಂಬಸ್ಥರು ಜನರ ಪ್ರಾಣ ಹಿಂಡ್ತಿದ್ದಾರೆ – ಹಾಸನಾಂಬೆಗೆ ಪತ್ರ

    ಹಾಸನ ನಗರಕ್ಕೆ ಮೂಲಭೂತ ಸೌಲಭ್ಯ ದೊರೆತು ಇಡೀ ದೇಶದಲ್ಲೇ ಮಾದರಿ ಜಿಲ್ಲೆಯನ್ನಾಗಿ ಮಾಡುವಂತೆ ಕೆಲವರು ಪತ್ರ ಬರೆದಿದ್ದರೆ, ಇನ್ನು ಕೆಲ ದಂಪತಿಗಳು ಗಂಡು ಮಗು ಕರುಣಿಸಲಿ. ಆರೋಗ್ಯವಾಗಿರಲಿ. ಹೊಳೆನರಸೀಪುರ ಶಾಸಕ ಹೆಚ್‍ಡಿ.ರೇವಣ್ಣರನ್ನು ಬದಲಾಯಿಸು ತಾಯೇ, ನಮ್ಮ ಪ್ರೇಮ ಸುಖಾಂತ್ಯವಾಗಲಿ ಎಂದು ಹುಡುಗಿ ರಕ್ತದಲ್ಲಿ ಬರೆದಿರುವ ಪತ್ರ ಸೇರಿದಂತೆ ಹಲವು ಬಗೆಯ ವಿಚಿತ್ರ ಬಗೆಯ ಕೋರಿಕೆಯ ಪತ್ರಗಳನ್ನು ಹುಂಡಿಗೆ ಹಾಕಿದ್ದಾರೆ.

    ಎರಡು ಕೋಟಿ ಕಾಣಿಕೆ ಹಣ ಸಂಗ್ರಹ ನಿರೀಕ್ಷೆ:
    10 ರೂ., 500 ರೂ., 2,000 ರೂ. ನೋಟಿನ ಕಂತೆಗಳನ್ನು ಕಾಣಿಕೆ ರೂಪದಲ್ಲಿ ಹಾಕಲಾಗಿದೆ. ಈ ಬಾರಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದಿದ್ದು, ಸುಮಾರು 2 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗುವ ಸಾಧ್ಯತೆ ಇದೆ.  ಸಿಸಿ ಕ್ಯಾಮೆರಾ ಹಾಗೂ ಭದ್ರತೆಯೊಂದಿಗೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು, ಸಂಜೆ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಭ್ರಷ್ಟ ರಾಜಕಾರಣಿಗಳು ಸಾಯಬೇಕಿತ್ತು – ಹಾಸನಾಂಬೆಗೆ ಪತ್ರ ಬರೆದ ಅಪ್ಪು ಅಭಿಮಾನಿ

    ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು, ಕಂದಾಯ ಇಲಾಖೆಯ 85 ಸಿಬ್ಬಂದಿ ಹಾಗೂ ಸ್ವಯಂಸೇವಕರು ಹಾಸನಾಂಬೆ ದೇಗುಲದ ಆವರಣದಲ್ಲಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಹಾಸನಾಂಬೆ ಉತ್ಸವದಲ್ಲಿ 10 ದಿನಗಳಲ್ಲಿ 4 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದರು. ಇದನ್ನೂ ಓದಿ: ಪದ್ಮಶ್ರೀ ಅಲ್ಲ, ಪುನೀತ್ ಅಮರಶ್ರೀ: ಶಿವರಾಜ್‍ಕುಮಾರ್

    300 ಮತ್ತು 1000 ಟಿಕೆಟ್ ಮಾರಾಟ, 63 ಲಕ್ಷ ರೂ. ಸಂಗ್ರಹ. 1000 ರೂ ಟಿಕೆಟ್ ಮಾರಾಟದಿಂದ 26,36,002 ರೂ. 300 ರೂ. ಟಿಕೆಟ್ ಮಾರಾಟದಿಂದ 29,73,150 ರೂ. ಹಾಗೂ ಲಾಡು ಪ್ರಸಾದ ಮಾರಾಟದಿಂದ 73,9150 ರೂ. ಸೇರಿ ಸುಮಾರು ಒಟ್ಟು 63,48,302 ರೂ. ಸಂಗ್ರಹವಾಗಿದೆ ಎಂದು ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್ ಮಾಹಿತಿ ನೀಡಿದ್ದಾರೆ.

  • ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ – ಭಕ್ತಾದಿಗಳಿಂದ ಹರಿದು ಬಂತು ಕೋಟ್ಯಂತರ ರೂ.

    ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ – ಭಕ್ತಾದಿಗಳಿಂದ ಹರಿದು ಬಂತು ಕೋಟ್ಯಂತರ ರೂ.

    ಮೈಸೂರು: ಕೋವಿಡ್-19 ಮಹಾಮಾರಿ ಎಲ್ಲಾ ಉದ್ಯಮಗಳ ಮೇಲೂ ಬಾರಿ ಹೊಡೆತ ಬೀರಿದೆ. ಇದರಿಂದ ಜನರಂತೂ ತತ್ತರಿಸಿ ಹೋಗಿದ್ದಾರೆ. ಹೀಗಿದ್ದರೂ ಕೊರೊನಾ ಸಾಂಕ್ರಮಿಕ ರೋಗದ ನಡುವೆಯೂ ರಾಜ್ಯದ ದೇವಾಲಯಗಳ ಹುಂಡಿಗೆ ಭಕ್ತರಿಂದ ಅಪಾರವಾದ ಹಣ ಸಂಗ್ರಹವಾಗಿದೆ.

    ಇತ್ತೀಚೆಗಷ್ಟೇ ಮಲೆಮಹದೇಶ್ವರ ಬೆಟ್ಟದ ದೇವಾಲಯ ಹುಂಡಿ ಹಣ ಏಣಿಕೆ ಮಾಡಲಾಯಿತು. ಮಹದೇಶ್ವರನಿಗೆ ಭಕ್ತರಿಂದ ಕ್ಯೋಟ್ಯಂತರ ರೂಪಾಯಿ ಹಣ ಹರಿದುಬಂದಿದೆ. ಇದೀಗ ಮೈಸೂರಿನಲ್ಲಿರುವ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿ ಹಣ ಎಣಿಕೆ ಮಾಡಲಾಯಿತು. ಈ ವೇಳೆ ನಂಜುಂಡೇಶ್ವರ ಸನ್ನಿಧಾನಕ್ಕೂ ಒಂದು ಕೋಟಿಗೂ ಅಧಿಕ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ.

    ಹೌದು, ಈ ಬಾರಿ ನಂಜುಂಡೇಶ್ವರ ದೇವಾಲಯಕ್ಕೆ ಭಕ್ತಾದಿಗಳು ಕಾಣಿಕೆ ರೂಪದಲ್ಲಿ ಕೋಟ್ಯಂತರ ರೂಪಾಯಿ ಸಲ್ಲಿಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ 1,01,71,910 ರೂ. ಸಂಗ್ರಹವಾಗಿದೆ. ಏಣಿಕೆ ವೇಳೆ 7500 ರೂ ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿದ್ದು, 1000 ಮೌಲ್ಯದ 2 ನೋಟುಗಳು ಹಾಗೂ 500 ಮೌಲ್ಯದ 11 ನಿಷೇಧಿತ ನೋಟುಗಳು ಸಂಗ್ರಹವಾಗಿದೆ. ಅಲ್ಲದೆ 2 ವಿದೇಶಿ ಕರೆನ್ಸಿಗಳು ಕಾಣಿಕೆ ರೂಪದಲ್ಲಿ ಬಂದಿದೆ.

    ಇಲ್ಲಿಯವರೆಗೂ 20ಕ್ಕೂ ಹೆಚ್ಚು ಹುಂಡಿಗಳ ಹಣವನ್ನು 50ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಮಾಡಿದ್ದಾರೆ. ಜೊತೆಗೆ ಹುಂಡಿಯಲ್ಲಿ 70 ಗ್ರಾಂ ಚಿನ್ನ ಹಾಗೂ 3.5 ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ. ಲಾಕ್‍ಡೌನ್ ಮುಗಿಯುತ್ತಿದ್ದಂತೆ ನಂಜುಂಡೇಶ್ವರ ಸ್ವಾಮಿಗೆ ಭಕ್ತರು ಉದಾರವಾಗಿ ಕಾಣಿಕೆ ಸಲ್ಲಿಸಿದ್ದಾರೆ.

  • ಸಾಲು ಸಾಲು ರಜೆ: ಶನಿವಾರ ಒಂದೇ ದಿನ ತಿರುಪತಿ ಹುಂಡಿಯಲ್ಲಿ ಬಿದ್ದ ಕಾಣಿಕೆ ಎಷ್ಟು ಗೊತ್ತಾ?

    ಸಾಲು ಸಾಲು ರಜೆ: ಶನಿವಾರ ಒಂದೇ ದಿನ ತಿರುಪತಿ ಹುಂಡಿಯಲ್ಲಿ ಬಿದ್ದ ಕಾಣಿಕೆ ಎಷ್ಟು ಗೊತ್ತಾ?

    ತಿರುಪತಿ: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ತಿರುಪತಿ ದೇವಾಲಯದದಲ್ಲಿ ಶನಿವಾರ ಒಂದೇ ದಿನ ಹುಂಡಿಯಲ್ಲಿ 3 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

    93 ಸಾವಿರಕ್ಕೂ ಹೆಚ್ಚು ಭಕ್ತರು ಶನಿವಾರ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದು, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ವಿಪರೀತ ಜನ ದಟ್ಟನೆ ಇತ್ತು. ಶನಿವಾರ ಒಂದೇ ದಿನ 3 ಕೋಟಿ ರೂ. ಹಣ ಹುಂಡಿಗೆ ಬಿದ್ದಿದ್ದು, ಎಣಿಕೆ ಕಾರ್ಯ ಮುಂದುವರಿಯುತ್ತಿದೆ ಎಂದು ಟಿಟಿಡಿ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ರೈಲ್ವೇ ಮುಂಗಡ ಬುಕ್ಕಿಂಗ್, ಬಸ್ ಬುಕ್ಕಿಂಗ್, ವಿಚರಣೆ ಕೊಠಡಿಯಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ಸಂಖ್ಯೆ ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಪೊಲೀಸರು ಹರಸಾಹಸ ಪಟ್ಟಿದ್ದರು. ದೀರ್ಘ ರಜೆ ರುವ ಹಿನ್ನೆಲೆಯಲ್ಲಿ ಭಕ್ತರು ಜಾಸ್ತಿ ಸಂಖ್ಯೆಯಲ್ಲಿ ಬರುವ ಮಾಹಿತಿ ಇದ್ದರೂ ಭಾರತೀಯ ರೈಲ್ವೇ ಯಾವುದೇ ವಿಶೇಷ ರೈಲನ್ನು ಓಡಿಸದ್ದಕ್ಕೆ ಪ್ರಯಾಣಿಕರು ತಮ್ಮ ಅಸಮಾಧಾನವನ್ನು ಹೊರಹಾಕಿದರು.

    ಬೆಂಗಳೂರು ಮತ್ತು ಚೆನ್ನೈ ಕಡೆಯಿಂದ ಜಾಸ್ತಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಜನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಡೆಯಲ್ಲಿ ಹೆಚ್ಚುವರಿ ಬಸ್ ಗಳನ್ನು ಹಾಕಲಾಯಿತು. ಬಹಳಷ್ಟು ಪ್ರಯಾಣಿಕರು ಸ್ಥಳದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಬಂದಿದ್ದರು ಎಂದು ಆಂಧ್ರಪ್ರದೇಶ ಸಾರಿಗೆ ಇಲಾಖೆಯ ಟ್ರಾಫಿಕ್ ಮ್ಯಾನೇಜರ್ ಭಾಸ್ಕರ್ ರೆಡ್ಡಿ ತಿಳಿಸಿದರು.

    ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದರಿಂದ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಾಗಿತ್ತು.

    ಇದನ್ನೂ ಓದಿ: ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?

  • ರಾಜಸ್ಥಾನದ ದೇವಾಲಯಗಳಿಂದ ಪಾಕ್ ಉಗ್ರರಿಗೆ ಹಣ ರವಾನೆ!

    ರಾಜಸ್ಥಾನದ ದೇವಾಲಯಗಳಿಂದ ಪಾಕ್ ಉಗ್ರರಿಗೆ ಹಣ ರವಾನೆ!

    – ಜನರ ನಂಬಿಕೆಯ ಜೊತೆ ಪಾಕ್ ಐಎಸ್‍ಐ ಆಟ
    – ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣ ಉಗ್ರರಿಗೆ ಸಂದಾಯ

    ಜೈಪುರ: ರಾಜಸ್ಥಾನ ಹೆಸರು ಕೇಳಿದರೆ ಸಾಕು, ಎಲ್ಲರಿಗೂ ನೆನಪಾಗುವುದು ಅಲ್ಲಿನ ಅರಮನೆಗಳು ಮತ್ತು ಮನಮೋಹಕ ಸಂಸ್ಕೃತಿ ವಿಚಾರಗಳು. ಆದರೆ ಈಗ ಅಲ್ಲಿನ ಗ್ರಾಮಗಳ ದೇವಾಲಯಗಳಿಂದ ಪಾಕಿಸ್ತಾನದ ಉಗ್ರರಿಗೆ ಹಣ ರವಾನೆಯಾಗುತ್ತಿರುವ ಶಾಕಿಂಗ್ ವಿಚಾರ ಕೇಳಿಬಂದಿದೆ.

