Tag: ಕಾಗ್ನಿಂಜೆಟ್

  • ಕಾಲೇಜುಗಳಿಗೆ ಕಾಗ್ನಿಜೆಂಟ್‍ನಿಂದ 12 ಸಾವಿರ ಡಿಬಾಂಡೆಡ್ ಕಂಪ್ಯೂಟರ್ ಕೊಡುಗೆ

    ಕಾಲೇಜುಗಳಿಗೆ ಕಾಗ್ನಿಜೆಂಟ್‍ನಿಂದ 12 ಸಾವಿರ ಡಿಬಾಂಡೆಡ್ ಕಂಪ್ಯೂಟರ್ ಕೊಡುಗೆ

    ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ‘ಹೆಲ್ಪ್ ಎಜುಕೇಟ್’ ಉಪಕ್ರಮದ ಅಡಿಯಲ್ಲಿ ವಿವಿಧ ಕಾಲೇಜುಗಳಿಗೆ ಡಿಬಾಂಡೆಡ್ ಕಂಪ್ಯೂಟರ್ ಗಳನ್ನು ಇಲಾಖೆಯ ಉನ್ನತ ಅಧಿಕಾರಿಗಳು ಇಂದು ಕಳಿಸಿಕೊಟ್ಟಿದ್ದಾರೆ.

    ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ಕಚೇರಿ ಮುಂಭಾಗದಲ್ಲಿ ಕಂಪ್ಯೂಟರ್‍ ಗಳನ್ನು ಹೊತ್ತುಹೊರಟ ವಾಹನಗಳಿಗೆ ಇಲಾಖೆಯ ಆಯುಕ್ತ ಪ್ರದೀಪ್ ಹಸಿರು ನಿಶಾನೆ ತೋರಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಪ್ರದೀಪ್ ಅವರು, “ಕಾಗ್ನಿಜೆಂಟ್ ಸಂಸ್ಥೆ ಡಿಬಾಂಡೆಡ್ 12,500 ಕಂಪ್ಯೂಟರ್ ಗಳನ್ನು ಕಾಲೇಜು ಶಿಕ್ಷಣ ಇಲಾಖೆಗೆ ನೀಡಿದ್ದಾರೆ. ಇದಕ್ಕೆ ಅಗತ್ಯವಾದ ಸಾಫ್ಟ್ ವೇರ್ ಅನ್ನು ರೋಟರಿ ಕ್ಲಬ್ ಅಪ್ ಡೇಟ್ ಮಾಡಿಕೊಡುತ್ತಿದೆ. ಈ ಕಂಪ್ಯೂಟರ್ ಗಳನ್ನು ಸರ್ಕಾರಿ ಪದವಿ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಎಲ್ಲ ಸರ್ಕಾರಿ ಪದವಿ, ಎಂಜಿನಿಯರಿಂಗ್, ತಾಂತ್ರಿಕ ಕಾಲೇಜುಗಳಿಗೆ ಒಟ್ಟು 30,000 ಕಂಪ್ಯೂಟರ್ ಗಳು ಬೇಕು. ಈಗ ಕಾಗ್ನಿಜೆಂಟ್ ಕಂಪನಿ 12,500 ಕಂಪ್ಯೂಟರ್ ಗಳನ್ನು ನೀಡುತ್ತಿದೆ. ಮತ್ತೆ 8000 ಕಂಪ್ಯೂಟರ್ ಗಳನ್ನು ಕೊಡುವುದಾಗಿ ತಿಳಿಸಿದೆ. ಉಳಿದ 10,000 ಕಂಪ್ಯೂಟರ್ ಗಳನ್ನು ಬೇರೆ ಬೇರೆ ಕಂಪನಿಗಳಿಂದ ಪಡೆಯುವ ಕೆಲಸ ಮಾಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

    ವಿದ್ಯಾರ್ಥಿಗಳಿಗೆ ನೆರವಾಗುಗುವುದರೊಂದಿಗೆ, ಅಧ್ಯಾಪಕರಿಗೆ ತರಬೇತಿ ನೀಡುವುದು, ಕಾಲೇಜುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲುವಂತಹ ಉತ್ತಮ ಕೆಲಸಕ್ಕಾಗಿ ಹೆಲ್ಪ್ ಎಜುಕೇಟ್ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ ಎಂದರು.

    ಕಾಗ್ನಿಜೆಂಟ್ ಸಂಸ್ಥೆ ನೀಡಿರುವ ಡಿಬಾಂಡೆಡ್ ಕಂಪ್ಯೂಟರ್‍ ಗಳನ್ನು ವಿವಿಧ ಕಾಲೇಜುಗಳಿಗೆ ರವಾನಿಸಲಾಯಿತಲ್ಲದೆ, ವಿವಿಧ ಹಂತಗಳಲ್ಲಿ ಒಟ್ಟು 12,500 ಡಿಬಾಂಡೆಡ್ ಕಂಪ್ಯೂಟರ್‍ ಗಳನ್ನು ಕಳಿಸಲಾಗುತ್ತಿದೆ. ಇಂದು ರವಾನಿಸಲ್ಪಟ್ಟ ಕಂಪ್ಯೂಟರ್‍ ಗಳನ್ನು ಬೆಂಗಳೂರು ವಲಯದ ಕಾಲೇಜುಗಳಿಗೆ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮುಖ್ಯಸ್ಥ ನಾಗೇಂದ್ರ ಪ್ರಸಾದ್, ಕಾಗ್ನಿಜೆಂಟ್ ಸಂಸ್ಥೆಯ ನಿರ್ದೇಶಕ (ಸಿಎಸ್‍ಆರ್) ದೀಪಕ್ ಪ್ರಭು, ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಹರಿಸಿಂಗ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

