Tag: ಕಾಂತಾರ

  • ನಾಲ್ಕೇ ವಾರದಲ್ಲಿ ಒಟಿಟಿಯಲ್ಲಿ ಕಾಂತಾರ ರಿಲೀಸ್ ಯಾಕೆ? – ಒಪ್ಪಂದದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಪ್ರತಿಕ್ರಿಯೆ

    ನಾಲ್ಕೇ ವಾರದಲ್ಲಿ ಒಟಿಟಿಯಲ್ಲಿ ಕಾಂತಾರ ರಿಲೀಸ್ ಯಾಕೆ? – ಒಪ್ಪಂದದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಪ್ರತಿಕ್ರಿಯೆ

    ಬಿಡುಗಡೆಯಾದ ನಾಲ್ಕೇ ವಾರದಲ್ಲಿ ಕಾಂತಾರ: ಚಾಪ್ಟರ್‌ 1 (Kantara: Chapter 1) ಸಿನಿಮಾ ಒಟಿಟಿಯಲ್ಲಿ (OTT) ಬಿಡುಗಡೆಯಾಗುತ್ತಿರುವುದು ಹಲವರ ಹುಬ್ಬೇರಿತ್ತು. ಚಿತ್ರ ಮಂದಿರದಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಚಿತ್ರವನ್ನು ಬೇಗ ಬಿಡುಗಡೆ ಮಾಡುತ್ತಿರುವುದು ಯಾಕೆ ಎಂದು ಹಲವು ಸಿನಿ ಪಂಡಿತರು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಈಗ ಹೊಂಬಾಳೆ ಫಿಲ್ಮ್ಸ್‌ (Hombale Films) ಉತ್ತರ ನೀಡಿದೆ.

    ಮಾಧ್ಯಮದ ಜೊತೆ ಮಾತನಾಡಿದ ಬಾಳೆ ಫಿಲ್ಮ್ಸ್‌ನ ಪಾಲುದಾರ ಚಲುವೇಗೌಡ, ಮೂರು ವರ್ಷದ ಹಿಂದೆ ಒಟಿಟಿ ಬಿಡುಗಡೆಗೆ ಸಂಬಂಧಪಟ್ಟಂತೆ ಒಪ್ಪಂದ ನಡೆದಿತ್ತು. ಅದರಂತೆ ನಾಲ್ಕು ವಾರಗಳಲ್ಲಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

    ಚಿತ್ರದ ದಕ್ಷಿಣ ಭಾಷೆಯ (ತಮಿಳು, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ) ಆವೃತ್ತಿಗಳು ಮಾತ್ರ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಹಿಂದಿ ಆವೃತ್ತಿ ಎಂಟು ವಾರಗಳ ನಂತರ ಬರಲಿದೆ. ಹೆಚ್ಚಿನ ದಕ್ಷಿಣ ಚಲನಚಿತ್ರಗಳು ಈಗ ನಾಲ್ಕು ವಾರಗಳ ಅವಧಿಯನ್ನು ಅನುಸರಿಸುತ್ತವೆ ಎಂದು ವಿವರಿಸಿದರು. ಇದನ್ನೂ ಓದಿ:  ಒಂದು ಭಾಷೆ ಬಿಟ್ಟು 4 ಭಾಷೆಗಳಲ್ಲಿ ಅ.31ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ ರಿಲೀಸ್‌

     

    ಕೆಲ ಸಿನಿಮಾಗಳು ಹೆಚ್ಚು ಕಾಲ ಓಡುತ್ತವೆ. ಕೆಲವು ಮೂರರಿಂದ ನಾಲ್ಕು ವಾರಗಳಲ್ಲಿ ಕೊನೆಯಾಗುತ್ತವೆ. ಪ್ರತಿಯೊಂದು ಚಿತ್ರಕ್ಕೂ ತನ್ನದೇ ಆದ ಒಪ್ಪಂದ ಮತ್ತು ಸಮಯವಿದೆ. ಕೋವಿಡ್‌ಗೆ ಮೊದಲು ಎಲ್ಲಾ ಚಿತ್ರಗಳಿಗೆ ಎಂಟು ವಾರ ನಿಗದಿಯಾಗಿತ್ತು. ಕೋವಿಡ್ ನಂತರ ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳು ನಾಲ್ಕು ವಾರಗಳ ನಂತರ ಒಟಿಟಿಯಲ್ಲಿ ಬರುತ್ತಿವೆ ಎಂದು ತಿಳಿಸಿದರು.

    ಈಗಲೂ ಚಿತ್ರ ಮಂದಿರಗಳಲ್ಲಿ ಚಿತ್ರ ಉತ್ತಮವಾಗಿ ಓಡುತ್ತಿದೆ. ಒಟಿಟಿಯಲ್ಲಿ ಬಿಡುಗಡೆಯಾದರೂ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಲಿದೆ. ವ್ಯತ್ಯಾಸವು ಹೆಚ್ಚೆಂದರೆ 10–15% ಮಾತ್ರ ಇರಬಹುದು ಎಂದು ಹೇಳಿದರು.

  • ದೀಪಾವಳಿಗೆ ಕಾಂತಾರ ಭರ್ಜರಿ ಧಮಾಕಾ – ಹೊಸ ದಾಖಲೆ ನಿರೀಕ್ಷೆ

    ದೀಪಾವಳಿಗೆ ಕಾಂತಾರ ಭರ್ಜರಿ ಧಮಾಕಾ – ಹೊಸ ದಾಖಲೆ ನಿರೀಕ್ಷೆ

    ವಿಶ್ವದಾದ್ಯಂತ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿರುವ ಕಾಂತಾರ ಚಾಪ್ಟರ್-1 (Kantara Chapter 1) ಸಿನಿಮಾ ಬಾಕ್ಸಾಫೀಸ್‌ನಲ್ಲೂ ಬಹುಕೋಟಿ ಗಳಿಕೆ ಕಂಡಿದೆ. ಕಾಂತಾರ ಚಾಪ್ಟರ್-1 ಸಿನಿಮಾಗೆ ಪ್ರಪಂಚದಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೀಪಾವಳಿ (Deepavali) ಹಬ್ಬಕ್ಕೆ ಮತ್ತೊಂದು ಹೊಸ ದಾಖಲೆ ಸೃಷ್ಟಿಸುತ್ತಿದೆ.

