Tag: ಕಾಣಿಕೆ

  • 93 ಗ್ರಾಂ ಚಿನ್ನ, 3.35 ಕೆಜಿ ಬೆಳ್ಳಿ, 2.58 ಕೋಟಿ ರೂ. ನಗದು ಕಾಣಿಕೆ – ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ!

    93 ಗ್ರಾಂ ಚಿನ್ನ, 3.35 ಕೆಜಿ ಬೆಳ್ಳಿ, 2.58 ಕೋಟಿ ರೂ. ನಗದು ಕಾಣಿಕೆ – ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ!

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನದ (Male Mahadeshwara Temple) ಹುಂಡಿಯಲ್ಲಿ 2 ಕೋಟಿ 58 ಲಕ್ಷ ರೂ.ಗಿಂತಲೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ.

    ಮಹದೇಶ್ವರ ಬೆಟ್ಟದ ದೇವಸ್ಥಾನದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಗಿದ್ದು, ಭಕ್ತರು ಕಳೆದ ಮೂವತ್ತು ದಿನಗಳ ಅವಧಿಯಲ್ಲಿ ಮಹದೇಶ್ವರನಿಗೆ ನಗದು ರೂಪದಲ್ಲಿ ಒಟ್ಟು 2,58,44,097 ರೂ. ಕಾಣಿಕೆ ಸಮರ್ಪಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರದ ಅರಣ್ಯಗಳಲ್ಲಿ ಆನೆ ಗಣತಿ ಶುರು!

    ಇದರ ಜೊತೆಗೆ 93 ಗ್ರಾಂ ಚಿನ್ನ (Gold), 3 ಕೆಜಿ 350 ಗ್ರಾಂ ಬೆಳ್ಳಿಯನ್ನೂ ಸಹ ಭಕ್ತರು ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದಲ್ಲದೇ ಸೌದಿ ಅರೇಬಿಯಾ, ಜಪಾನ್, ನೇಪಾಳ ಹಾಗೂ ಕತಾರ್ ದೇಶಗಳ ಕರೆನ್ಸಿ ನೋಟುಗಳು ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿವೆ.

    ಸದ್ಯ ಇಲ್ಲದ 2,000 ರೂ. ಮುಖಬೆಲೆಯ 25 ನೋಟುಗಳು‌ ಸಹ ಹುಂಡಿಯಲ್ಲಿ ‌ಕಂಡುಬಂದಿವೆ. ಇದನ್ನೂ ಓದಿ: ಶ್ರೀನಿವಾಸಪ್ರಸಾದ್ ಬಿಜೆಪಿ ತೊರೆಯುವ ಯೋಚನೆ ಮಾಡಿರಲಿಲ್ಲ; `ಕೈ’ ವಿರುದ್ಧ ಸಿಡಿದ ಅಳಿಯ ಹರ್ಷವರ್ಧನ್!

  • ಮಂತ್ರಾಲಯ ರಾಯರ ಮಠದಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರಹ

    ಮಂತ್ರಾಲಯ ರಾಯರ ಮಠದಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರಹ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ (Mantralaya) ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swami Mutt) ಕಳೆದ ಒಂದು ತಿಂಗಳಲ್ಲಿ ಭಕ್ತರಿಂದ ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಒಟ್ಟು 3,82,59,839 ರೂ. ಕಾಣಿಕೆ ಸಂಗ್ರಹವಾಗಿದೆ.

    ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3,74,85,859 ರೂ. ಕರೆನ್ಸಿ ನೋಟುಗಳು ಹಾಗೂ 7,73,980 ರೂ. ನಾಣ್ಯಗಳ ಸಂಗ್ರಹವಾಗಿದೆ. 53 ಗ್ರಾಂ ಚಿನ್ನ ಹಾಗೂ 1,200 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿದೇಶಿ ಮಹಿಳೆಯ ಬ್ಯಾಗ್‍ನಲ್ಲಿ ಲಕ್ಷ ಲಕ್ಷ ಹಣ ಪತ್ತೆ!

