ಹಾವೇರಿ: ಕಾಂಗ್ರೆಸ್ (Congress) ಪಕ್ಷ ಬೆಳಗಾವಿಯಲ್ಲಿ ಆಯೋಜನೆ ಮಾಡಿದ್ದ ಗಾಂಧಿ ಭಾರತ ಸಮಾವೇಶದಲ್ಲಿ ಭಾಗಿಯಾಗಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನಿಗೆ ಕೆಪಿಸಿಸಿ ವತಿಯಿಂದ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಲಾಯಿತು.
ಮೃತರ ಕುಟುಂಬಸ್ಥರು ಪರಿಹಾರ ನೀಡುವಂತೆ ಶಾಸಕ ಪ್ರಕಾಶ್ ಕೋಳಿವಾಡಗೆ ಮನವಿ ಮಾಡಿದ್ದರು. ಶಾಸಕ ಪ್ರಕಾಶ್ ಕೋಳಿವಾಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದು 5 ಲಕ್ಷ ರೂ. ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದರು. ಇದನ್ನೂ ಓದಿ: ಚಾಮರಾಜನಗರ| ಊರೊಳಗೆ ನುಗ್ಗಿದ ಚಿರತೆಗೆ ಕರು ಬಲಿ – ಜನರಲ್ಲಿ ಆತಂಕ
ಯಾದಗಿರಿ: ಸಿದ್ದರಾಮಯ್ಯ (CM Siddaramaiah) ಅವರ ಸಿಎಂ ಅವಧಿ ಮುಗಿದಿದೆ ಅಧಿಕಾರ ಬಿಟ್ಟು ಕೊಡಿ ಎಂದು ಡಿಕೆ ಶಿವಕುಮಾರ್ ಅವರು ತೊಡೆ ತಟ್ಟಿ ಹೊರಟ್ಟಿದ್ದಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಎಂದು ಹೇಳಿದರು.
ಯಾದಗಿರಿ (Yadagiri) ಜಿಲ್ಲೆಯ ಶಹಾಪುರದಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಪಕ್ಷದಲ್ಲಿ ಬಡಿಗೆ ಹಿಡಿದುಕೊಂಡು ಹೊಡೆದಾಡಿಕೊಳ್ಳುತ್ತಾರೆ. ಹಿರಿಯ ನಾಯಕರು ಒಳಗೊಂಡಂತೆ ಶಾಸಕರುಗಳು ಬಡಿಗೆ ತೆಗೆದುಕೊಂಡು ರಸ್ತೆಯಲ್ಲಿ ಹೊಡೆದಾಟಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿ ಈಗ ನಿರ್ಮಾಣ ಆಗಿದೆ. ಮುಖ್ಯಮಂತ್ರಿ ಅವರು ತಮ್ಮ ಸ್ಥಾನ ತ್ಯಜಿಸಸಬೇಕು. ತಾನು ಮುಖ್ಯಮಂತ್ರಿ ಆಗಬೇಕೆಂದು ಡಿಕೆ ಶಿವಕುಮಾರ್ (DK Shivakumar) ಹೋರಾಟ ಪ್ರಾರಂಭ ಮಾಡಿದ್ದಾರೆ. ಬರುವ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗುತ್ತದೆ ಉಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.ಇದನ್ನೂ ಓದಿ: 20 ಓವರ್‌ಗಳಲ್ಲಿ 37 ಸಿಕ್ಸರ್, 349 ರನ್ – ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ
ಹಾಸನ (Hassan) ಕಾಂಗ್ರೆಸ್ ಸಮಾವೇಶದ (Congress Convention) ಬಗ್ಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಮಾವೇಶ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಬದಿಗಿಟ್ಟು ಶಕ್ತಿ ಪ್ರದರ್ಶನ ಮಾಡಲು ಹೊರಟಿದ್ದಾರೆ. ಡಿಕೆಶಿ ಅವರು ಕೋಟೆಗೆ ನುಗ್ಗಿ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ನೋಡಿ, ಸಿದ್ದರಾಮಯ್ಯ ಸಿಎಂ ಅವಧಿ ಮುಗಿದಿದೆ ಅಧಿಕಾರ ಬಿಟ್ಟು ಕೊಡಿ ಎಂದು ಡಿಕೆಶಿವಕುಮಾರ್ ಅವರು ತೊಡೆ ತಟ್ಟಿಕೊಂಡು ಹೊರಟ್ಟಿದ್ದಾರೆ ಎಂದರು.
ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಪವರ್ ಪಾಲಿಟಿಕ್ಸ್ ಅಸಮಾಧಾನ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಬಹಳ ದೊಡ್ಡ ಮಟ್ಟದ ಅಸಮಾಧಾನ ಸ್ಫೋಟ ಆಗುತ್ತದೆ. ವಿಜಯೇಂದ್ರ ಅವರು ಹೇಳಿದ್ರೆ ಯಾರು ನಂಬುತ್ತಿಲ್ಲ, ಕಾಂಗ್ರೆಸ್‌ನಲ್ಲಿ ಈಗಾಗಲೇ ಕಚ್ಚಾಟ ಶುರುವಾಗಿದೆ. ಯಾವ ರೀತಿ ಬಡಿದಾಡಿಕೊಳ್ಳುತ್ತಾರೆ ನೋಡಬೇಕಿದೆ. ರಾಜ್ಯದ ರೈತರನ್ನು ವಕ್ಫ್ ಮೂಲಕ ಸಿದ್ದರಾಮಯ್ಯ ರೈತರನ್ನು ಬೀದಿಗೆ ತಂದಿದ್ದಾರೆ. ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ್ದಾರೆ. ರೈತರ ತೊಗರಿ ಬೆಳೆ ಹಾನಿಗೆ ಪರಿಹಾರ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ, ಒಂದು ರೂಪಾಯಿ ಪರಿಹಾರವನ್ನು ಈ ಸರ್ಕಾರ ಕೊಟ್ಟಿಲ್ಲ, ರೈತರು ಈಗ ಪರದಾಡುತ್ತಿದ್ದಾರೆ ಎಂದು ತಿಳಿಸಿದರು.
ನವದೆಹಲಿ: ಕಳೆದ ಐವತ್ತು ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್‌ನವರ ಕೊಡುಗೆ ಏನು? ದೇವೇಗೌಡರು ಇಲ್ಲ ಅಂದಿದ್ದರೆ ಹಾಸನ (Hassan) ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ಹೊಳೆನರಸೀಪುರದ ಶಾಸಕ ಹೆಚ್.ಡಿ ರೇವಣ್ಣ (HD Revanna) ಹೇಳಿದರು.
ರಾಜಧಾನಿ ದೆಹಲಿಯಲ್ಲಿ `ಪಬ್ಲಿಕ್ ಟಿವಿ’ಯೊಂದಿಗೆ ಹಾಸನದ ಕಾಂಗ್ರೆಸ್ (Congress) ಸಮಾವೇಶ ವಿಚಾರವಾಗಿ ಮಾತನಾಡಿದ ಅವರು, ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ, ಶಕ್ತಿ ಪ್ರದರ್ಶನ ನಡೆಯುತ್ತಿದೆ. ಕಳೆದ ಐವತ್ತು ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್‌ನವರ ಕೊಡುಗೆ ಏನು? ಕಾಂಗ್ರೆಸ್‌ನಿಂದ ಹಾಸನ ನಗರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ದೇವೇಗೌಡರು ಇಲ್ಲ ಅಂದಿದ್ದರೆ ಹಾಸನ, ಅರಸೀಕೆರೆ ರೈಲು ಮಾರ್ಗ ಇರುತ್ತಿರಲಿಲ್ಲ, ಹಾಸನ ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿ ಬಂಧನ
ಈಗ ಏನು ಮಾತನಾಡಲ್ಲ 2028ಕ್ಕೆ ಮಾತನಾಡುತ್ತೇನೆ. ಇಂತಹ ಹತ್ತು ಸಮಾವೇಶ ಮಾಡಲಿ, ನಮಗೇನು ಪರಿಣಾಮ ಬೀರಲ್ಲ. ಜನರ ದೇವರ ಆಶೀರ್ವಾದ ಇದೆ. ಜೆಡಿಎಸ್ (JDS) ಕಂಡರೆ ಕಾಂಗ್ರೆಸ್‌ನವರು ಭಯ ಪಡುತ್ತಾರೆ. 2018ರಲ್ಲಿ ಯಾರು ಬಂದು ಕಾಲು ಕಟ್ಟಿದ್ದರೋ? ಹದಿನಾಲ್ಕು ತಿಂಗಳು ಆದಮೇಲೆ ಸರ್ಕಾರ ಯಾರು ತೆಗೆದರು? ಹಾಸನದಲ್ಲಿ ಲೋಕಸಭೆ ಚುನಾವಣೆ ಹೇಗಾಯಿತು? ಕಡೆಯ ಮೂರು ದಿನದಲ್ಲಿ ಏನಾಯಿತು? 