Tag: ಕಾಡೆಮ್ಮೆ

  • ಗದ್ದೆ ಬದಿಯಲ್ಲಿದ್ದ ಕಾಡೆಮ್ಮೆಯನ್ನು ಕರೆದ್ರು – ಬರುತ್ತಿದ್ದಂತೆ ಅಂಗಡಿಗೆ ನುಗ್ಗಿ ಶಟರ್‌ ಎಳೆದ್ರು

    ಗದ್ದೆ ಬದಿಯಲ್ಲಿದ್ದ ಕಾಡೆಮ್ಮೆಯನ್ನು ಕರೆದ್ರು – ಬರುತ್ತಿದ್ದಂತೆ ಅಂಗಡಿಗೆ ನುಗ್ಗಿ ಶಟರ್‌ ಎಳೆದ್ರು

    ಚಿಕ್ಕಮಗಳೂರು: ಕಾಡೆಮ್ಮೆಯನ್ನ ಕೂಗಿ-ಕೂಗಿ ಕರೆದ ಗ್ರಾಮಸ್ಥರು ಕಾಡೆಮ್ಮೆ ಗ್ರಾಮದೊಳಗೆ ಬರುತ್ತಿದ್ದಂತೆ ಭಯಗೊಂಡು ಅಂಗಡಿಯೊಳಗೆ ಹೋಗಿ ರೋಲಿಂಗ್ ಶಟರ್‌ ಎಳೆದುಕೊಂಡ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಕೂಳೂರು ಗ್ರಾಮದಲ್ಲಿ ನಡೆದಿದೆ.

    ಜಯಪುರ ಸಮೀಪದ ಕೂಳುರು, ಧರೆಕೊಪ್ಪ ಭಾಗದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಕಾಡೆಮ್ಮೆಯೊಂದು ಬೀಡು ಬಿಟ್ಟಿತ್ತು. ಆಗಾಗ ಗ್ರಾಮಸ್ಥರ ಕಣ್ಣಿಗೂ ಬೀಳುತ್ತಿತ್ತು.  ಗ್ರಾಮದ ಬಳಿ ಕಾಡೆಮ್ಮೆ ಆಗಾಗ ಕಂಡು ಕಾಡಂಚಿನಲ್ಲಿ ಮರೆಯಾಗುತ್ತಿತ್ತು. ಆದರೆ ಇಂದು ಕೂಳೂರು ಗ್ರಾಮದ ಗದ್ದೆ ಬದಿಯಲ್ಲಿ ನಿಂತಿದ್ದ ಕಾಡೆಮ್ಮೆಯನ್ನ ಸ್ಥಳೀಯರು ಕೂಗಿ-ಕೂಗಿ ಕರೆದಿದ್ದಾರೆ.

    ಸ್ಥಳೀಯರು ಕೂಗುತ್ತಿದ್ದಂತೆ ಗದ್ದೆ ಬದಿಯಿಂದ ಅತಿಥಿಯಂತೆ ಕಾಡೆಮ್ಮೆ ನೇರವಾಗಿ ಗದ್ದೆಗಳನ್ನ ದಾಟಿ ಗ್ರಾಮದೊಳಕ್ಕೆ ಎಂಟ್ರಿ ಕೊಟ್ಟಿದೆ. ಕರೆದ ಕೂಡಲೇ ಕಾಡೆಮ್ಮೆ ನೇರ ಗ್ರಾಮದೊಳಕ್ಕೆ ಬಂದಿದ್ದನ್ನು ಕಂಡು ಸ್ಥಳೀಯರು ಭಯದಿಂದ ಓಡಿ ಹೋಗಿದ್ದಾರೆ. ಅಂಗಡಿ ಬಾಗಿಲಲ್ಲಿದ್ದ ಯುವಕರು ಅಂಗಡಿಯೊಳಕ್ಕೆ ಹೋಗಿ ರೋಲಿಂಗ್ ಶಟರ್‌ ಎಳೆದುಕೊಂಡಿದ್ದಾರೆ.