    ಕಾಂತಾರ ಸಿನಿಮಾ ಈಗಾಗಲೇ 18 ದಿನಗಳಲ್ಲಿ 765 ಕೋಟಿ ಕಬಳಿಸಿದೆ. ಇದೀಗ ದೀಪಾವಳಿ ಹಬ್ಬದ ರಜಾದಿನಗಳ ವಿಶೇಷವಾಗಿ ಕಾಂತಾರ ಸಿನಿಮಾ 800 ಕೋಟಿ ರೂ. ಗಡಿ ದಾಟಲಿದೆ. ಅಂದಹಾಗೆ ಕಾಂತಾರ ಸಿನಿಮಾದ ಗಳಿಕೆ ಮೂರನೇ ವಾರದಲ್ಲೂ ಕುಗ್ಗಿಲ್ಲ. ಅಲ್ಲದೇ 1000 ಕೋಟಿಯ ಟಾರ್ಗೆಟ್ ಮುಟ್ಟುವ ನಿರೀಕ್ಷೆ ಹೆಚ್ಚಾಗಿದೆ.

    ಕಾಂತಾರ ಸಿನಿಮಾ ಒಂದೊಂದೇ ದಾಖಲೆಗಳನ್ನ ಪುಡಿಗಟ್ಟುತ್ತಾ, ತನ್ನದೇ ಹೊಸ ರೆಕಾರ್ಡ್ ಕ್ರಿಯೇಟ್ ಮಾಡುತ್ತಿದೆ. ಕೇರಳ, ಆಸ್ಟ್ರೇಲಿಯಾ, ಕರ್ನಾಟಕ ಹೀಗೆ ಸಿನಿಮಾ ಒಂದೊಂದೇ ದಾಖಲೆಗಳನ್ನ ನಿರ್ಮಿಸುತ್ತಿದೆ. ದೀಪಾವಳಿ ಹಬ್ಬದ ವೈಬ್‌ಗೆ ಕಾಂತಾರ ಗಳಿಕೆ ಮತ್ತಷ್ಟು ಹೆಚ್ಚಲಿದೆ. 800 ಕೋಟಿ ರೂ. ದಾಟುವ ಭರವಸೆ ಹೆಚ್ಚಾಗಿದೆ.

  • ಕಾಂತಾರ ಚಾಪ್ಟರ್ 18 ದಿನಕ್ಕೆ 765 ಕೋಟಿ ಕಲೆಕ್ಷನ್

    ಕಾಂತಾರ ಚಾಪ್ಟರ್ 18 ದಿನಕ್ಕೆ 765 ಕೋಟಿ ಕಲೆಕ್ಷನ್

    ಕಾಂತಾರ ಚಾಪ್ಟರ್-1 (Kantara: Chapter 1) ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಕೇವಲ ಪ್ರಾದೇಶಿಕವಾಗಿ ಅಲ್ಲದೇ ಪ್ರಪಂಚದಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದೆ ಅಭಿಮಾನಿ ವರ್ಗ. ಬಹುಭಾಷೆಯಲ್ಲಿ ಏಕಕಾಲಕ್ಕೆ ತೆರೆಕಂಡ ಕಾಂತಾರ ಚಾಪ್ಟರ್-1 ಸಿನಿಮಾಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ.

    ಮೂರನೇ ವಾರದಲ್ಲೂ ಕಾಂತಾರ ಸಿನಿಮಾದ ಗಳಿಕೆ ಕುಗ್ಗಿಲ್ಲ. ಸಾಲು ಸಾಲು ರಜಾ ದಿನಗಳ ಜೊತೆ ಹಬ್ಬ ಇರುವ ಕಾರಣ ಚಿತ್ರ ನೋಡಲು ಥಿಯೇಟರ್‌ಗೆ ಜನ ಬರುತ್ತಿದ್ದಾರೆ. 800 ಕೋಟಿ ರೂ. ಸನಿಹದಲ್ಲಿರುವ ಕಾಂತಾರ 18 ದಿನಗಳಲ್ಲಿ ವಿಶ್ವದಾದ್ಯಂತ 765 ಕೋಟಿ ರೂ. ಗಳಿಕೆ ಮಾಡಿದೆ.

    ಕಾಂತಾರ ಚಾಪ್ಟರ್-1 ಸಿನಿಮಾಗೆ ಪೇಕ್ಷಕರು ನೀಡಿದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ತೀರ್ಥಯಾತ್ರೆ ಕೈಗೊಂಡಿದೆ. ರಿಷಬ್ ಶೆಟ್ಟಿ (Rishab Shetty) ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೂ ಎಲ್ಲಾ ದೇವಾಲಯಗಳಿಗೆ ಭೇಟಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಯಶಸ್ಸಿಗೆ ಕಾರಣವಾದ ದೇವರ ಹರಕೆ ತೀರಿಸುತ್ತಿದ್ದಾರೆ. ಜೊತೆಗೆ ಜನರಿಗೆ ಈ ಮೂಲಕ ಧನ್ಯವಾದಗಳನ್ನ ತಿಳಿಸಿದೆ ಚಿತ್ರತಂಡ.

  • ಕಾಂತಾರ ಚಿತ್ರದ ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ: ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಸ್ಪಷ್ಟನೆ

    ಕಾಂತಾರ ಚಿತ್ರದ ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ: ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಸ್ಪಷ್ಟನೆ

    ಮಂಗಳೂರು: ಕಾಂತಾರ ಚಿತ್ರದ (Kantara Chapter 1) ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪೆರಾರ ಶ್ರೀ ಬ್ರಹ್ಮ ದೇವರು ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಹೇಳಿದೆ.