2028 ರಣರಂಗದಲ್ಲಿ ಎಲ್ಲವೂ ಗೊತ್ತಾಗುತ್ತದೆ. ಸಮಯ ಬಂದಾಗ ಮಾತನಾಡುತ್ತೀನಿ ಎಂದು ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ (Channapatna) ರಾಷ್ಟ್ರೀಯ ಪಕ್ಷಕ್ಕೆ ಅಭ್ಯರ್ಥಿ ಇರಲಿಲ್ಲ ಬಿಜೆಪಿಯಿಂದ ಕರೆ ತಂದರು. ಜೆಡಿಎಸ್, ದೇವೇಗೌಡರನ್ನು ಮುಗಿಸಲು ಯಾರಿಂದಲು ಸಾಧ್ಯವಿಲ್ಲ. ಸಮಾವೇಶದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಹೆದರಲ್ಲ. ಆರು ಬಾರಿ ಶಾಸಕನಾಗಿ ನಾನು ಇಂತಹದ್ದನ್ನು ಬಹಳ ನೋಡಿದ್ದೇನೆ. ಇದಕ್ಕೆಲ್ಲಾ ಹೆದರಿ ಓಡುವ ಮಾತೇ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಹಾಯುತಿ 2.0 ಸರ್ಕಾರ – ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಇಂದು ಪ್ರಮಾಣವಚನ
ಮೈಸೂರು: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಇಂದು ಕೆ.ಆರ್. ನಗರ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತಾ ಸಿಎಂ, ಸಾಲಮನ್ನಾ ಅಸ್ತ್ರ ಪ್ರಯೋಗ ಮಾಡಿದರು. ನಾನು ಮಾಡಿದ ಕೆಲಸದ ಬಗ್ಗೆ ವರದಿ ಕೊಡೋಕೆ ಸಿದ್ಧ ಇದ್ದೇನೆ. ಬಿಜೆಪಿ (BJP) ಅವರು ಮಾಡಿದ ಕೆಲಸದ ಬಗ್ಗೆ ವರದಿ ಕೊಡುತ್ತಾರಾ?. ಕುಮಾರಸ್ವಾಮಿ (HD KUmaraswamy) ಎರಡು ಬಾರಿ ಸಿಎಂ ಆಗಿದ್ರಿ? ರೈತರ ಸಾಲ ಮನ್ನಾ ಮಾಡಿದ್ರಾ?. ಜೆಡಿಎಸ್ ಬಿಜೆಪಿ ‘ಬಿ’ ಟೀಂ ಅಂತಾ ನಾನು ಹೇಳಿದ್ದಾಗ ದೇವೇಗೌಡರು ಕೆಂಡಾಮಂಡಲಾಗಿದ್ದರು. ಈಗ ಏನ್ ಹೇಳುತ್ತೀರಿ ದೇವೇಗೌಡರೇ ಎಂದು ಪ್ರಶ್ನಿಸಿದರು.
ಮೋದಿ ಯಾವ ಮುಖ ಹೊತ್ತುಕೊಂಡು ಮತ ಕೇಳುತ್ತಿದ್ದಾರೆ. ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ. ಕೊಟ್ಟ ಯಾವ ಭರವಸೆಗಳನ್ನು ಮೋದಿ (Narendra Modi) ಈಡೇರಿಸಿಲ್ಲ. ಉದ್ಯೋಗ ಕೇಳಿದರೆ ಪಕೋಡ ಮಾರಿ ಎಂದ ಮೋದಿ ಈ ದೇಶದ ಪ್ರಧಾನ ಮಂತ್ರಿ ಆಗೋಕೆ ಲಾಯಕ್ ಇದ್ದಾರಾ ಎಂದು ಸಿಎಂ ಪ್ರಶ್ನಿಸಿದರು.
ಮೋದಿ ಅವರನ್ನು ದೇವೇಗೌಡರು ಹೊಗಳಿದ್ದೇ ಹೊಗಳಿದ್ದು. ನಾನು ಸತ್ಯ ಹೇಳಿದ್ರೆ ಸಿದ್ದರಾಮಯ್ಯಗೆ (Siddaramaiah) ಗರ್ವ ಬಂದಿದೆ. ಗರ್ವಭಂಗ ಮಾಡಿ ಅಂತಾ ದೇವೇಗೌಡರು ಹೇಳುತ್ತಾರೆ. ಕೋಲಾರ ಮೀಸಲು ಕ್ಷೇತ್ರ ಆಗದೇ ಇದ್ದರೆ ಅಲ್ಲೂ ದೇವೇಗೌಡರ ಮನೆಯವರೇ ನಿಲ್ಲುತ್ತಿದ್ದರು. ಕುಟುಂಬದ ರಕ್ಷಣೆಗಾಗಿ ದೇವೇಗೌಡರು ಬಿಜೆಪಿ ಜೊತೆ ಸೇರಿದ್ದಾರೆ. ಚುನಾವಣೆ ಮುಗಿದ ಕೂಡಲೇ ನಮ್ಮ ಸರ್ಕಾರ ಪತನ ಆಗುತ್ತೆ ಅಂತಾರೆ. ಸರ್ಕಾರ ಪತನ ಹೇಗೆ ಮಾಡುತ್ತೀರಿ? ಚುನಾವಣೆ ಆದ ಮರುದಿನವೇ ಸರ್ಕಾರ ಹೇಗೆ ಬೀಳುತ್ತೆ ಹೇಳಿ? ಎಂದರು. ಇದನ್ನೂ ಓದಿ: ಹೆಣ್ಣುಮಕ್ಕಳ ಬ್ಯಾಗ್‍ನಲ್ಲಿ ಸರ್ಕಾರ ಎಕೆ-47 ಗನ್ ಇಡಬೇಕು: ವೀರೇಶ್ವರ ಸ್ವಾಮೀಜಿ
