Tag: ಕಾಜೋಲ್

  • ಕಾಜೋಲ್ ಜೊತೆ ನಟಿಸಿದ್ದ ನಟಿ ನೂರ್ ಮಾಳಬಿಕಾ ಆತ್ಮಹತ್ಯೆ

    ಕಾಜೋಲ್ ಜೊತೆ ನಟಿಸಿದ್ದ ನಟಿ ನೂರ್ ಮಾಳಬಿಕಾ ಆತ್ಮಹತ್ಯೆ

    ಬಾಲಿವುಡ್ ನಟಿ ಕಾಜೋಲ್ (Kajol) ಜೊತೆ ‘ದಿ ಟ್ರಯಲ್’ ವೆಬ್ ಸಿರೀಸ್‌ನಲ್ಲಿ ನಟಿಸಿದ್ದ ನೂರ್ ಮಾಳಬಿಕಾ ದಾಸ್ (Noor Malabika Das) ಅವರು ತಮ್ಮ ಮುಂಬೈ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ. ಇದನ್ನೂ ಓದಿ:ಮಗು ಮಾಡಿಕೊಳ್ಳುವ ವಿಚಾರಕ್ಕೆ ಕಿತ್ತಾಟ ಆಯ್ತಾ? ಸ್ಪಷ್ಟನೆ ನೀಡಿದ ಚಂದನ್ ಶೆಟ್ಟಿ

    ಜೂನ್ 6ರಂದೇ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರಿಗೂ ಗೊತ್ತಾಗಿಲ್ಲ. ಮನೆಯಲ್ಲಿ ಯಾರೂ ಇರಲಿಲ್ಲ. ಅಕ್ಕಪಕ್ಕದ ಮನೆಯವರಿಗೂ ವಿಷಯ ತಿಳಿದಿಲ್ಲ. ಕೆಲ ದಿನಗಳ ಬಳಿಕ ಅಪಾರ್ಟ್‌ಮೆಂಟ್‌ನಲ್ಲಿ ದುರ್ವಾಸನೆ ಕಂಡು ಬಂದಿದ್ದು, ಕೂಡಲೇ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆ ಬಾಗಿಲು ತೆರೆದಾಗ ನಟಿಯ ಶವವು ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಆದರೆ ಯಾವ ಕಾರಣಕ್ಕೆ ನಟಿ ಆತ್ಮಹತ್ಯೆ ಮಾಡಿಕೊಂಡರು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಯಬೇಕಿದೆ.

    ಸಾಕಷ್ಟು ವೆಬ್ ಸಿರೀಸ್‌ನಲ್ಲಿ ನೂರ್ ಮಾಳಬಿಕಾ ನಟಿಸಿದ್ದಾರೆ. ಆದರೆ ಕಾಜೋಲ್ ಜೊತೆ ನಟಿಸಿದ ‘ದಿ ಟ್ರಯಲ್’ ಹೆಚ್ಚಿನ ಜನಪ್ರಿಯತೆ ನೀಡಿತ್ತು.

  • ಕಾಜೋಲ್ ಜೊತೆ 27 ವರ್ಷಗಳ ನಂತರ ನಟಿಸಿದ್ದಾರೆ ಪ್ರಭುದೇವ್

    ಕಾಜೋಲ್ ಜೊತೆ 27 ವರ್ಷಗಳ ನಂತರ ನಟಿಸಿದ್ದಾರೆ ಪ್ರಭುದೇವ್

    ಟ, ನಿರ್ದೇಶಕ ಪ್ರಭುದೇವ್ (Prabhudev) ಮತ್ತು ಬಾಲಿವುಡ್ ನಟಿ ಕಾಜೋಲ್‍ (Kajol) ಬರೋಬ್ಬರಿ 27 ವರ್ಷಗಳ ನಂತರ ಜೊತೆಯಾಗಿ ನಟಿಸಿದ್ದಾರೆ. ಎರಡುವರೆ ದಶಕಗಳ ಹಿಂದೆ ತೆರೆಕಂಡ ‘ಮಿನ್ಸರ್ ಕನವು’ ಸಿನಿಮಾದಲ್ಲಿ ಈ ಜೋಡಿ ಒಂದಾಗಿ ನಟಿಸಿತ್ತು. ಆನಂತರ ಜೊತೆಯಾಗಿ ಕಾಣಿಸಿಕೊಳ್ಳುವಂಥ ಅವಕಾಶವೇ ಸಿಕ್ಕಿರಲಿಲ್ಲ.

    ಮಿನ್ಸರ್ ಕನವು ಸಿನಿಮಾದಲ್ಲಿ ಪ್ರೇಮಿಗಳಾಗಿ ಈ ಜೋಡಿ ಕಾಣಿಸಿಕೊಂಡಿತ್ತು. ಅದರಲ್ಲೂ ಈ ಸಿನಿಮಾದ ವೆನ್ನಿಲ್ಲವೇ ವಿನ್ನಿಲ್ಲವೇ ಸೂಪರ್ ಹಿಟ್ ಗೀತೆ. ರೆಹಮಾನ್ ಸಂಗೀತ ಸಂಯೋಜನೆಯ ಈ ಹಾಡು ಪ್ರೇಮಿಗಳ ಮನಸ್ಸು ಕದ್ದಿತ್ತು. ಈ ಬಾರಿ ಕಾಜೋಲ್ ಮತ್ತು ಪ್ರಭುದೇವ್ ಡ್ಯುಯೆಟ್ ಹಾಡುತ್ತಿಲ್ಲ. ಥ್ರಿಲ್ಲರ್ ಸಿನಿಮಾಗಾಗಿ ಒಂದಾಗಿದ್ದಾರೆ.

     

    ತೆಲುಗಿನ ನಿರ್ದೇಶಕ ಚರಣ್ ತೇಜ್ ಉಪ್ಪಲಪಟ್ಟಿ ಇದೀಗ ಬಾಲಿವುಡ್ ಗೆ ಹಾರಿದ್ದಾರೆ. ಹಿಂದಿಯಲ್ಲಿ ಅವರು ಮಹಾರಾಗ್ನಿ (Maharagni)  ಹೆಸರಿನ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲೇ ಪ್ರಭುದೇವ್ ಮತ್ತು ಕಾಜೋಲ್ ಜೊತೆಯಾಗಿ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದೆ.

