Tag: ಕಾಜು ಬರ್ಫಿ

  • ದೀಪಾವಳಿ ಸ್ಪೆಷಲ್; ಸುಲಭವಾಗಿ ಮಾಡಿ ಕಾಜು ಬರ್ಫಿ

    ದೀಪಾವಳಿ ಸ್ಪೆಷಲ್; ಸುಲಭವಾಗಿ ಮಾಡಿ ಕಾಜು ಬರ್ಫಿ

    ಭಾರತದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ ಎಂದರೆ ಅದು ದೀಪಾವಳಿ. ಈ ಹಬ್ಬದಲ್ಲಿ ಜನರು ಪರಸ್ಪರ ಸಿಹಿ ತಿನ್ನಿಸುವ ಮೂಲಕ ಹಬ್ಬದ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಸಿಹಿ ಮತ್ತು ಪಟಾಕಿ ಇಲ್ಲದೇ ದೀಪಾವಳಿ ಅಪೂರ್ಣ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ದೀಪಾವಳಿ ಹಬ್ಬದ ದಿನ ಹೆಚ್ಚಿನವರು ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ.

    ವಿಶೇಷವಾಗಿ ದೀಪಾವಳಿ ಹಬ್ಬದಲ್ಲಿ ಸಿಹಿ ತಿಂಡಿ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದೇ ಕಾಜು ಬರ್ಫಿ. ಸಾಮಾನ್ಯವಾಗಿ ಕಾಜು ಬರ್ಫಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ನೀವು ಈ ಸಿಹಿಯನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಆರೋಗ್ಯದ ದೃಷ್ಟಿಯಿಂದ ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಕಾಜು ಬರ್ಫಿ ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ.

    ಬೇಕಾಗುವ ಸಾಮಾಗ್ರಿಗಳು :
    ಗೋಡಂಬಿ – 250 ಗ್ರಾಂ
    ಹಾಲಿನ ಪುಡಿ – 4 ಕಪ್
    ಸಕ್ಕರೆ – 4 ಕಪ್
    ಏಲಕ್ಕಿ ಪುಡಿ – 4 ಚಮಚ
    ತುಪ್ಪ – 2 ಚಮಚ
    ಸಿಲ್ವರ್ ಪೇಪರ್/ಬೆಳ್ಳಿ ಲೇಪನ

