ಮಂಡ್ಯ: ದರ್ಶನ್ ʻಕಾಟೇರʼ ಸಿನಿಮಾದಲ್ಲಿ (Kaatera Cinema) ನಟಿಸಿದ್ದ ಬಾಲನಟ ಮಾಸ್ಟರ್ ರೋಹಿತ್ (Master Rohit) ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ಕಾರು-ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ರೋಹಿತ್ ಗಾಯಗೊಂಡಿದ್ದಾರೆ. ಸದ್ಯ ಮಾಸ್ಟರ್ ರೋಹಿತ್‌ಗೆ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಸ್ ಮನೆಗೆ ತೆರಳುವಾಗ ಘಟನೆ ನಡೆದಿದೆ, ಘಟನೆಯಲ್ಲಿ ರೋಹಿತ್ ತಾಯಿಯೂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ʻಒಂದಲ್ಲ ಎರಡಲ್ಲʼ ಸಿನಿಮಾದ ಮೂಲಕ ರಾಷ್ಟ್ರಪ್ರಶಸ್ತಿ ವಿಜೇತನಾಗಿದ್ದ ರೋಹಿತ್, ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದುಕೊಂಡಿದ್ದರು.
ಕಾಟೇರ, ರಾಬರ್ಟ್ ಸಿನಿಮಾ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ನಟಿ ಸೋನಲ್ (Actress Sonal) ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಯಾಂಡಲ್‌ವುಡ್ ತಾರೆಯರಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡುವುದರಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ:ಧನುಷ್ ನಟನೆಯ ಬಾಲಿವುಡ್ ಸಿನಿಮಾದಲ್ಲಿ ಕೃತಿ ಸನೋನ್ ನಾಯಕಿ
ಸೋನಲ್ ಜೊತೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ಡೈರೆಕ್ಟರ್ ತರುಣ್ ಸುಧೀರ್ ಈಗ ಸಿನಿಮಾ ಸೆಲೆಬ್ರಿಟಿಗಳ ಮನೆಗೆ ಹೋಗಿ ಮದುವೆ ಪತ್ರಿಕೆ ನೀಡಿದ್ದಾರೆ. ವಸಂತನಗರದಲ್ಲಿರುವ ಶ್ರೀಮುರಳಿ ಮನೆಗೆ ಭೇಟಿ ನೀಡಿ ಮದುವೆಯ ಕರೆಯೋಲೆ ಕೊಟ್ಟು ಬಂದಿದ್ದಾರೆ ತರುಣ್.
ಜೆಪಿ ನಗರದಲ್ಲಿರುವ ಆಪ್ತರಾದ ಸುದೀಪ್ (Sudeep) ಮನೆಗೆ ಭೇಟಿ ಕೊಟ್ಟು ಮದುವೆಗೆ ಕರೆದಿದ್ದಾರೆ. ಬಳಿಕ ಸುದೀಪ್ ಜೊತೆ ಕೆಲ ಸಮಯ ಕಳೆದಿದ್ದಾರೆ.
ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ನಿವಾಸಕ್ಕೆ ಭೇಟಿ ನೀಡಿ ಮದುವೆ ಪತ್ರಿಕೆ ನೀಡಿದ ಬಳಿಕ ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ದಂಪತಿಗೂ ಮದುವೆಗೆ ಬರಲು ಪ್ರೀತಿಯಿಂದ ಕರೆಯೋಲೆ ಕೊಟ್ಟಿದ್ದಾರೆ.
ದರ್ಶನ್ ಸಹೋದರ ದಿನಕರ್ ಮನೆಗೆ ಭೇಟಿ ನೀಡಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅದಷ್ಟೇ ಅಲ್ಲ, ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್ ದಂಪತಿ, ಹಂಸಲೇಖ, ಸುಮಲತಾ, ಜಗ್ಗೇಶ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಲವ್ಲಿ ಸ್ಟಾರ್ ಪ್ರೇಮ್ ಕುಟುಂಬಕ್ಕೆ ಮದುವೆ ಪತ್ರಿಕೆ ನೀಡಿದ್ದಾರೆ. ಈ ವೇಳೆ, ಎಲ್ಲಾ ಸ್ಟಾರ್ಸ್‌ಗೆ ಪರಿಸರ ಸ್ನೇಹಿ ಆಹ್ವಾನ ಪತ್ರಿಕೆ ನೀಡಿದ್ದು, ಎಲ್ಲರ ಗಮನ ಸೆಳೆದಿದೆ.
ಇದಷ್ಟೇ ಅಲ್ಲ, ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿರುವ ಆರ್. ಅಶೋಕ್, ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ, ಡಿ.ಕೆ ಶಿವಕುಮಾರ್ ಅವರಿಗೂ ತರುಣ್ ಸುಧೀರ್ ವಿವಾಹದ ಪತ್ರಿಕೆ ನೀಡಿದ್ದಾರೆ.
ಇನ್ನೂ ತರುಣ್ ಸುಧೀರ್ ಮತ್ತು ಸೋನಲ್ ಜೋಡಿ ಇದೇ ಆಗಸ್ಟ್ 10, 11ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 10ರಂದು ಸಂಜೆ 6:30 ನಂತರ ಆರತಕ್ಷತೆ ಕಾರ್ಯಕ್ರಮ, ಆ.11ರಂದು ಬೆಳಗ್ಗೆ 10:50 ರಿಂದ 11:35ರ ಶುಭ ಮುಹೂರ್ತದಲ್ಲಿ ಮದುವೆ ನಡೆಯಲಿದೆ. ಹಿಂದೂ ಸಂಪ್ರದಾಯದಂತೆ ಮದುವೆ ಜರುಗಲಿದೆ.
ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಮತ್ತು ನಿರ್ಮಾಪಕ ಉಮಾಪತಿ ಇಬ್ಬರ ‘ಕಾಟೇರ’ (Kaatera) ಟೈಟಲ್ ಕದನದ ಬೆನ್ನಲ್ಲೇ ರಾಬರ್ಟ್ ನಿರ್ಮಾಪಕನಿಗೆ ಠಕ್ಕರ್ ಕೊಡಲು ಡಿಬಾಸ್ ಫ್ಯಾನ್ಸ್ ಮುಂದಾಗಿದ್ದಾರೆ. ಫೆ.26ರಂದು `ಡಿ ಬಾಸ್ ಜಿಂದಾಬಾದ್’ ಹೆಸರಲ್ಲಿ ದರ್ಶನ್ ಅಭಿಮಾನಿಗಳಿಂದ ಬೃಹತ್ ಬೈಕ್ ರ‍್ಯಾಲಿ ನಡೆಯಲಿದೆ.
ದರ್ಶನ್- ಉಮಾಪತಿ ಸಮರ ನಿಲ್ಲುತ್ತಿಲ್ಲ. ಉಮಾಪತಿಗೆ (Umapathy) ಪಾಠ ಕಲಿಸಲೆಂದೇ ‘ಒಂಟಿ ಸಲಗ’ ಹೆಸರಲ್ಲಿ ಬೃಹತ್ ರ‍್ಯಾಲಿ ನಡೆಸಲು ದರ್ಶನ್ ಫ್ಯಾನ್ಸ್ ತಯಾರಿ ನಡೆಸುತ್ತಿದ್ದಾರೆ. ಡಿಬಾಸ್ ಫ್ಯಾನ್ಸ್ ಟೀಮ್‌ಗೆ ಒಂಟಿ ಸಲಗ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಿರ್ಮಾಪಕ ಕುಮಾರ್ ಶಹಾನಿ ನಿಧನ
ರ‍್ಯಾಲಿ ಮಾಡ್ತಿರೋ ಜಾಗವೇ ಗಮನಾರ್ಹವಾಗಿದ್ದು, ಬೊಮ್ಮನಹಳ್ಳಿಯಲ್ಲಿ ಬೃಹತ್ ರ‍್ಯಾಲಿಯಲ್ಲಿ ದರ್ಶನ್ ಸಾವಿರಾರು ಅಭಿಮಾನಿಗಳು ಒಗ್ಗಟ್ಟು ಪ್ರದರ್ಶಿಸಲಿದ್ದಾರೆ. ಬೊಮ್ಮನಹಳ್ಳಿ ಮಹಾ ಗಣಪತಿ ದೇವಸ್ಥಾನದಿಂದ ಹೆಚ್‌ಎಸ್‌ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್‌ವರೆಗೆ ರ‍್ಯಾಲಿ ನಡೆಯಲಿದೆ. ಉಮಾಪತಿಗೆ ಠಕ್ಕರ್ ಕೊಡಲು ಅವರದ್ದೇ ಕ್ಷೇತ್ರದಲ್ಲಿ ಫೆ.26ರಂದು ಸಂಜೆ 6 ಗಂಟೆಗೆ ಡಿಬಾಸ್ ಫ್ಯಾನ್ಸ್ ರ‍್ಯಾಲಿ ಮಾಡಲಿದ್ದಾರೆ.
ಇತ್ತೀಚೆಗೆ ಉಮಾಪತಿ ಅವರು ದರ್ಶನ್ ನಟನೆಯ ‘ಕಾಟೇರ’ ಸಿನಿಮಾಗೆ ಟೈಟಲ್ ಕೊಟ್ಟಿದ್ದೇ ನಾನು ಎಂದು ಸಂದರ್ಶನಗಳಲ್ಲಿ ಮಾತನಾಡಿದ್ದರು. ಈ ವಿಚಾರಕ್ಕೆ ಕಾಟೇರ ಸಕ್ಸಸ್ ಮೀಟ್‌ನಲ್ಲಿ ದರ್ಶನ್ ಪ್ರತಿಕ್ರಿಯೆ ನೀಡಿದ್ದರು. ಹೇ ತಗಡು ಚಿತ್ರಕ್ಕೆ ‘ಕಾಟೇರ’ ಎಂದು ಟೈಟಲ್ ಇಟ್ಟಿದ್ದೇ ನಾನು ಎಂದು ದರ್ಶನ್ ಉಮಾಪತಿಗೆ ತಿರುಗೇಟು ನೀಡಿದ್ದರು.
‘ಕಾಟೇರ’ (Kaatera) ಸಕ್ಸಸ್ ಸಂಭ್ರಮದಲ್ಲಿ ನಟ ದರ್ಶನ್ (Darshan) ನೀಡಿರುವ ಹೇಳಿಕೆ ಇದೀಗ ಭಾರೀ ಸದ್ದು ಮಾಡ್ತಿದೆ. ಅಯ್ಯೋ ತಗಡೇ ಎಂದು ಗುಮ್ಮಿದ ದರ್ಶನ್‌ಗೆ ಇದೀಗ ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ ಎಂದು ಉಮಾಪತಿ ಕೌಂಟರ್ ಕೊಟ್ಟಿದ್ದಾರೆ. ಇದನ್ನೂ ಓದಿ:ಅಯ್ಯೋ ತಗಡೇ ಎಂದು ಉಮಾಪತಿಗೆ ಗುಮ್ಮಿದ ದರ್ಶನ್
‘ಕಾಟೇರ’ (Kaatera) ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ನೀಡಿರುವ ಹೇಳಿಕೆಯಿಂದ ಇಬ್ಬರ ನಡುವೆ ವಾಕ್ಸಮರ ಶುರುವಾಗಿದೆ. ದರ್ಶನ್ ಟಾಂಗ್‌ಗೆ ನಿರ್ಮಾಪಕ ಉಮಾಪತಿ ಉತ್ತರ ನೀಡಿದ್ದಾರೆ. ನಮ್ಮ ಜಗಳವನ್ನು ಕುಟುಂಬವು ಕೂಡ ನೋಡುತ್ತದೆ. ಫ್ಯಾಮಿಲಿಗೆ ಯಾವ ರೀತಿ ಎಫೆಕ್ಟ್ ಆಗುತ್ತೆ ಎಂಬುದರ ಬಗ್ಗೆ ಉಮಾಪತಿ ಮಾತನಾಡಿದ್ದಾರೆ.