  • ಡೀಪ್‍ಫೇಕ್ ವಿಡಿಯೋದಲ್ಲಿ ಬಾಲಿವುಡ್ ನಟಿ ಕಾಜೋಲ್

    ಡೀಪ್‍ಫೇಕ್ ವಿಡಿಯೋದಲ್ಲಿ ಬಾಲಿವುಡ್ ನಟಿ ಕಾಜೋಲ್

    ಬಾಲಿವುಡ್ ಖ್ಯಾತ ನಟಿ ಕಾಜೋಲ್ (Kajol)ಅವರ ಡೀಪ್‍ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ರಶ್ಮಿಕಾ ಮಂದಣ್ಣ, ಕತ್ರಿನಾ (Katrina) ನಂತರ ಮತ್ತೋರ್ವ ನಟಿ ಇಂಥದ್ದೊಂದು ಕುತಂತ್ರಕ್ಕೆ ಸಿಲುಕಿಕೊಂಡಿದ್ದಾರೆ. ತಮ್ಮ ಡೀಪ್‍ಫೇಕ್ ವಿಡಿಯೋ ಕಂಡು ನಟಿ ಗರಂ ಆಗಿದ್ದಾರೆ. ಕೂಡಲೇ ದುರುಳರಿಗೆ ಹೆಡೆಮುರಿ ಕಟ್ಟುವಂತೆ ಅವರು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಇಂತಹ ವಿಡಿಯೋಗಳು ಹರಿದಾಡುತ್ತಿವೆ. ಸಹಜವಾಗಿಯೇ ನಟಿಯರಿಗೆ ಆತಂಕ ಹೆಚ್ಚಿಸಿದೆ. ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮಕ್ಕೆ ಮುಂದಾಗಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಆಕ್ರೋಶ ಕೂಡ ಹೊರ ಹಾಕುತ್ತಿದ್ದಾರೆ.

    ಬೆನ್ನುಬಿದ್ದ ದೆಹಲಿ ಪೊಲೀಸ್

    ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‍ಫೇಕ್ (Deepfake) ವೀಡಿಯೋ ವಿಚಾರವಾಗಿ ದೆಹಲಿ (Delhi) ಪೊಲೀಸರು (Police) ಬಿಹಾರ ಮೂಲದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ.

    ಶಂಕಿತ ಯುವಕ ಮೊದಲು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಾನೆ. ಅಲ್ಲದೇ ನಂತರ ಅದನ್ನು ಇತರ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಯುವಕನ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಮೊದಲು ಅಪ್‍ಲೋಡ್ ಮಾಡಿದ್ದರಿಂದ ತನಿಖೆಗೆ ಹಾಜರಾಗುವಂತೆ ಯುವಕನಿಗೆ ನೋಟಿಸ್ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಬಿಹಾರ ಮೂಲದ ಯುವಕನಿಗೆ ಐಎಫ್‍ಎಸ್‍ಒ ಘಟಕದ ಮುಂದೆ ಹಾಜರಾಗಲು ಮತ್ತು ತನ್ನ ಮೊಬೈಲ್ ಫೋನ್ ತರಲು ಸೂಚಿಸಲಾಗಿತ್ತು. ಎಫ್‍ಐಆರ್ ದಾಖಲಿಸಿದ ಕೂಡಲೇ ಐಎಫ್‍ಎಸ್‍ಒ ಘಟಕವು ಆರೋಪಿಯನ್ನು ಗುರುತಿಸಲು ಯುಆರ್‍ಎಲ್ ಮತ್ತು ಇತರ ವಿವರಗಳನ್ನು ಪಡೆಯಲು ಮೆಟಾಗೆ ಪತ್ರ ಬರೆದಿತ್ತು. ಆ ಮಾಹಿತಿ ಆಧಾರದ ಮೇಲೆ ನೋಟಿಸ್ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     

    ಈ ಪ್ರಕರಣ ಸಂಬಂಧ ನ.10 ಐಪಿಸಿ ಸೆಕ್ಷನ್ 465 ಮತ್ತು 469 (ಗೌರವಕ್ಕೆ ಹಾನಿ ಮಾಡುವ ಉದ್ದೇಶದಿಂದ ನಕಲು ಮಾಡುವುದು) ಮತ್ತು ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಸಿ ಮತ್ತು 66ಇ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು.