    ಮುಜರಾಯಿ ಇಲಾಖೆ ಅಧಿಕಾರಿಗಳು, ಗುರುಪಾದ ಕರಸೇವಕರು, ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಕಾಣಿಕೆ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆಗಸ್ಟ್ ತಿಂಗಳಲ್ಲಿ ಒಟ್ಟು 3,76,67,469 ರೂ. ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ಅತಿ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ದಿನವೇ CWMA ಸಭೆ – ನೀರು ಹಂಚಿಕೆಯಲ್ಲಿ ಸಿಗಲಿದ್ಯಾ ರಿಲೀಫ್?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುರುಡುಮಲೆ ವಿನಾಯಕನ ಹುಂಡಿಗೆ 2 ಕಂತೆ ಹಣ ಹಾಕಿದ ಯಡಿಯೂರಪ್ಪ – ಎಲ್ಲರಲ್ಲೂ ಅಚ್ಚರಿ

    ಕುರುಡುಮಲೆ ವಿನಾಯಕನ ಹುಂಡಿಗೆ 2 ಕಂತೆ ಹಣ ಹಾಕಿದ ಯಡಿಯೂರಪ್ಪ – ಎಲ್ಲರಲ್ಲೂ ಅಚ್ಚರಿ

    ಕೋಲಾರ: ಕುರುಡುಮಲೆ ಗಣಪತಿ ದೇವಾಲಯದ (Kurudumale Ganapati Temple) ಹುಂಡಿಗೆ 1 ಲಕ್ಷ ರೂ. ಹಣವನ್ನು ಬಿಎಸ್ ಯಡಿಯೂರಪ್ಪ (BS Yediyurappa) ಹಾಕಿ ಗಮನ ಸೆಳೆದರು.

    ಸಾಮಾನ್ಯವಾಗಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಕಂತೆ ಕಂತೆ ಹಣ ಹಾಕೋದನ್ನು ನಾವು ನೋಡಿದ್ದೇವೆ. ಆದರೆ ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕುರುಡುಮಲೆ ವಿನಾಯಕ ದೇವಾಲಯದ ಹುಂಡಿಗೆ ಯಡಿಯೂರಪ್ಪ 2 ಕಂತೆ ಎಂದರೆ 1 ಲಕ್ಷ ರೂ. ಹಣವನ್ನು ಹಾಕಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ವಿನಾಯಕನ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ ಯಡಿಯೂರಪ್ಪ, ದೇವರ ದರ್ಶನಕ್ಕೂ ಮುನ್ನ ದೇವಾಲಯದ ಪ್ರಾಂಗಣದಲ್ಲಿದ್ದ ಹುಂಡಿಗೆ 2 ಕಂತೆ ಹಣ ಹಾಕಿದರು. ಇದು ಸಾಕಷ್ಟು ಅಚ್ಚರಿಗೆ ಕಾರಣವಾಯಿತು. ಇದನ್ನೂ ಓದಿ: ರಾಜ್ಯದ 28 ಲೋಕಸಭಾ ಸ್ಥಾನದಲ್ಲೂ ಬಿಜೆಪಿ ಗೆಲುವು ಖಚಿತ: ಕಟೀಲ್ ವಿಶ್ವಾಸ

    ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಜನಾಂದೋಲನಾ ಮಾಡಲು ನಗರದಲ್ಲಿ ಚಾಲನೆ ನೀಡಿದರು. ಗೌರಿ-ಗಣೇಶ ಹಬ್ಬದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಲು ಈಗಾಗಲೇ ಸಿದ್ಧತೆಗಳನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಸಚಿವ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಈಶ್ವರಪ್ಪ ಮತ್ತಿತರರು ಭಾಗಿಯಾಗಿದ್ದರು. ಇದನ್ನೂ ಓದಿ: ಹಣ ತೆಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೋ ಇಲ್ವೋ? ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು: ಜಗದೀಶ್ ಶೆಟ್ಟರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 6 ವರ್ಷಗಳ ಹಿಂದೆ ಹುಂಡಿಯಲ್ಲಿತ್ತು 247 ರೂ. – ಈಗ ಅಂಜನಾದ್ರಿಗೆ 6 ಕೋಟಿಗೂ ಅಧಿಕ ಆದಾಯ

    6 ವರ್ಷಗಳ ಹಿಂದೆ ಹುಂಡಿಯಲ್ಲಿತ್ತು 247 ರೂ. – ಈಗ ಅಂಜನಾದ್ರಿಗೆ 6 ಕೋಟಿಗೂ ಅಧಿಕ ಆದಾಯ

    ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಅಂಜನಾದ್ರಿ ಪರ್ವತವನ್ನು (Anjanadri Hill) ಸರ್ಕಾರ ವಶಪಡಿಸಿಕೊಂಡು 6 ವರ್ಷಗಳು ಕಳೆದಿದ್ದು ಈ ಆರು ವರ್ಷಗಳಲ್ಲಿ ಭಕ್ತರಿಂದ 6 ಕೋಟಿ ಆದಾಯ ಸಂದಾಯವಾಗುವ ಮೂಲಕ ಅಭಿವೃದ್ಧಿಗೆ ಹೊಸ ಭರವಸೆಯನ್ನು ಮೂಡಿಸಿದೆ.