ಐದು ವರ್ಷವೂ ಈ ಸರ್ಕಾರ ಇರುತ್ತೆ. ಮುಂದಿನ ಚುನಾವಣೆಯಲ್ಲೂ ನಮ್ಮದೆ ಸರ್ಕಾರ ಬರುತ್ತದೆ. ಹಗಲು ಕನಸು ಕಾಣುತ್ತಿದ್ದಿರಿ. ಇವರು ಹೇಳಿದ ತಕ್ಷಣ ಸರ್ಕಾರ ಬೀಳುತ್ತಾ? ನಾನು ಎರಡು ಬಾರಿ ಸಿಎಂ ಆಗಿದ್ದಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಹೊಟ್ಟೆ ಉರಿ. ದೇವೇಗೌಡರು ಮಾತ್ರ ಅಧಿಕಾರದಲ್ಲಿ ಇರಬೇಕು. ಬೇರೆ ಯಾರೂ ಅಧಿಕಾರದಲ್ಲಿ ಇರಬಾರದು ಅನ್ನೋದು ದೇವೇಗೌಡರ ನೀತಿ. ನಾನು ಕುರುಬ ಅದಕ್ಕೆ ದ್ವೇಷ ಮಾಡುತ್ತಾರೆ. ಅವರು ಒಕ್ಕಲಿಗರನ್ನೂ ದ್ವೇಷ ಮಾಡುತ್ತಾರೆ. ಚೆಲುವರಾಯಸ್ವಾಮಿ, ಡಿ.ಕೆ. ಶಿವಕುಮಾರ್ ಮೇಲೆ ದ್ವೇಷ ಸಾಧಿಸುತ್ತಿಲ್ವಾ? ದೇವೇಗೌಡ ಮತ್ತು ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುವುದರಲ್ಲಿ ನಿಸ್ಸಿಮರು. ದೇವೇಗೌಡರ, ಕುಮಾರಸ್ವಾಮಿ ಮಾತ್ರ ಸಾಚಾರು. ನಾವೆಲ್ಲರು ಕಳ್ಳರಾ ಎಂದು ಸಿಎಂ ಪ್ರಶ್ನಿಸಿದರು.
ಕಲಬುರಗಿ: ನಾಟಕ ಮಾಡುವುದರಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರಿಗಿಂತ ಪ್ರಧಾನಿ ನರೇಂದ್ರ ಮೋದಿ ದೊಡ್ಡ ನಾಟಕಗಾರ ಎಂದು ಚಿಂಚೋಳಿಯ ಐನೊಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಚಿಂಚೋಳಿಯ ಐನೊಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತ ಸಿದ್ದರಾಮಯ್ಯ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಸುಳ್ಳು ಹೇಳುವುದರಲ್ಲಿ, ನಾಟಕ ಮಾಡುವುದರಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರನ್ನು ಮೋದಿ ಮೀರಿಸುತ್ತಾರೆ. ಮೋದಿ ಹೇಳುವುದೆಲ್ಲಾ ಬಂಡಲ್, ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಣ ಜಮೆ ಮಾಡುತ್ತೇನೆ. ವಿದೇಶದಲ್ಲಿರುವ ಕಪ್ಪು ಹಣ ವಾಪಾಸ್ ತರುತ್ತೇನೆ ಎಂದು ಮೋದಿ ಹೇಳಿದ್ದರು. ಐದು ವರ್ಷದಲ್ಲಿ ಒಂದೇ ಒಂದು ರೂಪಾಯಿ ಕೂಡ ಕೊಟ್ಟಿಲ್ಲವಲ್ಲ, ಮೋದಿ ಮನೆ ಹಾಳಾಗ ಎಂದು ಕಿಡಿಕಾರಿದರು.
ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಸಿಕ್ಕಿದ್ದರೆ ಅದು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮಾತ್ರ. ಅಂಬೇಡ್ಕರ್ ಪ್ರತಿಮೆಗಳನ್ನ ಧ್ವಂಸ ಮಾಡಬೇಕು, ಸಂವಿಧಾನವನ್ನು ಸುಟ್ಟು ಹಾಕಬೇಕು ಎಂದು ತೇಜಸ್ವಿ ಸೂರ್ಯ ಹೇಳುತ್ತಾನೆ. ಅದಕ್ಕೆ ಅವನಿಗೆ ತೇಜಸ್ವಿ ಸೂರ್ಯ ಅಂತ ಕರೆಯಬಾರದು ಅಮವಾಸೆ ಸೂರ್ಯ ಅಂತ ಕರೆಯಬೇಕು ಎಂದು ಮತ್ತೊಮ್ಮೆ ಬಿಜೆಪಿ ಯುವ ಮೋರ್ಚಾದ ನಾಯಕ ತೇಜಸ್ವಿ ಸೂರ್ಯ ಅವರನ್ನು ಲೇವಡಿ ಮಾಡಿದರು.