    ಗ್ರಾಮದೊಳಗೆ ಬಂದ ಕಾಡೆಮ್ಮೆ ಅಲ್ಲಿಂದ ಮತ್ತೆ ಕಾಡಂಚಿನಲ್ಲಿ ಕಣ್ಮರೆಯಾಗಿದೆ. ದೈತ್ಯ ಕಾಡೆಮ್ಮೆ ಕರೆದ ಕೂಡಲೇ ಬಂದಿದ್ದನ್ನು ಕಂಡು ಸ್ಥಳೀಯರು ಆತಂಕ ಹಾಗೂ ಆಶ್ಚರ್ಯಕ್ಕೀಡಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡೆಮ್ಮೆ ಹಾವಳಿ ಹೆಚ್ಚಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಚಿಕ್ಕಮಗಳೂರು ನಗರದ ಅಂಚಿಗೂ ಬಂದಿದ್ದ ಕಾಡೆಮ್ಮೆ ಗ್ರಾಮಗಳ ಮಧ್ಯೆ ರಾಜಾರೋಷವಾಗಿ ಓಡಾಡಿತ್ತು. ಇದನ್ನ ಕಂಡ ಸ್ಥಳೀಯರು ತೀವ್ರ ಆತಂಕಕ್ಕೀಡಾಗಿದ್ದರು.

     

    ಮಲೆನಾಡು ಭಾಗದಲ್ಲಿ ಹಲವು ಕಾಡಂಚಿನ ಗ್ರಾಮಗಳಲ್ಲಿ ಕಾಡೆಮ್ಮೆ ಕಾಟ ಮಿತಿಮೀರಿದೆ. ಇಂದು ಕೂಡ ಕರೆದ ಕೂಡಲೇ ಗ್ರಾಮಕ್ಕೆ ಎಂಟ್ರಿ ಕೊಟ್ಟ ಕಾಡೆಮ್ಮೆಯನ್ನು ಕಂಡು ಸ್ಥಳೀಯರಿಗೆ ಅಚ್ಚರಿ ಜೊತೆ ಭಯ ತರಿಸಿದೆ. ಕರೆದ ಕೂಡಲೇ ಬಂದ ಕಾಡೆಮ್ಮೆ ಕಂಡು ಕಾಡೆಮ್ಮೆಗಳು ನಗರ ಪ್ರದೇಶಗಳಿಗೆ ಹೊಂದಿಕೊಳ್ಳುತ್ತಿವೆಯಾ? ಮುಂದಿನ ದಿನಗಳಲ್ಲಿ ಕಾಡೆಮ್ಮೆಗಳು ಗ್ರಾಮಗಳಿಗೆ ಬರುವ ಸಂಖ್ಯೆ ಕೂಡ ಹೆಚ್ಚಾಗಲಿದ್ಯಾ ಎಂಬ ಅನುಮಾನ ಮಲೆನಾಡಿಗರನ್ನ ಕಾಡಲಾರಂಭಿಸಿದೆ.

  • ಕಾಫಿನಾಡ ಕಾಡಲ್ಲಿ ಬಂಗಾರದ ಕಾಡೆಮ್ಮೆ ಪತ್ತೆ

    ಕಾಫಿನಾಡ ಕಾಡಲ್ಲಿ ಬಂಗಾರದ ಕಾಡೆಮ್ಮೆ ಪತ್ತೆ

    ಚಿಕ್ಕಮಗಳೂರು: 1980-90 ದಶಕದಲ್ಲಿ ಕಣ್ಮರೆಯಾಗಿದ್ದ ಅಪರೂಪದ ಕಾಟಿ ತಳಿಯ ಕಾಡೆಮ್ಮೆ ಸಂತತಿ ಮತ್ತೆ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಮುತ್ತೋಡಿ ವಲಯದಲ್ಲಿ ಪತ್ತೆಯಾಗಿದೆ.