  • ‘ಪಠಾಣ್’ ಕಲೆಕ್ಷನ್ ವಿಚಾರದಲ್ಲಿ ಶಾರುಖ್ ಸುಳ್ಳು ಹೇಳಿದ್ರಾ?: ಪ್ರಶ್ನೆ ಮಾಡಿದ ನಟಿ ಕಾಜೋಲ್

    ‘ಪಠಾಣ್’ ಕಲೆಕ್ಷನ್ ವಿಚಾರದಲ್ಲಿ ಶಾರುಖ್ ಸುಳ್ಳು ಹೇಳಿದ್ರಾ?: ಪ್ರಶ್ನೆ ಮಾಡಿದ ನಟಿ ಕಾಜೋಲ್

    ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಯಶಸ್ಸು ಕಂಡು ಬಾಲಿವುಡ್ (Bollywood) ಅನ್ನು ಸೋಲಿನ ಗಡಿಯಿಂದ ಆಚೆ ತಂದಿತ್ತು ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ. ಸ್ವತಃ ಸಿನಿಮಾ ತಂಡವೇ ಘೋಷಿಸಿಕೊಂಡಂತೆ ಅದು ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹಲವು ವರ್ಷಗಳ ಸೋಲಿನ ನಂತರ ಶಾರುಖ್ ಮತ್ತೆ ಪುಟಿದೆದ್ದಿರು. ಅಭಿಮಾನಿಗಳು ಕೂಡ ಸಂಭ್ರಮಿಸಿದ್ದರು. ಸದ್ಯ ಶಾರುಖ್ ಮತ್ತೊಂದು ಸಿನಿಮಾದ ರಿಲೀಸ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಕಲೆಕ್ಷನ್ ಬಗ್ಗೆ ಖ್ಯಾತ ಬಾಲಿವುಡ್ ನಟಿ ಕಾಜೋಲ್ (Kajol) ಅನುಮಾನ ವ್ಯಕ್ತ ಪಡಿಸಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ನಿರೂಪಕರು ‘ಶಾರುಖ್ ಖಾನ್ ಅವರಿಗೆ ಏನಾದರೂ ಕೇಳಬೇಕು ಅಂತ ನಿಮಗೆ ಅನಿಸ್ತಿದ್ಯಾ?’ ಎಂದು ಪ್ರಶ್ನೆ ಮಾಡುತ್ತಾರೆ. ಕೊಂಚ ಯೋಚನೆ ಮಾಡುವ ಕಾಜೋಲ್, ‘ಈವರೆಗೂ ಅವರ ಬಗ್ಗೆ ಎಲ್ಲವೂ ಇಂಟರ್ ನೆಟ್ ನಲ್ಲಿ ಇದೆ. ಒಂದೇ ಒಂದು ಪ್ರಶ್ನೆ  ಕೇಳುವುದಾದರೆ, ಪಠಾಣ್ ಸಿನಿಮಾ ನಿಜವಾಗಿಯೂ ಕಲೆಕ್ಷನ್ (Collection) ಎಷ್ಟು ಮಾಡಿತು? ಎನ್ನುತ್ತಾರೆ. ನಂತರ ವ್ಯಂಗ್ಯವಾಗಿ ಅವರು ನಗುತ್ತಾರೆ.

    ಕಾಜೋಲ್ ಕೇಳಿದ ಈ ಪ್ರಶ್ನೆಗೆ ಶಾರುಖ್ ಅಭಿಮಾನಿಗಳು ಗರಂ ಆಗಿದ್ದಾರೆ. ಶಾರುಖ್ ಬಗ್ಗೆ ಕಾಜೋಲ್ ಗೆ ಏಕೆ ಅನುಮಾನ? ಅವರು ಸುಳ್ಳು ಹೇಳಿದ್ದಾರೆ ಅಂತಾನಾ? ಏನು ಅವರ ಮಾತಿನ ಧಾಟಿ ಎಂದು ಹರಿಹಾಯ್ದಿದ್ದಾರೆ. ಕಾಜೋಲ್ ಈ ರೀತಿ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ. ಬಾಲಿವುಡ್ ನಟಿಯಾಗಿ ಸುಮ್ಮನಿರಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

    ಕಡಿಮೆ ದಿನದಲ್ಲೇ ಸಾವಿರ ಕೋಟಿ ದಾಟಿದ ಪಠಾಣ್

    ಶಾರುಖ್ ಖಾನ್ ನಟನೆಯ ಪಠಾಣ್ (Pathan) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿತ್ತು. ಸಿನಿಮಾ ರಿಲೀಸ್ ಆಗಿ 27ನೇ ದಿನಕ್ಕೆ ಸಾವಿರ ಕೋಟಿ (Thousand Crore) ಕ್ಲಬ್ (Club) ಸೇರಿತ್ತು. ಈ ವರ್ಷದಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಅತೀ ಹೆಚ್ಚು ಹಣ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿತ್ತು. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ಪಠಾಣ್ ಸಿನಿಮಾದ ಹಾಡೊಂದು ವಿವಾದಕ್ಕೀಡಾದಾಗ ಈ ಸಿನಿಮಾವನ್ನು ಗೆಲ್ಲಿಸಲೇಬಾರದು ಎಂದು ಹಲವರು ಕರೆ ನೀಡಿದರು. ಪ್ರತಿಭಟನೆಗಳು ನಡೆದವು, ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಯಿತು. ಚಿತ್ರಮಂದಿರಗಳ ಮೇಲೆ ದಾಳಿ ನಡೆದವು. ಸಿನಿಮಾದ ಪೋಸ್ಟರ್ ಹರಿದು ಹಾಕಲಾಯಿತು. ಪೋಸ್ಟರ್ ಸುಡಲಾಯಿತು. ಏನೆಲ್ಲ ಸಂಕಷ್ಟಗಳು ಎದುರಾದರೂ, ಪಠಾಣ್ ಮಾತ್ರ ಗೆಲುವು ಸಾಧಿಸಿದೆ.

    ಪಠಾಣ್ ಒಂದೊಳ್ಳೆ ಸಿನಿಮಾ. ಎಲ್ಲರ ಮೆಚ್ಚುಗೆಗೂ ಅದು ಪಾತ್ರವಾಗಲಿದೆ. ದೇಶಭಕ್ತಿ ಸಾರುವಂತಹ ಕಥೆಯನ್ನು ಇದು ಒಳಗೊಂಡಿದೆ ಎಂದು ಶಾರುಖ್ ಹೇಳಿದರೂ, ವಿರೋಧಿಗಳು ಮಾತ್ರ ಕೇಳಲಿಲ್ಲ. ಕೆಲವು ರಾಜ್ಯಗಳಲ್ಲಿ ಸಿನಿಮಾವನ್ನು ನಿಷೇಧ ಮಾಡುವಂತೆ ಒತ್ತಡ ತರಲಾಯಿತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಿದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ.

     

    ಪಠಾಣ್ ಸಿನಿಮಾಗಾಗಿ ಇಡೀ ಬಾಲಿವುಡ್ ಒಂದಾಯಿತು. ಈ ಸಿನಿಮಾವನ್ನು ಗೆಲ್ಲಿಸುವ ಮೂಲಕ ಬಾಲಿವುಡ್ ಗೆಲ್ಲಿಸೋಣ ಎನ್ನುವ ಮಾತು ಕೇಳಿ ಬಂತು. ಹಾಗಾಗಿ ಶಾರುಖ್ ವಿರೋಧಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿ ಮಾತನಾಡಿದರು. ಮೊದ ಮೊದಲು ತೆಗಳುತ್ತಿದ್ದವರು, ಆ ಮೇಲೆ ಸಿನಿಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದರು. ಇದೆಲ್ಲದರ ಪರಿಣಾಮ ಇದೀಗ ಪಠಾಣ್ ಸಾವಿರ ಕೋಟಿ ಬಾಚಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಟಿ ಕೋಟಿ ಕೊಟ್ಟು ಮೂರು ಕಚೇರಿ ಖರೀದಿಸಿದ ಕಾಜೋಲ್- ಅಜಯ್ ದೇವಗನ್ ದಂಪತಿ