    ಮಾಡುವ ಸುಲಭ ವಿಧಾನ:
    *ಮೊದಲನೆಯದಾಗಿ ಗೋಡಂಬಿಯನ್ನು ತೆಗೆದುಗೊಂಡು ಅದನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಅದನ್ನು ಜರಡಿಯಲ್ಲಿಟ್ಟು ಶೋಧಿಸಿಕೊಳ್ಳಿ. ಶೋಧಿಸಿಟ್ಟ ಗೋಡಂಬಿ ಪುಡಿಗೆ ಅರ್ಧ ಕಪ್ ಹಾಲಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ಪಕ್ಕಕ್ಕೆ ಇಟ್ಟುಬಿಡಿ.
    *ಬಳಿಕ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ನಿಮ್ಮ ಸಿಹಿಗೆ ಅನುಗುಣವಾಗಿ ಸಕ್ಕರೆಯನ್ನು ಹಾಕಿಕೊಳ್ಳಿ ಮತ್ತು ಸಕ್ಕರೆ ಕರಗಲು ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ. ಸಕ್ಕರೆ ಪಾಕ ತಯಾರಾಗುವವರೆಗೂ ಚೆನ್ನಾಗಿ ಬೆರೆಸಿಕೊಳ್ಳಿ.
    *ಸಕ್ಕರೆ ಕರಗಿದ ಬಳಿಕ ಮೊದಲೇ ತಯಾರಿಸಿಟ್ಟ ಗೋಡಂಬಿ ಪುಡಿ ಮತ್ತು ಹಾಲಿನ ಪುಡಿ ಮಿಶ್ರಣವನ್ನು ಇದಕ್ಕೆ ಸೇರಿಸಿಕೊಂಡು, ಈ ಮಿಶ್ರಣ ಗಂಟುಕಟ್ಟಿಕೊಳ್ಳದ ಹಾಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
    *ಈಗ ಈ ಮಿಶ್ರಣಕ್ಕೆ 1 ಚಮಚ ತುಪ್ಪ ಮತ್ತು 4 ಚಮಚ ಏಲಕ್ಕಿ ಪುಡಿಯನ್ನು ಸೇರಿಸಿಕೊಂಡು ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ಬರ್ಫಿ ಮಿಶ್ರಣ ತಳ ಬಿಡಲು ಆರಂಭಿಸಿದಾಗ ಗ್ಯಾಸ್ ಆಫ್ ಮಾಡಿ.
    *ಈಗ ಒಂದು ಟ್ರೇ ಅಥವಾ ಬಟ್ಟಿಲಿಗೆ ತುಪ್ಪವನ್ನು ಸವರಿ (ಟ್ರೇ ಮೇಲೆ ಬಟರ್ ಪೇಪರ್ ಕೂಡಾ ಹಾಕಬಹುದು) ಅದರ ಮೇಲೆ ಬರ್ಫಿ ಮಿಶ್ರಣವನ್ನು ಹಾಕಿ, ಚೆನ್ನಾಗಿ ಸೆಟ್ ಮಾಡಿಕೊಳ್ಳಿ, ಈಗ ಅದರ ಮೇಲೆ ಬೆಳ್ಳಿ ಲೇಪನವನ್ನು ಅಂಟಿಸಿ, ಬರ್ಫಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಬರ್ಫಿಯನ್ನು ನಿಮಗೆ ಬೇಕಾದ ಆಕಾರದಲ್ಲಿ ತುಂಡರಿಸಿ ಮನೆಯವರಿಗೆ ಬಡಿಸಿ.

  • ಕಾಜು ಬರ್ಫಿ ಮಾಡುವ ಸುಲಭ ವಿಧಾನ

    ಕಾಜು ಬರ್ಫಿ ಮಾಡುವ ಸುಲಭ ವಿಧಾನ

    ಅಂಗಡಿಗಳಲ್ಲಿ ಸಿಗುವ ಬರ್ಫಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಕಾಜು ಬರ್ಫಿ (Kaju Barfi) ಹೇಸರು ಕೇಳಿದರೇನೇ ಬಾಯಲ್ಲಿ ನೀರು ಬರುತ್ತದೆ. ಇಂತಹ ಕಾಜು ಬರ್ಫಿಯನ್ನು ಮನೆಯಲ್ಲಿ ತಯಾರಿಸಬಹುದು. ಅದನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಗೋಡಂಬಿ – 1 ಕಪ್
    ಸಕ್ಕರೆ – ಅರ್ಧ ಕಪ್
    ನೀರು – ಅರ್ಧ ಕಪ್
    ತುಪ್ಪ – 1 ಚಮಚ
    ರೋಸ್ ವಾಟರ್ ಅಥವಾ ಕೇಸರಿ – 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಗೋಡಂಬಿಯನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಒಣಗಿಸಿಕೊಳ್ಳಿ.
    * ಗೋಡಂಬಿ ಒಣಗಿದ ಬಳಿಕ ನೀರಿನ ಪಸೆ ಇಲ್ಲದ ಮಿಕ್ಸರ್ ಜಾರ್‌ನಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.
    * ಒಂದು ಪ್ಯಾನ್‌ನಲ್ಲಿ ನೀರು ಮತ್ತು ಸಕ್ಕರೆ ಹಾಕಿ ಸಣ್ಣನೆಯ ಉರಿಯಲ್ಲಿ ಬಿಸಿ ಮಾಡಿ. ಸಕ್ಕರೆ ಪೂರ್ತಿಯಾಗಿ ನೀರಿನಲ್ಲಿ ಕರಗಿ ದಪ್ಪಗಾಗುವವರೆಗೆ ಕುದಿಸಿರಿ.
    * ನಂತರ ಗೋಡಂಬಿ ಪುಡಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. (ಬೇಕೆಂದಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಬಹುದು).
    * ಸುಮಾರು 5-10 ನಿಮಿಷಗಳವರೆಗೆ ಗೋಡಂಬಿ ಪುಡಿಯನ್ನು ಸಣ್ಣ ಉರಿಯಲ್ಲಿ ನಿಧಾನವಾಗಿ ಕದಡುತ್ತಾ ಇರಿ. ಮಿಶ್ರಣ ನಿಧಾನವಾಗಿ ದಪ್ಪಗಾಗುತ್ತಾ ಬರುತ್ತದೆ. ನಂತರ ಸ್ಟೌವ್‌ನಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ.
    * ಈಗ ಒಂದು ಪ್ಲೇಟ್‌ಗೆ ಸ್ವಲ್ಪ ತುಪ್ಪ ಸವರಿ ಇಟ್ಟುಕೊಳ್ಳಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಸಿಹಿಯಾದ ಹಯಗ್ರೀವ