    ಕಾಡೆಮ್ಮೆಗಳು ಬಹುತೇಕ ಕಪ್ಪು ಬಣ್ಣದಿಂದ ಕೂಡಿರುತ್ತವೆ. ಆದರೆ ಕಾಟಿ ತಳಿಯ ಈ ಕಾಡೆಮ್ಮೆ ಬಂಗಾರದ ಬಣ್ಣದಿಂದ ಕಂಗೊಳಿಸುತ್ತಿದೆ. ಈ ಅಪರೂಪದ ಕಾಡೆಮ್ಮೆ ಬಣ್ಣ ಹಾಗೂ ಮೈಕಟ್ಟು ನೋಡುಗರಲ್ಲಿ ಅಚ್ಚರಿ ಮೂಡಿಸಿದರೂ 80-90ರ ದಶಕದಲ್ಲಿ ಈ ತಳಿಯ ಕಾಡೆಮ್ಮೆಗಳು ಕಾಫಿನಾಡ ಅರಣ್ಯದಲ್ಲಿ ಇತ್ತು. ಆಗ ಇಂದರ್ಫಿಸ್ಟ್ ಎಂಬ ಕಾಯಿಲೆಯಿಂದ ಈ ತಳಿ ಸಂಪೂರ್ಣ ನಾಶವಾಗಿತ್ತು. ಇದೀಗ ಮತ್ತೆ ಈ ತಳಿಯ ಕಾಡೆಮ್ಮೆ ಪತ್ತೆಯಾಗಿರೋದು ಈ ತಳಿಗಳ ಬೆಳವಣಿಗೆಯಾಗಿದೆ ಎಂದೇ ಭಾವಿಸಲಾಗಿದೆ.

    ಹುಲಿಗಳಲ್ಲಿ ಬಿಳಿ ಹುಲಿ, ಚಿರತೆಗಳಲ್ಲಿ ಕಪ್ಪು ಚಿರತೆ ಇರುವಂತೆ ಕಾಡೆಮ್ಮೆಗಳಲ್ಲಿ ಈ ರೀತಿ ಕಂಡು ಬರಲಿದೆ. ಇದನ್ನ ಇಂಗ್ಲಿಷಿನಲ್ಲಿ ಗಾರ್ ಎಂದು ಕರೆಯುತ್ತಾರೆ. ಈ ಸಂತತಿ ಈಗ ಮತ್ತೆ ಹೆಚ್ಚಾಗಿರೋದ್ರಿಂದ ಈ ರೀತಿ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಚಿನ್ನದ ಲೇಪನದಂತೆ ಹೊಳೆಯುವ ಕಾಡೆಮ್ಮೆಯೊಂದು ಕಂಡಿದ್ದು. ಈ ಭಾಗದಲ್ಲಿ ಈ ರೀತಿಯ ಕಾಡೆಮ್ಮೆ ಕಾಣ ಸಿಗುವುದು ವಿಶೇಷ.

    ಜಿಲ್ಲೆಯ ಮುತ್ತೋಡಿ ಅರಣ್ಯ ಹಲವು ವಿಚಿತ್ರ ಹಾಗೂ ವೈವಿಧ್ಯಮಯ ಘಟನೆಗೆ ಸಾಕ್ಷಿಯಾಗಿದೆ. ಈಗ ಸುಮಾರು 30-40 ವರ್ಷಗಳ ಹಿಂದೆಯೇ ನಾಶವಾಗಿರುವ ಪ್ರಾಣಿಗಳ ಸಂತತಿ ಒಂದು ಮತ್ತೆ ಅಭಿವೃದ್ಧಿ ಆಗಿರುವಂಥದ್ದು ಬೆಳಕಿಗೆ ಬಂದಂತಿದೆ. ಈ ಕಾಡೆಮ್ಮೆ ಇರುವುದು ಅಪರೂಪ, ನಿಸರ್ಗದಲ್ಲಿ ಅನೇಕ ವಿಸ್ಮಯಗಳು ನಡೆಯುತ್ತದೆ. ಅಂತಹಾ ವಿಸ್ಮಯಗಳಲ್ಲಿ ಇದು ಕೂಡ ಸಹಜ. ನೋಡಲು ಬಂಗಾರದ ಲೇಪನವಾದಂತೆ ಕಾಣೋ ಈ ಕಾಡೆಮ್ಮೆ ನೋಡುಗರ ಗಮನ ಸೆಳೆದಿದೆ.

