Tag: ಕಾಟನ್‌ಪೇಟೆ

  • ಸೋಪ್ ಬಾಕ್ಸ್‌ಲ್ಲಿ 14.69 ಕೋಟಿ ಮೌಲ್ಯದ ಕೊಕೇನ್ ಸ್ಮಗ್ಲಿಂಗ್ – ಇಬ್ಬರು ಮಹಿಳೆಯರು ಅರೆಸ್ಟ್

    ಸೋಪ್ ಬಾಕ್ಸ್‌ಲ್ಲಿ 14.69 ಕೋಟಿ ಮೌಲ್ಯದ ಕೊಕೇನ್ ಸ್ಮಗ್ಲಿಂಗ್ – ಇಬ್ಬರು ಮಹಿಳೆಯರು ಅರೆಸ್ಟ್

    ಬೆಂಗಳೂರು: ಸೋಪಿನ ಬಾಕ್ಸ್‌ನಲ್ಲಿ 14.69 ಕೋಟಿ ರೂ. ಮೌಲ್ಯದ ಡ್ರಗ್ಸ್ ಸ್ಮಗ್ಲಿಂಗ್ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈಶಾನ್ಯ ರಾಜ್ಯದ ಇಬ್ಬರು ಮಹಿಳೆಯರು ಡಿಆರ್‌ಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ; ಸಂಸತ್ ಅಧಿವೇಶನಕ್ಕೂ ಮುನ್ನ ಮೋದಿ ಮಾತು

    ಮಣಿಪುರದ ಲಾಲ್ಜಮ್ಲುವೈ ಮತ್ತು ಮಿಜೋರಾಂನ ಲಾಲ್‌ಥಾಂಗ್ಲಿಯಾನಿ ಬಂಧಿತ ಆರೋಪಿಗಳು. ಬೆಂಗಳೂರಿನ ಕಾಟನ್‌ಪೇಟೆಯಲ್ಲಿ ಕೊಕೇನ್ ಸಾಗಿಸುತ್ತಿದ್ದ ವೇಳೆ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ.

    ಅಧಿಕಾರಿಗಳು ಬಂಧಿತ ಮಹಿಳೆಯರಿಂದ ಸುಮಾರು 14.69 ಕೋಟಿ ರೂ. ಮೌಲ್ಯದ 7 ಕೆ.ಜಿ ಕೊಕೇನ್‌ನ್ನು ವಶಪಡಿಸಿಕೊಂಡಿದ್ದಾರೆ.ಇದನ್ನೂ ಓದಿ: ಶಿವಕಾಶಿ | ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಮೂವರು ಸಾವು

  • ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಜಮೀರ್ ನೇರ ಕಾರಣ: ಭಾಸ್ಕರ್ ರಾವ್

    ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಜಮೀರ್ ನೇರ ಕಾರಣ: ಭಾಸ್ಕರ್ ರಾವ್

    ಬೆಂಗಳೂರು: ಚಾಮರಾಜಪೇಟೆಯಲ್ಲಿ (Chamrajpet) ಹಸು ಕೆಚ್ಚಲು ಕೊಯ್ದ ಪ್ರಕರಣದಕ್ಕೆ ಸಚಿವ ಜಮೀರ್ ಅಹ್ಮದ್ (Zameer Ahmed) ನೇರ ಕಾರಣ ಎಂದು ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ (Bhaskar Rao) ಆರೋಪ ಮಾಡಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲಿಯೂ ಆಗದಿರುವ ಘಟನೆ ನಿನ್ನೆ ಆಗಿದೆ. ಇದೊಂದು ಷಡ್ಯಂತ್ರ. ಚಾಮರಾಜಪೇಟೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳನ್ನ ಓಡಿಸಲು ಷಡ್ಯಂತ್ರ. ಸಚಿವ ಜಮೀರ್ ಮೂರು ಹಸು ಕೊಡಿಸುತ್ತೇನೆ ಎಂದಿದ್ದಾರೆ. ಅವರಿಗೆ ಭಾವನೆಯೇ ಇಲ್ಲ, ಅದೇನು ಆಟದ ವಸ್ತುವಾ? ತಾಳ್ಮೆಯಿಂದ ಇರುವ ಕಾರಣ ರಕ್ತಪಾತ ಆಗಿಲ್ಲ. ರಾಜ್ಯ ಸರ್ಕಾರದ ಅದೃಷ್ಟ ಇದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಕ್ಸಲರ ಶರಣಾಗತಿಗೆ ದನಕಾಯೋ ವೃದ್ಧೆಯ ಮಧ್ಯಸ್ಥಿಕೆ