    ಕೋಟಿ ಕೋಟಿ ಕೊಟ್ಟು ಮೂರು ಕಚೇರಿ ಖರೀದಿಸಿದ ಕಾಜೋಲ್- ಅಜಯ್ ದೇವಗನ್ ದಂಪತಿ

    ಬಾಲಿವುಡ್ ಸಿನಿಮಾರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕನಾಗಿ ಸೈ ಎನಿಸಿಕೊಂಡಿರುವ ಅಜಯ್ ದೇವಗನ್ (Ajay Devgn) ಅವರು ಮುಂಬೈನಲ್ಲಿ ಕೋಟಿ ಕೋಟಿ ಕೊಟ್ಟು ಆಸ್ತಿ ಖರೀದಿ ಮಾಡಿದ್ದಾರೆ. ನಟನೆಯ ಜೊತೆ ಉದ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಅಜಯ್ ದೇವಗನ್ ಅವರ ಕಚೇರಿಗಾಗಿ ಕೋಟ್ಯಾಂತರ ಮೌಲ್ಯದ ಆಸ್ತಿ ಖರೀದಿ ಮಾಡಿದ್ದಾರೆ.

    ಕಲಾವಿದರಾಗಿ ಕಾಜೋಲ್ (Kajol)- ಅಜಯ್ ದೇವಗನ್ ಸಕ್ಸಸ್ ಕಂಡಿದ್ದಾರೆ. ನಿರ್ದೇಶನ, ನಿರ್ಮಾಣ, ಉದ್ಯಮ ಕ್ಷೇತ್ರ ಅಂತಾ ತಮ್ಮನ್ನ ಅಜಯ್ ದೇವಗನ್ ತೊಡಗಿಸಿಕೊಂಡಿದ್ದಾರೆ. ಪತಿಯ ಕೆಲಸಕ್ಕೆ ಕಾಜೋಲ್ ಕೂಡ ಸಾಥ್ ನೀಡಿದ್ದಾರೆ. ತಮ್ಮ ಸಿನಿಮಾ ನಿರ್ಮಾಣ, ವಿತರಣೆ ಹಾಗೂ ವಿಎಫ್‌ಎಕ್ಸ್ ಸಂಸ್ಥೆಗಳ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಹಾಗೂ ಇತರೆ ನಟರ ಸಿನಿಮಾಗಳ ನಿರ್ಮಾಣ ಹಾಗೂ ವಿತರಣೆಯೆಡೆಗೂ ಗಮನ ಹರಿಸುವ ಯೋಜನೆಗಾಗಿಯೇ ದೊಡ್ಡ ಕಚೇರಿಯನ್ನು ದೇವಗನ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಭಾರಿ ದೊಡ್ಡ ಮೊತ್ತವನ್ನೇ ತೆತ್ತು ತಮ್ಮ ಅಭಿರುಚಿಗೆ ಅನುಗುಣವಾಗಿ ಕಚೇರಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

    13,293 ಚದರ ಅಡಿಯ ದೊಡ್ಡ ಅಪಾರ್ಟ್ಮೆಂಟ್ ಅನ್ನು ದೆವಗನ್ ಖರೀದಿ ಮಾಡಿದ್ದಾರೆ. ದೇವಗನ್‌ರ ಈ ಕಚೇರಿಯು ಮುಂಬೈನ ಒಶಿವಾರದ ವೀರಾ ದೇಸಿ ರಸ್ತೆಯಲ್ಲಿದೆ. ನೊಂದಣಿ ದಾಖಲೆಗಳ ಅನ್ವಯ ಈ ಕಚೇರಿ ಸ್ಥಳಕ್ಕೆ 45.09 ಕೋಟಿ ಮೊತ್ತವನ್ನು ಅಜಯ್ ದೇವಗನ್ ನೀಡಿದ್ದಾರೆ. ಇದು ದಾಖಲಾಗಿರುವ ಮೊತ್ತವಾದರೆ ಇದಕ್ಕಿಂತಲೂ ಸುಮಾರು 30% ಹೆಚ್ಚು ಮೊತ್ತವನ್ನು ಮಾಲೀಕರಿಗೆ ದೇವಗನ್ ನೀಡಿದ್ದಾರೆ ಎನ್ನಲಾಗುತ್ತದೆ. ಇದನ್ನೂ ಓದಿ:3ನೇ ಪತ್ನಿಯಿಂದಲೂ ದೂರಾವಾದ್ರಾ ನಟ ಪವನ್ ಕಲ್ಯಾಣ್?