ನಾನು ತಗಡು ವ್ಯಕ್ತಿ ಇರಬಹುದು ಆದರೆ ಅವರ ಲೈಫ್‌ಗೆ ನಾನು ವಾಚ್‌ಮ್ಯಾನ್ ಅಲ್ಲ. ಪದಗಳನ್ನು ಬಳಸುವಾಗ ಗಮನ ಇರಬೇಕು. ಸಾಯುವವರೆಗೂ ಯಾರು ನೋಡದೇ ಇರುವ ಸಕ್ಸಸ್ ಏನಲ್ಲ ಇದು. ಎಲ್ಲರೂ ನಾಳೆಗೆ ಮಣ್ಣಿಗೆ ಹೋಗಬೇಕು ಎಂದರು ಉಮಾಪತಿ. ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ. ಸಿನಿಮಾ ಅಂತ ಬಂದಾಗ ನನ್ನ ಸಕ್ಸಸ್‌ನಲ್ಲಿ ದರ್ಶನ್, ಶ್ರೀಮುರಳಿ, ಚಿಕ್ಕಣ್ಣ, ಡೈರೆಕ್ಟರ್ ಕೃಷ್ಣ, ತರುಣ್ ಪಾಲಿದೆ. ಒಬ್ಬ ವ್ಯಕ್ತಿಯಿಂದ ಉಮಾಪತಿ ಬೆಳೆದಿಲ್ಲ. ನಾನು ಕಷ್ಟಪಟ್ಟು ಬೆಳೆದಿದ್ದೀನಿ. ಯಾಕೆಂದ್ರೆ ನಾನು ನಮ್ಮನೆ ದುಡ್ಡನ್ನು ಸಿನಿಮಾಗೆ ಹಾಕಿರೋದು. ಕಂಡವರ ದುಡ್ಡು ಹಾಕಿಲ್ಲ. ಗೌರವ ಅನ್ನೋದು ಪರಸ್ಪರ 2 ಕಡೆ ಇರಬೇಕು ಎಂದು ಉಮಾಪತಿ ಮಾತನಾಡಿದ್ದಾರೆ. ಈ ಮೂಲಕ ದರ್ಶನ್ ಅವರ ಪದಬಳಕೆಗೆ ಉಮಾಪತಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮಾರ್ಚ್ 13ಕ್ಕೆ ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ
ಅವರೆಲ್ಲಾ ದೊಡ್ಡವರು, ನಾವು ಚಿಕ್ಕವರು ಬಿಡಿ ಹೇಳಿಕೊಂಡು ಹೋಗಲಿ ಬಿಡಿ. ದರ್ಶನ್ ಅವರನ್ನು ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ? ಎಂದು ಉಮಾಪತಿ ಮಾತನಾಡಿದ್ದಾರೆ. ಕಾಟೇರ ರಿಜಿಸ್ಟರ್ ಮಾಡಿದ್ದೆ ನಾನು. ‘ಮದಗಜ’ ಸಮಯದಲ್ಲಿ ಎಲ್ಲರೂ ನನ್ನ ಮಿಸ್ ಲೀಡ್ ಮಾಡಿಬಿಟ್ಟರು. ಸಮಯ ಬಂದಾಗ ಎಲ್ಲದ್ದಕ್ಕೂ ನಾನು ಉತ್ತರ ಕೊಡುತ್ತೇನೆ. ನಾನು ಒಂದು ಜವಾಬ್ದಾರಿಯುತ ಸಮುದಾಯದ ನಾಯಕ. ನನ್ನನ್ನು ಇಲ್ಲಿಯವರೆಗೂ ಜನ ಬೆಳೆಸಿದ್ದಾರೆ ಎಂದು ಉಮಾಪತಿ ಮಾತನಾಡಿದ್ದಾರೆ.
‘ಕಾಟೇರ’ (Kaatera) ಐಡಿಯಾ ಕೊಟ್ಟಿದ್ದು ದರ್ಶನ್ (Darshan) ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು ಎಂದು ಉಮಾಪತಿ ಮಾತನಾಡಿದ್ದಾರೆ. ಇವತ್ತು ಇವರು ಏನೇ ಹೇಳಬಹುದು ಮುಂದೊಂದು ದಿನ ಸಮಯ ಪಾಠ ಕಲಿಸುತ್ತದೆ. ಜನ ನನಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದ್ದಾರೆ. ಹೌದು ನಾನು ತಗಡೆ ಆದರೆ ಗುಮ್ಮಿಸಿಕೊಳ್ಳುವವನಲ್ಲ ಎಂದು ದರ್ಶನ್ ಉತ್ತರಕ್ಕೆ ಉಮಾಪತಿ ತಿರುಗೇಟು ನೀಡಿದ್ದಾರೆ. ದರ್ಶನ್ ಪದ ಬಳಕೆ ಮಾಡುವಾಗ ಜೋಪಾನವಾಗಿರಬೇಕು ಎಂದು ಉಮಾಪತಿ ಉತ್ತರ ಕೊಟ್ಟಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ವೇಳೆ, ಹಿರಿಯ ನಟಿ ಶ್ರುತಿ, ನಾಯಕಿ ಆರಾಧನಾ ಸೇರಿದಂತೆ ತಂಡದ ಹಲವರಿಗೆ ಇಂದು (ಫೆ.20) ಪ್ರಶಸ್ತಿ ನೀಡಿ ಚಿತ್ರತಂಡ ಗೌರವಿಸಿದೆ. ಈ ವೇಳೆ, ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದ ನಿರ್ಮಾಪಕ ಉಮಾಪತಿಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ಉಮಾಪತಿ ಆರೋಪಕ್ಕೆಲ್ಲಾ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.
