Tag: ಕಾಂಗ್ರೆಸ್ ಸಮಾವೇಶ

  • ಚುನಾವಣೆ ಹತ್ತಿರ ಬಂದಾಗ ಹಿಂದೂ ದೇವರು ನೆನಪಾದ್ರಾ: ರಾಹುಲ್‍ಗೆ ಶೋಭಾ ಪ್ರಶ್ನೆ

    ಚುನಾವಣೆ ಹತ್ತಿರ ಬಂದಾಗ ಹಿಂದೂ ದೇವರು ನೆನಪಾದ್ರಾ: ರಾಹುಲ್‍ಗೆ ಶೋಭಾ ಪ್ರಶ್ನೆ

    ಉಡುಪಿ: ಚುನಾವಣಾ ಯಾತ್ರೆಯನ್ನು ಬಳ್ಳಾರಿಯಿಂದ ಆರಂಭಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಜೈಲಿಗೆ ಹೋದವರಲ್ವಾ ಅಂತ ಸಿಎಂ ಹೇಳಿಕೆಗಳ ವಿರುದ್ಧ ಲೇವಡಿ ಮಾಡಿದ್ದಾರೆ. ರಾಹುಲ್ ಗಾಂಧಿ ಹೊಸಪೇಟೆಯಿಂದ ಯಾತ್ರೆ ಆರಂಭಿಸಿದ್ದಾರೆ. ಶಾಸಕ ಆನಂದ್ ಸಿಂಗ್ ಜೈಲಿಗೆ ಹೋದವರು ಅಂತ ಸಿಎಂ ಸಿದ್ದರಾಮಯ್ಯನೇ ಹೇಳ್ತಾ ಇದ್ರು. ಈಗ ಇದಕ್ಕೇನು ಹೇಳುತ್ತಾರೆ? ಜೈಲಿಗೆ ಹೋದವರ ಕ್ಷೇತ್ರದಿಂದ ಪ್ರವಾಸ ಆರಂಭಿಸಿದ್ದಾರಲ್ಲ ಅಂತ ಸಂಸದೆ ಶೋಭಾ ಕರಂದ್ಲಾಜೆ ಚಾಟಿ ಬೀಸಿದರು.

    ರಾಹುಲ್ ಟೆಂಪಲ್ ರನ್ ಮಾಡಲು ಹೊರಟಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ, ಸಿಎಂ ಗೆ ಕೂಡಾ ದೇವರು ಒಳ್ಳೆ ಬುದ್ಧಿ ಕೊಡಲಿ. ಕೆಟ್ಟಬುದ್ಧಿ ಸಿಎಂ ತಲೆಯಿಂದ ನಾಶ ಮಾಡಲಿ ಎಂದು ಹಾರೈಸಿದರು.

    ಸಿಎಂ ಮಠ ಮಂದಿರ ವಶಪಡಿಸಿಕೊಳ್ಳುವ ಹುನ್ನಾರ ಮಾಡಿದ್ದಾರೆ. ರಾಹುಲ್ ಗಾಂಧಿಯವರೇ ಇಷ್ಟು ದಿನ ನಿಮ್ಮ ಧ್ವನಿ ಎಲ್ಲಿ ಅಡಗಿತ್ತು? ಹಿಂದೂ ಯುವಕರ ಹತ್ಯೆಯಾದಾಗ ರಾಹುಲ್ ಗಾಂಧಿ ಮಾತಾಡಿಲ್ಲ. ಚುನಾವಣೆ ಹತ್ತಿರ ಬಂದಾಗ ಹಿಂದೂಗಳ ದೇವರು ನೆನಪಾದ್ರಾ ಅಂತ ಚಾಟಿ ಬೀಸಿದರು.