    ತುಳುನಾಡಿನಲ್ಲಿ ಕಾಂತಾರ v/s ದೈವರಾಧಕರು ಫೈಟ್ ವಿಚಾರ ಜೋರಾಗುತ್ತಿದ್ದಂತೆ ಈಗ ದೈವದ ನುಡಿ ಕುರಿತು ದೈವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

    “ಹುಚ್ಚು ಕಟ್ಟಿದವರನ್ನ ಹುಚ್ಚು ಕಟ್ಟಿಸುತ್ತೇನೆ.. ಹಣವನ್ನ ಆಸ್ಪತ್ರೆಗೆ ಸುರಿಸುತ್ತೇನೆ” ಎಂದು ದೈವ ನುಡಿದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ನುಡಿ ಜೋರಾಗುತ್ತಿದ್ದಂತೆ ವಾದ ವಿವಾದ ಆರಂಭವಾಗಿತ್ತು. ಕಾಂತಾರ ಸಿನಿಮಾ ಹಾಗೂ ದೈವದ ಅನುಕರಣೆ ಮಾಡಿದವರಿಗೆ ಎಚ್ಚರಿಕೆ ಎಂದು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ದೈವಸ್ಥಾನದ ಆಡಳಿತ ಮಂಡಳಿಯಿಂದಲೇ ಸ್ಪಷ್ಟನೆ ನೀಡಿ ವಿಷಯಕ್ಕೆ ಇತೀಶ್ರೀ ಹಾಡಲು ಮುಂದಾಗಿದೆ.

    ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
    ಮಂಗಳೂರು ತಾಲೂಕು ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ ಪಿಲಿಚಾಂಡಿ ದೈವಸ್ಥಾನ -ಪಡುಪೆರಾರ ಕ್ಷೇತ್ರದಲ್ಲಿ ನಡೆದ ಬಲವಾಂಡಿ-ಪಿಲಿಚಾಂಡಿ ದೈವಗಳ ಪುದರ್ -ಮೆಚ್ಚಿ ಜಾತ್ರೆ ಸಮಯದ ದೈವಪಾತ್ರಿ ದರ್ಶನ -ದೈವದ ನಡೆ-ನುಡಿಗಳ ಬಗ್ಗೆ ಉಂಟಾದ ಗೊಂದಲ-ಭಿನ್ನಾಭಿಪ್ರಾಯ ವಿಚಾರದಲ್ಲಿ ಆಡಳಿತ ಮಂಡಳಿಯ ಸ್ಪಷ್ಟಿಕರಣ ನೀಡುತ್ತಿದೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಬ್ಲಾಕ್‌ಬಸ್ಟರ್‌ ಹಿಟ್; 2 ವಾರದಲ್ಲಿ 717 ಕೋಟಿ ಕಲೆಕ್ಷನ್‌

     

    ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ -ಪಿಲಿಚಾಂಡಿ ದೈವಸ್ಥಾನ, ಪಡುಪೆರಾರ-ಕ್ಷೇತ್ರದಲ್ಲಿ ಶತಮಾನದ ಕಾಲದ ಕಟ್ಟು ಕಟ್ಟುಳೆಯಂತೆ, ಗುತ್ತು ಬರ್ಕೆ ಮಹನೀಯರು ಹಾಗೂ ಗ್ರಾಮಸ್ಥರು, ಸಾರ್ವಜನಿಕರ ಕೂಡವಿಕೆಯಿಂದ ನಡೆಸಲ್ಪಡುವ ಪುರ್-ಮೆಚ್ಚಿ ಜಾತ್ರೆಯು ಇತ್ತೀಚಿಗೆ ಕ್ಷೇತ್ರದಲ್ಲಿ ನಡೆದಿರುತ್ತದೆ. ಈ ಸಂದರ್ಭದಲ್ಲಿ ದೈವದ ಪಾತ್ರಿ-ದೈವವು ನೀಡಿದ ಅಭಯ -ನಡೆ-ನುಡಿಗಳ ವಿಚಾರದಲ್ಲಿ ಗೊಂದಲ ಭಿನ್ನಾಭಿಪ್ರಾಯ ಏರ್ಪಟ್ಟಿರುವುದು ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ಬಂದಿರುತ್ತದೆ.  ಇದನ್ನೂ ಓದಿ:  100 ಕೋಟಿ ನಾಯಿ ಲಾಂಚ್ ಮಾಡ್ತೀನಿ- ಸವಾಲೆಸೆದ ಬಿಗ್‌ಬಾಸ್ ಸ್ಪರ್ಧಿ ಸತೀಶ್

    ಕ್ಷೇತ್ರದ ಬಲವಾಂಡಿ -ಪಿಲಿಚಾಂಡಿ ದೈವದ ನರ್ತನದ ಬಳಿಕ ನಡೆಯುವ ನಡೆ-ನುಡಗಳ ಸಂದರ್ಭದಲ್ಲಿ ಕೆಲವೊಂದು ಯುವಕರುಗಳು ದೈವ-ದೇವರ, ಆಚಾರ-ವಿಚಾರದಲ್ಲಿ ಆಗುತ್ತಿರುವ ಅಪಪ್ರಚಾರ ವಿಚಾರದಲ್ಲಿ ದೈವದ ಸಮಕ್ಷಮ ನಿವೇದನೆ ಮಾಡಿ ಕೊಂಡಿರುತ್ತಾರೆ. ಈ ಬಗ್ಗೆ ದೈವವು ಸೂಕ್ತ ಅಭಯವನ್ನು ನೀಡಿರುತ್ತದೆ ವಿನಾ: ಯಾವುದೇ ಚಲನಚಿತ್ರ, ಅದರಲೂ ಮುಖ್ಯವಾಗಿ ಪ್ರಕೃತ ಪ್ರಚಾರದಲ್ಲಿರುವ ಕಾಂತರ-1 ಬಗ್ಗೆ ಯಾವುದೇ ಅಭಯ ನುಡಿಯನ್ನು ದೈವವು ನೀಡಿರುವುದಿಲ್ಲ. ಆದರೆ ದೈವವು ನಿವೇದನೆಗೆ ಸಂಬಂಧಿಸಿ ನೀಡಿದ ಅಭಯ-ನುಡಿಯನ್ನು ನಿವೇದಿಸಿಕೊಂಡ ಯುವಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವುದಕ್ಕೆ ಶ್ರೀಕ್ಷೇತ್ರದ ಭಕ್ತರು ಗ್ರಾಮಸ್ಥರು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿರುವುದರಿಂದ ಈ ಸ್ಪಷ್ಟಿಕರಣವನ್ನು ಆಡಳಿತ ಮಂಡಳಿ ನೀಡುತ್ತಿದೆ.

