Tag: ಕಾಜೂ

  • ಸೂಪರ್ ಟೇಸ್ಟಿ ಕಾಜು ಮಸಾಲಾ ರೆಸಿಪಿ

    ಸೂಪರ್ ಟೇಸ್ಟಿ ಕಾಜು ಮಸಾಲಾ ರೆಸಿಪಿ

    ಸಾಮಾನ್ಯವಾಗಿ ರೆಸ್ಟೋರೆಂಟ್‌ಗಳಲ್ಲಿ ಚಪಾತಿ, ರೋಟಿಗಳೊಂದಿಗೆ ಪನೀರ್, ಮಶ್ರೂಮ್ ಕರಿ ಅಥವಾ ಮಸಾಲಾವನ್ನೇ ನಾವು ಆಯ್ಕೆ ಮಾಡುತ್ತೇವೆ. ಕಾಜು ಮಸಾಲಾ (Kaju Masala) ಕೂಡಾ ಅಷ್ಟೇ ಫೇಮಸ್ ಹಾಗೂ ಅತ್ಯಂತ ರುಚಿಕರವಾಗಿದ್ದು, ಚಪಾತಿಯೊಂದಿಗಿನ ಕಾಂಬಿನೇಶನ್ ಸೂಪರ್ ಆಗಿರುತ್ತದೆ. ನಾವಿಂದು ಕಾಜೂ ಮಸಾಲಾ ಮಾಡುವುದು ಹೇಗೆ ಎಂಬುದನ್ನು ಹೇಳಿ ಕೊಡುತ್ತೇವೆ.

    ಬೇಕಾಗುವ ಪದಾರ್ಥಗಳು:
    ತುಪ್ಪ – 1 ಟೀಸ್ಪೂನ್
    ಗೋಡಂಬಿ – ಮುಕ್ಕಾಲು ಕಪ್
    ಎಣ್ಣೆ – 2 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ದಾಲ್ಚಿನ್ನಿ ಚಕ್ಕೆ – 1 ಇಂಚು
    ಸಣ್ಣಗೆ ಕತ್ತರಿಸಿದ ಈರುಳ್ಳಿ – ಅರ್ಧ
    ಕರಿ ಬೇವಿನ ಎಲೆ – ಸ್ವಲ್ಪ
    ಅರಿಶಿನ – ಅರ್ಧ ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್

    ಉಪ್ಪು – ಅರ್ಧ ಟೀಸ್ಪೂನ್
    ನೀರು – 1 ಕಪ್
    ಫ್ರೆಶ್ ಕ್ರೀಂ – ಕಾಲು ಕಪ್
    ಗರಂ ಮಸಾಲ – ಅರ್ಧ ಟೀಸ್ಪೂನ್
    ಕಸೂರಿ ಮೆಥಿ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
    ಈರುಳ್ಳಿ ಟೊಮೆಟೊ ಪೇಸ್ಟ್ ತಯಾರಿಸಲು:
    ಎಣ್ಣೆ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಸಣ್ಣಗೆ ಹೆಚ್ಚಿದ ಟೊಮೆಟೊ – 3
    ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್ ಇದನ್ನೂ ಓದಿ: ಈ ರೀತಿಯಾಗಿ ಮಾಡಿ ಆರೋಗ್ಯಕರ ಟೊಮೆಟೊ ಸೂಪ್

    ಮಾಡುವ ವಿಧಾನ:
    * ಮೊದಲಿಗೆ, ಗೋಡಂಬಿಯನ್ನು ತುಪ್ಪದಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದು ಪಕ್ಕಕ್ಕೆ ಇರಿಸಿ.
    * ಈಗ ಟೊಮೆಟೊ ಹಾಗೂ ಈರುಳ್ಳಿ ಪೇಸ್ಟ್ ತಯಾರಿಸಲು, ಒಂದು ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 1 ಈರುಳ್ಳಿ ಸೇರಿಸಿ ಚೆನ್ನಾಗಿ ಸಾಟ್ ಮಾಡಿ.
    * ಹೆಚ್ಚುವರಿಯಾಗಿ, 1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತಷ್ಟು ಸಾಟ್ ಮಾಡಿ.
    * 3 ದೊಡ್ಡ ಟೊಮೆಟೊ ಕೂಡ ಸೇರಿಸಿ. 5-6 ಗೋಡಂಬಿ ಹಾಕಿ, ಟೊಮ್ಯಾಟೊ ಮೃದುವಾಗುವವರೆಗೆ ಬೇಯಿಸಿ.
    * ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಟ್ಟು, ಬಳಿಕ ಬ್ಲೆಂಡರ್‌ಗೆ ಹಾಕಿ ನೀರು ಸೇರಿಸದೇ ನಯವಾಗಿ ಪೇಸ್ಟ್ ಮಾಡಿ.
    * ಈಗ ಕಡಾಯಿಯಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಾ, ದಾಲ್ಚಿನ್ನಿ ಚಕ್ಕೆ, ಕರಿಬೇವಿನ ಎಲೆ ಸೇರಿಸಿ, ಪರಿಮಳ ಬರುವವರೆಗೆ ಹುರಿಯಿರಿ.
    * ಈಗ ಮತ್ತಷ್ಟು ಈರುಳ್ಳಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
    * ತಯಾರಿಸಿಟ್ಟ ಟೊಮೆಟೊ ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ, ಅದು ದಪ್ಪವಾಗುವವರೆಗೆ ಹುರಿಯಿರಿ.
    * ಜ್ವಾಲೆಯನ್ನು ಕಡಿಮೆ ಮಾಡಿ, ಅರಿಶಿನ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಉಪ್ಪು ಸೇರಿಸಿ 1 ನಿಮಿಷ ಬೇಯಿಸಿ.
    * ಈಗ 1 ಕಪ್ ನೀರು ಮತ್ತು ಕಾಲು ಕಪ್ ಕ್ರೀಮ್ ಸೇರಿಸಿ, ಹುರಿದ ಗೋಡಂಬಿ ಹಾಕಿ ಮಿಕ್ಸ್ ಮಾಡಿ.
    * 5 ನಿಮಿಷಗಳ ಕಾಲ ಮುಚ್ಚಿ, ಗ್ರೇವಿಯನ್ನು ಕುದಿಸಿ.
    * ಈಗ ಗರಂ ಮಸಾಲ, ಕಸೂರಿ ಮೆಥಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
    * ಕಾಜು ಮಸಾಲಾ ಇದೀಗ ತಯಾರಾಗಿದ್ದು, ರೋಟಿ ಅಥವಾ ಚಪಾತಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ರುಚಿಕರ ಸೋಯಾಬೀನ್ 65 ಮಾಡಿ ಸವಿಯಿರಿ

    Live Tv
    [brid partner=56869869 player=32851 video=960834 autoplay=true]