  • 3 ತಿಂಗಳ ಅವಧಿಯಲ್ಲಿ 9 ಸಾವಿರ ಮಂದಿಯನ್ನು ತೆಗೆದ ಕಾಗ್ನಿಜೆಂಟ್‌

    3 ತಿಂಗಳ ಅವಧಿಯಲ್ಲಿ 9 ಸಾವಿರ ಮಂದಿಯನ್ನು ತೆಗೆದ ಕಾಗ್ನಿಜೆಂಟ್‌

    ಬೆಂಗಳೂರು: ಐಟಿ ಸಂಸ್ಥೆ ಕಾಗ್ನಿಜೆಂಟ್‌ ಕಳೆದ ಮೂರು ತಿಂಗಳಿನಲ್ಲಿ 9 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.

    ಈ ಹಿಂದೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕಾಗ್ನಿಜೆಂಟ್‌ ಕಂಪನಿಯಲ್ಲಿ ಒಟ್ಟು 2,91,700 ಮಂದಿ ಉದ್ಯೋಗಿಗಳಿದ್ದರು. ಆದರೆ ಜೂನ್‌ನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ 2,81,200ಕ್ಕೆ ಕುಸಿದಿದೆ.

     

    ಕೋವಿಡ್‌ ಸಮಯದಲ್ಲಿ ಐಟಿ ಕಂಪನಿಗಳು ಉದ್ಯೋಗಿಗಳನ್ನು ತೆಗೆದು ಹಾಕುತ್ತಿರುವುದು ಹೊಸ ಸುದ್ದಿಯಲ್ಲ. ಮೂರು ತಿಂಗಳ ಅವಧಿಯಲ್ಲಿ ಟಿಸಿಎಸ್‌ 4,786, ಇನ್ಫೋಸಿಸ್‌ 3,138, ವಿಪ್ರೋ 1,082, ಟೆಕ್‌ ಮಹೀಂದ್ರಾ 1,820 ಮಂದಿಯನ್ನು ತೆಗೆದು ಹಾಕಿದೆ ಎಂದು ವರದಿಯಾಗಿದೆ.

    ಜೂನ್‌ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕಾಗ್ನಿಜೆಂಟ್‌ ಕಂಪನಿಯ ಆದಾಯ ಶೇ.3.4ರಷ್ಟು ಕುಸಿತಗೊಂಡು 4 ಶತಕೋಟಿ ಡಾಲರ್‌ ಗಳಿಸಿತ್ತು. ಕಾಗ್ನಿಜೆಂಟ್‌ ಇತಿಹಾಸದಲ್ಲಿ ಅತಿ ಕಡಿಮೆ ಆದಾಯ ದಾಖಲಾದ ತ್ರೈಮಾಸಿಕ ಇದಾಗಿದ್ದು ಹೀಗಾಗಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಮಾಡಲು ಮುಂದಾಗಿದೆ.

  • 12 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲಿದೆ ಕಾಗ್ನಿಜೆಂಟ್

    12 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲಿದೆ ಕಾಗ್ನಿಜೆಂಟ್

    ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿ ಕಾಗ್ನಿಜೆಂಟ್ ತನ್ನ 12 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಿದೆ.

    ಮಧ್ಯಮ ಶ್ರೇಣಿಯಿಂದ ಆರಂಭಗೊಂಡು ಹಿರಿಯ ಶ್ರೇಣಿ ಹೊಂದಿರುವ 10 – 12 ಸಾವಿರ ಉದ್ಯೋಗಿಗಳನ್ನು ಸಂಸ್ಥೆಯಿಂದ ತೆಗೆದು ಹಾಕಲು ಮುಂದಾಗುತ್ತಿದ್ದೇವೆ ಎಂಬುದಾಗಿ ಕಾಗ್ನಿಜೆಂಟ್ ಕಂಪನಿಯ ಸಿಇಒ ಬ್ರಿಯಾನ್ ಹಂಫ್ರೈಸ್ ಪ್ರಕಟಿಸಿದ್ದಾರೆ.