ಬಳ್ಳಾರಿ: ಬಿಜೆಪಿ ಅಭ್ಯರ್ಥಿಯಾಗಿರುವ ಜಾರಕಿಹೊಳಿ ಬೀಗರಾದ ದೇವೇಂದ್ರಪ್ಪ ಹಾಗೂ ಅವರ ಪುತ್ರ ಅಬಕಾರಿ ಆಯುಕ್ತ ಮಂಜುನಾಥರಿಗೆ ಸಚಿವ ಡಿ.ಕೆ ಶಿವಕುಮಾರ್ ನೇರವಾಗಿ ವಾರ್ನಿಂಗ್ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಯಾರ‌್ಯಾರೂ ಲಿಕ್ಕರ್ ಶಾಪ್ ಗಳ ಮಾಲೀಕರ ಬಳಿ ಹಫ್ತಾ ವಸೂಲಿ ಮಾಡುತ್ತಿದ್ದಾ ಎಂದು ನನಗೆ ಗೊತ್ತಿದೆ. ನಮ್ಮದೇನಿದ್ದರೂ ಅಭಿವೃದ್ಧಿ, ಹಫ್ತಾ ವಸೂಲಿ ರೋಲ್‍ಕಾಲ್ ಎಲ್ಲಾ ಬಂದ್. ಲಿಕ್ಕರ್ ಶಾಪಗಳ ಮಾಲೀಕರಿಗೆ ಹಣ ಕೊಡುವಂತೆ ಫೋನ್ ಬರುತ್ತಿರುವುದು ನನಗೆ ಗೊತ್ತಿದೆ. ಹಾಗೊಂದು ವೇಳೆ ಹಫ್ತಾ ವಸೂಲಿ ಮಾಡಿದರೆ ಸರಿಯಿರಲ್ಲ ಎಂದು ಡಿಕೆ ಶಿವಕುಮಾರ್ ಪರೋಕ್ಷವಾಗಿ ಜಾರಕಿಹೊಳಿ ಬೀಗರಾದ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಪುತ್ರನಿಗೆ ಎಚ್ಚರಿಕೆ ನೀಡಿದ್ದಾರೆ.
ದೇವೇಂದ್ರಪ್ಪ ಬೇಕಾದರೆ ಲೋಡ್ ಗಟ್ಟಲೇ ತುಂಬಿಕೊಂಡು ಬರಲಿ. ನಾವೂ ಚುನಾವಣೆ ಮಾಡೋಣ, ದೇವೇಂದ್ರಪ್ಪ ಅನ್ನೋ ಮೀನು ಶ್ರೀರಾಮುಲು ಅವರ ಗಾಳಕ್ಕೆ ಬಿದ್ದಿದೆ. ಆದರೆ ನಾವೂ ಯಾರಿಂದಲೂ ಹಫ್ತಾ ವಸೂಲಿ ಮಾಡಲು ಬಿಡುವುದಿಲ್ಲ ಎಂದರು. ಸಮಾವೇಶದಲ್ಲಿ ಸಚಿವ ಪರಮೇಶ್ವರ ನಾಯ್ಕ್, ತುಕಾರಾಂ ಸೇರಿದಂತೆ ಹಲವು ಕಾಂಗ್ರೆಸ್ ಜೆಡಿಎಸ್ ನಾಯಕರು ಭಾಗಿಯಾಗಿದ್ದರು.
ಕೋಲ್ಕತ್ತಾ: ಇಂದು ಮಾಲ್ಡಾದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ಜನರಿಗೆ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆಯಿಲ್ಲದ ಕಾರಣ ಜನರು ರೊಚ್ಚಿಗೆದ್ದು, ಖುರ್ಚಿಗಾಗಿ ಬಡಿದಾಡಿಕೊಂಡ ದೃಶ್ಯ ಕಂಡುಬಂದಿದೆ.
ಸುಡುಬಿಸಿಲಿನಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಬಂದ ಜನರಿಗೆ ಸರಿಯಾಗಿ ಆಸನದ ವ್ಯವಸ್ಥೆ ಮಾಡಿರಲಿಲ್ಲ. ಆದರಿಂದ ಜನರಿಗೆ ಕುಳಿತುಕೊಳ್ಳಲು ಗೊಂದಲ ಸೃಷ್ಠಿಯಾಗಿದೆ. ಈ ವೇಳೆ ಕೆಲ ಕಾರ್ಯಕರ್ತರು ಸ್ಥಳೀಯ ನಾಯಕರು ಬಂದ ಕಾರಣಕ್ಕೆ, ಜನರು ಕೂತಿದ್ದ ಸ್ಥಳದಿಂದ ಆಸನಗಳನ್ನು ಸರಿಸಿ ಅವರಿಗೆ ಹೋಗಲು ದಾರಿ ಮಾಡಿದ್ದಾರೆ. ಆದರಿಂದ ಮೊದಲೇ ಕೂರಲು ಜಾಗವಿಲ್ಲದೆ ಗೊಂದಲದಲ್ಲಿದ್ದ ಜನರು ಪರಸ್ಥರ ಆಸನಕ್ಕಾಗಿ ಕಿತ್ತಾಡಲು ಶುರು ಮಾಡಿದ್ದಾರೆ.
