Tag: ಕಾಡು ಕೋಣ

  • ಲಾಕ್‍ಡೌನ್‍ನಿಂದಾಗಿ ಮಂಗ್ಳೂರು ನಗರವನ್ನೇ ಕಾಡೆಂದುಕೊಂಡ ಕಾಡುಕೋಣ

    ಲಾಕ್‍ಡೌನ್‍ನಿಂದಾಗಿ ಮಂಗ್ಳೂರು ನಗರವನ್ನೇ ಕಾಡೆಂದುಕೊಂಡ ಕಾಡುಕೋಣ

    – ನಗರದೆಲ್ಲೆಡೆ ಆರ್ಭಟ ತೋರಿಸಿದ ಕಾಡುಕೋಣ ಕೊನೆಗೂ ಸೆರೆ

    ಮಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಖಾಲಿ ಖಾಲಿಯಾಗಿದ್ದ ಮಂಗಳೂರು ನಗರಕ್ಕೆ ಕಾಡಿನಿಂದ ಬಂದಿದ್ದ ಕಾಡುಕೋಣವೊಂದು ಜನರಿಗೆ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

    ಕಳೆದ ಕೆಲ ದಿನದಿಂದ ನಿಶ್ಯಬ್ದದಿಂದ ಇದ್ದ ನಗರವವೂ ಕಾಡೆಂದುಕೊಂಡು ಆಗಮಿಸಿದ್ದ ಕಾಡುಕೋಣ ಇಂದು ಬೆಳ್ಳಂಬೆಳಗ್ಗೆ ಪ್ರತ್ಯೇಕವಾಗಿತ್ತು. ನಗರದ ಬಿಜೈ, ಅಳಕೆ, ಮಣ್ಣುಗುಡ್ಡೆ ಪರಿಸರದಲ್ಲಿ ತನ್ನ ರಂಪಾಟವನ್ನು ತೋರಿಸಿತ್ತು. ರಸ್ತೆಯಲ್ಲಿದ್ದ ಹಲವು ಕಾರುಗಳಿಗೆ ಹಾನಿಯನ್ನು ಮಾಡಿತ್ತು.

    ಮನೆಯ ಕಾಂಪೌಡು ಹಾರಿ ಬರುತ್ತಿದ್ದ ಕಾಡುಕೋಣದ ಆರ್ಭಟಕ್ಕೆ ಆತಂಕಗೊಂಡಿದ್ದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಕೊನೆಗೂ ಮಣ್ಣಗುಡ್ಡೆಯಲ್ಲಿ ಕಾಡುಕೋಣವನ್ನು ಸೆರೆಹಿಡಿದಿದ್ದಾರೆ.

    ಒಂದು ಕಡೆಯಿಂದ ಇನ್ನೊಂದು ಕಡೆಗೆ ಭಯಂಕರವಾಗಿ ಓಡುತ್ತಿದ್ದ ಕಾಡುಕೋಣಕ್ಕೆ ಎರಡು ಅರಿವಳಿಕೆ ಚುಚ್ಚು ನೀಡಿ ನಿಯಂತ್ರಣಕ್ಕೆ ತರಲಾಯಿತು. ಕಾಡಿನಲ್ಲಿರುವ ಈ ಕಾಡುಕೋಣ ಲಾಕ್‍ಡೌನ್ ಕಾರಣದಿಂದ ಖಾಲಿರಸ್ತೆಯಲ್ಲಿ ನಗರಕ್ಕೆ ಎಂಟ್ರಿ ಕೊಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

  • ಸ್ಕೂಟಿ ಮೇಲೆ ಹಾರಿ ಬಿದ್ದ ಕಾಡು ಕೋಣ – ಇಬ್ಬರು ಗಂಭೀರ

    ಸ್ಕೂಟಿ ಮೇಲೆ ಹಾರಿ ಬಿದ್ದ ಕಾಡು ಕೋಣ – ಇಬ್ಬರು ಗಂಭೀರ

    ಚಿಕ್ಕಮಗಳೂರು: ಕಾಫಿ ತೋಟದ ಅಂಚಿನಿಂದ ರಸ್ತೆಗೆ ಹಾರಿದ ಕಾಡುಕೋಣ ಸ್ಕೂಟಿ ಮೇಲೆ ಬಿದ್ದ ಪರಿಣಾಮ ಬೈಕಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ನೇರಂಕಿ ಗ್ರಾಮದ ಸಂದೀಪ್ ಹಾಗೂ ಮಂಗಳ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಆಗ ತೋಟದಿಂದ ಮತ್ತೊಂದು ತೋಟಕ್ಕೆ ಹೋಗಲು ತೋಟದ ಅಂಚಿನಿಂದ ರಸ್ತೆಗೆ ಹಾರಿದ ಕೋಣ ನೇರವಾಗಿ ಬೈಕಿನ ಮೇಲೆ ಬಿದ್ದಿದೆ.