    ಕೊಪ್ಪಳದ (Koppala) ಗಂಗಾವತಿ (Gangavati) ತಾಲೂಕಿನ ಚಿಕ್ಕರಾಂಪೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಜನಾದ್ರಿ ಪರ್ವತವು ರಾಮಾಯಣದಲ್ಲಿ ಬರುವ ಹನುಮಂತ ಜನಿಸಿದ ಸ್ಥಳ ಎಂದು ಕರೆಯಲಾಗುತ್ತಿದೆ. ಹಂಪಿಯ ಸಮೀಪದಲ್ಲಿ ಇರುವ ಅಂಜನಾದ್ರಿ ಪರ್ವತಕ್ಕೆ ಸಾಕಷ್ಟು ಇತಿಹಾಸ ಇರುವುದರಿಂದ ಸ್ಥಳೀಯ ಭಕ್ತರು ಸೇರಿದಂತೆ ದೇಶ, ವಿದೇಶಗಳಿಂದ ಕೂಡ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

    ವಾರದ ಕೊನೆಯ ದಿನಗಳಾದ ಶನಿವಾರ, ಭಾನುವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಪರ್ವತಕ್ಕೆ ಆಗಮಿಸಿ, ಆಂಜನೇಯ ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಾರೆ. ಅಯೋಧ್ಯೆಯಷ್ಟೇ ಪವಿತ್ರತೆಯನ್ನು ಹೊಂದಿರುವ ಅಂಜನಾದ್ರಿ ಪರ್ವತವನ್ನು ಕಳೆದ 6 ವರ್ಷಗಳಿಂದ ತಾಲೂಕು ಆಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರು ನಿರ್ವಹಣೆ ಮಾಡುತ್ತಿದ್ದು, ಭಕ್ತರಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

    ತಾಲೂಕು ಆಡಳಿತ ವಶಕ್ಕೆ:
    ಸುಮಾರು ವರ್ಷಗಳಿಂದ ಖಾಸಗಿ ಒಡೆತನದಲ್ಲಿ ನಡೆಸಲಾಗುತ್ತಿದ್ದ ಅಂಜನಾದ್ರಿ ಬೆಟ್ಟದ ದೇವಸ್ಥಾನವನ್ನು 2018 ಜುಲೈ 23 ರಂದು ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ. ಜಿಲ್ಲಾಡಳಿತವೇ ದೇವಸ್ಥಾನ ನಿರ್ವಹಣೆಯ ಹೊಣೆ ಹೊತ್ತುಕೊಂಡಿದೆ. ಖಾಸಗಿ ಒಡೆತನದ ಟ್ರಸ್ಟ್ ವತಿಯಿಂದ ವಶಕ್ಕೆ ಪಡೆದುಕೊಂಡಿರುವ ವೇಳೆಯಲ್ಲಿ ದೇವಸ್ಥಾನ ಹುಂಡಿಯಲ್ಲಿ ಕೇವಲ 247 ರೂ. ಕಾಣಿಕೆ ಮಾತ್ರ ಇತ್ತು. ಸದ್ಯ ದೇವಸ್ಥಾನದ ಹುಂಡಿ ಹಣ, ಪಾರ್ಕಿಂಗ್ ಹಣ, ಲಾಡು, ತೀರ್ಥ ಪ್ರಸಾದಗಳ ಮಾರಾಟ, ವಿವಿಧ ಸೇವೆಗಳಿಂದ ಬರುವ ಹಣ ಸೇರಿ ಒಟ್ಟು 6 ವರ್ಷಗಳ ಅವಧಿಯಲ್ಲಿ 6 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಇದನ್ನೂ ಓದಿ: ಮಳೆ ಅಬ್ಬರ – ಈ ಜಿಲ್ಲೆಗಳಲ್ಲಿ ಸೋಮವಾರ ಶಾಲಾ, ಕಾಲೇಜುಗಳಿಗೆ ರಜೆ