    * ಈಗ ಪ್ಯಾನ್‌ನಿಂದ ಗೋಡಂಬಿ ಮಿಶ್ರಣವನ್ನು ಇಳಿಸಿ, ಒಂದು ಪಾತ್ರೆಗೆ ಹಾಕಿ ಅದರ ಮೇಲೆ ಸ್ವಲ್ಪ ತುಪ್ಪ, ರೋಸ್ ವಾಟರ್ ಅಥವಾ ಕೇಸರಿ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಗೋಡಂಬಿ ಹಿಟ್ಟನ್ನು ಚೆನ್ನಾಗಿ ನಾದಿ.
    * ನಾದಿದ ಗೋಡಂಬಿ ಹಿಟ್ಟನ್ನು ತುಪ್ಪ ಸವರಿದ ಪ್ಲೇಟ್‌ಗೆ ಸಮತಟ್ಟಾಗಿ ಹಾಕಬೇಕು. ನಂತರ ಲಟ್ಟಣಿಗೆಯ ಸಹಾಯದಿಂದ ನಿಧಾನವಾಗಿ ಹಿಟ್ಟಿನ ಮೇಲೆ ಸ್ವಲ್ಪ ದಪ್ಪ ಬರುವವರೆಗೆ ರೋಲ್ ಮಾಡಿ.
    * ಈಗ ಒಂದು ಚಾಕುವಿನಿಂದ ಗೋಡಂಬಿ ಮಿಶ್ರಣವನ್ನು ವಜ್ರಾಕೃತಿಯಲ್ಲಿ ಕತ್ತರಿಸಿಕೊಳ್ಳಿ ಮತ್ತು ಹಿಟ್ಟು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
    * ಈಗ ರುಚಿರುಚಿಯಾದ ಕಾಜು ಬರ್ಫಿ ಸವಿಯಲು ರೆಡಿಯಾಗಿದ್ದು, ಇನ್ನು 5-6 ದಿನಗಳವರೆಗೆ ಸವಿಯಬಹುದು. ಫ್ರಿಡ್ಜ್ನಲ್ಲಿಟ್ಟರೆ ಸುಮಾರು 1 ತಿಂಗಳು ಕೆಡುವುದಿಲ್ಲ. ಇದನ್ನೂ ಓದಿ: ದೀಪಾವಳಿ ಸ್ಪೆಷಲ್- ಮನೆಯಲ್ಲಿಯೇ ಮಾಡಿ ರಸಭರಿತ ರಸಗುಲ್ಲ

    Live Tv
    [brid partner=56869869 player=32851 video=960834 autoplay=true]