    2,227 ಹಸುಗಳು ಆ ಭಾಗದಲ್ಲಿವೆ. ಪಶು ಆಸ್ಪತ್ರೆ ಡೆಮಾಲಿಷ್ ಮಾಡಿ ಸ್ಕೂಲ್ ಕಟ್ಟಲು ಹೊರಟಿದ್ದಾರೆ. ಬೇರೆ ಕಡೆಯಲ್ಲಿ ಸ್ಕೂಲ್ ಕಟ್ಟಲಿ. ಮದರಸ ಎದುರು ಅಲ್ಲಿ ಹಸುಗಳನ್ನು ಕಟ್ಟುತ್ತಾರೆ. ಘಟನೆಗೆ ಸಚಿವ ಜಮೀರ್ ಅಹ್ಮದ್ ನೇರ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ:  ಜ.26 ರಂದು ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ – ಬೆದರಿಕೆ ಕರೆ, ಆರೋಪಿ ಅರೆಸ್ಟ್‌

    ಜಮೀರ್ ಕೊಡುವ ಹಣದ ಹಿಂದೆ ಕಾಂಗ್ರೆಸ್‌ನವರು ಹೋಗುತ್ತಾರೆ ಅಷ್ಟೇ. ಪ್ರಕರಣ ಮುಚ್ಚಿಹಾಕಲು ಬಿಹಾರ್ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಮುಸ್ಲಿಂ ಯುವಕರಿಗೆ ಕೆಲಸ ಇಲ್ಲ ಕಾರ್ಯ ಇಲ್ಲ. ಜಮೀರ್ ಅಹ್ಮದ್ ಮಾಡುತ್ತಿರುವ ಈ ಕೆಲಸವನ್ನು ಮುಸ್ಲಿಂ ಸಮುದಾಯದವರೇ ಮೆಚ್ಚೋದಿಲ್ಲ. ಜಮೀರ್ ಕ್ರಿಯೇಟ್ ಮಾಡುತ್ತಿರೋ ಕೆಲಸದಿಂದ ಜಮೀರ್ ಶ್ರೀಮಂತ ಆಗುತ್ತಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಒಳ್ಳೆಯವರಿದ್ದಾರೆ. ಆದರೆ ನಾಯಕತ್ವ ಪ್ರಶ್ನಿಸುತ್ತಿದ್ದೇನೆ. ಎಫ್‌ಐಆರ್ ಕೂಡ ಸರಿಯಾಗಿ ಹಾಕಿಲ್ಲ. ಅಮಾಯಕನನ್ನ ಕರೆದು ತಂದು ಕೂರಿಸಿದ್ದಾರೆ. ಹಸು ಸಾಕಿದವರನ್ನು ಓಡಿಸಲು, ಪಶು ಆಸ್ಪತ್ರೆ ಕಬಳಿಸಲು ಈ ತಂತ್ರ ಅಷ್ಟೇ. ಸಾವಿರ ಗೋವನ್ನು ತಂದು ಕೊಟ್ಟರೂ ಮಾಡಿದ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ತಿರುಪತಿ ಲಡ್ಡು ಕೇಂದ್ರದಲ್ಲಿ ಅಗ್ನಿ ಅವಘಡ – ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ


    ಜಮೀರ್ ಅಹ್ಮದ್‌ಗೆ ಬಾಲ ಬಿಚ್ಚೋಕೆ ಕಾರಣ ಸಿದ್ದರಾಮಯ್ಯ. ಕಲ್ಲು ಎಸೆಯೋರು, ಬೆಂಕಿ ಹಚ್ಚುವ ಮುಸ್ಲಿಂ ಹುಡುಗರನ್ನು ರೆಡಿ ಮಾಡುತ್ತಿದ್ದಾರೆ. ಇದು ಕ್ರಿಯೆಟ್ ಮಾಡುತ್ತಿರೋದು ಜಮೀರ್ ಅಹ್ಮದ್. ಹಿಂದೂ ವಿರೋಧವಾಗಿ ಮಾಡುತ್ತಿದ್ದಾರೆ. ಈ ಘಟನೆ ಬಸವನಗುಡಿ ಬಿಟಿಎಂ ಜಯನಗರದಲ್ಲಿ ಮಾಡೋಕೆ ಆಗುತ್ತಾ? ಚಾಮರಾಜ ಪೇಟೆಯಲ್ಲಿ ಮಾತ್ರ ಸಾಧ್ಯ. ನಾನು ಸಮುದಾಯದ ಬಗ್ಗೆ ಮಾತನಾಡುತ್ತಿಲ್ಲ. ಆ ಸಮುದಾಯದ ಲೀಡರ್ ಬಗ್ಗೆ ಮಾತಾಡುತ್ತಿದ್ದೇನೆ. ಪ್ರಕರಣದಲ್ಲಿ ಈಗ ಬಂಧನ ಆದವನು ಬಿಹಾರಿ. ಅವನು ಹುಚ್ಚ. ಅವನಿಗೂ ಇದಕ್ಕೂ ಸಂಬಂಧ ಇಲ್ಲ. ಅಮಾಯಕನ ಕರ್ಕೊಂಡು ಬಂದಿದ್ದಾರೆ. ಈ ಆಸ್ಪತ್ರೆ ಕಬ್ಜ ಮಾಡಬೇಕು ಎಂದು ಹೀಗೆ ಮಾಡಿದ್ದಾರೆ ಎಂದರು.
    ಇದನ್ನೂ ಓದಿ: ವಿಜಯಪುರ| ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನ


    ಯಾಕೆ 153 ಅಡಿ ಕೇಸ್ ಹಾಕಿಲ್ಲ. ಇದು ಕಮ್ಯುನಲ್ ಆಕ್ಟ್ ಅಡಿ ಆಗಬೇಕಾದ ಕೇಸ್. ಆ ಆಸ್ಪತ್ರೆ ಮುಂದುವರಿಯಬೇಕು. ಚಾಮರಾಜಪೇಟೆಯಲ್ಲಿ ಬಡತನ ಇದೆ. ಸಿದ್ದರಾಮಯ್ಯ ಮಾಡುತ್ತಿರೋದು ರಾಜಕೀಯ. ಕೂಡಲೇ ನಿಜವಾದ ಆರೋಪಿಯನ್ನು ಬಂಧಿಸಬೇಕು. ಸಿಸಿ ಟಿವಿ ಹಾಕಬೇಕು. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಮುಂದೆ ಅನಾಹುತ ಆದರೆ ಅದಕ್ಕೆ ಕಾರಣ ಸರ್ಕಾರ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
    ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇಲ್ಲ – ಸುರ್ಜೇವಾಲ

    ಜಮೀರ್ ಹಣದಲ್ಲಿ ಹಸು ಕೊಡಿಸೋದು ಬೇಡ. ಸರ್ಕಾರ ಹಣ ಕೊಡಬೇಕು. ಇದು ಸರ್ಕಾರದ ವೈಫಲ್ಯ. ಜಮೀರ್ ಹಣ ಕೊಡೋಕೆ ಆಟದ ವಸ್ತು ಅಲ್ಲ. 1,000 ಹಸು ಕೊಟ್ಟರೂ ಅವರ ಪಾಪ ಕಡಿಮೆ ಆಗಲ್ಲ. ಜಮೀರ್ ಬ್ರಿಗೇಡ್ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು.
    ಇದನ್ನೂ ಓದಿ: ಜಮ್ಮು-ಕಾಶ್ಮೀರ | ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಝಡ್-ಮೋರ್ಹ್ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ

  • ಪತ್ನಿ ವಿರುದ್ಧ ಸುಳ್ಳು ಕೇಸ್‌ – ಸ್ಯಾಂಟ್ರೋ ರವಿಯ ಷಡ್ಯಂತ್ರಕ್ಕೆ ಇನ್‌ಸ್ಪೆಕ್ಟರ್‌ ಸಾಥ್‌

    ಪತ್ನಿ ವಿರುದ್ಧ ಸುಳ್ಳು ಕೇಸ್‌ – ಸ್ಯಾಂಟ್ರೋ ರವಿಯ ಷಡ್ಯಂತ್ರಕ್ಕೆ ಇನ್‌ಸ್ಪೆಕ್ಟರ್‌ ಸಾಥ್‌

    ಬೆಂಗಳೂರು: ಸ್ಯಾಂಟ್ರೋ ರವಿಯ (Santro Ravi) ವಿರುದ್ಧ ಆತನ ಪತ್ನಿ ಮಾಡಿರುವ ಆರೋಪ ಈಗ ಪೊಲೀಸ್ ಇನ್‌ಸ್ಪೆಕ್ಟರ್‌ ಪ್ರವೀಣ್‌ಗೆ (Police inspector Praveen) ಉರುಳಾಗುವ ಸಾಧ್ಯತೆ ದಟ್ಟವಾಗಿದೆ.

    ಸ್ಯಾಂಟ್ರೋ ರವಿಯ ಷಡ್ಯಂತ್ರದಿಂದ ಕಾಟನ್ ಪೇಟೆ ಠಾಣೆಯಲ್ಲಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು‌ ಮೈಸೂರಿನ ವಿಜಯ ನಗರ ಠಾಣೆಯಲ್ಲಿ ಪತ್ನಿ ರಶ್ಮಿ (Rashmi) ದೂರು ನೀಡದ್ದರು. ದೂರಿನನ್ವಯ ಅಂದಿನ ಕಾಟನ್ ಪೇಟೆ ಇನ್‌ಸ್ಪೆಕ್ಟರ್‌ ಪ್ರವೀಣ್ ವಿರುದ್ಧ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿಗೆ ಆದೇಶಿಸಲಾಗಿತ್ತು. ಸದ್ಯ ತನಿಖೆ ಪೂರ್ಣಗೊಂಡಿದ್ದು ವರದಿ ಡಿಜಿಪಿ ಪ್ರವೀಣ್ ಸೂದ್ (Praveen Sood) ಕೈ ಸೇರಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ರಾಡಿ ಎಬ್ಬಿಸಿದ ಸ್ಯಾಂಟ್ರೋ ರವಿ ಯಾರು? ಮಂಡ್ಯ ಟು ಬೆಂಗಳೂರು ಜರ್ನಿಯ ರೋಚಕ ಕಹಾನಿ