    ಇದರ ಹೊರತಾಗಿ ಮುಂಬೈನ ಮತ್ತೊಂದು ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದು ಇದೂ ಸಹ ಕಚೇರಿಗಾಗಿಯೇ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಮನಿಕಂಟ್ರೋಲ್ ಮಾಹಿತಿ ಪ್ರಕಾರ, 8405 ಚದರ ಅಡಿಯ ದೊಡ್ಡ ಕಚೇರಿ ಸ್ಥಳವನ್ನು 30.35 ಕೋಟಿ ತೆತ್ತು ಅಜಯ್ ಖರೀದಿ ಮಾಡಿದ್ದಾರೆ. ಇದಕ್ಕೂ ಸಹ ದಾಖಲೆಗಳಲ್ಲಿ ನಮೂದಿಸಿದಕ್ಕಿಂತಲೂ ಹೆಚ್ಚಿನ ಮೊತ್ತವನ್ನೇ ಅಜಯ್ ನೀಡಿದ್ದಾರೆ. ಮೂರನೇ ಕಚೇರಿಯನ್ನು ಮುಂಬೈನ ವೀರ್ ಸಾವರ್ಕರ್ ಪ್ರಾಜೆಕ್ಟ್‌ನವರಿಂದ ಖರೀದಿ ಮಾಡಿದ್ದು 4893 ಚದರ ಅಡಿಯ ಕಚೇರಿ ಸ್ಥಳವನ್ನು 14.74 ಕೋಟಿ ನೀಡಿ ಖರೀದಿ ಮಾಡಿದ್ದಾರೆ. ಅಲ್ಲಿಗೆ ಮೂರು ಕಚೇರಿಗೆ ಸುಮಾರು 100 ಕೋಟಿಗೂ ಹೆಚ್ಚು ಹಣವನ್ನು ನೀಡಿ ಅಜಯ್ ಖರೀದಿಸಿದ್ದಾರೆ. ಇದೇ ವರ್ಷದ ಏಪ್ರಿಲ್‌ನಲ್ಲಿ ಅಜಯ್ ದೇವಗನ್ ಪತ್ನಿ ಕಾಜೋಲ್ ಮುಂಬೈನಲ್ಲಿಯೇ 16.50 ಕೋಟಿ ಹಣ ನೀಡಿ 2493 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಈ ಫ್ಲ್ಯಾಟ್ ಜೊತೆಗೆ ನಾಲ್ಕು ಕಾರುಗಳ ಪಾರ್ಕಿಂಗ್ ಸ್ಥಳವೂ ಅವರಿಗೆ ದೊರಕಿತ್ತು. ಇದಕ್ಕಾಗಿ ಹೆಚ್ಚಿನ ಮೊತ್ತವನ್ನು ನಟಿ ತೆತ್ತಿದ್ದರು.

    ನಟ ಅಜಯ್ ದೇವಗನ್ ಅವರು ನಟನೆ, ನಿರ್ದೇಶನ ಅಂತಾ ಬ್ಯುಸಿಯಾಗಿದ್ದಾರೆ. ಕಾಜೋಲ್ ಅವರು ಇತ್ತೀಚಿಗೆ ‘ಲಸ್ಟ್ ಸ್ಟೋರೀಸ್ 2’ನಲ್ಲಿ ನಟಿಸಿದ್ದರು. ‘ದಿ ಟ್ರಯಲ್’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ಪ್ರಚಾರಕ್ಕಾಗಿ ಗಿಮಿಕ್‌ ಮಾಡಿದ ಕಾಜೋಲ್‌ಗೆ ನೆಟ್ಟಿಗರಿಂದ ತರಾಟೆ

    ಸಿನಿಮಾ ಪ್ರಚಾರಕ್ಕಾಗಿ ಗಿಮಿಕ್‌ ಮಾಡಿದ ಕಾಜೋಲ್‌ಗೆ ನೆಟ್ಟಿಗರಿಂದ ತರಾಟೆ

    ಬಾಲಿವುಡ್ (Bollywood) ನಟಿ ಕಾಜೋಲ್ (Kajol) ಅವರು ತಮ್ಮ ಕೆರಿಯರ್ ಹೊಸತರಲ್ಲಿ ಸಾಕಷ್ಟು ಚಿತ್ರಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಮಿಂಚಿದ್ದರು. ಪೀಕ್‌ನಲ್ಲಿರುವಾಗಲೇ ಅಜಯ್ ದೇವಗನ್ ಜೊತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಸಿನಿಮಾ ಸೆಲೆಕ್ಷನ್‌ನಲ್ಲಿ ಸಖತ್ ಚ್ಯುಸಿಯಾದ್ರು. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಾ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾದರು. ಆದರೆ ಇತ್ತೀಚಿನ ನಟಿಯ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ದಾಂಪತ್ಯದಲ್ಲಿ ಬಿರುಕು(Divorce) ಉಂಟಾಗಿದ್ಯಾ.? ಎಂಬ ಅನುಮಾನ ಕಾಡಿತ್ತು. ಆದರೆ ಅಸಲಿ ವಿಚಾರವೇ ಬೇರೇ.

     

    View this post on Instagram

     

    A post shared by Kajol Devgan (@kajol)

    ತಮ್ಮ ಸಿನಿಮಾದ ಪ್ರಚಾರಕ್ಕಾಗಿ, ಬ್ರೇಕಿಂಗ್ ನ್ಯೂಸ್‌ಗಾಗಿ ನಟಿ ಹೊಸ ತಂತ್ರ ರೂಪಿಸಿದ್ದರು. ಜೀವನದ ದೊಡ್ಡ ವಿಚಾರಣೆ ಎದುರಿಸುತ್ತಿದ್ದೇನೆ. ಹಾಗಾಗಿ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅದು ಪ್ರಚಾರದ ಗಿಮಿಕ್ ಎಂಬುದು ಈಗ ಬಯಲಾಗಿದೆ.‌ ಇದನ್ನೂ ಓದಿ:ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್‌ ಎಂಗೇಜ್‌ಮೆಂಟ್

     

    View this post on Instagram

     

    A post shared by Disney+ Hotstar (@disneyplushotstar)

    ಅಮೆರಿಕದ ‘ದಿ ಗುಡ್ ವೈಫ್’ ಸರಣಿಯ ಇಂಡಿಯನ್ ವರ್ಷನ್‌ಗೆ ‘ದಿ ಟ್ರಯಲ್’ (The Trail) ಎಂದು ಶೀರ್ಷೀಕೆ ಇಡಲಾಗಿದೆ. ಇದರಲ್ಲಿ ಕಾಜೋಲ್ ಅವರು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಅದರ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಜೂನ್ 12ರಂದು ‘ದಿ ಟ್ರಯಲ್’ ಟ್ರೇಲರ್ ಅನಾವರಣ ಆಗಲಿದೆ. ಈ ಟೈಟಲ್ ಜೊತೆ ‘ಪ್ರೀತಿ, ಕಾನೂನು ಮತ್ತು ಮೋಸ’ ಎಂಬ ಟ್ಯಾಗ್ ಲೈನ್ ಇದೆ. ಹಾಗಾಗಿ ಈ ವೆಬ್ ಸರಣಿ ಬಗ್ಗೆ ಹೆಚ್ಚಿನ ಕುತೂಹಲ ನಿರ್ಮಾಣ ಆಗಿದೆ. ಇದು ಕೋರ್ಟ್ ರೂಮ್ ಡ್ರಾಮಾ ಶೈಲಿಯಲ್ಲಿ ಮೂಡಿಬಂದಿದ್ದು, ಟ್ರೇಲರ್ ನೋಡಲು ಫ್ಯಾನ್ಸ್ ಕಾದಿದ್ದಾರೆ.