    ತಾಲೂಕು ಆಡಳಿತ ದೇವಸ್ಥಾನ ನಿರ್ವಹಣೆಯ ಹೊಣೆ ತೆಗೆದುಕೊಂಡ 2018ರ ಜುಲೈ 23 ರಿಂದ ಮಾರ್ಚ್ 31 ರವರೆಗೆ 73,09,505 ರೂ. ಸಂಗ್ರಹವಾಗಿವೆ. 2019ರ ಏಪ್ರಿಲ್ 1 ರಿಂದ 2020ರ ಮಾರ್ಚ್ 31 ರವರೆಗೆ 1,12,62,404 ರೂ. ಸಂಗ್ರಹವಾಗಿದೆ. 2020ರ ಏಪ್ರಿಲ್ 1 ರಿಂದ 2021ರ ಮಾರ್ಚ್ 31 ರವರೆಗೆ 78,95,030 ರೂ. ಸಂಗ್ರಹವಾಗಿದೆ. 2021ರ ಏಪ್ರಿಲ್ 1 ರಿಂದ 2022ರ ಮಾರ್ಚ್ 31 ರವರೆಗೆ 1,29,42,104 ರೂ. ಸಂಗ್ರಹವಾಗಿದೆ. 2022 ಮಾರ್ಚ್ 1 ರಿಂದ 2023ರ ಮಾರ್ಚ್ 31 ರವರೆಗೆ 2,84,32,028 ರೂ. ಸಂಗ್ರಹವಾಗಿದೆ.

    ಒಟ್ಟು 6 ವರ್ಷಗಳ ಅವಧಿಯಲ್ಲಿ 6,78,40,941 ರೂ. ಸಂಗ್ರಹವಾಗಿದೆ. ಇದರಲ್ಲಿ ದೇವಸ್ಥಾನ ನಿರ್ವಹಣೆ, ಸಿಬ್ಬಂದಿಯ ವೇತನ, ನಾನಾ ಖರ್ಚು ವೆಚ್ಚಗಳು ಸೇರಿದಂತೆ ಒಟ್ಟು 3,83,49,281 ರೂ. ಖರ್ಚು ಮಾಡಲಾಗಿದೆ. ಇನ್ನುಳಿದ 2,94,91,659 ರೂ. ಬ್ಯಾಂಕ್‌ಗಳಲ್ಲಿ ಉಳಿತಾಯ ಮಾಡಲಾಗಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣ – ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ ಮುಕ್ತಾಯ- ಕೋಟ್ಯಂತರ ರೂ. ಕಾಣಿಕೆ ಸಂಗ್ರಹ

    ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ ಮುಕ್ತಾಯ- ಕೋಟ್ಯಂತರ ರೂ. ಕಾಣಿಕೆ ಸಂಗ್ರಹ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ (Mantralaya) ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy matha) ಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.

    ಅಕ್ಟೋಬರ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು, ಒಟ್ಟು 1,98,17,614 ರೂ. ಸಂಗ್ರಹವಾಗಿದೆ. ಸಂಗ್ರಹವಾದ ಕಾಣಿಕೆಯಲ್ಲಿ 4,40,660 ರೂ. ನಾಣ್ಯಗಳು ಹಾಗೂ 1,93,77,054 ರೂ. ನೋಟುಗಳಿವೆ. ಜೊತೆಗೆ 128 ಗ್ರಾಂ ಬಂಗಾರ, 810 ಗ್ರಾಂ ಬೆಳ್ಳಿಯಿದೆ. ಇದನ್ನೂ ಓದಿ: ಬಿಜೆಪಿಗೆ ಖರ್ಗೆ ಆಯ್ಕೆಯ ಕೌಂಟರ್ ಪ್ಲಾನ್ – ಹೊಸ ದಾಳ ಉರುಳಿಸಲು ಮುಂದಾದ ‘ಕೈ’ ಪಾಳಯ

    ಇದು ಸೆ. 29 ರಿಂದ ಅ. 18ರವರೆಗಿನ 20 ದಿನಗಳ ಕಾಣಿಕೆ ಸಂಗ್ರವಾಗಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ಸಿಬ್ಬಂದಿ, ಭಕ್ತರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಮಗುವಿಗೆ ಮರುಜೀವ ಕೊಟ್ಟ ಬೆಂಗಳೂರಿನ ವೈದ್ಯರು

    Live Tv
    [brid partner=56869869 player=32851 video=960834 autoplay=true]

  • ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

    ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹರಿದುಬಂದಿದೆ. ಆಗಸ್ಟ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಒಟ್ಟು 2,78,80,586 ರೂಪಾಯಿ ಸಂಗ್ರಹವಾಗಿದೆ.