ಅಯ್ಯೋ ತಗಡೆ ಅಂದು ‘ರಾಬರ್ಟ್’ ಕತೆ ಕೊಟ್ಟಿದ್ದೆ ನಾವು. ಆದರೂ ಬುದ್ಧಿ ಕಲಿಯುತ್ತಿಲ್ಲ ಅಂದರೆ ಏನು ಹೇಳೋಣ. ಕಾಟೇರ ಎಂತಹ ಒಳ್ಳೆಯ ಕಥೆ ಯಾಕೆ ಈ ಸಿನಿಮಾ ಬಿಟ್ಟೆ ಎಂದು ದರ್ಶನ್ ಪ್ರಶ್ನಿಸಿದ್ದಾರೆ. ಬಳಿಕ ‘ಕಾಟೇರ’ ಟೈಟಲ್ ಹೇಳಿದ್ದು ಕೂಡ ನಾನು ಎಂದು ದರ್ಶನ್ ಮಾತನಾಡಿದ್ದಾರೆ. ಅಂದು ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸುವಂತೆ ತರುಣ್ ಸುಧೀರ್‌ಗೆ ಹೇಳಿದ್ದೆ ಎಂದರು. ಬಳಿಕ ತರುಣ್ ಬಳಿಯೇ ದರ್ಶನ್ ಸ್ಪಷ್ಟನೆ ಕೊಡಿಸಿದ್ದರು.
ಯಾಕಪ್ಪ, ಯಾವಾಗಲೂ ಬಂದು ನಮ್ಮ ಕೈಯಲ್ಲೇ ಗುಮ್ಮಿಸಿಕೊಳ್ತಿಯಾ? ಅಂತ ಉಮಾಪತಿಗೆ ದರ್ಶನ್ ಕುಟುಕಿದ್ದರು. ಈಗ ಎಲ್ಲೋ ಇದ್ದೀಯಾ ಚೆನ್ನಾಗಿ ಇರು. ತಪ್ಪು ಇದು ಅಂತ ದರ್ಶನ್ ಹೇಳಿದರು.
ಹಲವು ಸಂದರ್ಶನಗಳಲ್ಲಿ ದರ್ಶನ್ ಚಿತ್ರಕ್ಕೆ ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ಹೇಳಿದ್ದರು. ಇದಕ್ಕೆಲ್ಲ ಈಗ ದರ್ಶನ್ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ.
‘ಕಾಟೇರ’ (Kaatera) ಸಕ್ಸಸ್ ಮೀಟ್‌ನಲ್ಲಿ ದರ್ಶನ್ ಅವರು ರಾಬರ್ಟ್ ನಿರ್ಮಾಪಕ ಉಮಾಪತಿಗೆ ಟಾಂಗ್ ಕೊಟ್ಟಿದ್ದರು. ‘ಕಾಟೇರ’ ಟೈಟಲ್ ನಾನೇ ಕೊಟ್ಟಿದ್ದು ಎಂದ ಉಮಾಪತಿಗೆ ದರ್ಶನ್ (Darshan) ಕೌಂಟರ್ ಕೊಟ್ಟಿದ್ದರು. ದರ್ಶನ್ ಹೇಳಿಕೆಗೆ ಈಗ ಉಮಾಪತಿ ಉತ್ತರ ನೀಡಿದ್ದಾರೆ.