    ಜೀವನದ ದೊಡ್ಡ ವಿಚಾರಣೆ ಎದುರಿಸುತ್ತಿದ್ದೇನೆ. ಹಾಗಾಗಿ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಕಾಜೋಲ್ ಅವರು ಪೋಸ್ಟ್ ಮಾಡಿದಾಗ ಅಪ್ಪಟ ಅಭಿಮಾನಿಗಳಿಗೆ ಅಚ್ಚರಿ ಆಗಿದ್ದು ನಿಜ. ಇದು ಡಿವೋರ್ಸ್ ಮುನ್ಸೂಚನೆ ಇರಬಹುದೇ ಕಾಜೋಲ್ ಅವರ ಸಂಸಾರದಲ್ಲಿ ಬಿರುಕು ಮೂಡಿರಬಹುದೇ ಎಂಬಿತ್ಯಾದಿ ಅನುಮಾನಗಳು ಮೂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಕಾಜೋಲ್‌ ಡ್ರಾಮಾಗೆ ನೆಟ್ಟಿಗರು ಖಡಕ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಸಿನಿಮಾ ಪ್ರಚಾರಕ್ಕೆ ಹೀಗೆ ಗಿಮಿಕ್‌ ಮಾಡೋದಾ ಅಂತಾ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

  • ‘ಪಠಾಣ್’ ಸಿನಿಮಾ ಗೆಲುವಿನ ಬೆನ್ನಲ್ಲೇ ಶಾರುಖ್ ಹಳೆ ಸಿನಿಮಾಗಳಿಗೆ ಬೇಡಿಕೆ

    ‘ಪಠಾಣ್’ ಸಿನಿಮಾ ಗೆಲುವಿನ ಬೆನ್ನಲ್ಲೇ ಶಾರುಖ್ ಹಳೆ ಸಿನಿಮಾಗಳಿಗೆ ಬೇಡಿಕೆ

    ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ಕೋಟಿ ಕೋಟಿ ಹಣ ಗಳಿಸುತ್ತಿದ್ದಂತೆಯೇ ಅವರ ಹಳೆ ಚಿತ್ರಗಳಿಗೆ ಬೇಡಿಕೆ ಬಂದಿದೆ. ಸೋಲಿನ ಸುಳಿಯಲ್ಲಿದ್ದ ಬಾಲಿವುಡ್ ಗೂ ಪಠಾಣ್ ಸಿನಿಮಾ ಟಾನಿಕ್ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಶಾರುಖ್ ಹಳೆಯ ಚಿತ್ರಗಳಿಗೆ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಪ್ರೇಮಿಗಳ ದಿನಕ್ಕಾಗಿ ‘ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ’ (Dil Wale Dulhania Le jayenge) ಚಿತ್ರ ಬಿಡುಗಡೆ ಆಗುತ್ತಿದೆ.

    28 ವರ್ಷಗಳ ಹಿಂದೆ ತೆರೆಕಂಡ ಈ ಸಿನಿಮಾದಲ್ಲಿ ಶಾರುಖ್ ಖಾನ್, ಕಾಜೋಲ್ (Kajol), ಸಿಮ್ರನ್ (Simran) ಪಾತ್ರಗಳು ನೋಡುಗರ ಮನತಟ್ಟಿದ್ದವು. ಈ ಸಿನಿಮಾ ಕೇವಲ ಪ್ರೇಮಕಥೆಯನ್ನು ಆಧರಿಸಿದ್ದಲ್ಲದೇ, ಫ್ಯಾಮಿಲಿ ಎಮೋಷನ್ ಕೂಡ ಚಿತ್ರದಲ್ಲಿತ್ತು. ಈ ಕಾರಣದಿಂದಾಗಿ ಕೇವಲ ಪ್ರೇಮಿಗಳಿಗೆ ಮಾತ್ರವಲ್ಲ, ಕುಟುಂಬದ ಪ್ರತಿ ಸದಸ್ಯರು ಒಟ್ಟಾಗಿ ಈ ಸಿನಿಮಾ ನೋಡಿ ಗೆಲ್ಲಿಸಿದ್ದರು. ಇದನ್ನೂ ಓದಿ:ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿರುವ ವಿಚಾರ ನಿಜಾನಾ? ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ

    ಈ ಸಿನಿಮಾ ಆ ವರ್ಷದಲ್ಲಿ ಅನೇಕ ದಾಖಲೆಗಳನ್ನು ಬರೆದಿತ್ತು. ನಿರ್ದೇಶಕ, ನಟ, ನಟಿಯರು ಸೇರಿದಂತೆ ಹತ್ತು ವಿಭಾಗಗಳಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿತ್ತು. ಅಭಿಮಾನಿಗಳಿಗೆ ಶಾರುಖ್ ಖಾನ್ ಗೆ ‘ಕಿಂಗ್ ಆಫ್ ರೊಮ್ಯಾನ್ಸ್’ ಎನ್ನುವ ಬಿರುದು ನೀಡಿದ್ದರು. ಸತತ 25 ವರ್ಷಗಳ ಕಾಲ ಮುಂಬೈನ ಮರಾಠ ಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಇಂತಹ ಸಿನಿಮಾವನ್ನು ಪ್ರೇಮಿಗಳ ದಿನದ ಕೊಡುಗೆಯಾಗಿ ಈ ವಾರ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಿವುಡ್ ನಟಿ ಕಾಜೋಲ್‍ಗೆ ಕೊರೊನಾ