ಅಲ್ಲದೇ ಕಾರ್ಯಕ್ರಮ ಆಯೋಜಕರು ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಜನರು ಘೋಷಣೆಗಳನ್ನು ಕೂಗಿದ್ದಾರೆ. ಹಾಗೆಯೇ ಸರಿಯಾಗಿ ಕಾರ್ಯಕ್ರಮಕ್ಕೆ ಬರುವ ಜನರಿಗೆ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಖುರ್ಚಿಗಳನ್ನು ವಿಐಪಿಗಳಿಗೆ ಕೂರಲು ವ್ಯವಸ್ಥೆ ಮಾಡಿದ್ದ ಆಸನಗಳ ಮೇಲೆ ಎಸೆದು, ಖುರ್ಚಿಗಳನ್ನು ಮುರಿದು ಆಕ್ರೋಶ ಹೊರಹಾಕಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರಿಂದಲೂ ಜನರನ್ನು ತಡೆಯಲು ಸಾಧ್ಯವಾಗಿಲ್ಲ. ಬಳಿಕ ಜನರ ಮನವೋಲಿಸಿ ಪರಿಸ್ಥಿತಿಯನ್ನು ಸ್ಥಳೀಯ ನಾಯಕರು ಹಾಗೂ ಪೊಲೀಸರು ಜೊತೆಗೂಡಿ ನಿಯಂತ್ರಿಸಿದರು. ಈ ಘಟನೆ ನಡೆದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಸ್ಥಳದಲ್ಲಿ ಉಪಸ್ಥಿತರಿರಲಿಲ್ಲ.
ಚಾಮರಾಜನಗರ: “ಏ ಕೂತ್ಕೋ, ನಾವು ಕೂಡ ಊಟ ಮಾಡಿಲ್ಲ. ಏ ಪಂಚೆ ಎಲ್ಲಿಗೆ ಹೋಗ್ತಾ ಇದ್ಯಾ” ಎಂದು ಸಮಾವೇಶದಿಂದ ಎದ್ದು ಹೊಗುತ್ತಿದ್ದವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಗದರಿದ್ದಾರೆ.
ಕಾಂಗ್ರೆಸ್ ಪರಿವರ್ತನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಜನರು ಸಮಾವೇಶದಿಂದ ಎದ್ದು ಹೋಗುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ “ಏ ಕೂತ್ಕೋ, ನಾವು ಕೂಡ ಊಟ ಮಾಡಿಲ್ಲ. ಏ ಪಂಚೆ ಎಲ್ಲಿಗೆ ಹೋಗ್ತಾ ಇದ್ಯಾ ಕೂತ್ಕೋ. ಮುಗಿತು ಕೂತ್ಕೋ” ಎಂದು ಗದರಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, “ರಾಮ ಮಂದಿರ ಕಟ್ಟುವುದಕ್ಕೆ ನನ್ನ ವಿರೋಧವಿಲ್ಲ. ನನ್ನ ಹೆಸರಲ್ಲೂ ಕೂಡ ರಾಮ ಇದೆ. ಸಿದ್ದ – ರಾಮ ಸಿದ್ದರಾಮಯ್ಯ. ಸಿದ್ದ ಅಂದರೆ ರೆಡಿ ಅಂತಾ, ನಾನು ಯಾಕೆ ವಿರೋಧ ಮಾಡಲಿ. ಇವರು ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರ ಕಟ್ಟಲು ಹೋಗಿ 27 ವರ್ಷ ಆಯ್ತು. ಇನ್ನೂ ಯಾಕೆ ಇವರು ರಾಮ ಮಂದಿರ ಕಟ್ಟಿಲ್ಲ. ಚುನಾವಣೆ ಬಂದಾಗ ಮಾತ್ರ ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಾರೆ. ಇಟ್ಟಿಗೆ ದುಡ್ಡು ಎಲ್ಲವನ್ನೂ ತಗೊಂಡು ರಾಮ ಮಂದಿರ ಕಟ್ಟುತ್ತೇವೆ ಎಂದು ಹೋಗಿದ್ದರು. ಬಳಿಕ ಇಟ್ಟಿಗೆನಾ ರಸ್ತೆಗೆ ಎಸೆದು ದುಡ್ಡನ್ನು ಜೇಬಿಗೆ ಹಾಕೊಂಡು ಹೋದ್ರು. ಜನರಿಂದ ಸಂಗ್ರಹ ಮಾಡಿದ ದುಡ್ಡಿನ ಲೆಕ್ಕಾ ಎಲ್ಲಿ” ಎಂದು ಸಿದ್ದರಾಮಯ್ಯ ಪ್ರಶ್ನಿಸದರು.
