Tag: ಕಾಂತಾರಾ ಚಾಪ್ಟರ್‌ 1

  • ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್

    ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್

    – ರಿಷಬ್‌ ಶೆಟ್ಟಿ ನಿಜಕ್ಕೂ ಮಾಸ್ಟರ್‌ಪೀಸ್‌ ಎಂದ ಸಿಂಗರ್‌

    ಕಾಂತಾರ-1 ಚಿತ್ರವನ್ನ (Kantara Chapter 1) ನೋಡುವ ಕುತೂಹಲ ಹೆಚ್ಚಾಗಿದೆ. ಈ ಹೊತ್ತಲ್ಲೇ ಚಿತ್ರತಂಡ ಅಚ್ಚರಿಯ ಸುದ್ದಿಯೊಂದನ್ನ ಬಹಿರಂಗಪಡಿಸಿದೆ. ಕಾಂತಾರ-1 ಚಿತ್ರಕ್ಕಾಗಿ ವಿವಾದಾತ್ಮಕ ಪಂಜಾಬಿ ಸಿಂಗರ್ ದಿಲ್ಜಿತ್ ಸಿಂಗ್ ಎಂಟ್ರ ಕೊಟ್ಟಿರುವ ವಿಚಾರವನ್ನ ಘೋಷಿಸಿದೆ ತಂಡ.

    ದಿಲ್ಜಿತ್ ಸಿಂಗ್ (Diljit Dosanjh) ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಕಾಂತಾರ ತಂಡದ ಜೊತೆ ತಾವು ಕೈಜೋಡಿಸಿರುವ ವಿಚಾರ ಹೇಳಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಕೂಡ ಕಾಂತಾರ ತಂಡಕ್ಕೆ ಇನ್ನೊಬ್ಬ ಶಿವಭಕ್ತನ ಆಗಮನವಾಗಿದೆ ಎಂದು ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮರಳಿ ಮನಸಾಗಿದೆ ಸಾಂಗ್ ರಿಲೀಸ್ ಮಾಡಿದ ನಟಿ ಪ್ರೇಮಾ

    ರಾಷ್ಟ್ರಪ್ರಶಸ್ತಿ ವಿಜೇತ ನಟ-ಗಾಯಕ ದಿಲ್ಜಿತ್ ಸಿಂಗ್ ದೋಸಾಂಜ್, ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿಯೊಂದಿಗೆ (Rishab Shetty) `ಕಾಂತಾರ-ಅಧ್ಯಾಯ 1’ರ ಸಂಗೀತ ಆಲ್ಬಂನಲ್ಲಿ ಕೈಜೋಡಿಸಿದ್ದಾರೆ. ಈ ಸಂಗತಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದಿಲ್ಜಿತ್, ಮೂಲ `ಕಾಂತಾರ’ ಸಿನಿಮಾ ತಮ್ಮ ಮೇಲೆ ಮಾಡಿದ ಪರಿಣಾಮವನ್ನು ಸ್ಮರಿಸಿದ್ದಾರೆ. ‘ಅಣ್ಣ ರಿಷಬ್ ಶೆಟ್ಟಿ ಅವರಿಗೆ ನನ್ನ ಸಲಾಂ. ಅವರು ನಿಜಕ್ಕೂ ಒಂದು ಮಾಸ್ಟರ್‌ಪೀಸ್. ಆ ಸಿನಿಮಾದೊಂದಿಗೆ ನನಗೆ ವೈಯಕ್ತಿಕ ನಂಟಿದೆ. ಅದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಚಿತ್ರಮಂದಿರದಲ್ಲಿ `ವರಾಹ ರೂಪಂ’ ಹಾಡು ಬಂದಾಗ, ಆನಂದಬಾಷ್ಪದಿಂದ ಕಣ್ಣು ತುಂಬಿಕೊಂಡಿದ್ದೆ’ ಎಂದು ಭಾವುಕರಾಗಿ ಬರೆದಿದ್ದಾರೆ.