    ಸಂಗ್ರಹವಾದ ಕಾಣಿಕೆಯಲ್ಲಿ 5,89,300 ರೂ.ಗಳಷ್ಟು ನಾಣ್ಯಗಳು ಹಾಗೂ 2,72,91,286 ರೂ.ನಷ್ಟು ನೋಟುಗಳಿವೆ. 65 ಗ್ರಾಂ. ಬಂಗಾರ, 1.15 ಕೆ.ಜಿ ಬೆಳ್ಳಿಯಿದೆ. ಜುಲೈ ತಿಂಗಳಲ್ಲಿ ಒಟ್ಟು 1,97,21,825 ರೂ. ಸಂಗ್ರಹವಾಗಿತ್ತು, ಜೂನ್‌ನಲ್ಲಿ 2,52,33,205 ರೂಪಾಯಿ ಹಾಗೂ ಮೇ ತಿಂಗಳಲ್ಲಿ 2,27,42,499 ರೂಪಾಯಿ ಸಂಗ್ರಹವಾಗಿತ್ತು. ಇದನ್ನೂ ಓದಿ: ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ

    ಈ ಬಾರಿ ಭಕ್ತರೊಬ್ಬರು 10 ರೂ. ನೋಟುಗಳಿಂದ ಮಾಡಿದ ಮಾಲೆಯನ್ನು ಕಾಣಿಕೆ ಹುಂಡಿಯಲ್ಲಿ ಹಾಕಿದ್ದು ವಿಶೇಷ ಕಾಣಿಕೆ ಎನಿಸಿದೆ ಎಂದು ಹುಂಡಿ ಎಣಿಕೆ ಕಾರ್ಯ ಮುಕ್ತಾಯದ ನಂತರ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.

    ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ತಿರುಪತಿಗೆ ಒಂದೇ ತಿಂಗಳಲ್ಲಿ 140 ಕೋಟಿ ದಾಖಲೆ ಕಾಣಿಕೆ ಸಂಗ್ರಹ

    ತಿರುಪತಿಗೆ ಒಂದೇ ತಿಂಗಳಲ್ಲಿ 140 ಕೋಟಿ ದಾಖಲೆ ಕಾಣಿಕೆ ಸಂಗ್ರಹ

    ಅಮರಾವತಿ: ಜುಲೈ ತಿಂಗಳಲ್ಲಿ ತಿರುಪತಿ ದೇವಸ್ಥಾನ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ದೇಗುಲದ ಇತಿಹಾಸದಲ್ಲೇ ಮೊದಲ ಬಾರಿಗೆ ಮಾಸಿಕ ಆದಾಯ 140 ಕೋಟಿ ಕಾಣಿಕೆ ಸಂಗ್ರಹವಾಗಿದೆ.

    ದೇಶದ ಶ್ರೀಮಂತ ದೇಗುಲಗಳಲ್ಲಿ ತಿರುಪತಿ ತಿಮ್ಮಪ್ಪನ ದೇಗುಲವೂ ಒಂದು. ಫೆಬ್ರವರಿಯಲ್ಲಿ 79 ಕೋಟಿ, ಮಾರ್ಚ್ನಲ್ಲಿ 128 ಕೋಟಿ, ಏಪ್ರಿಲ್‌ನಲ್ಲಿ 127 ಕೋಟಿ ಹಾಗೂ ಮೇ ತಿಂಗಳಲ್ಲಿ 130.29 ಕೋಟಿ ರೂ. ಹಣ ಸಂಗ್ರಹವಾಗಿತ್ತು.

    ಕೊರೊನಾ ನಂತರ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಜುಲೈ ತಿಂಗಳಲ್ಲಿ ಬರೋಬ್ಬರಿ 139.46 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಅಂದರೆ ಕಳೆದ 6 ತಿಂಗಳಲ್ಲಿ 726 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 28 ದಿನಗಳಲ್ಲಿ ಮಾದಪ್ಪನಿಗೆ ಹರಿದು ಬಂತು ಎರಡೂವರೆ ಕೋಟಿ ರೂ.ಗಿಂತಲೂ ಹೆಚ್ಚು ಕಾಣಿಕೆ

    28 ದಿನಗಳಲ್ಲಿ ಮಾದಪ್ಪನಿಗೆ ಹರಿದು ಬಂತು ಎರಡೂವರೆ ಕೋಟಿ ರೂ.ಗಿಂತಲೂ ಹೆಚ್ಚು ಕಾಣಿಕೆ

    ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮಾ.11ರಂದು ತಡರಾತ್ರಿಯವರೆಗೂ ನಡೆದಿದ್ದು, 28 ದಿನಗಳಲ್ಲಿ ಒಟ್ಟು 2.83 ಕೋಟಿ ರೂ. ಸಂಗ್ರಹವಾಗಿದೆ.