    ಮೇಲಿನಂತೆ ಶ್ರೀ ಕ್ಷೇತ್ರ ಪೆರಾರದದಲ್ಲಿ ನಡೆದ ಜಾತ್ರ ಸಂದರ್ಭದಲ್ಲಿನ ದೈವ ನಡೆ-ನುಡಿಯಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಗಳು /ಚಲನಚಿತ್ರದ ಬಗ್ಗೆ ಯಾವುದೇ ಅಭಯ-ನುಡಿ ನೀಡುವ ಸಂದರ್ಭ ಬಂದಿರುವ ಕಾರಣ, ಪ್ರಕೃತ ಈ ವಿಚಾರದಲ್ಲಿನ ಗೊಂದಲ-ಭಿನ್ನಾಭಿಪ್ರಾಯಗಳಿಗೆ ಅಲ್ಲದೇ ಈ ಗೊಂದಲ ಶ್ರೀ ಕ್ಷೇತ್ರದ ದೈವ-ದೇವರು-ಆಡಳಿತ ಮಂಡಳಿಯು ಹೊಣೆಗಾರರಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

  • ಸ್ವಿಟ್ಜರ್​ಲ್ಯಾಂಡ್‌ನಲ್ಲಿ ಕಾಂತಾರ ಚೆಲುವೆ ಸಪ್ತಮಿಗೌಡ ಜಾಲಿ ಜಾಲಿ

    ಸ್ವಿಟ್ಜರ್​ಲ್ಯಾಂಡ್‌ನಲ್ಲಿ ಕಾಂತಾರ ಚೆಲುವೆ ಸಪ್ತಮಿಗೌಡ ಜಾಲಿ ಜಾಲಿ

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ (Kantara) ಸ್ವಿಕ್ವೇಲ್ ಸಿನಿಮಾದಲ್ಲಿ ಲೀಲಾ ಆಗಿ ಮಿಂಚಿದ್ದ ಸಪ್ತಮಿ ಗೌಡ (Sapthami Gowda) ಬಳಿಕ ತೆಲುಗು ಸಿನಿಮಾದಲ್ಲೂ ನಟಿಸಿ ಖ್ಯಾತಿ ಗಳಿಸಿದ್ದಾರೆ. ಇದೀಗ ವಿದೇಶದ ಸುಂದರ ತಾಣಗಳಲ್ಲಿ ನಿಂತು ವಿಧ ವಿಧವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಪ್ತಮಿಗೌಡ ಸ್ವಿಟ್ಜರ್​ಲ್ಯಾಂಡ್‌ನ (Switzerland) ಬ್ಯೂಟಿಫುಲ್ ಲೊಕೇಶನ್‌ನಲ್ಲಿ ಸ್ಟೈಲ್ ಸ್ಮೈಲ್ ಕೊಟ್ಟಿದ್ದಾರೆ.

    ಸಪ್ತಮಿಗೌಡ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರ್ತಾರೆ. ಇತ್ತೀಚೆಗೆ ತೂಕ ಇಳಿಸಿ, ತೆಳ್ಳಗೆ ಬಳುಕುವ ಬಳ್ಳಿಯ ಹಾಗೆ ಮತ್ತಷ್ಟು ಪಿಟ್ ಆಗಿ ಕಣ್ಮನ ಸೆಳೆಯುತ್ತಿದ್ದಾರೆ. ಪ್ರಕೃತಿಯ ಸೊಬಗನ್ನು ಸವಿಯುತ್ತಾ ಹೊಸ ಹೊಸ ಉಡುಗೆಯಲ್ಲಿ ವಿದೇಶದ ಬೀದಿಯಲ್ಲಿ ರೌಂಡ್ ಹೊಡೆಯುತ್ತಿದ್ದಾರೆ. ಇದನ್ನೂ ಓದಿ: ಎಷ್ಟೇ ಕೆಟ್ಟ ಕಾಮೆಂಟ್ಸ್ ಬಂದ್ರೂ ಡೋಂಟ್ ಕೇರ್ ಎಂದ ನಿವೇದಿತಾ ಗೌಡ

    ಸದ್ಯ ವಿಶ್ವದಾದ್ಯಂತ ಕಾಂತಾರ ಚಾಪ್ಟರ್-1 ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇತ್ತ ಕಾಂತಾರ ಸಿಕ್ವೇಲ್ ಸುಂದರಿ ಸಿಂಗಾರ ಸಿರಿ ಸ್ವಿಟ್ಜರ್​ಲ್ಯಾಂಡ್‌ನ ಯಾತ್ರೆ ಕೈಗೊಂಡಿದ್ದಾರೆ. ಸಪ್ತಮಿಗೌಡ ಹಾಕಿರುವ ಪೋಸ್ಟ್‌ಗೆ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತವಾಗ್ತಿದೆ.

  • 1 ಕೋಟಿ ಟಿಕೆಟ್‌ ಮಾರಾಟ – ಹಿಂದಿಯಲ್ಲಿ ಕಾಂತಾರ 130+ ಕೋಟಿ ಗಳಿಕೆ

    1 ಕೋಟಿ ಟಿಕೆಟ್‌ ಮಾರಾಟ – ಹಿಂದಿಯಲ್ಲಿ ಕಾಂತಾರ 130+ ಕೋಟಿ ಗಳಿಕೆ

    ರಿಷಬ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಕಾಂತಾರ: ಚಾಪ್ಟರ್ 1 (Kantara: Chapter 1) ಟಿಕೆಟ್‌ ಬುಕ್ಕಿಂಗ್‌ ಮಾಡುವ ಬುಕ್‌ಮೈಶೋದಲ್ಲಿ (BookMyShow) 1 ಕೋಟಿ ಟಿಕೆಟ್‌ ಮಾರಾಟವಾಗಿದೆ.

    ಅಕ್ಟೋಬರ್‌ 2 ರಂದು ಕಾಂತಾರ ಬಿಡುಗಡೆಯಾಗಿದ್ದು ಈಗಲೂ ಪ್ರೇಕ್ಷಕರಿಂದ ಬೇಡಿಕೆ ವ್ಯಕ್ತವಾಗುತ್ತಿದೆ. ಶನಿವಾರ ಭಾನುವಾರ ಬಹುತೇಕ ಥಿಯೇಟರ್‌ಗಳು ಭರ್ತಿಯಾಗುತ್ತಿವೆ. ಟಯರ್‌ 2 ಮತ್ತು ಟಯರ್‌ 3 ನಗರಗಳಲ್ಲಿ ಥಿಯೇಟರ್‌ ಈಗಲೂ ಭರ್ತಿಯಾಗುತ್ತಿರುವುದು ಚಿತ್ರ ಉತ್ತಮ ಕಲೆಕ್ಷನ್‌ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಮೊದಲ ದಿನವೇ ಬುಕ್‌ಮೈಶೋದಲ್ಲಿ ದಾಖಲೆ ಬರೆದ ಕಾಂತಾರ


    ಆರಂಭದಲ್ಲಿ ಹಿಂದಿ ಕಲೆಕ್ಷನ್‌ ಕಡಿಮೆ ಇತ್ತು. ಆದರೆ ಈಗ ಹಿಂದಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದರಿಂದಾಗಿ ಹಿಂದಿ ಕಲೆಕ್ಷನ್‌ 100 ಕೋಟಿ ರೂ. ಗಡಿ ದಾಟಿದೆ. ಶುಕ್ರವಾರ 7.10 ಕೋಟಿ ರೂ. ಶನಿವಾರ 14.37 ಕೋಟಿ ರೂ. ಗಳಿಸುವ ಮೂಲಕ ಒಟ್ಟು 131.57 ಕೋಟಿ ರೂ. ಗಳಿಸಿದೆ. ಇದನ್ನೂ ಓದಿ:  ಹಿಂದಿ ಬಿಗ್ ಶೋನಲ್ಲಿ ರಿಷಬ್ ಶೆಟ್ಟಿ – ಬಿಗ್‌ಬಿಗೆ ವಿಶ್ ಮಾಡಿದ ಡಿವೈನ್ ಸ್ಟಾರ್

  • `ಕಾಂತಾರ’ ಮೆಚ್ಚಿದ ಅಟ್ಲಿ – ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ನೆನೆದ ಖ್ಯಾತ ನಿರ್ದೇಶಕ

    `ಕಾಂತಾರ’ ಮೆಚ್ಚಿದ ಅಟ್ಲಿ – ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ನೆನೆದ ಖ್ಯಾತ ನಿರ್ದೇಶಕ

    `ಪಿಕಲ್ಬಾಲ್ ಲೀಗ್ ಬೆಂಗಳೂರು ಒಪನ್ 2025’ನಲ್ಲಿ ಅಟ್ಲಿ (Filmmaker Atlee) ಮಾಲಿಕತ್ವದ ಬೆಂಗಳೂರು ಜವಾನ್ಸ್ ತಂಡ ಆಡುತ್ತಿದೆ. ಈ ಕಾರ್ಯಕ್ರಮವನ್ನ ಇಂದು ಬೆಂಗಳೂರಿನ ಪಿಕಲ್ ಬಾಲ್ ಕ್ಲಬ್ ನಲ್ಲಿ ಚಾಲನೆ ನೀಡಲಾಯಿತು. ಕಳೆದ ಬಾರಿ ಭಾರತದ ಮೊಟ್ಟ ಮೊದಲ ಪಿಕಲ್ ಬಾಲ್ ಲೀಗ್ ಅನ್ನು (World Pickleball League) ಕರ್ನಾಟಕ ಸ್ಟೇಟ್ ಪಿಕಲ್ ಬಾಲ್ ಅಸೋಸಿಯೇಷನ್ ಸಾರಥ್ಯದಲ್ಲಿ ಯಶಸ್ವಿಯಾಗಿ ಮಾಡಲಾಗಿತ್ತು. ಇದೀಗ ಎರಡನೇ ಪಿಕಲ್ ಬಾಲ್ ಲೀಗ್ ಆವೃತ್ತಿಗೆ ಚಾಲನೆ ನೀಡಲಾಗಿದೆ. ಅದ್ರಂತೆ ಅಕ್ಟೋಬರ್ 10ರಿಂದ 12ರ ವರೆಗೆ ರೋಚಕ ಪಂದ್ಯಾವಳಿ ನಡೆಯಲಿವೆ.

    ಈ ವಿಚಾರವಾಗಿ ಬೆಂಗಳೂರಿಗೆ ಆಗಮಿಸಿದ ತಮಿಳು ಸಿನಿಮಾರಂಗದ (Tamil Cinema) ಹೆಸರಾಂತ ನಿರ್ದೇಶಕ ಜವಾನ್ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಅಟ್ಲಿ ಕುಮಾರ್ ಬೆಂಗಳೂರು ಜವಾನ್ಸ್ ಹೆಸರಿನ ತಂಡವನ್ನು ಖರೀದಿ ಮಾಡಿದ್ದಾರೆ. ಕಳೆದ ವರ್ಷ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ಬೆಂಗಳೂರು ಜವಾನ್ಸ್ ಕೂಡ ಪಿಕಲ್‌ಬಾಲ್‌ನಲ್ಲಿ ಚಾಂಪಿಯನ್ಸ್ ಆಗಿತ್ತು.

    ಬೆಂಗಳೂರು ಓಪನ್‌ 2025 ವರ್ಲ್ಡ್ ಪಿಕಲ್ ಬಾಲ್ ಲೀಗ ಉದ್ಘಾಟಿಸಿ, ಸ್ಫರ್ಧಾಳುಗಳ ಜತೆ ಸ್ನೇಹಪೂರ್ವಕ ಮ್ಯಾಚ್ ಆಡಿದ ಅಟ್ಲಿ ಕುಮಾರ್, ನಾನು ಆರ್‌ಸಿಬಿ ಫ್ಯಾನ್‌, ಕಳೆದ ಬಾರಿ ಐಪಿಎಲ್‌ ಚಾಂಪಿಯನ್‌ ಆದಂತೆ ನಮ್ಮ ತಂಡ ಬೆಂಗಳೂರು ಜವಾನ್ಸ್ ತಂಡ ಕೂಡ ಗೆದ್ದಿತ್ತು. ಬೆಂಗಳೂರು ಸಿಟಿ ಅಂದ್ರೆ ನಂಗೆ ತುಂಬಾ ಇಷ್ಟ. ಇಲ್ಲಿನ ಸಿನಿಮಾ ನಟರಾದ ಯಶ್, ರಿಷಬ್ ಶೆಟ್ಟಿ ಮುಂತಾದವರ ಜೊತೆಗೆ ನನಗೆ ಉತ್ತಮ ಸ್ನೇಹವಿದೆ. ಎಲ್ಲರೂ ಅದ್ಭುತವಾಗಿ ಕೆಲಸ ಮಾಡ್ತಾ ಇದ್ದಾರೆ.

    ಕಾಂತಾರ ಚಾಪ್ಟರ್‌-01ರ ಬಗ್ಗೆ ಮಾತನಾಡಿದ ಅಟ್ಲಿ ʻಕಾಂತಾರ ನಿಜಕ್ಕೂ ಅದ್ಭುತ ಸಿನಿಮಾʼನಾನು ನೋಡಿ ಬೆರಗಾಗಿದ್ದೇನೆ ಎಂದು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ. ಮೂಲತಃ ತಮಿಳು ನಾಡಿನವರಾಗಿದ್ದರು ಅಟ್ಲಿಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಅಂದ್ರೆ ಸಖತ್ ಭಕ್ತಿ ಅಂತೆ. ಆಗಾಗ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆಯುತ್ತೀನಿ ಎಂದರು. ʻಜವಾನ್ʼ ಸಿನಿಮಾ ಸೂಪರ್ ಹಿಟ್ ಆದ ಕಾರಣ ನಾನು ಖರೀದಿ ಮಾಡಿರುವ ಪಿಕಲ್ ಬಾಲ್ ತಂಡಕ್ಕೆ ಬೆಂಗಳೂರು ಜವಾನ್ಸ್ ಎಂದು ಹೆಸರಿಟ್ಟಿರುವೆ ಎಂದಿದ್ದಾರೆ.

  • ಕಾಂತಾರ ಬ್ಲಾಕ್‌ಬಸ್ಟರ್ ಹಿಟ್ – 1 ವಾರಕ್ಕೆ 509 ಕೋಟಿ ಕಲೆಕ್ಷನ್

    ಕಾಂತಾರ ಬ್ಲಾಕ್‌ಬಸ್ಟರ್ ಹಿಟ್ – 1 ವಾರಕ್ಕೆ 509 ಕೋಟಿ ಕಲೆಕ್ಷನ್

    ನಿರೀಕ್ಷೆಯಂತೆ ಕಾಂತಾರ ಅಧ್ಯಾಯ 1 (Kantara Chapter 1) ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಕಲೆಕ್ಷನ್ ವಿಚಾರಕ್ಕೆ ಇದುವರೆಗೂ ಮೌನವಾಗಿದ್ದ ಕಾಂತಾರ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲಂಸ್ (Hombale Films) ಈಗ ಚಿತ್ರದ ಗಳಿಕೆ ಕುರಿತು ಅಧಿಕೃತ ಘೋಷಣೆ ಮಾಡಿದೆ. ಮೊದಲ ವಾರಕ್ಕೆ ಕಾಂತಾರ ಚಿತ್ರ ವರ್ಲ್ಡ್ವೈಡ್ 509.25 ಕೋಟಿ ಕಲೆಕ್ಷನ್ ಮಾಡಿದೆ.

    `ಕಾಂತಾರ’ ಚಿತ್ರ ತೆರೆಕಂಡ ಬಳಿಕ ಬರುತ್ತಿದ್ದ ಅದ್ಭುತ ರೆಸ್ಪಾನ್ಸ್ ಗಮನಿಸಿದಾಗ ಮೊದಲ ವಾರದೊಳಗೆ ಕಾಂತಾರ ಚಿತ್ರ 500 ಕೋಟಿ ಗಡಿ ದಾಟುವ ಸುಳಿವು ನೀಡಿತ್ತು. ಇದೀಗ ನಿರೀಕ್ಷಿಸಿದಂತೆ ಕಾಂತಾರ ಸರಿಸುಮಾರು 510 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ.


    ಅ.2 ರಂದು ಕಾಂತಾರ ಚಿತ್ರ ವಿಶ್ವದಾದ್ಯಂತ 7 ಭಾಷೆಗಳಲ್ಲಿ ತೆರೆಕಂಡಿತ್ತು. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಕಾಂತಾರಕ್ಕೆ ಅತ್ಯದ್ಭುತ ರೆಸ್ಪಾನ್ಸ್ ಸಿಗುತ್ತಿದ್ದು ವಿದೇಶದಲ್ಲೂ ಕಾಂತಾರ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಿಣಾಮ ಮೊದಲ ವಾರ 509 ಕೋಟಿ ಕಲೆಕ್ಷನ್ ಮಾಡಿದೆ.

    ಕನ್ನಡದಲ್ಲಿ ಅತಿವೇಗದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಎರಡನೇ ಚಿತ್ರದ ಸ್ಥಾನದಲ್ಲಿದೆ ಕಾಂತಾರ. ಕೆಜಿಎಫ್ 2 ಚಿತ್ರ ಮೊದಲ ಸ್ಥಾನದಲ್ಲಿದೆ. ಕೆಜಿಎಫ್2 ಒಟ್ಟು 1215 ಕಲೆಕ್ಷನ್ ಮಾಡಿತ್ತು. ಇದೀಗ ಕಾಂತಾರ ಅದೇ ದಾರಿಯಲ್ಲಿದೆ.