ತಮ್ಮ ಭಾಷಣದ ಉದ್ದಕ್ಕೂ ಮೋದಿ ಅವರನ್ನು ಸಿದ್ದರಾಮಯ್ಯ ಅನುಕರಣೆ ಮಾಡಿದ್ದು ವಿಶೇಷವಾಗಿತ್ತು. ಡಿಸೆಂಬರ್ 30, 2009ರಲ್ಲಿ ವಿಧಾನಸಭೆಯಲ್ಲಿ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಮಿಸ್ಟರ್ ಯಡಿಯೂರಪ್ಪ ಸಾಲಮನ್ನಾ ಮಾಡಿ ಎಂದು ಹೇಳೋದಕ್ಕೆ ನಿಮಗೆ ಯಾವ ನೈತಿಕತೆ ಇದೆ? ಸಮ್ಮಿಶ್ರ ಸರ್ಕಾರದಿಂದ 36 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡುತ್ತಿದ್ದೇವೆ. ರೈತರಿಗೆ ನೀವೇನು ಮಾಡಿದ್ದೀರಿ ಮೋದಿಯವರೇ? ಸಿಲಿಂಡರ್ ಗ್ಯಾಸ್ ಬೆಲೆ 450 ರೂ. ಯಿಂದ 1 ಸಾವಿರಕ್ಕೆ ಏರಿಕೆಯಾಗಿದ್ದೆ ಅಚ್ಚೇದಿನ್ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ. ಆದರೆ ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆಯಾಗಲಿಲ್ಲ. ಲಕ್ಷಾಂತರ ಕೋಟಿ ಉಳಿತಾಯವಾಗಿದೆ. ಎಲ್ಲಿ ಹೋಯ್ತು ಈ ಹಣ ರಾಷ್ಟ್ರದ ಜನತೆಗೆ ಲೆಕ್ಕ ಕೊಡಿ ಮೋದಿಯವರೇ. ಪ್ರತಿಯೊಬ್ಬರ ಅಕೌಂಟ್‍ಗೆ 15 ಲಕ್ಷ ಹಣ ಹಾಕ್ತೀವಿ ಎಂದು ಹೇಳಿದ್ರಿ. ಆದರೆ 15 ಲಕ್ಷ ಇರಲಿ 15 ಪೈಸೆನೂ ಹಾಕಲಿಲ್ಲ. ನಿಮಗೆ ಯಾರೋಬ್ಬರಿಗೆ 15 ರೂ. ಬಂದಿದ್ದರೆ ನಾನು ಮೋದಿ ಬಗ್ಗ ಟೀಕೆ ಮಾಡುವುದನ್ನು ಬಿಡುತ್ತೇನೆ ಎಂದ ಅವರು ಪಾಕಿಸ್ತಾನದ ವಿರುದ್ಧ ಕಾಂಗ್ರೆಸ್ ಅವಧಿಯಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವು. ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿದ್ದೇವು. ಆದರೆ ಈಗ ಪದೇ ಪದೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೇಳುವ ಮೂಲಕ ರಾಜಕೀಯ ಲಾಭ ಪಡೆಯಲು ಹೊರಟ್ಟಿದ್ದಾರೆ ಎಂದು ದೂರಿದರು.
"Mr. @BSYBJP, you talk about loan waivers. I want to know what have you or your government done for any loan waiver? The Congress under me has given Rs 8,165 crore as farm loan waivers alone": Shri. @siddaramaiah#ParivartanaYatrapic.twitter.com/vNRw9HgWqz
ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋದರೆ ಅವರು ಅಂಬೇಡ್ಕರ್ ವಿರೋಧಿಗಳು. ಏಕೆಂದರೆ ಬಿಜೆಪಿಗೆ ಮತ ಹಾಕಿದರೆ ನಾವೇ ಆತ್ಮಹತ್ಯೆ ಮಾಡಿಕೊಂಡಂತೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿಗೆ ಒಂದೇ ಒಂದು ಮತ ಕೊಡಬಾರದು. ಪರ ಧರ್ಮ ಸಹಿಷ್ಣುತೆ, ಸಹಬಾಳ್ವೆ ನಮ್ಮ ಮಂತ್ರ ಆಗಬೇಕು. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ಕಳೆದ ಬಾರಿ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಸಿದ್ದರಾಮಯ್ಯ ಹಿಂದೂ ವಿರೋಧಿ, ಮುಸ್ಲಿಮರ ಪರ ಎಂದರು. ಆದರೆ ನಾನು ಬಡವರ ಪರ ಇರುವುದು ನಿಜ, ಮುಸ್ಲಿಂರ ಪರ ಇರುವುದು ನಿಜ. ದಲಿತರ ಪರ ಇರುವುದು ನಿಜ, ಹಿಂದುಳಿದವರ ಪರ ಇರುವುದು ನಿಜ. ನಾನು ಎಲ್ಲ ಜಾತಿಯವರ ಪರ ಇದ್ದೇನೆ. ಅಕ್ಕಿ ಕೊಟ್ಟಿದ್ದು, ಹಾಲಿಗೆ ಸಬ್ಸಿಡಿ ನೀಡಿದ್ದು, ಇಂದಿರಾ ಕ್ಯಾಂಟೀನ್ ಮಾಡಿದ್ದು, ಸಾಲಮನ್ನಾ ಮಾಡಿದ್ದು ಎಲ್ಲ ವರ್ಗದವರಿಗಾಗಿ. ಯಡಿಯೂರಪ್ಪ ಅವರ ಅವಧಿಯಲ್ಲಿ ಏನು ಮಾಡಿದರು? ಜೈಲಿಗೆ ಹೋಗಿದ್ದನ್ನು ಬಿಟ್ಟರೆ ಬೇರೇನು ಮಾಡಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಅವರು ಚೌಕಿದಾರ ಆಗಿ ಉಳಿದಿಲ್ಲ, ಇವತ್ತು ಅವರು ಚೋರ್ ಆಗಿದ್ದಾರೆ. ಚೋರ್ ಚೌಕಿದಾರರನ್ನು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಚಿವ ಎಚ್.