Tag: ಕಾಂತಾರಾ ಚಿತ್ರ

  • ರಿಷಬ್ ಶೆಟ್ಟಿ ಚಿತ್ರಕ್ಕೆ ಡಬ್ಬಿಂಗ್ ಡಿಮ್ಯಾಂಡ್: `ಕಾಂತಾರಾ’ ಹಿಂದಿ ಟ್ರೈಲರ್ ರೆಡಿ

    ರಿಷಬ್ ಶೆಟ್ಟಿ ಚಿತ್ರಕ್ಕೆ ಡಬ್ಬಿಂಗ್ ಡಿಮ್ಯಾಂಡ್: `ಕಾಂತಾರಾ’ ಹಿಂದಿ ಟ್ರೈಲರ್ ರೆಡಿ

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಹೈಪ್ ಕ್ರಿಯೇಟ್ ಮಾಡಿರುವ `ಕಾಂತಾರಾ’ ಸಿನಿಮಾಗೆ ಕನ್ನಡ ಸಿನಿಮಾ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಹುಭಾಷೆಗಳಿಗೆ ಡಬ್ ಮಾಡಲು ಬೇಡಿಕೆ ಜಾಸ್ತಿಯಾಗಿದೆ. ಇದೀಗ ಕಾಂತಾರಾ ಹಿಂದಿ ಟ್ರೈಲರ್ ರಿಲೀಸ್ ಮಾಡಲು ಕೌಂಟ್ ಡೌನ್ ಶುರುವಾಗಿದೆ.

     

    View this post on Instagram

     

    A post shared by Hombale Films (@hombalefilms)

    ಹೊಂಬಾಳೆ ಸಂಸ್ಥೆ ನಿರ್ಮಾಣದ `ಕಾಂತಾರಾ’ (Kantara Film) ಚಿತ್ರವನ್ನು ರಿಷಬ್ ಶೆಟ್ಟಿ, ನಟನೆಯ ಜೊತೆ ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿರುವ `ಕಾಂತಾರಾ’ ಸಿನಿಮಾ ಏಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಪರಭಾಷೆಯ ಪ್ರೇಕ್ಷಕರಿಂದ ಚಿತ್ರಕ್ಕೆ ಡಿಮ್ಯಾಂಡ್ ಬಂದಿದೆ. ಚಿತ್ರವನ್ನು ಡಬ್ಬಿಂಗ್ ಮಾಡಲು ಬೇಡಿಕೆ ಕೂಡ ಇಡಲಾಗಿದೆ. ಕನ್ನಡದ `ಕಾಂತಾರಾ’ ಸಕ್ಸಸ್ ನಂತರ ಹೊಂಬಾಳೆ ನಿರ್ಮಾಣ ಸಂಸ್ಥೆ ಕೂಡ ಬಹುಭಾಷೆಗಳಲ್ಲಿ ಡಬ್ಬಿಂಗ್ ಮಾಡಿ, ತೆರೆಗೆ ತರಲು ಮುಂದಾಗಿದೆ. ಸದ್ಯ ಹಿಂದಿಯಲ್ಲಿ ಟ್ರೈಲರ್ ಕೌಂಟ್ ಡೌನ್ ಶುರುವಾಗಿದೆ. ಇದನ್ನೂ ಓದಿ: ಆರತಕ್ಷತೆ ಪಾರ್ಟಿಯಲ್ಲಿ ಮಿಂಚಿದ ಗೇಬ್ರಿಯೆಲ್ಲಾ -ನಟ ಸುಹಾಸ್

     

    View this post on Instagram

     

    A post shared by Hombale Films (@hombalefilms)

    `ಕಾಂತಾರಾ’ ಚಿತ್ರದ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ 9ರಂದು ಬೆಳಿಗ್ಗೆ 9.10ಕ್ಕೆ ರಿಲೀಸ್ ಆಗಲಿದೆ ಎಂದು ತಮ್ಮ ಅಧಿಕೃತ ಖಾತೆಗೆ ಮೂಲಕ ಹೊಂಬಾಳೆ ಫಿಲ್ಮ್ಸ್‌ ಅನೌನ್ಸ್ ಮಾಡಿದೆ.

     

    View this post on Instagram

     

    A post shared by Hombale Films (@hombalefilms)

    ದೈವ ಶಕ್ತಿಯನ್ನು ಸಾರುವ ʻಕಾಂತಾರಾʼ ಸಿನಿಮಾವನ್ನ ಪ್ಯಾನ್ ಇಂಡಿಯಾ ಚಿತ್ರವಾಗುತ್ತ ದಾಪುಗಾಲಿಡುತ್ತಿದೆ.

    Live Tv
    [brid partner=56869869 player=32851 video=960834 autoplay=true]