    ಹುಂಡಿ ಎಣಿಕೆ ಕಾರ್ಯದಲ್ಲಿ 300 ಸಿಬ್ಬಂದಿ ಪಾಲ್ಗೊಂಡಿದ್ದರು. ಹೆಚ್ಚಿನ ಮೊತ್ತವಿದ್ದ ಹಿನ್ನೆಲೆ ಶುಕ್ರವಾರ ತಡರಾತ್ರಿ ತನಕ ನಡೆದ ಎಣಿಕೆ ಕಾರ್ಯದಲ್ಲಿ 2,83,12,841 ರೂ. ನಗದು ಸಂಗ್ರಹವಾಗಿದೆ. 73 ಗ್ರಾಂ ಚಿನ್ನ, 3 ಕೆ.ಜಿ 800 ಗ್ರಾಂ ಬೆಳ್ಳಿ ದೊರೆತಿದೆ. ಶಿವರಾತ್ರಿ ಮಹೋತ್ಸವಕ್ಕೆ ಹರಿದುಬಂದ ಭಕ್ತ ಸಾಗರ ಕಾಣಿಕೆ ಅರ್ಪಿಸಿದೆ. ಇದನ್ನೂ ಓದಿ: ಸದನ ಬೀಗರ ಮನೆಯಲ್ಲ – ಸಚಿವರ ಗೈರಿಗೆ ಸಭಾಪತಿಗಳು ಗರಂ

    ಇದಕ್ಕೂ ಮುನ್ನ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಫೆಬ್ರವರಿ 10ರಂದು ನಡೆದಿತ್ತು. ಆಗ 1.87 ಕೋಟಿ ರೂ. ಸಂಗ್ರಹವಾಗಿತ್ತು. ಇದನ್ನೂ ಓದಿ: ಹೆಚ್‍ಡಿಕೆ ಸದನದಲ್ಲಿ ಸದ್ದು ಮಾಡಿದ್ರೂ ನಿಂತಿಲ್ಲ ಜೂಜಾಟ- ಪೊಲೀಸ್ ಅಧಿಕಾರಿಯೇ ಕಿಂಗ್‍ಪಿನ್

  • ಕೊರೊನಾ ಕಾಲದಲ್ಲೂ ಮಾದಪ್ಪನ ಹುಂಡಿಯಲ್ಲಿ 2.62 ಕೋಟಿ ಸಂಗ್ರಹ

    ಕೊರೊನಾ ಕಾಲದಲ್ಲೂ ಮಾದಪ್ಪನ ಹುಂಡಿಯಲ್ಲಿ 2.62 ಕೋಟಿ ಸಂಗ್ರಹ

    – 56 ದಿನಗಳಲ್ಲಿ 2.62 ಕೋಟಿ ಸಂಗ್ರಹ

    ಚಾಮರಾಜನಗರ: ಕೊರೊನಾ ಕಾಲದಲ್ಲೂ ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದ್ದು, ಬರೋಬ್ಬರಿ 2.62 ಕೋಟಿ ರೂ. ಸಂಗ್ರಹವಾಗಿದೆ.

    ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ಗುರುವಾರ ಬೆಳಗ್ಗೆ 7.30ರಿಂದ ರಾತ್ರಿ 11.30ರ ವರೆಗು ನಡೆದಿದ್ದು, ದೇವಾಲಯ ತೆರೆದಿದ್ದ ಒಟ್ಟು 56 ದಿನಗಳಲ್ಲಿ 2,62,76,718 ರೂ. ಸಂಗ್ರಹವಾಗಿದೆ. 170 ಗ್ರಾಂ ಚಿನ್ನ, 3.7 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಪೇಟೆಯಲ್ಲಿ ಮಳೆ ಅವಾಂತರ – KSRTC ಬಸ್ ನಿಲ್ದಾಣ ಸಂಪೂರ್ಣ ಜಲಾವೃತ