    ದೂರಿನಲ್ಲಿ ಏನಿತ್ತು?
    ಪ್ರಕಾಶ್ ಎಂಬುವವರು ನೀಡಿದ್ದ ದೂರಿನನ್ವಯ ಕಾಟನ್ ಪೇಟೆ ಠಾಣೆಯಲ್ಲಿ ನವೆಂಬರ್ 24ರಂದು ರಶ್ಮಿ, ನಯನ ಹಾಗೂ ಶೇಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಮೂರು ತಿಂಗಳ ಅವಧಿಗೆ ಐದು ಲಕ್ಷ ರೂ ಪಡೆದಿದ್ದ ರಶ್ಮಿ, ನವೆಂಬರ್ 23ರಂದು ಸಂಜೆ 6ಗಂಟೆಗೆ ಹಣ ಕೊಡುವುದಾಗಿ ಕಾಟನ್ ಪೇಟೆಯ ಖೋಡೆ ಸರ್ಕಲ್ ಬಳಿ ಕರೆಸಿಕೊಂಡಿದ್ದರು. ಈ ವೇಳೆ ರಶ್ಮಿಯವರ ಜೊತೆಗಿದ್ದ ಶೇಕ್ ಎಂಬುವವನು ತಮ್ಮ ಎರಡೂ ಕೈಗಳನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದು, ರಶ್ಮಿ ತಮ್ಮ ಬಳಿಯಿದ್ದ ಚಾಕುವನ್ನ ಕುತ್ತಿಗೆಯ ಮೇಲಿಟ್ಟು ಬೆದರಿಸಿದ್ದಾರೆ. ಹಾಗೂ ಜೊತೆಗಿದ್ದ ನಯನ ಎಂಬಾಕೆ ತನ್ನ ಕತ್ತಿನಲ್ಲಿದ್ದ ಸುಮಾರು 13ಗ್ರಾಂ ತೂಕದ ಚಿನ್ನದ ಚೈನನ್ನು ಕಿತ್ತುಕೊಂಡು, ಪ್ಯಾಂಟ್ ಜೇಬಿನಲಿದ್ದ 9 ಸಾವಿರ ರೂಗಳನ್ನ ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಇದನ್ನೂ ಓದಿ: ಐಷಾರಾಮಿ ಕಾರುಗಳ ಹೆಸರಲ್ಲಿ ಸ್ಯಾಂಟ್ರೋ ರವಿಯಿಂದ ನಡೀತಿತ್ತು ಸುಂದರಿಯರ ಸೆಲೆಕ್ಷನ್

    ಅಂದು ನಿಜವಾಗಿ ನಡೆದಿದ್ದು ಏನು?
    ಸದ್ಯ ಇಲಾಖಾ ತನಿಖೆ ನಡೆಸಿರುವ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಕೃತ್ಯ ನಡೆದ ಸ್ಥಳದಲ್ಲಿ ರಶ್ಮಿ ಹಾಗೂ ನಯನ ಇರಲಿಲ್ಲ. ಘಟನೆ ನಡೆದ ಸ್ಥಳದಲ್ಲಿ ರಶ್ಮಿ ಹಾಗೂ ನಯನ ಇರುವಂತೆ ಸಾಬೀತು ಮಾಡಲು ಸ್ಯಾಂಟ್ರೋ ರವಿಯೇ ತನ್ನ ಕೆಲಸಗಾರ ಶೇಕ್ ಜೊತೆಯಲ್ಲಿ ರಶ್ಮಿ ಮೊಬೈಲ್ ಕೊಟ್ಟು ಕಳುಹಿಸಿದ್ದ. ನಯನ ಕೃತ್ಯ ನಡೆದ ದಿನ ಮೈಸೂರಿನಲ್ಲಿದ್ದರು. ಇಬ್ಬರೂ ಸ್ಥಳದಲ್ಲೇ ಇರಲೇ ಇಲ್ಲ. ಸೂಕ್ತ ತನಿಖೆ ನಡೆಸದೇ ಕಾಟನ್ ಪೇಟೆ ಇನ್‌ಸ್ಪೆಕ್ಟರ್‌ ಪ್ರವೀಣ್ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಸ್ಯಾಂಟ್ರೋ ರವಿಯ ಷಡ್ಯಂತ್ರದ ಜೊತೆಗೆ ಕಾಟನ್ ಪೇಟೆ ಠಾಣೆಯ ಅಂದಿನ ಇನ್‌ಸ್ಪೆಕ್ಟರ್‌ ಪ್ರವೀಣ್‌ ಅವರ ಕರ್ತವ್ಯ ಲೋಪ ಎದ್ದು ಕಾಣುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k