Tag: ಕಾಟೇರ್‌

  • ತರುಣ್‌ ಸುಧೀರ್ BMW ಕಾರು ಓಡಿಸಿ ಶುಭಕೋರಿದ ದರ್ಶನ್

    ತರುಣ್‌ ಸುಧೀರ್ BMW ಕಾರು ಓಡಿಸಿ ಶುಭಕೋರಿದ ದರ್ಶನ್

    ‘ಕಾಟೇರ’ ಯಶಸ್ಸಿನ ನಂತರ ನಿರ್ದೇಶಕ ತರುಣ್ ಸುಧೀರ್ (Tharun Sudhir) ದುಬಾರಿ ಮೊತ್ತದ ಕಾರು ಖರೀದಿಸಿದ್ದಾರೆ. ಡೆವಿಲ್ ಚಿತ್ರೀಕರಣದ ಸಮಯದಲ್ಲಿ ತರುಣ್ ಅವರ BMW X 1 ಕಾರು ಡ್ರೈವ್ ಮಾಡಿ ದರ್ಶನ್ (Darshan) ಶುಭಹಾರೈಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಸದ್ಯ ಡೆವಿಲ್ (Devil) ಶೂಟಿಂಗ್, ಅಮ್ಮ ಸುಮಲತಾ ಜೊತೆ ಎಲೆಕ್ಷನ್ ಕೆಲಸ ಸೇರಿದಂತೆ ದರ್ಶನ್ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ದರ್ಶನ್ ಶೂಟಿಂಗ್ ಟೈಮ್‌ನಲ್ಲಿಯೇ ತರುಣ್ ಹೊಸ ಕಾರು ತೆಗೆದುಕೊಂಡು ಬಂದಿದ್ದಾರೆ. ಅವರ ಕಾರನ್ನು ಡ್ರೈವ್ ಮಾಡಿ ಸ್ನೇಹಿತನಿಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಇಬ್ಬರೂ ಸ್ಟಾರ್ ನಟಿಯರ ಜೊತೆ ಅಲ್ಲು ಅರ್ಜುನ್ ರೊಮ್ಯಾನ್ಸ್

    ಇತ್ತೀಚೆಗಷ್ಟೇ ತರುಣ್, ಕಿರುತೆರೆಗೆ ಹಾರಿದ್ದಾರೆ. ಕಾಟೇರ ಸಕ್ಸಸ್ ನಂತರ ತರುಣ್ ಮತ್ತ್ಯಾವ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಇತ್ತು. ಆದರೆ ದಿಢೀರ್ ಅಂತ ಕಿರುತೆರೆಗೆ ಹಾರಿದ್ದಾರೆ.

    ಹಾಗಂತ ಅವರು ಯಾವುದೇ ಧಾರಾವಾಹಿ ನಿರ್ದೇಶನವಾಗಲಿ, ನಟಿಸುವುದಕ್ಕಾಗಿ ಹೋಗಿಲ್ಲ. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿರುವ ಹೊಸ ರಿಯಾಲಿಟಿ ಶೋ ಮಹಾನಟಿಗೆ ತೀರ್ಪುಗಾರರಾಗಿ ಭಾಗಿಯಾಗಿದ್ದಾರೆ. ಈಗಾಗಲೇ ರಿಯಾಲಿಟಿ ಶೋ ಶುರುವಾಗಿದೆ.

    ಮಹಾನಟಿ (Mahanati) ರಿಯಾಲಿಟಿ ಶೋಗೂ ಮತ್ತು ಸಿನಿಮಾ ರಂಗಕ್ಕೂ ನೇರ ಸಂಬಂಧವಿದೆ. ಆ ಕಾರಣಕ್ಕಾಗಿಯೇ ಕಾಟೇರ್ ಸೂಪರ್ ಹಿಟ್ ಸಿನಿಮಾದ ನಿರ್ದೇಶಕನನ್ನು ಜೀ ಕನ್ನಡ ವಾಹಿನಿಯು ಆಯ್ಕೆ ಮಾಡಿದೆ. ಈ ಹಿಂದೆಯೂ ಅನೇಕ ಸಿನಿಮಾ ನಟರನ್ನು ವಾಹಿನಿಯು ನಾನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ.