Tag: ಕಾಂಚನಾ-3

  • ಗೋವಾದಲ್ಲಿ ಕಾಂಚನಾ-3 ನಟಿ ಅಲೆಕ್ಸಾಂಡ್ರಾ ಶವ ಪತ್ತೆ

    ಗೋವಾದಲ್ಲಿ ಕಾಂಚನಾ-3 ನಟಿ ಅಲೆಕ್ಸಾಂಡ್ರಾ ಶವ ಪತ್ತೆ

    ಚೆನ್ನೈ: ಕಾಲಿವುಡ್‍ನಲ್ಲಿ ಸೂಪರ್ ಡೂಪರ್ ಹಿಟ್ ಪಡೆದಿದ್ದ ಕಾಂಚನಾ-3 ಸಿನಿಮಾದ ರಷ್ಯನ್ ನಟಿ ಕಮ್ ಮಾಡೆಲ್ ಅಲೆಕ್ಸಾಂಡ್ರಾ ಸಾವನ್ನಪ್ಪಿದ್ದಾರೆ.

    ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಲೆಕ್ಸಾಂಡ್ರಾ ಮೃತದೇಹ ಮನೆಯಲ್ಲಿ ಪತ್ತೆಯಾಗಿದ್ದು, ಆಕೆಯ ನೆರೆಹೊರೆ ಮನೆಯವರು ಕೆಲವು ದಿನಗಳ ಹಿಂದೆ ಅಲೆಕ್ಸಾಂಡ್ರಾ ಬಾಯ್ ಫ್ರೆಂಡ್ ಅವರ ಮನೆಯಿಂದ ಹೊರಬಂದಿದ್ದನ್ನು ನೋಡಿದೇವು. ಅಂದಿನಿಂದ ಅಲೆಕ್ಸಾಂಡ್ರಾ ಬಹಳ ಖಿನ್ನತೆಯಲ್ಲಿದ್ದರು ಮತ್ತು ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಗಡ್ದಧಾರಿಯಾಗಿ ರಷ್ಯಾದ ಬೀದಿಯಲ್ಲಿ ಸಲ್ಮಾನ್ ಅಲೆದಾಟ – ಫೋಟೋ ವೈರಲ್

    ಸದ್ಯ ಇದನ್ನೆಲ್ಲಾ ಗಮನಿಸುತ್ತಿರುವ ಪೊಲೀಸರಿಗೆ ಅಲೆಕ್ಸಾಂಡ್ರಾ ಆತ್ಮಹತ್ಯೆ ಮಾಡುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅಲೆಕ್ಸಾಂಡ್ರಾ ಮೂಲತಃ ರಷ್ಯಾದವರಾಗಿದ್ದು, ಅವರ ಕುಟುಂಬಸ್ಥರು ರಷ್ಯಾದಲ್ಲಿರುವುದರಿಂದ ಮಾಹಿತಿ ನೀಡಲಾಗಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ತನಿಖೆ ನಡೆಸಲು ಆರಂಭಿಸಿದ್ದಾರೆ.

    ಕಾಲಿವುಡ್ ನಟ ರಾಘವ್ ಲಾರೆನ್ಸ್‌ಗೆ ಜೋಡಿಯಾಗಿ ಅಲೆಕ್ಸಾಂಡ್ರಾ ಕಾಂಚನಾ-3 ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಕಾಲಿವುಡ್‍ನಲ್ಲಿ ಯಶಸ್ಸು ಕೂಡ ಕಂಡಿತ್ತು. ಇದನ್ನೂ ಓದಿ:ಪಾಕ್‍ಗೆ ಹಣದ ನೆರವು ನೀಡುವುದನ್ನು ಅಮೆರಿಕ ನಿಲ್ಲಿಸಲಿ: ಅಫ್ಘಾನ್ ಪಾಪ್ ತಾರೆ