    ಬಾಲಿವುಡ್ ನಟಿ ಕಾಜೋಲ್‍ಗೆ ಕೊರೊನಾ

    ಮುಂಬೈ: ಬಾಲಿವುಡ್ ನಟಿ ಕಾಜೋಲ್‍ಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ದೇಶಾದ್ಯಂತ ಕೊರೊನಾ 3ನೇ ಅಲೆ ಆರ್ಭಟ ನಡೆಸುತ್ತಿದೆ. ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿ ಕಾಜೋಲ್‍ಗೆ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಈ ಕುರಿತಂತೆ ಇನ್‍ಸ್ಟಾಗ್ರಾಮ್‍ನಲ್ಲಿ ಮಾಹಿತಿ ನೀಡಿರುವ ಕಾಜೋಲ್ ತಮ್ಮ ಪ್ರೀತಿಯ ಪುತ್ರಿ ನೈಸಾ ದೇವಗನ್ ಫೋಟೋವನ್ನು ಶೇರ್ ಮಾಡಿ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಫೋಟೋದಲ್ಲಿ ನೈಸಾ ದೇವಗನ್ ಮೆಹೆಂದಿ ಹಾಕಿಸಿಕೊಂಡು ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ನೆಗಡಿ ಹೊಂದಿರುವ ನನ್ನ ಮೂಗನ್ನು ತೋರಿಸಲು ನನಗೆ ಇಷ್ಟವಿಲ್ಲ. ನಾನು ವಿಶ್ವದ ಸಿಹಿಯಾದ ನಗುವನ್ನು ಪೋಸ್ಟ್ ಮಾಡುತ್ತೇನೆ ಮಿಸ್ ಯೂ ನೈಸಾ ದೇವ್‍ಗನ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತಮ್ಮ ಜೊತೆ ಸಮಯ ಕಳೆಯುವಂತೆ ನಿರ್ದೇಶಕರೊಬ್ಬರು ಹೇಳಿದ್ದರು- ಕಾಸ್ಟಿಂಗ್ ಕೌಚ್ ಬಗ್ಗೆ ದಿವ್ಯಾಂಕ ಮಾತು

     

    View this post on Instagram

     

    A post shared by Kajol Devgan (@kajol)

    ಸದ್ಯ ನಿರ್ದೇಶಕಿ ರೇವತಿ ಆ್ಯಕ್ಷನ್ ಕಟ್ ಹೇಳುತ್ತಿರುವ ದಿ ಲಾಸ್ಟ್ ಹುರ್ರೇ ಎಂಬ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಕಾಜೋಲ್ ಪುತ್ರಿ ನೈಸಾ ಪ್ರಸ್ತುತ ಸಿಂಗಾಪುರದ ಗ್ಲಿಯನ್ ಇನ್‍ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್‍ನಲ್ಲಿ ಅಂತರರಾಷ್ಟ್ರೀಯ ಹಾಸ್ಪಿಟಾಲಿಟಿ ಅಧ್ಯಯನ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಶಾಲಾ ಶಿಕ್ಷಣಕ್ಕಾಗಿ ಸಿಂಗಾಪುರದಲ್ಲಿದ್ದರು. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

  • ವಾಶ್‌ರೂಂ ಹೋಗೋ ಅರ್ಜೆಂಟಲ್ಲಿದ್ದಾರೆ – ಕಾಜೊಲ್ ಟ್ರೋಲ್ ಮಾಡಿದ ನೆಟ್ಟಿಗರು

    ವಾಶ್‌ರೂಂ ಹೋಗೋ ಅರ್ಜೆಂಟಲ್ಲಿದ್ದಾರೆ – ಕಾಜೊಲ್ ಟ್ರೋಲ್ ಮಾಡಿದ ನೆಟ್ಟಿಗರು

    ಮುಂಬೈ: ಬಾಲಿವುಡ್‌ನ ಖ್ಯಾತ ನಟಿಯರಲ್ಲಿ ಕಾಜೊಲ್ ಅವರು ಕೂಡ ಒಬ್ಬರು. ಇತ್ತೀಚೆಗೆ ಕಾಜೊಲ್ ವಿಭಿನ್ನ ರೀತಿಯಲ್ಲಿ ಟ್ರೋಲ್ ಆಗುತ್ತಿದ್ದಾರೆ. ಕಾಜೊಲ್ ಅವರ ನಡೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

    ಭಾನುವಾರದಂದು ಕಾಜೊಲ್ ಅವರು ಏರ್‌ಪೋರ್ಟ್ನಲ್ಲಿ ಬರುವಾಗ ಈ ವೀಡಿಯೋವನ್ನು ಮಾಡಲಾಗಿದೆ. ಈ ವೀಡಿಯೋದಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದ ನಟಿ ಯಾವುದೋ ಆತುರದಲ್ಲಿದ್ದಂತೆ ಕಾಣುತ್ತಿದ್ದರು. ಈ ಬಗ್ಗೆ ನೆಟ್ಟಿಗರು ಸಿಕ್ಕಾಪಟೆ ಟ್ರೋಲ್ ಮಾಡಿದ್ದಾರೆ. ಈ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ‘ರಾಜಧಾನಿ ಎಕ್ಸ್ಪ್ರೆಸ್’ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಈ ವೀಡಿಯೋವನ್ನು ನೋಡಿದ ಒಬ್ಬರು ಕಾಮೆಂಟ್ ಮಾಡಿ ವಾಶ್‌ರೂಂಗೆ ಹೋಗುವ ಅರ್ಜೆಂಟ್‌ನಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದಾರೆ ಎಂದರೆ, ಮತ್ತೊಬ್ಬರೂ ಮೆಕಪ್ ಇಲ್ಲದೇ ಹೊರ ಬಂದಿದ್ದಾರೆ ಎಂದು ಹೇಳಿದ್ದಾರೆ. ಮನೆಯನ್ನು ಸ್ವಚ್ಛಗೊಳಿಸುವ ಟೆನ್ಶನ್‌ಲ್ಲಿದ್ದಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.