    ಕಾಂತಾರ ಒಟಿಟಿ ಹಕ್ಕುಗಳನ್ನು ಅಮೇಜಾನ್ ಪ್ರೈಮ್‌ ಪಡೆದುಕೊಂಡಿದೆ. ಅಂದಾಜು ಸುಮಾರು 125 ಕೋಟಿ ರೂ. ಗಳಿಗೆ ಡಿಜಿಟಲ್ ಪ್ರಸಾರದ ಹಕ್ಕನ್ನು ಅಮೆಜಾನ್ ಪಡೆದುಕೊಂಡಿದೆ ಎಂದು ವರದಿಯಾಗಿದೆ.

  • `ಕಾಂತಾರ’ ನೋಡಿ ಹುಚ್ಚಾಟ ಪ್ರದರ್ಶನ – ವಿಡಿಯೋ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ

    `ಕಾಂತಾರ’ ನೋಡಿ ಹುಚ್ಚಾಟ ಪ್ರದರ್ಶನ – ವಿಡಿಯೋ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ

    – ನಾನು ನಿಮ್ಮವ ಅಂತ ಕ್ಷಮಿಸಿಬಿಡಿ ಎಂದ ವೆಂಕಟ್‌
    – ಅತ್ತ ಕಾಂತಾರ ವಿರುದ್ಧ ಸಿಡಿದೆದ್ದ ದೈವಾರಾಧಕರು

    ಬೆಂಗಳೂರು: ಕಾಂತಾರ ಚಾಪ್ಟರ್-1 (Kantara Chapter 1) ಜಗತ್ತಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಆದ್ರೆ ದೈವಾರಾಧನೆಯ ಎಳೆ ಹಿಡಿದು ನಿರ್ಮಿಸಿದ ಕಾಂತಾರ ಚಿತ್ರದ ವಿರುದ್ಧ ಇದೀಗ ದೈವಾರಾಧಕರೇ ಸಿಡಿದೆದ್ದಿದ್ದಾರೆ. ದೈವಸ್ಥಾನದ ಮೆಟ್ಟಿಲಲ್ಲೇ ತೀರ್ಪಿಗಾಗಿ ದೈವಾರಾಧಕರು ದೈವದ ಮೊರೆ ಹೋಗಿದ್ದಾರೆ. ತುಳುನಾಡಿನಲ್ಲಿ (Tulunad) ದೈವಾರಾಧಕರು ವರ್ಸೆಸ್ ಕಾಂತಾರ ಫೈಟ್ ತಾರಕಕ್ಕೇರಿದೆ.

    ಈ ನಡುವೆ ಕಾಂತಾರ ಸಿನಿಮಾ ನೋಡಿದ ಬಳಿಕ ದೈವದ ಅನುಕರಣೆ ಮಾಡಿ ಹುಚ್ಚಾಟ ಮೆರೆದಿದ್ದ ವೆಂಕಟ್‌ ಎಂಬಾತ ಕ್ಷಮೆಯಾಚಿಸಿದ್ದಾನೆ. ವಿಡಿಯೋ ಮೂಲಕ ತುಳುನಾಡ ಜನತೆ ಹಾಗೂ ಕಾಂತಾರ ಚಿತ್ರತಂಡಕ್ಕೆ ಕ್ಷಮೆ ಕೇಳಿದ್ದಾನೆ ವೆಂಕಟ್‌.

    ಘಟನೆ ಬಳಿಕ ಮಾನಸಿಕವಾಗಿ ನೊಂದಿದ್ದೇನೆ. ತುಳುನಾಡಿನ ಜನತೆಯಲ್ಲಿ ಕ್ಷಮೆ ಇರಲಿ. ಈ ರೀತಿ ಯಾರೂ ಮಾಡಬೇಡಿ, ನಾನು ನಿಮ್ಮವ ಅಂತ ಕ್ಷಮಿಸಿಬಿಡಿ ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾನೆ.

    ಕಾಂತಾರ ವಿರುದ್ಧ ಸಿಡಿದೆದ್ದ ದೈವಾರಾಧಕರು
    ಕಾಂತಾರ ಚಾಪ್ಟರ್-1 ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ವಿಶ್ವದಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಸಿನಿಮಾದ ಬಗ್ಗೆ ಪ್ರಶಂಸೆಯೂ ವ್ಯಕ್ತವಾಗುತ್ತಿದೆ. ತುಳುನಾಡಿನ ದೈವಾರಾಧನೆಯ ಎಳೆಯನ್ನೇ ಹಿಡಿದುಕೊಂಡು ಬಂದ ಕಾಂತಾರ ಹಾಗೂ ಕಾಂತಾರ ಚಾಪ್ಟರ್-1 ಮೂಲಕ ತುಳುನಾಡಿನ ಆರಾಧ್ಯ ದೈವಗಳಿಗೆ ನಿಂದನೆ ಆಗಿದೆ ಅನ್ನೋ ಅಸಮಧಾನವೂ ಇದೆ.

    ಹಾದಿಬೀದಿಯ ಪ್ರದರ್ಶನವನ್ನ ಕಾಂತಾರ ಪ್ರೇರೇಪಿಸಿದೆ
    ತುಳುವರ ಆರಾಧ್ಯ ದೈವಗಳನ್ನ ಹಾದಿಬೀದಿಯಲ್ಲಿ ಪ್ರದರ್ಶನ ಮಾಡೋದನ್ನ ಕಾಂತಾರ ಚಿತ್ರವೇ ಪ್ರೇರೇಪಿಸಿದೆ ಅನ್ನೋ ವಿರೋಧ ವ್ಯಕ್ತವಾಗಿದೆ. ಕಾಂತಾರದಲ್ಲಿ ಪಂಜುರ್ಲಿ, ಗುಳಿಗ, ಪಿಲಿದೈವವನ್ನ ತೋರಿಸಿ ರಿಷಬ್ ಶೆಟ್ಟಿ ಮಾಡಿದ ದೈವ ನರ್ತನವನ್ನ ಸಿನಿಮಾ ಥಿಯೇಟರ್‌ನಲ್ಲಿ ವೇಷ ಹಾಕಿ ಕುಣಿಯುತ್ತಿದ್ದಾರೆ. ಸಿನಿಮಾ ಮಂದಿರ ಹಿಡಿದು ರಸ್ತೆ ಮಧ್ಯೆ ಬಂದು ದೈವ ನರ್ತನ ಮಾಡೋವರೆಗೂ ಬಂದು ತಲುಪಿದೆ.

    ಪಿಲಿಚಂಡಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ
    ಸಿನಿಮಾ ಬಿಡುಗಡೆ ಬೆನ್ನಲ್ಲೇ ಅನೇಕರಿಂದ ದೈವಾರಾಧನೆಯ ಅನುಕರಣೆ, ಮೈಮೇಲೆ ದೈವ ಬಂದ ರೀತಿಯಲ್ಲಿ ವಿಕೃತಿ ಮೆರೆದಿದ್ದಾರೆ. ಹೀಗಾಗಿ ತುಳುನಾಡಿದ ದೈವಾರಾಧಕರು, ದೈವ ನರ್ತಕರು ಕಾಂತಾರ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ದೈವಸ್ಥಾನದ ಮೆಟ್ಟಿಲೇರಿದ್ದಾರೆ. ಕಾಂತಾರದಲ್ಲಿ ದೈವಾರಾಧನೆಯ ಬಳಕೆ ಹಾಗೂ ಸಿನಿಮಾ ಬಿಡುಗಡೆಯ ಬಳಿಕ ಅನೇಕರು ವಿಕೃತಿ ಮೆರೆದಿರೋದ್ರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಪರ ವಿರೋಧ ಚರ್ಚೆಗಳು ಆಗುತ್ತಿದೆ. ಹೀಗಾಗಿ ಇಂದು ದೈವಾರಾಧಕರು ಹಾಗೂ ದೈವ ನರ್ತಕರು ದೈವ ಕ್ಷೇತ್ರದಲ್ಲೇ ಕಾಂತಾರ ಸಿನಿಮಾದ ವಿರುದ್ಧ ದೂರು ನೀಡಿದ್ದಾರೆ. ಮಂಗಳೂರು ಹೊರವಲಯದ ಬಜಪೆ ಸಮೀಪದ ಪೆರಾರ ಶ್ರೀ ಬ್ರಹ್ಮಬಲವಂಡಿ ಪಿಲಿಚಂಡಿ ದೈವಸ್ಥಾನದಲ್ಲಿ ದೈವ ನರ್ತಕರು ಹಾಗೂ ದೈವಾರಾಧಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

  • ದೈವಸ್ಥಾನದ ಮೆಟ್ಟಿಲೇರಿದ ಕಾಂತಾರ ಚಿತ್ರ – ದೈವಾರಾಧನೆ ಬಳಕೆ ವಿರುದ್ಧ ಸಿಡಿದೆದ್ದ ದೈವಾರಾಧಕರು

    ದೈವಸ್ಥಾನದ ಮೆಟ್ಟಿಲೇರಿದ ಕಾಂತಾರ ಚಿತ್ರ – ದೈವಾರಾಧನೆ ಬಳಕೆ ವಿರುದ್ಧ ಸಿಡಿದೆದ್ದ ದೈವಾರಾಧಕರು

    ಮಂಗಳೂರು: ತುಳುನಾಡಿನಲ್ಲಿ ದೈವಾರಾಧಕರು ಹಾಗೂ ಕಾಂತಾರ ಚಾಪ್ಟರ್‌ 1 ಸಿನಿಮಾದ (Kantara Chapter 1) ನಡುವಿನ ಫೈಟ್ ತಾರಕಕ್ಕೇರಿದೆ. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ದೈವಾರಾಧನೆ (Daivaradhane) ಬಳಕೆ ವಿರುದ್ಧ ಸಿಡಿದೆದ್ದ ದೈವಾರಾಧಕರು ದೈವಸ್ಥಾನದ ಮೆಟ್ಟಿಲೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಮಂಗಳೂರಿನ (Mangaluru) ಬಜಪೆ ಸಮೀಪ ಪೆರಾರ ಬ್ರಹ್ಮ ಬಲವಂಡಿ, ಪಿಲಿಚಂಡಿ ದೈವಸ್ಥಾನದಲ್ಲಿ ದೈವನರ್ತಕರು ಹಾಗೂ ದೈವಾರಾಧಕರು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾ ಹಾಗೂ ದೈವಾರಾಧನೆಯ ಅಪಹಾಸ್ಯದ ವಿರುದ್ಧ ದೈವಸ್ಥಾನದ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!

    ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ, ಗುಳಿಗ, ಪಿಲಿ ದೈವದ ಆವೇಶ ಸೇರಿದಂತೆ ದೈವ ನರ್ತನದ ಬಳಕೆ ಮಾಡಲಾಗಿತ್ತು. ಸಿನಿಮಾ ಬಿಡುಗಡೆ ಬೆನ್ನಲ್ಲೇ ಥಿಯೇಟರ್ ಸೇರಿದಂತೆ ಅನೇಕ ಕಡೆ ಹಲವರು ದೈವಾರಾಧನೆಯ ಅನುಕರಣೆ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಯೂ ಜೋರಾಗಿದೆ.

    ಇನ್ನು ಕೆಲವರು ಮೈಮೇಲೆ ದೈವ ಬಂದ ರೀತಿಯಲ್ಲಿ ವಿಕೃತಿ ಮೆರೆದಿದ್ದರು. ಇದೆಲ್ಲವನ್ನು ಖಂಡಿಸಿ ದೈವಾರಾಧಕರು ಇಂದು ದೈವಕ್ಷೇತ್ರದಲ್ಲೇ ಕಾಂತಾರ ಸಿನಿಮಾ ಮತ್ತು ದೈವಾರಾಧನೆಯ ಅಪಹಾಸ್ಯ ಮಾಡುವವರ ವಿರುದ್ಧ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.