    ಬಿಜೆಪಿ ಕಾರ್ಯಕರ್ತ ಸಂತೋಷ್ ಬೆಂಗಳೂರಲ್ಲಿ ಕೊಲೆಯಾಗಿದ್ದರು. ಕೊಲೆಯಾದಾಗ ಪಕ್ಕದ ಮನೆಗೆ ಹೋಗಿ ಸಿಎಂ ಪಾರ್ಟಿ ಮಾಡಿದ್ದಾರೆ. ಖಾದರ್ ಮನೆಯಲ್ಲೇ ಮುಸ್ಲಿಂ ಧರ್ಮಗುರುಗಳ ಸಭೆಯಲ್ಲಿ ಸಿಎಂ ಚುನಾವಣೆ ಸಂದರ್ಭ ಬೆಂಬಲ ಕೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಾರ್ಪೋರೇಟರ್ ಪ್ರತಿಭಾ ಕುಳಾಯಿಗೆ ತಿರುಗೇಟು ನೀಡಿದ ಸಂಸದರು, ಸಂಘ ಪರಿವಾರ ಯಾವತ್ತೂ ದೇಶದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದೆ. ಸಂಘದ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಜನ ಪಾಠ ಕಲಿಸುತ್ತಾರೆ. ಲೋಕಸಭೆಯಲ್ಲಿ ಹಿಂದೆ 400 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಈಗ 40 ಕ್ಕೆ ಇಳಿಯಲು ಇದೇ ಕಾರಣ ಅಂತ ವಾಗ್ದಾಳಿ ನಡೆಸಿದರು.

    ನಾನು ಸಂಸದೆಯಾಗಿ ಆರಾಮವಾಗಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬರುವ ಆಲೋಚನೆ ಸದ್ಯಕ್ಕಿಲ್ಲ. ವಿದ್ಯಾರ್ಥಿಯಾಗಿ ದೆಹಲಿ ರಾಜಕಾರಣ ಕಲಿಯುತ್ತಿದ್ದೇನೆ. ಈಗ ನನಗೇನೂ ಅರ್ಜೆಂಟಿಲ್ಲ ಅಂತ ಶೋಭಾ ಕರಂದ್ಲಾಜೆ ಹೇಳಿದ್ರು.

  • ಅಂದು ಕಲ್ಲಡ್ಕ ಶಾಲೆ ಮಕ್ಕಳಿಗೆ ಬಿಸಿಯೂಟ ಕಟ್- ಈಗ ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರು ದೇಗುಲದ ಆಹಾರ, ಜನರ ಆಕ್ರೋಶ

    ಅಂದು ಕಲ್ಲಡ್ಕ ಶಾಲೆ ಮಕ್ಕಳಿಗೆ ಬಿಸಿಯೂಟ ಕಟ್- ಈಗ ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರು ದೇಗುಲದ ಆಹಾರ, ಜನರ ಆಕ್ರೋಶ

    ಉಡುಪಿ: ರಾಜ್ಯ ಸರ್ಕಾರ ಮತ್ತೊಮ್ಮೆ ಪೇಚಿಗೆ ಸಿಲುಕಿದೆ. ಅಂದು ಶ್ರೀರಾಮ ಶಾಲೆಯ ಮಕ್ಕಳಿಂದ ಊಟ ಕಿತ್ತುಕೊಂಡವರು ಕಾಂಗ್ರೆಸ್ಸಿಗರಿಗೆ ಊಟ ಹಾಕುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ ನಡೆಯುತ್ತಿದೆ. ರಾಜ್ಯ ಸರ್ಕಾರದ ಸಮಾವೇಶಕ್ಕೆ ಕೊಲ್ಲೂರಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಟೆಂಪೋ- ಲಾರಿಗಳಲ್ಲಿ ಊಟ ಸಾಗಾಟ ಮಾಡುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕೆಎಸ್‍ಆರ್‍ಟಿಸಿ ಅಧ್ಯಕ್ಷ ಗೋಪಾಲ ಪೂಜಾರಿ ಕ್ಷೇತ್ರ ಬೈಂದೂರಲ್ಲಿ ನಡೆಯಲಿರುವ ಸಮಾವೇಶದಲ್ಲಿ ಜನರಿಗೆ ಈ ಊಟದ ವ್ಯವಸ್ಥೆ ಮಾಡಲಾಗಿದೆ.