ಅವರೆಲ್ಲಾ ದೊಡ್ಡವರು, ನಾವು ಚಿಕ್ಕವರು ಬಿಡಿ ಹೇಳಿಕೊಂಡು ಓಡಾಲಿ ಬಿಡಿ. ದರ್ಶನ್ ಅವರನ್ನು ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ? ಎಂದು ಉಮಾಪತಿ ಮಾತನಾಡಿದ್ದಾರೆ. ಕಾಟೇರ ರಿಜಿಸ್ಟರ್ ಮಾಡಿದ್ದೆ ನಾನು. ‘ಮದಗಜ’ ಸಮಯದಲ್ಲಿ ಎಲ್ಲರೂ ನನ್ನ ಮಿಸ್ ಲೀಡ್ ಮಾಡಿಬಿಟ್ಟರು. ಸಮಯ ಬಂದಾಗ ಎಲ್ಲದ್ದಕ್ಕೂ ನಾನು ಉತ್ತರ ಕೊಡುತ್ತೇನೆ. ನಾನು ಒಂದು ಜವಾಬ್ದಾರಿಯುತ ಸಮುದಾಯದ ನಾಯಕ. ನನ್ನನ್ನು ಇಲ್ಲಿಯವರೆಗೂ ಜನ ಬೆಳೆಸಿದ್ದಾರೆ ಎಂದು ಉಮಾಪತಿ ಮಾತನಾಡಿದ್ದಾರೆ. ಇದನ್ನೂ ಓದಿ:ತಮಿಳಿನತ್ತ ‘ಬೆಂಗಳೂರು ಡೇಸ್’ ನಿರ್ದೇಶಕಿ- ಸಾಥ್ ನೀಡಿದ ‘ಕೆಆರ್‌ಜಿ’ ಸಂಸ್ಥೆ
‘ಕಾಟೇರ’ ಐಡಿಯಾ ಕೊಟ್ಟಿದ್ದು ದರ್ಶನ್ ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು ಎಂದು ಉಮಾಪತಿ ಮಾತನಾಡಿದ್ದಾರೆ. ಇವತ್ತು ಇವರು ಏನೇ ಹೇಳಬಹುದು ಮುಂದೊಂದು ದಿನ ಸಮಯ ಪಾಠ ಕಲಿಸುತ್ತದೆ. ಜನ ನನಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದ್ದಾರೆ. ಹೌದು ನಾನು ತಗಡೆ ಆದರೆ ಗುಮ್ಮಿಸಿಕೊಳ್ಳುವವನಲ್ಲ ಎಂದು ದರ್ಶನ್ ಉತ್ತರಕ್ಕೆ ಉಮಾಪತಿ ತಿರುಗೇಟು ನೀಡಿದ್ದಾರೆ. ದರ್ಶನ್ ಪದ ಬಳಕೆ ಮಾಡುವಾಗ ಜೋಪಾನವಾಗಿರಬೇಕು ಎಂದು ಉಮಾಪತಿ ಉತ್ತರ ಕೊಟ್ಟಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ (Kaatera) ಸಿನಿಮಾ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ವೇಳೆ, ಹಿರಿಯ ನಟಿ ಶ್ರುತಿ, ನಾಯಕಿ ಆರಾಧನಾ ಸೇರಿದಂತೆ ತಂಡದ ಹಲವರಿಗೆ ಇಂದು (ಫೆ.20) ಪ್ರಶಸ್ತಿ ನೀಡಿ ಚಿತ್ರತಂಡ ಗೌರವಿಸಿದೆ. ಈ ವೇಳೆ, ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದ ನಿರ್ಮಾಪಕ ಉಮಾಪತಿಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ಉಮಾಪತಿ ಆರೋಪಕ್ಕೆಲ್ಲಾ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.
ಅಯ್ಯೋ ತಗಡೆ ಅಂದು ‘ರಾಬರ್ಟ್’ ಕತೆ ಕೊಟ್ಟಿದ್ದೆ ನಾವು. ಆದರೂ ಬುದ್ಧಿ ಕಲಿಯುತ್ತಿಲ್ಲ ಅಂದರೆ ಏನು ಹೇಳೋಣ. ಕಾಟೇರ ಎಂತಹ ಒಳ್ಳೆಯ ಕಥೆ ಯಾಕೆ ಈ ಸಿನಿಮಾ ಬಿಟ್ಟೆ ಎಂದು ದರ್ಶನ್ ಪ್ರಶ್ನಿಸಿದ್ದಾರೆ. ಬಳಿಕ ‘ಕಾಟೇರ’ ಟೈಟಲ್ ಹೇಳಿದ್ದು ಕೂಡ ನಾನು ಎಂದು ದರ್ಶನ್ ಮಾತನಾಡಿದ್ದಾರೆ. ಅಂದು ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸುವಂತೆ ತರುಣ್ ಸುಧೀರ್‌ಗೆ ಹೇಳಿದ್ದೆ ಎಂದರು. ಬಳಿಕ ತರುಣ್ ಬಳಿಯೇ ದರ್ಶನ್ ಸ್ಪಷ್ಟನೆ ಕೊಡಿಸಿದ್ದರು.
ಯಾಕಪ್ಪ, ಯಾವಾಗಲೂ ಬಂದು ನಮ್ಮ ಕೈಯಲ್ಲೇ ಗುಮ್ಮಿಸಿಕೊಳ್ತಿಯಾ? ಅಂತ ಉಮಾಪತಿಗೆ ದರ್ಶನ್ ಕುಟುಕಿದ್ದರು. ಈಗ ಎಲ್ಲೋ ಇದ್ದೀಯಾ ಚೆನ್ನಾಗಿ ಇರು. ತಪ್ಪು ಇದು ಅಂತ ದರ್ಶನ್ ಹೇಳಿದರು.
ಹಲವು ಸಂದರ್ಶನಗಳಲ್ಲಿ ದರ್ಶನ್ ಚಿತ್ರಕ್ಕೆ ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ಹೇಳಿದ್ದರು. ಇದಕ್ಕೆಲ್ಲ ಈಗ ದರ್ಶನ್ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ.
ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಸಕ್ಸಸ್ ಕಂಡಿದೆ. ಇದೇ ಖುಷಿಯಲ್ಲಿ ಪಾಂಡವಪುರದಲ್ಲಿ ‘ಕಾಟೇರ’ ಚಿತ್ರದ ಸಕ್ಸಸ್ ಕಾರ್ಯಕ್ರಮ ನಡೆದಿದೆ. ರೈತರ ಕುರಿತು ‘ಕಾಟೇರ’ ಚಿತ್ರದ ಮೂಲಕ ತಿಳಿಸಿದಕ್ಕೆ ದರ್ಶನ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ‘ಭೂಮಿ ಪುತ್ರ’ ಎಂದು ಬಿರುದು ನೀಡಿದ್ದಾರೆ. ಇದನ್ನೂ ಓದಿ:ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ಗಾಯಕಿ ವಿಧಿವಶ
ದರ್ಶನ್, ಆರಾಧನಾ ರಾಮ್ ನಟನೆಯ ‘ಕಾಟೇರ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪಾಂಡವಪುರದಲ್ಲಿ ಕಾಟೇರ ಸಿನಿಮಾ ಸಕ್ಸಸ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಆಚರಿಸಿದೆ. ಈ ಚಿತ್ರದಲ್ಲಿ ರೈತರ ಬಗ್ಗೆ ಹಲವು ವಿಚಾರಗಳನ್ನು ದರ್ಶನ್ ಮಾತನಾಡಿದ್ದಾರೆ.
ರೈತರ ಕುರಿತು ಜನರಿಗೆ ಹಲವು ವಿಷಯಗಳನ್ನು ತಲುಪಿಸಿದಕ್ಕೆ ಮತ್ತು ನಟನೆಗೆ ದರ್ಶನ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ‘ಭೂಮಿ ಪುತ್ರ’ ಎಂದು ಬಿರುದು ನೀಡಿ ಸನ್ಮಾನ ಮಾಡಲಾಗಿದೆ.
ಈ ಸಮಾರಂಭದಲ್ಲಿ ದರ್ಶನ್ ಜೊತೆ ರೈತ ಮುಖಂಡ ಕೆ.ಎಸ್ ಪುಟ್ಟಣ್ಣಯ್ಯ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟಿ ಆರಾಧನಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಿದ್ದು, `ಬಿಗ್ ಬಾಸ್’ ಖ್ಯಾತಿಯ ನಮ್ರತಾ ಗೌಡ, ಮಾನ್ವಿತಾ ಕಾಮತ್ (Manvitha Kamath), ಹರ್ಷಿಕಾ ಪೂಣಚ್ಚ ಭಾಗಿಯಾಗಿ ತಮ್ಮ ನೃತ್ಯದ ಮೂಲಕ ಮನರಂಜನೆ ನೀಡಿದ್ದರು.
ಡಿಬಾಸ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಕೂಡ ಸಕ್ಸಸ್ ಮೀಟ್ ಸಂಭ್ರಮವನ್ನು ಆಚರಿಸಿದೆ. ಈ ವೇಳೆ, ಮಾಧ್ಯಮಕ್ಕೆ ದರ್ಶನ್ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾ ಸಕ್ಸಸ್ ಕಂಡಿರೋ ಬೆನ್ನಲ್ಲೇ ಮಾಧ್ಯಮದ ಜೊತೆ ದರ್ಶನ್ ಮಾತನಾಡಿದ್ದಾರೆ. ಜಾತಿ ಒಳಗೊಂಡಂತೆ ಸಿನಿಮಾದ ಒಳಗೆ ಮತ್ತಷ್ಟು ಭಿನ್ನ ಕಥೆ ಇದೆ. ಕಥೆ ಸೆಲೆಕ್ಷನ್ ಹೇಗೆ ಮಾಡಿದ್ರಿ ಎಂದು ದರ್ಶನ್‌ಗೆ (Darshan) ಕೇಳಲಾಯಿತು.
‘ಕಾಟೇರ’ (Katera Film) ಕಥೆ ಕೇಳುವಾಗ ಚಂದಮಾಮನ ಕಥೆ ಕೇಳಿದಂತೆ ಕೇಳಿದ್ದೀನಿ. ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ. ಇವತ್ತು ಜನ ಮಾತನಾಡೋದೇನು? ಗಂಡಸು ಬೆವರು ಸುರಿಸಬೇಕು. ಜೊಲ್ಲು ಸುರಿಸಬಾರದು ಅಂತಾರೆ. ಇದರಲ್ಲಿ ಅದೆಷ್ಟು ಅರ್ಥ ಇದೆ. ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಕಥೆನೇ ಇದು ಎಂದು ದರ್ಶನ್ ಮಾತನಾಡಿದ್ದಾರೆ.
ಕಥೆ ಕೇಳುವಾಗ ನಟನೆಗೆ ಜಾಗ ಇದೆ ಅನಿಸ್ತು. ಖುಷಿ ಆಗುತ್ತದೆ. ನಾನು ಸಿನಿಮಾ ಕಥೆ ಆಯ್ಕೆ ಮಾಡುವಾಗ ಮೂರು ರೀತಿ ಯೋಚನೆ ಮಾಡುತ್ತೇನೆ. ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು. ಕನ್ನಡ ಭಾಷೆಗೆ ಅವಮಾನವಾಗುವಂತೆ ಇರಬಾರದು. ಅನ್ನದಾತರಿಗೆ ನಷ್ಟ ಆಗಬಾರದು ಎಂದು ದರ್ಶನ್ ಮಾತನಾಡಿದ್ದಾರೆ.
ಬಳಿಕ ನಾನು ಯಾವತ್ತಿಗೂ ರಾಷ್ಟ್ರ ಪ್ರಶಸ್ತಿ ಬರೋಕೆ ಅಂತ ಸಿನಿಮಾ ಮಾಡಲ್ಲ. ಹಾಗಿದ್ರೆ ಆರ್ಟ್ ಮೂವಿನೇ ಮಾಡುತ್ತಿದ್ದೆ ಎಂದು ಡಿಬಾಸ್ ‘ಕಾಟೇರ’ ಸಕ್ಸಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:ನಟ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿದ್ಧತೆ
ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ (Katera Film) ಸಿನಿಮಾದಲ್ಲಿ ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ (Aradhana Ram) ದರ್ಶನ್‌ಗೆ ನಾಯಕಿಯಾಗಿ ನಟಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ (Kaatera Cinema) ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಕ್ರವರ್ತಿಯ ಅಬ್ಬರ ಶುರುವಾಗಿದೆ.
ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು (Darshan Fans) ದರ್ಶನ್ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಡಿಬಾಸ್ ಡಿಬಾಸ್ ಎಂದು ಜಯಘೋಷ ಹಾಕುತ್ತಾ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿ ಹೊರ ಬಂದ ಅಭಿಮಾನಿಗಳು ಸಾರಥಿಗೆ ಜೈಕಾರ ಕೂಗತೊಡಗಿದ್ದಾರೆ. ಈ ನಡುವೆ ಕಾಟೇರಮ್ಮನ ಗುಡಿ ಮಾಡಿ ದೇವಿ ಪ್ರತಿಮೆ ಸ್ಥಾಪಿಸಿರುವ ದೃಶ್ಯಗಳು ಕಂಡುಬಂದಿವೆ.
ದರ್ಶನ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಟೇರ ದರ್ಬಾರ್ ಮಧ್ಯರಾತ್ರಿಯಿಂದಲೇ ಶುರುವಾಗಿದೆ. ರಾಜ್ಯದ 21 ಕಡೆ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಆರಂಭಿಸಲಾಗಿದೆ. 43 ಥಿಯೇಟರ್‌ಗಳಲ್ಲಿ ಮುಂಜಾನೆ 3 ಗಂಟೆಯಿಂದ, 77 ಥಿಯೇಟರ್‌ಗಳಲ್ಲಿ ಬೆಳಗ್ಗಿನ ಜಾವ 4 ಗಂಟೆಯಿಂದ ಶೋ ಆರಂಭವಾಗಿದೆ. ಸೂರ್ಯೋದಯವಾಗುವುದಕ್ಕೂ ಮುನ್ನವೇ ಕಾಟೇರ 335 ಶೋಗಳಲ್ಲಿ ಅಬ್ಬರಿಸಿದ್ದು ಅಭಿಮಾನಿಗಳ ಮನಗೆದ್ದಿದೆ. ಇಡೀ ದಿನ 1,600 ಶೋಗಳ ಪ್ರದರ್ಶನಕ್ಕೆ ಸಜ್ಜಾಗಿದೆ. ಒಟ್ಟಿನಲ್ಲಿ ಬಹುದಿನಗಳ ಬಳಿಕ ದರ್ಶನ್ ಮಾಸ್ ಲುಕ್‌ನಲ್ಲಿ ತೆರೆಯ ಮೇಲೆ ಕಾಲಿಟ್ಟಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
‘ಕಾಟೇರ’ ಸಿನಿಮಾದ ಕಥೆ ನಡೆಯುವುದು 1974ರ ಕಾಲಘಟ್ಟದಲ್ಲಿ. ಭೀಮನಹಳ್ಳಿ ಎಂಬ ಊರಿನಲ್ಲಿ ಕುಲುಮೆ ಕೆಲಸ ಮಾಡುತ್ತಿರುವ ಯುವಕ ಕಾಟೇರ (ದರ್ಶನ್). ದುಡಿಮೆನೇ ದೇವ್ರು ಅಂತ ನಂಬಿರುವ ವ್ಯಕ್ತಿ. ಆದರೆ ಇದೇ ಊರಿನಲ್ಲಿ ಜಮಿನ್ದಾರನ ದಬ್ಬಾಳಿಕೆ ಇರುತ್ತದೆ, ಗೇಣಿದಾರರಿಗೆ ಅನ್ಯಾಯವಾಗುತ್ತಿರುತ್ತದೆ, ಭತ್ತ ಬೆಳೆಯುವ ರೈತನಿಗೆ ಬದುಕೋದೇ ಕಷ್ಟವಾಗಿರುತ್ತದೆ. ಅಷ್ಟಕ್ಕೂ ಆ ಊರಿನಲ್ಲಿ ಅಂಥದ್ದು ಏನಾಗುತ್ತಿರುತ್ತದೆ? ತನ್ನವರ ಮೇಲಿನ ದಬ್ಬಾಳಿಕೆಗೆ ಕಾಟೇರ ಯಾವ ರೀತಿ ಉತ್ತರ ಕೊಡುತ್ತಾನೆ ಎಂಬ ಕುತೂಹಲದೊಂದಿಗೆ ಸಿನಿಮಾ ಸಾಗುತ್ತದೆ.
ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಡಿ.29ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ರಿಲೀಸ್‌ಗೂ ಮುನ್ನವೇ ಸಿನಿಮಾ ನೋಡಿ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ರಿಯಾಕ್ಟ್ ಮಾಡಿದ್ದಾರೆ. ‘ಕಾಟೇರ’ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದಾರೆ.
ನಾನು ‘ಕಾಟೇರ’ (Katera) ಸಿನಿಮಾ ವೀಕ್ಷಿಸಿದೆ. ಅನುಭವ ಅದ್ಭುತವಾಗಿತ್ತು. ಸಿನಿಮಾದಲ್ಲಿನ ಅನೇಕ ದೃಶ್ಯಗಳಿಗೆ ನಾನು ಕಣ್ಣೀರು ಸುರಿಸಿದ್ದೇನೆ. ಸಿನಿಮಾ ನೋಡಿ ಹೊರನಡೆಯುತ್ತಿದ್ದಂತೆ ದರ್ಶನ್ ಅವರ ಶ್ರಮದ ಬಗ್ಗೆ ಹೆಮ್ಮೆ ಮತ್ತು ಗೌರವ ಆವರಿಸಿತು ಎಂದು ದರ್ಶನ್ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಬಳಿಕ ‘ಕಾಟೇರ’ ಸಿನಿಮಾ, ನೀವು ನಿರ್ದೇಶಿಸಿದ ಬೆಸ್ಟ್ ಚಿತ್ರ ಎಂದು ನಿರ್ದೇಶಕ ತರುಣ್ ಸುಧೀರ್‌ಗೆ ವಿಜಯಲಕ್ಷ್ಮಿ ಹೊಗಳಿದ್ದಾರೆ. ‘ಕಾಟೇರ’ ನಿಜಕ್ಕೂ ನನ್ನ ಅಚ್ಚುಮೆಚ್ಚಿನ ಸಿನಿಮಾ. ಇಂತಹ ಸಿನಿಮಾವನ್ನು ದರ್ಶನ್ ಫ್ಯಾನ್ಸ್‌ಗೆ ತೋರಿಸಲು ಕಾತರದಲ್ಲಿದ್ದೇವೆ. ನಿಜಕ್ಕೂ ಕಾಟೇರ ಮಾಸ್ಟರ್‌ಪೀಸ್ ಸಿನಿಮಾ ಎಂದಿದ್ದಾರೆ. ಕಾಟೇರ ಇಡೀ ತಂಡಕ್ಕೆ ಶುಭಹಾರೈಸಿದ್ದಾರೆ.