    ಯಾವುದೇ ಸೇವೆಗೆ, ರಥೋತ್ಸವಕ್ಕೆ ಅವಕಾಶ ಇಲ್ಲದಾಗಿಯೂ ಭಕ್ತರು ದೇವರ ದರ್ಶನ ಮಾತ್ರ ಪಡೆದು ಕಾಣಿಕೆ ರೂಪದಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಕೊರೊನಾ ಹಿನ್ನೆಲೆ ವಿವಿಧ ಸೇವೆ ಹಾಗೂ ರಥೋತ್ಸವಗಳನ್ನು ರದ್ದುಪಡಿಸಲಾಗಿತ್ತು. ಆದರೂ ಭಾರೀ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ.

  • ಕುಡಿಯಲ್ಲ, ಆದ್ರೆ ಸಂಜೆ ಸ್ವಲ್ಪ ಕುಡಿಯುತ್ತೇನೆ: ಹಾಸನಾಂಬೆಗೆ ಪ್ರಾರ್ಥನೆ ಸಲ್ಲಿಸಿದ ಕುಡುಕ

    ಕುಡಿಯಲ್ಲ, ಆದ್ರೆ ಸಂಜೆ ಸ್ವಲ್ಪ ಕುಡಿಯುತ್ತೇನೆ: ಹಾಸನಾಂಬೆಗೆ ಪ್ರಾರ್ಥನೆ ಸಲ್ಲಿಸಿದ ಕುಡುಕ

    – 22.79 ಲಕ್ಷ ಕಾಣಿಕೆ ಸಂಗ್ರಹ

    ಹಾಸನ: ಹಾಸನಾಂಬೆಗೆ ಭಕ್ತರು ವಿವಿಧ ರೀತಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಅದೇ ರೀತಿ ಈ ಬಾರಿ ವ್ಯಕ್ತಿಯೊಬ್ಬ ಕುಡಿಯುವುದನ್ನು ಬಿಡುತ್ತೇನೆ, ಆದ್ರೆ ದಿನಕ್ಕೆ ಸ್ವಲ್ಪ ಮಾತ್ರ ಕುಡಿಯುತ್ತೇನೆ ಎಂದು ಬೇಡಿಕೊಂಡಿದ್ದಾನೆ.

    ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಸ್ಥಾನದ ಬಾಗಿಲು ಮುಚ್ಚಿದ್ದು, ಆಡಳಿತ ಮಂಡಳಿ ಭಕ್ತರು ದೇವಿಗೆ ಸಲ್ಲಿಸಿರುವ ಕೋರಿಕೆ ಹಾಗೂ ಕಾಣಿಕೆಯನ್ನು ಪರಿಶೀಲಿಸಿದ್ದಾರೆ. ತರಹೇವಾರಿ ಕೋರಿಕೆಯ ಪತ್ರಗಳು ಬಂದಿದ್ದು, ಇದರಲ್ಲಿ ಕುಡುಕನೊಬ್ಬನ ಪ್ರಾರ್ಥನೆ ಗಮನ ಸೆಳೆದಿದೆ. ಕುಡಿಯುವುದನ್ನು ಬಿಡುತ್ತೇನೆ. ಆದರೆ ಸಂಜೆ ಸ್ವಲ್ಪ ಸ್ವಲ್ಪ ಕುಡಿಯುತ್ತೇನೆ ಎಂದು ಬರೆದು ಹಾಕಿದ್ದಾನೆ.

    ವಿವಿಧ ರೀತಿಯ ನಿವೇದನೆ ಸಲ್ಲಿಸಿ ಚೀಟಿ ಹಾಕಿರುವ ಭಕ್ತರು, ಕೌಟುಂಬಿಕ ಸಮಸ್ಯೆ, ಸಾಲ ತೀರಿಸು, ಹಣಕಾಸು ಸಮಸ್ಯೆ ಬಗೆಹರಿಸು, ತಾಯಿ ಒಳ್ಳೆ ಕೆಲಸ ಕೊಡಿಸು ಹಾಸನಾಂಬೆ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನೂ ಕೆಲವರು ಕೊರೊನಾ ಹೋಗಲಾಡಿಸು ಎಂದು ಕೇಳಿಕೊಂಡಿದ್ದು, ಪತ್ನಿ ಮಕ್ಕಳ ಒಂದು ಮಾಡು, ನನ್ನ ಗಂಡ ಕುಡಿಯುವುದನ್ನು ಬಿಡಿಸು ಎಂದು ಪತ್ರದ ಮೂಲಕ ನಿವೇದನೆ ಮಾಡಿಕೊಂದ್ದಾರೆ. ಇದೇ ರೀತಿ ಹಾಸನಾಂಬೆ ದರ್ಶನಕ್ಕೆ ಪಾಸ್ ವಿತರಣೆ ತಾರತಮ್ಯದ ವಿರುದ್ಧ ಪತ್ರದ ಮೂಲಕ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