    ಈ ಬಹುನಿರೀಕ್ಷಿತ ಚಿತ್ರಕ್ಕಾಗಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೊಂದಿಗೆ ಕೆಲಸ ಮಾಡಿದ ಬಗ್ಗೆಯೂ ದಿಲ್ಜಿತ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಕೇವಲ ಒಂದೇ ದಿನದಲ್ಲಿ ಅವರಿಂದ ಸಾಕಷ್ಟು ಕಲಿತುಕೊಂಡೆ’ ಎಂದು ತಿಳಿಸಿದ್ದಾರೆ. ದಿಲ್ಜಿತ್ ದೋಸಾಂಜ್ ಮತ್ತು ರಿಷಬ್ ಶೆಟ್ಟಿ ಮೈತ್ರಿ ತೆರೆಯಲ್ಲಿ ರೋಮಾಂಚನ ಹುಟ್ಟಿಸೋದನ್ನ ನೋಡುವ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಇನ್ಮುಂದೆ ಮಲ್ಟಿಪ್ಲೆಕ್ಸ್ ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ಏಕರೂಪ ದರ ನಿಗದಿ; ಪ್ರತಿ ಟಿಕೆಟ್‍ಗೆ ಇಷ್ಟೇ ಬೆಲೆ

  • ಕಾಂತಾರ ಪ್ರೀಕ್ವೆಲ್ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಸ್ನೇಹಿತರಿಂದ ವಿಶೇಷ ಪೂಜೆ

    ಕಾಂತಾರ ಪ್ರೀಕ್ವೆಲ್ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಸ್ನೇಹಿತರಿಂದ ವಿಶೇಷ ಪೂಜೆ

    – ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದ ನಟ – ಸ್ನೇಹಿತರಿಂದಲೇ ಕೇಕ್ ಕಟ್ಟಿಂಗ್

    ಕಾಂತಾರ ಪ್ರೀಕ್ವೆಲ್‌ನ (Kantara Chapter 1) ಯಶಸ್ಸು ಹಾಗೂ ನಟ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಶ್ರೇಯಸ್ಸಿಗಾಗಿ ಗೆಳೆಯರು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

    ರಿಷಬ್ ಶೆಟ್ಟಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕುಂಭಾಸಿ ಆನೆಗುಡ್ಡೆ ದೇವಸ್ಥಾನಕ್ಕೆ (Kumbhashi Anegudde Temple) ತೆರಳಿ ಪೂಜೆ ಸಲ್ಲಿಸಿದ್ದಾರೆ. 108 ತೆಂಗಿನಕಾಯಿ ಒಡೆದು ಪ್ರಾರ್ಥಿಸಿದ್ದಾರೆ. ಬಳಿಕ ತಮ್ಮ ಕಾರುಗಳಲ್ಲಿ ಕುಂದಾಪುರದ ಪ್ರಮುಖ ಮಾರ್ಗದಲ್ಲಿ ಶುಭ ಹಾರೈಕೆ ಬ್ಯಾನರ್‌ನೊಂದಿಗೆ ಸಂಚರಿಸಿ ಶಾಸ್ತ್ರಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

    ಯುವ ಮೆರಿಡಿಯನ್ ರೆಸಾರ್ಟ್‌ನಲ್ಲಿ ತಂಗಿರುವ ರಿಷಬ್ ಶೆಟ್ಟಿಯನ್ನು ಭೇಟಿಯಾಗಿ ಶುಭ ಹಾರೈಸಿದ್ದಾರೆ. ರಿಷಬ್ ಶೆಟ್ಟಿ ದಂಪತಿ ಸ್ಟುಡಿಯೋದಿಂದ ಹೊರಬಂದು ಅಭಿಮಾನಿಗಳ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ಈ ವೀಡಿಯೋವನ್ನು ಆಪ್ತರು ರಿಲೀಸ್ ಮಾಡಿದ್ದಾರೆ.

    ಇದಕ್ಕೂ ಮೊದಲು ಹೊಂಬಾಳೆಯ ವಿಜಯ್ ಕಿರಗಂದೂರ್, ಮಾಜಿ ಸಂಸದ ಪ್ರತಾಪ್ ಸಿಂಹ, ಬಾಲ್ಯದ ಗೆಳೆಯರು, ಚಿತ್ರತಂಡದವರು ಡಿವೈನ್ ಸ್ಟಾರ್ ಹುಟ್ಟುಹಬ್ಬದಲ್ಲಿ ಭಾಗಿಯಾದರು. ಕುಟುಂಬದ ಜೊತೆಗಿದ್ದ ರಿಷಬ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಬಯಸಿಲ್ಲ. ಇದನ್ನೂ ಓದಿ: `ಕಾಮದ ಬಣ್ಣ ಕೆಂಪು’ ಎಂದ ಯೋಗರಾಜ್ ಭಟ್