    ಇದರಿಂದ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೂ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಕಳಸ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಗ್ರಾಹಕರಂತೆ ವೇಷಹಾಕಿ ವನ್ಯಜೀವಿಗಳ ಬೇಟೆಗಾರರ ಬಂಧನ: 16.5 ಕೆ.ಜಿ. ಜಿಂಕೆಗಳ ಕೊಂಬು ವಶ

    ಗ್ರಾಹಕರಂತೆ ವೇಷಹಾಕಿ ವನ್ಯಜೀವಿಗಳ ಬೇಟೆಗಾರರ ಬಂಧನ: 16.5 ಕೆ.ಜಿ. ಜಿಂಕೆಗಳ ಕೊಂಬು ವಶ

    ಚಿಕ್ಕಮಗಳೂರು: ಸಿನಿಮೀಯ ರೀತಿಯಲ್ಲಿ ಗ್ರಾಹಕರಂತೆ ಹೋಗಿ, ಕಾಡು ಪ್ರಾಣಿಗಳನ್ನು ಬೇಟಿ ಆಡುತ್ತಿದ್ದ ಆರು ಜನರ ತಂಡವನ್ನು ತರೀಕೆರೆ ತಾಲೂಕಿನ ಲಕ್ಕವಳ್ಳಿ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

    ಭಾನುವಾರ ಮಾಹಿತಿ ದೊರೆತಿದ್ದು, ಶಿವಮೊಗ್ಗದ ಸತೀಶ್, ಗಾಜನೂರಿನ, ತರೀಕೆರೆ ತಾಲೂಕಿನ ಉಪ್ಪಾರ ಬಸವಣ ಹಳ್ಳಿಯ ಸಹೋದರರಾದ ರವಿ ಹಾಗೂ ಲಕ್ಷ್ಮಣ ಬಂಧಿತ ಆರೋಪಿಗಳಾಗಿದ್ದು, ಉಳಿದ ಇಬ್ಬರ ಬಗ್ಗೆ ಇನ್ನು ಮಾಹಿತಿ ದೊರೆತಿಲ್ಲ ಎಂದು ವಲಯ ಅರಣ್ಯಾಧಿಕಾರಿ ಕಾಂತರಾಜು ತಿಳಿಸಿದ್ದಾರೆ.

    ಸುಮಾರು ದಿನಗಳಿಂದ ಆರೋಪಿಗಳು ಜಾಲದ ಬಗ್ಗೆ ಮಾಹಿತಿ ದೊರೆತಿತ್ತು. ಆದರೆ ಬಂಧಿಸಲು ಸಾಧ್ಯವಾಗಿರಲಿಲ್ಲ. ಭಾನುವಾರ ಖಚಿತ ಮಾಹಿತಿ ದೊರೆಯಿತು. ಹೀಗಾಗಿ ಗ್ರಾಹಕರಂತೆ ಮಾರುವೇಷ ಹಾಕಿಕೊಂಡು ಅರಣ್ಯ ಇಲಾಖೆ ಪೊಲೀಸ್ ಸಿಬ್ಬಂದಿ ತಂಡ ದಾಳಿ ಮಾಡಿದ ಪರಿಣಾಮ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದರು.

    ಬಂಧಿತ ಆರೋಪಿಗಳಿಂದ 4 ಕೆ.ಜಿ. ಆನೆದಂತ, 11 ಕೆ.ಜಿ. ಚಿಪ್ಪು ಹಂದಿಯ ಚಿಪ್ಪು, 16.5 ಕೆ.ಜಿ. ಜಿಂಕೆಗಳ ಕೊಂಬು ಹಾಗೂ 4.5 ಕೆ.ಜಿ. ಕಾಡು ಕೋಣಗಳ ಕೊಂಬುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಹಿಂದೆ ದೊಡ್ಡ ಜಾಲವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಬಂಧಿತರು ಕಾಡು ಪ್ರಾಣಿಗಳ ದೇಹದ ಬೆಲೆಬಾಳುವ ವಸ್ತುಗಳನ್ನು ವಿದೇಶಕ್ಕೆ ಮಾರಾಟ ಮಾಡುತ್ತಿದ್ದರು. ಹೀಗಾಗಿ ಭದ್ರಾ ಹುಲಿ ಅಭಯಾರಣ್ಯ ಸೇರಿದಂತೆ ಮಲೆನಾಡು ಭಾಗದ ಕಾಡುಗಳಲ್ಲಿ ವನ್ಯಜೀವಿಗಳನ್ನ ಭೇಟಿಯಾಡುತ್ತಿದ್ದರು. ಅಲ್ಲದೇ ಅವರ ಬಳಿ ಇನ್ನು ಹೆಚ್ಚಿನ ಪ್ರಾಣಿಗಳ ಚರ್ಮ, ಕೊಂಬು, ಮೂಳೆ, ದಂತಗಳಿವೆ ಎನ್ನುವ ಸಂದೇಹ ವ್ಯಕ್ತವಾಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

    ಆನೆ ದಂತಗಳನ್ನು ಏನು ಮಾಡುತ್ತಾರೆ?
    ಆನೆ ದಂತಗಳನ್ನು ಹಣ ಪಡೆದು ಮಾರಾಟ ಮಾಡುವುದುನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಅರಣ್ಯ ಇಲಾಖೆ ದಾಳಿ ವೇಳೆ ಸಿಕ್ಕಿದ ಆನೆ ದಂತಗಳನ್ನು ರಕ್ಷಣಾ ಇಲಾಖೆಗೆ ನೀಡುತ್ತದೆ. ಕೆಲವು ದಂತಗಳನ್ನು ಸಂಶೋಧನೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತದೆ. ಯಾರಿಗೂ ಮಾರಾಟ ಮಾಡಲು ಅನುಮತಿ ಇಲ್ಲದ ಕಾರಣ ದಂತಗಳನ್ನು ಸುಡಲಾಗುತ್ತದೆ.