  • ರಾಜಗಾಂಭೀರ್ಯವಾಗಿ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ ಕಾಡೆಮ್ಮೆ

    ರಾಜಗಾಂಭೀರ್ಯವಾಗಿ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ ಕಾಡೆಮ್ಮೆ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಸರೀಕಟ್ಟೆ ಗ್ರಾಮಕ್ಕೆ ಕಾಡೆಮ್ಮೆಯೊಂದು ರಾಜಗಾಂಭೀರ್ಯವಾಗಿ ಓಡಾಡುತ್ತಿದೆ.

    ಕಳೆದೊಂದು ತಿಂಗಳಿಂದ ಈ ಕಾಡೆಮ್ಮೆ ಆಗಾಗ್ಗೆ ಗ್ರಾಮಕ್ಕೆ ಬಂದು ಹೋಗುತ್ತಿದೆ. ಕಾಡೆಮ್ಮೆ ಬಂದು ಹೋಗೋದನ್ನು ಜನ ನಿಂತು ನೋಡುತ್ತಿದ್ದಾರೆ. ಕಾಡೆಮ್ಮೆ ಅತೀ ಸೂಕ್ಷ್ಮವಾದ ಪ್ರಾಣಿ. ಜನರನ್ನ ಕಂಡರೆ ಹೆದರಿ ಓಡಿ ಹೋಗುತ್ತದೆ. ಆದರೆ ಈ ಕಾಡೆಮ್ಮೆ ಆಗಲ್ಲ. ಗ್ರಾಮಕ್ಕೆ ಬಂದು ಒಂದು ರೌಂಡ್ ಹಾಕಿ ಹೋಗುತ್ತದೆ.

    ಕಳೆದೊಂದು ತಿಂಗಳಿಂದ ಆಗಾಗ ಗ್ರಾಮದ ಮುಖ್ಯ ರಸ್ತೆಗೆ ಬರುತ್ತಿರುವ ಈ ಕಾಡೆಮ್ಮೆ ಇಂದಿಗೂ ಯಾರಿಗೂ ಏನು ಮಾಡಿಲ್ಲ. ಸುಮ್ಮನೆ ಬಂದು ಹೋಗುತ್ತಿದೆ. ಬಸರೀಕಟ್ಟೆ ಕಾಡಂಚಿನ ಗ್ರಾಮವಾಗಿರುವುದರಿಂದ ಸುಮಾರು 20 ರಿಂದ 25 ಕಾಡೆಮ್ಮೆಗಳು ಬಂದಿವೆ. ಆದರೆ ಊರೊಳಗೆ ಬರುವುದು ಇದೊಂದೆ. ಉಳಿದವು ಕಾಡಂಚಿನಲ್ಲೇ ಇರುತ್ತವೆ. ಗ್ರಾಮಕ್ಕೆ ಈ ಕಾಡೆಮ್ಮೆ ಬಂದು ಏನು ತಿನ್ನೋದೂ ಇಲ್ಲ. ಅಕ್ಕ-ಪಕ್ಕ ನೋಡೋದು ಇಲ್ಲ. ರಾಜಗಾಂಭೀರ್ಯವಾಗಿ ನಡೆಯಂತೆ ಸುಮ್ಮನೆ ಹೋಗುತ್ತೆ. ಈ ವಿಚಿತ್ರ ಕಾಡೆಮ್ಮಯನ್ನ ಕಂಡ ಬಸರೀಕಟ್ಟೆ ಜನ ಆಶ್ಚರ್ಯಕ್ಕೀಡಾಗಿದ್ದಾರೆ.