    ಪಾಕಿಸ್ತಾನದಲ್ಲಿನ ಭಯೋತ್ಪಾದಕರಿಗೆ ರಾಜಸ್ಥಾನ ಗಡಿ ಭಾಗದ ಹಳ್ಳಿಗಳ ದೇವಾಲಯಗಳಿಂದ ಹಣ ಸಂಗ್ರಹವಾಗುತ್ತಿದೆ ಎಂಬ ಮಾಹಿತಿ ಈಗ ಗುಪ್ತಚರ ಇಲಾಖೆಯಿಂದ ಬಹಿರಂಗವಾಗಿದೆ.

    ಭಕ್ತರು ದೇವಾಲಯಗಳಲ್ಲಿ ಕಾಣಿಕೆ ಹಾಕುತ್ತಾರೆ ಎನ್ನುವುದು ಎಲ್ಲಿರಿಗೂ ತಿಳಿದಿರುವ ವಿಚಾರ. ಈಗ ಭಕ್ತರ ನಂಬಿಕೆಯ ಮೇಲೆ ಪಾಕಿಸ್ತಾನ ಗೂಢಚರ್ಯೆ ಸಂಸ್ಥೆ ಐಎಸ್‍ಐ ಆಟವಾಡುತ್ತಿದ್ದು, ಐಎಸ್‍ಐನ ಏಜೆಂಟ್ ಗಳು ರಾಜಸ್ಥಾನದ ಗಡಿಯಲ್ಲಿರುವ ಕೆಲವು ಹಳ್ಳಿಗಳ ದೇವಾಲಯಗಳಲ್ಲಿ ಕಾಣಕೆ ಹುಂಡಿಯನ್ನು ಇರಿಸಿದ್ದಾರೆ. ಇಲ್ಲಿ ಸಂಗ್ರಹವಾದ ಹಣ ನೇರವಾಗಿ ಉಗ್ರರ ಕೈ ಸೇರುತ್ತಿದೆ ಎನ್ನುವ ಅಂಶವನ್ನು ರಾಜಸ್ಥಾನ ಗುಪ್ತಚರ ಇಲಾಖೆ ತಿಳಿಸಿದೆ.

    ಪತ್ತೆಯಾಗಿದ್ದು ಹೇಗೆ?
    ಕಳೆದ ವಾರ ಬಾರ್ಮರ್ ಜಿಲ್ಲೆಯ ಗಡಿಭಾಗದ ಗ್ರಾಮವೊಂದರಲ್ಲಿ ಐಎಸ್‍ಐ ಎಜೆಂಟ್ ದೀನಾ ಖಾನ್ ಎಂಬಾತನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಚೋತನ್ ಎಂಬ ಹಳ್ಳಿಯಲ್ಲಿ ಸುಮಾರು 3.5 ಲಕ್ಷ ರೂ. ಕಾಣಿಕೆ ಹುಂಡಿಯಿಂದ ದೇಣಿಗೆ ಸಂಗ್ರಹ ಮಾಡಿ ನಾನು ಹಂಚಿದ್ದೇನೆ ಎಂದು ಹೇಳಿದ್ದಾನೆ.

    ದೀನಾ ಖಾನ್‍ನನ್ನು ನಿಯಂತ್ರಿಸುತ್ತಿದ್ದ ವ್ಯಕ್ತಿಗಳು ಆತನಿಗೆ ಕರೆ ಮಾಡಿ ಹಣವನ್ನು ಹಂಚುವುಂತೆ ನಿರ್ದೇಶಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಾಣಿಕೆ ಹುಂಡಿಯೇ ಯಾಕೆ?
    ಹವಾಲಾ ಮೂಲಕ ಹಣ ಸಾಗಿಸಲು ಈಗ ತುಂಬಾ ಕಷ್ಟವಾಗಿದೆ. ಅಲ್ಲದೇ ಇದರಿಂದ ಸಿಕ್ಕಿಬೀಳುವ ಅಪಾಯ ಹೆಚ್ಚು. ಹೀಗಾಗಿ ಸುಲಭವಾಗಿ ಹಣ ಸಂಗ್ರಹ ಮಾಡಲು ಕಾಣಿಕೆ ಹುಂಡಿಗಳನ್ನು ಇಡುತ್ತಿದ್ದೇವೆ ಎಂದು ಆತ ತಿಳಿಸಿದ್ದಾನೆ.