    ಪತ್ರಿವರ್ಷ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಬರುತ್ತಿದ್ದ ಆದಾಯ, ಈ ಬಾರಿ ಇಳಿಕೆ ಕಂಡಿದ್ದು, ಕೇವಲ 22 ಲಕ್ಷ ರೂ.ಕಾಣಿಕೆ ಸಂಗ್ರಹವಾಗಿದೆ. ಈ ಬಾರಿ ಸಾರ್ವಜನಿಕ ದರ್ಶನ ನಿಷೇಧದಿಂದ ಆದಾಯ ಕಡಿಮೆಯಾಗಿದೆ. ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಬಾರಿ 22 ಲಕ್ಷಕ್ಕೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.

    ಹಾಸನಾಂಬ ದೇವಿಯ ಹುಂಡಿಗೆ 21,34,052, ಸಿದ್ದೇಶ್ವರ ಸ್ವಾಮಿ ದೇವಾಲಯ ಹುಂಡಿಗೆ 1,45,720 ರೂ. ಒಟ್ಟು 22,79,772 ರೂ. ಕಾಣಿಕೆ ಸಂಗ್ರಹವಾಗಿದೆ. ಈ ಬಾರಿ 12 ದಿನ ಹಾಸನಾಂಬ ದರ್ಶನೋತ್ಸವ ಆಯೋಜಿಸಲಾಗಿತ್ತು. ಆದರೆ ದೇವಾಲಯದ ಒಳಗೆ ನೇರವಾಗಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರಲಿಲ್ಲ. ಬದಲಿಗೆ ನಗರದ ಕೆಲವೆಡೆ ಎಲ್‍ಇಡಿ ಪರದೆ ಮೂಲಕ ಪ್ರದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಗಣ್ಯರಿಗೆ ಮಾತ್ರ ನೇರ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು. ಜಾತ್ರೆ ಮುಕ್ತಾಯಕ್ಕೆ ಎರಡು ದಿನ ಬಾಕಿ ಇರುವಾಗ ಸಾರ್ವಜನಿಕ ರು ಹಾಗೂ ಭಕ್ತರ ಮನವಿ ಮೇರೆಗೆ ದೇವಾಲಯಕ್ಕೆ ಪ್ರವೇಶ ಕಲ್ಪಿಸಿ, ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದರ್ಶನ ಇಲ್ಲವಾದರೂ ದೇವಾಲಯದ ಆವರಣ ಹಾಗೂ ಮುಂಭಾಗ ಇರಿಸಲಾಗಿದ್ದ ಕಾಣಿಕೆ ಸಂಗ್ರಹ ಹುಂಡಿಗೆ ಭಕ್ತರು ಹಾಕಿದ್ದ ಕಾಣಿಕೆ 21 ಲಕ್ಷ ಅಗಿದ್ದು, ಕಳೆದ ಬಾರಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದ ಕಾರಣ 3 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹವಾಗಿತ್ತು.

    40 ಸಾವಿರ ಭಕ್ತರಿಂದ ದರ್ಶನ:
    ಈ ಬಾರಿ ಕೇವಲ ಎರಡು ದಿನ ಮಾತ್ರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 40 ಸಾವಿರ ಭಕ್ತರು ದರ್ಶನ ಪಡೆದಿದ್ದಾರೆ. ಆದರೆ ಕಳೆದ ಬಾರಿ 5 ಲಕ್ಷ ಭಕ್ತರು ದರ್ಶನ ಪಡೆದಿದ್ದರು. ಅಲ್ಲದೆ ಆನ್‍ಲೈನ್‍ನಲ್ಲಿ 8.80 ಲಕ್ಷ ಬಾರಿ ಯೂಟ್ಯೂಬ್ ಮೂಲಕ ದರ್ಶನ ಪಡೆದಿದ್ದರು.