ಕೆ ಪಾಟೀಲ್ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗಿತ್ತು. ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಅಂತ್ಯ ಸಂಸ್ಕಾರ ಮುಗಿದಿಲ್ಲ, ಆಗಲೇ ಚುನಾವಣಾ ಪ್ರಚಾರ ಮಾಡಿದ್ದಾರೆ. ಯೋಧರನ್ನ ಹೆಲಿಕಾಪ್ಟರ್ ಮೂಲಕ ಈಗ ಕಳುಹಿಸುವ ವ್ಯವಸ್ಥೆ ಮಾಡ್ತಿದ್ದಿರಲ್ಲ. ಈ ಮುಂಚೆ ಉಗ್ರರ ಬಗ್ಗೆ ಗುಪ್ತಚರ ಮಾಹಿತಿ ಇದ್ದರು ಯಾಕೆ ಗಮನ ಹರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಐದು ವರ್ಷದ ಕಡಿಮೆ ಅವಧಿಯಲ್ಲಿ ಎಷ್ಟು ಜನ ಯೋಧರನ್ನ ಕಳೆದುಕೊಂಡಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾವು ಯುದ್ಧ ಗೆದ್ದಿದ್ದೇವೆ. 1962ರಲ್ಲಿ ಯುದ್ಧ ಗೆದ್ದಿದ್ದೇವೆ. ಆಗ ನಾವು ಯುದ್ಧ ಗೆದ್ದಿದ್ದೇವೆ ನಮಗೆ ಮತ ಹಾಕಿ ಅಂತ ಯಾವಾಗಾದರೂ ಕೇಳಿದ್ದೇವಾ? ಎಂದು ಬಿಜೆಪಿಗೆ ಪ್ರಶ್ನೆ ಮಾಡಿ ಎಚ್.ಕೆ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಚಿಕ್ಕಬಳ್ಳಾಪುರ: ಕನಕ ಜಯಂತಿ, ಕನಕ ಭವನಕ್ಕೆ ಗುದ್ದಲಿ ಪೂಜೆ ಹಾಗೂ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಧೂಳು ತಾಗದೇ ಇರಲು ರಸ್ತೆಗಳಿಗೆಲ್ಲಾ ನೀರು ಹರಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸರಿ ಸುಮಾರು ಒಂದು ಕಿಲೋಮೀಟರ್ ಪ್ರಮುಖ ರಸ್ತೆ ಸೇರಿದಂತೆ ಸಿದ್ದರಾಮಯ್ಯ ಸಂಚರಿಸುವ ರಸ್ತೆಗಳಿಗೆಲ್ಲ ಟ್ಯಾಂಕರ್ ಮೂಲಕ ನೀರು ಚುಮುಕಿಸಲಾಗಿದೆ.
ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹಾಗೂ ಬಹುಮುಖ್ಯವಾಗಿ ಗೌರಿಬಿದನೂರು ಪಟ್ಟಣದಲ್ಲೇ ನೀರಿಗೆ ಸಾಕಷ್ಟು ಹಾಹಾಕಾರವಿದೆ. ವಾರ ಕಳೆದರೂ ಕೆಲ ವಾರ್ಡ್ ಗಳಿಗೆ ನೀರು ಬರುವುದಿಲ್ಲ. ಇಂತಹ ಕಡು ಕಷ್ಟ ಪರಿಸ್ಥಿತಿಯಲ್ಲಿ ರಸ್ತೆಗೆ ನೀರು ಹರಿಸಿರುವ ಕ್ರಮವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ.
9,10 ದಿನಗಳು ಕಳೆದ್ರೂ ಕುಡಿಯಲು ನೀರು ಕೊಡದಿದ್ರೂ ಸಿದ್ದರಾಮಯ್ಯ ಸ್ವಾಗತಿಸೋಕೆ ನೀರು ಇದೆಯಾ? ಹೊಟ್ಟೆಗೆ ಇಟ್ಟು ಇಲ್ಲದಿದ್ರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತಾಗಿದ್ದು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಕಂದಾಯ ಕಟ್ಟೋದು ನಾವು ಸುಖ ಅನುಭವಿಸೋದು ಇವರೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ನಗರಸಭೆ ಆಯುಕ್ತರಿಗೆ ಕರೆ ಮಾಡಿ ಕೇಳಿದರೆ ಇದೊಂದು ದೊಡ್ಡ ವಿಷಯವೇ? ಸುಖಾಸುಮ್ಮನೆ ಕೆಲವರು ದೊಡ್ಡದು ಮಾಡ್ತಿದ್ದಾರೆ. ಕನಕ ಜಯಂತಿಗೆ ಅವರೇ ನೀರು ಹಾಯಿಸಿದ್ದಾರೆ ಎಂದು ತೇಪೆ ಹಚ್ಚುವ ಮಾತಗಳನ್ನು ಆಡಿದ್ದಾರೆ.