    ರಾಜಸ್ಥಾನ ಗಡಿ ಭಾಗದಲ್ಲಿರುವ ಹಲವು ದೇವಾಲಯಗಳಲ್ಲಿ ಉಗ್ರರಿಗೆ ಹಣವನ್ನು ಸಂದಾಯ ಮಾಡಲು ಕಾಣಿಕೆ ಡಬ್ಬಿಗಳನ್ನು ಇಟ್ಟಿದ್ದಾರೆ ಎನ್ನುವ ಶಂಕೆಯನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.

  • ನೋಟ್ ಬ್ಯಾನ್ ಬಳಿಕ ಸೋಮವಾರ ತಿಮ್ಮಪ್ಪನ ಹುಂಡಿಗೆ ಬಿತ್ತು ಭಾರೀ ಹಣ

    ನೋಟ್ ಬ್ಯಾನ್ ಬಳಿಕ ಸೋಮವಾರ ತಿಮ್ಮಪ್ಪನ ಹುಂಡಿಗೆ ಬಿತ್ತು ಭಾರೀ ಹಣ

    ತಿರುಪತಿ: ನೋಟ್ ಬ್ಯಾನ್ ಆದ ಬಳಿಕ ಇದೇ ಮೊದಲ ಬಾರಿಗೆ ತಿರುಪತಿ ವೆಂಕಟೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಸೋಮವಾರ ಒಂದೇ ದಿನ ಬರೋಬ್ಬರಿ 4.75 ಕೋಟಿ ರೂ. ಸಂಗ್ರಹವಾಗಿದೆ.

    ವೆಂಕಟೇಶ್ವರ ದೇವರಿಗಾಗಿ ಸಮರ್ಪಿಸುವ ಬೆಳ್ಳಿ, ಬಂಗಾರದ ಜೊತೆಗೆ 2.5 ಕೋಟಿ ರೂ.ನಿಂದ 3 ಕೋಟಿ ರೂ. ವರೆಗೆ ಪ್ರತಿ ದಿನ ಕಾಣಿಕೆ ಸಂಗ್ರಹವಾಗುತಿತ್ತು. ಆದರೆ 1 ಸಾವಿರ ಮತ್ತು 500 ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ತಿರುಪತಿ ದೇವಾಲಯದ ಮೂಲಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿವೆ.

    7 ಅಡಿ ಎತ್ತರದ ಕಾಣಿಕೆ ಹುಂಡಿಯನ್ನು ಸಿಬ್ಬಂದಿ ತೆಗೆದಾಗ ಇಷ್ಟೊಂದು ಮೊತ್ತದ ಹಣಗಳನ್ನು ನೋಡಿ ಆಶ್ಚರ್ಯವಾಗಿತ್ತು. ವಿಶೇಷವಾಗಿ ಎಣಿಕೆ ಮಾಡುವಾಗ ಒಂದೇ ಚೀಲದಲ್ಲಿ 1 ಕೋಟಿ ರೂ. ಮೌಲ್ಯದ ಹಣ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ 2012ರ ಏಪ್ರಿಲ್‍ನಲ್ಲಿ ಶ್ರೀರಾಮ ನವಮಿ ದಿನದಂದು 5.73 ಕೋಟಿ ರೂ. ಕಾಣಿಕೆ ಹಣ ಸಂಗ್ರಹವಾಗಿತ್ತು. ಇದು ಇದೂವರೆಗೆ ಸಂಗ್ರಹವಾದ ಅತಿ ಹೆಚ್ಚು ಕಾಣಿಕೆಯಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

    2016-17ರ ಹಣಕಾಸು ವರ್ಷದಲ್ಲಿ 2,678 ಕೋಟಿ ರೂ. ಅಂದಾಯ ಸಂಗ್ರಹವಾಗಲಿದೆ ಎಂದು ಎಂದು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಅಂದಾಜಿಸಿದೆ. ಈ ವರ್ಷ ಹುಂಡಿಯಿಂದಲೇ 1,010 ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ.

    ಇದನ್ನೂ ಓದಿ: ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?