    ವೀಡಿಯೋದಲ್ಲಿ ಕಾಜೊಲ್ ಹಳದಿ ಬಣ್ಣದ ದುಪ್ಪಟ್ಟವನ್ನು ಹೊದ್ದು ಏರ್‌ಪೋರ್ಟ್ನಿಂದ ಬರುತ್ತಿದ್ದಾರೆ. ಅವರು ವೇಗವಾಗಿ ಹಜ್ಜೆ ಹಾಕಿ, ಯಾರ ಮಾತಿಗೂ ಲಕ್ಷ್ಯ ಕೊಡದೇ ಹಾಗೇ ಕಾರನ್ನು ಹತ್ತಿರುವ ದೃಶ್ಯವನ್ನು ವೀಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಭಾರೀ ಮಳೆಗೆ ಮಲೇಷ್ಯಾದ 7 ರಾಜ್ಯಗಳಲ್ಲಿ ಪ್ರವಾಹ – ಸಾವಿರಾರು ಮಂದಿ ಪಲಾಯನ

    ಈ ಹಿಂದೆ ಕಾಜೊಲ್ ಅವರ ಹುಟ್ಟುಹಬ್ಬದ ದಿನ ಟ್ರೋಲ್‌ಗೆ ಒಳಗಾಗಿದ್ದರು. ಅಭಿಮಾನಿಗಳು ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೊರಲು ಆಗಮಿಸಿದ್ದರು. ಆಗ ಅವರಿಗೆ ಧನ್ಯವಾದವನ್ನು ತಿಳಿಸದೇ ಕೇಕ್ ಕಟ್ ಮಾಡಿ ಹಾಗೆ ಬಂಗಲೆಯೊಳಗೆ ತೆರಳಿದ್ದರು. ಆಕೆಯ ವರ್ತನೆಗೆ ಆಗ ನೆಟ್ಟಿಗರಿಂದ ಭಾರೀ ಟ್ರೋಲ್ ಮಾಡಿದ್ದರು. ಇದನ್ನೂ ಓದಿ: ಜನ ಸಹಕಾರ ಕೊಡದಿದ್ದರೆ ಲಾಕ್‍ಡೌನ್ ಅನಿವಾರ್ಯ: ಆರಗ ಜ್ಞಾನೇಂದ್ರ

    1999ರಲ್ಲಿ ನಟ ಅಜಯ್ ದೇವಗನ್ ಅವರನ್ನು ವಿವಾಹವಾಗಿದ್ದರು. ಈ ಜೋಡಿ ಇಷ್ಕ್, ಗುಂಡರಾಜ್, ಪ್ಯಾರ್ ತೋ ಹೋನಾ ಹಿ ಥಾ ಮತ್ತು ಯು ಮೆ ಔರ್ ಹಮ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕಳೆದ ಬಾರಿ, ಅವರು 2020 ರಲ್ಲಿ ಬಿಡುಗಡೆಯಾದ ತನ್ಹಾಜಿ ದಿ ಅನ್‌ಸಂಗ್ ವಾರಿಯರ್‌ನಲ್ಲಿ ಈ ಜೋಡಿ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  • ಅಭಿಮಾನಿ ತಂದಿದ್ದ ಕೇಕ್ ತಿನ್ನಲು ನಿರಾಕರಣೆ – ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಕಾಜೋಲ್

    ಅಭಿಮಾನಿ ತಂದಿದ್ದ ಕೇಕ್ ತಿನ್ನಲು ನಿರಾಕರಣೆ – ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಕಾಜೋಲ್

    ಮುಂಬೈ: ಬಾಲಿವುಡ್ ನಟಿ ಕಾಜೋಲ್ ಗುರುವಾರ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟ ಕಾಜೋಲ್‍ಗೆ ವಿಶ್ ಮಾಡಲು ಅಭಿಮಾನಿಯೊಬ್ಬರು ತಂದಿದ್ದ ಕೇಕ್ ತಿನ್ನಲು ನಿರಾಕರಿಸಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಾಜಲ್ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಆಗಸ್ಟ್ 5 ರಂದು ಕಾಜೋಲ್ ಹುಟ್ಟುಹಬ್ಬದ ಪ್ರಯುಕ್ತ ಹಲವಾರು ಅಭಿಮಾನಿಗಳು ಕಾಜೋಲ್ ಮನೆ ಮುಂದೆ ಕೇಕ್ ಹಿಡಿದು ನಿಂತ ಕಾಯುತ್ತಿರುತ್ತಾರೆ. ಈ ವೇಳೆ ಕಾಜೋಲ್ ತಮ್ಮ ಬಾಡಿಗಾಡ್ರ್ಸ್ ಜೊತೆಗೆ ಹೊರಗೆ ಬಂದು ಕೇಕ್ ಕತ್ತರಿಸುತ್ತಾರೆ.

    ವೀಡಿಯೋದಲ್ಲಿ ಕಾಜಲ್ ಅಭಿಮಾನಿಯೊಬ್ಬರು ಕೇಕ್ ತಂದು ಬರ್ತ್‍ಡೇ ಸಾಂಗ್ ಹೇಳಿ ವಿಶ್ ಮಾಡುತ್ತಾರೆ. ಈ ವೇಳೆ ಕೇಕ್ ಕತ್ತರಿಸಿ ಮನೆಯೊಳಗೆ ಹೋಗಿಬಿಡುತ್ತಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳಲ್ಲೊಬ್ಬರು ಒಂದು ಪೀಸ್ ಕೇಕ್ ನೀಡುತ್ತಾರೆ. ಆದರೆ ಕಾಜಲ್ ಅದನ್ನು ಸ್ವೀಕರಿಸದೇ ಬೇಡ ಎಂದು ನಿರಾಕರಿಸುವುದನ್ನು ಕಾಣಬಹುದಾಗಿದೆ. ಕಾಜಲ್‍ರ ಈ ವರ್ತನೆ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಕೆಲವರು ಕಾಜೋಲ್‍ಗೆ ದುರಹಂಕಾರ ಎಂದು ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ನಿಮ್ಮ ಸಮಯ, ಹಣ ಮತ್ತು ಶ್ರಮವನ್ನು ಏಕೆ ವ್ಯರ್ಥಮಾಡಿಕೊಳ್ಳುತ್ತೀರಾ? ಇವರ ಬದಲಾಗಿ ಅನಾಥ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸುವುದು ಉತ್ತಮ ಎಂದು ಕಾಮೆಂಟ್ ಮಾಡುತ್ತಿದ್ದಾರೆ.  ಇದನ್ನೂ ಓದಿ:ದಿವ್ಯಾ ಉರುಡುಗ ಹೇರ್ ಕಟ್ ಮಾಡಿದ ಅರವಿಂದ್