    ಕಾಗ್ನಿಜೆಂಟ್ ಕಂಪನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಉದ್ಯೋಗದಲ್ಲಿದ್ದಾರೆ. 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಉದ್ಯೋಗಿಗಳನ್ನು ಹೊಂದಿರುವ ಕಾಂಗ್ನಿಜೆಂಟ್ ದೇಶದ ಎರಡನೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಟಾಟಾ ಕನ್ಸಲ್ಟೆಂಟೆನ್ಸಿ ಸರ್ವಿಸಸ್ 4 ಲಕ್ಷ ಉದ್ಯೋಗಿಗಳನ್ನು ಹೊಂದುವ ಮೂಲಕ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

    ಕಂಟೆಂಟ್ ಹೆಚ್ಚಿಸುವ ಸಂಬಂಧ ಫೇಸ್‍ಬುಕ್ ಕಾಗ್ನಿಜೆಂಟ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಫೇಸ್‍ಬುಕ್ ಕೆಲಸಕ್ಕೆ ನಿಯೋಜನೆಗೊಂಡಿದ್ದ ಉದ್ಯೋಗಿಗಳು ಒತ್ತಡಕ್ಕೆ ಒಳಗಾಗಿದ್ದರು. ಅಲ್ಲದೇ ಓರ್ವ ಉದ್ಯೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಫೇಸ್‍ಬುಕ್ ಈ ಒಪ್ಪಂದದಿಂದ ಹಿಂದಕ್ಕೆ ಸರಿದಿದೆ.

    ಸಪ್ಟೆಂಬರ್ ನಲ್ಲಿ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ ಕಾಂಗ್ನಿಜೆಂಟ್ 497 ದಶಲಕ್ಷ ಡಾಲರ್(ಅಂದಾಜು 352 ಕೋಟಿ ರೂ.) ನಿವ್ವಳ ಆದಾಯ ಗಳಿಸಿತ್ತು. ಕಂಪನಿಯ ಆದಾಯ ಶೇ.4.5 ರಷ್ಟು ಏರಿಕೆಯಾಗಿ 4.25 ಶತಕೋಟಿ ಡಾಲರ್(ಅಂದಾಜು 30 ಸಾವಿರ ಕೋಟಿ) ಗಳಿಸಿತ್ತು. ಈ ಹಣಕಾಸು ವರ್ಷದಲ್ಲಿ ಕಂಪನಿ ಶೇ.4.6 – 4.9 ಬೆಳವಣಿಗೆ ಸಾಧಿಸುವ ಗುರಿಯನ್ನು ಹೊಂದಿದೆ.

    ಆದಾಯವನ್ನು ಹೆಚ್ಚಿಸಿ ವೆಚ್ಚವನ್ನು ತಗ್ಗಿಸಲು ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಾಗ್ನಿಜೆಂಟ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

  • 6 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಿದೆ ಕಾಗ್ನಿಜೆಂಟ್!

    6 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಿದೆ ಕಾಗ್ನಿಜೆಂಟ್!

    ನವದೆಹಲಿ: ಐಟಿ ಸಂಸ್ಥೆ ಕಾಗ್ನಿಜೆಂಟ್ ತನ್ನ ಸುಮಾರು 6 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    2016ರ ಡಿಸೆಂಬರ್ 31ರ ವೇಳೆಗೆ ಕಾಗ್ನಿಜೆಂಟ್‍ನಲ್ಲಿ ಅಂದಾಜು 2.6 ಲಕ್ಷ ಉದ್ಯೋಗಿಗಳಿದ್ದರು. ಪ್ರತಿವರ್ಷದಂತೆ ಕಡಿಮೆ ಪ್ರದರ್ಶನ ನೀಡುವ ಉದ್ಯೋಗಿಗಳನ್ನು ಕಿತ್ತುಹಾಕಲಾಗ್ತಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಕಂಪೆನಿಯಲ್ಲಿ ಹಲವು ಉದ್ಯೋಗಿಗಳಿಗೆ ಸಂಬಳವನ್ನೂ ಕಡಿತಗೊಳಿಸಲಾಗಿದೆ.

    ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಕಂಪೆನಿಯ ವಕ್ತಾರರು, ಉದ್ಯೋಗ ನಿರ್ವಹಣೆಯ ತಂತ್ರವಾಗಿ ನಾವು ಪ್ರತಿ ವರ್ಷ ಇದನ್ನು ಮಾಡುತ್ತೇವೆ. ಕಂಪೆನಿಯ ಗ್ರಾಹಕರ ಅಗತ್ಯತೆಗಳನ್ನ ಪೂರೈಸಲು ಹಾಗೂ ನಮ್ಮ ಗುರಿಯನ್ನ ಈಡೇರಿಸಲು ಸರಿಯಾದ ನೌಕರರು ನಮ್ಮ ಬಳಿ ಇದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳಲು ನಾವು ನಿಯಮಿತವಾಗಿ ಉದ್ಯೋಗಿಯ ಕೆಲಸವನ್ನ ಮೌಲ್ಯಮಾಪನ ಮಾಡುತ್ತೇವೆ. ಹೀಗಾಗಿ ಕಂಪೆನಿ ತೆಗೆದುಕೊಳ್ಳುವ ನಿರ್ಧಾರ ಉದ್ಯೋಗಿಯ ಕಾರ್ಯವೈಖರಿ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

    ಅಲ್ಲದೆ ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚುಕಡಿಮೆಯಾಗಬಹುದು. ಇದೇ ವೇಳೆ ನಾವು ನಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.