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಸುಮಾರು 15 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಒಂದು ರೂಪಾಯಿಯೂ ನೀಡಿಲ್ಲ. ಕಳೆದ ರಾತ್ರಿಯಿಂದ ಅಡುಗೆ ಕಾರ್ಯ ನಡೆದಿದೆ. ಅಕ್ಕಿ, ಬೇಳೆ, ತರಕಾರಿಗೆ ದೇವಸ್ಥಾನದ ದಿನಸಿ ಬಳಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶ್ರೀರಾಮಶಾಲೆಯ ಮಕ್ಕಳಿಂದ ಊಟ ಕಿತ್ತುಕೊಂಡಿದ್ದ ಸರ್ಕಾರ, ಈಗ ಕಾಂಗ್ರೆಸ್ ಕಾರ್ಯಕರ್ತರಿಗೇಕೆ ಊಟ ಕೊಡ್ತೀರಿ? ಎಂದು ಜನ ಪ್ರಶ್ನೆ ಮಾಡಿದ್ದಾರೆ. ವಾಟ್ಸಪ್- ಫೇಸ್ ಬುಕ್ ನಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ಇದನ್ನೂ ಓದಿ:  ಊಟ ಕಿತ್ಕೊಂಡ ಸರ್ಕಾರಕ್ಕೆ ಸೆಡ್ಡು – ತಾವೇ ಭತ್ತ ಬೆಳೆದ ಕಲ್ಲಡ್ಕ ಶಾಲೆ ಮಕ್ಕಳು

    https://www.youtube.com/watch?v=vZeRdh2Q-kE

     

  • ರೇಷನ್ ಕೊಡಲ್ಲ, ಸಾಲ ರಿನೀವಲ್ ಆಗಲ್ಲ- ಕಾಂಗ್ರೆಸ್ ಸಮಾವೇಶಕ್ಕೆ ಬರಲ್ಲ ಎಂದವರಿಗೆ ಬೆದರಿಕೆ

    ರೇಷನ್ ಕೊಡಲ್ಲ, ಸಾಲ ರಿನೀವಲ್ ಆಗಲ್ಲ- ಕಾಂಗ್ರೆಸ್ ಸಮಾವೇಶಕ್ಕೆ ಬರಲ್ಲ ಎಂದವರಿಗೆ ಬೆದರಿಕೆ

    ಕೊಪ್ಪಳ: ಸರ್ಕಾರದ ಸಮಾವೇಶಕ್ಕೆ ಜನರನ್ನು ಕರೆತರಲು ಕೈ ಪಾಳೆಯ ಕಸರತ್ತು ನಡೆಸಿದೆ. ಕಾಂಗ್ರೆಸ್ ಸಮಾವೇಶಕ್ಕೆ ಬರಲ್ಲ ಎಂದ ಜನರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.

    ಇಂದು ಕೊಪ್ಪಳದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ನಡೆಯುತ್ತಿದ್ದು, ಈ ಸಮಾವೇಶಕ್ಕೆ ಬರ್ಲಿಲ್ಲ ಅಂದ್ರೆ ರೇಷನ್ ಕೊಡಲ್ಲ, ಸಾಲ ರಿನೀವಲ್ ಆಗಲ್ಲ ಎಂದು ಬೆದರಿಕೆ ಹಾಕಲಾಗಿದೆ. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಒಟ್ಟು 1497 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಕೊಪ್ಪಳ ಜಿಲ್ಲಾಡಳಿತ ಭವನದ ಬಳಿಯ ಬೃಹತ್ ವೇದಿಕೆಯಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶ ದಲ್ಲಿ ಸಂಪುಟದ ಅರ್ಧಕ್ಕಿಂತಲೂ ಹೆಚ್ಚು ಸಚಿವರು ಭಾಗಿಯಾಗಲಿದ್ದಾರೆ

    ಸಮಾವೇಶಕ್ಕೆ 1 ಲಕ್ಷ ಜನರನ್ನು ಸೇರಿಸುವ ಉದ್ದೇಶದಿಂದ ಕಾರ್ಯಕರ್ತರು ಜನರಿಗೆ ಈ ಬೆದರಿಕೆಗಳನ್ನು ಹಾಕಿದ್ದಾರೆ ಎಂದು ಹೇಳಲಾಗಿದೆ. 1 ಸಾವಿರ ಸರ್ಕಾರಿ ಬಸ್‍ಗಳನ್ನ ಕಾಂಗ್ರೆಸ್ ಸಮಾವೇಶಕ್ಕಾಗಿ ಬಳಸಿಕೊಳ್ಳಲಾಗ್ತಿದೆ.