    https://www.youtube.com/watch?v=ggLOcvSx75g

  • ಗಾಯಗೊಂಡು, ಹುಳ ತುಂಬಿದ್ದ ಕಾಡೆಮ್ಮೆ ಕಾಲಿಗೆ ಚಿಕಿತ್ಸೆ ನೀಡಿ ಕಾಪಾಡಿದ ಅರಣ್ಯಾಧಿಕಾರಿ

    ಗಾಯಗೊಂಡು, ಹುಳ ತುಂಬಿದ್ದ ಕಾಡೆಮ್ಮೆ ಕಾಲಿಗೆ ಚಿಕಿತ್ಸೆ ನೀಡಿ ಕಾಪಾಡಿದ ಅರಣ್ಯಾಧಿಕಾರಿ

    ದಾವಣಗೆರೆ: ಗಾಯಗೊಂಡ ಕಾಡೆಮ್ಮೆಗೆ ಅರವಳಿಕೆ ಮದ್ದು ಕೊಟ್ಟು ಚಿಕಿತ್ಸೆ ನೀಡುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಕಳೆದ ಹಲವು ದಿನಗಳಿಂದ ಉಬ್ರಾಣಿ ಫಾರೆಸ್ಟ್ ನಲ್ಲಿ ಅರಣ್ಯ ಇಲಾಖೆಯಿಂದ ಪುಂಡಾನೆಗಳ ಸೆರೆ ಕಾರ್ಯಚರಣೆ ನಡೆಯುತ್ತಿದೆ. ಕಾಡಿನೊಳಗೆ ನುಗ್ಗಿ ಆನೆಯನ್ನು ಸೆರೆ ಹಿಡಿಯುವ ಸಂದರ್ಬದಲ್ಲಿ ಕಾಲಿಗೆ ಗಂಭೀರ ಗಾಯಗೊಂಡ ಕಾಡೆಮ್ಮೆಯೊಂದು ಅರಣ್ಯ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.

    ಕಾಡೆಮ್ಮೆಯ ನರಳಾಟ ನೋಡಲಾಗದೆ ಸಕ್ರೇಬೈಲ್ ಆನೆ ಬಿಡಾರದ ವೈದ್ಯ ವಿನಯ್ ಕಾಡೆಮ್ಮೆಗೆ ಅರಳವಳಿಕೆ ಮದ್ದು ನೀಡಿ ಚಿಕಿತ್ಸೆ ನೀಡಿ ಪೋಷಿಸುತ್ತಿದ್ದಾರೆ. ಎಡಗಾಲು ಗಾಯವಾಗಿದ್ದು, ಸಂಪೂರ್ಣ ಹುಳದಿಂದ ಆವರಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ವಿನಯ್ ಅದಕ್ಕೆ ಔಷದೋಪಚರಿಸಿ, ಗಾಯವನ್ನು ಕ್ಲೀನ್ ಮಾಡಿದ್ದಾರೆ ಅಲ್ಲದೇ ಸೂಕ್ತ ಚಿಕಿತ್ಸೆ ನೀಡಿದ್ದಾರೆ.

    ಚಿಕಿತ್ಸೆ ನಂತರ ಕಾಡೆಮ್ಮೆ ಬಡ ಜೀವ ಎನ್ನುವಂತೆ ಕಾಡಿನೊಳಗೆ ಸೇರಿ ಮರೆಯಾಯಿತು. ಆನೆ ಹಿಡಿಯುವ ಒತ್ತಡದ ಕೆಲಸದಲ್ಲಿ ಕಾಡೆಮ್ಮೆಗೆ ಚಿಕಿತ್ಸೆ ನೀಡಿದ ವೈದ್ಯ ವಿನಯ್ ಯವರಿಗೆ ಅರಣ್ಯ ಅಧಿಕಾರಿಗಳಿಂದ ಮೆಚ್ಚಿಗೆ ವ್ಯಕ್ತಪಡಿಸಿದ್ರು.