ಚಿತ್ರದ ನಾಯಕಿ ಆರಾಧನಾ ರಾಮ್ (Aradhanaa Ram) ಚೊಚ್ಚಲ ಸಿನಿಮಾಗೆ ಬೆಸ್ಟ್ ವಿಶ್ಸ್ ದರ್ಶನ್ ಪತ್ನಿ ತಿಳಿಸಿದ್ದಾರೆ. ದರ್ಶನ್ (Darshan) ಸಹೋದರಿ ಮಗ ಚಂದ್ರ ಕುಮಾರ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಕುಟುಂಬದ ಆಪ್ತ ಸೂರಜ್‌ಗೆ ಶುಭಕೋರಿದ್ದಾರೆ. ಇದನ್ನೂ ಓದಿ:ಇಶಾ ಕೊಪ್ಪಿಕರ್ ಬಗ್ಗೆ ಕೇಳಿದ ಸುದ್ದಿ ಸುಳ್ಳಾಗಲಿ ಅಂತಿದ್ದಾರೆ ಫ್ಯಾನ್ಸ್
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಕ್ರಾಂತಿ ನಂತರ ಕಾಟೇರ ಚಿತ್ರಕ್ಕೆ ಹೇಗೆ ರೆಸ್ಪಾನ್ಸ್ ಸಿಗಲಿದೆ ಎಂಬುದನ್ನ ಕಾಯಬೇಕಿದೆ.
ಸ್ಯಾಂಡಲ್‌ವುಡ್ (Sandalwood) ಸಲಗ ದುನಿಯಾ ವಿಜಯ್ (Duniya Vijay) ಅವರು ‘ಭೀಮ’ನಾಗಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಇದರ ನಡುವೆ ಅಭಿಮಾನಿಗಳಿಗೆ ವಿಜಯ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ದುನಿಯಾ ವಿಜಯ್ ಮತ್ತು ಮಗಳು ಮೋನಿಕಾ(Monica Vijay) ನಟಿಸುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚೆಗೆ ದೊಡ್ಡ ಮಗಳು ಮೋನಿಕಾ ಸಿನಿಮಾರಂಗಕ್ಕೆ ಬರೋದಾಗಿ ದುನಿಯಾ ವಿಜಯ್ ಅನೌನ್ಸ್ ಮಾಡಿದ್ದರು. ಅದರಂತೆ ಇದೀಗ ಮೋನಿಕಾ ವಿಜಯ್ ಚೊಚ್ಚಲ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ದರ್ಶನ್ ನಟನೆಯ ‘ಕಾಟೇರ’ (Katera) ಚಿತ್ರದ ರೈಟರ್ ಜಡೇಶ್ ಕುಮಾರ್ (Jadesh Kumar) ಅವರ ನಿರ್ದೇಶನದಲ್ಲಿ ದುನಿಯಾ ವಿಜಯ್-ಮೋನಿಕಾ ಜೊತೆಯಾಗಿ ನಟಿಸುತ್ತಿದ್ದಾರೆ.
ಸಂಬಂಧಗಳ ಕುರಿತು ಬಾಂಧವ್ಯ ಸಾರುವ ಸಿನಿಮಾದಲ್ಲಿ ದುನಿಯಾ ವಿಜಯ್- ಮಗಳು ಮೋನಿಕಾ ಒಟ್ಟಾಗಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಇಬ್ಬರ ಪಾತ್ರ ಕೂಡ ಡಿಫರೆಂಟ್ ಆಗಿದೆ. ತೆರೆಯ ಮೇಲೂ ಕೂಡ ತಂದೆ-ಮಗಳಾಗಿಯೇ ನಟಿಸುತ್ತಿದ್ದಾರಾ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಇಬ್ಬರ ಕಾಂಬಿನೇಷನ್ ತೆರೆಯ ಮೇಲೆ ಹೇಗೆ ವರ್ಕ್ ಆಗಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ. ಇದನ್ನೂ ಓದಿ:ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿದ ತೃಪ್ತಿ ದಿಮ್ರಿ ನಯಾ ಫೋಟೋಶೂಟ್
ಮೋನಿಕಾ (Monica Vijay) ಅವರು ನಟನೆಗೆ ಬರೋದ್ದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಡ್ಯಾನ್ಸ್, ಫಿಟ್‌ನೆಸ್ ಹೀಗೆ ಸಾಕಷ್ಟು ವಿಚಾರಗಳಿಗೆ ಒತ್ತು ಕೊಟ್ಟು ಅಪ್ಪನ ಹಾದಿಯಲ್ಲಿ ಮಗಳು ಹೆಜ್ಜೆ ಇಡ್ತಿದ್ದಾರೆ. ಮೋನಿಕಾ ವಿಜಯ್ ಕೂಡ ನಟಿಯಾಗಿ ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.